Tag: farmer

  • ಕೊಡಗು | ಅಕಾಲಿಕ ಮಳೆಗೆ ಬೆಳೆ ಹಾನಿ – ಮುಸುಕಿನ ಜೋಳ ಬೆಳೆದ ರೈತರಿಗೆ ಸಂಕಷ್ಟ

    ಕೊಡಗು | ಅಕಾಲಿಕ ಮಳೆಗೆ ಬೆಳೆ ಹಾನಿ – ಮುಸುಕಿನ ಜೋಳ ಬೆಳೆದ ರೈತರಿಗೆ ಸಂಕಷ್ಟ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ 4-5 ದಿನಗಳಿಂದ ರಾತ್ರಿ ಸಮಯ ಸುರಿಯುತ್ತಿರುವ ಮಳೆಯಿಂದ (Rain) ಜಿಲ್ಲೆಯಲ್ಲಿ ನಾನಾ ರೀತಿಯ ಅವಾಂತರಗಳು ಸೃಷ್ಟಿಯಾಗಿದೆ.

    ಅದರಲ್ಲೂ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಶಿರಂಗಾಲ, ತೊರೆನೂರು, ಅಳುವಾರ, ಸಿದ್ಧಲಿಂಗಪುರ, 6ನೇ ಹೊಸಕೋಟೆ ಸೇರಿದಂತೆ ಹಲವು ಕಡೆಗಳಲ್ಲಿ ಜೋಳ ಬೆಳೆದ ರೈತರಿಗೆ ಸಂಕಷ್ಟ ಬಂದಿದೆ.

    ಹೌದು. ಈ ಭಾಗದ ರೈತರು ಸಾವಿರಾರು ಎಕ್ರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುವದು ರೂಢಿ. ಇನ್ನೇನು ಬೆಳೆ ಕಟಾವಿಗೆ ಬಂದಿರುವ ಹೊತ್ತಿನಲ್ಲಿ ಅಕಾಲಿಕ ಮಳೆಗೆ ಹಾನಿಯಾಗಿದೆ. ರಾತ್ರಿ ಮಳೆಗೆ ಅಪಾರ ಪ್ರಮಾಣದ ಜೋಳದ ಬೆಳೆ ನೆಲ ಕಚ್ಚಿವೆ.

    ನೆಲಕ್ಕುರುಳಿರುವ ಜೋಳದ ಕಾಳುಗಳು ಮಳೆಯಿಂದ ಮೊಳಕೆಯೊಡೆಯುತ್ತಿವೆ. ಇದರಿಂದಾಗಿ ಜೋಳದ ತೂಕ ಕಡಿಮೆಯಾಗುತ್ತಿದೆ. ಅಲ್ಲದೇ ಮೊಳಕೆ ಬಂದ ಜೋಳ ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಒಂದು ಕ್ವಿಂಟಲ್ ಜೋಳ 1,200 ರಿಂದ 1,400 ರೂ.ಗಳಿಗೆ ಇಳಿಕೆಯಾಗಿದೆ. ಇದರಿಂದ ಸಾಲ ಮಾಡಿ ಬೆಳೆ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.

    ಜೋಳ ಸೇರಿದಂತೆ ಶುಂಠಿ, ಅಡಿಕೆ, ಮೆಣಸು ಬೆಳೆಗಳೂ ಸಹ ಕೊಳೆಯುವ ಹಂತಕ್ಕೆ ತಲುಪಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಸಮಸ್ಯೆ ಆಲಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ನೂರಾರು ರೈತರು ಆಗ್ರಹಿಸಿದ್ದಾರೆ.

  • ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ

    ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ

    ಬಾಗಲಕೋಟೆ: ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದ್ದಕ್ಕೆ ರೈತರೊಬ್ಬರು (Farmers)  ಕೈಗೆ ಬಂದಿದ್ದ ಈರುಳ್ಳಿ(Onion) ಫಸಲನ್ನ ಮಣ್ಣಲ್ಲೇ ಮುಚ್ಚಿದ್ದಾರೆ.

    ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದ ಗುರಲಿಂಗಪ್ಲ ಗಡ್ಡಿ ನಾಲ್ಕು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಈರುಳಿ ಉತ್ತಮ ಫಸಲು ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ ಎಂದು ಬೇಸರಗೊಂಡಿದ್ದರು.

    ಸಾಲ ಮಾಡಿ ಈರುಳ್ಳಿ ಬೆಳೆದಿದ್ದೇನೆ. ಉತ್ತಮ ಫಸಲು ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಒಂದು ಕ್ವಿಂಟಾಲ್ ಈರುಳ್ಳಿಗೆ 200 ರೂ. ಅಥವಾ 300 ರೂ. ಹೇಳುತ್ತಾರೆ. ಬೆಲೆ ಇಲ್ಲದ್ದಕ್ಕೆ ಈರುಳ್ಳಿಯನ್ನು ಮಣ್ಣಲ್ಲೇ ಮುಚ್ಚುತ್ತಿದ್ದೇನೆ ಎಂದು ಹೇಳಿದರು.  ಇದನ್ನೂ ಓದಿ:  ದಾವಣಗೆರೆ | ಮನೆಯಲ್ಲಿ ಬಾಯ್ಲರ್ ಸ್ಫೋಟ – 11ರ ಬಾಲಕಿ ಸಾವು, ಮೂವರಿಗೆ ಗಂಭೀರ

    ಮೊದಲೇ ಅತೀವೃಷ್ಟಿಯಿಂದ ಬೆಳೆ ಹಾಳಾಗಿತ್ತು. ಈಗ ಅಳಿದುಳಿದ ಫಸಲು ಬಂದಿದೆ. ಆದರೆ ಉತ್ತಮ ದರ ಸಿಗುತ್ತಿಲ್ಲ. ಹೀಗಾದರೆ ರೈತ ಹೇಗೆ ಬದುಕಬೇಕು? ಈರುಳ್ಳಿ ಬೆಳೆದ ರೈತರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

  • ನಿನ್ನದು 4 ಎಕ್ರೆ, ನನ್ನದು 40 ಎಕ್ರೆ ಹಾಳಾಗಿದೆ – ಕಷ್ಟ ಹೇಳಿದ ರೈತನಿಗೆ ಗದರಿದ ಖರ್ಗೆ

    ನಿನ್ನದು 4 ಎಕ್ರೆ, ನನ್ನದು 40 ಎಕ್ರೆ ಹಾಳಾಗಿದೆ – ಕಷ್ಟ ಹೇಳಿದ ರೈತನಿಗೆ ಗದರಿದ ಖರ್ಗೆ

    – ಮೋದಿಗೆ ಅಹಂಕಾರ ಜಾಸ್ತಿ, ಆ ಅಹಂಕಾರವೇ ಅವರನ್ನ ತಿನ್ನುತ್ತೆ ಅಂತ ಲೇವಡಿ
    – ಕಳೆದ ಚುನಾವಣೆಯಲ್ಲಿ ಮಹಾಮೋಸ ನಡೆದಿದೆ – ಇವಿಎಂ ನಿಷೇಧ ಸ್ವಾಗತಿಸಿದ ಖರ್ಗೆ

    ಕಲಬುರಗಿ: ಸಮಸ್ಯೆ ಹೇಳಿಕೊಂಡು ಬಂದ ವ್ಯಕ್ತಿ ವಿರುದ್ಧ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗರಂ ಆದ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಕಲಬುರಗಿಯ (Kalaburagi) ತಮ್ಮ ನಿವಾಸದಲ್ಲಿ ಖರ್ಗೆ ಮಾಧ್ಯಮದವರೊಂದಿಗೆ ಮಾತನಾಡಬೇಕಾದ್ರೆ ರೈತರೊಬ್ಬರು (Farmer) ಬಂದು ಸರ್ ತೊಗರಿ ಬೆಳೆ ಹಾನಿಯಾಗಿದೆ. ನಷ್ಟ ಉಂಟಾಗಿದೆ ಎಂದು ಅಳಲುತೊಡಿಕೊಂಡಿದ್ದಾರೆ. ಈ ವೇಳೆ, ಗರಂ ಆದ ಖರ್ಗೆ, ನಿನ್ನದು 4 ಎಕ್ರೆ ಹಾಳಾಗಿದೆ. ನನ್ನದು 40 ಎಕ್ರೆ ಹಾಳಾಗಿದೆ. ಪ್ರಚಾರಕ್ಕಾಗಿ ತೊಗರಿ ತೆಗೆದುಕೊಂಡು ಬಂದ್ದಿದ್ದೀಯಾ? ತೊಗರಿ ಅಷ್ಟೆ ಅಲ್ಲ, ಉದ್ದು, ಹೆಸರು ಕೂಡ ಹಾಳಾಗಿದ್ದು ನನಗೆ ಗೊತ್ತಿದೆ. 6 ಹಡೆದವಳ ಮುಂದೆ ಮೂರು ಹಡೆದವಳು ಹೇಳಿದಂತಾಯಿತು ಎಂದು ವ್ಯಕ್ತಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಹೋಗಿ ಮೋದಿ, ಶಾಗೆ ಕೇಳಿ ಅಂತ ಹೇಳಿದ್ದಾರೆ. ಖರ್ಗೆ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

    ಕೇಂದ್ರ ನಮ್ಮ ಬೇಡಿಕೆಗೆ ಕಿವಿಗೊಡಲಿಲ್ಲ
    ಇದೇ ವೇಳೆ ಕೇಂದ್ರ ಸರ್ಕಾರ 2 ಸ್ಲ್ಯಾಬ್‌ಗಳಲ್ಲಿ ಜಿಎಸ್‌ಟಿ (GST) ಕಡಿತದ ಬಗ್ಗೆ ಮಾತನಾಡಿದ ಖರ್ಗೆ, ಕಳೆದ ಎಂಟು ವರ್ಷಗಳಿಂದ ನಾವು ಜಿಎಸ್‌ಟಿ ಕಡಿತಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಕಿವಿಗೊಡಲಿಲ್ಲ. ಸದ್ಯ ಏಕಾಏಕಿ ಕಡಿತ ಮಾಡಿದ್ದಾರೆ. ಇದಕ್ಕೆ ನಿಜವಾದ ಕಾರಣ ಮೋದಿಗೇ ಗೊತ್ತು ಅಂತಾ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮೋದಿಗೆ ಅಹಂಕಾರ ಜಾಸ್ತಿ
    ಕೇಂದ್ರ ಹಾಗೂ ರಾಜ್ಯದ ಹಲವು ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿಗೆ ಅಹಂಕಾರ ಜಾಸ್ತಿ. ನಾವು ಏನು ಮಾಡಿದರೂ ನಡೆಯುತ್ತದೆ ಅನ್ನೋ ಮನೋಭಾವ ಅವರದ್ದು. ಆದರೆ, ಆ ಅಹಂಕಾರವೇ ಅವರನ್ನ ತಿನ್ನಲಿದೆ ಎಂದು ಲೇವಡಿ ಮಾಡಿದರು.

    ವಿದೇಶಾಂಗ ನೀತಿಯಲ್ಲಿ ಮೋದಿ ನಡೆಸುತ್ತಿರುವ ತಂತ್ರಗಳ ಕುರಿತು ವ್ಯಂಗ್ಯವಾಡಿದ ಖರ್ಗೆ, ಮಾತ್ತೆತಿದ್ರೆ ಟ್ರಂಪ್ ಟ್ರಂಪ್ ಅಂತಾರೆ. ಟ್ರಂಪ್ ಬೆಳಗಾದರೆ ಫೋನ್ ಮಾಡ್ತಾರೆ ಎಂದು ಹೇಳುತ್ತಾರೆ. ಆದರೆ, ಇವತ್ತು ಏನಾಗಿದೆ? ಚೀನಾವನ್ನು ಇಷ್ಟು ದಿನ ನೇಗ್ಲೆಕ್ಟ್ ಮಾಡಿ, ಈಗ ಅದೇ ದೇಶಕ್ಕೆ ಮೋದಿ ಹೋಗಿ ಬಂದಿದ್ದಾರೆ. ದೇಶಕ್ಕೆ ಸಮಸ್ಯೆ ಬಂದಾಗ ನಾವೆಲ್ಲ ಒಂದಾಗಿ ಬೆಂಬಲ ನೀಡಿದ್ದೇವೆ. ಪೆಹಲ್ಗಾಮ್ ದಾಳಿ ಸಂದರ್ಭದಲ್ಲೂ ನಾವು ಕೇಂದ್ರಕ್ಕೆ ಬೆಂಬಲ ನೀಡಿದ್ದೇವೆ. ಆದರೆ, ಬಿಜೆಪಿ ನಾಯಕರು ಪ್ರತಿಬಾರಿ ‘ಮೋದಿ ಹೈ, ಮೋದಿ ಹೈ’ ಅಂತಾರೆ ಎಂದು ಆರೋಪಿಸಿದರು.

    ಇನ್ನೂ ದ್ವೀಭಾಷಾ ಪದ್ಧತಿಯ ಕುರಿತಂತೆ ಮಾತನಾಡಿದ ಖರ್ಗೆ, ಇದು ಯಾವ ರಾಜ್ಯ, ಯಾವ ಇಲಾಖೆಯ ನಿರ್ಧಾರವೋ ಅದಕ್ಕೆ ಅವರಿಗೆ ಅಧಿಕಾರವಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿದೆ. ತಮಿಳುನಾಡು, ಕೇರಳದಲ್ಲಿ ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ನಾವು ಕೇಂದ್ರದಲ್ಲಿ ಸರ್ಕಾರದಲ್ಲಿದ್ದಾಗ ರಾಷ್ಟ್ರೀಯ ಮಟ್ಟದಲ್ಲಿ ದ್ವಿಭಾಷಾ ಪದ್ಧತಿ ಅಳವಡಿಕೆ ಕುರಿತು ಚಿಂತನೆ ನಡೆಸಿದ್ದೆವು ಎಂದು ಹೇಳಿದರು.

    ಇವಿಎಮ್ ನಿಷೇಧ ಶ್ಲಾಘನೀಯ:
    ರಾಜ್ಯ ಸರ್ಕಾರ ಇವಿಎಮ್ ನಿಷೇಧಿಸಿ ಬ್ಯಾಲೆಟ್ ಪೇಪರ್ ಮರುಬಳಕೆಗೆ ಮುಂದಾಗಿರುವ ನಿರ್ಧಾರದ ಬಗ್ಗೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಇವಿಎಮ್‌ನಲ್ಲಿ ಮಹಾಮೋಸ ನಡೆದಿದೆ. ನಾನು ಕೂಡ ಸೋತಾಗ ಮತಗಳ್ಳತನವಾಗಿದೆ. ನನ್ನ ಅಭಿವೃದ್ಧಿ ಕಾರ್ಯಗಳಿಗೆ ಜನಮನ್ನಣೆ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ, ಕಲಬುರಗಿ ಲೋಕಸಭೆಯ ಐದಾರು ಕ್ಷೇತ್ರಗಳಲ್ಲಿ ಅಸಹಜವಾಗಿ ಕಡಿಮೆ ಮತಗಳು ಬಂದಿವೆ. ನಮ್ಮ ಕಣ್ಣೆದುರೇ ಮೋಸವಾಗಿದೆ. ಅಲ್ಲದೇ, ಪಾರ್ಲಿಮೆಂಟ್‌ನಲ್ಲೇ ಪ್ರಧಾನಿ ಮೋದಿ ‘ಖರ್ಗೆ ಬಹುತ್ ಬಾರ್ ಜಿತ್ರೆ’ ಎಂದಿದ್ದರು. ಮೋದಿ ಅವರ ಈ ಮಾತಿನ ಬಳಿಕ ನನಗೆ ಬಲವಾದ ಅನುಮಾನ ಬಂದಿದೆ. ಬಿಹಾರ, ಕಲಬುರಗಿ ಸೇರಿದಂತೆ ರಾಜ್ಯದ ಅನೇಕ ಕಡೆ ವೋಟ್ ಚೋರಿ ನಡೆದಿದೆ ಎಂದು ಆರೋಪಿಸಿದರು.

  • ದಾವಣಗೆರೆ | ಜಮೀನಿನಲ್ಲಿ ಕೆಲಸ ಮಾಡ್ತಿದ್ದ ರೈತನ ಮೇಲೆ ಚಿರತೆ ದಾಳಿ

    ದಾವಣಗೆರೆ | ಜಮೀನಿನಲ್ಲಿ ಕೆಲಸ ಮಾಡ್ತಿದ್ದ ರೈತನ ಮೇಲೆ ಚಿರತೆ ದಾಳಿ

    ದಾವಣಗೆರೆ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ (Farmer) ಮೇಲೆ ಚಿರತೆಯೊಂದು (Leopard) ದಾಳಿ ಮಾಡಿ ಗಾಯಗೊಳಿಸಿದ ಘಟನೆ ಜಗಳೂರು ತಾಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹೊನ್ನೂರಪ್ಪ ಚಿರತೆ ದಾಳಿಗೆ ಒಳಗಾದ ರೈತ. ಜಮೀನಿನಲ್ಲಿ ಕೆಲಸದಲ್ಲಿ ನಿರತರಾಗಿದ್ದ ಹೊನ್ನೂರಪ್ಪ ಅವರ ಮೇಲೆ ಹಿಂದಿನಿಂದ ಬಂದ ಚಿರತೆ ಏಕಾಏಕಿ ದಾಲಳಿ ಮಾಡಿದೆ. ಚಿರತೆ ದಾಳಿಯಿಂದ ಹೊನ್ನೂರಪ್ಪ ಅವರ ಕಾಲಿಗೆ ಗಾಯವಾಗಿದೆ. ಕೂಡಲೇ ಅವರು ಕಿರುಚಾಡಿದ್ದು, ಪಕ್ಕದ ಜಮೀನಿನಲ್ಲಿದ್ದ ರೈತರು ಓಡಿ ಬಂದಿದ್ದಾರೆ. ಈ ವೇಳೆ ಚಿರತೆ ಅಲ್ಲಿಂದ ಪರಾರಿಯಾಗಿದೆ. ಬಳಿಕ ಗಾಯಗೊಂಡ ರೈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬೀದರ್‌ನಲ್ಲಿ ಭೀಕರ ಅಪಘಾತ – ಸ್ಥಳದಲ್ಲೇ ತಾಯಿ, ಮಗಳ ದುರಂತ ಅಂತ್ಯ

    ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಹೆಜ್ಜೆ ಗುರುತುಗಳನ್ನು ದೃಢಪಡಿಸಿದ್ದಾರೆ. ಕಳೆದ ಮೂರು ದಿನಗಳಿಂದ ದೊಣೆಹಳ್ಳಿ, ಕಾಮಗೇತನಹಳ್ಳಿ, ಮುಸ್ಟೂರು ಭಾಗದ ಜಮೀನುಗಳಲ್ಲಿ ಚಿರತೆ ಓಡಾಡಿದ್ದ ಹೆಜ್ಜೆ ಗುರುತು ಕಂಡು ಜನರು ಆತಂಕದಲ್ಲಿದ್ದಾರೆ. ಈಗ ರೈತನ ಮೇಲೆ ದಾಳಿ ನಡೆಸಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ರೈತರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಆಟೋ EMI ಕಟ್ಟಲು ಸ್ನೇಹಿತೆಯನ್ನು ಕೊಂದು ಮಾಂಗಲ್ಯ ಸರ ಕದ್ದ ಖತರ್‌ನಾಕ್ ಚಾಲಕ

  • ಕಾಡು ಹಂದಿಗಳು ಬೆಳೆ ನಾಶ ಮಾಡಿದ್ದಕ್ಕೆ ಫಾರೆಸ್ಟ್ ವಾಚರ್ ಮೇಲೆ ಮಾರಣಾಂತಿಕ ಹಲ್ಲೆ

    ಕಾಡು ಹಂದಿಗಳು ಬೆಳೆ ನಾಶ ಮಾಡಿದ್ದಕ್ಕೆ ಫಾರೆಸ್ಟ್ ವಾಚರ್ ಮೇಲೆ ಮಾರಣಾಂತಿಕ ಹಲ್ಲೆ

    ದಾವಣಗೆರೆ: ಕಾಡು ಹಂದಿಗಳು ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ್ದಕ್ಕೆ ಆಕ್ರೋಶಗೊಂಡ ರೈತರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಜಗಳೂರು ತಾಲೂಕಿನ ರಂಗಯ್ಯನದುರ್ಗದಲ್ಲಿ ನಡೆದಿದೆ.

    ಅರಣ್ಯದ ಅಂಚಿನಲ್ಲಿರುವ ಗೋಡೆ ಗ್ರಾಮದ ಜಮೀನಿನಲ್ಲಿ ಕಾಡು ಹಂದಿಗಳು ಬೆಳೆ ಹಾನಿ ಮಾಡಿವೆ. ಇದರಿಂದ ಸಿಟ್ಟಿಗೆದ್ದ ಗ್ರಾಮದ ರಂಗಪ್ಪ ಮತ್ತು ಆತನ ಪುತ್ರ ಬಸವರಾಜ್ ಸೇರಿ ಫಾರೆಸ್ಟ್ ವಾಚರ್ ತಿಪ್ಪೇಶ್ ಮೇಲೆ ಹೊಲದಲ್ಲಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ | ಬಾಯ್ಸ್‌ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್‌ ಕೇಸ್ – ಬಾಗಲಕೋಟೆ ಯುವಕ ಅರೆಸ್ಟ್‌

    ರಂಗಯ್ಯದುರ್ಗ ಅರಣ್ಯದ ಪ್ರದೇಶಕ್ಕೆ ಹೊಂದಿಕೊಂಡು ಈ ರೈತರ ಜಮೀನುಗಳಿವೆ. ಜಮೀನುಗಳಿಗೆ ಕಾಡು ಹಂದಿ ಸೇರಿದಂತೆ ಹಲವು ಕಾಡು ಪ್ರಾಣಿಗಳು ನುಗ್ಗಿ ಬೆಳೆ ನಾಶ ಮಾಡುತ್ತಿದ್ದವು. ಇದರಿಂದ ಅಕ್ರೋಶಗೊಂಡ ರೈತ ರಂಗಪ್ಪ ಹಾಗೂ ಆತನ ಮಗ ಬಸವರಾಜ್ ಫಾರೆಸ್ಟ್ ವಾಚರ್ ತಿಪ್ಪೇಶ್‍ಗೆ ಅವಾಚ್ಯವಾಗಿ ನಿಂದಿಸಿ, ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಈ ವೇಳೆ ಸ್ಥಳೀಯರು ಆಗಮಿಸಿ ತಿಪ್ಪೇಶ್ ಅವರನ್ನು ರಕ್ಷಣೆ ಮಾಡಿದ್ದಾರೆ. ಅವರನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕಣರ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಬೈಕ್‌ಗೆ ಡಿಕ್ಕಿಯಾಗಿ ಕಾಲುವೆಗೆ ಪಲ್ಟಿಯಾದ ಕಾರು – 7 ಮಂದಿ ದುರ್ಮರಣ

  • ಮಗಳ ಫೀಸ್ ವಾಪಸ್ ಕೇಳಿದ್ದಕ್ಕೆ ರೈತನನ್ನು ಥಳಿಸಿ ಕೊಂದ ಪ್ರಿನ್ಸಿಪಾಲ್‌

    ಮಗಳ ಫೀಸ್ ವಾಪಸ್ ಕೇಳಿದ್ದಕ್ಕೆ ರೈತನನ್ನು ಥಳಿಸಿ ಕೊಂದ ಪ್ರಿನ್ಸಿಪಾಲ್‌

    ಮುಂಬೈ: ಮಗಳ ಸ್ಕೂಲ್ ಫೀಸ್ (School Fees) ಮರುಪಾವತಿಸುವಂತೆ ಕೇಳಿದ ರೈತನನ್ನು ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಹಾಗೂ ಆತನ ಪತ್ನಿ ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ (Maharashtra) ಪರ್ಭಾನಿ ಜಿಲ್ಲೆಯಲ್ಲಿ ನಡೆದಿದೆ.

    ಜಗನ್ನಾಥ್ ಹೆಂಗ್ಡೆ (46) ಮೃತ ರೈತ ಎಂದು ಗುರುತಿಸಲಾಗಿದೆ. ಪೂರ್ಣದ ಝೀರೋ ಫಾಟಾ ಪ್ರದೇಶದಲ್ಲಿರುವ ವಸತಿ ಶಾಲೆಯೊಂದರಲ್ಲಿ ಅವರ ಮಗಳು ವ್ಯಾಸಂಗ ಮಾಡುತ್ತಿದ್ದಳು. ಬಳಿಕ ಕಾರಣಾಂತರಗಳಿಂದ ಮಗಳನ್ನು ಬೇರೆ ಶಾಲೆಗೆ ಸೇರಿಸಿದ್ದರು. ಇದನ್ನೂ ಓದಿ: ನೀವು ಯಾಕೆ ಇಂಧನ ಸ್ಥಗಿತಗೊಳಿಸಿದ್ದೀರಿ? – ದುರಂತಕ್ಕೀಡಾದ ಏರ್ ಇಂಡಿಯಾ ಪೈಲಟ್‌ಗಳ ಸಂಭಾಷಣೆ

    ಆದ್ದರಿಂದ ಜಗನ್ನಾಥ್ ಹೆಂಗ್ಡೆ ಅವರು ಮಗಳ ಶಾಲಾ ಶುಲ್ಕ ಮರುಪಾವತಿ ಮತ್ತು ವರ್ಗಾವಣೆ ಪ್ರಮಾಣಪತ್ರವನ್ನು ಕೇಳಲು ಹೋಗಿದ್ದರು. ಅವರು ಶಾಲೆಯ ಪೂರ್ತಿ ಶುಲ್ಕ ಪಾವತಿಸದ್ದರಿಂದ ಆಡಳಿತ ಮಂಡಳಿ ಮುಖ್ಯಸ್ಥ ಹಾಗೂ ಆತನ ಪತ್ನಿ ತರಾಟೆಗೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಶಿವಮೊಗ್ಗ | ನಾನು ಕಲ್ಲು ನುಂಗಿದ್ದೇನೆ ಎಂದ ಕೈದಿ – ಆಪರೇಷನ್‌ ಮಾಡಿದಾಗ ಸಿಕ್ತು ಮೊಬೈಲ್‌!

    ಅಲ್ಲದೇ ಜಗನ್ನಾಥ್ ಅವರ ಮೇಲೆ ಇಬ್ಬರು ಅಮಾನುಷವಾಗಿ ಹಲ್ಲೆ ನಡೆಸಿದ್ದರು. ತೀವ್ರವಾಗಿ ಹಲ್ಲೆಗೊಳಗಾದ ಜಗನ್ನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂಬಂಧ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥ ಮತ್ತು ರಾಜಕೀಯ ಪಕ್ಷವೊಂದರ ಜೊತೆ ಸಂಬಂಧ ಹೊಂದಿರುವ ಆತನ ಪತ್ನಿಯ ವಿರುದ್ಧ ಪ್ರಕರಣ ಪೂರ್ಣ ಪೊಲೀಸ್ ಠಾಣೆಯಲ್ಲಿ (Purna Police Station) ಪ್ರಕರಣ ದಾಖಲಾಗಿದೆ.

  • ರಾಯಚೂರಿನಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ – ಜಮೀನಿನಲ್ಲಿ ಕುಸಿದು ಬಿದ್ದು ರೈತ ಸಾವು

    ರಾಯಚೂರಿನಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ – ಜಮೀನಿನಲ್ಲಿ ಕುಸಿದು ಬಿದ್ದು ರೈತ ಸಾವು

    ರಾಯಚೂರು: ಜಮೀನಿನಲ್ಲಿ ಹೃದಯಾಘಾತಕ್ಕೊಳಗಾಗಿ (Heart Attack) ಕುಸಿದು ಬಿದ್ದು ರೈತ ಸಾವನ್ನಪ್ಪಿರುವ ಘಟನೆ ರಾಯಚೂರು (Raichur) ಜಿಲ್ಲೆಯ ಡಿ.ರಾಂಪೂರ ಗ್ರಾಮದಲ್ಲಿ ನಡೆದಿದೆ.

    ಉಪ್ಪರ ವೆಂಕಟೇಶ್ (45) ಮೃತ ರೈತ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರೈತನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗ ಮಧ್ಯದಲ್ಲೇ ವೆಂಕಟೇಶ್ ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ರೈತ ವೆಂಕಟೇಶ್ ಜಮೀನಿನ ಕೆಲಸಗಳನ್ನ ಮಾಡಿಕೊಂಡಿದ್ದರು. ಆದರೆ ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    ರಾಯಚೂರು ಜಿಲ್ಲೆಯಲ್ಲಿ ಇತ್ತೀಚಿಗೆ ಹೃದಯಾಘಾತದಿಂದ ಸಾವನ್ನಪ್ಪಿದ ಎರಡನೇ ಪ್ರಕರಣ ಇದಾಗಿದೆ. ಜುಲೈ 6 ರಂದು ಮಸ್ಕಿಯಲ್ಲಿ ಯುವಕ ಶರಣಬಸವ (32) ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಇದನ್ನೂ ಓದಿ: ಬೆಂಗಳೂರಲ್ಲಿ ಕಿಟ್ಟಿ ಪಾರ್ಟಿ ಆಯೋಜಿಸಿ 50 ಕೋಟಿ ವಂಚನೆ ಕೇಸ್ – ಲಾಯರ್ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದ ಮತ್ತೋರ್ವ ಅರೆಸ್ಟ್

  • ಕಾಡಾನೆ ದಾಳಿಯಿಂದ ರೈತನ ಕಾಲು ಮುರಿತ – ನಡುರಸ್ತೆಯಲ್ಲೇ ಮಲಗಿಸಿ ಪ್ರತಿಭಟಿಸಿದ ಗ್ರಾಮಸ್ಥರು

    ಕಾಡಾನೆ ದಾಳಿಯಿಂದ ರೈತನ ಕಾಲು ಮುರಿತ – ನಡುರಸ್ತೆಯಲ್ಲೇ ಮಲಗಿಸಿ ಪ್ರತಿಭಟಿಸಿದ ಗ್ರಾಮಸ್ಥರು

    – ಗ್ರಾಮಸ್ಥರ ಮನವೊಲಿಸಿ ಆಸ್ಪತ್ರೆಗೆ ದಾಖಲಿಸಿದ ಅಧಿಕಾರಿಗಳು

    ರಾಮನಗರ: ಕನಕಪುರದಲ್ಲಿ (Kanakapura) ಕಾಡಾನೆ  (Elephant) ದಾಳಿಯಿಂದ ರೈತರೊಬ್ಬರ ಕಾಲು ಮುರಿದಿದ್ದು, ಸಿಟ್ಟಿಗೆದ್ದ ಗ್ರಾಮಸ್ಥರು ಗಾಯಾಳುವನ್ನು ನಡುರಸ್ತೆಯಲ್ಲೇ ಮಲಗಿಸಿ ಪ್ರತಿಭಟಿಸಿದ್ದಾರೆ.

    ನಾರಾಯಣಪುರ ಗ್ರಾಮದಲ್ಲಿ ಜಮೀನಿಗೆ ತೆರಳಿದ್ದ ರೈತ ಶ್ರೀನಿವಾಸ್ (45) ಮೇಲೆ ಕಾಡಾನೆ ದಾಳಿ ನಡೆಸಿದೆ. ಇದರಿಂದ ರೈತನ ಕಾಲು ಮುರಿದಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಗಾಯಾಳುವನ್ನು ರಸ್ತೆಯಲ್ಲೇ ಮಲಗಿಸಿ ಅರಣ್ಯ ಅಧಿಕಾರಿಗಳ (Forest Department) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಳಿಕ ಕೃಷಿಯಲ್ಲಿ ತೊಡಗಿಕೊಳ್ತೀನಿ: ಅಮಿತ್ ಶಾ‌

    ಹಲವು ಬಾರಿ ದೂರು ನೀಡಲಾಗಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಗ್ರಾಮಸ್ಥರ ಮನವೊಲಿಸಿ ಗಾಯಾಳುವನ್ನ ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 5 ವರ್ಷ ಸಿದ್ದರಾಮಯ್ಯನವರೇ ಸಿಎಂ – ಯತೀಂದ್ರ ಬ್ಯಾಟಿಂಗ್‌

  • 10 ಗಂಟೆಗಳಲ್ಲಿ ಜೋಡೆತ್ತುಗಳಿಂದ ಬರೋಬ್ಬರಿ 20 ಎಕ್ರೆ ಈರುಳ್ಳಿ ಬಿತ್ತನೆ – ಬಾಗಲಕೋಟೆ ರೈತನ ಸಾಧನೆ

    10 ಗಂಟೆಗಳಲ್ಲಿ ಜೋಡೆತ್ತುಗಳಿಂದ ಬರೋಬ್ಬರಿ 20 ಎಕ್ರೆ ಈರುಳ್ಳಿ ಬಿತ್ತನೆ – ಬಾಗಲಕೋಟೆ ರೈತನ ಸಾಧನೆ

    ಬಾಗಲಕೋಟೆ: ಬೆನಕಟ್ಟಿ ಗ್ರಾಮದಲ್ಲಿ ಜೋಡೆತ್ತುಗಳೆರಡು 10 ಗಂಟೆಗಳಲ್ಲಿ ಬರೋಬ್ಬರಿ 20 ಎಕರೆ ಈರುಳ್ಳಿ (Onion) ಬಿತ್ತನೆ‌ ಮಾಡಿ ವಿಶಿಷ್ಟ ಸಾಧನೆ‌ ಮಾಡಿವೆ.

    ಅಶೋಕ್ ಮೆಳ್ಳಿ ಅವರು ಒಂದೇ ದಿನದಲ್ಲಿ 20 ಎಕ್ರೆ ಬಿತ್ತನೆ ಮಾಡುವ ಗುರಿ ಹೊಂದಿದ್ದರು. ಅದರಂತೆ ಮಂಗಳವಾರ ಬೆಳಗ್ಗೆ 7 ಗಂಟೆಗೆ ತಮ್ಮ ಎತ್ತುಗಳಿಂದ ಬೆನಕಟ್ಟಿ ಗ್ರಾಮದ ಹೊರವಲಯದಲ್ಲಿರುವ 20 ಎಕ್ರೆ ಹೊಲದಲ್ಲಿ ಸಂಪೂರ್ಣವಾಗಿ ಈರುಳ್ಳಿ ಬಿತ್ತನೆ‌ ಮಾಡಿ ಸಾಹಸ ಮರೆದಿದ್ದಾರೆ. ಅಶೋಕ್ ಮೆಳ್ಳಿ ಅವರ ಈ ಸಾಧನೆಗೆ ಗ್ರಾಮದ ರೈತ ಸಮೂಹ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಸಿಎಂ, ಡಿಸಿಎಂ ಹೆಸ್ರಲ್ಲಿ ಕೋಟಿ ಕೋಟಿ ವಂಚನೆ 20ಕ್ಕೂ ಹೆಚ್ಚು ಮಂದಿಗೆ ಪಂಗನಾಮ ಹಾಕಿದ್ದ ಮಹಿಳೆ ಅರೆಸ್ಟ್‌

    ಕಿಲಾರಿ ತಳಿಯ (Khillari Cattle) ಈ ಎತ್ತುಗಳ ನಡಿಗೆಯಲ್ಲಿನ ವೇಗ, ಬಿತ್ತನೆ ಜಾಣ್ಮೆಯನ್ನು ನೋಡಿ 3 ತಿಂಗಳ ಹಿಂದೆ ಸಂಗಾಪುರ ಗ್ರಾಮದಿಂದ 2.20 ಲಕ್ಷ ರೂ. ನೀಡಿ‌ ಖರೀದಿಸಿದ್ದರು. ಮಂಗಳವಾರ ಬೆಳಗ್ಗೆ 7 ಗಂಟೆಗೆ ಬಿತ್ತನೆ ಆರಂಭಿಸಿದ್ದರು. ಆದರೆ ಮಧ್ಯಾಹ್ನ 1 ಗಂಟೆಗೆ ಮಳೆ ಬಂದ ಕಾರಣ ಮತ್ತೆ ಬಿಡುವು ಮಾಡಿಕೊಂಡು 3 ಗಂಟೆಗೆ ಬಿತ್ತನೆ ಆರಂಭಿಸಿ ಸಾಯಂಕಾಲ 7 ಗಂಟೆಯ ಹೊತ್ತಿಗೆ ಇಡೀ 20 ಎಕ್ರೆ ಹೊಲದಲ್ಲಿ ಈರುಳ್ಳಿ ಬಿತ್ತನೆ ಮಾಡಿ ವಿಶಿಷ್ಟ ಸಾಹಸ ಮೆರೆದಿದ್ದಾರೆ. ಇದನ್ನೂ ಓದಿ: ಮೂವರು ಶಂಕಿತ ಉಗ್ರರ ಬಂಧನ ಕೇಸ್‌ – ಬೆಂಗ್ಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ ಮಾಡಿದ್ದ ಉಗ್ರ ನಾಸೀರ್

    ಅಶೋಕ್ ಮೆಳ್ಳಿ ಈ ಹಿಂದೆ ಎತ್ತುಗಳಿಗೆ ಜತ್ತಿಗೆ (ಕೊರಳು ಕುಣಿಕೆ) ಕಟ್ಟದೇ 20 ಎಕರೆ ಬಿತ್ತನೆ‌ ಮಾಡಿದ್ದರು. ಈಗ ಮತ್ತೆ ತಮ್ಮ ಹೊಸದಾಗಿ ಖರೀದಿಸಿದ ಎತ್ತುಗಳಿಂದ ಈರುಳ್ಳಿ ಬಿತ್ತನೆ‌ ಮಾಡಿ ಸೈ ಎನಿಸಿಕೊಂಡಿದ್ದಾರೆ.

    ರೈತ ಅಶೋಕ್ ಅವರು ಭವಿಷ್ಯದಲ್ಲಿ 30 ರಿಂದ 36 ಎಕ್ರೆ ವಿಸ್ತೀರ್ಣದ ಹೊಲದಲ್ಲಿ ಜೋಳ ಆಥವಾ ಕಡಲೆ ಬಿತ್ತನೆ ಮಾಡುವ ಕನಸು ಕಂಡಿದ್ದಾರೆ.

  • 60 ವರ್ಷದಿಂದ ಉಳುಮೆ ಮಾಡ್ತಿದ್ದ ರೈತನಿಗೆ ಶಾಕ್ – ತಹಶೀಲ್ದಾರ್ ಸಹಿ ನಕಲಿಸಿ, 8 ಎಕರೆ ಬೇರೆಯವ್ರ ಹೆಸರಿಗೆ ವರ್ಗ

    60 ವರ್ಷದಿಂದ ಉಳುಮೆ ಮಾಡ್ತಿದ್ದ ರೈತನಿಗೆ ಶಾಕ್ – ತಹಶೀಲ್ದಾರ್ ಸಹಿ ನಕಲಿಸಿ, 8 ಎಕರೆ ಬೇರೆಯವ್ರ ಹೆಸರಿಗೆ ವರ್ಗ

    ಬೀದರ್: ಲಕ್ಷಾಂತರ ರೂ. ಹಣ ತೆಗೆದುಕೊಂಡು ತಹಶೀಲ್ದಾರ್ ಡಿಜಿಟಲ್ ಸಹಿಯನ್ನು ನಕಲು ಮಾಡಿ, 8 ಎಕರೆ ಭೂಮಿಯನ್ನು ಬೇರೆಯವರ ಹೆಸರಿಗೆ ಬದಲಾಯಿಸಿ 60 ವರ್ಷದಿಂದ ಉಳುಮೆ ಮಾಡ್ತಿದ್ದ ರೈತನಿಗೆ ವಂಚಿಸಿದ್ದಾರೆ.

    ಹೌದು, ಗಡಿಜಿಲ್ಲೆ ಬೀದರ್‌ನಲ್ಲಿ (Bidar) ದಂಡಾಧಿಕಾರಿಗಳ ಡಿಜಿಟಿಲ್ ಸಹಿಯನ್ನೇ ನಕಲಿ ಮಾಡಿ 8 ಎಕರೆ ಜಮೀನನ್ನು ಬೇರೆಯವರ ಹೆಸರಿಗೆ ಮಾಡಿದ ತಹಶೀಲ್ದಾರ್ ಕಚೇರಿಯ ಕರ್ಮಕಾಂಡ ಬಯಲಾಗಿದೆ. ತಹಶೀಲ್ದಾರ್ ಡಿ.ಜಿ ಮಹತ್‌ರವರ ಡಿಜಿಟಲ್ ಸಹಿಯನ್ನು ನಕಲಿ ಮಾಡಿ, ಬರೋಬ್ಬರಿ 8.13 ಎಕರೆ ಜಮೀನನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ.ಇದನ್ನೂ ಓದಿ: ಹೃದಯಾಘಾತವಲ್ಲ ಟ್ರ್ಯಾಕ್ಟರ್ ಅಪಘಾತದಲ್ಲಿ ಹಾಸನದ ಯೋಧ ಸಾವು

    ಬೀದರ್ ತಾಲೂಕಿನ ನಂದಗಾವ್ ಗ್ರಾಮದ ಜಗನಾಥ್ ತಂದೆ ಹನುಮಂತರಾವ್ ಎಂಬುವವರ 24/16 ಸರ್ವೇ ನಂಬರ್‌ನ ಜಮೀನಿನ ಪಹಣಿಯನ್ನು ಏಕಾಏಕಿ ಬದಲಾವಣೆ ಮಾಡಲಾಗಿದೆ. 60 ವರ್ಷಗಳಿಂದ ಜಗನಾಥ್ ಹೆಸರಿನಲ್ಲಿ 8 ಎಕರೆಯ ಪಹಣಿ ಇದೆ. ಇದೇ ತಿಂಗಳ 12ರಂದು ತಹಶೀಲ್ದಾರ್‌ರವರ ಡಿಜಿಟಲ್ ಸಹಿ ನಕಲಿ ಮಾಡಿ ಮಹ್ಮದ್ ಇಸ್ಮಾಯಿಲ್ ಎಂಬುವವರಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಭೂ ದಾಖಲೆಗಳ ವಿಭಾಗದಲ್ಲಿ ಕೆಲಸ ಮಾಡುವ ಅಂಬರೀಶ್ ಮತ್ತು ಸೃಜನ್ ಎಂಬ ಸರ್ಕಾರಿ ನೌಕರರು ಲಕ್ಷಾಂತರ ರೂ. ಹಣ ಪಡೆದು ನಕಲಿ ಸಹಿ ಮಾಡಿ, ಪಹಣಿಯನ್ನು ಬದಲಾವಣೆ ಮಾಡಿದ್ದಾರೆ. ವಿಷಯ ತಿಳಿದ ರೈತ, 60 ವರ್ಷಗಳಿಂದ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬಂದಿದ್ದೇವೆ. ತಹಶೀಲ್ದಾರ್ ಸಹಿ ನಕಲು ಮಾಡಿ ವಂಚನೆ ಮಾಡಿದ್ದಾರೆ. ಮೊದಲಿನಂತೆ ನಮ್ಮ ಹೆಸರಿಗೆ ಪಹಣಿ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.

    ಈಗಾಗಲೇ ನಕಲಿ ಸಹಿ ಮಾಡಿದ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಜೊತೆಗೆ ಈ ಇಬ್ಬರು ಸೇರಿದಂತೆ ಇಸ್ಮಾಯಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ ಪಹಣಿ ಮಾತ್ರ ಬದಲಾಗದೇ ಹಾಗೆಯೇ ಇದೆ. ಇದರಿಂದ ರೈತ ಜಗನಾಥ್ ಕಚೇರಿಗಳಿಗೆ ಅಲೆದಾಡುತ್ತಿದ್ದು, ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಮೇಲಾಧಿಕಾರಿಗಳನ್ನು ಕೇಳಿ ಮಾಡುತ್ತೇವೆ ಎಂದು ಜಾರಿಕೊಳ್ಳುತ್ತಿದ್ದಾರೆ.

    ನಾಮಕಾವಸ್ತೆಗೆ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಿದ್ದು, ಇನ್ನಾದರೂ ನಕಲಿ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತನ ಪಹಣಿಯನ್ನು ಮೊದಲಿನಂತೆ ಬದಲಾಯಿಸ್ತಾರಾ ಕಾದು ನೋಡಬೇಕಿದೆ.ಇದನ್ನೂ ಓದಿ: ಲಲಿತ್ ಮೋದಿಗೆ ಶಾಕ್ – ಬಿಸಿಸಿಐನಿಂದ ಇಡಿ ದಂಡ ಪಾವತಿಸಲು ಕೋರಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ