Tag: farm pond

  • ಹಾಸನ | ಕೃಷಿ ಹೊಂಡಕ್ಕೆ ಬಿದ್ದ ಆಟಿಕೆ ರೈಲು ತರಲು ಇಳಿದ ಇಬ್ಬರು ಬಾಲಕರು ದುರ್ಮರಣ

    ಹಾಸನ | ಕೃಷಿ ಹೊಂಡಕ್ಕೆ ಬಿದ್ದ ಆಟಿಕೆ ರೈಲು ತರಲು ಇಳಿದ ಇಬ್ಬರು ಬಾಲಕರು ದುರ್ಮರಣ

    ಹಾಸನ: ಕೃಷಿ ಹೊಂಡಕ್ಕೆ (Farm Pond) ಬಿದ್ದ ಆಟಿಕೆ ರೈಲನ್ನು ತರಲು ನೀರಿಗೆ ಇಳಿದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಸಕಲೇಶಪುರ (Sakleshpura) ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕರನ್ನು ಗ್ರಾಮದ ಕೃಷ್ಣ ಎಂಬವರ ಪುತ್ರ ಪ್ರಣಯ್ (7) ಹಾಗೂ ಪ್ರಶಾಂತ್ ಎಂಬವರ ಪುತ್ರ ನಿಶಾಂತ್ ಎಂದು ಗುರುತಿಸಲಾಗಿದೆ. ಪ್ರಣಯ್ ಎರಡನೇ ತರಗತಿ ಓದುತ್ತಿದ್ದು, ನಿಶಾಂತ್ ಅಂಗನವಾಡಿಗೆ ಹೋಗುತ್ತಿದ್ದ. ಈ ಇಬ್ಬರೂ ಶಾಲೆಗೆ ರಜೆ ಇದ್ದ ಕಾರಣ ಕೂಲಿಗೆ ಹೋಗಿದ್ದ ಪೋಷಕರ ಜೊತೆ ಕಾಫಿ ತೋಟಕ್ಕೆ ಹೋಗಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು

    ಕಾಫಿ ತೋಟದ ಕೃಷಿ ಹೊಂಡದ ಬಳಿ ಆಟ ಆಡುತ್ತಾ, ಆಟಿಕೆ ರೈಲು ನೀರಿಗೆ ಬಿದ್ದಿದೆ. ಅದನ್ನು ಎತ್ತಿಕೊಳ್ಳಲು ಇಬ್ಬರು ನೀರಿಗಿಳಿದಿದ್ದು, ಮುಳುಗಿ ಸಾವನ್ನಪ್ಪಿದ್ದಾರೆ. ಬಹಳ ಸಮಯದವರೆಗೂ ಮಕ್ಕಳು ಕಾಣಿಸದೇ ಇದ್ದಾಗ, ಪೋಷಕರು ಹುಡುಕಾಟ ನಡೆಸಿದ್ದಾರೆ. ಆಗ ಕೃಷಿ ಹೊಂಡದ ಬಳಿ ಚಪ್ಪಲಿಗಳು ಪತ್ತೆಯಾಗಿವೆ. ಕೃಷಿ ಹೊಂಡದಲ್ಲಿ ಹುಡುಕಾಟ ನಡೆಸಿದಾಗ ಮಕ್ಕಳ ಶವ ಪತ್ತೆಯಾಗಿವೆ.

    ಶವಗಳನ್ನು ಕೃಷಿ ಹೊಂಡದಿಂದ ಹೊರ ತೆಗೆದು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ರವಾಸಲಾಗಿದೆ. ಆಸ್ಪತ್ರೆ ಬಳಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Koalr | ಸೇತುವೆ ಮೇಲಿಂದ ಕಾರು ಬಿದ್ದು ಓರ್ವ ಸಾವು, ನಾಲ್ವರಿಗೆ ಗಾಯ

  • ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಮಕ್ಕಳು ಸಾವು

    ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಮಕ್ಕಳು ಸಾವು

    ವಿಜಯಪುರ: ಕೃಷಿ ಹೊಂಡದಲ್ಲಿ (Farm Pond) ಮುಳುಗಿ ತಾಯಿ ಹಾಗೂ ಇಬ್ಬರು ಮಕ್ಕಳ ಸಾವನ್ನಪ್ಪಿದ ಘಟನೆ ದೇವರಹಿಪ್ಪರಗಿ (Devara Hipparagi) ತಾಲೂಕಿನ ಹರನಾಳ ಗ್ರಾಮದಲ್ಲಿ ಘಟನೆ ನಡೆದಿದೆ.

    ಗೀತಾ ಬಡಗಿ (28) ಇಬ್ಬರು ಗಂಡು ಮಕ್ಕಳಾದ ಶ್ರವಣ (6) ಶರಣ (4) ಸಾವನ್ನಪ್ಪಿದ್ದಾರೆ. ಮೃತ ಗೀತಾ ತಂದೆ ರಾಮಪ್ಪ ನಾಯ್ಕೋಡಿ ಅವರ ಜಮೀನಿನಲ್ಲಿದ್ದ ಕೃಷಿ ಹೊಂಡದ ಬಳಿ ಮಕ್ಕಳೊಂದಿಗೆ ತೆರಳಿದ್ದಾಗ ಮಕ್ಕಳೊಂದಿಗೆ ಕಾಲು ಜಾರಿ ಗೀತಾ ಬಿದ್ದಿದ್ದಾರೆ. ಆಗ ಮಕ್ಕಳ ಗೀತಾ ಜೊತೆ ಹೊಂಡಕ್ಕೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ.  ಇದನ್ನೂ ಓದಿ: ಹೊಸ ವರ್ಷದಂದೇ ಮನೆಯಲ್ಲೇ ನೇಣು ಬಿಗಿದು ಯುವತಿ ಆತ್ಮಹತ್ಯೆ

     

    ಗಂಡನ ಜೊತೆಗೆ ಜಗಳವಾಡಿ ತವರಿಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸದ್ಯ ಮೂವರ ಶವಗಳನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಪಾತ್ರೆ ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಮಕ್ಕಳಿಬ್ಬರು ಸಾವು!

    ಪಾತ್ರೆ ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಮಕ್ಕಳಿಬ್ಬರು ಸಾವು!

    ಆನೇಕಲ್: ಪಾತ್ರೆ ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಟಿ.ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

    ಶ್ರಾವಣಿ (12), ಅರ್ಚನಾ (9) ಮೃತ ಮಕ್ಕಳು.

    ಇಬ್ಬರು ಹೆಣ್ಣುಮಕ್ಕಳ ಪೋಷಕರು ಬಡ ಕುಟುಂಬದವರಾಗಿದ್ದು, ಗ್ರಾಮದ ಹೊರಭಾಗದಲ್ಲಿ ಮನೆ ಕಟ್ಟಿಕೊಂಡು ಕೃಷಿಯ ಜತೆಗೆ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಮಂಗಳವಾರ ಮಕ್ಕಳನ್ನು ಮನೆಯಲ್ಲೇ ಬಿಟ್ಟು ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದರು. ಮನೆಗೆ ಹೊಂದಿಕೊಂಡಿರುವ ಕೃಷಿ ಹೊಂಡದ ಬಳಿ ಪಾತ್ರೆಗಳನ್ನು ತೊಳೆಯಲೆಂದು ಹೋಗಿದ್ದಾಗ ಅರ್ಚನಾ ಹೊಂಡದಲ್ಲಿ ಬಿದ್ದಿದ್ದಾಳೆ. ಈಕೆಯನ್ನು ರಕ್ಷಣೆ ಮಾಡಲು ಹೋಗಿ ಅಕ್ಕ ಶ್ರಾವಣಿ ಕೂಡ ಹೊಂಡದಲ್ಲಿ ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ. ಇದನ್ನೂ ಓದಿ: ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೀನಿ, ಪುನೀತ್‍ಗೆ ಕೆಟ್ಟ ಹೆಸ್ರು ತರಬೇಡಿ: ರಾಘವೇಂದ್ರ ರಾಜ್ ಕುಮಾರ್

    ಈ ಮಕ್ಕಳ ಚಿಕ್ಕಮ್ಮ ಹೊಲದಲ್ಲಿ ಮೇವಿಗಾಗಿ ಬಂದು ಮನೆಯಲ್ಲಿ ನೋಡಿದಾಗ ಮಕ್ಕಳು ಕಾಣದ ಬಗ್ಗೆ ಗಾಬರಿಗೊಂಡು ಹುಡುಕಾಟ ನಡೆಸಿದ್ದಾರೆ. ಕೂಲಿಗೆ ಹೋಗಿದ್ದ ತಾಯಿಗೆ ಕರೆ ಮಾಡಿ ಮಕ್ಕಳು ಮನೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಶಾಲೆಗೆ ಹೋಗದೆ ಮನೆಯಲ್ಲಿದ್ದ ಮಕ್ಕಳಿಗಾಗಿ ಹುಡುಕಾಟ ನಡೆಸಿದಾಗ ಕೊನೆಗೆ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರು ವಿವಿಯಲ್ಲಿ ಹೊಸ 30 ಕೋರ್ಸ್ ಆರಂಭ

    ಕೃಷಿ ಹೊಂಡಗಳನ್ನು ನಿರ್ಮಿಸುವಾಗ ಹೊಂಡದ ಸುತ್ತ ರಕ್ಷಣೆ ಬೇಲಿಯನ್ನು ನಿರ್ಮಿಸಬೇಕು ಎಂಬ ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ. ಕೃಷಿ ಹೊಂಡವನ್ನು ತುಂಬಾ ಆಳಕ್ಕೆ ತೊಡುವ ಕಾರಣ ಚಿಕ್ಕ ವಯಸ್ಸಿನ ಮಕ್ಕಳು ಬಿದ್ದರೆ ಮೇಲೆ ಬರುವುದು ಕಷ್ಟ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ದುರಂತ ಸಂಭವಿಸಿದೆ. ಕೂಡಲೇ ಹೊಂಡದ ಒಂದು ಬದಿಯಲ್ಲಿ ರಕ್ಷಣೆಗಾಗಿ ಒಂದು ಹಗ್ಗ ಅಥವಾ ಗಾಳಿ ತುಂಬಿದ ರಬ್ಬರ ಟ್ಯೂಬ್ ವ್ಯವಸ್ಥೆ ಕಲ್ಪಿಸಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮತ್ತೊಂದು ಬಲಿ – ವಿದ್ಯಾರ್ಥಿನಿ ಸಾವು

    ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮತ್ತೊಂದು ಬಲಿ – ವಿದ್ಯಾರ್ಥಿನಿ ಸಾವು

    ಕೋಲಾರ: ಇತ್ತೀಚೆಗಷ್ಟೇ ಯುವಕನೊಬ್ಬ ಸ್ಟಂಟ್ ಮಾಡಲು ಹೋಗಿ ಕುತ್ತಿಗೆ ಮೂಳೆ ಮುರಿದುಕೊಂಡು ಮೃತಪಟ್ಟಿದ್ದನು. ಇದೀಗ ವಿದ್ಯಾರ್ಥಿನಿಯೊಬ್ಬಳು ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ಮೃತಪಟ್ಟಿರುವ ಘಟನೆ ಕೋಲಾರ ತಾಲೂಕಿನ ವಡಗೇರಿ ಗ್ರಾಮದಲ್ಲಿ ನಡೆದಿದೆ.

    ಮಾಲಾ ಮೃತ ವಿದ್ಯಾರ್ಥಿನಿ. ಮಾಲಾ ಬಿ.ಎ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೋಲಾರ ಮಹಿಳಾ ಕಾಲೇಜಿನಲ್ಲಿ ಓದುತ್ತಿದ್ದಳು. ಆದರೆ ಶುಕ್ರವಾರ ಸಂಜೆ ಮಾಲಾ, ಕೃಷಿ ಹೊಂಡದ ಬಳಿ ಟಿಕ್‍ಟಾಕ್ ವಿಡಿಯೋ ಮಾಡುವಾಗ ಸಾವನ್ನಪ್ಪಿದ್ದಾಳೆ.

    ಮಾಲಾ ಶುಕ್ರವಾರ ಸಂಜೆ ಹೊಲದ ಬಳಿ ಹೋಗಿ ಅಲ್ಲಿದ್ದ ಕೃಷಿಹೊಂಡದ ಬಳಿ ತನ್ನ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಒಬ್ಬಳೇ ಟಿಕ್‍ಟಾಕ್ ಮಾಡುತ್ತಿದ್ದಳು. ಈ ವೇಳೆ ಮಾಲಾ ಮೊಬೈಲ್ ಸಮೇತ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಆಕೆಯನ್ನು ಕಾಪಾಡಲು ಸಾಧ್ಯವಾಗಿಲ್ಲ.

    ಕೊನೆಗೆ ಹೊಲಕ್ಕೆ ಹೋಗಿ ತುಂಬಾ ಸಮಯವಾಗಿದೆ. ಇನ್ನೂ ಯಾಕೆ ಮಾಲಾ ಮನೆಗೆ ಬಂದಿಲ್ಲ ಎಂದು ಪೋಷಕರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಈಗಾಗಲೇ ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮೊದಲ ಬಲಿಯಾಗಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಕುಮಾರ್ ಮೃತ ಯುವಕ. ಕುಮಾರ್ ಟಿಕ್‍ಟಾಕ್ ವಿಡಿಯೋ ಮಾಡುವಾಗ ಆಯ ತಪ್ಪಿ ತಲೆ ನೆಲಕ್ಕೆ ಬಿದ್ದಿದ್ದನು. ಪರಿಣಾಮ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕುಮಾರ್ ಸಾವನ್ನಪ್ಪಿದ್ದನು. ಆದರೆ ಈ ಬಗ್ಗೆ ಕುಮಾರ್ ಮಾವ ಮಂಜುನಾಥ್ ಅವರು, ಕುಮಾರ್ ಟಿಕ್‍ಟಾಕ್ ಮಾಡಲು ಹೋಗಿ ಸಾವನ್ನಪ್ಪಿಲ್ಲ. ಕುಮಾರ್ ತುಮಕೂರಿನ ರಾಮು ಮೆಲೋಡೀಸ್ ಆರ್ಕೆಸ್ಟ್ರಾದಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದನು. ಬಿಡುವಿನ ವೇಳೆ ಸರ್ಕಾರಿ ಮತ್ತು ಬಡ ಶಾಲೆಗಳಲ್ಲಿ ನೃತ್ಯ ಹೇಳಿಕೊಡುತ್ತಿದ್ದ. ಹೊಸ ಹೊಸ ಸ್ಟಂಟ್‍ಗಳನ್ನು ಕಲಿತರೆ ಸಿನಿಮಾ ಹಾಗೂ ಕಾರ್ಯಕ್ರಮಗಳಿಗೆ ಅವಕಾಶ ಸಿಗುತ್ತವೆ ಎಂದು ತಿಳಿಸಿದ್ದನು ಎಂದು ಪ್ರತಿಕ್ರಿಯಿಸಿದ್ದರು.

  • ಕೃಷಿಹೊಂಡದಲ್ಲಿ ಮಹಿಳೆ, ಬಾಲಕಿಯ ಶವ ಪತ್ತೆ

    ಕೃಷಿಹೊಂಡದಲ್ಲಿ ಮಹಿಳೆ, ಬಾಲಕಿಯ ಶವ ಪತ್ತೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿ ಗ್ರಾಮದ ಬಳಿಯ ಕೃಷಿ ಹೊಂಡದಲ್ಲಿ ಮಹಿಳೆ ಹಾಗೂ ಬಾಲಕಿಯ ಶವಪತ್ತೆಯಾಗಿದೆ.

    ಖಾಸಗಿ ಬೀಜ ಕಂಪನಿ ಮಾನ್ಸೆಂಟೊ ಸೇರಿದ ಕೃಷಿಹೊಂಡದಲ್ಲಿ 25 ವರ್ಷದ ಮಹಿಳೆ ಹಾಗೂ 8 ವರ್ಷದ ಬಾಲಕಿಯ ಅಪರಿಚಿತ ಮೃತದೇಹಗಳ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಗೌರಿಬಿದನೂರು ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರ ಅಥವಾ ಯಾರಾದರೂ ಕೊಲೆ ತಂದೆ ಕೃಷಿಹೊಂಡಕ್ಕೆ ಹಾಕಿದ್ದಾರ ಎನ್ನುವ ನಿಟ್ಟಿನಲ್ಲಿ ತನಿಖೆ ಆರಂಭವಾಗಿದೆ. ಇದುವರೆಗೂ ಮಹಿಳೆ ಮತ್ತು ಬಾಲಕಿಯ ಹೆಸರು, ವಿವರಗಳು ಪತ್ತೆಯಾಗಿಲ್ಲ. ಆದರೆ ಬೆಂಗಳೂರಿನ ಸ್ಯಾಟ್‍ಲೈಟ್ ನಿಂದ ಮೆಜೆಸ್ಟಿಕ್‍ಗೆ ಬಂದಿರುವ ಮಹಿಳೆ ಬಳಿಕ ಮೆಜೆಸ್ಟಿಕ್‍ನಿಂದ ಹಿಂದೂಪುರಕ್ಕೆ ಟಿಕೆಟ್ ತೆಗೆದುಕೊಂಡಿದ್ದಾರೆ. ಆ ಟಿಕೆಟ್ ಹಾಗೂ ಜೊತೆಗೆ ಒಂದು ಫೋಟೋ ಕೃಷಿಹೊಂಡದ ಬಳಿ ಪತ್ತೆಯಾಗಿದೆ.

    ಈ ಘಟನೆ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸರು, ಗ್ರಾಮಸ್ಥರಿಂದ ಯುವಕನಿಗಾಗಿ ಕೃಷಿ ಹೊಂಡದ ನೀರು ಖಾಲಿ

    ಪೊಲೀಸರು, ಗ್ರಾಮಸ್ಥರಿಂದ ಯುವಕನಿಗಾಗಿ ಕೃಷಿ ಹೊಂಡದ ನೀರು ಖಾಲಿ

    ಕೊಪ್ಪಳ: ಕುರಿಕಾಯಲು ತೆರಳಿದ್ದ ಯುವಕ ಕೃಷಿ ಹೊಂಡದಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದು, ನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕನಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಚಿಕ್ಕನಕೊಪ್ಪ ಗ್ರಾಮದ ಹೊರವಲಯದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಇಂದ್ರಪ್ಪ ತಲ್ಲೂರ್(18) ಮೃತ ಯುವಕ. ಇಂದ್ರಪ್ಪ ತಲ್ಲೂರ್, ಯಲಬುರ್ಗಾ ತಾಲೂಕಿನ ಕಲ್ಲೂರ್ ನಿವಾಸಿಯಾಗಿದ್ದು, ಕೃಷಿ ಹೊಂಡದಲ್ಲಿ ಈಜಲು ತೆರಳಿ ನಾಪತ್ತೆಯಾಗಿದ್ದನು.

    ಈ ವಿಷಯ ತಡವಾಗಿ ಬೆಳಕಿಗೆ ಬಂದ ಕಾರಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಯುವಕ ಹೊಂಡದಲ್ಲಿ ನಾಪತ್ತೆಯಾಗಿದ್ದನು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ಶೊಧಕಾರ್ಯ ಆರಂಭಿಸಿದ್ದರು. ಅದು ಯಶಸ್ವಿಯಾಗದ ಕಾರಣ ಕೃಷಿ ಹೊಂಡದಲ್ಲಿರುವ ನೀರನ್ನು ಗ್ರಾಮಸ್ಥರು ಮತ್ತು ಪೊಲೀಸರು  ಹೊರಹಾಕಿ ಶೋಧ ನಡೆಸಿದಾಗ ಇಂದ್ರಪ್ಪ ತಲ್ಲೂರ್ ಶವವಾಗಿ ಪತ್ತೆಯಾಗಿದ್ದಾನೆ.

    ಮಧ್ಯಾಹ್ನದ ವೇಳೆ ಇಂದ್ರಪ್ಪ ತಲ್ಲೂರ್ ಪತ್ತೆಯಾಗಿದ್ದು, ಈಜಲು ಹೋಗಿ ಕೆರೆಯಲ್ಲಿ ಮುಳುಗಿದ್ದ ಇಂದ್ರಪ್ಪ ಶಪ ಪತ್ತೆ ಮಾಡಲು ಕೃಷಿಹೊಂಡದ ನೀರನ್ನು ಪೈಪ್ ಮೂಲಕ ಖಾಲಿ ಮಾಡಿದ್ದರು. ನಂತರ ಕೃಷಿ ಹೊಂಡದ ಅರ್ಧದಷ್ಟು ಮಣ್ಣು ಹೊರತೆಗೆದು ಶವವನ್ನು ಅಗ್ನಿಶಾಮಕ ಸಿಂಬ್ಬಂದಿ ಪತ್ತೆಮಾಡಿದ್ದಾರೆ.

    ಈ ಘಟನೆ ಕುಕನೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇತ್ತ ಕುರಿಗಾಯಿ ಇಂದ್ರಪ್ಪ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕುರಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ದಂಪತಿ

    ಕುರಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ದಂಪತಿ

    ಸಾಂದರ್ಭಿಕ ಚಿತ್ರ

    ಕೋಲಾರ: ಕೃಷಿ ಹೊಂಡಕ್ಕೆ ಬಿದ್ದ ಕುರಿ ರಕ್ಷಿಸಲು ಹೋಗಿ ವೃದ್ಧ ದಂಪತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೈರಕೂರು ಗ್ರಾಮದ ಬಳಿ ಇಂದು ನಡೆದಿದೆ.

    ಬೈರಕೂರು ಗ್ರಾಮದ ಬತ್ಯಪ್ಪ (70) ಹಾಗೂ ವೆಂಕಟಲಕ್ಷ್ಮಮ್ಮ (63) ಮೃತರಾದ ದಂಪತಿ. ಕುರಿ ಮೇಯಿಸಲು ಹೋಗಿದ್ದಾಗ ಘಟನೆ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಘಟನೆಯ ವಿವರ:
    ಬತ್ಯಪ್ಪ ಹಾಗೂ ವೆಂಕಟಲಕ್ಷ್ಮಮ್ಮ ಎಂದಿನಂತೆ ಶನಿವಾರ ಕೂಡ ಕುರಿ ಮೇಯಿಸಲು ಹೋಗಿದ್ದಾರೆ. ಬಳಿಕ ಮನೆಗೆ ಬರುವಾಗ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಕುರಿಗಳನ್ನು ಬಿಟ್ಟಿದ್ದಾರೆ. ಈ ವೇಳೆ ಕುರಿಯೊಂದು ಹೊಂಡದಲ್ಲಿ ಸಿಲುಕಿಕೊಂಡಿದೆ. ಅದನ್ನು ಹೊರ ತೆಗೆಯಲು ಮುಂದಾಗಿದ್ದ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.

    ರಾತ್ರಿಯಾದರೂ ಅಪ್ಪ ಅಮ್ಮ ಬರಲಿಲ್ಲ ಅಂತ ಮಕ್ಕಳು ಗಾಬರಿಯಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಕೆರೆಯ ಬಳಿಗೆ ಬಂದು ನೋಡಿದಾಗ ಮೃತ ದೇಹಗಳು ಪತ್ತೆಯಾಗಿವೆ. ಈ ಕುರಿತು ಮಾಹಿತಿ ಪಡೆದ ಸ್ಥಳಕ್ಕೆ ಆಗಮಿಸಿದ ಅಗ್ನಿಶಮಕ ದಳವು ಸ್ಥಳೀಯರ ಸಹಾಯ ಪಡೆದು ಶವಗಳನ್ನು ಹೊರ ತೆಗೆದಿದೆ. ಈ ಕುರಿತು ನಂಗಲಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೃಷಿ ಹೊಂಡಕ್ಕೆ ಬಿದ್ದ ಆನೆಗಳನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ!

    ಕೃಷಿ ಹೊಂಡಕ್ಕೆ ಬಿದ್ದ ಆನೆಗಳನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ!

    ಚಾಮರಾಜನಗರ: ಕೃಷಿ ಹೊಂಡದಲ್ಲಿ ಬಿದ್ದಿದ್ದ ಮೂರು ಆನೆಗಳನ್ನು ಅರಣ್ಯ ಸಿಬ್ಬಂದಿ ರಕ್ಷಿಸಿದ ಘಟನೆ ಸತ್ಯಮಂಗಲದ ಬಳಿ ನಡೆದಿದೆ.

    ಚಾಮರಾಜನಗರ ಮತ್ತು ತಮಿಳುನಾಡಿನ ಗಡಿ ಪ್ರದೇಶದಲ್ಲಿರುವ ಸತ್ಯಮಂಗದ ಕಾಡಂಚಿನ ಗ್ರಾಮವಾದ ಕನಕುಂದೂರು ಗ್ರಾಮದ ಕೃಷಿ ಹೊಂಡಕ್ಕೆ ಮೂರು ಕಾಡಾನೆಗಳು ಬಿದ್ದಿವೆ. ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದಾಗ, ಮಣ್ಣು ಕುಸಿದು ಆಳವಾದ ಕೃಷಿ ಹೊಂಡಕ್ಕೆ ಬಿದ್ದಿವೆ. ಕೃಷಿ ಹೊಂಡ ಆಳವಾಗಿದ್ದ ಕಾರಣ ಆನೆಗಳು ಮೇಲೆ ಬರಲು ಸಾಧ್ಯವಾಗದೇ ಗಾಬರಿಗೊಂಡು ಚೀರಾಟ ನಡೆಸಿವೆ.

    ಆನೆಗಳ ಧ್ವನಿ ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಆನೆಗಳು ಕೃಷಿ ಹೊಂಡದಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಆನೆಗಳನ್ನು ಮೇಲೆ ತರಲು ಜೆಸಿಬಿ ಯಂತ್ರದ ಸಹಾಯದಿಂದ ಕೃಷಿ ಹೊಂಡದ ಬಳಿ ದಾರಿ ಮಾಡಿಕೊಟ್ಟಿದ್ದಾರೆ.

    ಕಾಡಾನೆಗಳು ಒಂದರ ಸಹಾಯದೊಂದಿಗೆ ಮತ್ತೊಂದು ಆನೆ ಕೃಷಿ ಹೊಂಡದಿಂದ ಮೇಲೆ ಬಂದು ಮರಳಿ ಕಾಡಿಗೆ ಸೇರಿವೆ.

  • ಒಬ್ಬನನ್ನು ರಕ್ಷಿಸಲು ಹೋಗಿ ಮತ್ತೊಬ್ಬನೂ ಕೃಷಿ ಹೊಂಡಕ್ಕೆ ಬಿದ್ದು ಸಾವು

    ಒಬ್ಬನನ್ನು ರಕ್ಷಿಸಲು ಹೋಗಿ ಮತ್ತೊಬ್ಬನೂ ಕೃಷಿ ಹೊಂಡಕ್ಕೆ ಬಿದ್ದು ಸಾವು

    ಮಂಡ್ಯ: ಕೃಷಿ ಹೊಂಡದೊಳಗೆ ಬಿದ್ದು ಹೊರಬಾರದೇ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಆತಗೂರು ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. 18 ವರ್ಷದ ಚಂದನ್ ಮತ್ತು 12 ವರ್ಷದ ಕಿರಣ್ ಮೃತ ದುದೈರ್ವಿಗಳು. ಇವರಿಬ್ಬರು ಜಮೀನಿನಲ್ಲಿ ಟೊಮ್ಯಾಟೊ ಬಿಡಿಸಿದ್ದಾರೆ. ನಂತರ ಕಿರಣ್ ಕೈ ಕಾಲು ತೊಳೆಯಲು ಕೃಷಿ ಹೊಂಡದ ಬಳಿ ಹೋಗಿದ್ದಾನೆ. ಆದ್ರೆ ಈ ವೇಳೆ ಕಾಲು ಜಾರಿ ಕೃಷಿಹೊಂಡದೊಳಗೆ ಬಿದ್ದಿದ್ದಾನೆ. ಇದನ್ನ ಗಮನಿಸಿದ ಚಂದನ್, ಕಿರಣ್‍ನನ್ನು ರಕ್ಷಿಸಲು ಹೋಗಿ ಕಾಲು ಜಾರಿ ಆತನೂ ಕೂಡ ಒಳಗೆ ಬಿದ್ದಿದ್ದಾನೆ.

    ಇಬ್ಬರೂ ಈಜಲು ಬಾರದೇ ನೀರಿನೊಳಗೆ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ಶವವನ್ನು ಮದ್ದೂರು ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು, ಆಸ್ಪತ್ರೆಯ ಬಳಿ ಮೃತರ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.

  • ಧಾರವಾಡ: ಕೃಷಿ ಹೊಂಡದಲ್ಲಿ ಮುಳುಗಿ ಯುವಕ ಸಾವು

    ಧಾರವಾಡ: ಕೃಷಿ ಹೊಂಡದಲ್ಲಿ ಮುಳುಗಿ ಯುವಕ ಸಾವು

    ಧಾರವಾಡ: ಕೃಷಿ ಹೊಂಡದಲ್ಲಿ ಈಜಲು ಹೋದ ಯುವನೋರ್ವ ಮುಳುಗಿ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.

    22 ವರ್ಷದ ಮಲ್ಲಿಕಾರ್ಜುನ್ ಕಳಸಣ್ಣವರ ಮೃತ ಯುವಕ. ಮಲ್ಲಿಕಾರ್ಜುನ ತನ್ನ ಇತರ ಸ್ನೇಹಿತರೊಂದಿಗೆ ಕೃಷಿ ಹೊಂಡದಲ್ಲಿ ಸ್ನಾನ ಮಾಡಲೆಂದು ಹೋಗಿದ್ದ. ಕೃಷಿ ಹೊಂಡದಲ್ಲಿ ಹೂಳು ತುಂಬಿಕೊಂಡಿದ್ದನ್ನು ಗಮನಿಸದ ಮಲ್ಲಿಕಾರ್ಜುನ ಏಕಾಏಕಿ ಹೊಂಡಕ್ಕೆ ಜಿಗಿದಿದ್ದಾನೆ. ಇದರಿಂದ ಹೂಳಿನಲ್ಲಿ ಸಿಕ್ಕಿ ಹಾಕಿಕೊಂಡ ಮಲ್ಲಿಕಾರ್ಜುನ ಮೇಲೆ ಬರಲು ಆಗದೇ ಮುಳುಗಿ ಸಾವನ್ನಪ್ಪಿದ್ದಾನೆ.

    ಮಲ್ಲಿಕಾರ್ಜುನ್ ಜೊತೆಯಲ್ಲಿದ್ದ ಸ್ನೇಹಿತರು ಆತನನ್ನು ಪೈಪ್ ಕೊಟ್ಟು ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ. ಆದರೆ ಪೈಪ್ ಮಲ್ಲಿಕಾರ್ಜುನನಿಗೆ ತಾಗದ ಕಾರಣ ಮೇಲಕ್ಕೆ ಬರಲು ಸಾಧ್ಯವಾಗಿಲ್ಲ. ಕಳೆದರೆಡು ದಿನಗಳಿಂದ ಗ್ರಾಮದಲ್ಲಿ ಮಳೆಯಾಗಿದ್ದರಿಂದ ಹೊಂಡದಲ್ಲಿ ನೀರು ತುಂಬಿಕೊಂಡಿತ್ತು. ಹಾಗಾಗಿ ಯುವಕರು ಕೃಷಿ ಹೊಂಡಕ್ಕೆ ಯುವಕರು ತೆರಳಿದ್ದರು.

    ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.