Tag: farmer

  • ಬೆಳೆಗಳಿಗೆ ನೀರು ಹಾಯಿಸಲು ಹೋದ ರೈತರ ಮೇಲೆ ಕಾಡಾನೆ ದಾಳಿ

    ಬೆಳೆಗಳಿಗೆ ನೀರು ಹಾಯಿಸಲು ಹೋದ ರೈತರ ಮೇಲೆ ಕಾಡಾನೆ ದಾಳಿ

    ಮೈಸೂರು: ಬೆಳೆಗಳಿಗೆ ನೀರು ಹಾಯಿಸಲು ಹೋದ ರೈತರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಹೊಸಳ್ಳಿಯಲ್ಲಿ ನಡೆದಿದೆ.

    ರವೀಂದ್ರ (55), ರವಿ (45) ಗಾಯಗೊಂಡ ರೈತರು. ಆನೆಯು ಕಳೆದ ರಾತ್ರಿ ಜಮೀನಿನಲ್ಲಿ ಬೆಳೆಗಳಿಗೆ ನೀರಾಯಿಸುತ್ತಿದ್ದಾಗ ದಾಳಿ ನಡೆಸಿದೆ. ಈ ವೇಳೆ ಕಾಡಾನೆ ದಾಳಿಯಿಂದ ರೈತ ರವೀಂದ್ರ ಚೀರಾಟವನ್ನು ಆಲಿಸಿ ಟಾರ್ಚ್ ಬೆಳಕು ನೀಡುತ್ತಿದ್ದಂತೆಯೇ ಆನೆಯು ಸ್ಥಳದಿಂದ ಪಾರಾಗಿದೆ. ಇದನ್ನೂ ಓದಿ: ಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಿ – ಹಿಜಬ್ ಹೋರಾಟಗಾರ್ತಿಯರು

    ಆನೆ ದಾಳಿಯಿಂದ ಗಾಯಗೊಂಡಿದ್ದ ರೈತರನ್ನು ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅರಣ್ಯ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.

  • ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮ

    ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮ

    ಹಾವೇರಿ: ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್ ಆಗಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೊಸಶಿಡೇನೂರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ಪರಮೇಶಪ್ಪ ನಂದೀಹಳ್ಳಿ ಎಂಬವರಿಗೆ ಸೇರಿದ್ದ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ

    ಪರಮೇಶಪ್ಪ ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದು, ಸುಮಾರು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಮೆಕ್ಕೆಜೋಳ ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯವನ್ನ ಮಾಡಿದ್ದಾರೆ. ರೈತನಿಗೆ ಸೂಕ್ತ ಪರಿಹಾರವನ್ನ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಪೊಲೀಸ್ ಮಗಳನ್ನೆ ಕತ್ತು ಹಿಸುಕಿ ಕೊಂದ ಸ್ನೇಹಿತೆಯ ಪತಿ!

    ಘಟನೆ ಕುರಿತು ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ರೈಲ್ವೆ ಯೋಜನೆಗೆ 3ಎಕರೆ ಜಮೀನು ಕಳೆದುಕೊಂಡ ರೈತ ಮನನೊಂದು ಆತ್ಮಹತ್ಯೆ

    ರೈಲ್ವೆ ಯೋಜನೆಗೆ 3ಎಕರೆ ಜಮೀನು ಕಳೆದುಕೊಂಡ ರೈತ ಮನನೊಂದು ಆತ್ಮಹತ್ಯೆ

    ಶಿವಮೊಗ್ಗ: ರೈಲ್ವೆ ಯೋಜನೆಗೆ ತನ್ನ 3 ಎಕರೆ ಜಮೀನು ಕಳೆದುಕೊಂಡ ರೈತ, ಸರ್ಕಾರದಿಂದ ಜಮೀನಿಗೆ ಅಲ್ಪ ಪರಿಹಾರ ಬಂದಿದೆ ಎಂದು ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಅರುಣ್ ನಾಯ್ಕ (28) ಮೃತಪಟ್ಟ ರೈತ. ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಯೋಜನೆಗೆ ಸರ್ಕಾರ ರೈತರ ಭೂಮಿ ವಶಪಡಿಸಿಕೊಳ್ಳುತ್ತಿದೆ. ಆದರೆ ತನ್ನ ಬೆಲೆ ಬಾಳುವ ಫಲವತ್ತಾದ ಜಮೀನಿಗೆ ಸರ್ಕಾರ ಕಡಿಮೆ ಪರಿಹಾರ ನಿಗದಿಪಡಿಸಿದೆ. ಹೀಗೆ ಈ ವಿಚಾರವಾಗಿ ಮನನೊಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ.

    ಮೃತ ಅರುಣ್ ನಾಯ್ಕ ಅವರ ತಂದೆ ತಿಮ್ಮನಾಯ್ಕ ಹೆಸರಿನಲ್ಲಿ ಶಿಕಾರಿಪುರ ತಾಲೂಕಿನ ಎಳೆನೀರು ಕೊಪ್ಪ ಗ್ರಾಮದಲ್ಲಿ ಸರ್ವೇ ನಂಬರ್ 13/13, 14/13ರಲ್ಲಿ ಫಸಲಿಗೆ ಬಂದಿರುವ 3 ಎಕರೆ ಅಡಕೆ ತೋಟ ರೈಲ್ವೆ ಯೋಜನೆಗೆ ಸರ್ಕಾರ ವಶಪಡಿಸಿಕೊಂಡಿದೆ. ಇವರ ಜಮೀನಿಗೆ ಎಕರೆಗೆ 5 ಲಕ್ಷ ಪರಿಹಾರ ಹಣ ನಿಗದಿಪಡಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಇದನ್ನೂ ಓದಿ: ಅನ್ಯ ಜಾತಿಯವನನ್ನು ಮದುವೆಯಾದ ಮಗಳು- ರುಬ್ಬುವ ಕಲ್ಲಿನಿಂದ ಚಚ್ಚಿ ಪತ್ನಿ, ಮಕ್ಕಳನ್ನು ಕೊಂದು ಪ್ರಾಣ ಬಿಟ್ಟ ತಂದೆ

    ಆದರೆ ಮೃತ ರೈತ ಕಾಮಗಾರಿ ನಡೆಸುತ್ತಿರುವ ವೇಳೆ ವಿರೋಧ ವ್ಯಕ್ತಪಡಿಸಿದ್ದರು. ಎಕರೆಗೆ 5 ಲಕ್ಷ ರೂ ಪರಿಹಾರ ಎಂದರೆ ಅನ್ಯಾಯವಾಗುತ್ತದೆ. ಪ್ರಸ್ತುತ ಪ್ರತಿ ಎಕರೆ ಜಮೀನಿಗೆ 30 ರಿಂದ 40 ಲಕ್ಷ ರೂ ಇದೆ. ಹೀಗಿರುವಾಗ ಎಕರೆಗೆ ಅಡಕೆ ತೋಟಕ್ಕೆ ಕೇವಲ 5 ಲಕ್ಷ ರೂಪಾಯಿ ಪರಿಹಾರ ಎಂದರೆ ಜೀವನ ಮಣ್ಣು ಸೇರಿದಂತೆ ಎಂದು ಅಧಿಕಾರಿಗಳ ಮುಂದೆ ರೈತರ ತನ್ನ ಅಳಲು ತೋಡಿಕೊಂಡಿದ್ದ. ಇದನ್ನೂ ಓದಿ: ವಿದ್ಯಾರ್ಥಿನಿಗೆ ಶರ್ಟ್ ಬಿಚ್ಚಿಕೊಡಲು ಮುಂದಾದ ಕಾಫಿನಾಡಿನ ಸರ್ಕಲ್ ಇನ್ಸ್‌ಪೆಕ್ಟರ್

    ಆದರೆ ಈ ಬಗ್ಗೆ ಅಧಿಕಾರಿಗಳಿಂದ ನಿರೀಕ್ಷಿತ ಉತ್ತರ ದೊರೆಯದ ಕಾರಣ ಮನನೊಂದು ತನ್ನದೇ ಅಡಿಕೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ

  • ರೈತನಿಗೆ ಪ್ರಾಣ ಬೆದರಿಕೆ ಹಾಕಿದ ಗ್ರಾಮದ ಲೆಕ್ಕಾಧಿಕಾರಿ

    ರೈತನಿಗೆ ಪ್ರಾಣ ಬೆದರಿಕೆ ಹಾಕಿದ ಗ್ರಾಮದ ಲೆಕ್ಕಾಧಿಕಾರಿ

    ಕೋಲಾರ: ಗ್ರಾಮದ ಲೆಕ್ಕಾಧಿಕಾರಿಯೊಬ್ಬನು ರೈತರೊಬ್ಬರಿಗೆ ಪ್ರಾಣ ಬೆದರಿಕೆ ಹಾಕಿದ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಮಾರಿಕುಪ್ಪ ಗ್ರಾಮದಲ್ಲಿ ನಡೆದಿದೆ.

    ಬೆಳೆ ಪರಿಹಾರಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ರೈತ ವೆಂಕಟೇಶ್ ಅವರು ಶಾಸಕಿ ರೂಕಲಾ ಶಶಿಧರ್ ಅವರ ಗಮನಕ್ಕೆ ತಂದಿದ್ದರು. ಈ ವೇಳೆ ಶಾಸಕಿ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ್ದರು. ಇದರಿಂದ ಕೆರಳಿದ ಗ್ರಾಮದ ಲೆಕ್ಕಾಧಿಕಾರಿ ರಮೇಶ್ ಕುಮಾರ್ ರೈತನಿಗೆ ಪ್ರಾಣ ಬೆದರಿಕೆ ಹಾಕಿರುವ ಆರೋಪ ಬಂದಿದೆ. ಇದನ್ನೂ ಓದಿ: ತ್ರಿವರ್ಣ ಧ್ವಜದ ಬಗ್ಗೆ ಗೌರವ ಇಲ್ಲದ ಸಂಘ ಪರಿವಾರದವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್

    ರಮೇಶ್ ಕುಮಾರ್‍ನು ರೈತನ ಸ್ನೇಹಿತರೊಬ್ಬರಿಗೆ ದೂರವಾಣಿ ಮೂಲಕ ಪ್ರಾಣ ಬೆದರಿಕೆ ಒಡ್ಡಿದ್ದು, ಕಾರಿನಲ್ಲಿ ಕೈ ಕಾಲು ಕಟ್ಟಿ ಹಾಕಿ ಘಾಟ್ ಸೆಕ್ಷನ್ ನಲ್ಲಿ ಬಿಸಾಕುತ್ತೇನೆ. ನಿನ್ನ ಒಂದು ಮೂಳೇನೂ ಸಿಗದೆ ಮುಚ್ಚಾಕುತ್ತೇನೆ ಎಂದಿದ್ದಾನೆ. ಇದನ್ನೂ ಓದಿ: ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ

    BRIBE

    ಈ ಬೆದರಿಕೆ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮದ ಲೆಕ್ಕಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • ಆತ್ಮಹತ್ಯೆಗೆ ಯತ್ನಿಸಿದ ರೈತನ ಬದುಕು ಬದಲಾಯಿಸಿದ ‘ಸಮಗ್ರ ಕೃಷಿ ಪದ್ಧತಿ’: ಬಿ.ಸಿ.ಪಾಟೀಲ್

    ಆತ್ಮಹತ್ಯೆಗೆ ಯತ್ನಿಸಿದ ರೈತನ ಬದುಕು ಬದಲಾಯಿಸಿದ ‘ಸಮಗ್ರ ಕೃಷಿ ಪದ್ಧತಿ’: ಬಿ.ಸಿ.ಪಾಟೀಲ್

    ಬೆಂಗಳೂರು: ‘ಸಮಗ್ರ ಕೃಷಿ ಪದ್ಧತಿ’ ಆತ್ಮಹತ್ಯೆಗೆ ಯತ್ನಿಸಿದ್ದವನ ಬದುಕನ್ನು ಬದಲಾಯಿಸಿ ಮಾದರಿ ರೈತನನ್ನಾಗಿ ಮಾಡಿದೆ. ಇಂತಹ ಮಾದರಿ ರೈತ ‘ದುರ್ಗಪ್ಪ ಅಂಗಡಿ’ ಅವರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಖುದ್ದು ಕಚೇರಿಗೆ ಕರೆಯಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

    ದುರ್ಗಪ್ಪ ಅಂಗಡಿ ಅವರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಡಿಮೆ ನೀರಿನಲ್ಲಿಯೂ ಕೃಷಿ ಸಾಧನೆ ಮಾಡುವ ಕೋಲಾರದ ರೈತರು ಇಡೀ ರಾಜ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಸಮಗ್ರ ಕೃಷಿ ಪದ್ಧತಿ ಎನ್ನುವುದು ರೈತರನ್ನು ಒಂದಲ್ಲ ಒಂದು ರೀತಿಯಲ್ಲಿ ಕೈಹಿಡಿದೇ ಹಿಡಿಯುತ್ತದೆ. ಸಾಲ ಮಾಡಿದೆನೆಂದು ಕೊರಗುವುದನ್ನು ಬಿಟ್ಟು ಅದರಿಂದ ಹೊರಬಂದು ಆದಾಯವನ್ನು ದ್ವಿಗುಣಗೊಳಿಸುವುದು ಹೇಗೆ ಎಂಬುದನ್ನು ‘ದುರ್ಗಪ್ಪ ಅಂಗಡಿ’ ಮಾಡಿ ತೋರಿಸಿದ್ದಾರೆ. ಇಂತಹ ರೈತರು ಎಲ್ಲ ಅನ್ನದಾತರಿಗೂ ಸ್ಫೂರ್ತಿ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!

    ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದಕ್ಕಾಗಿಯೇ ‘ರೈತರೊಂದಿಗೊಂದು ದಿನ’ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಸಮಗ್ರ ಕೃಷಿ ಪದ್ಧತಿ ರೈತನ ಸಾಧನೆ ಅವನಲ್ಲಿನ ಆತ್ಮಸ್ಥೈರ್ಯ ಹೇಗೆ ಪರಿಣಾಮಕಾರಿ ಮತ್ತು ಸ್ಫೂರ್ತಿದಾಯಕವೆನ್ನುವುದನ್ನು ದುರ್ಗಪ್ಪ ಅಂಗಡಿ ಮಾಡಿ ತೋರಿಸಿದ್ದಾರೆ, ತೋರಿಸುತ್ತಿದ್ದಾರೆ ಎಂದು ಹೊಗಳಿದರು.

    ಸ್ವಾವಲಂಬಿ ಜೀವನಕ್ಕೆ ಈ ರೈತನೇ ಮಾದರಿ ! ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ | udayavani

    ಇಂತಹ ಗಟ್ಟಿಮನಸಿನ ರೈತರೇ ಇತರರಿಗೂ ಮಾದರಿಯಾಗಬಲ್ಲರೆಂಬುದನ್ನು ಇವರು ಹೇಳಿದ್ದಾರೆ. ಅಲ್ಲದೇ ಅನ್ನದಾತನ ಸ್ಫೂರ್ತಿದಾಯಕ ಬದುಕು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗುವುದೆಂದರೆ ಅದು ನಮ್ಮ ರಾಜ್ಯದ ಅನ್ನದಾತ ಎನ್ನುವುದು ಹೆಮ್ಮೆಯೇ ಸರಿ. ಸಾಧನೆಗೆ ಶೈಕ್ಷಣಿಕ ಅರ್ಹತೆಯೊಂದೇ ಮುಖ್ಯವಲ್ಲ. ಸಾಧಿಸುವ ಛಲ, ದಿಟ್ಟ ನಡೆ ಎಂಬುದನ್ನು ದುರ್ಗಪ್ಪ ಅಂಗಡಿ ತೋರಿಸಿ ಕೊಟ್ಟಿದ್ದು, ಇತರ ರೈತರಿಗೂ ಸ್ಫೂರ್ತಿದಾಯಕರಾಗಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

  • ಹಿಜಬ್-ಕೇಸರಿ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ: HDK ಕಿಡಿ

    ಹಿಜಬ್-ಕೇಸರಿ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ: HDK ಕಿಡಿ

    ರಾಮನಗರ: ಹಿಜಬ್-ಕೇಸರಿ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹಿಜಬ್ ವಿವಾದ ಹಿನ್ನೆಲೆ ಕಲ್ಲು ತೂರಾಟ ಪ್ರಕರಣ ಕುರಿತು ರಾಮನಗರದ ಮಿನಿವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನರ ಸಮಸ್ಯೆ ಬಗೆಹರಿಸುವ ಕಮಿಟ್ಮೆಂಟ್ ಇಲ್ಲ. ರಾಜ್ಯದಲ್ಲಿ ಶಾಂತಿಯುತ ವಾತಾವರಣ ಇತ್ತು. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟದ ರೀತಿ ಇತ್ತು. ಆದರೆ ಅದನ್ನ ಹಾಳು ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ:  ಧಮ್ ಇದ್ರೆ ಮಸೀದಿಗೆ ಮುಸ್ಲಿಂ ಮಹಿಳೆಗೆ ಪ್ರವೇಶ ಕೊಡಿಸಿ- ಶಾಸಕಿಗೆ ಈಶ್ವರಪ್ಪ ಸವಾಲು

    ಬಡವರ ಪರವಾಗಿ ಹೋರಾಟ ಮಾಡಿ, ಇದನ್ನು ನಾನು ಎಲ್ಲ ಸಮಾಜದವರಿಗೂ ಹೇಳ್ತೇನೆ. ಉಡುಪಿ ಹಿಂದೂ – ಮುಸ್ಲಿಮರ ಶಕ್ತಿ ಕೇಂದ್ರವಾಗಿದೆ. ಏನೇ ಪ್ರಾರಂಭ ಆದರೂ ಅಲ್ಲಿಂದಲೇ ಆಗಬೇಕು. ಇದನ್ನು ನಾಡಿನ ಜನತೆ, ಯುವಕರು ಅರ್ಥ ಮಾಡಿಕೊಳ್ಳಬೇಕು. ನಮಗೆ ಶಾಂತಿ ಬೇಕಿದೆ, ಬಡವರ ಬದುಕು ಕಟ್ಟಬೇಕಿದೆ ಎಂದು ತಿಳಿಸಿದರು.

    ಮಕ್ಕಳು ಎರಡು ತಿಂಗಳಲ್ಲಿ ಪರೀಕ್ಷೆ ಬರೆಯಬೇಕಿದೆ. ಹಿಜಬ್ – ಕೇಸರಿ ಎಂಬ ವಿಚಾರ ಇಟ್ಟುಕೊಂಡು ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ಕಲ್ಲು ತೂರಾಟ ನಡೆದಿರೋದು ಫೌಂಡೇಶನ್ ಆಗಿದೆ. ಮುಂದೆ ಇದು ಯಾವ ರೀತಿಯ ಹಂತ ತಲುಪುತ್ತೆ ಗೊತ್ತಿಲ್ಲ. ಇದರಿಂದ ಅಮಾಯಕರು ಬಲಿಯಾಗಬಹುದು. ಹಾಗಾಗಿ ಇದನ್ನ ಇಲ್ಲಿಗೆ ನಿಲ್ಲಿಸಬೇಕಿದೆ ಎಂದು ಮನವಿ ಮಾಡಿದರು.

    ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಇವರ ಬಳಿ ವಿಷಯವಿಲ್ಲ. ಹಾಗಾಗಿ ಇಂತಹ ಸೂಕ್ಷ್ಮ ವಿಷಯದಲ್ಲಿ ಮಕ್ಕಳ ಭವಿಷ್ಯ ಹಾಳು ಮಾಡ್ತಾರೆ. ಉಡುಪಿಯಲ್ಲಿ ಇದು ಹೇಗೆ ಪ್ರಾರಂಭ ಆಯ್ತು, ಯಾವ ಸಂಘಟನೆಗಳು ಇದ್ದಾವೆ ಎಲ್ಲದರ ಬಗ್ಗೆಯೂ ನನಗೆ ಮಾಹಿತಿ ಇದೆ. ಆ ವಿಚಾರ ಚರ್ಚೆ ಮಾಡಿದರೆ ನಾನು ಖಳನಾಯಕ ಆಗ್ತೇನೆ ಎಂದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಭುಗಿಲೆದ್ದ ಹಿಜಬ್-ಕೇಸರಿ ವಿವಾದ- ರಾಷ್ಟ್ರಧ್ವಜ ಹಾರಿಸುವಲ್ಲಿ ಭಗವಾನ್ ಧ್ವಜ ಹಾರಿಸಿದ ವಿದ್ಯಾರ್ಥಿಗಳು

    ನಾನು ಹಸಿರು ಶಾಲಿನ ಬಗ್ಗೆ ಪ್ರಚೋದನೆ ಕೊಟ್ಟಿಲ್ಲ. ನಾವು ರೈತ ಕುಟುಂಬದವರು ಅದನ್ನ ತೋರಿಸೋಣ ಎಂದಿದ್ದೇನೆ. ಹಸಿರು ಶಾಲು ಹಾಕಿಕೊಳ್ಳೋಣ ಎಂದಿದ್ದೇನೆ. ರೈತರ ಶಾಲಿಗೆ ಯಾವುದೇ ಪ್ರಚೋದನೆ ಇಲ್ಲ. ನನ್ನದು ಪ್ರಚೋದನೆ ಅಲ್ಲ, ಅಲ್ಲಿ ನಡೆಯುತ್ತಿರುವುದು ಪ್ರಚೋದನೆ. ಹಸಿರು ಶಾಲು ರೈತನ ಸಂಕೇತ, ಅದಕ್ಕೆ ಗೌರವವಿದೆ. ಇವರು ಮಾಡ್ತಿರೋದಕ್ಕೆ ಏನು ಗೌರವ ಇದೆ. ಇದು ಅಶಾಂತಿ ಉಂಟು ಮಾಡುವುದಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

  • ಎಮ್ಮೆ ಹುಟ್ಟುಹಬ್ಬ ಆಚರಿಸಿದ ರೈತ

    ಎಮ್ಮೆ ಹುಟ್ಟುಹಬ್ಬ ಆಚರಿಸಿದ ರೈತ

    ತಿರುವನಂತಪುರಂ: ರೈತರೊಬ್ಬರು ತಾವು ಸ್ವಂತ ಮಕ್ಕಳಂತೆ ಸಾಕಿದ ಎಮ್ಮೆಯ ಹಟ್ಟುಹಬ್ಬವನ್ನು ಆಚರಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಕೇರಳದ ಮಲಪ್ಪುರಂನಲ್ಲಿ ರೈತ ತೊಡಿಕಾಪುಲಂನ ಬಶೀರ್ ಅವರು ಬರೋಬ್ಬರಿ ಸಾವಿರ ಕೆಜಿಗೂ ಅಧಿಕ ತೂಕದ ಎಮ್ಮೆಯನ್ನು ಸಾಕಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಮಾರುಕಟ್ಟೆಯಿಂದ ಈ ಎಮ್ಮೆಯನ್ನು ಖರೀದಿ ಮಾಡಿದ್ದಾರೆ. ಇವರ ಮುದ್ದಿನ ಎಮ್ಮೆ ರಾಜಮಾಣಿಕ್ಯನ್‍ಗೆ ನಾಲ್ಕನೇ ವರ್ಷದ ಬರ್ತ್‍ಡೇ ಇದಾಗಿದೆ. ಕೇಕ್ ಕತ್ತರಿಸಿ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ.

    ಎಮ್ಮೆಯ ಹುಟ್ಟುಹಬ್ಬದ ಅಂಗವಾಗಿ ವಾರ್ಡ್ ಸದಸ್ಯೆ ಶಿಜಿಮೋಳ್ ಕೇಕ್ ಕತ್ತರಿಸಿದ್ದು, ಎಮ್ಮೆಯ ಹುಟ್ಟು ಹಬ್ಬವನ್ನು ರೈತ ಅತ್ಯಂತ ಪ್ರೀತಿಯಿಂದ ಸೆಲೆಬ್ರೆಟ್ ಮಾಡಿದ್ದಾರೆ. ಇದನ್ನೂ ಓದಿ: ತುಂಬು ಗರ್ಭಿಣಿ ಅಮೂಲ್ಯಾ ಜೊತೆ ಗೋಲ್ಡನ್ ಸ್ಟಾರ್ ಪತ್ನಿ -ಫೋಟೋ ವೈರಲ್

    ಈಗಾಗಲೇ ಅನೇಕರು 10 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದರು. ಬಶೀರ್ ಈ ಆಫರ್ ತಿರಸ್ಕರಿಸಿದ್ದಾರೆ. ಪಶು ವೈದ್ಯರು ತಿಳಿಸಿರುವ ಪ್ರಕಾರ ಈ ಎಮ್ಮೆ ಮುರ್ರಾ ತಳಿಗೆ ಸೇರಿದೆ. ಇದರ ಪರೀಕ್ಷೆ ನಡೆಸಲು ವೈದ್ಯರು ವಾರಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿ ಎಮ್ಮೆಯ ಆರೋಗ್ಯವನ್ನು ತಪಾಸಣೆ ಮಾಡುತ್ತಾರೆ.

  • ಪುನೀತ್‌ಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ ರೈತ

    ಪುನೀತ್‌ಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ ರೈತ

    ಮಂಡ್ಯ: ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅಗಲಿ 3 ತಿಂಗಳುಗಳು ಕಳೆದಿವೆ. ಮಂಡ್ಯ ಜಿಲ್ಲೆಯ ರೈತನೊಬ್ಬ ಪುನೀತ್‌ಗೆ ಅಂದು ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಇದೀಗ ಚಿಗುರು ಬಂದಿದೆ.

    ಮಂಡ್ಯದ ಮೊತ್ತಳ್ಳಿ ಗ್ರಾಮದ ರೈತ ಕಾಳಪ್ಪ ರಾಜು ಪುನೀತ್ ಅವರ ಅಗಲಿಕೆಯ ಬಳಿಕ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ತಮ್ಮ ಭತ್ತದ ಗದ್ದೆಯಲ್ಲಿ ಮತ್ತೆ ಹುಟ್ಟಿ ಬಾ ಪುನೀತ್ ರಾಜ್ ಕುಮಾರ್ ಎಂದು ಭತ್ತದಲ್ಲೇ ಬರೆದು ನಾಟಿ ಮಾಡಿದ್ದರು. ಇದೀಗ ನಾಟಿ ಮಾಡಿರುವ ಭತ್ತ ಚಿಗುರಿದೆ. ಇದನ್ನೂ ಓದಿ: RD Parade 2022: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಎರಡನೇ ಸ್ಥಾನ

    ರೈತ ಸಲ್ಲಿಸಿದ ಶ್ರದ್ಧಾಂಜಲಿಯನ್ನು ಜನರು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ. ರೈತ ತಮ್ಮ ಗದ್ದೆಯಲ್ಲಿ ಬಿಡಿಸಿರುವ ಶ್ರದ್ಧಾಂಜಲಿ ಚಿತ್ತಾರದ ಫೋಟೋ ಹಾಗೂ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹಿಜಬ್ ಮಾನಸಿಕತೆ ಮೋಸ್ಟ್ ಡೇಂಜರಸ್: ಪ್ರಮೋದ್ ಮುತಾಲಿಕ್

  • ಬದುಕಿರುವಾಗಲೇ ರೈತನಿಗೆ ಕೊಟ್ರು ಮರಣ ಪ್ರಮಾಣ ಪತ್ರ – ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

    ಬದುಕಿರುವಾಗಲೇ ರೈತನಿಗೆ ಕೊಟ್ರು ಮರಣ ಪ್ರಮಾಣ ಪತ್ರ – ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

    ಕೋಲಾರ: ವ್ಯಕ್ತಿ ಮೃತಪಟ್ಟು ಎಷ್ಟೋ ತಿಂಗಳ ನಂತರ ಅವರು ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ ಎಂಬ ಸಂದೇಶ, ಪ್ರಮಾಣ ಪತ್ರಗಳು ಬಂದಿರುವ ಸುದ್ದಿಗಳನ್ನು ಓದಿದ್ದೇವೆ. ಅದರೆ ಬದುಕಿರುವ ವ್ಯಕ್ತಿಗೇ ಮರಣ ಪ್ರಮಾಣ ಪತ್ರ ನೀಡಿರುವ ಅಚ್ಚರಿದಾಯಕ ಪ್ರಸಂಗ ಕೋಲಾರದಲ್ಲಿ ನಡೆದಿದೆ.

    ಹೌದು, ಜೀವಂತವಾಗಿರುವ ರೈತನೊಬ್ಬನಿಗೆ ಮರಣ ಪ್ರಮಾಣ ಪತ್ರ ನೀಡುವ ಮೂಲಕ ಕೋಲಾರ ಕಂದಾಯ ಇಲಾಖೆ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ತಾನು ಬದುಕಿದ್ದಾಗಲೇ ಮರಣ ಪ್ರಮಾಣ ಪತ್ರ ಬಂದಿರುವುದನ್ನು ಕಂಡು ರೈತ ಅಚ್ಚರಿಗೆ ಒಳಗಾಗಿದ್ದಾರೆ. ಇದನ್ನೂ ಓದಿ: ಸಂಪೂರ್ಣವಾಗಿ ನೋವು ಹೇಳಿಕೊಳ್ಳೋ ಸ್ಥಿತಿಯಲ್ಲಿಲ್ಲ, ಅದರೊಂದಿಗೆ ಬದುಕ್ತಿದ್ದೇವೆ: ಅಪ್ಪು ನೆನೆದ ಶಿವಣ್ಣ

    ಜಿಲ್ಲೆಯ ಮುಳಬಾಗಿಲು ತಾಲೂಕಿನ ಎಂ.ಹೊಸಹಳ್ಳಿ ಗ್ರಾಮದ ರೈತ ಶಿವರಾಜ್‌ (40) ಅವರಿಗೆ ಬದುಕಿರುವಾಗಲೇ ಅಧಿಕಾರಿಗಳು ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಇದರಿಂದ ಶಾಕ್‌ ಆದ ರೈತ, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲದೇ ಹಿಂದಿನ ತಹಶಿಲ್ದಾರ್‌ ಆಗಿದ್ದ ಜಿ.ರಾಜಶೇಖರ್ ಹಾಗೂ ಗ್ರಾಮ ಲೆಕ್ಕಿಗ ಅರವಿಂದ, ಕಂದಾಯ ನಿರೀಕ್ಷಿಕ ಸಾದತ್ ವುಲ್ಲಾ ಖಾನ್, ನಾಡಕಚೇರಿ ಶಿರೇಸ್ತೆದಾರ್ ಜಯರಾಂ ವಿರುದ್ಧ ಮುಳಬಾಗಿಲು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಪಡಿತರ ಚೀಟಿಯಲಿ ಹೆಸರು ತೆಗೆದು ಹಾಕಲಾಗಿತ್ತು. ಈ ವೇಳೆ ಸಂಬಂಧಿಕರು ಪರಿಶೀಲನೆ ನಡೆಸಿದಾಗ ಮರಣ ಪ್ರಮಾಣ ಪತ್ರ ನೀಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಮರಣ ಪ್ರಮಾಣ ಪತ್ರವನ್ನು ಅಂಗನವಾಡಿ ಕಟ್ಟಡ, ಲೋಕೋಪಯೋಗಿ ಇಲಾಖೆ ಕಟ್ಟಡ, ತಹಶಿಲ್ದಾರ್ ಕಚೇರಿ ಸೇರಿದಂತೆ ಹಲವೆಡೆ ಅಂಟಿಸಿ ಪಡಿತರ ಚೀಟಿಯಲ್ಲೂ ಹೆಸರನ್ನೂ ತೆಗೆದು ಹಾಕಲಾಗಿದೆ. ಪಡಿತರಕ್ಕೆ ತೆರಳಿದ ಶಿವರಾಜ್‌ಗೆ, ನೀನು ಮರಣ ಹೊಂದಿರುವುದಾಗಿ ಇಲ್ಲಿ ಉಲ್ಲೇಖ ಆಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಶಾಕ್‌ ಆದ ರೈತ ಬಳಿಕ ತಾಲೂಕು ಕಚೇರಿಯಲ್ಲಿ ವಿಚಾರಣೆ ಮಾಡಲಾಗಿ ಮರಣ ಪ್ರಮಾಣ ಪತ್ರದ ಗೋಲ್ ಮಾಲ್ ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಿಕಲಚೇತನ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ASI ಅಮಾನತು

    ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆ. ಜಮೀನು ಲಪಾಟಿಯಿಸುವ ಉದ್ದೇಶ ಇರಬಹುದು ಎಂದು ರೈತ ಶಿವರಾಜ್‌ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಸರ್ಕಾರ, ಲೋಕಾಯುಕ್ತಕ್ಕೆ ಹೋದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನ್ಯಾಯಾಲಯದ ಮೋರೆ ಹೋಗಿದ್ದರು.

  • ಹಿಂದೂ, ಮುಸ್ಲಿಂ ಒಡೆದು ಆಳುವ ನೀತಿ ನಡೆಯುವುದಿಲ್ಲ: ರಾಕೇಶ್ ಟಿಕಾಯತ್

    ಹಿಂದೂ, ಮುಸ್ಲಿಂ ಒಡೆದು ಆಳುವ ನೀತಿ ನಡೆಯುವುದಿಲ್ಲ: ರಾಕೇಶ್ ಟಿಕಾಯತ್

    ಲಕ್ನೋ: ಹಿಂದೂ, ಮುಸ್ಲಿಮರನ್ನು ಒಡೆದು ಆಳುವ ನೀತಿ ಉತ್ತರಪ್ರದೇಶದಲ್ಲಿ ನಡೆಯುವುದಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುಪಿಯಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ವಿದ್ಯುತ್ ದರ ಏರಿಕೆಯಿಂದಾಗಿ ಅನ್ನದಾತರು ಸಂಕಷ್ಟ ಅನುಭವಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ರೈತರ ಸಮಸ್ಯೆಗಳು, ನಿರುದ್ಯೋಗ, ಹಣದುಬ್ಬರದಿಂದ ಮಧ್ಯಮ ವರ್ಗದ ಜನರು ಅನುಭವಿಸುತ್ತಿರುವ ಸಂಕಷ್ಟಗಳು ಚುನಾವಣೆ ವಿಷಯಗಳಾಗಬೇಕು. ಉತ್ತರ ಪ್ರದೇಶದ ಮತದಾರರು ರೈತರ ಏಳ್ಗೆ ಮತ್ತು ಕಲ್ಯಾಣದ ಬಗ್ಗೆ ಮಾತನಾಡುವವರಿಗೆ ಮಾತ್ರ ಮಣೆ ಹಾಕುತ್ತಾರೆಯೇ ವಿನಃ ಧಾರ್ಮಿಕ ನೆಲೆಯಲ್ಲಿ ಮಾತನಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕಿನಿ ತೊಟ್ಟು ಪಡ್ಡೆಗಳ ಹಾರ್ಟ್‍ಬಿಟ್ ಹೆಚ್ಚಿಸಿದ ಮಾಳವಿಕಾ ಮೋಹನನ್

    ಮೊಹಮ್ಮದ್ ಅಲಿ ಜಿನ್ನಾ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡುವ ಮೂಲಕ ಹಿಂದೂ-ಮುಸ್ಲಿಮರನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಹಿಂದೂ-ಮುಸ್ಲಿಂ ಹೆಸರಿನಲ್ಲಿ ಒಡೆದು ಆಳುವುದಕ್ಕೆ ಹೊರಟಿರುವುದು ಅವರಿಗೆ ಲಾಭಕ್ಕಿಂತ ಹೆಚ್ಚು ನಷ್ಟವನ್ನು ಉಂಟು ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾನು ರಾಜಕಾರಣಿಯಲ್ಲ, ರಾಜಕೀಯ ಪಕ್ಷಗಳಿಂದ ದೂರ ಉಳಿದಿದ್ದೇನೆ, ರೈತರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ. ಅವರ ನಾಯಕರನ್ನು ಪ್ರಶ್ನಿಸುವುದಕ್ಕೆ ಜನರಿಗೆ ಒತ್ತಾಯಿಸುತ್ತೇನೆ, ನಾನು ರೈತರ ಸಮಸ್ಯೆಗಳನ್ನು ಮಾತ್ರ ಪ್ರಸ್ತಾಪಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:  ಪುಷ್ಪ ಮಾಸ್ ಡೈಲಾಗ್ ಹೇಳಿದ ಡೇವಿಡ್ ವಾರ್ನರ್- Viral Video

    ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ರಾಕೇಶ್ ಟಿಕಾಯತ್ ಪ್ರತಿಕ್ರಿಯೆ ನೀಡಿದ್ದು, ಅಂಥ ಯಾವುದೇ ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.