Tag: Farm Bill

  • ಭಾರತ್ ಬಂದ್ ಏನಿರುತ್ತೆ? ಏನಿರಲ್ಲ?

    ಭಾರತ್ ಬಂದ್ ಏನಿರುತ್ತೆ? ಏನಿರಲ್ಲ?

    ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ಒಂದೂವರೆ ವರ್ಷದಿಂದಲೂ ರೈತರ ಪ್ರತಿಭಟನೆ ಮುಂದುವರಿದಿದ್ದು ಸೋಮವಾರ 2ನೇ ಬಾರಿಗೆ ಭಾರತ ಬಂದ್ ನಡೆಯುತ್ತಿದೆ.

    ಬೆಂಗಳೂರು ಸೇರಿದಂತೆ ಮಂಡ್ಯ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬಳ್ಳಾರಿ, ದಾವಣಗೆರೆ ಎಲ್ಲಾ ಜಿಲ್ಲೆಗಳಲ್ಲೂ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೂ ಬಂದ್ ಇರಲಿದೆ. ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಬಂದ್‍ಗೆ ಕರ್ನಾಟಕದಲ್ಲಿ ಸಂಘಟನೆಗಳ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಕೊರೊನಾ ಮತ್ತು ಕೊರೊನಾದಿಂದ ಆಗಿರುವ ನಷ್ಟದ ಕಾಲದಲ್ಲಿ ಬಂದ್‍ಗೆ ಕರೆ ನೀಡಿರುವ ಕಾರಣ ರಾಜ್ಯದಲ್ಲಿ ಸಂಘಟನೆಗಳು ಉತ್ಸಾಹ ತೋರಿಸಿಲ್ಲ. ರೈತರ ಹೋರಾಟಕ್ಕೆ ನಮ್ಮ ನೈತಿಕ ಬೆಂಬಲ ಇದ್ದೇ ಇದೆ ಅಂದಿದ್ದಾರೆ. ಆದರೆ, ನೈತಿಕ ಬೆಂಬಲ ಬೇಡ. ಸಂಪೂರ್ಣ ಬೆಂಬಲ ನೀಡಿ ಅಂತ ರೈತ ಮುಖಂಡರು ಕೇಳಿದ್ದಾರೆ. ಹಾಗಾಗಿ, ನಾಳಿನ ಬಂದ್ ಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿರಲಿದೆ ಅನ್ನೋದು ಕುತೂಹಲ. ಆದರೂ, ಭಾರತ ಬಂದ್ ಅನ್ನು ಶತಾಯಗತಾಯ ಕರ್ನಾಟಕದಲ್ಲಿ ಯಶಸ್ಸು ಮಾಡಲು ರೈತ ಮುಖಂಡರು ಭಾರೀ ಪ್ರಯತ್ನ ಮಾಡ್ತಿದ್ದಾರೆ.  ಇದನ್ನೂ ಓದಿ: ಸಿದ್ದರಾಮಯ್ಯ ಹೇಳುವುದೆಲ್ಲ ಸುಳ್ಳು: ಅಶೋಕ್ 

    ಯಾರದ್ದು ಸಂಪೂರ್ಣ ಬೆಂಬಲ?
    ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘ, ರಾಜ್ಯ ಹಸಿರು ಸೇನೆ, ರಾಜ್ಯ ಪ್ರಾಂತ ರೈತ ಸಂಘ, ರೈತ ಕಾರ್ಮಿಕರ ಸಂಘ, ಅಖಿಲ ಭಾರತ್ ಕಿಸಾನ್ ಸಭಾ, ಕರವೇ ಪ್ರವೀಣ್ ಶೆಟ್ಟಿ ಬಣ

    ಯಾರದ್ದು ನೈತಿಕ ಬೆಂಬಲ?
    ಆಟೋ ಮಾಲೀಕರು, ಕ್ಯಾಬ್ ಚಾಲಕರ ಸಂಘ, ಬ್ಯಾಂಕ್ ಒಕ್ಕೂಟ, ಬಿಎಂಟಿಸಿ, ಕೆಎಸ್‍ಆರ್‍ಟಿಸಿ ನೌಕರರ ಸಂಘ, ಕರವೇ ನಾರಾಯಣ ಬಣ

    ಏನಿರುತ್ತೆ?
    ಕೆಎಸ್ಆರ್ಟಿಸಿ , ಬಿಎಂಟಿಸಿ, ಮೆಟ್ರೋ, ಖಾಸಗಿ ಬಸ್, ಲಾರಿ, ಆಟೋ, ಕ್ಯಾಬ್, ಹೋಟೆಲ್, ಅಂಗಡಿ ಮುಂಗಟ್ಟು, ಶಾಲೆ, ಕಾಲೇಜು, ಸರ್ಕಾರಿ-ಖಾಸಗಿ ಕಚೇರಿ, ಆಸ್ಪತ್ರೆ, ಅಂಬುಲೆನ್ಸ್, ಮೆಡಿಕಲ್.

  • ವಿರೋಧದ ನಡುವೆ 2 ಕೃಷಿ ಮಸೂದೆ ರಾಜ್ಯಸಭೆಯಲ್ಲಿ ಪಾಸ್‌

    ವಿರೋಧದ ನಡುವೆ 2 ಕೃಷಿ ಮಸೂದೆ ರಾಜ್ಯಸಭೆಯಲ್ಲಿ ಪಾಸ್‌

    ನವದೆಹಲಿ: ವಿಪಕ್ಷಗಳ ವಿರೋಧ ನಡುವೆ ರಾಜ್ಯಸಭೆಯಲ್ಲಿ ಕೃಷಿಗೆ ಸಂಬಂಧಿಸಿದ ಎರಡು ಮಸೂದೆಗಳು ಪಾಸ್‌ ಆಗಿದೆ.

    ರೈತರು ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ, 2020ಕ್ಕೆ ಅಂಗೀಕಾರ ಪಡೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.

    ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಸದಸ್ಯರು ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿದರು.

    ಮಸೂದೆ ಕುರಿತು ಸೂಕ್ತ ಚರ್ಚೆಗೆ ಆಸ್ಪದ ಕೊಡದೇ ಧ್ವನಿ ಮತಕ್ಕೆ ಆದೇಶ ನೀಡಿದ್ದಕ್ಕೆ ಆಕ್ರೋಶಗೊಂಡ ಟಿಎಂಸಿಯ ಡೆರೆಕ್ ಒ’ಬ್ರಿಯೆನ್ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಕುಳಿತಿದ್ದ ಮೇಜಿನ ಬಳಿ ಆಗಮಿಸಿ ರೂಲ್‌ ಪುಸ್ತಕವನ್ನೇ ಹರಿದು ಹಾಕಿದ್ದಾರೆ.

    ಪ್ರತಿಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪವನ್ನು ಸೋಮವಾರ ಬೆಳಿಗ್ಗೆ 9 ಗಂಟೆವರೆಗೆ ಮುಂದೂಡಲಾಗಿದೆ.