Tag: Farmani Naaz

  • ‘ಹರ ಹರ ಶಂಭು’ ಗಾಯಕಿಯ ಸಹೋದರನ ಬರ್ಬರ ಹತ್ಯೆ

    ‘ಹರ ಹರ ಶಂಭು’ ಗಾಯಕಿಯ ಸಹೋದರನ ಬರ್ಬರ ಹತ್ಯೆ

    ಲಕ್ನೋ: ಖ್ಯಾತ ಯೂಟ್ಯೂಬ್ ಗಾಯಕಿ (Youtube Singer) ಫರ್ಮಾನಿ ನಾಜ್ (Farmani Naaz) ಅವರ ಸಹೋದರನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

    ಈ ಘಟನೆ ಉತ್ತರ ಪ್ರದೇಶದ (Uttarpradesh) ಮುಜಾಫರ್ ನಗರ ಜಿಲ್ಲೆಯ ಮೊಹಮ್ಮದ್‍ಪುರ ಮಾಫಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಖುರ್ಷಿದ್(18) ಎಂದು ಗುರುತಿಸಲಾಗಿದೆ. ಖುರ್ಷಿದ್ (Khurshid) ಎಂದಿನಂತೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

    ಪೊಲೀಸರ ವರದಿ ಪ್ರಕಾರ, ಸಾಲ್ವಾ ರಸ್ತೆ ಬಳಿ ಕೆಲವು ಬೈಕ್ ಸವಾರರು ಖುರ್ಷಿದ್‍ನನ್ನು ಸುತ್ತುವರಿದು ಚಾಕು ತೋರಿಸಿ ಹೊಂಚು ಹಾಕಿದ್ದರು. ಈ ವೇಳೆ ಖುರ್ಷಿದ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ ಗ್ಯಾಂಗ್ ಖುರ್ಷಿದ್‍ಗೆ ಚಾಕುವಿನಿಂದ ಇರಿದು ಸ್ಥಳದಿಂದ ಕಾಲ್ಕಿತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಖುರ್ಷಿದ್ ಮೃತಪಟ್ಟಿದ್ದಾರೆ ಎಂದು ವೈದರು ತಿಳಿಸಿದ್ದಾರೆ. ಈ ಸಂಬಂಧ ರತನಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಕಾಫಿನಾಡಿನ ಸಹನಾ ಮೊಸೆಸ್- ನಾಲ್ವರಿಗೆ ಪುನರ್ಜನ್ಮ

    ‘ಹರ್ ಹರ್ ಶಂಭು’ ಗೀತೆಗಾಗಿ 2022 ರಲ್ಲಿ ಶೀಘ್ರವಾಗಿ ಫರ್ಮಾನಿ ನಾಜ್ ಖ್ಯಾತಿಯನ್ನು ಗಳಿಸಿದ್ದಾರೆ. ಫರ್ಮನಿ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅತೀ ಹೆಚ್ಚು ಜನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾಜ್ ಅವರು ಹಾಡಿನ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದಂತೆ ವಿವಾದದಲ್ಲಿ ಸಿಲುಕಿಕೊಂಡರು ಮತ್ತು ಜಿತು ಶರ್ಮಾ ನಂತರ ಹಾಡನ್ನು ತನ್ನ ಪುಟದಿಂದ ಅಳಿಸಬೇಕಾಯಿತು, ಇನ್ನೊಬ್ಬ ಗಾಯಕ ಈ ಹಾಡನ್ನು ತನ್ನದು ಎಂದು ಹೇಳಿಕೊಂಡರು ಮತ್ತು ನಾಜ್ ವಿಷಯವನ್ನು ಕದ್ದಿದ್ದಾರೆ ಎಂದು ಆರೋಪಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರ್ ಹರ್ ಶಂಭು ಹಾಡಿಗೆ ಅಪಸ್ವರ – ಮುಸ್ಲಿಮಳಾಗಿ ಆ ಹಾಡನ್ನು ಹಾಡಬಾರದು ಎಂದ ದಿಯೋಬಂದ್

    ಹರ್ ಹರ್ ಶಂಭು ಹಾಡಿಗೆ ಅಪಸ್ವರ – ಮುಸ್ಲಿಮಳಾಗಿ ಆ ಹಾಡನ್ನು ಹಾಡಬಾರದು ಎಂದ ದಿಯೋಬಂದ್

    ಲಕ್ನೋ: ಇತ್ತೀಚೆಗೆ ಯೂಟ್ಯೂಬ್, ಇನ್‌ಸ್ಟಾಗ್ರಾಮ್ ರೀಲ್ಸ್ಗಳಲ್ಲಿ ಕೇಳಿ ಬರುತ್ತಿರುವ ವೈರಲ್ ಶಿವನ ಸ್ತುತಿಯ ಹಾಡು ಹರ್ ಹರ್ ಶಂಭು ಎಲ್ಲರ ಮನ ಗೆದ್ದಿದೆ. ಆದರೆ ಹಾಡು ಹಾಡಿದವರು ಯಾರು ಎಂಬ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ವೈರಲ್ ಆದ ಬೆನ್ನಲ್ಲೇ ಹಾಡನ್ನು ಹಾಡಿದ ಗಾಯಕಿಗೆ ಮುಸ್ಲಿಮರಿಂದ ಅಪಸ್ವರ ವ್ಯಕ್ತವಾಗಿದೆ.

    ಇತ್ತೀಚಿನ ವೈರಲ್ ಹಾಡು ಹರ್ ಹರ್ ಶಂಭು ಹಾಡಿದ ಉತ್ತರ ಪ್ರದೇಶ ಮೂಲದ ಮುಸ್ಲಿಂ ಮಹಿಳೆ ಫರ್ಮಾನಿ ನಾಜ್‌ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರು ಜುಲೈ 24 ರಂದು ಯೂಟ್ಯೂಬ್‌ಗೆ ಪೋಸ್ಟ್ ಮಾಡಿದ ಹಾಡು ಇದುವರೆಗೆ 7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಅವರ ಸಾಮಾಜಿಕ ಮಾಧ್ಯಮ ಖಾತೆಗಳ ಅನುಯಾಯಿಗಳು ಹೆಚ್ಚಾಗುತ್ತಿರುವುದರೊಂದಿಗೆ ಬೆಂಬಲ ವ್ಯಕ್ತವಾಗಿದೆ.

    ಫರ್ಮಾನಿ ನಾಜ್‌ಗೆ ಹಿಂದೂಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದರೂ ಮುಸ್ಲಿಮರಿಂದ ವಿರೋಧ ವ್ಯಕ್ತವಾಗುತ್ತಿದೆ. ದಿಯೋಬಂದ್ ಮೂಲದ ಧರ್ಮಗುರು ಮುಫ್ತಿ ಅಸದ್ ಖಾಸ್ಮಿ ಷರಿಯಾ ಕಾನೂನಿನ ಅಡಿಯಲ್ಲಿ ಹಿಂದೂ ದೇವತೆಯ ಹಾಡನ್ನು ಹಾಡಲು ಮುಸ್ಲಿಮರಿಗೆ ಅನುಮತಿಯಿಲ್ಲ ಎಂದು ಹೇಳಿದ್ದಾರೆ. ಆಕೆ ತನ್ನನ್ನು ಮುಸ್ಲಿಂ ಎಂದು ಭಾವಿಸುತ್ತಾಳಾದರೆ ಹಿಂದೂ ಹಾಡನ್ನು ಹಾಡಬಾರದು ಎಂದಿದ್ದಾರೆ.

    ಫರ್ಮಾನಿ ನಾಜ್ ಯಾರು?
    ಮುಜಾಫರ್‌ನಗರದ ಪ್ರಸಿದ್ಧ ಗಾಯಕಿ ಫರ್ಮಾನಿ ನಾಜ್ ತಮ್ಮ ಯೂಟ್ಯೂಬ್ ಖಾತೆಯಲ್ಲಿ 38 ಲಕ್ಷಕ್ಕೂ ಅಧಿಕ ಫಾಲೊವರ್‌ಗಳನ್ನು ಹೊಂದಿದ್ದಾರೆ. ಅವರ ಪ್ರಸಿದ್ಧಿ ಇಷ್ಟಕ್ಕೇ ಸೀಮಿತವಾಗದೇ ಪ್ರಸಿದ್ಧ ರಿಯಾಲಿಟಿ ಶೋ ಇಂಡಿಯನ್ ಐಡಲ್ ಸೀಸನ್ 12 ರಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ನೋವಿಗೆ ರಾಜೀನಾಮೆಯೇ ಪರಿಹಾರವಲ್ಲ: ಈಶ್ವರಪ್ಪ

    2017ರಲ್ಲಿ ಫರ್ಮಾನಿ ನಾಜ್ ಮದುವೆಯಾಗಿದ್ದರು. ಒಂದು ಮಗುವೂ ಆಕೆಗಿದ್ದು, ಅದು ಅನಾರೋಗ್ಯಕ್ಕೆ ತುತ್ತಾಗಿತ್ತು. ಇರಿಂದ ಆಕೆಯ ಪತಿ ಮಗುವಿನ ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಿಲ್ಲವೆಂದು ಆಕೆಯನ್ನು ಬಿಟ್ಟು ಹೋಗಿದ್ದ. ಬಳಿಕ ಆಕೆ ತನ್ನ ತಾಯಿಯ ಮನೆಯಲ್ಲಿಯೇ ವಾಸಿಸಲು ಪ್ರಾರಂಭಿಸಿದರು.

    ಇದಾದ ಬಳಿಕ ಗಾಯನವನ್ನು ಪ್ರಾರಂಭಿಸಿದ ಫರ್ಮಾನಿ ನಾಜ್ ತಮ್ಮ ಹಳ್ಳಿಯ ಯುವಕರೊಂದಿಗೆ ಸೇರಿ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಬಳಿಕ ಇಂಡಿಯನ್ ಐಡಲ್‌ನಲ್ಲೂ ಭಾಗವಹಿಸಲು ನಿರ್ಧರಿಸಿದರು. ಅವರ ಧ್ವನಿ ತೀರ್ಪುಗಾರರ ಹಾಗೂ ಅಭಿಮಾನಿಗಳ ಮೆಚ್ಚುಗೆಗೂ ಕಾರಣವಾಯಿತು.

    ಫರ್ಮಾನಿ ನಾಜ್ ಇತ್ತೀಚೆಗೆ ಹಾಡಿದ ಹರ್ ಹರ್ ಶಂಭು ಕಲಾವಿದರಿಗೆ ಯಾವುದೇ ಧರ್ಮವಿಲ್ಲ ಎಂಬ ಸಂದೇಶವನ್ನು ಸಾರುತ್ತದೆ ಎಂದು ಫರ್ಮಾನಿ ನಾಜ್ ಹೇಳಿದ್ದಾರೆ. ಸಲೀಮ್, ಮೊಹಮ್ಮದ್, ರಫಿಯಂತಹವರೂ ಕೂಡಾ ಭಜನೆ ಹಾಗೂ ಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಧರ್ಮ ಹಾಗೂ ಸಂಗೀತನ್ನು ಎಂದಿಗೂ ಜೋಡಿಸಬೇಡಿ ಎಂದು ಫರ್ಮಾನಿ ನಾಜ್ ವಿನಂತಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಾಲ್ವರು ಸಂಸದರ ಅಮಾನತು ಹಿಂಪಡೆದ ಸ್ಪೀಕರ್

    ಹರ್ ಹರ್ ಶಂಭು ಹಾಡು ವೈರಲ್ ಆಗುತ್ತಿದ್ದಂತೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ಸಂಜೀವ್ ಬಲ್ಯಾನ್ ಫರ್ಮಾನಿ ನಾಜ್ ಅವರನ್ನು ಹೊಗಳಿದ್ದು, ಆಕೆಯ ಮಗುವಿಗೆ ಚಿಕಿತ್ಸೆ ಕೊಡಿಸಲು ಸಹಾಯ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]