Tag: Farmer Suicide

  • ವಕ್ಫ್ ವಿವಾದಕ್ಕೆ ಬೇಸತ್ತು ಯುವ ರೈತ ಆತ್ಮಹತ್ಯೆ!

    ವಕ್ಫ್ ವಿವಾದಕ್ಕೆ ಬೇಸತ್ತು ಯುವ ರೈತ ಆತ್ಮಹತ್ಯೆ!

    – ಜೆಪಿಸಿ ಮುಂದೆ ನ್ಯಾಯಕ್ಕಾಗಿ ಮನವಿ

    ಹಾವೇರಿ: ವಕ್ಫ್ ಬೋರ್ಡ್ (Waqf Board) ಆಸ್ತಿ ಕಿರಿಕಿರಿಗೆ ಬೇಸತ್ತು ಯುವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ (Haveri) ಜಿಲ್ಲೆಯ ಹರನಗಿ ಗ್ರಾಮದಲ್ಲಿ ನಡೆದಿದೆ.

    ಹರನಗಿ ಗ್ರಾಮದ ನಿವಾಸಿ ರುದ್ರಪ್ಪ 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು (ನ.7) ಕೇಂದ್ರ ಸಂಸದೀಯ ಜಂಟಿ ಕಮಿಟಿಯ (Joint Parliamentary Committee) ಮುಂದೆ ಹಾವೇರಿ ರೈತರು ಪ್ರಸ್ತಾಪಿಸಿದ ಬಳಿಕ ಈ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ಜೆಪಿಸಿ ಸಮಿತಿಯಿಂದ ಭರವಸೆ – ಯತ್ನಾಳ್, ಕರಂದ್ಲಾಜೆ ಅಹೋರಾತ್ರಿ ಪ್ರತಿಭಟನೆ ಅಂತ್ಯ

    ರುದ್ರಪ್ಪ ಅವರ ತಂದೆ ಚೆನ್ನಪ್ಪ ಹಾನಗಲ್ ತಾಲ್ಲೂಕಿನ ಅಲ್ಲಾಪುರ ಗ್ರಾಮದಲ್ಲಿ 1964ರಲ್ಲಿ 4 ಎಕರೆ 36 ಗುಂಟೆ ಜಮೀನು ಖರೀದಿ ಮಾಡಿದ್ದರು. 2015 ರವರೆಗೆ ಚೆನ್ನಪ್ಪ ಮತ್ತು ಮಗ ರುದ್ರಪ್ಪ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಆದರೆ 2015ರಲ್ಲಿ ಏಕಾಏಕಿ ಜಮೀನು ವಕ್ಫ್ ಬೋರ್ಡ್ಗೆ ಸೇರ್ಪಡೆಯಾಗಿದೆ.

    ಯಾವುದೇ ನೋಟಿಸ್ ನೀಡದೇ ರೈತರಿಂದ ಜಮೀನನ್ನು ವಕ್ಫ್ ಬೋರ್ಡ್ ವಶಪಡಿಸಿಕೊಂಡಿದೆ. ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಚೆನ್ನಪ್ಪ , ಮಗ ರುದ್ರಪ್ಪ ಕಂಗಾಲಾಗಿದ್ದರು. ಇರುವ ಜಮೀನು ಕಳೆದುಕೊಂಡು ಮಾನಸಿಕ ನೋವಿನಿಂದ ಚೆನ್ನಪ್ಪನ ಮಗ ರುದ್ರಪ್ಪ 2022ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

    ಜೆಪಿಸಿ ಸಮಿತಿಯ ಅಧ್ಯಕ್ಷ ಜಗದಾಂಬಿಕ ಪಾಲ್ (Jagdambika Pal) ಭೇಟಿ ನೀಡಿದ ಸಂದರ್ಭದಲ್ಲಿ ಮೃತ ರುದ್ರಪ್ಪನ ಕುಟುಂಬಸ್ಥರು ಹಾಗೂ ಸ್ನೇಹಿತರು ಎಲ್ಲ ವಿಚಾರವನ್ನು ವಿವರವಾಗಿ ತಿಳಿಸಿದ್ದಾರೆ.ಇದನ್ನೂ ಓದಿ: ಮಾಸ್ ಆಗಿ ಎಂಟ್ರಿ ಕೊಟ್ಟ ಕಮಲ್ ಹಾಸನ್- ‘ಥಗ್ ಲೈಫ್’ ಚಿತ್ರದ ಟೀಸರ್ ಔಟ್

  • ಸಾಲ ಬಾಧೆ ತಾಳಲಾರದೇ ವಿಷಸೇವಿಸಿ ರೈತ ಆತ್ಮಹತ್ಯೆ

    ಸಾಲ ಬಾಧೆ ತಾಳಲಾರದೇ ವಿಷಸೇವಿಸಿ ರೈತ ಆತ್ಮಹತ್ಯೆ

    ಹಾವೇರಿ: ಸಾಲ ಬಾಧೆ ತಾಳಲಾರದೆ ರೈತರೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ರಾಣೆಬೆನ್ನೂರು ತಾಲೂಕಿನ ಚೆನ್ನಾಪುರ ತಾಂಡಾದಲ್ಲಿ ನಡೆದಿದೆ.

    ಲೋಕಪ್ಪ ಲಮಾಣಿ (52) ಮೃತ ರೈತ. ಲೋಕಪ್ಪ 6 ಎಕರೆ ಜಮೀನು ಹೊಂದಿದ್ದು, ಬ್ಯಾಂಕ್ ಮತ್ತು ಕೈಸಾಲ ಅಂತಾ ಏಳೂವರೆ ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದರು. ಈರುಳ್ಳಿ, ಮೆಕ್ಕೆಜೋಳ, ಮತ್ತು ಶೇಂಗಾ ಬೆಳೆಗಳು ಪದೆ ಪದೆ ಮಳೆಯಿಂದ ಹಾನಿಯಾಗಿದ್ದಕ್ಕೆ ಬೇಸತ್ತು ಮನೆಯಲ್ಲೇ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂವರು ಗಂಡು ಮತ್ತು ಒಂದು ಹೆಣ್ಣು ಸೇರಿದಂತೆ ನಾಲ್ಕು ಮಕ್ಕಳನ್ನ ಹೊಂದಿದ್ದ ಅವರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಕುರಿತು ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಕೇಂದ್ರ ಸರ್ಕಾರಕ್ಕೆ ಬಹುಮತ ಇದ್ರೆ ಸಾಲದು, ಜನರ ಸಹಮತವೂ ಬೇಕು: ಟಿ.ಎ.ಶರವಣ

    ಕೇಂದ್ರ ಸರ್ಕಾರಕ್ಕೆ ಬಹುಮತ ಇದ್ರೆ ಸಾಲದು, ಜನರ ಸಹಮತವೂ ಬೇಕು: ಟಿ.ಎ.ಶರವಣ

    – ಜೆಡಿಎಸ್‍ನಿಂದ 1 ಲಕ್ಷ ರೂ. ಪರಿಹಾರ ನೀಡಿದ್ದೇವೆ

    ರಾಯಚೂರು: ಅಕಾಲಿಕ ಮಳೆಯಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ರೈತರು ಮನವಿ ಮಾಡಿದ್ರೂ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಸರ್ಕಾರಕ್ಕೆ ಬಹುಮತ ಇದ್ರೆ ಸಾಲದು, ಜನರ ಸಹಮತವೂ ಇರಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಹೇಳಿದರು.

    ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದ ಎಲ್ಲ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿವೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ ಜೆಡಿಎಸ್ ಬಲಿಷ್ಠವಾಗುತ್ತಿದೆ. ಜನತಾ ಸರ್ಕಾರ ಜಾರಿಗೆ ತರಲು ಜೆಡಿಎಸ್ ಮಿಷನ್ 123 ನಡೆಸಿದ್ದೇವೆ. ಯಾವ ಸರ್ಕಾರವೂ ನೀಡದೇ ಇರುವ ಜನಪ್ರಿಯ ಕಾರ್ಯಕ್ರಮವನ್ನು ಕೊಡಲು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ದಕ್ಕುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ:  ಬಕಾಸುರರ ರೀತಿ ನುಂಗೋದು ಅಭಿವೃದ್ಧಿಯಾ?: ಹೆಚ್‍ಡಿಕೆ ತಿರುಗೇಟು

    ಜಿಲ್ಲೆಯ ಲಿಂಗಸುಗೂರಿನ ಬೋಗಪುರ ಗ್ರಾಮದಲ್ಲಿ ರೈತ ಆತ್ಮಹತ್ಯೆ ಪ್ರಕರಣ ಕುರಿತು ಮಾತನಾಡಿದ ಅವರು, ಜಿಲ್ಲಾಡಳಿತ ರೈತರ ವಿಚಾರದಲ್ಲಿ ವಿಫಲವಾಗಿದೆ. ಮೊದಲೇ ಕೊರೊನಾ ಮತ್ತು ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಅಧಿಕಾರಿಗಳ ಹಾಗೂ ಸಚಿವರ ತಂಡ ರಚನೆ ಆಗಬೇಕು. ಬೆಳೆಹಾನಿಯಾದ ರೈತರಿಗೆ ಸ್ಥಳದಲ್ಲೇ ಪರಿಹಾರ ನೀಡಬೇಕು. ಆದರೆ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

    ಕೂಡಲೇ ಸರ್ಕಾರ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ಮೃತ ರೈತನ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ಕೆಲಸ ಕೊಡಿಸಬೇಕು. ಜೆಡಿಎಸ್ ವತಿಯಿಂದ ಮೃತ ರೈತ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅಭಿನವ ಶ್ರೀ ನಮಗೆ ಧೈರ್ಯ ತುಂಬಿ ಸನ್ಮಾರ್ಗದಲ್ಲಿ ಮುನ್ನಡೆಸುವ ಮಾರ್ಗದರ್ಶಕರಾಗಿದ್ದರು: ಸಿಸಿ ಪಾಟೀಲ್