Tag: farmer

  • ಬದುಕಿರುವಾಗಲೇ ರೈತನಿಗೆ ಮರಣ ಪ್ರಮಾಣ ಪತ್ರ – ಗ್ರಾಮ ಲೆಕ್ಕಿಗ ಅಮಾನತು

    ಬದುಕಿರುವಾಗಲೇ ರೈತನಿಗೆ ಮರಣ ಪ್ರಮಾಣ ಪತ್ರ – ಗ್ರಾಮ ಲೆಕ್ಕಿಗ ಅಮಾನತು

    ಕೋಲಾರ: ಬದುಕಿರುವಾಗಲೇ ರೈತನ ಮರಣ ಪ್ರಮಾಣ ಪತ್ರ ನೀಡಿದ್ದ ಗ್ರಾಮ ಲೆಕ್ಕಿಗನನ್ನು ಅಮಾನತು ಮಾಡುವಂತೆ ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

    ಮುಳಬಾಗಿಲು ತಾಲೂಕಿನ ರೈತನೊರ್ವನಿಗೆ ಗ್ರಾಮ ಲೆಕ್ಕಿಗ ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ನೀಡಿದ್ದ. ಈ ಸಂಬಂಧ ಕೋಲಾರ ಸಹಾಯಕ ಕಮೀಷನರ್ ಪ್ರಕಾಶ್ ಮೀನಾ ತನಿಖೆ ನಡೆಸಿದ್ದರು. ಇದನ್ನು ಆಧಾರಿಸಿ ಮುಳಬಾಗಿಲು ತಾಲೂಕಿನ ಕಸಬಾ ಹೋಬಳಿ ಮಾರಾಂಡಹಳ್ಳಿ ಗ್ರಾಮದಲ್ಲಿ ಗ್ರಾಮ ಲೆಕ್ಕಿಗನಾಗಿದ್ದ ಹಾಗೂ ಪ್ರಸ್ತುತ ಮುಳಬಾಗಿಲು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಅರವಿಂದ್‌ನನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್ ಅರೆಸ್ಟ್ 

    ನಡೆದಿದ್ದೇನು?
    ಅರವಿಂದ್ 2021ರ ಜೂನ್ 2 ರಂದು ರೈತ ಶಿವರಾಜ್‍ ಅವರಿಗೆ ಮರಣ ಪ್ರಮಾಣ ಪತ್ರ ನೀಡಿದ್ದ. ಅಷ್ಟೇ ಅಲ್ಲದೆ ಅರವಿಂದ್‌, ಶಿವರಾಜ್‌ ಅವರ ಮರಣ ಪ್ರಮಾಣ ಪತ್ರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಅವಮಾನ ಮಾಡಿದ್ದ. ಈ ಹಿನ್ನೆಲೆ ಶಿವರಾಜ್ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಅರವಿಂದ್ ವಿರುದ್ಧ ದೂರು ಕೊಟ್ಟಿದ್ದರು.

  • ಬೆಳೆಗೆ ಬೆಲೆ ಸಿಗಲೆಂದು ದೇವರ ಮೊರೆಹೋದ ರೈತ – ಕುರುಡುಮಲೆ ವಿನಾಯಕನಿಗೆ 2 ಟನ್ ದ್ರಾಕ್ಷಿ ಅಲಂಕಾರ

    ಬೆಳೆಗೆ ಬೆಲೆ ಸಿಗಲೆಂದು ದೇವರ ಮೊರೆಹೋದ ರೈತ – ಕುರುಡುಮಲೆ ವಿನಾಯಕನಿಗೆ 2 ಟನ್ ದ್ರಾಕ್ಷಿ ಅಲಂಕಾರ

    ಕೋಲಾರ: ಚಿಕ್ಕಬಳ್ಳಾಪುರ ಮೂಲದ ರೈತರೊಬ್ಬರು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗುವಂತೆ ಕೋರಿ ಜಿಲ್ಲೆಯ ಮುಳಬಾಗಿಲು ತಾಲೂಕಿನ ಇತಿಹಾಸ ಪ್ರಸಿದ್ಧ ಕುರುಡುಮಲೆ ವಿನಾಯಕನಿಗೆ ದ್ರಾಕ್ಷಾ ಫಲ ಅಲಂಕಾರ ಮಾಡಿಸಿದ್ದಾರೆ.

    ತಾವು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗುವಂತೆ ಬೇಡಿಕೊಂಡಿದ್ದು, ವಿನಾಯಕನ ಈ ವಿಶೇಷ ಅಲಂಕಾರಕ್ಕಾಗಿ 2 ಟನ್ ದ್ರಾಕ್ಷಿ ನೀಡಿದ್ದಾರೆ. ನೂರಾರು ಭಕ್ತರು ವಿಶೇಷ ಅಲಂಕಾರದ ಗಣೇಶನ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿ ಕುಟುಂಬ ಸದಸ್ಯರಿಗೂ ಇನ್ಮುಂದೆ ಸರ್ಕಾರಿ ನೌಕರಿ

    ಐತಿಹಾಸಿಕ ಹಿನ್ನೆಲೆಯಿರುವ ಈ ದೇವಾಲಯಕ್ಕೆ ಮಹಾಭಾರತದ ಕಾಲದಲ್ಲಿ ಶ್ರೀಕೃಷ್ಣ ಬಂದು ಪೂಜೆ ನೇರವೇರಿಸಿದ್ದರು ಎಂಬ ಪ್ರತೀತಿ ಇದೆ. ಅದಕ್ಕಾಗಿಯೇ ಹಿರಿಯ ರಾಜಕಾರಣಿಗಳು ಚುನಾವಣೆಗೂ ಮುನ್ನ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಅದರಂತೆಯೇ ರೈತರು ತಾವು ಬೆಳೆದ ಬೆಳೆಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಸಿಗಲಿ ಎಂದು ಹರಿಕೆ ಹೊತ್ತು ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಮುಜರಾಯಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಚೆಲುವ ಸ್ವಾಮಿ ತಿಳಿಸಿದ್ದಾರೆ.

  • ತುಂಗಭದ್ರಾ ಡ್ಯಾಂನ ಹಿನ್ನೀರಿನಲ್ಲಿ ಬೆಳೆದ ಬೆಳೆ ನೀರು ಪಾಲು – ರೈತ ಕಣ್ಣೀರು

    ತುಂಗಭದ್ರಾ ಡ್ಯಾಂನ ಹಿನ್ನೀರಿನಲ್ಲಿ ಬೆಳೆದ ಬೆಳೆ ನೀರು ಪಾಲು – ರೈತ ಕಣ್ಣೀರು

    ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ವಾಡಿಕೆಗೂ ಮೊದಲೇ ಭಾರೀ ಒಳ ಹರಿವು ಹೆಚ್ಚಾಳವಾಗಿದ್ದು, ಡ್ಯಾಂ ಹಿನ್ನೀರಿನ ಬೆಳೆ ಜಲಾವೃತವಾಗಿವೆ.

    ಕೊಪ್ಪಳ ತಾಲೂಕಿನ ತಿಗರಿ ಗ್ರಾಮದಲ್ಲಿನ ಹಿನ್ನೀರಿನಲ್ಲಿ ಮೆಕ್ಕೆಜೋಳ ಬೆಳೆ ನೀರು ಪಾಲಾಗಿದೆ. ಇದರಿಂದ ರೈತ ಮಂಜುನಾಥ್ ಕಂಗಲಾಗಿದ್ದಾರೆ. ಸಾಮಾನ್ಯವಾಗಿ ಜುಲೈ ಕೊನೆಯ ವಾರ ಟಿಬಿ ಡ್ಯಾಂನಲ್ಲಿ ಹೆಚ್ಚಿನ ಒಳ ಹರಿವು ಹೆಚ್ಚಾಗುತ್ತದೆ. ಆದರೆ ಈ ಬಾರಿ ತುಂಗಭದ್ರಾ ಜಲಾಶಯಕ್ಕೆ ನಿರೀಕ್ಷೆಗೂ ಮೊದಲೇ 85 ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಾಗಿದ್ದು, ಸದ್ಯ ಜಲಾಶಯದಲ್ಲಿ 27 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ಕಾರೊಳಗೆ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ!

    ಈ ಹಿನ್ನೆಲೆಯಲ್ಲಿ ಜಲಾಶಯಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ಬೆಳೆದ ಬೆಳೆ ನೀರಿನಲ್ಲಿ ನಿಂತಿದೆ. ಈ ಕಾರಣದಿಂದಾಗಿ ರೈತ ಮಂಜುನಾಥ ಗಂಗಮ್ಮ ಗೋಳಾಡುತ್ತಾ ಕಣ್ಣಿರು ಹಾಕಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹಿಮಾಚಲ ಉಪಸಭಾಧ್ಯಕ್ಷರಿಂದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಆರೋಪ

  • ಮೊಮ್ಮಗಳು ಜನಿಸಿದ ಖುಷಿಯಲ್ಲಿ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿದ ರೈತ

    ಮೊಮ್ಮಗಳು ಜನಿಸಿದ ಖುಷಿಯಲ್ಲಿ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿದ ರೈತ

    ಮುಂಬೈ: ಮೊಮ್ಮಗಳು ಜನಿಸಿದ ಖುಷಿಯಲ್ಲಿ ರೈತರೊಬ್ಬರು ಪ್ರೀತಿಯ ಪುಟ್ಟ ಕಂದಮ್ಮನನ್ನು ಮನೆಗೆ ಬರಮಾಡಿಕೊಳ್ಳಲು ಹೆಲಿಕಾಪ್ಟರನ್ನೇ ಬುಕ್ ಮಾಡಿದ್ದಾರೆ.

    ಪುಣೆಯ ಹೊರವಲಯದಲ್ಲಿರುವ ಬಾಲೆವಾಡಿ ಪ್ರದೇಶದ ನಿವಾಸಿ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿ, ಕುಟುಂಬಕ್ಕೆ ಹೊಸ ಸದಸ್ಯೆ ಕ್ರುಶಿಕಾಗೆ ಸ್ವಾಗತ ಕೋರಲು ಹೆಲಿಕಾಪ್ಟರ್ ಬಾಡಿಗೆಗೆ ಪಡೆದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾದಲ್ಲಿ ಅವಕಾಶ ಕೊಡಿಸೋ ನೆಪದಲ್ಲಿ ಅತ್ಯಾಚಾರ – ನಟ ವಿಜಯ್ ಬಾಬು ವಿರುದ್ಧ ಪ್ರಕರಣ ದಾಖಲು

    ಶೆವಾಲ್ ವಾಡಿಯಲ್ಲಿರುವ ತವರು ಮನೆಯಿಂದ ತಾಯಿ ಹಾಗೂ ಮಗುವನ್ನು ಮನೆಗೆ ಕರೆದುಕೊಂಡು ಬರುವ ಸಮಯ ಬಂದಾಗ ಹೆಲಿಕಾಪ್ಟರ್ ಬುಕ್ ಮಾಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಆಫ್‌ಸ್ಕ್ರೀನ್‌ನಲ್ಲಿ ಹೆಂಡತಿಗೆ ಮುತ್ತಿಟ್ಟ ಯಶ್‌

  • ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭಿಸಿದ ರೈತ

    ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭಿಸಿದ ರೈತ

    ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅಗಲಿ ಐದು ತಿಂಗಳು ಕಳೆದರೂ, ಅವರನ್ನು ಆರಾಧಿಸುವವರ ಸಂಖ್ಯೆ ಇಳಿದಿಲ್ಲ. ತಮ್ಮ ನೆಚ್ಚಿನ ನಟನನ್ನು ನಾನಾ ರೀತಿಯಲ್ಲಿ ನೆನಪಿಸುವಂತಹ ಕೆಲಸಗಳನ್ನು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ರಕ್ತದಾನ, ಅಂಗಾಂಗ ದಾನ, ನೇತ್ರದಾನ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಲೇ ಅಪ್ಪು ಅವರನ್ನು ಜೀವಂತವಾಗಿರಿಸುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಈಗ ಮತ್ತೊಂದು ಹೊಸ ಕೆಲಸ ಮಾಡುವ ಮೂಲಕ ಅಪ್ಪುವನ್ನು ಕೃಷಿಕರು ಕೂಡ ತಮ್ಮದೇ ಮನೆಮಗ ಎನ್ನುವಂತೆ ಅಪ್ಪಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ಮಗುವಿನ ನೆರವಿಗೆ ಬಂದ ರೈಲ್ವೆ ಅಧಿಕಾರಿಗಳು

    ಯುಗಾದಿ ಹಬ್ಬದ ಹಿನ್ನೆಲೆ ರೈತರೆಲ್ಲರೂ ಭೂತಾಯಿಗೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭ ಮಾಡುವುದು ವಾಡಿಕೆ. ಭೂತಾಯಿಯ ಪೂಜೆಯ ಜತೆ ಜತೆಗೆ ತಮ್ಮಿಷ್ಟದ ದೇವರನ್ನೂ ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಅದರಂತೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ರೈತನೋರ್ವ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಚಟುವಟಿಕೆ ಆರಂಭಿಸಿದ್ದಾನೆ.

    ರೈತ ಅಶೋಕ ಕುರಿ ಇಂದು ತನ್ನ ಹೊಲದಲ್ಲಿ ಪುನೀತ್ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭಿಸಿದ್ದು, ಪುನೀತ್ ರಾಜ್ ಕುಮಾರ್ ಅವರನ್ನು ಉತ್ತಿಲ್ಲ, ಬಿತ್ತಿದ್ದೇವೆ ಎನ್ನುವ ಸಾಲುಗಳನ್ನು ಸಾರ್ಥಕಗೊಳಿಸಿದ್ದಾನೆ. ಸಾಮಾನ್ಯವಾಗಿ ಎಲ್ಲರೂ ಯುಗಾದಿ ದಿನದಂದು ಹೊಸ ವರ್ಷಾಚರಣೆಯ ಸಡಗರದಲ್ಲಿರುತ್ತಾರೆ. ಇಂಥದ್ದೊಂದು ಸಡಗರಕ್ಕೆ ಅಪ್ಪು ಅವರನ್ನು ಸಾಕ್ಷಿಗೊಳಿಸಿದ್ದಾರೆ ಅಶೋಕ ಕುರಿ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ, ಭಗವಂತ್ ಮಾನ್, ಕೇಜ್ರಿವಾಲ್

    ಈ ರೈತ ಪುನೀತ್ ರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ, ಗೌರವ ಸಲ್ಲಿಸಿ ಹೊಸ ವರ್ಷಾವನ್ನು ಬರಮಾಡಿಕೊಂಡಿದ್ದಾರೆ.

  • ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದ ಚಿಕ್ಕಮಗಳೂರಿನ ಶ್ರೀಗಂಧ ಬೆಳೆಗಾರ

    ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದ ಚಿಕ್ಕಮಗಳೂರಿನ ಶ್ರೀಗಂಧ ಬೆಳೆಗಾರ

    ಚಿಕ್ಕಮಗಳೂರು: ಹೆದ್ದಾರಿ ಅಗಲಿಕರಣದ ವೇಳೆ ರೈತರು ಜಮೀನು ಕಳೆದುಕೊಳ್ಳುತ್ತಾರೆ. 62 ಕೋಟಿ ಪರಿಹಾರ ಕೊಡಬೇಕಾದ ಜಾಗದಲ್ಲಿ ಎರಡೂವರೆ ಲಕ್ಷ ನೀಡಲು ಸರ್ಕಾರ ಮುಂದಾಗಿದೆ. ಈ ಕ್ರಮವನ್ನು ವಿರೋಧಿಸಿ ಶ್ರೀಗಂಧದ ಬೆಳೆಗಾರರು ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಬೆಳಗಾರರು ಇಂದು ಸೀರೆಂಜ್‍ನಲ್ಲಿ ರಕ್ತ ತೆಗೆದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ 

    ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಪರಿಹಾರ ನೀಡ ಬೇಕು. 22 ರೈತರಿಗೆ 62 ಕೋಟಿ ಪರಿಹಾರ ಬರಬೇಕು. ಎರಡೂವರೆ ಲಕ್ಷ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಹೆದ್ದಾರಿ ಅಗಲೀಕರಣದ ವೇಳೆ ಜಮೀನು ಕಳೆದುಕೊಳ್ಳಲಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ಪರಿಹಾರ ನೀಡಲು ಒತ್ತಾಯ ಮಾಡಲಾಗಿದೆ.

  • ರೈತ ನಾಯಕ ರಾಕೇಶ್ ಟಿಕಾಯತ್‍ಗೆ ಕೊಲೆ ಬೆದರಿಕೆ

    ರೈತ ನಾಯಕ ರಾಕೇಶ್ ಟಿಕಾಯತ್‍ಗೆ ಕೊಲೆ ಬೆದರಿಕೆ

    ಲಕ್ನೋ: ಅಪರಿಚಿತ ವ್ಯಕ್ತಿಗಳಿಂದ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಅವರಿಗೆ ಕೊಲೆ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.

    ಟಿಕಾಯತ್ ಅವರ ಕಾರು ಚಾಲಕ ಪ್ರಜ್ವಲ್ ತ್ಯಾಗಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮುಜಾಫರ್‌ನಗರದ ಹಿರಿಯ ಪೊಲೀಸ್ ಅಧೀಕಾರಿ ಅಭಿಷೇಕ್ ಯಾದವ್ ಹೇಳಿದ್ದಾರೆ.

    ಹಿರಿಯ ಸಬ್ ಇನ್ಸ್‌ಪೆಕ್ಟರ್‌ ರಾಕೇಶ್ ಶರ್ಮಾ ನೇತೃತ್ವದ ಪೊಲೀಸ್ ತಂಡವು ಟಿಕಾಯತ್ ಅವರ ನಿವಾಸಕ್ಕೆ ಭೇಟಿ ನೀಡಿದೆ. ಕೆಲವು ಮಾಹಿತಿ ಕಲೆ ಹಾಕಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

    ಕೃಷಿ ಕಾಯ್ದೆಯ ವಿರುದ್ಧ ಉತ್ತರ ಪ್ರದೇಶದ ಘಾಜಿಪುರ ಗಡಿಯಲ್ಲಿ ಹೋರಾಟ ಮಾಡುತ್ತಿರುವ ಭಾರತ್ ಕಿಸಾನ್ ಯೂನಿಯನ್ ಸಂಘಟನೆಯ ನಾಯಕನಾಗಿ  ರಾಕೇಶ್ ಟಿಕಾಯತ್ ಗುರುತಿಸಿಕೊಂಡಿದ್ದಾರೆ. ಮೂಲತಃ ಉತ್ತರ ಪ್ರದೇಶದ ಮುಜಾಫರನಗರದ ಸಿಸಾವುಲಿ ಪಟ್ಟಣದಲ್ಲಿ ಹುಟ್ಟಿದ ರಾಕೇಶ್ ಟಿಕಾಯತ್, ರೈತ ಹೋರಾಟ ಕುಟುಂಬದ ಕುಡಿಯಾಗಿದ್ದಾರೆ. ಬಿಕೆಯು ಸಹ ಸಂಸ್ಥಾಪಕ ಮಹೇಂದ್ರ ಸಿಂಗ್ ಟಿಕಾಯತ್ ಅವರ ಮಗನಾಗಿ ಜನಿಸಿ ಇದೀಗ ಬಿಕೆಯು ವಕ್ತಾರರಾಗಿ ರೈತ ಹೋರಾಟವನ್ನು ಮಾಡುತ್ತಿದ್ದರೆ, ಇವರ ಹಿರಿಯಣ್ಣ ನರೇಶ್ ಟಿಕಾಯತ್ ಬಿಕೆಯುನ ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.  ರಾಕೇಶ್ ಟಿಕಾಯತ್‍ಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ: ರೈತನಾಯಕ ರಾಕೇಶ್ ಟಿಕಾಯತ್ 80 ಕೋಟಿ ಆಸ್ತಿಯ ಒಡೆಯ

    ಮೀರತ್ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದು 1992 ರಲ್ಲಿ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕೆಲಸ ಮಾಡಿ ನಂತರ ಸಬ್ ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ವೃತ್ತಿ ತೊರೆದು ಬಿಕೆಯು ಸಂಘಟನೆಯಲ್ಲಿ ತೊಡಗಿಕೊಂಡು 2018ರಿಂದ ವಕ್ತಾರರಾಗಿ ರೈತರ ಪರ ಕೆಲಸ ಮಾಡುತ್ತಿದ್ದರು. ಈ ಹಿಂದೆ ಹರಿದ್ವಾರ, ಉತ್ತರಾಖಂಡ್, ದೆಹಲಿ ಕಿಸಾನ್ ಕ್ರಾಂತಿಯಾತ್ರೆಯಾ ನಾಯಕರಾಗಿ ಗುರುತಿಸಿಕೊಂಡಿದ್ದ ಟಿಕಾಯತ್, 2007ರಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಖತಾವುಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಆರ್‍ ಜೆ ಡಿ  ಪಕ್ಷದಿಂದ ಅಮ್ರೋಹ ಕ್ಷೇತ್ರದಿಂದ ಆಕಾಡಕ್ಕೆ ಇಳಿದಿದ್ದರು. ಇದನ್ನೂ ಓದಿ: ಭರವಸೆಗಳನ್ನು ಉಲ್ಲಂಘಿಸಿದ ಮೋದಿ ಸರ್ಕಾರ- ಮಾ.21ರಿಂದ ರೈತರಿಂದ ಮತ್ತೆ ಸರಣಿ ಪ್ರತಿಭಟನೆ

  • ತೈವಾನ್ ಸೀಬೆ ಬೆಳೆದು ಲಕ್ಷಾದೀಶನಾದ ಕೋಲಾರದ ರೈತ

    ತೈವಾನ್ ಸೀಬೆ ಬೆಳೆದು ಲಕ್ಷಾದೀಶನಾದ ಕೋಲಾರದ ರೈತ

    – 10 ಎಕರೆಯಲ್ಲಿ ವರ್ಷ ಪೂರ್ತಿ ಬೆಳೆ
    – ಕೋಲ್ಕತ್ತಾ ಸೀಬೆಗೆ ಎಲ್ಲಿಲ್ಲದ ಬೇಡಿಕೆ

    ಕೋಲಾರ: ಅಲ್ಲಿ ಬಹುತೇಕರು ತರಕಾರಿ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿರುವವರೆ. ಪ್ರತಿ ವರ್ಷ ಕಷ್ಟ ಪಟ್ಟು ವ್ಯವಸಾಯ ಮಾಡಿದರೂ ಬೆಳೆಗೆ ಬೆಲೆ ಸಿಗಬೇಕೆಂದರೆ ಅದೃಷ್ಟವಿರಬೇಕು ಎನ್ನುವ ಪರಿಸ್ಥಿತಿ. ಆದರೆ ಅಂತಹ ಪರಿಸ್ಥಿತಿಯಿಂದ ಹೊರಬಂದಿರುವ ಕೆಲವು ರೈತರು ಲಕ್ಷ ಲಕ್ಷ ಸಂಪಾದನೆಯ ದಾರಿ ಕಂಡುಕೊಂಡಿದ್ದಾರೆ. ಅದಕ್ಕೆ ಇಲ್ಲೊಂದಿದೆ ಕೋಲಾರ ರೈತನ ಉದಾಹರಣೆ.

    ಸಮೃದ್ಧವಾಗಿ ಬೆಳೆದಿರುವ ಸೀಬೆ ಹಣ್ಣಿನ ತೋಟ. ಬಾಯಿ ನೀರೂರಿಸುವಂತೆ ಕಂಡು ಬರುವ ಬೃಹತ್ ಗಾತ್ರದ ಸೀಬೆ ಹಣ್ಣುಗಳು. ತೋಟದಲ್ಲಿ ಗಿಡಗಳನ್ನು ಆರೈಕೆ ಮಾಡುತ್ತಿರುವ ತೋಟದ ಮಾಲೀಕ. ಇದೆಲ್ಲಾ ದೃಶ್ಯಗಳು ಕಂಡುಬಂದಿದ್ದು ಕೋಲಾರ ತಾಲೂಕು ಚದುಮನಹಳ್ಳಿ ಗ್ರಾಮದ ನಾರಾಯಣಸ್ವಾಮಿ ತೋಟದಲ್ಲಿ. ಇದನ್ನೂ ಓದಿ: 15 ದಿನಗಳಲ್ಲಿ ಬೆಂಗಳೂರಿನ ಸಿಬಿಡಿ ಏರಿಯಾದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಿ: ಹೈಕೋರ್ಟ್ ಡೆಡ್‍ಲೈನ್


    ಹಲವು ದಶಕಗಳಿಂದ ಕೋಲಾರ ಜಿಲ್ಲೆಯ ರೈತರು ಟೊಮೆಟೋ ಸೇರಿದಂತೆ ತರಕಾರಿ ಬೆಳೆಗಳನ್ನು ಕಷ್ಟಪಟ್ಟು ಬೆಳೆಯುತ್ತಿದ್ದರು. ಆದರೂ ಸರಿಯಾದ ಬೆಲೆ ಸಿಗದೆ ಅದೃಷ್ಟ ಇದ್ದವರಿಗೆ ಬೆಲೆ ಎನ್ನುವಂತಹ ಪರಿಸ್ಥಿತಿಗೆ ಸಿಲುಕಿದ ರೈತರು ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದರು. ಇದರಿಂದ ಬೇಸತ್ತ ಚದುಮನಹಳ್ಳಿಯ ರೈತ ನಾರಾಯಣಸ್ವಾಮಿ ಹೊಸದೊಂದು ಬೆಳೆ ಬೆಳೆದು ಉತ್ತಮ ಲಾಭ ಮಾಡಬೇಕೆಂದು ನಿರ್ಧಾರಿಸಿ ಹಲವು ರಾಜ್ಯಗಳನ್ನು ಸುತ್ತಾಡಿ ಕೊನೆಗೆ ಕೋಲ್ಕತ್ತಾದಲ್ಲಿ ಸಿಕ್ಕ ತೈವಾನ್ ಗೋಲ್ಡ್ ಎನ್ನುವ ತಳಿಯಲ್ಲಿ ತಿಳಿ ಗುಲಾಬಿ ಸೀಬೆಯನ್ನು ತಂದು ಬೆಳೆದಿದ್ದಾರೆ.

    ಕಳೆದ ಮೂರು ವರ್ಷಗಳ ಹಿಂದೆ ಇವರು ಬೆಳೆದ ಬೆಳೆಗೆ ನಿರೀಕ್ಷೆಗೂ ಮೀರಿದ ಲಾಭ ಬರಲಾರಂಭಿಸಿದೆ. ಪರಿಣಾಮ ಮೊದಲು ಮೂರು ಎಕರೆಯಲ್ಲಿ ಸೀಬೆ ಬೆಳೆದಿದ್ದ ನಾರಾಯಣಸ್ವಾಮಿ ಈಗ ತಮ್ಮ ಹತ್ತು ಎಕರೆ ಭೂಮಿಯಲ್ಲಿ ಸೀಬೆ ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ. ನಾರಾಯಣಸ್ವಾಮಿಯ ಪ್ರಕಾರ ಎಕರೆಗೆ ವರ್ಷಕ್ಕೆ ಕನಿಷ್ಠ 20 ರಿಂದ 25 ಲಕ್ಷ ರೂ. ಗಳಿಸುತ್ತಿದ್ದಾರೆ.

    ನಾರಾಯಣಸ್ವಾಮಿ 10 ಎಕರೆ ಭೂಮಿಯಲ್ಲಿ 8 ಸಾವಿರ ಸೀಬೆ ಗಿಡಗಳನ್ನು ಬೆಳೆದಿದ್ದಾರೆ. ಒಂದು ಎಕರೆ ಸೀಬೆ ಬೆಳೆಯಲು ಕನಿಷ್ಠ ಒಂದೂವರೆ ಲಕ್ಷ ಖರ್ಚು ಬರುತ್ತದೆ. ಗಿಡಗಳನ್ನು ನಾಟಿ ಮಾಡಿದ ಏಳು ತಿಂಗಳ ಕಾಲ ಆರೈಕೆ ಮಾಡಿದರೆ ಬಳಿಕ ಫಸಲು ಬರಲು ಆರಂಭಿಸಿ 10 ರಿಂದ 15 ವರ್ಷಗಳ ಕಾಲ ನಿರಂತವಾಗಿ ಫಲ ಕೊಡುತ್ತವೆ. ಪ್ರತಿ ತಿಂಗಳಿಗೆ 40 ಟನ್‌ಗಳಷ್ಟು ಗಿಡಗಳು ಫಸಲು ಕಡುತ್ತವೆ. ಒಂದು ಹಣ್ಣು 500 ರಿಂದ 800 ಗ್ರಾಂ ತೂಕ ಹೊಂದಿರುತ್ತದೆ. ಇದನ್ನೂ ಓದಿ: ಹಿಜಬ್‌ ವಿವಾದದ ಹಿಂದೆ ಕಾಣದ ಕೈಗಳ ಕೈವಾಡ: ಹೈಕೋರ್ಟ್‌ ಶಂಕೆ

    ಸದ್ಯ ತೈವಾನ್ ಗೋಲ್ಡ್ ತಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು ಒಂದು ಕೆಜಿ ಸೀಬೆ ಹಣ್ಣು 70 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಬೆಳೆಗೆ ಮಾರುಕಟ್ಟೆ ಸಮಸ್ಯೆಯೂ ಇಲ್ಲ. ಬೆಂಗಳೂರು ಸೇರಿದಂತೆ ಹಲವೆಡೆಯಿಂದ ವ್ಯಾಪಾರಸ್ಥರು ಇವರ ತೋಟಕ್ಕೆ ಬಂದು ಹಣ್ಣನ್ನು ಖರೀದಿ ಮಾಡಿ ಹೋಗುತ್ತಿದ್ದಾರೆ. ಬಿಗ್ ಬಾಸ್ಕೇಟ್, ರಿಲಯನ್ಸ್, ಮೋರ್, ಸೇರಿದಂತೆ ಹಲವು ಕಂಪನಿಗಳು ಇವರ ತೋಟಕ್ಕೆ ಬಂದು ಖರೀದಿ ಮಾಡುತ್ತಿದೆ.

    ಈ ತಳಿಯ ಸೀಬೆ ಹಣ್ಣಿಗೆ ಸದ್ಯ ಮಾರುಕಟ್ಟೆ ಸಮಸ್ಯೆ ಇಲ್ಲ. ಬದಲಾಗಿ ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇವರಿಗೆ ಒಂದು ಎಕರೆಯಲ್ಲಿ ವರ್ಷಕ್ಕೆ 20 ರಿಂದ 25 ಲಕ್ಷ ರೂ.ಯಷ್ಟು ಆದಾಯ ಬರುತ್ತಿದ್ದು ಎಲ್ಲಾ ರೈತರು ಹೀಗೆ ಬೆಳೆಯಬೇಕು ಎನ್ನುವುದು ಇವರ ಆಶಯ.

    ಒಟ್ಟಿನಲ್ಲಿ ಸೀಬೆಹಣ್ಣು ಎಂದರೆ ಬಡವರ ಸೇಬು ಎನ್ನುವ ಮಾತಿದೆ. ಆದರೆ ಉತ್ತಮ ಕೊಬ್ಬಿನಾಂಶ, ಹಲವು ವಿಟಮಿನ್ಸ್ ಹೊಂದಿರುವ ಸೀಬೆ ಆರೋಗ್ಯದ ದೃಷ್ಟಿಯಿಂದ ಉಪಯುಕ್ತ, ಹಾಗೂ ಬೆಳೆಯುವ ರೈತರಿಗೂ ಒಳ್ಳೆಯ ಆದಾಯದ ಮೂಲ ಎನ್ನುವುದರಲ್ಲಿ ಎರಡು ಮಾತಿಲ್ಲ.

  • ಮಾರ್ಚ್ ಅಂತ್ಯಕ್ಕೆ 100 ಕೃಷಿ ಸಂಜೀವಿನಿ ವಾಹನಗಳು ಲೋಕಾರ್ಪಣೆ: ಬಿ.ಸಿ ಪಾಟೀಲ್

    ಮಾರ್ಚ್ ಅಂತ್ಯಕ್ಕೆ 100 ಕೃಷಿ ಸಂಜೀವಿನಿ ವಾಹನಗಳು ಲೋಕಾರ್ಪಣೆ: ಬಿ.ಸಿ ಪಾಟೀಲ್

    ಬೆಂಗಳೂರು: ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಂಬುಲೆನ್ಸ್ ಮಾದರಿಯ 100 ಕೃಷಿ ಸಂಜೀವಿನಿ ವಾಹನಗಳು ಮಾರ್ಚ್ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿವೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

    ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ಜೆಡಿಎಸ್ ಸದಸ್ಯ ಗೋವಿಂದ್ ರಾಜು ಪ್ರಸ್ತಾಪ ಮಾಡಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಬಿ.ಸಿ ಪಾಟೀಲ್, ಮಾರ್ಚ್ ಅಂತ್ಯಕ್ಕೆ 100 ಕೃಷಿ ಸಂಜೀವಿನಿ ವಾಹನಗಳನ್ನು ಲೋಕಾರ್ಪಣೆ ಮಾಡುವ ಬಗ್ಗೆ ತಿಳಿಸಿದರು.

    ಮಣ್ಣಿನ ಗುಣಮಟ್ಟ, ಕೀಟ ನಾಶಕಗಳಿಂದಾಗುವ ಸಮಸ್ಯೆ ಸೇರಿದಂತೆ ಅನೇಕ ಇತರ ಸಮಸ್ಯೆಗಳನ್ನು ರೈತ ಎದುರಿಸುತ್ತಿದ್ದಾನೆ. ಕೃಷಿ ಸಂಜೀವಿನಿ ಸಕಾಲದಲ್ಲಿ ಬೆಳೆಯ ಎಲ್ಲಾ ಹಂತಗಳಲ್ಲಿ ಸರ್ವೇಕ್ಷಣೆಯನ್ನು ಕೈಗೊಂಡು ಕಂಡುಬಂದಿರುವ ಕೀಟ, ರೋಗ, ಕಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ಆತನ ಜಮೀನಿಗೆ ಹೋಗಿ ಮಣ್ಣಿನ ಪರೀಕ್ಷೆ ನಡೆಸಿ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ನೀಡುವ ಯೋಜನೆ ಇದಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ

    ಅಂಬುಲೆನ್ಸ್ ಮಾದರಿ ವಾಹನ ಇದಾಗಿದ್ದು, ಒಬ್ಬ ಕೃಷಿ ಡಿಪ್ಲೋಮಾ ಪದವೀಧರ ಇದರಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಸ್ಥಳದಲ್ಲಿ ರೈತರ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ರೈತರ ಸಾಲಮನ್ನಾ ಅಸಾಧ್ಯ: ಎಸ್.ಟಿ. ಸೋಮಶೇಖರ್

    ಈಗಾಗಲೇ ಕೊಪ್ಪಳದಲ್ಲಿ ನಾನು ಉಸ್ತುವಾರಿ ಸಚಿವನಾಗಿದ್ದಾಗ 24 ಕೃಷಿ ಸಂಜೀವಿನಿ ವಾಹನಗಳನ್ನು ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಜಾರಿ ಮಾಡಿದ್ದೆ. ಇದನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿತ್ತು. ಹೀಗಾಗಿ ಇದನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲು ತೀರ್ಮಾನ ಮಾಡಲಾಗಿದೆ. 164 ವಾಹನಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಮಾರ್ಚ್ ಅಂತ್ಯಕ್ಕೆ 100 ವಾಹನ ಲೋಕಾರ್ಪಣೆಗೊಳ್ಳಲಿದೆ. ಉಳಿದ ವಾಹನ ಏಪ್ರಿಲ್‌ನಲ್ಲಿ ಸಿದ್ಧವಾಗಲಿವೆ ಎಂದು ಮಾಹಿತಿ ನೀಡಿದರು.

  • ಟ್ರ್ಯಾಕ್ಟರ್ ಬಳಸಿ ರಷ್ಯಾದ ಮಿಲಿಟರಿ ಟ್ಯಾಂಕ್ ಹೊತ್ತೊಯ್ದ ರೈತ

    ಟ್ರ್ಯಾಕ್ಟರ್ ಬಳಸಿ ರಷ್ಯಾದ ಮಿಲಿಟರಿ ಟ್ಯಾಂಕ್ ಹೊತ್ತೊಯ್ದ ರೈತ

    ಕೀವ್: ಉಕ್ರೇನ್‍ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ, ಸೋಶಿಯಲ್ ಮೀಡಿಯಾದಲ್ಲಿ ಯುದ್ಧಕ್ಕೆ ಸಂಬಂಧಿಸಿದಂತೆ ಹಲವು ವೀಡಿಯೋಗಳು ಹರಿದಾಡುತ್ತಿದೆ. ಅಲ್ಲದೆ ಯುದ್ಧದಿಂದ ತತ್ತರಿಸಿದ ಜನರು ದಿನಕ್ಕೊಂದು ವೀಡಿಯೋ ಎಂಬಂತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವೀಡಿಯೋ ವೈರಲ್ ಆಗಿದೆ.

    ಉಕ್ರೇನ್ ರೈತನೊಬ್ಬ ತನ್ನ ಟ್ರಾಕ್ಟರ್ ಓಡಿಸುತ್ತ ಬಂದು ದಾರಿಯಲ್ಲಿದ್ದ ರಷ್ಯಾದ ಮಿಲಿಟರಿ ಟ್ಯಾಂಕ್ ಕದಿಯಲು ಪ್ರಯತ್ನಿಸುತ್ತಾನೆ. ಆಗ ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಟ್ಯಾಂಕ್‍ನನ್ನು ಹಿಂಬಲಿಸುತ್ತ ಹಿಂದೆ ಓಡಿ ಹೋಗುವುದನ್ನು ವೀಡಿಯೋದಲ್ಲಿ ನಾವು ಗಮನಿಸಬಹುದು. ಇದನ್ನೂ ಓದಿ: ಪುರುಷನ ವೇಷಧರಿಸಿ ಕಳ್ಳತನ ಮಾಡಲು ಬಂದ ಯುವತಿ ಅರೆಸ್ಟ್!

    ಪ್ರಸ್ತುತ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ವೀಡಿಯೋಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಈ ವೀಡಿಯೋವನ್ನು ಕೆಲವರು ಕಾಮಿಡಿಯಾಗಿ ತೆಗೆದುಕೊಂಡರೆ ಮತ್ತೆ ಕೆಲವರು ವಿರೋಧಿಸಿದ್ದಾರೆ.

    ಈ ವೀಡಿಯೊವನ್ನು ಬ್ರಿಟಿಷ್ ಕನ್ಸರ್ವೇಟಿವ್ ರಾಜಕಾರಣಿ ಮತ್ತು ಪ್ಲೈಮೌತ್ ಮೂರ್ ವ್ಯೂನ ಸಂಸತ್ ಸದಸ್ಯ ಜಾನಿ ಮರ್ಸರ್ ಟ್ವಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಟ್ವಟ್ಟರ್ ನಲ್ಲಿ ಅವರು, ಯಾವುದೇ ಪರಿಣಿತರು ಇಲ್ಲ. ಆದರೆ ಯುದ್ಧವು ಸರಿಯಾಗಿ ನಡೆಯುತ್ತಿರುವಂತೆ ಕಾಣಿಸುತ್ತಿಲ್ಲ. ಉಕ್ರೇನಿಯನ್ ಟ್ರಾಕ್ಟರ್ ಇಂದು ರಷ್ಯಾದ ಟ್ಯಾಂಕ್ ಕದಿಯುತ್ತಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ವೀಡಿಯೋವನ್ನು 4.6 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

    2014 ರಿಂದ 2021 ರವರೆಗೆ ಆಸ್ಟ್ರಿಯಾದಲ್ಲಿ ಉಕ್ರೇನ್ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಒಲೆಕ್ಸಾಂಡರ್ ಶೆರ್ಬಾ ಅವರು ವೀಡಿಯೊವನ್ನು ಹಂಚಿಕೊಂಡಿದ್ದು, ಉಕ್ರೇನಿಯನ್ನರು ನಿಜವಾಗಿಯೂ ಅಸಾಧ್ಯರು ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: CBI ಎಂದು ಸುಳ್ಳು ಹೇಳಿ ಲಕ್ಷಾಂತರ ರೂ. ಹಣ, ಕೆಜಿಗಟ್ಟಲೆ ಚಿನ್ನದೋಚಿದರು!

    ವೀಡಿಯೋ ನೋಡಿದ ನೆಟ್ಟಿಗರು ನಗುವಿನ ಎಮೋಜಿಗಳನ್ನು ಕಳುಹಿಸುತ್ತಿದ್ದಾರೆ. ಇದನ್ನು ಮಸ್ತಿ ಎಂಬಂತೆ ಎಷ್ಟೋ ಜನರು ನೋಡುತ್ತಿದ್ದಾರೆ. ಉಕ್ರೇನ್ ಜನರು ಧೈರ್ಯಶಾಲಿಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಕೆಲವರು ಇದು ತಮಾಷೆಯಲ್ಲ ಎಂದು ಬರೆದುಕೊಂಡಿದ್ದಾರೆ.