Tag: Farangipete

  • ಫೈನಲ್ ಪರೀಕ್ಷೆಗೆ ಹೆದರಿ ವಿದ್ಯಾರ್ಥಿ ನಾಪತ್ತೆ – ವಿಚಾರಣೆ ವೇಳೆ ನಾಪತ್ತೆಯ ಅಸಲಿ ಕಾರಣ ಬಯಲು

    ಫೈನಲ್ ಪರೀಕ್ಷೆಗೆ ಹೆದರಿ ವಿದ್ಯಾರ್ಥಿ ನಾಪತ್ತೆ – ವಿಚಾರಣೆ ವೇಳೆ ನಾಪತ್ತೆಯ ಅಸಲಿ ಕಾರಣ ಬಯಲು

    – ಫರಂಗಿಪೇಟೆಯ ಅಪ್ರಾಪ್ತ ವಿದ್ಯಾರ್ಥಿ ನಾಪತ್ತೆ ಕೇಸ್

    ಮಂಗಳೂರು: ಫರಂಗಿಪೇಟೆಯ ಅಪ್ರಾಪ್ತ ವಿದ್ಯಾರ್ಥಿ ನಾಪತ್ತೆ ಪ್ರಕರಣದ ಅಸಲಿ ಕಾರಣ ಇದೀಗ ಬೆಳಕಿಗೆ ಬಂದಿದೆ. 12 ದಿನಗಳ ಬಳಿಕ ಶುಕ್ರವಾರ ವಿದ್ಯಾರ್ಥಿ ದಿಗಂತ್ ಉಡುಪಿಯ (Udupi) ಡಿ-ಮಾರ್ಟ್‌ನಲ್ಲಿ ಪತ್ತೆಯಾಗಿದ್ದ. ಫೈನಲ್ ಪರೀಕ್ಷೆಗೆ ಹೆದರಿ ಪರಾರಿಯಾಗಿರುವುದಾಗಿ ಬಾಲಕನೇ ತಿಳಿಸಿದ್ದಾನೆ.

    ದ್ವಿತೀಯ ಪಿಯುಸಿ ಫೈನಲ್ ಪರೀಕ್ಷೆಯ ಹಾಲ್ ಟಿಕೆಟ್ ತಂದ ಬಳಿಕವೇ ದಿಗಂತ್ ನಾಪತ್ತೆಯ ಪ್ಲ್ಯಾನ್‌ ಮಾಡಿದ್ದ. ಕಳೆದ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನೆಯಲ್ಲಿ ಬೈದಿದ್ದರು. ಹೀಗಾಗಿ, ಫೈನಲ್ ಎಕ್ಸಾಂನ ಭಯದಿಂದ ಪರಾರಿಯಾಗಿದ್ದ. ತನ್ನ ತಪ್ಪನ್ನ ಮರೆಮಾಚಲು ತಾಯಿ ಬಳಿ ನನ್ನನ್ನು ಯಾರೋ ಕಿಡ್ನ್ಯಾಪ್‌ ಮಾಡಿದ್ದರು ಎಂದಿದ್ದ. ಇದನ್ನೂ ಓದಿ: EXCLUSIVE: ರನ್ಯಾ ಕೇಸ್‌ಗೆ ಟ್ವಿಸ್ಟ್; ನಟಿ ಒಡೆತನದ ಕಂಪನಿಗೆ ಸರ್ಕಾರದಿಂದಲೇ 12 ಎಕರೆ ಜಮೀನು ಮಂಜೂರು!

    ಪರಾರಿಯಾಗಲು ಮಾಡಿದ ರೂಟ್ ಮ್ಯಾಪ್ ಪ್ಲ್ಯಾನ್‌ ಬಗ್ಗೆ ದಿಗಂತ್ ಬಾಯಿಬಿಟ್ಟದ್ದಾನೆ. ಫೆ.25ರಂದು ನಾಪತ್ತೆಯಾಗಿದ್ದ ದಿಗಂತ್ ಅಂದೇ ಬಸ್ಸಿನಲ್ಲಿ ಮೈಸೂರಿಗೆ ತೆರಳಿದ್ದ. ಅಲ್ಲಿಂದ ಬೆಂಗಳೂರಿಗೆ ಬಸ್ಸಿನಲ್ಲೇ ಹೋಗಿ 2 ದಿನ ಬೆಂಗಳೂರಿನಲ್ಲಿ ಸುತ್ತಾಡಿದ್ದ. ಬಳಿಕ ಕೈಯಲ್ಲಿ ಹಣ ಖಾಲಿಯಾದಾಗ ಬೆಂಗಳೂರು ಹೊರವಲಯದ ರೆಸಾರ್ಟ್‌ನಲ್ಲಿ ಕೆಲಸಕ್ಕೆ ಸೇರಿದ್ದ. ರೆಸಾರ್ಟ್‌ನಲ್ಲಿ 3 ದಿನಗಳ ಕಾಲ ಕೆಲಸ ಮಾಡಿ ಸಂಬಳ ಪಡೆದು ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡಿ, ಶಿವಮೊಗ್ಗದಿಂದ ಮತ್ತೆ ಮೈಸೂರಿಗೆ ಬಸ್ಸಿನಲ್ಲಿ ತೆರಳಿದ್ದ. ಶುಕ್ರವಾರ ರಾತ್ರಿ ಮೈಸೂರಿನಿಂದ ಮುರುಡೇಶ್ವರದ ರೈಲಿನಲ್ಲಿ ತೆರಳಿದ್ದ. ರೈಲು ಫರಂಗಿಪೇಟೆ ಬಳಿ ಹೋಗುವಾಗ ತನ್ನ ಮನೆ ಸಮೀಪ ಪೊಲೀಸರು ಹುಡುಕಾಟ ನಡೆಸುತ್ತಿದ್ದುದನ್ನು ನೋಡಿದ್ದ. ಬಳಿಕ ಉಡುಪಿಗೆ ಬರುತ್ತಿದ್ದಂತೆ ರೈಲಿನಿಂದ ಇಳಿದು ಡಿ-ಮಾರ್ಟ್‌ಗೆ ತೆರಳಿದ್ದ. ಡಿ-ಮಾರ್ಟ್ ಸಿಬ್ಬಂದಿ ಆತನನ್ನ ಗಮನಿಸಿ ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಭಾರತ VS ನ್ಯೂಜಿಲೆಂಡ್‌ ‘ಫೈನಲ್‌’ ಫೈಟ್‌ – ಟೀಂ ಇಂಡಿಯಾ ಗೆಲುವಿಗೆ ಸ್ಯಾಂಡಲ್‌ವುಡ್‌ ತಾರೆಯರ ವಿಶ್‌

    ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯತೀಶ್.ಎನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಾಲಕನ ನಾಪತ್ತೆ ಬಳಿಕ ಬಂಟ್ವಾಳ ಡಿವೈಎಸ್ಪಿ ನೇತೃತ್ವದಲ್ಲಿ 7 ತಂಡ ತನಿಖೆ ನಡೆಸಿತ್ತು. 10 ದಿನಗಳ ಕಾಲ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದೆವು. ಕಾಣೆಯಾಗಿದ್ದ ದಿಗಂತ್ ಶುಕ್ರವಾರ ಉಡುಪಿಯಲ್ಲಿ ಪತ್ತೆಯಾಗಿದ್ದ. ಆತನನ್ನು ವಿಚಾರಣೆ ನಡೆಸಿದಾಗ ಸಾಕಷ್ಟು ಮಾಹಿತಿ ಹೊರ ಬಂದಿದೆ. ಮಾ.3 ರಿಂದ ದ್ವಿತೀಯ ಪಿಯುಸಿ ಫೈನಲ್ ಎಕ್ಸಾಂ ಇರೋ ಹಿನ್ನಲೆಯಲ್ಲಿ ಹೆದರಿರುವ ಬಗ್ಗೆ ಹೇಳಿದ್ದಾನೆ. ಪರೀಕ್ಷೆಗೆ ಸರಿಯಾದ ತಯಾರಿ ಮಾಡದೇ ಇರುವುದರಿಂದ ಹೆದರಿ ನಾಪತ್ತೆಯಾಗಿದ್ದ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ವಿವಿಗೆ ಡಾ. ಮನಮೋಹನ್‌ ಸಿಂಗ್‌ ಹೆಸರಿಡಲು ಜೆಡಿಎಸ್‌ ವಿರೋಧ

    ದಿಗಂತ್ ಮನೆಯಿಂದ ಹೋಗುವಾಗ 500 ರೂ. ತೆಗೆದುಕೊಂಡು ಹೋಗಿದ್ದ. ಬಳಿಕ ಕೆಲವು ಕಡೆ ಟಿಕೆಟ್ ಕೊಡದೇ ಪ್ರಯಾಣ ಮಾಡಿದ್ದ. ಅವನ ಪಾದದಲ್ಲಿ ಗಾಯ ಆಗಿದ್ದು, ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿದೆ ಎಂದು ಹೇಳಿದ್ದಾನೆ. ಅವನನ್ನ ಯಾರೂ ಎತ್ತಿಕೊಂಡು ಹೋಗಿರಲಿಲ್ಲ. ಅವನೇ ಹೋಗಿದ್ದ. ಪ್ರಯಾಣದ ಸಮಯದಲ್ಲಿ ಅವನು ಯಾರನ್ನೂ ಸಂಪರ್ಕ ಮಾಡಿಲ್ಲ. ದಿಗಂತ್ ಕಲಿಕೆಯಲ್ಲಿ ಮುಂದಿದ್ದ, ಆದರೆ ಕೆಲ ದಿನಗಳಿಂದ ಸ್ವಲ್ಪ ಡಲ್ ಇದ್ದನು. ಸದ್ಯ ಹೆಬಿಯಸ್ ಕಾರ್ಪಸ್ ದಾಖಲಾಗಿರುವ ಕಾರಣ ಹೈಕೋರ್ಟ್‌ಗೆ ಹಾಜರುಪಡಿಸುತ್ತೇವೆ. ದಿಗಂತ್, ಬೊಂದೇಲ್‌ನ ಬಾಲ ಮಂದಿರದಲ್ಲಿದ್ದಾನೆ ಎಂದು ತಿಳಿಸಿದರು. ಇದನ್ನೂ ಓದಿ: ಗದಗ | ಮಾದಕ ವ್ಯಸನ ಮುಕ್ತ, ಫಿಟ್ನೆಸ್‌ಗಾಗಿ ಜನಜಾಗೃತಿ ಮ್ಯಾರಥಾನ್

  • ಫರಂಗಿಪೇಟೆ ಅಪ್ರಾಪ್ತ ವಿದ್ಯಾರ್ಥಿ ನಾಪತ್ತೆ ಪ್ರಕರಣ – 12 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆ

    ಫರಂಗಿಪೇಟೆ ಅಪ್ರಾಪ್ತ ವಿದ್ಯಾರ್ಥಿ ನಾಪತ್ತೆ ಪ್ರಕರಣ – 12 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆ

    ದಕ್ಷಿಣ ಕನ್ನಡ/ಉಡುಪಿ: ಫರಂಗಿಪೇಟೆಯಲ್ಲಿ ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿ 12 ದಿನಗಳ ಬಳಿಕ ಶನಿವಾರ ಉಡುಪಿಯಲ್ಲಿ (Udupi) ಪತ್ತೆಯಾಗಿದ್ದಾನೆ.

    ಅಪ್ರಾಪ್ತ ವಿದ್ಯಾರ್ಥಿಯನ್ನು ದಿಗಂತ್ ಎಂದು ಗುರುತಿಸಲಾಗಿದ್ದು, ಫೆ.25 ರಂದು ಮಂಗಳೂರಿನ ಫರಂಗಿಪೇಟೆಯಿಂದ ನಾಪತ್ತೆಯಾಗಿದ್ದ. ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ತೆರಳಿದ್ದ ದಿಗಂತ್ ಮನೆಗೆ ವಾಪಸ್ಸಾಗಿರಲಿಲ್ಲ. ವಿದ್ಯಾರ್ಥಿಗಾಗಿ ದಕ್ಷಿಣ ಕನ್ನಡ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಕಳೆದ 10 ದಿನಗಳಿಂದ ಹುಡುಕಾಟ ನಡೆಸಿದ್ದರೂ ಕೂಡ ಪತ್ತೆಹಚ್ಚಿಲ್ಲ ಎಂದು ವಿದ್ಯಾರ್ಥಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಬಾಲಕನ ಪತ್ತೆಗಾಗಿ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.ಇದನ್ನೂ ಓದಿ: 75 ವರ್ಷವಾದರೂ ಕೃಷಿಯಲ್ಲಿ ಸಾಧನೆ – ಪುಟ್ಟಮ್ಮಗೆ ನಾರಿ ನಾರಾಯಣಿ ಪ್ರಶಸ್ತಿ

    ಶನಿವಾರ ಉಡುಪಿಯ ಡಿ-ಮಾರ್ಟ್ನಲ್ಲಿ ದಿಗಂತ್ ಪತ್ತೆಯಾಗಿದ್ದು, ಅಲ್ಲಿ ಬಟ್ಟೆಗಳನ್ನು ಬ್ಯಾಗ್‌ಗೆ ತುಂಬಿಕೊಳ್ಳುತ್ತಿದ್ದಾಗ ಸಂಶಯಕ್ಕೊಳಗಾದ ಡಿ-ಮಾರ್ಟ್ ಸಿಬ್ಬಂದಿ ಆತನನ್ನು ಪ್ರಶ್ನಿಸಿದ್ದಾರೆ. ವಿಚಾರಣೆ ನಡೆಸಿದಾಗ ತಾನು ದಿಗಂತ್ ಎಂದು ಹೇಳಿಕೊಂಡಿದ್ದಾನೆ. ಇದೇ ವೇಳೆ ಸಿಬ್ಬಂದಿಯ ಮೊಬೈಲ್‌ನಿಂದ ತಾಯಿಗೆ ಕರೆ ಮಾಡಿದ್ದಾನೆ.

    ಪ್ರಕರಣ ಸಂಬಂಧ ದಿಗಂತ್ ತಾಯಿ ಮಾತನಾಡಿ, ದಿಗಂತ್ ತಮಗೆ ಕರೆ ಮಾಡಿ, ತಾನು ಉಡುಪಿಯ ಡಿಮಾರ್ಟ್‌ನಲ್ಲಿದ್ದೇನೆಂದು ತಿಳಿಸಿದ್ದಾನೆ. ನನಗೇನು ತೊಂದರೆಯಾಗಿಲ್ಲ. ನನ್ನನ್ನು ಹೊತ್ತುಕೊಂಡು ಹೋಗಿದ್ದಾರೆ, ನಾನು ನಾಪತ್ತೆಯಾಗುವ ಹುಡುಗ ಅಲ್ಲ. ಎಲ್ಲವನ್ನೂ ಮನೆಗೆ ಬಂದು ಹೇಳುತ್ತೇನೆ ಎಂದಿದ್ದಾನೆ ಎಂದರು.

    ದಿಗಂತ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ದಕ್ಷಿಣ ಕನ್ನಡ ಪೊಲೀಸರು ಉಡುಪಿಗೆ ತೆರಳಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಬಾಲಕನನ್ನು ಮಂಗಳೂರಿನ ಫರಂಗಿಪೇಟೆಯ ಆತನ ಮನೆಗೆ ತಲುಪಿಸಲಿದ್ದಾರೆ.ಇದನ್ನೂ ಓದಿ: ಧಾರವಾಡದ ಉಪ್ಪಿನಕಾಯಿ ಅಜ್ಜಿಗೆ ನಾರಿ ನಾರಾಯಣಿ ಗೌರವ