Tag: Fare Hike

  • ಮೆಟ್ರೋ ಪ್ರಯಾಣಿಕರಿಗೆ ಶಾಕ್- ನಾಳೆಯಿಂದಲೇ ದರ ಏರಿಕೆ ಜಾರಿ – ಎಷ್ಟು ಕಿ.ಮೀಗೆ ಎಷ್ಟು ದರ?

    ಮೆಟ್ರೋ ಪ್ರಯಾಣಿಕರಿಗೆ ಶಾಕ್- ನಾಳೆಯಿಂದಲೇ ದರ ಏರಿಕೆ ಜಾರಿ – ಎಷ್ಟು ಕಿ.ಮೀಗೆ ಎಷ್ಟು ದರ?

    ಬೆಂಗಳೂರು: ಬಸ್‌ ದರ ಏರಿಕೆ ಬೆನ್ನಲ್ಲೇ ನಮ್ಮ ಮೆಟ್ರೋ (Namma Metro) ದರವೂ ಏರಿಕೆಯಾಗಿದೆ. ಬೆಂಗಳೂರು ಮೆಟ್ರೊ ದರ 46% ವರೆಗೂ ಏರಿಕೆಯಾಗಿದ್ದು ಸಾಧ್ಯತೆಯಿದ್ದು ಭಾನುವಾರದಿಂದಲೇ ಜಾರಿಯಾಗಿದೆ.

    ಮೆಟ್ರೋ ಪ್ರಯಾಣ ದರ ಗರಿಷ್ಠ 90 ರೂ., (30. ಕಿ.ಮೀ) ಕನಿಷ್ಠ 10 ರೂ. (0-2 ಕಿ.ಮೀ) ಏರಿಕೆಯಾಗಿದೆ. ಭಾನುವಾರ ಹಾಗೂ ರಾಷ್ಟ್ರೀಯ ರಜಾ ದಿನಗಳಲ್ಲಿ ಏಕರೂಪ ಸ್ಮಾರ್ಟ್ ಕಾರ್ಡಿಗೆ 10% ರಿಯಾಯಿತಿ ಪ್ರಕಟಿಸಲಾಗಿದೆ. ಸ್ಮಾರ್ಟ್ ಕಾರ್ಡಿನಲ್ಲಿ ಕನಿಷ್ಠ 90 ರೂಪಾಯಿ ಬ್ಯಾಲೆನ್ಸ್ ಕಡ್ಡಾಯ ಮಾಡಲಾಗಿದೆ.ಮೆಟ್ರೋ ದರ ಪರಿಷ್ಕರಣೆ ಪ್ರಕ್ರಿಯೆ ಈ ಸಂಬಂಧ ಬಿಎಂಆರ್‌ಸಿಎಲ್ ಅಧಿಕಾರಿಗಳು ಮತ್ತು ದರ ಏರಿಕೆ ಸಮಿತಿಯ ಸದಸ್ಯರ ಜೊತೆ ಹೈವೊಲ್ಟೇಜ್ ಸಭೆ ನಡೆದಿತ್ತು.

    ಕಳೆದ 8 ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಸಿಂಗಾಪುರ, ಹಾಂಕಾಂಗ್, ದೆಹಲಿಗೆ ತೆರಳಿ ಅಲ್ಲಿನ ಮೆಟ್ರೋ ದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ವರದಿ ಸಿದ್ಧಪಡಿಸಿದೆ.

    2017 ರಲ್ಲಿ 10% -15%ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ರೈಲು ಮುಂದಿನ ಐದು ವರ್ಷದಲ್ಲಿ 220 ಕಿಮೀ ನಷ್ಟು ವಿಸ್ತರಣೆಯಾಗಲಿದೆ. ಮೆಟ್ರೋ ಕಾಮಗಾರಿಗಾಗಿ ವಿವಿಧ ಬ್ಯಾಂಕ್, ಏಜೆನ್ಸಿಗಳಿಗೆ ಪಾವತಿಸಬೇಕಾದ ಸಾಲದ ಮೇಲಿನ ಬಡ್ಡಿ, ಪ್ರಸ್ತುತ ರೈಲುಗಳ ಕಾರ್ಯಾಚರಣೆ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮತ್ತಿತರ ವಿವಿಧ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ 15%-20% ರಷ್ಟು ದರ ಏರಿಕೆ ಅನಿವಾರ್ಯ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದರು.

    ಪ್ರಸ್ತುತ, ದರಗಳು ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಕನಿಷ್ಠ ದರ ಈ 10, ಗರಿಷ್ಠ ದರ 60 ರೂಪಾಯಿವರೆಗೆ ಇದೆ. ಜತೆಗೆ, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಕ್ಯೂಆರ್ ಕೋಡ್ ಟಿಕೆಟ್ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಸಹ ತನ್ನ ವರದಿ ನೀಡಿದೆ. ದರ ಎಷ್ಟು ಹೆಚ್ಚಿಸಬೇಕು, ಸಾಧಕ, ಬಾಧಕಗಳೇನು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿತ್ತು.

    ಸಮಿತಿ ನೀಡಿರುವ ವರದಿಯಲ್ಲಿ ಏನಿದೆ?
    – ಮೆಟ್ರೋ ಟಿಕೆಟ್ ದರವನ್ನ 40 ರಿಂದ 45% ವರೆಗೆ ಏರಿಕೆ ಮಾಡಬಹುದು.
    – ರಜೆ ದಿನ ಹಾಗೂ ನಾನ್ ಪೀಕ್ ಅವರ್ ನಲ್ಲಿ ಪ್ರಯಾಣ ದರ ಇಳಿಕೆ ಮಾಡಿದರೆ ಉತ್ತಮ.
    – ಸಾರ್ವಜನಿಕರ ರಜಾ ದಿನಗಳಲ್ಲಿ ರಿಯಾಯಿತಿ ನೀಡಬೇಕು.
    – ನಾನ್ ಪೀಕ್ ಅವರ್‌ಗಳಲ್ಲಿ ಡಿಸ್ಕೌಂಟ್ ನೀಡಬೇಕು.
    – ವಿಶೇಷ ದಿನಗಳಲ್ಲಿ ಡಿಸ್ಕೌಂಟ್ ನೀಡಲು ಸೂಚನೆ.
    – ಪ್ರತಿನಿತ್ಯ ಬೆಳಗ್ಗೆ 8 ಗಂಟೆಯೊಳಗೆ ಹಾಗೂ ಮಧ್ಯಾಹ್ನದಿಂದ ಸಂಜೆ 4 ಗಂಟೆಯವರಿಗೆ ಡಿಸ್ಕೌಂಟ್‌ಗೆ ಶಿಫಾರಸು
    – ಪ್ರಯಾಣಿರನ್ನು ಸೆಳೆಯಲು ರಿಯಾಯಿತಿ ಪ್ರಯಾಣಕ್ಕೆ ಪ್ಲಾನ್

  • ಮೆಟ್ರೋ ಪ್ರಯಾಣಿಕರಿಗೆ ಶಾಕ್- ಮೆಟ್ರೋ ದರ 46% ಏರಿಕೆ, ನಾಳೆಯಿಂದಲೇ ಜಾರಿ ಸಾಧ್ಯತೆ

    ಮೆಟ್ರೋ ಪ್ರಯಾಣಿಕರಿಗೆ ಶಾಕ್- ಮೆಟ್ರೋ ದರ 46% ಏರಿಕೆ, ನಾಳೆಯಿಂದಲೇ ಜಾರಿ ಸಾಧ್ಯತೆ

    ಬೆಂಗಳೂರು: ಬಸ್‌ ದರ ಏರಿಕೆ ಬೆನ್ನಲ್ಲೇ ನಮ್ಮ ಮೆಟ್ರೋ (Namma Metro) ದರವೂ ಏರಿಕೆಯಾಗಲಿದೆ. ಬೆಂಗಳೂರು ಮೆಟ್ರೊ ದರ 46% ವರೆಗೂ ಏರಿಕೆಯಾಗಲಿದ್ದು, ಭಾನುವಾರದಿಂದಲೇ ಅಧಿಕೃತವಾಗಿ ಜಾರಿಯಾಗುವ ಸಾಧ್ಯತೆಯಿದೆ.

    ಗರಿಷ್ಠ 90 ರೂ., ಕನಿಷ್ಠ 10 ರೂ. ಏರಿಕೆಯಾಗಲಿದೆಂದು ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷನ್‌(BMRCL) ಮೂಲಗಳು ಪಬ್ಲಿಕ್‌ ಟಿವಿ ಮಾಹಿತಿ ನೀಡಿವೆ. ಕೆಲವೇ ಗಂಟೆಗಳಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆಯಿದೆ.

    ಮೆಟ್ರೋ ದರ ಪರಿಷ್ಕರಣೆ ಪ್ರಕ್ರಿಯೆ ಈ ಸಂಬಂಧ ಬಿಎಂಆರ್‌ಸಿಎಲ್ ಅಧಿಕಾರಿಗಳು ಮತ್ತು ದರ ಏರಿಕೆ ಸಮಿತಿಯ ಸದಸ್ಯರ ಜೊತೆ ಕೆಲ ದಿನಗಳ ಹಿಂದೆ ಹೈವೊಲ್ಟೇಜ್ ಸಭೆ ನಡೆದಿತ್ತು.

    ಕಳೆದ 8 ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಸಿಂಗಾಪುರ, ಹಾಂಕಾಂಗ್, ದೆಹಲಿಗೆ ತೆರಳಿ ಅಲ್ಲಿನ ಮೆಟ್ರೋ ದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ವರದಿ ಸಿದ್ಧಪಡಿಸಿದೆ.

    2017 ರಲ್ಲಿ 10% -15%ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ರೈಲು ಮುಂದಿನ ಐದು ವರ್ಷದಲ್ಲಿ 220 ಕಿಮೀ ನಷ್ಟು ವಿಸ್ತರಣೆಯಾಗಲಿದೆ. ಮೆಟ್ರೋ ಕಾಮಗಾರಿಗಾಗಿ ವಿವಿಧ ಬ್ಯಾಂಕ್, ಏಜೆನ್ಸಿಗಳಿಗೆ ಪಾವತಿಸಬೇಕಾದ ಸಾಲದ ಮೇಲಿನ ಬಡ್ಡಿ, ಪ್ರಸ್ತುತ ರೈಲುಗಳ ಕಾರ್ಯಾಚರಣೆ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮತ್ತಿತರ ವಿವಿಧ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ 15%-20% ರಷ್ಟು ದರ ಏರಿಕೆ ಅನಿವಾರ್ಯ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದರು.

    ಪ್ರಸ್ತುತ, ದರಗಳು ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಕನಿಷ್ಠ ದರ ಈ 10, ಗರಿಷ್ಠ ದರ 60 ರೂಪಾಯಿವರೆಗೆ ಇದೆ. ಜತೆಗೆ, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಕ್ಯೂಆರ್ ಕೋಡ್ ಟಿಕೆಟ್ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಸಹ ತನ್ನ ವರದಿ ನೀಡಿದೆ. ದರ ಎಷ್ಟು ಹೆಚ್ಚಿಸಬೇಕು, ಸಾಧಕ, ಬಾಧಕಗಳೇನು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿತ್ತು.

    ಸಮಿತಿ ನೀಡಿರುವ ವರದಿಯಲ್ಲಿ ಏನಿದೆ?
    – ಮೆಟ್ರೋ ಟಿಕೆಟ್ ದರವನ್ನ 40 ರಿಂದ 45% ವರೆಗೆ ಏರಿಕೆ ಮಾಡಬಹುದು.
    – ರಜೆ ದಿನ ಹಾಗೂ ನಾನ್ ಪೀಕ್ ಅವರ್ ನಲ್ಲಿ ಪ್ರಯಾಣ ದರ ಇಳಿಕೆ ಮಾಡಿದರೆ ಉತ್ತಮ.
    – ಸಾರ್ವಜನಿಕರ ರಜಾ ದಿನಗಳಲ್ಲಿ ರಿಯಾಯಿತಿ ನೀಡಬೇಕು.
    – ನಾನ್ ಪೀಕ್ ಅವರ್‌ಗಳಲ್ಲಿ ಡಿಸ್ಕೌಂಟ್ ನೀಡಬೇಕು.
    – ವಿಶೇಷ ದಿನಗಳಲ್ಲಿ ಡಿಸ್ಕೌಂಟ್ ನೀಡಲು ಸೂಚನೆ.
    – ಪ್ರತಿನಿತ್ಯ ಬೆಳಗ್ಗೆ 8 ಗಂಟೆಯೊಳಗೆ ಹಾಗೂ ಮಧ್ಯಾಹ್ನದಿಂದ ಸಂಜೆ 4 ಗಂಟೆಯವರಿಗೆ ಡಿಸ್ಕೌಂಟ್‌ಗೆ ಶಿಫಾರಸು
    – ಪ್ರಯಾಣಿರನ್ನು ಸೆಳೆಯಲು ರಿಯಾಯಿತಿ ಪ್ರಯಾಣಕ್ಕೆ ಪ್ಲಾನ್

  • ಪ್ರಯಾಣಿಕರಿಂದ ಸುಲಿಗೆ ಮಾಡುವ ಖಾಸಗಿ ವಾಹನಗಳಿಗೆ ಬ್ರೇಕ್ ಹಾಕಲು ಮುಂದಾದ ಸಾರಿಗೆ ಇಲಾಖೆ

    ಪ್ರಯಾಣಿಕರಿಂದ ಸುಲಿಗೆ ಮಾಡುವ ಖಾಸಗಿ ವಾಹನಗಳಿಗೆ ಬ್ರೇಕ್ ಹಾಕಲು ಮುಂದಾದ ಸಾರಿಗೆ ಇಲಾಖೆ

    ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಸಾರಿಗೆ ಬಳಿಕ ಜನರು ಹೆಚ್ಚಾಗಿ ಟ್ಯಾಕ್ಸಿ, ಆಟೋ, ಕ್ಯಾಬ್ ಎಂಬ ಆ್ಯಪ್ (APP) ಆಧಾರಿತ ಸೇವೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆ್ಯಪ್ ಆಧಾರಿತ ಸಾರಿಗೆ ಸಂಸ್ಥೆಗಳು (Private Vehicles) ಗ್ರಾಹಕರಿಂದ ದುಪ್ಪಟು ಹಣ ವಸೂಲಿ ಮಾಡುತ್ತಿದೆ ಎಂಬ ಆರೋಪವಿದೆ.

    ಪ್ರಯಾಣಿಕರು ಅಗತ್ಯಕ್ಕೋ, ಅನಿವಾರ್ಯತೆಗಾಗಿಯೋ ದುಪ್ಪಟ್ಟು ಹಣ ಕೊಡಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರು ಸಾರಿಗೆ ಇಲಾಖೆಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಕೊನೆಗೂ ಎಚ್ಚೆತ್ತಿರುವ ಸಾರಿಗೆ ಇಲಾಖೆ ಆಪರೇಷನ್ ಸಾರಿಗೆ ಶುರು ಮಾಡಿದೆ. ಖುದ್ದು ಸಾರ್ವಜನಿಕರು ದೂರು ಕೊಡಲು ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ. ಆ್ಯಪ್ ಆಧಾರಿತ ಟ್ಯಾಕ್ಸಿ ಕ್ಯಾಬ್ ಆಟೋಗಳು ಪ್ರಯಾಣಿಕರಿಗೆ ದುಬಾರಿ ದುಡ್ಡು ನೀಡುವಂತೆ ಡಿಮ್ಯಾಂಡ್ ಮಾಡಿದರೆ 9449863426 ಈ ಸಹಾಯವಾಣಿಗೆ ಕರೆ ಮಾಡಿ ದೂರು ಕೊಡಬಹುದು. ಈ ಮೂಲಕ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಲಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಇಂದು, ನಾಳೆ ಅಂತರರಾಜ್ಯ ಸಂಚಾರಕ್ಕೆ ಬದಲಿ ಮಾರ್ಗ ಬಳಸಿ

    ಹಬ್ಬಗಳ ಸಂದರ್ಭದಲ್ಲಿ ಜನರ ಲೂಟಿ ಮಾಡುತ್ತಿರುವ ಖಾಸಗಿ ಬಸ್‍ಗಳ ಬಗ್ಗೆ ಪಬ್ಲಿಕ್ ಟಿವಿ ಸತತ ವರದಿ ಬಿತ್ತರಿಸುತ್ತಲೇ ಇದೆ. ಇದರ ಬೆನ್ನಲ್ಲೇ ಅಲರ್ಟ್ ಆಗಿರುವ ಸಾರಿಗೆ ಇಲಾಖೆ 12 ತನಿಖಾ ತಂಡಗಳನ್ನು ನೇಮಿಸಿದೆ. ಈ ತಂಡ ಬಸ್‍ಗಳ ಟಿಕೆಟ್ ಬಗ್ಗೆ ಪರಿಶೀಲನೆ ನಡೆಸಲಿದ್ದು, ಪ್ರಯಾಣಿಕರು ಕೂಡ ನೇರವಾಗಿ ದೂರು ಕೊಡಬಹುದು ಎಂದು ಸಾರಿಗೆ ಇಲಾಖೆ ಹೇಳಿದೆ. ಇದನ್ನೂ ಓದಿ: ನಾನು ಕೃಷಿಕ ಎಂದಿದ್ದ ಡಿಕೆಶಿಗೆ ಶಾಕ್‌ ನೀಡಲು ಸಿಬಿಐ ತಯಾರಿ

    Live Tv
    [brid partner=56869869 player=32851 video=960834 autoplay=true]

  • ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ: ಶ್ರೀರಾಮುಲು

    ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ: ಶ್ರೀರಾಮುಲು

    ಬಳ್ಳಾರಿ: ಸದ್ಯಕ್ಕೆ ಬಸ್ ದರ ಏರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ

    ನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಮಾತನಾಡಿದ ಅವರು, ಸದ್ಯ ಇಂಧನ ಬೆಲೆ ಏರಿಕೆ ಗಮನದಲ್ಲಿದೆ. ಆದರೆ ಕೊರೊನಾ ಕಾರಣದಿಂದ ಜನರು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಯಾವುದೇ ರೀತಿಯ ಹೊರೆಯಾಗದಂತ ತೀರ್ಮಾನ ನಮ್ಮ ಸರಕಾರದ್ದು ಎಂದು ಅವರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಿಲ್ಲೆಗಳಲ್ಲಿ ಶಾಲೆ, ಕಾಲೇಜ್ ಆರಂಭಕ್ಕೆ ಗ್ರೀನ್‍ಸಿಗ್ನಲ್ – ಎಲ್ಲಿ ಓಪನ್? ಎಲ್ಲಿ ಕೋಸ್?

    ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಹಳೆ ವಾಹನ ಗುಜರಿ ನೀತಿ ತುಂಬಾ ಚೆನ್ನಾಗಿದೆ ಎಂದರು. ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ಸಂಸ್ಥೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರಿಂದ ಅವರನ್ನೇ ಗುರಿಯಾಗಿಸಿಕೊಂಡು ಬೇರೆ ಬೇರೆ ಕಡೆ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು ಅವರು ಪರಿಶೀಲನೆ ನಡೆಸಲಾಗುವುದು ಮತ್ತು ಅವರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.