Tag: Farhan Akhtar

  • ರಣ್‌ವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಮುಂದೂಡಿದ ಫರ್ಹಾನ್ ಅಖ್ತರ್

    ರಣ್‌ವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಮುಂದೂಡಿದ ಫರ್ಹಾನ್ ಅಖ್ತರ್

    ಣ್‌ವೀರ್ ಸಿಂಗ್ (Ranveer Singh) ಮತ್ತು ಕಿಯಾರಾ (Kiara Advani) ನಟನೆಯ ‘ಡಾನ್ 3’ (Don 3) ಚಿತ್ರೀಕರಣವನ್ನು ಡೈರೆಕ್ಟರ್ ಫರ್ಹಾನ್ ಅಖ್ತರ್ ಮುಂದೂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ‘ಡಾನ್ 3’ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಚಿತ್ರತಂಡ ಸೇರಿಕೊಂಡ ಅಮೆರಿಕದ ನಟ

    ನಟ ಕಮ್ ನಿರ್ದೇಶಕ ಫರ್ಹಾನ್ ಅಖ್ತರ್ ಡೈರೆಕ್ಷನ್ ಸಿನಿಮಾ ‘ಡಾನ್ 3’ ಇದೇ ಆಗಸ್ಟ್‌ನಿಂದ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದಿನ ಮೇ ಅಥವಾ ಜೂನ್‌ನಿಂದ ಶೂಟಿಂಗ್ ಶುರು ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ:ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಅಧಿಕೃತಗೊಳಿಸಿದ ಚುನಾವಣಾ ಆಯೋಗ

     

    View this post on Instagram

     

    A post shared by Farhan Akhtar (@faroutakhtar)

    ಆ ಕಡೆ ಆದಿತ್ಯಾ ಧರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ರಣ್‌ವೀರ್ ಬ್ಯುಸಿಯಾಗಿದ್ರೆ, ಇತ್ತ ಕಿಯಾರಾ ‘ವಾರ್ 2’ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರ ಡೇಟ್ಸ್ ಬ್ಯುಸಿಯಿರುವ ಹಿನ್ನೆಲೆ ತಾವು ನಟಿಸಲು ಒಪ್ಪಿಕೊಂಡಿದ್ದ ಸಿನಿಮಾಗೆ ಫರ್ಹಾನ್ ಗ್ರೀನ್ ಕೊಟ್ಟಿದ್ದಾರೆ. ‘120 ಬಹದ್ದೂರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಕುರಿತು ನಿರ್ದೇಶಕ ಅಧಿಕೃತ ಮಾಹಿತಿ ಕೂಡ ನೀಡಿದ್ದಾರೆ.

    ಇನ್ನೂ ‘ಡಾನ್ 3’ ಚಿತ್ರವನ್ನು ಮುಂದಿನ ವರ್ಷ ಮೇಯಿಂದ ಶೂಟಿಂಗ್ ಶುರು ಮಾಡಲು ತಂಡ ನಿರ್ಧರಿಸಿದೆ. ಅಷ್ಟರಲ್ಲಿ ಫರ್ಹಾನ್, ರಣ್‌ವೀರ್, ಕಿಯಾರಾ (Kiara Advani) ಪ್ರಸ್ತುತ ನಟಿಸುತ್ತಿರುವ ಸಿನಿಮಾಗಳ ಚಿತ್ರೀಕರಣ ಮುಗಿಸಿಕೊಡಬೇಕಿದೆ.

  • Don 3: ಯಾವಾಗ ಶುರುವಾಗಲಿದೆ ರಣ್‌ವೀರ್ ಸಿಂಗ್, ಕಿಯಾರಾ ಸಿನಿಮಾ?

    Don 3: ಯಾವಾಗ ಶುರುವಾಗಲಿದೆ ರಣ್‌ವೀರ್ ಸಿಂಗ್, ಕಿಯಾರಾ ಸಿನಿಮಾ?

    ಬಾಲಿವುಡ್ ನಟ ರಣ್‌ವೀರ್ ಸಿಂಗ್- ಕಿಯಾರಾ ಅಡ್ವಾಣಿ (Kiara Advani) ಜೋಡಿಯಾಗಿ ಬರುತ್ತಿದ್ದಾರೆ. ಡಾನ್-3 ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾದ್ರೆ ಇಬ್ಬರೂ ತೆರೆಯ ಮೇಲೆ ರೊಮ್ಯಾನ್ಸ್ ಮಾಡೋದನ್ನು ನೋಡೋದು ಯಾವಾಗ? ಅದಕ್ಕೆ ಮುಹೂರ್ತ ಕೂಡ ಫಿಕ್ಸ್‌ ಆಗಿದೆ.

    ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್-3’ ಚಿತ್ರದಲ್ಲಿ ರಣ್‌ವೀರ್ ಸಿಂಗ್‌ಗೆ (Ranveer Singh) ಕಿಯಾರಾ ನಾಯಕಿಯಾಗಿದ್ದಾರೆ. ಹೆಸರಿಗೆ ಮಾತ್ರ ‘ಡಾನ್-3’ ಆದರೆ ಸಖತ್ ಆ್ಯಕ್ಷನ್, ಲವ್ ಸ್ಟೋರಿ, ಎಮೋಷನ್ಸ್ ಎಲ್ಲವೂ ಈ ಸಿನಿಮಾದಲ್ಲಿ ಇರಲಿದೆ. ಹೊಸ ಬಗೆಯ ಕಥೆಯನ್ನೇ ಫರ್ಹಾನ್‌ ರೆಡಿ ಮಾಡಿದ್ದಾರೆ.

    ಸಂದರ್ಶನವೊಂದರಲ್ಲಿ ನಟ ಕಮ್ ನಿರ್ದೇಶಕ ಫರ್ಹಾನ್ ‘ಡಾನ್ 3’ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷ ಜುಲೈನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಮತ್ತೆ ಪತಿ ಜೊತೆ ಒಂದಾಗುವ ಸೂಚನೆ ನೀಡಿದ ಆಲಿಯಾ ಸಿದ್ದಿಕಿ

    ಈಗಾಗಲೇ ಶಾರುಖ್ ಖಾನ್ (Sharukh Khan) ನಟಿಸಿರುವ ‘ಡಾನ್’ ಸರಣಿ ಸಿನಿಮಾಗಳು ಪ್ರೇಕ್ಷಕರಿಗೆ ಮೆಚ್ಚುಗೆಯಾಗಿತ್ತು. ಡಾನ್ ಪಾರ್ಟ್ 3ನಲ್ಲಿ ರಣ್‌ವೀರ್ ಸಿಂಗ್ ನಟಿಸುತ್ತಿರುವ ಕಾರಣ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ರಣ್‌ವೀರ್‌ಗೆ ಈ ಚಿತ್ರದ ಮೂಲಕ ಬ್ರೇಕ್‌ ಸಿಗುತ್ತಾ? ಕಾದುನೋಡಬೇಕಿದೆ.

  • ಪ್ರಿಯಾಂಕಾ ಚೋಪ್ರಾ ಕೈಬಿಟ್ಟ ಚಿತ್ರದಲ್ಲಿ ನಟಿಸಲು ನೋ ಎಂದ ಅನುಷ್ಕಾ ಶರ್ಮಾ

    ಪ್ರಿಯಾಂಕಾ ಚೋಪ್ರಾ ಕೈಬಿಟ್ಟ ಚಿತ್ರದಲ್ಲಿ ನಟಿಸಲು ನೋ ಎಂದ ಅನುಷ್ಕಾ ಶರ್ಮಾ

    ಬಾಲಿವುಡ್ ಹೀರೋ ಫರ್ಹಾನ್ ಅಖ್ತರ್ (Farhan Akhtar) ಅವರು ನಟನೆ- ನಿರ್ದೇಶನ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಅವರ ಮುಂಬರುವ ನಿರ್ದೇಶನದ ಸಿನಿಮಾ ‘ಜೀ ಲೇ ಜರಾ’ (Jee Le Zara) ಚಿತ್ರಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟಗಳು ಎದುರಾಗಿತ್ತಿದೆ. ಫರ್ಹಾನ್ ನಿರ್ದೇಶನದ ಜೀ ಲೇ ಜರಾ ಸಿನಿಮಾ ಪ್ರಿಯಾಂಕಾ ಚೋಪ್ರಾ ಹೊರನಡೆದಿದ್ದಾರೆ. ಪಿಗ್ಗಿ ರಿಜೆಕ್ಟ್ ಮಾಡಿದ ಸಿನಿಮಾ ನಟಿಸಲು ಅನುಷ್ಕಾ ಶಮಾ ನೋ ಎಂದಿದ್ದಾರೆ.

    ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ವೈವಾಹಿಕ ಜೀವನ, ಹಾಲಿವುಡ್ ಸಿನಿಮಾ ಅಂತಾ ಅಮೆರಿಕದಲ್ಲೇ ಸೆಟಲ್ ಆಗಿದ್ದಾರೆ. ಕೊರೊನಾಗೂ ಮುನ್ನ ಒಪ್ಪಿಕೊಂಡಿದ್ದ ಫರ್ಹಾನ್ ಅಖ್ತರ್ ಸಿನಿಮಾದಿಂದ ಈಗ ಹೊರ ನಡೆದಿದ್ದಾರೆ. ಸಿಟಾಡೆಲ್ ಸಕ್ಸಸ್ ಬಳಿಕ ಹಾಲಿವುಡ್ ಸಿಟಾಡೆಲ್ 2ಗೆ ತಯಾರಿ ನಡೆಯುತ್ತಿದೆ. ಸಿಟಾಡೆಲ್ 2 ಮತ್ತು ‘ಜೀ ಲೇ ಜರಾ’ ಸಿನಿಮಾ ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ಬಾಲಿವುಡ್ ಚಿತ್ರದಿಂದ ಪ್ರಿಯಾಂಕಾ ಹೊರಬಂದಿದ್ದಾರೆ. ಜೀ ಲೇ ಜರಾ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿತ್ತು. ಆಲಿಯಾ ಭಟ್ (Alia Bhatt), ಕತ್ರಿಕಾ ಕೈಫ್ (Katrina Kaif) ಮತ್ತು ಪ್ರಿಯಾಂಕಾ ಫೈನಲ್ ಆಗಿದ್ರು. ಈಗ ಪ್ರಿಯಾಂಕಾ ರೋಲ್‌ಗೆ ಸೂಕ್ತ ನಟಿಯ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ:ಪಡ್ಡೆಹುಡುಗರ ನಿದ್ದೆಗೆಡಿಸಿದ ‘ನಾಗಿಣಿ 2’ ಖ್ಯಾತಿಯ ನಮ್ರತಾ

    ಈ ಬಂಪಲ್ ಆಫರ್ ಅನುಷ್ಕಾಗೆ ಅರಸಿ ಬಂದಿದೆ. ಆದರೆ ಅವರು ನೋ ಎಂದಿದ್ದಾರೆ. ಅನುಷ್ಕಾ ಶರ್ಮಾ (Anushka Sharma) ಅವರು ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರುತ್ತಿಲ್ಲ. ವೃತ್ತಿಜೀವನ ಮತ್ತು ಕುಟುಂಬಕ್ಕೆ ಅವರು ಸಮಯ ಹೊಂದಿಸುತ್ತಿದ್ದಾರೆ. ಹೆಣ್ಣು ಮಗುವಿನ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. ಕೆಲವು ಜಾಹೀರಾತುಗಳಲ್ಲೂ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಜೀ ಲೇ ಜರಾ ಸಿನಿಮಾಗೆ ಕಾಲ್‌ಶೀಟ್ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಅದನ್ನು ಹೊರತುಪಡಿಸಿದರೆ ಈ ಆಫರ್ ತಿರಸ್ಕರಿಸಲು ಬೇರೆ ಯಾವುದೇ ಕಾರಣ ಇಲ್ಲ ಎಂದು ಹೇಳಲಾಗುತ್ತಿದೆ.

    ಪ್ರಿಯಾಂಕಾ ಚೋಪ್ರಾ ಅವರು ‘ಜೀ ಲೇ ಜರಾ’ ಸಿನಿಮಾದಿಂದ ಹೊರನಡೆದಿದ್ದಕಾಗಿ ನಿರ್ದೇಶಕ ಫರ್ಹಾನ್ ಅಖ್ತರ್ ಅವರಿಗೆ ತಲೆಬಿಸಿ ಶುರುವಾಗಿದೆ. ಪ್ರಿಯಾಂಕಾ ಚೋಪ್ರಾ ಬದಲಿಗೆ ಬೇರೆ ಯಾವ ನಟಿಯನ್ನು ಆಯ್ಕೆ ಮಾಡಬೇಕು ಎಂಬುದು ದೊಡ್ಡ ಪ್ರಶ್ನೆ ಆಗಿದೆ. ಇದೇ ರೀತಿ ವಿಳಂಬವಾದರೆ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಕೂಡ ಈ ಸಿನಿಮಾದಿಂದ ಹೊರನಡೆಯಬಹುದು. ಆಗ ಫರ್ಹಾನ್ ಅಖ್ತರ್ ಅವರು ಸಂಪೂರ್ಣವಾಗಿ ಈ ಸಿನಿಮಾವನ್ನು ಕೈ ಬಿಡಬೇಕಾಗುತ್ತದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಡಾನ್ 3’ ಸಿನಿಮಾದಿಂದ ಹೊರಬಂದ ಶಾರುಖ್ ಖಾನ್

    ‘ಡಾನ್ 3’ ಸಿನಿಮಾದಿಂದ ಹೊರಬಂದ ಶಾರುಖ್ ಖಾನ್

    ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ವೃತ್ತಿ ಬದುಕಿಗೆ ಸಾಥ್ ನೀಡಿದ ಚಿತ್ರದ ಸರಣಿಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಶಾರುಖ್ ಖಾನ್ ಈ ಹಿಂದೆ ಡಾನ್, ಡಾನ್ 2 ಸರಣಿಯಲ್ಲಿ ನಟಿಸಿದ್ದರು. ಇದೀಗ ಡಾನ್ 3 ಸಿನಿಮಾ ಮಾಡಲು ನಿರ್ದೇಶಕ ಫರ್ಹಾನ್ ಅಖ್ತರ್ ಸಿದ್ಧತೆ ಮಾಡಿಕೊಂಡಿದ್ದು, ಈ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.

    ಇತ್ತೀಚೆಗಷ್ಟೇ ರಿತೇಶ್ ಮಾತನಾಡುತ್ತಾ ತಮ್ಮ ಎಕ್ಸೆಲ್ ಎಂಟರ್ ಟೇನ್ಮೆಂಟ್ ನಿರ್ಮಾಣ ಸಂಸ್ಥೆಯಿಂದ ಡಾನ್ 3 ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಫರ್ಹಾನ್ ಈಗಾಗಲೇ ಆ ಸಿನಿಮಾದ ತಯಾರಿ ಕೆಲಸದಲ್ಲಿ ಬ್ಯುಸಿಯಾಗಿರುವುದಾಗಿಯೂ ತಿಳಿಸಿದ್ದರು. ಸದ್ಯ ಸಿಗುತ್ತಿರುವ ಮಾಹಿತಿಯ ಪ್ರಕಾರ ಶಾರುಖ್ ಖಾನ್ ಈ ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅತೀ ಶೀಘ್ರದಲ್ಲೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ದಿ ಕೇರಳ ಸ್ಟೋರಿ

    ಡಾನ್ 3 ಸಿನಿಮಾದ ಕಥೆಯು ಶಾರುಖ್ ಖಾನ್ ಗೆ ಇಷ್ಟವಾಗಿಲ್ಲವಂತೆ. ಅಲ್ಲದೇ, ಮತ್ತದೆ ಗಿಮಿಕ್ ಮಾಡುವಂತಹ ಸಿನಿಮಾದಲ್ಲಿ ತಾವು ನಟಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರಂತೆ. ಜೊತೆಗೆ ಸಂಭಾವನೆ ವಿಚಾರದಲ್ಲೂ ಕಿರಿಕ್ ಆಗಿದೆ ಎಂದು ಹೇಳಲಾಗುತ್ತಿದೆ. ಡಾನ್ 3 ಸಿನಿಮಾ ಮಾಡಿದರೆ ಲಾಭದಲ್ಲಿ ಪರ್ಸಂಟೇಜ್ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್ ಕಪಲ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್ ಕಪಲ್

    ಮುಂಬೈ: ಡೇಟಿಂಗ್ ವಿಚಾರದಲ್ಲಿ ಸುದ್ದಿಯಾಗುತ್ತಿದ್ದ, ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮುಂಬೈನಲ್ಲಿರುವ ಫರಾನ್ ಅಖ್ತರ್ ಮನೆಯಲ್ಲೇ ಮದುವೆ ಸಮಾರಂಭ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ರಿಯಾ ಚಕ್ರವರ್ತಿ ಮತ್ತು ಅಮೃತಾ ಅರೋರಾ ಸೇರಿದಂತೆ ಬಾಲಿವುಡ್‍ನ ಅನೇಕ ತಾರೆಯರು ಭಾಗಿಯಾಗಿದ್ದರು. ನಿನ್ನೆ ಮೆಹೆಂದಿ ಜೊತೆಗೆ ಸಂಗೀತ್ ಕಾರ್ಯಕ್ರಮ ಕೂಡ ನೆರವೇರಿದೆ. ಈ ಸಮಾರಂಭಕ್ಕೆ ಶಿಬಾನಿ, ಹಳದಿ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಈ ವೇಳೆ ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಡಾನ್ಸ್ ಮಾಡುತ್ತಾ ಸಖತ್ ಎಂಜಾಯ್ ಮಾಡಿದ್ದರು. ಇದನ್ನು ಓದಿ : ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು

    ನಟ, ನಿರ್ದೇಶಕ ಫರ್ಹಾನ್ ಅಖ್ತರ್‍ಗೆ ಇದು ಎರಡನೇ ಮದುವೆ. ಶಿಬಾನಿಗೂ ಮೊದಲು ಫರ್ಹಾನ್ ಅಧುನಾ ಬಬಾನಿ ಜೊತೆಗೆ ಮದುವೆ ಆಗಿದ್ದರು. 2000ರಲ್ಲಿ ಫರಾನ್ ಮೊದಲ ಮದುವೆ ಆಗಿದ್ದರು. ನಂತರ ಅವರು 2017ರಲ್ಲಿ ವಿಚ್ಛೇದನ ಪಡೆದು ದೂರ ಆಗಿದ್ದಾರೆ. ನಂತರ 2018 ರಿಂದ ಶಿಬಾನಿ ಜೊತೆಗೆ ಪ್ರೀತಿಯಲ್ಲಿ ಫರ್ಹಾನ್ ಇಂದು ಮದುವೆಯಾಗಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಸಿಂಬಾ ಚಿತ್ರದ ಆಂಖ್ ಮೇರಿ ಹಾಡು, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ಮೆಹೆಂದಿ ಲಗಾ ಕೆ ರಖನಾ ಹಾಡಿಗೆ ಅನುಷಾ ದಾಂಡೇಕರ್ ಮತ್ತು ರಿಯಾ ಚಕ್ರವರ್ತಿ ಅವರು ಸೇರಿದಂತೆ ಎಲ್ಲರೂ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗಿದೆ. ಕೊರೊನಾ ಕಾರಣಕ್ಕೆ ಮದುವೆ ಕಾರ್ಯಕ್ರಮಗಳನ್ನು ಕೂಡ ಕಡಿಮೆ ಜನರ ಸಮ್ಮುಖದಲ್ಲಿ ನಡೆದಿದೆ. ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರಷ್ಟೇ ಭಾಗಿಯಾಗಿದ್ದಾರೆ.

  • ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್

    ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್

    ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ – ವಿಕ್ಕಿ ಕೌಶಲ್ ಮತ್ತು ಮೌನಿ ರಾಯ್ – ಸೂರಜ್ ನಂಬಿಯಾರ್ ನಂತರ ಇದೀಗ ಮತ್ತೊಂದು ಸೆಲೆಬ್ರಿಟಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗಿದೆ.

    Farhan Akhtar

    ಇದೇ ಫೆಬ್ರವರಿ 21ರಂದು ಫರ್ಹಾನ್ ಅಖ್ತರ್ ಮತ್ತು ಅವರ ಗೆಳತಿ ಶಿಬಾನಿ ದಾಂಡೇಕರ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಕ್ಯೂಟ್ ಜೋಡಿ ನಾಲ್ಕು ವರ್ಷಗಳಿಂದ ರಿಲೇಶನ್ ಶಿಪ್‍ನಲ್ಲಿದ್ದರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಅವರಿಬ್ಬರ ವಿವಾಹ ಸರಳವಾಗಿ ಕುಟುಂಬದವರ ಸಮ್ಮುಖದಲ್ಲಿ ನೆರವೇರಲಿದೆ ಎಂದು ಫರ್ಹಾನ್ ಅಖ್ತರ್ ಅವರ ತಂದೆ ಜಾವೇದ್ ಅಖ್ತರ್ ತಿಳಿಸಿದ್ದಾರೆ. ಇದನ್ನೂ ಓದಿ:  ‘ನಿಮ್ಮ ಶಾಯರಿ ಏಕೆ ಕೆಟ್ಟದಾಗಿದೆ’ – ಟ್ರೋಲಿಗರ ಪ್ರಶ್ನೆಗೆ ಸಾರಾ ಖಡಕ್ ಉತ್ತರ

     

    View this post on Instagram

     

    A post shared by Farhan Akhtar (@faroutakhtar)

    ಈ ತಿಂಗಳು ನಡೆಯಲಿರುವ ಮದುವೆಯ ದಿನಾಂಕವನ್ನು ಜಾವೇದ್ ಅಖ್ತರ್ ಅಧಿಕೃತವಾಗಿ ತಿಳಿಸಿದ್ದು, ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಈ ತಿಂಗಳು ವಿವಾಹವಾಗಲು ನಿರ್ಧರಿಸಿದ್ದಾರೆ. ಈ ಕುರಿತಂತೆ ಸಂದರ್ಶನದಲ್ಲಿ ಹೌದು ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದೆ. ಅದನ್ನು ಮದುವೆಯ ಯೋಜಕರು ನೋಡಿಕೊಳ್ಳುತ್ತಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಫರ್ಹಾನ್ ಮತ್ತು ಶಿಬಾನಿ ವಿವಾಹಕ್ಕೆ ಕೇವಲ ಆಪ್ತರು ಹಾಗೂ ಸ್ನೇಹಿತರಿಗಷ್ಟೇ ಆಹ್ವಾನಿಸಲಾಗಿದೆ ಎಂದಿದ್ದಾರೆ.

    Farhan Akhtar

    ಇದೇ ವೇಳೆ ಶಿಬಾನಿ ಒಳ್ಳೆಯ ಹುಡುಗಿ, ನಮ್ಮ ಇಡೀ ಕುಟುಂಬ ಅವಳನ್ನು ಇಷ್ಟಪಡುತ್ತದೆ. ಮುಖ್ಯವಾಗಿ ಫರ್ಹಾನ್‍ರನ್ನು ಅವಳು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ಹಾಡಿ ಹೊಗಳಿದ್ದಾರೆ. ಜನವರಿ 17ರಂದು ಜಾವೇದ್ ಅಖ್ತರ್ ಅವರ ಹುಟ್ಟುಹಬ್ಬದ ಫೋಟೋವೊಂದನ್ನು ಫರ್ಹಾನ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಶಿಬಾನಿ ಕೂಡ ಇರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: 38 ಕೋಟಿ ಮೌಲ್ಯದ ಆಸ್ತಿಯನ್ನು ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ ರಾಜ್ ಕುಂದ್ರಾ

  • ಲೀಕ್ ಆಯ್ತು ಫರ್ಹಾನ್-ಪ್ರಿಯಾಂಕ ಬೆಡ್‍ರೂಮ್ ಹಾಟ್ ಕ್ಲಿಪ್

    ಲೀಕ್ ಆಯ್ತು ಫರ್ಹಾನ್-ಪ್ರಿಯಾಂಕ ಬೆಡ್‍ರೂಮ್ ಹಾಟ್ ಕ್ಲಿಪ್

    ಮುಂಬೈ: ಬಾಲಿವುಡ್ ದೇಸಿ ಗರ್ಲ್, ನಿಕ್ ಮಡದಿ ಪ್ರಿಯಾಂಕ ಚೋಪ್ರಾ ನಟನೆಯ ‘ದ ಸ್ಕೈ ಇಸ್ ಪಿಂಕ್’ ಇದೇ ವಾರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜೊತೆಯಾಗಿ ನಟಿಸಿರುವ ಫರ್ಹಾನ್ ಅಖ್ತರ್ ನಟಿಸಿದ್ದು, ಇಬ್ಬರ ರೊಮ್ಯಾಂಟಿಕ್ ಹಾಟ್ ಕ್ಲಿಪ್ ಲೀಕ್ ಆಗಿದೆ.

    ಲೀಕ್ ಆಗಿರುವ ವಿಡಿಯೋ ಸಿನಿಮಾ ಶೂಟಿಂಗ್ ವೇಳೆಯದ್ದು ಎನ್ನಲಾಗಿದ್ದು, ಚಿತ್ರದಲ್ಲಿ ಈ ಕ್ಲಿಪ್ ಕಟ್ ಮಾಡಲಾಗಿದ ಎಂದು ವರದಿಯಾಗಿದೆ. ಬೆಡ್ ರೂಮಿನೊಳಗೆ ಜೋಡಿ ಒಳಉಡುಪಿನಲ್ಲಿರುವ ವಿಡಿಯೋ ಇದಾಗಿದ್ದು, ಪ್ರಿಯಾಂಕ ನೀವು ತಪ್ಪಾಗಿ ನನ್ನ ಒಳ ಉಡುಪು ಧರಿಸಿದ್ದೀರಿ ಎಂದು ಫರ್ಹಾನ್ ಗೆ ಹೇಳುತ್ತಾರೆ. ಈ ವಿಡಿಯೋವನ್ನು ಚಿತ್ರದ ಪ್ರೋಮೋ ಸಹ ಎಂದು ಹೇಳಲಾಗುತ್ತಿದೆ.

    ಮದುವೆ ಬಳಿಕ ಪ್ರಿಯಾಂಕ ನಟನೆಯ ಮೊದಲ ಚಿತ್ರ ಇದಾಗಿದ್ದು, ನೈಜ ಘಟನೆಯಾಧರಿತ ಸಿನಿಮಾವಾಗಿದೆ. ದ ಸ್ಕೈ ಇಸ್ ಪಿಂಕ್ ಸಿನಿಮಾ ವಿಭಿನ್ನ ಕಥೆ ಎಂದು ಬಿಡುಗಡೆಗೊಂಡಿರುವ ಟ್ರೈಲರ್ ಮತ್ತು ಹಾಡುಗಳು ಹೇಳುತ್ತಿವೆ. ಮದುವೆಗೂ ಮುನ್ನ ಪತಿಯ ಮನೆಯ ಬರುವ ಪ್ರಿಯಾಂಕ, ಸಂಸಾರದಲ್ಲಿ ವೈಮನಸ್ಸಿನಿಂದ ಪತಿಯಿಂದ ದೂರವಾಗ್ತಾಳೆ. ಮತ್ತೆ ಮಗಳಿಗಾಗಿ ಯಾವ ಕಾರಣಕ್ಕಾಗಿ ಜೋಡಿ ಒಂದಾಗುತ್ತೆ ಸಣ್ಣ ಪ್ರಶ್ನೆಯೊಂದು ಟ್ರೈಲರ್ ಹುಟ್ಟುಹಾಕಿದೆ. ಈಗಾಗಲೇ ಬಣ್ಣದ ಲೋಕಕ್ಕೆ ವಿದಾಯ ಹೇಳಿರುವ ದಂಗಲ್ ಗರ್ಲ್ ಖ್ಯಾತಿಯ ಯುವ ನಟಿ, ಝೈರಾ ವಾಸೀಂ ನಟನೆಯ ಕೊನೆಯ ಚಿತ್ರ ಇದಾಗಿದೆ.

    ದ ಸ್ಕೈ ಇಸ್ ಪಿಂಕ್ ಹಲವು ಹೊಸತನದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಇದೇ ಅಕ್ಟೋಬರ್ 11ರಂದು ಚಿತ್ರಮಂದಿರಗಳಿಗೆ ಬರಲಿದೆ. ಈಗ ಹಾಟ್ ಕ್ಲಿಪ್ ಮೂಲಕ ದ ಸ್ಕೈ ಇಸ್ ಪಿಂಕ್ ನೋಡಲು ಪಡ್ಡೆ ಹೈಕಳು ತುದಿಗಾಲಿನಲ್ಲಿ ನಿಂತಿದ್ದಾರೆ.

    https://www.instagram.com/p/B3TXU8bJ-lW/

  • ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಆಕ್ರೋಶ ಹೊರ ಹಾಕಿದ ಬಾಲಿವುಡ್ ಗಣ್ಯರು

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಆಕ್ರೋಶ ಹೊರ ಹಾಕಿದ ಬಾಲಿವುಡ್ ಗಣ್ಯರು

    ಮುಂಬೈ: ಮಂಗಳವಾರ ರಾತ್ರಿ ಮನೆಯ ಬಾಗಿಲು ತೆಗೆಯುತ್ತಿದ್ದಾಗ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದ ಘಟನೆ ಇಡೀ ದೇಶ ಬೆಚ್ಚಿಬೀಳುವಂತೆ ಆಗಿದೆ. ಇದಕ್ಕೆ ಬಾಲಿವುಡ್ ಮಂದಿ ಪ್ರತಿಕ್ರಿಯಿಸಿ ಟ್ವಿಟ್ಟರ್ ನಲ್ಲಿ ಖಂಡಿಸಿ ಕಂಬನಿ ಮಿಡಿದಿದ್ದಾರೆ.

    ಬಾಲಿವುಡ್ ನ ಸೋನಮ್ ಕಪೂರ್, ಫರಾನ್ ಅಕ್ತರ್, ಶಬಾನಾ ಅಜ್ಮಿ, ಶೇಖರ್ ಕಪೂರ್, ಮಹೇಶ್ ಭಟ್ ಹಾಗೂ ವಿಶಾಲ್ ದದ್ಲಾನಿ ಟ್ವಿಟ್ಟರ್ ನಲ್ಲಿ ಹತ್ಯೆಯನ್ನು ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ಹೆಸರಲ್ಲಿ ಈ ಘಟನೆಗಳನ್ನು ನಡೆಸುತ್ತಿದ್ದಾರೆ. ಗೌರಿ ಲಂಕೇಶ್ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಸಾವಿಗೆ ನ್ಯಾಯ ಸಿಗಲಿ ಎಂದು ಬಾಲಿವುಡ್ ಪ್ರತಿಕ್ರಿಸಿದ್ದಾರೆ.

    ಗೌರಿ ಲಂಕೇಶ್ ಹತ್ಯೆಯ ಕುರಿತು ಕೆಲವು ಟ್ವೀಟ್ ಗಳು ಇಲ್ಲಿವೆ