Tag: Farah Khan

  • ರಿಷಿಕೇಶದಲ್ಲಿ ಗಂಗಾರತಿ ಮಾಡಿದ ಫರ‍್ಹಾ ಖಾನ್

    ರಿಷಿಕೇಶದಲ್ಲಿ ಗಂಗಾರತಿ ಮಾಡಿದ ಫರ‍್ಹಾ ಖಾನ್

    ಕೆಲವರು ಧರ್ಮವನ್ನೂ ಮೀರಿ ದೇವರ ಆರಾಧನೆಯಲ್ಲಿ ನಂಬಿಕೆ ಇಡ್ತಾರೆ. ಇದೀಗ ಬಾಲಿವುಡ್ ನಿರ್ದೇಶಕಿ, ನೃತ್ಯ ನಿರ್ದೇಶಕಿ, ನಟಿ ನಿರ್ಮಾಪಕಿ ಫರ‍್ಹಾ ಖಾನ್ (Farah Khan) ರಿಷಿಕೇಶಕ್ಕೆ ತೆರಳಿ ಗಂಗಾರತಿಯಲ್ಲಿ (Ganga aarti)  ಪಾಲ್ಗೊಂಡಿದ್ದಾರೆ. ಕೈಮುಗಿದು ಓಂ ನಮಃ ಶಿವಾಯ ಎಂದಿದ್ದಾರೆ. ಜೈ ಭೋಲೇನಾಥ್ ಎಂದಿರುವ ದೃಶ್ಯಗಳನ್ನ ಅವರೇ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ಲಾಂ ಧರ್ಮದ ಫರ‍್ಹಾ ಖಾನ್ ಮೊದಲ ಬಾರಿ ರಿಷಿಕೇಶಕ್ಕೆ (Rishikesh) ತೆರಳಿದ್ದು, ಇದನ್ನು ಅದ್ಭುತ ಅನುಭವ ಎಂದು ವರ್ಣಿಸಿದ್ದಾರೆ.

    ತಮ್ಮ ಮನೆಯ ಅಡುಗೆಭಟ್ಟ ದಿಲೀಪ್ ಜೊತೆ ರಿಷಿಕೇಶಕ್ಕೆ ತೆರಳಿರುವ ಫರ‍್ಹಾ ಅಲ್ಲಿ ಧಾರ್ಮಿಕ ಆಚರಣೆಯಲ್ಲಿ ಶ್ರದ್ಧೆಯಿಂದ ಪಾಲ್ಗೊಂಡ ಬಗೆ ವಿಶೇಷವಾಗಿದೆ. ಹಣೆಯಲ್ಲಿ ಸಿಂಧೂರವಿಟ್ಟು ಕೈ ಮುಗಿದು ದೇವರಲ್ಲಿ ಬೇಡಿಕೊಂಡಿದ್ದಾರೆ. ದೀಪ ಹಿಡಿದು ಗಂಗಾರತಿ ಮಾಡಿದ್ದಾರೆ. ಹೀಗೆ ಧಾರ್ಮಿಕ ಆಚರಣೆ ಮಾಡ್ತಿರುವ ಫರ‍್ಹಾ ಫೋಟೋ ವೀಡಿಯೋಗಳು ಇನ್ಸ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

    ಅನೇಕರು ಫರ‍್ಹಾ ಖಾನ್ ನಡೆದುಕೊಂಡ ರೀತಿಗೆ ಭೇಷ್ ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಅಸ್ತಗ್‌ಫಿರುಲ್ಲ (ದೇವರ ಆಶೀರ್ವಾದ ನಿಮ್ಮ ಮೇಲಿರಲಿ) ಎಂದು ಕಾಮೆಂಟ್ ಬರೆದಿದ್ದಾರೆ. ಹೀಗೆ ಫರ‍್ಹಾ ಖಾನ್ ಧಾರ್ಮಿಕ ಆಚರಣೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

  • ಸಾನಿಯಾ ಮಿರ್ಜಾ ಮಗನ ರೇಟು ರೂ.500 ಎಂದ ನಿರ್ದೇಶಕಿ ಫರಾ ಖಾನ್

    ಸಾನಿಯಾ ಮಿರ್ಜಾ ಮಗನ ರೇಟು ರೂ.500 ಎಂದ ನಿರ್ದೇಶಕಿ ಫರಾ ಖಾನ್

    ಹೆಸರಾಂತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪುತ್ರ ಇಝಾನ್ ಮಿರ್ಜಾ ಮಲಿಕ್ ಜತೆಗಿನ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಫೇಮಸ್ ನಿರ್ದೇಶಕಿ ಫರಾ ಖಾನ್, ಅವರ ಜೊತೆ ಕಳೆದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಆ ಹುಡುಗನನ್ನು ನವ ಹೀರೋ ಎಂದು ಕೂಡ ಕರೆದಿದ್ದಾರೆ. ಇದನ್ನೂ ಓದಿ : ಇನ್‌ಸ್ಟಾಗ್ರಾಮ್‌ ಪ್ರಭಾವಿ ಪಟ್ಟಿಯಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ – ದಕ್ಷಿಣದ ಸ್ಟಾರ್‌ಗಳಿಗೂ ಇಲ್ಲ ಪಟ್ಟ

    ನವ ನಾಯಕ ಇಝಾನ್ ಮಿರ್ಜಾ ಮಲಿಕ್ ಜೊತೆಗೆ ಒಂದಷ್ಟು ಸಮಯ ಕಳೆದೆ. ತುಂಬಾ ಚೂಟಿ ಹುಡುಗ. ಈಗಲೇ ಅವನಿಗೆ ಐದುನೂರು ರೂಪಾಯಿ ಕೊಟ್ಟು ಬುಕ್ ಮಾಡಿಕೊಂಡಿದ್ದೇನೆ. ಅತೀ ಕಡಿಮೆ ಸಂಭಾವನೆ ಪಡೆದ ಕಲಾವಿದ. ಇಷ್ಟೊಂದು ರಿಯಾಯತಿಯನ್ನು ನನಗೆ ಕೊಟ್ಟಿದ್ದಕ್ಕೆ ಇಝಾನ್ ತಾಯಿ ಸಾನಿಯಾಗೆ ಧನ್ಯವಾದಗಳು ಎಂದು ಫರಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ಗೆ ಭಯಂಕರ ಬೇಡಿಕೆ ಇಟ್ಟ ಫ್ಯಾನ್ಸ್

    ಕೇವಲ ರೂ.500ಕ್ಕೆ ಇಝಾನ್ ಸಹಿ ಮಾಡಿದ್ದಾನೆ ಎಂದು ತಮಾಷೆಯಾಗಿಯೇ ಬರೆದುಕೊಂಡಿರುವ ಫರಾ ಪೋಸ್ಟ್ ಗೆ ಸಾನಿಯಾ ಕೂಡ ಹಾರ್ಟ್ ಇಮೋಜಿ ಕಳುಹಿಸಿ ಸಂತಸ ವ್ಯಕ್ತ ಪಡಿಸಿದ್ದಾರೆ. ಈ ಫೋಟೋ ಯಾವ ಸಂದರ್ಭದಲ್ಲಿ ತಗೆದದ್ದು ಎಂದು ಏನೂ ಹೇಳಿಕೊಳ್ಳದೇ ಇದ್ದರೂ, ಈ ಫೋಟೋಗೆ ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಸಾನಿಯಾ ಅವರ ಮಗ ಸಿನಿಮಾ ರಂಗಕ್ಕೆ ಪ್ರವೇಶ ಮಾಡಲಿದ್ದಾರಾ ಎಂದೂ ಕೇಳಿದ್ದಾರೆ. ಇದನ್ನೂ ಓದಿ : ಹಿಂದಿ ಬದಲು ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ: ಕಂಗನಾ ರಣಾವತ್

    ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಮಲಿಕ್ ಅವರ ಪುತ್ರ ಇಝಾನ್. ಫರಾ ಖಾನ್ ಅವರ ಸಿನಿಮಾದ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿಲಿದ್ದಾರಾ ಅಥವಾ ಇದು ತಮಾಷೆಗಾಗಿ ತಗೆದಿರುವ ಭಾವಚಿತ್ರವಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದ್ದರೂ, ಇಝಾನ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರೆ ಅಚ್ಚರಿ ಪಡಬೇಕಿಲ್ಲ.

  • ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ 3ನೇ ಪತ್ನಿಯ ಕ್ಲೋಸ್‌ ಫ್ರೆಂಡ್‌ ಪಲಾಯನ!

    ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ 3ನೇ ಪತ್ನಿಯ ಕ್ಲೋಸ್‌ ಫ್ರೆಂಡ್‌ ಪಲಾಯನ!

    ಲಾಹೋರ್: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮೂರನೇ ಪತ್ನಿ ಬುಶ್ರಾ ಬಿಬಿ ಅವರ ಆತ್ಮೀಯ ಸ್ನೇಹಿತೆ ಫರಾಹ್‌ ಖಾನ್‌ ಬಂಧನದ ಭೀತಿಯಿಂದಾಗಿ ದುಬೈಗೆ ಪಲಾಯನಗೈದಿದ್ದಾರೆ.

    ಇಮ್ರಾನ್‌ ಖಾನ್‌ ಅವರ ಸರ್ಕಾರ ಉರುಳಿದರೆ ಫರಾಹ್‌ ಖಾನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ವರದಿಗಳಾಗಿವೆ. ಹೀಗಾಗಿ ಭೀತಿಯಿಂದ ಅವರು ದೇಶ ತೊರೆದಿದ್ದಾರೆ. ಈಗಾಗಲೇ ಫರಾಹ್‌ ಖಾನ್ ಅವರ ಪತಿ ಹಸನ್‌ ಗುಜ್ಜರ್‌ ಕೂಡ ಪಾಕಿಸ್ತಾನ ತೊರೆದು ಅಮೆರಿಕದಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ: ಪಾಕ್ ಸುಪ್ರೀಂಕೋರ್ಟ್ ನಿರ್ಧಾರದಿಂದ ಇಮ್ರಾನ್ ಖಾನ್‍ಗೆ ಶಾಕ್ – ಮುಂದುವರಿದ ರಾಜಕೀಯ ಹೈಡ್ರಾಮಾ

    ಫರಾಹ್ ಅವರು ಭಾನುವಾರ ಪಾಕಿಸ್ತಾನ ತೊರೆದು ದುಬೈಗೆ ಪಲಾಯನವಾಗಿದ್ದಾರೆ ಎಂದು ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ ಮಾಡಿದೆ.

    ಅಧಿಕಾರಿಗಳನ್ನು ಅವರು ಬಯಸಿದ ಸ್ಥಳಗಳಿಗೆ ವರ್ಗಾವಣೆ ಮಾಡಿಸಲು ಫರಾಹ್ ಅವರು ಲಂಚ ಪಡೆದಿದ್ದಾರೆ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಹೊರಿಸಿವೆ. ಇದುವರೆಗೂ ಫರಾಹ್ ಅವರು 6 ಬಿಲಿಯನ್‌ ಪಾಕಿಸ್ತಾನಿ ರೂಪಿಯನ್ನು (32 ಮಿಲಿಯನ್‌ ಯುಎಸ್‌ ಡಾಲರ್)‌ ಲಂಚ ಪಡೆದಿದ್ದಾರೆ. ಹೀಗಾಗಿ ಅವರನ್ನು ʼಎಲ್ಲಾ ಹಗರಣಗಳ ತಾಯಿʼ ಎಂದು ಪ್ರತಿಪಕ್ಷಗಳು ಕರೆದಿವೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹೈಡ್ರಾಮಾ – ಸದ್ಯಕ್ಕೆ ಇಮ್ರಾನ್ ಪಾರು, 90 ದಿನದಲ್ಲಿ ಚುನಾವಣೆ

    ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಉಪಾಧ್ಯಕ್ಷರು ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ ಅವರು, ಇಮ್ರಾನ್ ಮತ್ತು ಅವರ ಪತ್ನಿಯ ಆಜ್ಞೆಯ ಮೇರೆಗೆ ಫರಾಹ್ ಈ ಭ್ರಷ್ಟಾಚಾರವನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಪಾಕಿಸ್ತಾನದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದೆ. ಪಾಕ್ ಸುಪ್ರೀಂಕೋರ್ಟ್‍ನಲ್ಲಿ ಪ್ರಧಾನಿ ಇಮ್ರಾನ್ ಖಾನ್‍ಗೆ ಹಿನ್ನಡೆ ಆಗಿದೆ. ಚುನಾವಣೆ ಅತ್ಯಗತ್ಯ, ಆದ್ರೇ ಅದು ಅವಿಶ್ವಾಸ ನಿಲುವಳಿ ಮೇಲಿನ ಮತದಾನದಿಂದ ನಿರ್ಧಾರವಾಗಲಿ ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

    ಪಾಕಿಸ್ತಾನ ಸುಪ್ರೀಂಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಹೆಸರನ್ನು ಹಂಗಾಮಿ ಪ್ರಧಾನಿ ಹುದ್ದೆಗೆ ಇಮ್ರಾನ್ ಖಾನ್ ಪ್ರಸ್ತಾಪಿಸಿದ್ದಾರೆ. ಹೊಸ ಹಂಗಾಮಿ ಪ್ರಧಾನಿ ಅಧಿಕಾರ ಸ್ವೀಕರಿಸುವವರೆಗೂ ಇಮ್ರಾನ್ ಖಾನ್ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್‌ಖಾನ್‌ನನ್ನು ಮಿನಿ ಟ್ರಂಪ್ ಎಂದ ಮಾಜಿ ಪತ್ನಿ

  • ಫರಾ ಖಾನ್‍ಗೆ ಕೊರೊನಾ – ದೀಪಿಕಾ, ಅಮಿತಾಭ್ ಬಗ್ಗೆ ಅಭಿಮಾನಿಗಳ ಪ್ರಶ್ನೆ

    ಫರಾ ಖಾನ್‍ಗೆ ಕೊರೊನಾ – ದೀಪಿಕಾ, ಅಮಿತಾಭ್ ಬಗ್ಗೆ ಅಭಿಮಾನಿಗಳ ಪ್ರಶ್ನೆ

    ಮುಂಬೈ: ಬಾಲಿವುಡ್ ನಿರ್ದೇಶಕಿ, ನಿರ್ಮಾಪಕಿ ಫರಾ ಖಾನ್‍ಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರ ಜೊತೆಗಿದ್ದ ನಟಿ ದೀಪಿಕಾ ಪಡುಕೋಣೆ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೂ ಬಂದಿದೆಯಾ ಎಂಬ ಸಂದೇಹ ಅಭಿಮಾನಿಗಳಲ್ಲಿದೆ.

    ‘ಕೌನ್ ಬನೇಗಾ ಕರೋಡ್‍ಪತಿ – ಸೀಸನ್ 13’ ಶೂಟಿಂಗ್‍ನಲ್ಲಿ ಫರಾ ಖಾನ್ ಭಾಗವಹಿಸಿದ್ದು, ಈ ವೇಳೆ ಬಾಲಿವುಡ್ ಬಚ್ಚನ್ ಮತ್ತು ದೀಪಿಕಾ ಜೊತೆಗೆ ಕಾಲ ಕಳೆದಿದ್ದಾರೆ. ಈ ವೇಳೆ ಒಂದು ಸೆಲ್ಫಿಯನ್ನು ತೆಗೆದುಕೊಂಡಿದ್ದು, ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಲಾಗಿತ್ತು. ಇದನ್ನೂ ಓದಿ: ಮಾರ್ಷಲ್‍ನನ್ನೇ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಚಾಲಕ

    ಈ ಫೋಟೋ ನೋಡಿದವರು ಫರಾ ಖಾನ್ ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರ ಜೊತೆಗಿದ್ದ ದೀಪಿಕಾ ಮತ್ತು ಅಮಿತಾಭ್ ಗತಿ ಏನು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ

     

    View this post on Instagram

     

    A post shared by Farah Khan Kunder (@farahkhankunder)

    ಫರಾ ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ, ಲೆಜೆಂಡ್ ಕೈಯಿಂದ ಸೆಲ್ಫಿಯನ್ನು ತೆಗೆದುಕೊಳ್ಳುವ ಸೌಭಾಗ್ಯ ನಮ್ಮದಾಗಿದೆ. ಶಿಕ್ಷಕರ ದಿನಾಚರಣೆಯ ನಡೆಸಿದ ವಿಶೇಷ ಸಂಚಿಕೆಯಲ್ಲಿ ಈ ಅದ್ಭುತ ಅವಕಾಶ ಸಿಕ್ಕಿರುವುದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ಈ ದಿನ ದೀಪಿಕಾ ಸಹ ಭಾಗವಹಿಸಿದ್ದು, ಅವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಈ ಫೊಟೋವನ್ನು ನನಗೆ ಪಾಸಿಟಿವ್ ಬರುವ ಮುನ್ನ ತೆಗೆಯಲಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಸಮಾಧಾನ ಸಿಕ್ಕಿದೆ.