Tag: Farewell

  • ಮೋದಿಗೆ ಬಂದೋಬಸ್ತ್ ನೀಡಿದ್ದ ಏಂಜಲ್‍ಗೆ ಅದ್ದೂರಿ ಸೆಂಡಾಫ್

    ಮೋದಿಗೆ ಬಂದೋಬಸ್ತ್ ನೀಡಿದ್ದ ಏಂಜಲ್‍ಗೆ ಅದ್ದೂರಿ ಸೆಂಡಾಫ್

    ಕೋಲಾರ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ವಾನಕ್ಕೆ (Police Dog) ಕೆಜಿಎಫ್ ಠಾಣೆ ಪೊಲೀಸ್ (KGF Police Station) ಅಧಿಕಾರಿಗಳು ಸನ್ಮಾನಿಸಿ ಅದ್ದೂರಿಯಾಗಿ ಸೋಮವಾರ ಬೀಳ್ಕೊಡಿಗೆ (Farewell) ನೀಡಿದ್ದಾರೆ.

    ಕೊನೆಯದಾಗಿ ಭಾನುವಾರ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (Narendra Modi) ಕಾರ್ಯಕ್ರಮದಲ್ಲಿ ಏಂಜಲ್ ಭದ್ರತಾ ಕಾರ್ಯನಿರ್ವಹಿಸಿತ್ತು. ಅಲ್ಲದೆ ಹಲವಾರು ಗಣ್ಯ ವ್ಯಕ್ತಿಗಳು ಜಿಲ್ಲೆಗೆ ಭೇಟಿ ನೀಡಿದ್ದಾಗ ಏಂಜಲ್ ಕಾರ್ಯ ನಿರ್ವಹಿಸಿತ್ತು. ಪೊಲೀಸ್ ಇಲಾಖೆಯ ಏಂಜಲ್‍ಗೆ ಈಗ ಕೆಜಿಎಫ್ ಎಸ್ಪಿ ಧರಣಿದೇವಿಯವರು ಅದ್ದೂರಿಯಾಗಿ ಸನ್ಮಾನ ಮಾಡಿ ಬೀಳ್ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಪಬ್‍ಜಿಗೆ ಬ್ರೇಕ್ ಹಾಕಿದ್ದ ತಾಯಿಯ ಕೊಲೆ – ಅಪ್ರಾಪ್ತ ಆರೋಪಿಗೆ ಜಾಮೀನು

    2015ರಲ್ಲಿ ಸೇವೆಗೆ ಸೇರಿದ್ದ ಏಂಜಲ್, ಲ್ಯಾಬ್ರಡರ್ ತಳಿಯ ಹೆಣ್ಣು ಶ್ವಾನ. ಬಾಂಬ್ ಸೇರಿದಂತೆ ಸ್ಫೋಟಕ ಪತ್ತೆಯಲ್ಲಿ ಪರಿಣಿತಿ ಹೊಂದಿತ್ತು. ಕಳೆದ ಎಂಟು ವರ್ಷಗಳ ಕಾಲ ಪೊಲೀಸ್ ಶ್ವಾನದಳದಲ್ಲಿ ಸೇವೆ ಸಲ್ಲಿಸಿತ್ತು.

    ಭಾರತದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಉಪರಾಷ್ಟ್ರಪತಿ, ಕೇಂದ್ರದ ಮಂತ್ರಿಗಳು, ಗಣ್ಯ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸಿದ್ದ ಏಂಜಲ್ ಅತ್ಯುನ್ನತ ಸೇವೆ ಸಲ್ಲಿಸಿ ಇಲಾಖೆಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

  • ಬೀಳ್ಕೊಡುಗೆ ಸಮಾರಂಭದಲ್ಲಿ ಭಾವುಕರಾದ ಬ್ರೆಂಡನ್ ಮೆಕಲಮ್

    ಬೀಳ್ಕೊಡುಗೆ ಸಮಾರಂಭದಲ್ಲಿ ಭಾವುಕರಾದ ಬ್ರೆಂಡನ್ ಮೆಕಲಮ್

    ಮುಂಬೈ: ಬೀಳ್ಕೊಡುಗೆ ಸಮಾರಂಭದ ಸಂದರ್ಭದಲ್ಲಿ ಕೆಕೆಆರ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಉದ್ದೇಶಿಸಿ ವೀಡಿಯೋವೊಂದರಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.

    ಕಳೆದ 3 ವರ್ಷಗಳಲ್ಲಿ ಕೆಕೆಆರ್‌ ನಂತಹ ಯಶಸ್ವಿ ಫ್ರಾಂಚೈಸಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿರುವುದು ನನ್ನ ಅದೃಷ್ಟವಾಗಿದೆ. ಮೊದಲನೆಯದಾಗಿ, ವೆಂಕಟೇಶ್ ನಿಮಗೆ ಧನ್ಯವಾದಗಳು ನಿಮ್ಮಿಂದ ಸಾಕಷ್ಟು ವಿಷಯಗಳನ್ನು ಕಲಿತ್ತಿದ್ದೇನೆ ಎಂದು ಕೆಕೆಆರ್ ತಂಡದ ಸಿಇಓ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಧೋನಿಗೆ ಚೆನ್ನೈ ಪರ ಕೊನೆಯ ಪಂದ್ಯ? – #DefinitelyNot ಟ್ರೆಂಡಿಂಗ್

    ತಂಡದ ಆಟಗಾರರನೆಲ್ಲಾ ನಾನು ಪ್ರೀತಿಸುತ್ತೇನೆ. ನಿಮ್ಮೆಲ್ಲರ ಪ್ರಯತ್ನವನ್ನು ನಾನು ಇಷ್ಟಪಟ್ಟೆ. ನಿಮಗೆ ಸಹಾಯ ಮಾಡಲು ನೀವು ನನ್ನನ್ನು ನಂಬಿದ್ದೀರಿ ಎಂದು ನಾನು ಭಾವಿಸುತ್ತೇನೆ. ಏನೇ ಆಗಲಿ, ನನ್ನ ಮೊಬೈಲ್ ಸಂಖ್ಯೆಯೂ ಇಂತಿದೆ. ಹಾಗಾಗಿ ಯಾವುದೇ ಹಂತದಲ್ಲಿ ನನಗೆ ಕರೆ ಮಾಡಬಹುದು ಎಂದರು. ತಂಡದ ನಾಯಕನಿಗೆ ಆಲ್ ದಿ ವೆರಿ ಬೆಸ್ಟ್ ಹೇಳಿದರು. ಇದನ್ನೂ ಓದಿ: Thailand Open – ನಂ.1 ಆಟಗಾರ್ತಿ ಯಮಗುಚಿಯನ್ನು ಸೋಲಿಸಿ ಸೆಮಿಗೆ ಸಿಂಧು ಎಂಟ್ರಿ

    ಕೆಕೆಆರ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ 3 ವರ್ಷಗಳ ಅನುಭವವನ್ನು ಹೊಂದಿರುವ ಅವರು, ಜೂನ್‍ನಲ್ಲಿ ಇಂಗ್ಲೆಂಡ್ ಪುರುಷರ ಟೆಸ್ಟ್ ತಂಡದ ಮುಖ್ಯ ತರಬೇತುದಾರರಾಗಿ ಸೇರಲು ಸಿದ್ಧರಾಗಿದ್ದಾರೆ. ಈ ಹಿಂದೆ ಕೆಕೆಆರ್ ತಂಡದ ಪ್ರಮುಖ ಬ್ಯಾಟ್ಸ್‌ಮ್ಯಾನ್ ಆಗಿ ಸ್ಮರಣೀಯ ಆಟವನ್ನು ಆಡಿದ್ದ ಮೆಕಲಮ್, 2019ರಿಂದ ಕೆಕೆಆರ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು.

    IPL DC VS KKR 5

    ಈಗಾಗಲೇ ಕೆಕೆಆರ್ ತಂಡವು ಐಪಿಎಲ್ 2022ರ ಪ್ಲೇ ಆಫ್ ಹಂತದಿಂದ ಹೊರಬಿದ್ದಿದ್ದು, ತನ್ನ ಚರಣದ ಎಲ್ಲಾ ಪಂದ್ಯಗಳನ್ನು ಆಡಿ 14 ಪಂದ್ಯಗಳಲ್ಲಿ 6 ಜಯ 8 ಸೋಲುಗಳನ್ನು ಅನುಭವಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

  • ವೀಡಿಯೋ- 11 ವರ್ಷ ಕಾರ್ಯನಿರ್ವಹಿಸಿದ್ದ ಶ್ವಾನಕ್ಕೆ ಸಿಬ್ಬಂದಿಯಿಂದ ಬೀಳ್ಕೊಡುಗೆ

    ವೀಡಿಯೋ- 11 ವರ್ಷ ಕಾರ್ಯನಿರ್ವಹಿಸಿದ್ದ ಶ್ವಾನಕ್ಕೆ ಸಿಬ್ಬಂದಿಯಿಂದ ಬೀಳ್ಕೊಡುಗೆ

    ಮುಂಬೈ: ನಾಸಿಕ್ ಸಿಟಿ ಪೊಲೀಸ್ ಪಡೆ ಮತ್ತು ಬಾಂಬ್ ಪತ್ತೆದಳದಲ್ಲಿ 11 ವರ್ಷ ಕಾರ್ಯನಿರ್ವಹಿಸಿದ್ದ ಸ್ಪೈಕ್ ಹೆಸರಿನ ಶ್ವಾನವೊಂದಕ್ಕೆ ಬೀಳ್ಕೊಟ್ಟ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಕರ್ತವ್ಯದಿಂದ ನಿವೃತ್ತಿ ಹೊಂದಿ ಶ್ವಾನವನ್ನು ಪೊಲೀಸ್ ವ್ಯಾನ್‍ನ ಬಾನೆಟ್‍ನಲ್ಲಿ ಕೂರಿಸಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ವಾಹನವನ್ನು ಬಲೂನ್ ಮತ್ತು ಹೂವಿನಿಂದ ಶೃಂಗಾರ ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕವಾಗಿ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.

    ಸ್ಪೈಕ್ ಕೂಡ ಶಾಂತವಾಗಿ ಕುಳಿತು ಮೆರವಣಿಗೆಯಲ್ಲಿ ಸಾಗಿದೆ. ವೃತ್ತಿಜೀವನದ ಹಂತವನ್ನು ಮುಗಿಸಿ ನಿವೃತ್ತಿ ಜೀವನದಲ್ಲಿ ಕೆಲ ಸಮಯ ವಿಶ್ರಾಂತಿ ಪಡೆಯಲಿದೆ. ಕಷ್ಟಪಟ್ಟು ನಿಯತ್ತಿನಿಂದ ಕೆಲಸ ಮಾಡಿರುವ ಶ್ವಾನದ ಕಾರ್ಯಕ್ಕೆ ಸಿಬ್ಬಂದಿ ಮೆಚ್ಚುಗೆಯ ಮಾತುಗಳನ್ನಾಡಿ ಕೇಕ್ ಕತ್ತರಿಸಿ ಬೀಳ್ಕೊಟ್ಟು ಸಂಭ್ರಮಿಸಿದ್ದಾರೆ.

    ಗೋಲ್ಡನ್ ಲ್ಯಾಬ್ರಡಾರ್ 2010 ರಲ್ಲಿ ನಾಸಿಕ್ ಬಾಂಬ್ ಡಿಟೆಕ್ಷನ್ ಡಾಗ್ ಸ್ಕ್ವಾಡ್‍ಗೆ ಸೇರಿತ್ತು. ಗುಪ್ತ ಪೆಟ್ರೋಲ್ ಬಾಂಬ್‍ಗಳನ್ನು ಪತ್ತೆ ಹಚ್ಚುವಲ್ಲಿ ಈ ಶ್ವಾನವು ಅತ್ಯಂತ ಪರಿಣತಿಯನ್ನು ಹೊಂದಿತ್ತು.

  • ನೀನು ಉತ್ತಮ ವಿದಾಯಕ್ಕೆ ಅರ್ಹನಾಗಿದ್ದೆ, ಲವ್ ಯೂ ಸಹೋದರ- ರೋಹಿತ್ ಶರ್ಮಾ

    ನೀನು ಉತ್ತಮ ವಿದಾಯಕ್ಕೆ ಅರ್ಹನಾಗಿದ್ದೆ, ಲವ್ ಯೂ ಸಹೋದರ- ರೋಹಿತ್ ಶರ್ಮಾ

    ಬೆಂಗಳೂರು: ಸಿಕ್ಸರ್ ಕಿಂಗ್, ಟಿ-20 ಕ್ರಿಕೆಟ್‍ನಲ್ಲಿ ಕೇವಲ 12 ಎಸೆತದಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದ ಎಡಗೈ ಸ್ಫೋಟಕ ಆಟಗಾರ ಯುವರಾಜ್ ಸಿಂಗ್ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಾರೆ. ಯುವರಾಜ್ ಸಿಂಗ್ ಅವರ ವಿದಾಯಕ್ಕೆ ಟೀಂ ಇಂಡಿಯದ ಉಪನಾಯಕ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ

    ಇಂಗ್ಲೆಂಡಿನಲ್ಲಿ ವಿಶ್ವಕಪ್ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ 2011ರ ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದ ಯುವರಾಜ್ ಸೋಮವಾರ ಮುಂಬೈ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ಸಹೋದರನ ವಿದಾಯಕ್ಕೆ ಮನನೊಂದ ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದು ನೀನು ಉತ್ತಮ ವಿದಾಯಕ್ಕೆ ಅರ್ಹನಾಗಿದ್ದೆ ಎಂದು ಹೇಳಿದ್ದಾರೆ.

    ಯುವಿ ವಿದಾಯದ ಕುರಿತು ಟ್ವೀಟ್ ಮಾಡಿರುವ ರೋಹಿತ್ ಶರ್ಮಾ “ನಿನಗೆ ಗೊತ್ತಿಲ್ಲ ನಿನಗೆ ಏನ್ ಸಿಕ್ಕಿತ್ತು ಆದು ಕಳೆದು ಹೋಗಿದೆ. ಲವ್ ಯೂ ಸಹೋದರ, ನೀನು ಉತ್ತಮ ವಿದಾಯಕ್ಕೆ ಅರ್ಹನಾಗಿದ್ದೆ” ಎಂದು ಟ್ವೀಟ್ ಮಾಡಿದ್ದಾರೆ.

    17 ವರ್ಷಗಳ ಕಾಲ ಭಾರತದ ಕ್ರಿಕೆಟ್ ತಂಡಕ್ಕೆ ತನ್ನದೇ ಆದ ಉತ್ತಮ ಸೇವೆ ಸಲ್ಲಿಸಿದ್ದಾರೆ. ಈ ರೀತಿಯ ಒಳ್ಳೆಯ ಆಟಗಾರನ್ನು ವಿದಾಯ ಪಂದ್ಯ ನೀಡದೆ ಅವರಿಗೆ ವಿದಾಯ ಹೇಳುವ ಸಮಯ ಬಂದಿದೆ ಅವರು ಉತ್ತಮ ವಿದಾಯ ಪಂದ್ಯಕ್ಕೆ ಅರ್ಹರು ಎಂದು ಹೇಳಿದ್ದಾರೆ.

    2019 ರ ವಿಶ್ವಕಪ್‍ನಲ್ಲಿ ಅಡಬೇಕು ಎಂದು ಆಸೆ ಇದ್ದ ಯುವರಾಜ್ ಸಿಂಗ್ ಅವರು, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿ.ವಿ.ಎಸ್ ಲಕ್ಷ್ಮಣ್ ಮತ್ತು ಗೌತಮ್ ಗಂಭೀರ್ ಅವರ ರೀತಿಯಲ್ಲೇ ವಿದಾಯ ಪಂದ್ಯವನ್ನು ಆಡದೇ ತನ್ನ 17 ವರ್ಷದ ಕ್ರಿಕೆಟ್ ಜೀವನಕ್ಕೆ ಸೋಮವಾರ ವಿದಾಯ ಹೇಳಿದರು.

     

    2000 ರಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇದುವರೆಗೂ 304 ಏಕದಿನ ಪಂದ್ಯಗಳಲ್ಲಿ 8,701 ರನ್ ಸಿಡಿಸಿದ್ದಾರೆ. 2017 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದರು. 2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು, 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007 ರಲ್ಲಿ ಮೊದಲ ಟಿ20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದಾರೆ. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ.

  • ನಾಡಿನಿಂದ ಕಾಡಿನತ್ತ ಹೊರಟಿತು ದಸರಾ ಆನೆಗಳು

    ನಾಡಿನಿಂದ ಕಾಡಿನತ್ತ ಹೊರಟಿತು ದಸರಾ ಆನೆಗಳು

    ಮೈಸೂರು: ದಸರಾ ಹಬ್ಬಕ್ಕಾಗಿ ಕಾಡಿನಿಂದ ಮೈಸೂರು ಅರಮನೆಗೆ ಬಂದಿದ್ದ, ಗಜಪಡೆಗೆ ಪೂಜೆ ಸಲ್ಲಿಸಿ ನಾಡಿನಿಂದ ಬೀಳ್ಕೊಡಲಾಯಿತು.

    407 ನೇ ದಸರಾ ಹಬ್ಬಕ್ಕಾಗಿ ಒಂದು ತಿಂಗಳ ಹಿಂದೆ ಕಾಡಿನಿಂದ ಮೈಸೂರು ಅರಮನೆಗೆ ಗಜಪಡೆಯನ್ನು ಕರೆಸಲಾಗಿತ್ತು. ನಂತರ ಯಶಸ್ವಿಯಾಗಿ ವಿಜಯದಶಮಿಯ ಮೆರವಣಿಗೆ ಮುಗಿಸಿದ ಬಳಿಕ ಗಜಪಡೆಯನ್ನು ಮಂಗಳವಾರ ಕಾಡಿಗೆ ಕಳುಹಿಸಲಾಯಿತು.

    ಗಜಪಡೆಗೆ ಮೈಸೂರಿನ ಅರಮನೆ ಆವರಣದಲ್ಲಿ ಪೂಜೆ ಸಲ್ಲಿಸಿ ಆನೆಗಳನ್ನು ಒಂದೊಂದಾಗಿ ಲಾರಿಗೆ ಹತ್ತಿಸಿ, ಆ ಆನೆಗಳ ಕ್ಯಾಂಪ್ ಗೆ ಕಳುಹಿಸಲಾಯಿತು.

    ನಂತರ 15 ಆನೆಗಳ ಮಾವುತರು ಮತ್ತು ಕಾವಾಡಿಗಳಿಗೆ ಜಿಲ್ಲಾಡಳಿತದಿಂದ ಗೌರವಧನ ನೀಡಿ ಅಭಿನಂದನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಶಾಸಕ ಎಂ.ಕೆ. ಸೋಮಶೇಖರ್, ಅರಣ್ಯ ಇಲಾಖೆ ಆಧಿಕಾರಿಗಳು ಉಪಸ್ಥಿತರಿದ್ದರು.