Tag: Farm

  • ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತನ ರುಂಡ ಕತ್ತರಿಸಿದ ದುಷ್ಕರ್ಮಿಗಳು

    ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತನ ರುಂಡ ಕತ್ತರಿಸಿದ ದುಷ್ಕರ್ಮಿಗಳು

    ಗದಗ: ಜಮೀನಿನಲ್ಲಿ (Farm) ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತ ಕಾರ್ಮಿಕನ ತಲೆಯನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋದ ಘಟನೆ ಗದಗ (Gadag) ತಾಲೂಕಿನ ತಿಮ್ಮಾಪೂರ (Thimmapur) ಗ್ರಾಮದ ಜಮೀನಿನಲ್ಲಿ ನಡೆದಿದೆ.

    ಸಣ್ಣ ಹನುಮಪ್ಪ ಅಲಿಯಾಸ್ ಕುಂಟೆಪ್ಪ ವಜ್ರದ್ (65) ಎಂಬ ರೈತ ಕಾರ್ಮಿಕನ ರುಂಡವನ್ನು ಯಾರೋ ಕತ್ತರಿಸಿಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ದೇಹ ಮಾತ್ರ ಇದ್ದು, ರುಂಡ ಇಲ್ಲ. ಮೃತ ರೈತ ಕಾರ್ಮಿಕ ಕೊಪ್ಪಳ (Koppal) ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ನಿವಾಸಿ. ಈತ ತಿಮ್ಮಾಪೂರ ಗ್ರಾಮದ ಬಾಲಪ್ಪ ಕೊಪ್ಪದ ಎಂಬ ರೈತರ ಜಮೀನಲ್ಲಿ ಬೆಳೆ ಕಾಯುತ್ತಿದ್ದ. ಜಮೀನಿನ ಮಾಲಿಕರು ನಿತ್ಯ ಊಟ ಕೊಟ್ಟು ತಿಂಗಳಿಗೆ 7,000 ರೂ. ಕೊಡುವುದಾಗಿ ಹೇಳಿ ಜಮೀನು ಕಾಯುವಂತೆ ಹೇಳಿದ್ದರು. ಕಳೆದ ಒಂದು ತಿಂಗಳಿನಿಂದ ಮೆಣಸಿನಕಾಯಿ ಕಾಯುತ್ತಿದ್ದ. ಆದರೆ ಬೆಳಗ್ಗೆ ಮಾಲೀಕರು ಬಂದು ನೋಡಿದಾಗ ಕುಂಟೆಪ್ಪನ ರುಂಡ ಇಲ್ಲವಾಗಿದೆ. ಇದನ್ನೂ ಓದಿ: ದೇಶದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ಆರೋಪ; 15 ಮಂದಿ ಐಸಿಸ್ ಶಂಕಿತರ ಬಂಧನ

    ಯಾರು ಕೊಲೆ ಮಾಡಿದ್ದಾರೆ? ಯಾಕೆ ಆಗಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಕೊಲೆಯ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಸ್ಥಳಕ್ಕೆ ಗದಗ ಎಸ್.ಪಿ ಬಿ.ಎಸ್ ನೇಮಗೌಡ, ಡಿವೈಎಸ್ಪಿ ಸುಂಕದ್ ಹಾಗೂ ಗ್ರಾಮೀಣ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದ ತಂಡ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ರೈತ ಕಾರ್ಮಿಕನ ರುಂಡ ಹಾಗೂ ದುಷ್ಕರ್ಮಿಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಐಟಿ ದಾಳಿಯಲ್ಲಿ 290 ಕೋಟಿ ರೂ. ಜಪ್ತಿ – ಎಣಿಸಿದಷ್ಟು ಹೆಚ್ಚುತ್ತಲೇ ಇದೆ ಹಣ

    ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ಮೆಣಸಿನಕಾಯಿ ಕಳ್ಳರ ಹಾವಳಿ ಹೆಚ್ಚಾಗಿದೆ. ತಮ್ಮ ಬೆಳೆ ಉಳಿಸಿಕೊಳ್ಳಲು ರೈತರು ಸಾಕಷ್ಟು ಕಷ್ಟ ಪಡುವಂತಾಗಿದೆ. ಆದರೆ ಈ ಘಟನೆಯಿಂದ ರೈತರು ಬೆಚ್ಚಿ ಬಿದ್ದಿದ್ದಾರೆ. ತಮ್ಮ ಬೆಳೆ ಉಳಿಸಿಕೊಳ್ಳಲು ಹಗಲು ರಾತ್ರಿ ಕಾವಲು ಕಾಯಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಬೇಲ್‌ನಲ್ಲಿ ಹೊರಬಂದ ಅತ್ಯಾಚಾರ ಆರೋಪಿ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ – ಬಳಿಕ ಆತ್ಮಹತ್ಯೆ

  • 14 ದಲಿತ ಕೂಲಿ ಕಾರ್ಮಿಕರನ್ನು ಕೂಡಿ ಹಾಕಿ ಮಾಲೀಕನಿಂದ ಹಲ್ಲೆ- ಮಹಿಳೆಗೆ ಗರ್ಭಪಾತ

    14 ದಲಿತ ಕೂಲಿ ಕಾರ್ಮಿಕರನ್ನು ಕೂಡಿ ಹಾಕಿ ಮಾಲೀಕನಿಂದ ಹಲ್ಲೆ- ಮಹಿಳೆಗೆ ಗರ್ಭಪಾತ

    ಚಿಕ್ಕಮಗಳೂರು: ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ (Labour) ಮೇಲೆ ತೋಟದ ಮಾಲೀಕ (Owner) ಹಲ್ಲೆ (Assault) ಮಾಡಿದ್ದು, ಇದರಿಂದ 2 ತಿಂಗಳ ಗರ್ಭಿಣಿಗೆ (Pregnant) ಗರ್ಭಪಾತವಾಗಿದೆ (Miscarriage) ಎಂದು ಕೂಲಿ ಕಾರ್ಮಿಕರು ತೋಟದ ಮಾಲೀಕನ ವಿರುದ್ಧ ಅಸಮಾಧಾನ ಹೊರಹಾಕಿ, ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ತಾಲೂಕಿನ ಜೇನುಗದ್ದೆ ಸಮೀಪದ ಪುರ ಗ್ರಾಮದಲ್ಲಿ ನಡೆದಿದೆ.

    ಪುರ ಗ್ರಾಮದ ಜಗದೀಶ್ ಎಂಬವರ ತೋಟದಲ್ಲಿ ಆಲ್ದೂರು ಸಮೀಪದ 6-7 ಕುಟುಂಬಗಳು ಕಳೆದ 4-5 ತಿಂಗಳಿಂದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಆದರೆ, ತೋಟದ ಲೈನ್ ಮನೆಗಳಲ್ಲಿ ವಾಸವಿದ್ದ ಕುಟುಂಬಗಳ ಚಿಕ್ಕ ಮಕ್ಕಳ ಜಗಳ ದೊಡ್ಡವರನ್ನು ಮುಟ್ಟಿ ಮಾಲೀಕರ ಬಳಿಯೂ ಹೋಗಿತ್ತು. ಈ ವೇಳೆ ಮಾಲೀಕ ಮಕ್ಕಳ ಜಗಳ ಸುಮ್ಮನರ‍್ರೋ ಎಂದು ಹೇಳಿ ಸುಮ್ಮನಾಗಿದ್ದರೆ ಮುಗಿದೋಗುತ್ತಿತ್ತು. ಸಾಹುಕಾರರು ದೊಡ್ಡವರಾಗುತ್ತಿದ್ದರು. ಆದರೆ ಕಾರ್ಮಿಕರು ದೂರು ಹೇಳುತ್ತಿದ್ದಂತೆ ಏಕಾಏಕಿ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಪಿಐ(ಎಂ) ಮುಖಂಡನ ಮನೆಯಲ್ಲಿ ಬಾಂಬ್ ಪತ್ತೆ – ತಾಜ್ ಉದ್ದೀನ್ ಮಲ್ಲಿಕ್ ಅರೆಸ್ಟ್

    ತೋಟದ ಮಾಲೀಕ ಜಗದೀಶ್ ತಮಗೆ ಹೊಡೆದಿರುವುದು ಮಾತ್ರವಲ್ಲದೇ 6 ಕುಟುಂಬದ 14 ಕಾರ್ಮಿಕರನ್ನು ಒಂದು ದಿನವಿಡೀ ತೋಟದ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ನೊಂದ ಕಾರ್ಮಿಕರು ಮಾಲೀಕನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಾರ್ಮಿಕರ ಬಳಿ ಇದ್ದ ಮೊಬೈಲ್ ಅನ್ನೂ ಕೂಡ ಮಾಲೀಕ ಕಿತ್ತುಕೊಂಡಿದ್ದು, ಗರ್ಭಿಣಿಯೊಬ್ಬಳು ತನ್ನ ಫೋನ್ ಅನ್ನು ಕೊಡಲು ಹಿಂದೇಟು ಹಾಕಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.

    ಮಾಲೀಕ 2 ತಿಂಗಳ ಗರ್ಭಿಣಿ ಮೇಲೆ ಹಲ್ಲೆ ನಡೆಸಿದ್ದರಿಂದ ಆಕೆಗೆ ಗರ್ಭಪಾತವಾಗಿರುವುದಾಗಿ ಆಕೆಯ ತಾಯಿ ಗೀತಾ ಆರೋಪಿಸಿ, ಆಕ್ರೋಶ ಹೊರಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತೋಟದ ಮಾಲೀಕ ಜಗದೀಶ್ ಹಾಗೂ ತಿಲಕ್ ಎಂಬವರ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಸೆಕ್ಷನ್ 504(ಶಾಂತಿ ಭಂಗವನ್ನು ಮಾಡಲು ಉದ್ದೇಶಿಸುವುದಕ್ಕಾಗಿ ಉದ್ದೇಶ ಪೂರ್ವಕ ಅವಮಾನ), 323(ಸ್ವಯಿಚ್ಛೆಯಿಂದ ಗಾಯವನ್ನುಂಟುಮಾಡಿದ್ದಕ್ಕೆ ದಂಡನೆ), 342(ಅಕ್ರಮ ಬಂಧನಕ್ಕಾಗಿ ದಂಡನೆ) ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮೊರಾರ್ಜಿ ಶಾಲೆಗಳಲ್ಲಿ ನಡೆದಿದ್ಯಾ ಆರ್‌ಎಸ್‍ಎಸ್ ಶಿಬಿರ..?

    Live Tv
    [brid partner=56869869 player=32851 video=960834 autoplay=true]

  • ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮ

    ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮ

    ಹಾವೇರಿ: ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್ ಆಗಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೊಸಶಿಡೇನೂರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ಪರಮೇಶಪ್ಪ ನಂದೀಹಳ್ಳಿ ಎಂಬವರಿಗೆ ಸೇರಿದ್ದ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ

    ಪರಮೇಶಪ್ಪ ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದು, ಸುಮಾರು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಮೆಕ್ಕೆಜೋಳ ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯವನ್ನ ಮಾಡಿದ್ದಾರೆ. ರೈತನಿಗೆ ಸೂಕ್ತ ಪರಿಹಾರವನ್ನ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಪೊಲೀಸ್ ಮಗಳನ್ನೆ ಕತ್ತು ಹಿಸುಕಿ ಕೊಂದ ಸ್ನೇಹಿತೆಯ ಪತಿ!

    ಘಟನೆ ಕುರಿತು ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ICRISAT ಕ್ಯಾಂಪಸ್ ತೋಟದಲ್ಲಿ ಕಡಲೆ ಕಾಯಿ ಸವಿದ ಪ್ರಧಾನಿ ಮೋದಿ

    ICRISAT ಕ್ಯಾಂಪಸ್ ತೋಟದಲ್ಲಿ ಕಡಲೆ ಕಾಯಿ ಸವಿದ ಪ್ರಧಾನಿ ಮೋದಿ

    ಹೈದರಾಬಾದ್: ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ (International Crops Research Institute for Semi-Arid Tropics) (ICRISAT)ಯ 50ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಮಂತ್ರಿ ಮೋದಿ, ಕಾರ್ಯಕ್ರಮದ ಬಳಿಕ ಕ್ಯಾಂಪಸ್ ತೋಟದಲ್ಲಿ ಬೆಳೆದಿದ್ದ ಕಡಲೆ ಗಿಡದಿಂದ ಕಡಲೆ ಬೀಜ ಕಿತ್ತು ಸವಿದಿದ್ದಾರೆ.

    ಕಾರ್ಯಕ್ರಮದ ನಂತರ ಕ್ಯಾಂಪಸ್ ತೋಟದ ಸುತ್ತ ಹೆಜ್ಜೆ ಹಾಕಿದ್ದಾರೆ. ತೋಟದಲ್ಲಿ ಬೆಳೆದಿದ್ದ ಕಡಲೆ ಕಾಯಿ ಗಿಡದಿಂದ ಕಡಲೆ ಬೀಜ ಕಿತ್ತು ಸವಿದಿದ್ದಾರೆ. ಇದೇ ವೇಳೆ ಕ್ಯಾಂಪಸ್‍ನ ತೋಟದಲ್ಲಿ ಬೆಳೆದಿದ್ದ, ರಾಗಿ,ಜೋಳ ಸೇರಿ ವಿವಿಧ ಬೆಳೆಗಳ ಪರಿಶೀಲನೆ ಮಾಡಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹವಾಮಾನ ಬದಲಾವಣೆಯೆಂಬುದು ನಮ್ಮ ರೈತರಿಗೆ ಅತ್ಯಂತ ದೊಡ್ಡ ಸವಾಲಾಗಿದೆ. ಕೃಷಿಯಲ್ಲಿ ಮೂಲಭೂತ ವಿಷಯಗಳಿಗೆ ಉತ್ತೇಜನ ನೀಡುವ ಜತೆ, ಭವಿಷ್ಯದೆಡೆಗೆ ಧಾವಿಸುವುದರತ್ತ ನಾವು ಗಮನ ನೆಟ್ಟಿದ್ದೇವೆ. ನಮ್ಮ ಅಗತ್ಯವನ್ನು ದೊಡ್ಡ ಮಟ್ಟದಲ್ಲಿ ಪೂರೈಸುವ ಈ ದೇಶದ ಶೇ.80ರಷ್ಟು ಸಣ್ಣ ರೈತರತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ಅದರ ಭಾಗವಾಗಿಯೇ ನಮ್ಮ ಕೇಂದ್ರ ಸರ್ಕಾರದ 2022-23ರ ಬಜೆಟ್‍ನಲ್ಲಿ ನೈಸರ್ಗಿಕ ಬೇಸಾಯ ಮತ್ತು ಡಿಜಿಟಲ್ ಕೃಷಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ ಲತಾ ಮಂಗೇಶ್ಕರ್

    ಐಸಿಆರ್‌ಐಎಸ್‍ಎಟಿ ಸಂಸ್ಥೆಯು ಕಳೆದ 5 ದಶಕಗಳಿಂದಲೂ ಕೂಡ ಕೃಷಿಯನ್ನು ಸುಲಭ ಮತ್ತು ಸುಸ್ಥಿರಗೊಳಿಸಲು ಇತರ ದೇಶಗಳಿಗೆ ಸಹಾಯ ಮಾಡುತ್ತಿದೆ. ಹಾಗೇ, ಈ ಸಂಸ್ಥೆ ಭಾರತದ ಕೃಷಿ ವಲಯ ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಸೇವೆಯನ್ನು ಮುಂದುವರಿಸುತ್ತದೆ ಎಂಬ ಭರವಸೆ ನನಗೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ

  • ಮೆಣಸಿಕಾಯಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಮೂವರಿಗೆ ಜೈಲು

    ಮೆಣಸಿಕಾಯಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಮೂವರಿಗೆ ಜೈಲು

    ಧಾರವಾಡ: ಮೆಣಸಿಕಾಯಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಮೂವರು ಜೈಲು ಪಾಲಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಠಾಣೆ ಸರಹದ್ದಿನ ಭೂಕೊಪ್ಪ ಗ್ರಾಮದಲ್ಲಿ ಮೂರು ಪ್ರತ್ಯೇಕ ಜಮೀನುಗಳಲ್ಲಿ ಮೆಣಸಿನಕಾಯಿ ಬೆಳೆಯ ಜೊತೆಗೆ ಗಾಂಜಾ ಗಿಡಗಳನ್ನು ತಮ್ಮ ಅಕ್ರಮ ಲಾಭಕ್ಕಾಗಿ ಬೆಳೆದ ಬಗ್ಗೆ ಮಾಹಿತಿ ತಿಳಿದು, ಪೊಲೀಸರು ದಾಳಿ ಮಾಡಿ ಗಾಂಜಾ ಗಿಡ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು. ಇದನ್ನೂ ಓದಿ: ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!

    ಭೂಕೊಪ್ಪ ಗ್ರಾಮದ ಮೊದಲ ಆರೋಪಿ ತನ್ನ ಜಮೀನಿನಲ್ಲಿ ಅಂದಾಜು 1 ಲಕ್ಷ 25 ಸಾವಿರ ಮೌಲ್ಯದ 31 ಕೆಜಿ ತೂಕದ ಒಟ್ಟು 32 ಹಸಿಗಾಂಜಾ ಗಿಡಗಳನ್ನು ಹಚ್ಚಿದ್ದ, ಎರಡನೇ ಆರೋಪಿಯು 80 ಸಾವಿರ ಮೌಲ್ಯದ 20 ಕೆಜಿ 160 ಗ್ರಾಂ. ತೂಕದ ಒಟ್ಟು 50 ಹಸಿಗಾಂಜಾ ಗಿಡಗಳು ಹಾಗೂ ಮೂರನೇ ಆರೋಪಿು 25 ಸಾವಿರ ಮೌಲ್ಯದ 8.5 ಕೆಜಿ ತೂಕದ 17 ಹಸಿಗಾಂಜಾ ಒಟ್ಟು 59 ಕೆಜಿ 760 ಗ್ರಾಂ ಹಸಿ ಗಾಂಜಾ ಗಿಡಗಳನ್ನು ಬೆಳಸಿದ್ದರು. ಇದನ್ನೂ ಓದಿ: ನಿರುದ್ಯೋಗ ದಿನ ಆಚರಿಸಿ ಪಿಎಂಗೆ ನಿಮ್ಮ ಪದವಿ ಪ್ರಮಾಣ ಪತ್ರ ಹಿಂದಿರುಗಿಸಿ: ಡಿ.ಕೆ. ಶಿವಕುಮಾರ್ ಕರೆ

    ಸದ್ಯ ಒಟ್ಟು ಅಂದಾಜು ಮೊತ್ತ ರೂ. 2 ಲಕ್ಷ 30 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ಜಿಲ್ಲಾ ಸತ್ರನ್ಯಾಯಾಲಯದಲ್ಲಿ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

  • ರೈತನ ಜಮೀನಿನಲ್ಲಿ ಮೂರ್ತಿ ಪತ್ತೆ- 21 ದಿನ 21 ಗ್ರಾಮದಲ್ಲಿ ಕುಟುಂಬದಿಂದ ಭಿಕ್ಷಾಟನೆ

    ರೈತನ ಜಮೀನಿನಲ್ಲಿ ಮೂರ್ತಿ ಪತ್ತೆ- 21 ದಿನ 21 ಗ್ರಾಮದಲ್ಲಿ ಕುಟುಂಬದಿಂದ ಭಿಕ್ಷಾಟನೆ

    ಹಾವೇರಿ: ರೈತರೊಬ್ಬರ ಜಮೀನಿನಲ್ಲಿ ದೇವರ ಮೂರ್ತಿಗಳು ಉದ್ಭವಾಗಿವೆ ಎಂಬ ವದಂತಿ ಹರಡಿದೆ. ದೇವರನ್ನು ನೋಡಲು ಜನರು ತಂಡೋಪತಂಡವಾಗಿ ಬರುತ್ತಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ದೇವರ ಉದ್ಭವ ಮೂರ್ತಿಗಳು ಮಣ್ಣಿನಲ್ಲಿ ಹುದುಗಿರುವ ರೂಪದಲ್ಲಿ ಕಂಡುಬಂದಿವೆ. ಗ್ರಾಮದ ಉಡಚಪ್ಪ ಕೊಡೆಪ್ಪನವರ ಜಮೀನಿನಲ್ಲಿ ಈ ಮೂರ್ತಿಗಳು ಉದ್ಭವವಾಗಿವೆ. ಕಳೆದೊಂದು ವರ್ಷದಿಂದ ರೈತ ಉಡಚಪ್ಪ ಮತ್ತು ಆತನ ಪತ್ನಿ ಮಂಜವ್ವಳ ಕನಸಿನಲ್ಲಿ ಉಡಚಮ್ಮದೇವಿ ಬರುತ್ತಿದ್ದಳಂತೆ. 21 ದಿನಗಳ ಕಾಲ 21 ಗ್ರಾಮದಲ್ಲಿ ಭಿಕ್ಷೆ ಬೇಡಿ ತನ್ನನ್ನು ಪೂಜಿಸಿದರೆ ಆ ಜಾಗದಲ್ಲಿ ಪ್ರತ್ಯಕ್ಷಳಾಗುತ್ತೇನೆ ಎಂದು ಕನಸಿನಲ್ಲಿ ಹೇಳಿದ್ದಳಂತೆ. ಈಗ ಎರಡು ದಿನಗಳಿಂದ ರೈತ ಉಡಚಪ್ಪನ ಜಮೀನಿನಲ್ಲಿ ಪಾರ್ವತಿ, ಪರಮೇಶ್ವರ, ಗಣೇಶ, ಉಡಚಮ್ಮ, ನಾಗವೇಣಿ, ಯಲ್ಲಮ್ಮಳ ದೇವರ ಮೂರ್ತಿಗಳು ಅಸ್ಪಷ್ಟವಾಗಿ ಗೋಚರಿಸಿವೆ. ಇದನ್ನೂ ಓದಿ:  ಬಿಕಿನಿಯಲ್ಲಿ ಸಾರಾ ಅಲಿ ಖಾನ್ ಸಖತ್ ಹಾಟ್

    ಜನ ಮರಳೋ ಜಾತ್ರೆ ಮರಳೋ ಎಂಬಂತೆ ಮೂರ್ತಿಗಳನ್ನು ನೋಡಿ ಪೂಜೆ ಮಾಡುವುದಕ್ಕೆ ಜನ ದಂಡು ದಂಡಾಗಿ ಬರುತ್ತಿದ್ದಾರೆ. ರೈತ ಉಡಚಪ್ಪ ಕೊಡೆಪ್ಪನವರ ಕುಟುಂಬ ಸದಸ್ಯರು ದೇವಿಯ ಆಜ್ಞೆಯಂತೆ ಐದು ದಿನಗಳಿಂದ ಊರೂರು ತಿರುಗಾಡಿ ಭಿಕ್ಷೆ ಬೇಡುತ್ತಿದ್ದಾರೆ. ಜಮೀನಿನಲ್ಲೇ ದಾವಣಗೆರೆ ಜಿಲ್ಲೆ ಹರಪನಹಳ್ಳಿ ಮೂಲದ ಓರ್ವ ಸ್ವಾಮೀಜಿ ಮೂಲಕಪೂಜೆ ಮಾಡಿಸಿ ಅನುಷ್ಠಾನ ಕೈಗೊಂಡಿದ್ದಾರೆ. ಯಾರೊಂದಿಗೆ ಮಾತನಾಡದೆ ಸ್ವಾಮೀಜಿ ಮೌನ ವೃತ ಮಾಡುತ್ತಿದ್ದಾರೆ. ಇದನ್ನೂ ಓದಿ:  ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಲಸಿತ್ ಮಾಲಿಂಗ ಗುಡ್ ಬೈ

    ಇದು ಪವಾಡವೋ ಏನೋ ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಾ ಜನರು ಜಮೀನಿಗೆ ಆಗಮಿಸಿ ದರ್ಶನ ಪಡೆದು ಹೋಗುತ್ತಿದ್ದಾರೆ. ಅದರೆ ಆ ಕುಟುಂಬ ಮಾತ್ರ ಪ್ರತಿದಿನ ಬೆಳಗ್ಗೆ ಒಂದು ಊರಿಗೆ ತೆರಳಿ ಭಿಕ್ಷಾಟನೆ ಮಾಡಿ, ದೇವರ ಪೂಜೆ ಮಾಡಿ 21 ನೇ ದಿನಕ್ಕೆ ದೇವರ ಜೊತೆಗೆ ಅನ್ನಪ್ರಸಾದವನ್ನ ಮಾಡುತ್ತಿದ್ದಾರೆ.

  • ಸತ್ತ ನಾಯಿಗಳನ್ನು ತಿಂದ ಮೂರು ಚಿರತೆಗಳು ಸಾವು?

    ಸತ್ತ ನಾಯಿಗಳನ್ನು ತಿಂದ ಮೂರು ಚಿರತೆಗಳು ಸಾವು?

    ಮೈಸೂರು: ಸತ್ತ ನಾಯಿಗಳನ್ನು ತಿಂದ ಮೂರು ಚಿರತೆಗಳು ಮೃತಪಟ್ಟ ಘಟನೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ.

    ಹಲ್ಲರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಹಿಂಬದಿಯಲ್ಲಿರುವ ಚೆನ್ನಬಸಪ್ಪ ಎಂಬವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ವಲಯದಿಂದ ಹಲ್ಲರೆ ಗ್ರಾಮದತ್ತ ಆಗಮಿಸಿರುವ ಸುಮಾರು 10 ವರ್ಷದ ಹೆಣ್ಣು ಚಿರತೆಯ ಜೊತೆಗೆ 8 ತಿಂಗಳ, 2 ಹೆಣ್ಣು ಚಿರತೆ ಮರಿಗಳು ಸಾವನ್ನಪ್ಪಿವೆ.

    ಈ ವಿಷಯ ತಿಳಿದು ನಂಜನಗೂಡಿನ ಆರ್‍ಎಫ್‍ಓ ಲೋಕೇಶ್ ಮೂರ್ತಿ ಮತ್ತು ಸಿಬ್ಬಂದಿ ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದಾರೆ. ಚಿರತೆ ಸತ್ತ ನಾಯಿಯನ್ನು ತಿಂದು ಸಾವನ್ನಪ್ಪಿದೆ. ನಾಯಿಗಳ ಹಾವಳಿ ತಪ್ಪಿಸಲು ಅವುಗಳಿಗೆ ವಿಷಾಹಾರ ಇಡಲಾಗಿದ್ದು, ಅದನ್ನು ತಿಂದು ನಾಯಿಗಳು ಸಾವನ್ನಪ್ಪಿದ್ದವು. ಈ ನಾಯಿಗಳನ್ನು ಚಿರತೆಗಳು ತಿಂದಿದ್ದು, ಅವುಗಳೂ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.

    ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿರತೆ ಸಾವನಪ್ಪಿರುವ ವಿಷಯ ತಿಳಿಯುತ್ತಿದ್ದಂತೆಯೇ ಜಮೀನಿನ ಮಾಲೀಕ ಚನ್ನಬಸಪ್ಪ ಪರಾರಿಯಾಗಿದ್ದಾನೆ.

  • ಒಡತಿಯ ಜೀವ ಉಳಿಸಲು ಹೋಗಿ ಮೃತಪಟ್ಟ ಶ್ವಾನ

    ಒಡತಿಯ ಜೀವ ಉಳಿಸಲು ಹೋಗಿ ಮೃತಪಟ್ಟ ಶ್ವಾನ

    ಬೆಳಗಾವಿ: ನಾಯಿ ಎಂದರೆ ನೀಯತ್ತಿಗೆ ಹೆಸರುವಾಸಿ ಎನ್ನಲಾಗುತ್ತೆ. ಹಲವಾರು ಸಂದರ್ಭದಲ್ಲಿ ಈ ಮಾತನ್ನು ನಾಯಿಗಳು ಸಾಬೀತು ಮಾಡಿ ತೋರಿಸಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಜಿಲ್ಲೆಯ ಖಾನಾಪೂರ ತಾಲೂಕಿನ ರುಮನೆವಾಡಿ ಗ್ರಾಮದಲ್ಲಿ ನಾಯಿಯೊಂದು ತನ್ನ ಒಡತಿ ಜೀವ ಉಳಿಸಲು ಹೋಗಿ ಅವರೊಂದಿಗೆ ತಾನು ಸಾವನ್ನಪ್ಪಿದೆ.

    ರುಮನೆವಾಡಿ ಗ್ರಾಮದ ನಿವಾಸಿ ಶಾಂತಾ ಮಾರುತಿ ಹಾಗೂ ಅವರ ಸಾಕು ನಾಯಿ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ್ದಾರೆ. ಗಾಳಿಗೆ ಹೊಲದಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿತ್ತು, ಇದನ್ನು ಯಾರು ಗಮನಿಸಿರಲಿಲ್ಲ. ಇದೇ ಹೊತ್ತಿಗೆ ಶಾಂತಾ ಅವರು ಎಂದಿನಂತೆ ಇಂದು ಕೂಡ ಕೆಲಸಕ್ಕಾಗಿ ತಮ್ಮ ಹೊಲಕ್ಕೆ ಹೋಗುತ್ತಿದ್ದರು. ಅವರ ಜೊತೆ ಅವರು ಸಾಕಿದ್ದ ನಾಯಿ ಕೂಡ ತೆರಳಿತ್ತು. ಈ ವೇಳೆ ವಿದ್ಯುತ್ ತಂತಿ ಮೇಲೆ ಮಹಿಳೆ ಕಾಲಿಟ್ಟ ಪರಿಣಾಮ ಶಾಕ್ ಹೊಡೆದು ಸ್ಥಳದಲ್ಲೇ ಬಿದ್ದು ಒದ್ದಾಡುತ್ತಿದ್ದರು.

    ಆಗ ಒಡತಿ ಒದ್ದಾಡುತ್ತಿರುವುದನ್ನು ನೋಡಿದ ನಾಯಿ ಅವರನ್ನು ರಕ್ಷಿಸಲು ಹೋಗಿದೆ. ಆಗ ಅದಕ್ಕೂ ಕೂಡ ವಿದ್ಯುತ್ ತಗುಲಿ ಶಾಕ್ ಹೊಡೆದಿದೆ. ಈ ಸಂದರ್ಭ ಸ್ಥಳದ ಸುತ್ತಮುತ್ತ ಯಾರು ಇರಲಿಲ್ಲ ಹೀಗಾಗಿ ಯಾರೂ ಕೂಡ ಮಹಿಳೆ ಹಾಗೂ ನಾಯಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಆದ್ದರಿಂದ ನಾಯಿ ಹಾಗೂ ಶಾಂತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಖಾನಾಪೂರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ದುರ್ಘಟನೆ ನಡೆದ ಕೆಲ ಸಮಯದ ಬಳಿಕ ಹೊಲದ ಅಕ್ಕಪಕ್ಕ ಓದ್ದಾಡುತ್ತಿದ್ದ ಜನರು ಮಹಿಳೆ ಹಾಗೂ ನಾಯಿಯನ್ನು ನೋಡಿ, ಮಹಿಳೆ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ.

  • ಕೋಳಿಗಳ ಜೊತೆ ನವಿಲ ಸ್ನೇಹ ಸಂಬಂಧ

    ಕೋಳಿಗಳ ಜೊತೆ ನವಿಲ ಸ್ನೇಹ ಸಂಬಂಧ

    -ಕೋಳಿಗಳ ಜೊತೆ ನವಿಲಿಗೂ ಪೋಷಕನಾದ ಯುವ ರೈತ

    ಚಿಕ್ಕಬಳ್ಳಾಪುರ: ತೀವ್ರ ಬರದಿಂದ ಕಂಗೆಟ್ಟ ನವಿಲುಗಳು ಕಾಡಿನಲ್ಲಿ ಆಹಾರ ನೀರು ಸಿಗದೆ ಪರದಾಡುತ್ತಿದೆ. ಹೀಗೆ ಆಹಾರ ಅರಸಿ ಕಾಡಿನ ಸನಿಹದಲ್ಲಿದ್ದ ತೋಟವೊಂದರಲ್ಲಿ ನವಿಲೊಂದಕ್ಕೆ ಆಹಾರ ಸಿಕ್ಕ ಮೇಲೆ ಅಲ್ಲಯೇ ಠಿಕಾಣಿ ಹೂಡಿದೆ. ಅಲ್ಲದೆ ಕೋಳಿಗಳ ಜೊತೆ ನವಿಲ ಸ್ನೇಹ ಬಾಂಧವ್ಯಕ್ಕೆ ಎಲ್ಲರ ಮನ ಸೋತಿದೆ.

    ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಳಪಲ್ಲಿ ಗ್ರಾಮದ ನಿವಾಸಿ ಗೌತಮ್ ಅವರ ತೋಟದಲ್ಲಿ ಕೋಳಿಗಳ ಹಿಂಡಿನ ಮಧ್ಯೆ ನವಿಲಿನ ವೈಯಾರದ ಚಿತ್ತಾರ ನೋಡಿಗರನ್ನು ಬೇರಗಾಸಿಸುತ್ತದೆ. ಹೊಟ್ಟೆ ಪಾಡಿಗೆ ನಾಟಿ ಕೋಳಿಗಳನ್ನು ಸಾಕಿಕೊಂಡು, ಗೌತಮ್ ತನ್ನ ತೋಟದಲ್ಲಿರುವ ಮಾವಿನ ಮರದ ಕೆಳಗೆ ಕೋಳಿಗಳಿಗೆ ಆಹಾರ ನೀರನ್ನು ಇಡುತ್ತಾರೆ. ಆದರೆ ಆಹಾರ ಅರಸಿ ಬರುವ ನವಿಲುಗಳು ತೋಟಕ್ಕೆ ಬಂದು ಕೊಳಿಗಳ ಆಹಾರ ತಿಂದು ಹೋಗುತ್ತವೆ. ಹೀಗೆ ಆಕಸ್ಮಿಕವಾಗಿ ಆಹಾರ ಅರಸಿ ಬಂದ ನವಿಲೊಂದು ಈಗ ಗೌತಮ್ ತೋಟದಲ್ಲಿಯೇ ಠಿಕಾಣಿ ಹೂಡಿದೆ.

    ಇನ್ನೂ ಕೋಳಿಗಳ ಹಿಂಡಿನ ಮಧ್ಯೆ ಆಹಾರ ನೀರು ಸೇವಿಸುತ್ತಾ, ಗರಿಗೆದರಿ ನೃತ್ಯ ಮಾಡುವುದನ್ನ ನೋಡಿದರೆ ಕೋಳಿಗಳ ಹಿಂಡೇ ನಾಚುತ್ತಿವೆ. ಯುವ ರೈತನ ಕೊಳಿಗಳ ಜೊತೆ ಕಾಳು ತಿನ್ನುತ್ತಾ ಈ ನವಿಲು ಸ್ವಚ್ಚಂದವಾಗಿ ತನ್ನ ಪಾಡಿಗೆ ಯಾರ ಭಯಯೂ ಇಲ್ಲದೆ ಬದುಕು ನಡೆಸುತ್ತಿದೆ. ಕೋಳಿಗಳ ಮಧ್ಯೆ ಕಾಲಕಳೆದು ನವಿಲು ಹಾಗೂ ಕೋಳಿ ಮಧ್ಯೆ ಉತ್ತಮ ಸ್ನೇಹ ಬೆಳೆದಿದೆ.

    ಗೌತಮ್ ಅವರ ತೋಟದ ಸುತ್ತಮುತ್ತ ಬೆಟ್ಟ ಗುಡ್ಡಗಳಿದ್ದು, ಮಳೆಯಿಲ್ಲದೆ ಕಾಡು ಪ್ರಾಣಿಗಳಿಗೆ ನೀರು ಸಿಗದೇ ಒದ್ದಾಡುತ್ತಿವೆ. ಇನ್ನೂ ನವಿಲುಗಳಂತೂ ನೆರಳಿಗೆ ರೈತನ ಮಾವಿನ ಮರಗಳನ್ನೆ ಆಸರೆ ಮಾಡಿಕೊಂಡು ಕೋಳಿಗಳಿಗೆ ಹಾಕೊ ಕಾಳು-ನೀರು ಸೇವಿಸಿಕೊಂಡು ಸ್ವಚ್ಚಂದವಾಗಿ ನರ್ತಿಸುತ್ತವೆ. ನವಿಲುಗಳ ನರಳಾಟ ನೋಡಿದ ಕೋಳಿಗಳು ಸಹ ಪುಣ್ಯಕೋಟಿ ಕಥೆಯಂತೆ ನವಿಲುಗಳನ್ನು ತಮ್ಮವರಂತೆ ನೋಡಿಕೊಳ್ಳುತ್ತಿವೆ ಎಂದು ಯುವ ರೈತ ತಿಳಿಸಿದ್ದಾರೆ.

    ಮೊದಲೇ ತೀವ್ರ ಬರದಿಂದ ತತ್ತರಿಸಿರುವ ಕಾಡಿನ ಪ್ರಾಣಿಗಳು ಅದೆಲ್ಲಿ ಹೊದವೋ ಗೊತ್ತಿಲ್ಲ. ಆದರೆ ಅಳಿದುಳಿದ ನವಿಳುಗಳಂಥ ವೈಯಾರಿ ಪಕ್ಷಿಗಳು ಮಾತ್ರ ಅನಿವಾರ್ಯವಾಗಿ ಹೊಟ್ಟೆ ಪಾಡಿಗೆ ಕಾಡನಂಚಿನ ತೋಟಗಳಿಗೆ ಆಹಾರ ಅರಸಿ ಬರುತ್ತವೆ. ಅಲ್ಲದೆ ಗೌತಮ ಅವರ ತೋಟಕ್ಕೆ ಆಗಾಗ ಬರುವ ನವಿಲುಗಳು ಕೋಳಿಗಳ ಜೊತೆ ಹೊಂದಿಕೊಂಡು ಸ್ವಚ್ಚಂದವಾಗಿ ಬದುಕುತ್ತಿವೆ, ಇನ್ನೂ ತಮ್ಮ ಆಶ್ರಯ ಬಯಸಿ ಬಂದಿರುವ ನವಿಲುಗಳನ್ನು ಮುತುವರ್ಜಿಯಿಂದ ಯುವ ರೈತ ನೋಡಿಕೊಳ್ಳುತ್ತಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ರೈತನ ಹೊಸ ಪ್ಲಾನ್ – ಟೊಮೆಟೊ ತೋಟದಲ್ಲಿ ಕೇಸರಿ ಕಮಾಲ್!

    ರೈತನ ಹೊಸ ಪ್ಲಾನ್ – ಟೊಮೆಟೊ ತೋಟದಲ್ಲಿ ಕೇಸರಿ ಕಮಾಲ್!

    ಕೋಲಾರ: ಚುನಾವಣೆ ಬಳಿಕ ಬಿಸಾಡಿದ್ದ ಬಿಜೆಪಿ ಬಾವುಟಗಳನ್ನು ಟೊಮೆಟೊ ತೋಟದ ಸುತ್ತ ಕಟ್ಟಿ, ಬೆಳೆಗೆ ಹಾನಿ ಮಾಡುತ್ತಿದ್ದ ಪಕ್ಷಿಗಳ ನಿಯಂತ್ರಣ ಮಾಡುವ ವಿಭಿನ್ನ ಪ್ರಯತ್ನಕ್ಕೆ ಜಿಲ್ಲೆಯ ರೈತರೊಬ್ಬರು ಕೈ ಹಾಕಿದ್ದಾರೆ.

    ಸಾಮಾನ್ಯವಾಗಿ ರೈತರು ತಾವು ಬೆಳೆದ ಬೆಳೆಗಳನ್ನ ಕಾಪಾಡಿಕೊಳ್ಳಲು ಇನ್ನಿಲ್ಲದ ಕಸರತ್ತುಗಳನ್ನ ಮಾಡುತ್ತಾರೆ. ಪ್ರಮುಖವಾಗಿ ಹಳೆ ಬಟ್ಟೆ, ಸೀರೆಗಳನ್ನ ಬೆಳೆಗಳ ಸುತ್ತ ಕಟ್ಟುವುದು, ಬಿಯರ್ ಬಾಟಲಿಗೆ ಕಲ್ಲು ಕಟ್ಟಿ ಶಬ್ದ ಮಾಡುವುದು, ಬೊಂಬೆ ನೇತಾಕುವ ಕೆಲಸ ಮಾಡುತ್ತಾರೆ. ಆದರೆ ಕೋಲಾರ ತಾಲ್ಲೂಕಿನ ನರಸಾಪುರ ಬಳಿ ರೈತ ಮುರಗೇಶ್ ಎಲೆಕ್ಷನ್ ಮುಗಿದ ನಂತರ ಸಿಕ್ಕ ಬಿಜೆಪಿ ಬಾವುಟಗಳನ್ನ ತೋಟಕ್ಕೆ ಅಳವಡಿಸಿಕೊಳ್ಳುವ ಮೂಲಕ ಬೆಳೆಗೆ ಕಾಟಕೊಡುತ್ತಿದ್ದ ಪಕ್ಷಿಗಳ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

    ಪಕ್ಷದ ಸಭೆ ಸಮಾರಂಭ ಅಥವಾ ಗಣ್ಯರು ಆಗಮಿಸಿದ ವೇಳೆ ಹೀಗೆ ಬಾವುಟಗಳನ್ನ ಅಳವಡಿಸಿ ಕಾರ್ಯಕರ್ತರು ಸ್ವಾಗತ ಮಾಡುತ್ತಾರೆ. ಆದರೆ ಈ ರೈತ ತನ್ನ ಟೊಮೆಟೊ ತೋಟವನ್ನ ಬಿಜೆಪಿ ಮಯ ಮಾಡಿಕೊಂಡು ಬೆಳೆ ಕಾಪಾಡಿಕೊಳ್ಳುತ್ತಿದ್ದಾರೆ.

    ಈ ತೋಟವನ್ನು ಒಂದು ಕ್ಷಣ ನೋಡಿದ ಜನರು ರೈತ ಬಿಜೆಪಿಯ ಭಾರೀ ಅಭಿಮಾನಿ ಇರಬೇಕು ಅದಕ್ಕೆ ತೋಟಕ್ಕೆ ಪಕ್ಷದ ಬಾವುಟಗಳನ್ನ ಕಟ್ಟಿಕೊಂಡಿದ್ದಾನೆ ಅಂದುಕೊಳ್ಳುತ್ತಾರೆ. ಆದರೆ ಇದು ಪ್ರಾಣಿ ಪಕ್ಷಿಗಳ ಹಾವಳಿ ನಿಯಂತ್ರಿಸಲು ಮಾಡಿದ ಪ್ಲಾನ್ ಎಂದು ತಿಳಿದ ಬಳಿಕ ಆಶ್ಚರ್ಯ ಪಡುತ್ತಿದ್ದಾರೆ.

    ಸದ್ಯ ಇದನ್ನು ನೋಡಿದ ಸ್ಥಳೀಯ ರೈತರು,”ವಾಟ್ ಅನ್ ಐಡಿಯಾ ಫಾರ್ಮರ್ ಜೀ” ಎನ್ನುತ್ತಿದ್ದಾರೆ. ಚುನಾವಣೆಗಳಲ್ಲಿ ಕೋಟ್ಯಂತರ ರೂಪಾಯಿ ವ್ಯಯ ಮಾಡಿ, ಗೆದ್ದ ಬಳಿಕ ರೈತರಿಗಾಗಿ ಯಾವ ಪಕ್ಷದ ಯಾವ ಅಭ್ಯರ್ಥಿ ಕೆಲಸ ಮಾಡುತ್ತಾರೋ ಗೊತ್ತಿಲ್ಲ. ಆದರೆ ಚುನಾವಣೆ ಬಳಿಕ ವ್ಯರ್ಥವಾಗಿ ಬಿದ್ದಿದ್ದ ಬಾವುಟ ಮಾತ್ರ ರೈತನ ಬೆಳೆ ರಕ್ಷಣೆಗೆ ಉಪಯೋಗವಾಗಿದೆ.