Tag: Fans

  • ಧೈರ್ಯ ಇದ್ರೆ ಮುಂದೆ ಬಂದು ಹೇಳ್ಬೇಕು: ಪ್ರಜ್ವಲ್ ಕಿಡಿಕಾರಿದ್ದು ಯಾರ ವಿರುದ್ಧ?

    ಧೈರ್ಯ ಇದ್ರೆ ಮುಂದೆ ಬಂದು ಹೇಳ್ಬೇಕು: ಪ್ರಜ್ವಲ್ ಕಿಡಿಕಾರಿದ್ದು ಯಾರ ವಿರುದ್ಧ?

    ಪ್ರಜ್ವಲ್ ದೇವರಾಜ್ (Prajwal Devaraj) ಕರಾವಳಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕೊನೆ ಹಂತದ ಚಿತ್ರೀಕರಣವನ್ನ ಬೆಂಗಳೂರಿನ (Bengaluru) ದೊಡ್ಡಾಲದ ಮರದ ಸುತ್ತಮುತ್ತ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಈ ವೇಳೆ ಪಬ್ಲಿಕ್ ಟಿವಿ ಜೊತೆ ಎಕ್ಸ್‌ಕ್ಯೂಸಿವ್‌ ಮಾತುಗಳನ್ನಾಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಆಗ್ತಿರುವ ಮುಜುಗರದ ಸಂದೇಶಗಳು, ಟ್ರೋಲ್ಸ್ ಹಾಗೂ ಮೀಮ್ಸ್‌ಗಳ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇತ್ತೀಚೆಗೆ ನಟಿ ರಮ್ಯಾಗೆ ಕೆಲವರು ಅಶ್ಲೀಲವಾಗಿ ಕಮೆಂಟ್ ಮಾಡಿದ್ದರು. ಅದಕ್ಕೆ ತಕ್ಕ ಶಾಸ್ತಿ ಆಗಿದೆ, ಅದೇ ಕಾರಣಕ್ಕೆ ಕೆಲವರು ಕಂಬಿ ಹಿಂದೆ ಕುಳಿತಿದ್ದಾರೆ. ಮತ್ತೊಂದೆಡೆ ಮೊನ್ನೆಯಷ್ಟೇ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬ ಆಚರಣೆ ವೇಳೆ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯಾರೇ ಎಷ್ಟೇ ಕೆಟ್ಟದಾಗಿ ನಿಂದಿಸಿದರೂ ಯಾರೂ ಪ್ರತಿಕ್ರಿಯೆ ನೀಡಬೇಡಿ. ನಮ್ಮ ಅಭಿಮಾನಿಗಳು ಯಾರಿಗೂ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ. ನಾನೇ ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಅಂತಾದ್ರಲ್ಲಿ ನೀವ್ಯಾಕೆ ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಾ? ಅದರ ಬದಲಾಗಿ ಯಾರಿಗಾದರೂ ಸಹಾಯವಾಗುವ ಒಂದೆರಡು ಒಳ್ಳೆಯ ಕೆಲಸ ಮಾಡಿ ಎಂದು ತಮ್ಮ ಅಭಿಮಾನಿಗಳಿಗೆ ಕಿವಿಮಾತನ್ನ ಹೇಳಿದ್ದರು.ಇದನ್ನೂ ಓದಿ: ಕಲ್ಟ್ ಸಿನಿಮಾದ ಅಯ್ಯೊ ಶಿವನೇ ಹಾಡಿನ ರಿಲೀಸ್ ಡೇಟ್ ಫಿಕ್ಸ್

    ಕೆಲತಿಂಗಳ ಹಿಂದೆ ಪ್ರಜ್ವಲ್ ದೇವರಾಜ್ ಮಾಧ್ಯಮಕ್ಕೆ ಹೇಳಿಕೆಕೊಟ್ಟ ವೇಳೆ ಅವರಿಗೂ ಕೆಲವು ಕಿಡಿಗೇಡಿಗಳು ಮಾಡಿದ ಹೇಯ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಸಹೋದರಿಗೆ ಕೆಲವು ಕಿಡಿಗೇಡಿಗಳು ಅಶ್ಲೀಲ ಫೋಟೋಗಳನ್ನ ಕಳುಹಿಸಿ ಬ್ಲ್ಯಾಕ್‌ಮೇಲ್‌ ಮಾಡಿದ್ದರಂತೆ. ಇದಕ್ಕೆ ಕಾನೂನು ರೀತಿಯಲ್ಲಿ ಕಂಪ್ಲೆಂಟ್‌ ಮಾಡಲಾಗಿದ್ದು, ಅವರನ್ನ ಪತ್ತೆಹಚ್ಚಲು ಕಾನೂನು ಮೂಲಕ ಪ್ರಯತ್ನ ಮಾಡಲಾಗ್ತಿದೆಯಂತೆ. ಈ ಬಗ್ಗೆ ಮಾತಾಡಿರುವ ಪ್ರಜ್ವಲ್ ದೇವರಾಜ್ ಬೇಸರ ಹೊರಹಾಕಿದ್ದಾರೆ. ಇತ್ತೀಚೆಗೆ ಟ್ರೋಲ್ಸ್ ಹಾಗೂ ಮೀಮ್ಸ್‌ನಲ್ಲಿ ರಾಗಿಣಿ ಹಾಗೂ ನನ್ನ ಬಗ್ಗೆ ಕೆಟ್ಟದಾಗಿ ಬರೆದಿದ್ದಾರೆ. ಮದುವೆಯಾಗಿ 10 ವರ್ಷವಾದರೂ ಮಗು ಮಾಡಿಕೊಂಡಿಲ್ಲ. ಯಾಕಂದ್ರೆ ರಾಗಿಣಿ ಅವರ ಫಿಗರ್ ಹಾಳಾಗುತ್ತೆ ಅಂತಾ ಮಗು ಮಾಡಿಕೊಂಡಿಲ್ಲ ಅಂತಾ ಮೀಮ್ಸ್‌ನಲ್ಲಿ ಹಾಕಿದ್ದಾಗ ಅದನ್ನ ನೋಡಿ ರಾಗಿಣಿ ಬೇಜಾರಾದ್ರು ನಾನು ಸಮಾಧಾನ ಮಾಡಿದ್ದೇನೆ ಎಂದಿದ್ದಾರೆ.

    ಧೈರ್ಯ ಇದ್ರೆ ಮುಂದೆ ಬಂದು ಹೇಳ್ಬೇಕು, ನಮ್ ಅಭಿಮಾನಿಗಳು ಇನ್ನೊಬ್ರ ಅಭಿಮಾನಿಗಳಂತಲ್ಲ ಎಲ್ಲೋ ಬಚ್ಚಿಟ್ಕೊಂಡು ಬೇಕಾಬಿಟ್ಟಿ ಕಾಮೆಂಟ್ ಹಾಕೋರಿಗೆ ಗಂಡ್ಸು ಅಂತಾ ಹೇಳೋಕೆ ಆಗುತ್ತಾ? ಎಲ್ಲರ ಕೈಯಲ್ಲೂ ಫೋನ್ ಇದೆ. ಅವನಿಗಿರುವ ಪ್ರೆಸ್ಟ್ರೇಷನ್‌ಗೆ ಯಾರಿಗೋ ಬೈಬೇಕು ಅನ್ಸುತ್ತೆ ನಾವು ಈಜಿಯಾಗಿ ಸಿಕ್ತೀವಿ. ಎಲ್ಲೋ ಕುತ್ಕೊಂಡು ಕೆಟ್ಟದಾಗಿ ಮೆಸೇಜ್ ಹಾಕ್ತಾರೆ. ಈ ರೀತಿ ಆಗಬಾರದು ಅಂದರೆ ಪ್ರತಿಯೊಬ್ಬ ನಾಗರಿಕರಿಗೂ ಜವಾಬ್ದಾರಿ ಬೇಕಾಗುತ್ತೆ. ಎಂದು ಖಾರವಾಗಿ ನುಡಿದಿದ್ದಾರೆ ಪ್ರಜ್ವಲ್ ದೇವರಾಜ್.ಇದನ್ನೂ ಓದಿ: ಮತ್ತೆ ರೊಮ್ಯಾನ್ಸ್‌ಗೆ ರೆಡಿಯಾದ ರಶ್ಮಿಕಾ-ವಿಜಯ್ ದೇವರಕೊಂಡ

  • ದರ್ಶನ್ ನೋಡಲು ಮನೆ ಬಳಿ ಕಿಕ್ಕಿರಿದು ಸೇರಿದ ಲೇಡಿಫ್ಯಾನ್ಸ್ !

    ದರ್ಶನ್ ನೋಡಲು ಮನೆ ಬಳಿ ಕಿಕ್ಕಿರಿದು ಸೇರಿದ ಲೇಡಿಫ್ಯಾನ್ಸ್ !

    ಸಾಮಾನ್ಯವಾಗಿ ದರ್ಶನ್ (Darshan) ಭಾನುವಾರದ ತಮ್ಮ ದಿನವನ್ನು ಅಭಿಮಾನಿಗಳನ್ನ ಭೇಟಿಯಾಗುವುದಕ್ಕೆ ಮೀಸಲಿಡುತ್ತಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ನಿವಾಸ ಅಭಿಮಾನಿಗಳಿಗೆ ಚಿರಪರಿಚಿತ ಇರುವ ಕಾರಣ ಭಾನುವಾರ ದರ್ಶನ್ ನೋಡೋದಕ್ಕೆ ನೂರಾರು ಅಭಿಮಾನಿಗಳು ಮನೆ ಬಳಿ ಜಮಾಯಿಸುತ್ತಾರೆ. ಈಗಲೂ ಹಾಗೆಯೇ ನಡೆಯುತ್ತಿದೆ.

    ಜೈಲಿಂದ ಜಾಮೀನು ಪಡೆದು ಬಂದ ಬಳಿಕ ದರ್ಶನ್ ಹೊಸಕೆರೆಹಳ್ಳಿ ಬಳಿ ಇರುವ ಪತ್ನಿ ವಿಜಯಲಕ್ಷ್ಮಿ ಅಪಾರ್ಟ್‌ಮೆಂಟ್‌ನಲ್ಲಿ ಹೆಚ್ಚಾಗಿ ಇರುತ್ತಾರೆ. ಈ ಭಾನುವಾರ ಆರ್‌ಆರ್ ನಗರದ (RR Nagar) ನಿವಾಸಕ್ಕೆ ದರ್ಶನ್ ಆಗಮಿಸಿದ್ದಾರೆ. ಮನೆಯ ಎದುರು ದರ್ಶನ್ ಭೇಟಿಗಾಗಿ ಕಿಕ್ಕಿರಿದು ಸೇರಿರುವ ಅಭಿಮಾನಿಗಳನ್ನ ದರ್ಶನ್ ಭೇಟಿಯಾಗಿದ್ದಾರೆ. ಮನೆ ಬಳಿ ಬಂದ ಅಭಿಮಾನಿಗಳೆಲ್ಲರಿಗೂ ದರ್ಶನ್ ಶೇಕ್‌ಹ್ಯಾಂಡ್ ಮಾಡಿ ಮಾತನಾಡಿಸಿ ಕಳಿಸಿದ್ದಾರೆ. ವಿಶೇಷ ಅಂದ್ರೆ ಹೆಚ್ಚಾಗಿ ಮಹಿಳಾ ಅಭಿಮಾನಿಗಳೇ ಇದ್ರು.

    ದರ್ಶನ್‌ಗೆ ಇರೋ ಭಾರೀ ಬೆಂಬಲವೇ ಅವರ ಅಭಿಮಾನಿಗಳು. ದರ್ಶನ್ ಎಲ್ಲಾ ಕೆಲಸದಲ್ಲೂ ಜೊತೆಯಾಗಿರುತ್ತಾರೆ. ಕೊಲೆ ಆರೋಪ ಹೊತ್ತು ಜೈಲಿಂದ ಬಂದ ಬಳಿಕವೂ ಅವರ ಭಕ್ತಗಣದ ಪ್ರಮಾಣ ಕಮ್ಮಿಯಾಗಿಲ್ಲ. ಇತ್ತೀಚೆಗೆ ಅಭಿಮಾನಿಗಳ ಜೊತೆ ಭೇಟಿಯಾಗೋದನ್ನು ದರ್ಶನ್ ಕಡಿಮೆ ಮಾಡಿದ್ದರು. ಯಾರ ಕೈಗೂ ಸಿಗದಂತೆ ದೂರ ಉಳಿದುಬಿಡುತ್ತಿದ್ದರು. ಆದರೀಗ ಅಪರೂಪಕ್ಕೆ ಮನೆ ಬಳಿ ಬಂದು ಕಾಯುತ್ತಿರುವ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. ಹಿಂದೆಲ್ಲಾ ತಿಂಗಳಿಗೊಂದು ಭಾನುವಾರ ಅಭಿಮಾನಿಗಳ ಭೇಟಿಗಾಗೇ ದರ್ಶನ್ ಮೀಸಲಿಟ್ಟಿದ್ದರು. ಆದರೆ ಜೈಲಿಗೆ ಹೋಗಿ ಬಂದ ಬಳಿಕ ಸಿನಿಮಾ, ಸಂಸಾರದ ಕಡೆ ಹೆಚ್ಚು ಗಮನ ಕೊಡ್ತಿರುವ ದರ್ಶನ್ ಹೊರಗಿನ ಪ್ರಪಂಚದಲ್ಲಿ ಹೆಚ್ಚು ಬೆರೆಯುತ್ತಿಲ್ಲ.

  • ‘ಕರಿಯಾ’ ಚಿತ್ರ ರೀ-ರಿಲೀಸ್ ವೇಳೆ ದರ್ಶನ್ ಪುಂಡಾಭಿಮಾನಿಗಳಿಗೆ ಖಾಕಿ ವಾರ್ನಿಂಗ್

    ‘ಕರಿಯಾ’ ಚಿತ್ರ ರೀ-ರಿಲೀಸ್ ವೇಳೆ ದರ್ಶನ್ ಪುಂಡಾಭಿಮಾನಿಗಳಿಗೆ ಖಾಕಿ ವಾರ್ನಿಂಗ್

    ಸ್ಯಾಂಡಲ್‌ವುಡ್ ನಟ ದರ್ಶನ್ ನಟನೆಯ ‘ಕರಿಯಾ’ (Kariya) ಸಿನಿಮಾ ಇಂದು (ಆ.30) ರಾಜ್ಯಾದ್ಯಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇನ್ನೂ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಬಳಿ ದರ್ಶನ್ ಅಭಿಮಾನಿಗಳು (Fans) ಪುಂಡಾಟಿಕೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ:ಪ್ರೀತಿ ಅಂದರೆ ಕಮಿಟ್‌ಮೆಂಟ್: ಲೈಫ್ ಪಾರ್ಟ್ನರ್ ಬಗ್ಗೆ ರಂಜನಿ ರಾಘವನ್ ಓಪನ್ ಟಾಕ್

    ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ಬಳಿ ಪುಂಡಾಟಿಕೆ ಮಾಡುತ್ತಿದ್ದ ಅಭಿಮಾನಿಗಳಿಗೆ ಪೊಲೀಸರು ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾಧ್ಯಮಗಳ ವಿರುದ್ಧ ಘೋಷಣೆ ಕೂಗುತ್ತಿದ್ದವರಿಗೆ ನಿಮ್ಮಂತಹ ಅಭಿಮಾನಿಗಳಿಂದಲೇ ದರ್ಶನ್‌ಗೆ ಕೆಟ್ಟ ಹೆಸರು ಎಂದು ಪೊಲೀಸರು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.

    ಅಂದಹಾಗೆ, 2003ರಲ್ಲಿ ‘ಕರಿಯಾ’ ಸಿನಿಮಾ ರಿಲೀಸ್ ಆಗಿತ್ತು. ಇದನ್ನೂ ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದರು. ದರ್ಶನ್ ನಟನೆ ಮತ್ತು ಕಥೆ ಎರಡು ಜನರ ಮನಗೆದ್ದಿತ್ತು.

  • ರಾಜ ಎಲ್ಲಿದ್ದರೂ ರಾಜನೇ ಅಂತ ಘೋಷಣೆ- ದರ್ಶನ್‌ ನೋಡಲು ಮುಗಿಬಿದ್ದ ಫ್ಯಾನ್ಸ್‌

    ರಾಜ ಎಲ್ಲಿದ್ದರೂ ರಾಜನೇ ಅಂತ ಘೋಷಣೆ- ದರ್ಶನ್‌ ನೋಡಲು ಮುಗಿಬಿದ್ದ ಫ್ಯಾನ್ಸ್‌

    ಬಳ್ಳಾರಿ: ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ದರ್ಶನ್‌ರನ್ನು(Darshan) ಶಿಫ್ಟ್ ಮಾಡಲಾಗಿದ್ದು, ಈ ವೇಳೆ, ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ. ದರ್ಶನ್ ನೋಡಲು ಫ್ಯಾನ್ಸ್ (Fans) ಮುಗಿಬಿದ್ದಿದ್ದಾರೆ. ಇದನ್ನೂ ಓದಿ:ಕೋಲ್ಡ್ ಬ್ಲಡೆಡ್ ಕೊಲೆ ಕೇಸ್‌ನಲ್ಲಿ ಪವಿತ್ರಾ ಭಾಗಿ – ಮಹಿಳೆಯರಿಗೇಕೆ ವಿಶೇಷ ಅವಕಾಶ ಕೊಡಬೇಕು?; ಎಸ್‌ಪಿಪಿ ವಾದ

    ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗ್ತಿದ್ದಂತೆ ನಟನ ಪರ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ರಾಜ ಎಲ್ಲಿದ್ದರೂ ರಾಜನೇ ಎಂದು ಘೋಷಣೆ ಕೂಗಿದ್ದಾರೆ. ದರ್ಶನ್ ಆದಷ್ಟು ಬೇಗ ಬಿಡುಗಡೆ ಆಗಲಿ ಅಂತ ನಾಳೆ (ಆ.30) ದುರ್ಗಮ್ಮ ದೇವಿಗೆ ಪೂಜೆ ಮಾಡಿಸುತ್ತೇವೆ ಎಂದು ಅಲ್ಲಿ ಸೇರಿದ್ದ ಅಭಿಮಾನಿಗಳು ಹೇಳಿದ್ದಾರೆ.

    ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್ ಮತ್ತು ಗ್ಯಾಂಗ್‌ಗೆ ಸೆಪ್ಟೆಂಬರ್ 9ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ  24ನೇ ಎಸಿಎಂಎಂ ನ್ಯಾಯಾಲಯ ಗುರುವಾರ ಆದೇಶ ಪ್ರಕಟಿಸಿತ್ತು. ಈ ಆದೇಶದ ನಂತರ ದರ್ಶನ್‌ ಅವರನ್ನು ಇಂದು ಬೆಳಗ್ಗೆ ಪರಪ್ಪನ ಅಗ್ರಹಾರದಿಂದ ಪೊಲೀಸ್‌ ವ್ಯಾನ್‌ನಲ್ಲಿ ಬಳ್ಳಾರಿ ಜೈಲಿಗೆ ಕರೆ ತರಲಾಗಿದೆ.

  • ವಿಶೇಷ ಅಭಿಮಾನಿಯ ಉಡುಗೊರೆ ಮೆಚ್ಚಿ, ಸುದೀಪ್ ಕೊಟ್ಟರು ಭರ್ಜರಿ ಗಿಫ್ಟ್

    ವಿಶೇಷ ಅಭಿಮಾನಿಯ ಉಡುಗೊರೆ ಮೆಚ್ಚಿ, ಸುದೀಪ್ ಕೊಟ್ಟರು ಭರ್ಜರಿ ಗಿಫ್ಟ್

    ಮ್ಮ ನೆಚ್ಚಿನ ನಟರನ್ನ ಭೇಟಿ ಆಗುವುದು ಅವರಿಗೆ ತಮ್ಮ ಕೈಲಾದ ಉಡುಗೊರೆ ಕೊಡುವುದು ಇದೇನು ಹೊಸತಲ್ಲ. ಆದರೆ ಇಲ್ಲೊಬ್ಬ ವಿಶೇಷಚೇತನ ಅಭಿಮಾನಿ ಅಂದರೆ ಮಾತು ಬಾರದ ಕಿಚ್ಚನ ಅಭಿಮಾನಿ ಸುದೀಪ್ (Kiccha Sudeep) ಭೇಟಿ ಮಾಡಿದ್ದಾನೆ. ಕಿಚ್ಚ ಸುದೀಪ್ ಕೂಡಾ ಅಭಿಮಾನಿಯನ್ನ (Fans) ಭೇಟಿ ಮಾಡಿದ್ದಾರೆ. ಕಿಚ್ಚನಿಗೆ ಏನು ಹೇಳಬೇಕು ಅದನ್ನ ಬರವಣಿಗೆಯಲ್ಲಿ ಬರೆದು ತಂದಿದ್ದಾನೆ. ಅಭಿಮಾನಿ ಬರೆದುಕೊಂಡು ಬಂದಿದ್ದ ಪತ್ರವನ್ನ ಸುದೀಪ್ ತಾಳ್ಮೆಯಿಂದ ಪೂರ್ತಿಯಾಗಿ ಓದಿದ್ದಾರೆ.

    ನಂತರ ನನ್ನಿಂದ ಏನಾಗ್ಬೇಕು ಅಂತ ಸುದೀಪ್ ಸನ್ನೆಯಿಂದಲೇ ಕೇಳಿದ್ದಾರೆ. ಅದಕ್ಕೆ ಅಭಿಮಾನಿ ಕೂಡಾ ಪ್ರತಿಕ್ರಿಯಿಸಿದ್ದಾನೆ. ಬಳಿಕ ಸುದೀಪ್ ವಿಶೇಷಚೇತನ ಅಭಿಮಾನಿಗೆ ಸಹಾಯವನ್ನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಊಟ ಆಯ್ತಾ ಅಂತಾ ಸುದೀಪ್ ಸನ್ನೆ ಮೂಲಕ ಕೇಳಿದ್ದಾರೆ ಸುದೀಪ್, ಇಲ್ಲ ಎಂದು ಅಭಿಮಾನಿ ಪ್ರತಿಕ್ರಿಯಿಸಿದ್ದಾನೆ. ಸರಿ ಇಲ್ಲೆ ಊಟ ಮಾಡಿ ಹೋಗಿ ಅಂತಾ ಸುದೀಪ್ ಅಭಿಮಾನಿಗೆ ಊಟ ಮಾಡಿಸಿ ಕಳುಹಿಸಿದ್ದಾರೆ.

    ಅಭಿಮಾನಿಗಳು ನೆಚ್ಚಿನ ನಟರನ್ನ ಹುಡುಕಿಕೊಂಡು ಬರ್ತಾರೆ ಅದಕ್ಕೆ ನಟರು ಸಹ ಅವರನ್ನ ಭೇಟಿ ಮಾಡಿ ಪ್ರತಿಕ್ರಿಯೆ ನೀಡುವುದು ವಿಶೇಷ. ಆದರೆ ವಿಶೇಷಗಳಲ್ಲಿ ವಿಶೇಷ ಅಂದರೆ ಈ ಅಭಿಮಾನಿಗೆ ಮಾತು ಬರುವುದಿಲ್ಲ ಆದರೂ ಕಿಚ್ಚ ಸುದೀಪ್ ಭೇಟಿ ಮಾಡಬೇಕು. ತನ್ನ ಮನದಾಳದ ಮಾತನ್ನ ಹಂಚಿಕೊಳ್ಳಬೇಕು ಅಂತ ಬಂದು ಭೇಟಿ ಮಾಡಿದ್ದಾನೆ. ಸುದೀಪ್ ಹಾಗೂ ಅಪ್ಪು ಇರುವ ಫೋಟೋವನ್ನ ಉಡುಗೊರೆಯಾಗಿ (Gift) ನೀಡಿದ್ದಾನೆ.

    ಮನೆ ಬಳಿ ಬಂದ ವಿಶೇಷಚೇತನ ಅಭಿಮಾನಿಯನ್ನ ಭೇಟಿ ಮಾಡಿ ಅವರ ಆಸೆಯನ್ನ ಈಡೇರಿಸಿದ್ದಾರೆ ಕಿಚ್ಚ ಸುದೀಪ್. ಈ ಸಂದರ್ಭಕ್ಕೆ ಕಿಚ್ಚನ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ `ಮ್ಯಾಕ್ಸ್’ ಸಿನಿಮಾದ ಶೂಟಿಂಗ್ ಮುಗಿಸಿರುವ ಸುದೀಪ್ ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಾರೆ ಎನ್ನುವ ನಿರೀಕ್ಷಯಲ್ಲಿ ಅಭಿಮಾನಿ ಬಳಗ.

  • ನಟ ವಿಷ್ಣುವರ್ಧನ್ ನೆನಪಲ್ಲಿ ‘ಯಜಮಾನ’ ಪ್ರೀಮಿಯರ್ ಲೀಗ್

    ನಟ ವಿಷ್ಣುವರ್ಧನ್ ನೆನಪಲ್ಲಿ ‘ಯಜಮಾನ’ ಪ್ರೀಮಿಯರ್ ಲೀಗ್

    ಜಮಾನ (Yajamana) ಪ್ರೀಮಿಯರ್ ಲೀಗ್ ಮತ್ತೆ ಬಂದಿದೆ. ಇದು ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಅಭಿಮಾನಿಗಳಿಗೋಸ್ಕರ್ ನಡೆಯುವ ಕ್ರಿಕೆಟ್ (Cricket) ಪಂದ್ಯಾವಳಿ. ಕಳೆದೆರೆಡು ವರ್ಷಗಳಿಂದ ಯಶಸ್ವಿ ಆಯೋಜಿಸಿಕೊಂಡು ಬರ್ತಿರುವ ವೈಪಿಎಲ್ ಮೇ 4 ಮತ್ತು 5 ರಂದು ಎರಡು ದಿನಗಳ ಕಾಲ‌ ನಡೆಯುತ್ತಿದೆ. ಈ ಹಿನ್ನೆಲೆ ಬೆಂಗಳೂರಿನ ಎಂಎಂ ಲೆಗಸಿನಲ್ಲಿ ನಿನ್ನೆ ಜರ್ಸಿ ಬಿಡುಗಡೆ ಮಾಡಲಾಯಿತು. ನಟ ಜಯರಾಮ್ ಕಾರ್ತಿಕ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.

    ಇದೇ ವೇಳೆ ನಟ ಜಯರಾಮ್ ಕಾರ್ತಿಕ್ ಮಾತನಾಡಿ, ವಿಷ್ಣು ಸೇನಾ ಸಮಿತಿಗೆ ವಂದನೆಗಳು. ಇದು ಯಜಮಾನ ಪ್ರೀಮಿಯರ್ ಲೀಗ್ ನ ಮೂರನೇ ಸೀಸನ್. ಒಂದು ಕ್ರಿಕೆಟ್ ಪಂದ್ಯಾವಳಿ ನಡೆಸುವುದು ಕಷ್ಟ. ಇದೆಲ್ಲಾ ಫ್ಯಾನ್ಸ್ ಸೇರಿಕೊಂಡು ಮೂರು ವರ್ಷದ ಹಿಂದೆ ಶುರು ಮಾಡಿದರು. ಈಗ ಮೂರನೇ ಸೀಸನ್.‌ ನನ್ನ ಪ್ರೀತಿಯ ಅಚ್ಚುಮೆಚ್ಚಿನ ಆಕ್ಟರ್ ವಿಷ್ಣು (Vishnuvardhan) ಸರ್ ಅವರ ಹೆಸರಿನಲ್ಲಿ ಪಂದ್ಯಾವಳಿ ನಡೆಯುತ್ತಿದೆ. ಯಜಮಾನ ಪ್ರೀಮಿಯರ್ ಲೀಗ್ ಟೈಟಲ್ ಚೆನ್ನಾಗಿದೆ. ಇದು ನಮ್ಮ ಹೃದಯಕ್ಕೆ ಹತ್ತಿರವಾಗಿದೆ. ನಮಗೆ ವಿಷ್ಣು ಸರ್ ಸ್ಫೂರ್ತಿ. ವೈಪಿಎಲ್ ನಲ್ಲಿ ಭಾಗವಹಿಸಲಿರುವ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಎಂದರು.

     

    ಯದುನಂದನ್ ಗೌಡ ಮಾತನಾಡಿ, ಯಜಮಾನ ಪ್ರೀಮಿಯರ್ ಲೀಗ್ ನ ಮೂರು ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಶುರು ಮಾಡಿದ್ದೇವು.‌ ಪ್ರೀಮಿಯರ್, ಐಪಿಎಲ್ ಅಂತಾ ಕ್ರಿಕೆಟ್ ಪಂದ್ಯಾವಳಿ ಮಾಡುತ್ತಾರೆ. ನಾವು ಯಾಕೆ ವಿಷ್ಣು ಸರ್ ಹೆಸರಿನಲ್ಲಿ ಮಾಡಬಾರದು ಎಂದು ಅವರ ಹೆಸರಲ್ಲಿ ಶುರು ಮಾಡಿದೆವು. ಕನ್ನಡ ಇಂಡಸ್ಟ್ರೀಗೆ ಕ್ರಿಕೆಟ್ ಪರಿಚಯಿಸಿದ್ದು,ನಮ್ಮ ಯಜಮಾನರು. ವಿಷ್ಣು ಸರ್ ಕನಸುಗಳಿಗೆ ಬಣ್ಣ ಹಚ್ಚುವ ಕೆಲಸ ನಡೆಯುತ್ತಿಲ್ಲ. ಹೀಗಾಗಿ ಅಭಿಮಾನಿಗಳೇ ಸೇರಿಕೊಂಡು ಯಜಮಾನ ಪ್ರೀಮಿಯರ್ ಲೀಗ್ ಪ್ರಾರಂಭಿಸಿದೆವು. ಅಭಿಮಾನಿಗಳ ನಡುವಿನ ಸ್ಟಾರ್ ವಾರ್ ಹೊಡೆದು ಹಾಕಿ ಎಲ್ಲಾ ಅಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಕೆಲಸವನ್ನು ಯಜಮಾನ ಪ್ರೀಮಿಯರ್ ಲೀಗ್ ಮೂಲಕ ಮಾಡಲಾಗಿದೆ. ನಿಮ್ಮ ಸಹಕಾರ ಇದ್ದರೆ ಈ ಪಂದ್ಯಾವಳಿಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.

  • ಶಾರುಖ್ ನೋಡಲು ಮನೆಮುಂದೆ ಜನಸಾಗರ: ಅಭಿಮಾನಿಗಳಿಗೆ ಲಾಠಿ ರುಚಿ

    ಶಾರುಖ್ ನೋಡಲು ಮನೆಮುಂದೆ ಜನಸಾಗರ: ಅಭಿಮಾನಿಗಳಿಗೆ ಲಾಠಿ ರುಚಿ

    ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Shah Rukh Khan) ನನ್ನು ನೋಡಲು ಅವರ ಮನೆ ಮುಂದೆ ನಿನ್ನೆ ಅಭಿಮಾನಿಗಳ (Fans) ಜಮಾಯಿಸಿದ್ದರು. ಈದ್ ಹಬ್ಬದ ಪ್ರಯುಕ್ತವಾಗಿ ಸೇರಿದ್ದ ಅಭಿಮಾನಿಗಳು ತುಂಬಾ ಹೊತ್ತು ನೆಚ್ಚಿನ ನಟನಿಗಾಗಿ ಕಾದರು. ಮನೆ ಮುಂದೆ ಜನಸಾಗರವೇ ಹರಿದು ಬಂದಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

    ಶಾರುಖ್ ಮನೆ ಮುಂದೆ ಪೊಲೀಸರು ಬ್ಯಾರಿಕೇಡ್ ಹಾಕಿ ಅಭಿಮಾನಿಗಳನ್ನು ಕಂಟ್ರೋಲ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಕೊನೆಗೂ ಶಾರುಖ್ ಮನೆಯ ಟೆರಸ್ ಏರಿ ಬಂದು ಅಭಿಮಾನಿಗಳತ್ತ ಕೈ ಬೀಸಿದರು. ಎಲ್ಲರಿಗೂ ಈದ್ ಶುಭಾಶಯ ಹೇಳಿದರು.

    ಐದತ್ತು ನಿಮಿಷ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸುತ್ತಲೇ ಇದ್ದರು. ನಮಸ್ಕಾರ ಮಾಡಿದರೆ, ಕೃತಜ್ಞತೆ ಹೇಳಿದರು. ಜೊತೆಗೆ ತಮ್ಮ ಕಿರಿ ಮಗನನ್ನು ಅವರು ಕರೆದುಕೊಂಡು ಬಂದಿದ್ದರಿಂದ, ಅವನಿಗೂ ಅಭಿಮಾನಿಗಳಿಗೆ ವಿಶ್ ಮಾಡಲು ಹೇಳಿದರು. ನಂತರ ಮನೆಯೊಳಗೆ ತೆರಳಿದರು. ಶಾರುಖ್ ಹೋದರೂ, ಅಭಿಮಾನಿಗಳು ಹೋಗಲಿಲ್ಲ. ಹಾಗಾಗಿ  ಲಾಠಿ ರುಚಿ ತೋರಿಸಿ, ಅಭಿಮಾನಿಗಳನ್ನು ಅಲ್ಲಿಂದ ಕಳುಹಿಸಬೇಕಾಯಿತು.

  • ಅಪ್ಪು, ದಚ್ಚು ‘ಫ್ಯಾನ್ಸ್ ವಾರ್’ಗೆ ಧ್ರುವ ಸರ್ಜಾ ಅಭಿಮಾನಿಗಳು ಎಂಟ್ರಿ

    ಅಪ್ಪು, ದಚ್ಚು ‘ಫ್ಯಾನ್ಸ್ ವಾರ್’ಗೆ ಧ್ರುವ ಸರ್ಜಾ ಅಭಿಮಾನಿಗಳು ಎಂಟ್ರಿ

    ಪುನೀತ್ ರಾಜ್ ಕುಮಾರ್ (Puneeth Rajkumar) ಪತ್ನಿ ಅಶ್ವಿನಿ (Ashwini)  ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ವಿಚಾರ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಗಜಪಡೆ ಸೋಷಿಯಲ್ ಮೀಡಿಯಾ ಖಾತೆಯಿಂದ ಅಶ್ವಿನಿ ಅವರಿಗೆ ಅವಹೇಳನ ಮಾಡಲಾಗಿತ್ತು. ಈ ಕೃತ್ಯವನ್ನು ದರ್ಶನ್ (Darshan) ಅಭಿಮಾನಿಗಳು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

    ಈ ಕೃತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಪ್ಪು ಅಭಿಮಾನಿಗಳು ನಾಲ್ಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದುರುಳರ ಹೆಡೆಮೂರಿ ಕಟ್ಟುವಂತೆ ಗೃಹ ಸಚಿವರಿಗೂ ವಿನಂತಿಸಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದಾರೆ. ಇಲ್ಲಿಗೆ ಏನೋ ಒಂದು ತಾರ್ಕಿಕ ಅಂತ್ಯ ಸಿಗಬಹುದು ಎನ್ನುತ್ತಿರುವಾಗಲೇ ಧ್ರುವ ಸರ್ಜಾ ಅಭಿಮಾನಿಗಳನ್ನು ಈ ಘಟನೆಯಲ್ಲಿ ಎಳೆತರಲಾಗುತ್ತಿದೆಯಂತೆ.

    ಈ ಪ್ರಕರಣದಲ್ಲಿ ಧ್ರುವ ಸರ್ಜಾ (Dhruva Sarja) ಅವರ ಅಭಿಮಾನಿಗಳನ್ನು ಎಳೆತಂದಿರುವುದಕ್ಕೆ ಧ್ರುವ ಸರ್ಜಾ ಅಭಿಮಾನಿಗಳು ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ  ಸಾಮಾಜಿಕ ಜಾಲತಾಣದ ಜಗಳಕ್ಕೆ ಧ್ರುವ ಸರ್ಜಾ ಹಾಗೂ ಅವರ ಅಭಿಮಾನಿಗಳನ್ನ ಎಳೆತಂದಿರುವುದನ್ನು ಖಂಡಿಸಿದ್ದಾರೆ.

     

    ಧ್ರುವ ಸರ್ಜಾ ಅಭಿಮಾನಿಗಳ ಹೆಸರಿಗೆ ಮಸಿ ಬಳಿಯಲು ದರ್ಶನ್ ಫ್ಯಾನ್ಸ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಕೂಡ ಮಾಡಿದ್ದಾರೆ. ಕಿಡಿಗೇಡಿ ಯಾರೆಂದು ಪತ್ತೆ ಮಾಡ್ಬೇಕು. ನಮ್ಮ‌ ಮೇಲೆ ಬೆರಳು ತೋರಿಸುವ ಪ್ರಯತ್ನ‌‌ ನಡೆಯುತ್ತಿದೆ . ಈ  ವಿಚಾರಕ್ಕೆ ಶೀಘ್ರ ತನಿಖೆಗೆ ಆಗ್ರಹಿಸಿವೆವು ಎಂದಿದ್ದಾರೆ ಧ್ರುವ ಫ್ಯಾನ್ಸ್.

  • ಕೇರಳದಲ್ಲಿ ನಟ ವಿಜಯ್ ನೋಡಲು ಫ್ಯಾನ್ಸ್ ನೂಕುನುಗ್ಗಲು

    ಕೇರಳದಲ್ಲಿ ನಟ ವಿಜಯ್ ನೋಡಲು ಫ್ಯಾನ್ಸ್ ನೂಕುನುಗ್ಗಲು

    ಮಿಳಿನ ಹೆಸರಾಂತ ನಟ ವಿಜಯ್ ದಳಪತಿ ಇದೀಗ ಕೇರಳದಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ಸಿನಿಮಾದ ಚಿತ್ರೀಕರಣಕ್ಕಾಗಿ ಅವರು ಅಲ್ಲಿಗೆ ತೆರಳಿದ್ದಾರೆ. ಆದರೆ, ವಿಜಯ್ ನೋಡಲು ಫ್ಯಾನ್ಸ್ ತಂಡೋಪತಂಡವಾಗಿ ಬರುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳನ್ನು ನಿಭಾಯಿಸಲು ಚಿತ್ರತಂಡ ಹರಸಾಹಸ ಪಡುತ್ತಿದೆ. ಹೋಟೆಲ್ ಮತ್ತು ಚಿತ್ರೀಕರಣದಲ್ಲಿ ಸ್ಥಳದಲ್ಲಿ ಜಾತ್ರೆಯ ರೀತಿಯಲ್ಲಿ ಅಭಿಮಾನಿಗಳು ಸೇರುತ್ತಿದ್ದಾರೆ.

    ನೂರಾರು ಕಿಲೋ ಮೀಟರ್ ಅಂತರದ ರಾಜ್ಯದಲ್ಲಿರುವ ತಮಿಳು ನಟ ವಿಜಯ್ (Vijay), ಕೇರಳಕ್ಕೆ (Kerala) ಬಾರದೇ ಬರೋಬ್ಬರಿ 14 ವರ್ಷಗಳ ಆಗಿತ್ತು. ತಮಿಳಿಗಿಂತಲೂ ಕೇರಳದಲ್ಲಿ ವಿಜಯ್ ಅವರಿಗೆ ಹೆಚ್ಚು ಅಭಿಮಾನಿಗಳು ಇದ್ದಾರೆ. ವಿಜಯ್ ಸಿನಿಮಾ ರಿಲೀಸ್ ಆದಾಗೆಲ್ಲ ಕೇರಳಾದ್ಯಂತ ವಿಜಯ್ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಆದರೂ, 14 ವರ್ಷಗಳ ಕಾಲ ಅವರು ಕೇರಳಕ್ಕೆ ಕಾಲಿಟ್ಟಿರಲಿಲ್ಲ.

    ಮೊನ್ನೆಯಷ್ಟೇ ವಿಜಯ್ ಕೇರಳಕ್ಕೆ ಬಂದಿಳಿದಿದ್ದಾರೆ. ಕಾರಣ, ಅವರ ಗ್ರೇಟೆಸ್ಟ್ ಆಫ್ ಆಲ್ ಟೈಮ್ (Greatest of all time) ಸಿನಿಮಾದ ಶೂಟಿಂಗ್ ಅಲ್ಲಿ ನಡೆಯಲಿದೆ. ಜೊತೆಗೆ ರಾಜಕಾರಣದಲ್ಲೂ ವಿಜಯ್ ಕಾಲಿಟ್ಟಿರುವುದರಿಂದ ಕೇರಳಕ್ಕೆ ಬಂದಿರುವುದಕ್ಕೆ ಮಹತ್ವವನ್ನೂ ಕಲ್ಪಿಸಲಾಗುತ್ತಿದೆ. ಸಾಕಷ್ಟು ಬಿಗಿಭದ್ರತೆಯನ್ನೂ ಅವರಿಗೆ ನೀಡಲಾಗಿದೆ.

    ಕಾಲಿವುಡ್‌ನಲ್ಲಿ (Kollywood) ವಿಜಯ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಅವರ ಸಿನಿಮಾಗಾಗಿಯೇ ಕಾದು ಕೂರುವ ಅಭಿಮಾನಿಗಳಿದ್ದಾರೆ. ಈ ಹಿಂದೆ ‘ಲಿಯೋ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿತ್ತು.  ಈ ಸಮಯದಲ್ಲೇ ಹೊಸ ಸಿನಿಮಾದತ್ತ ವಿಜಯ್ ಮುಖ ಮಾಡಿದ್ದರು.

    ವಿಜಯ್ ನಟನೆಯ ದ ಗ್ರೇಟೆಸ್ಟ್ ಆಫ್ ಆಲ್ ಟೈಮ್  ಚಿತ್ರಕ್ಕೆ ವೆಂಕಟ್ ಪ್ರಭು (Venkat Prabhu) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ದಸರಾ ಹಬ್ಬದ (ಅ.24) ಶುಭ ಸಂದರ್ಭದಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತ್ತು. ಚಿತ್ರದ ದೊಡ್ಡ ತಾರಾ ಬಳಗ ಈ ಸಮಾರಂಭದಲ್ಲಿ ಭಾಗಿಯಾಗಿತ್ತು.

     

    ದಳಪತಿ ವಿಜಯ್ ಜೊತೆ ಬಹುಭಾಷಾ ನಟ ಕನ್ನಡಿಗ ಪ್ರಭುದೇವ (Prabhudeva), ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ಜಯರಾಮ್, ಯೋಗಿ ಬಾಬು (Yogi Babu) ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಮುಹೂರ್ತ ಕಾರ್ಯಕ್ರಮದಲ್ಲಿಯೂ ಅವರೆಲ್ಲ ಭಾಗಿಯಾಗಿದ್ದರು.

  • ರ‍್ಯಾಲಿಗೆ ಅನುಮತಿ ನಿರಾಕರಣೆ:  ಸ್ವಲ್ಪ ದಿನ ಕಾಯಿರಿ, ಮತ್ತೆ ಬರ್ತೀವಿ ಅಂತಿದ್ದಾರೆ ದರ್ಶನ್ ಫ್ಯಾನ್ಸ್

    ರ‍್ಯಾಲಿಗೆ ಅನುಮತಿ ನಿರಾಕರಣೆ: ಸ್ವಲ್ಪ ದಿನ ಕಾಯಿರಿ, ಮತ್ತೆ ಬರ್ತೀವಿ ಅಂತಿದ್ದಾರೆ ದರ್ಶನ್ ಫ್ಯಾನ್ಸ್

    ಇಂದು ಬೊಮ್ಮನಹಳ್ಳಿಯಲ್ಲಿ ನಡೆಯಬೇಕಿದ್ದ ಬೈಕ್ ರ‍್ಯಾಲಿಗೆ ಪೊಲೀಸರು ಅನುಮತಿ ನೀಡಲಿಲ್ಲ ಎನ್ನುವ ಕಾರಣಕ್ಕಾಗಿ ರದ್ದು ಮಾಡಲಾಗಿದೆ. ಆದರೆ, ಈ ರ‍್ಯಾಲಿ ನಡೆಯದೇ ಬಿಡಲಿಲ್ಲ. ಮುಂದಿನ ದಿನಾಂಕವನ್ನು ತಿಳಿಸುವುದಾಗಿ ದರ್ಶನ್ ಫ್ಯಾನ್ಸ್ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ತಾವು ಯಾರಿಗೆ ಠಕ್ಕರ್ ಕೊಡಬೇಕು ಎಂದುಕೊಂಡಿದ್ದರೋ ಕೊಟ್ಟೇ ಕೊಡುತ್ತೇವೆ ಎಂದು ಮತ್ತೊಮ್ಮೆ ಸಂದೇಶ ರವಾನಿಸಿದ್ದಾರೆ.

    ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ವಿರುದ್ಧ ಠಕ್ಕರ್ ಕೊಡುವುದಕ್ಕಾಗಿ ನಟ ದರ್ಶನ್ (Darshan) ಅಭಿಮಾನಿಗಳು (Fans) ಇಂದು ಬೈಕ್ ರ‍್ಯಾಲಿ (Bike rally) ಏರ್ಪಡಿಸಿದ್ದರು. ಈ ರ‍್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹಾಗಾಗಿ ಇಂದು ಬೈಕ್ ರ‍್ಯಾಲಿ ನಡೆದಿಲ್ಲ.

    ಇಂದು (ಫೆ.26) `ಡಿ ಬಾಸ್ ಜಿಂದಾಬಾದ್’ ಹೆಸರಲ್ಲಿ ದರ್ಶನ್ ಅಭಿಮಾನಿಗಳಿಂದ ಬೃಹತ್ ಬೈಕ್ ರ‍್ಯಾಲಿ ಏರ್ಪಡಿಸಿದ್ದರು. ಹಾಗಾಗಿ ದರ್ಶನ್- ಉಮಾಪತಿ ಸಮರ ನಿಲ್ಲುತ್ತಿಲ್ಲ. ಉಮಾಪತಿಗೆ (Umapathy) ಪಾಠ ಕಲಿಸಲೆಂದೇ ‘ಒಂಟಿ ಸಲಗ’ ಹೆಸರಲ್ಲಿ ಬೃಹತ್ ರ‍್ಯಾಲಿ ನಡೆಸಲು ದರ್ಶನ್ ಫ್ಯಾನ್ಸ್ ತಯಾರಿ ನಡೆಸಿದ್ದರು. ಡಿಬಾಸ್ ಫ್ಯಾನ್ಸ್ ಟೀಮ್‌ಗೆ ಒಂಟಿ ಸಲಗ ಎಂದು ಹೆಸರಿಟ್ಟಿದ್ದರು.

    ರ‍್ಯಾಲಿ ಮಾಡ್ತಿರೋ ಜಾಗವೇ ಗಮನಾರ್ಹವಾಗಿದ್ದು, ಬೊಮ್ಮನಹಳ್ಳಿಯಲ್ಲಿ ಬೃಹತ್ ರ‍್ಯಾಲಿಯಲ್ಲಿ ದರ್ಶನ್ ಸಾವಿರಾರು ಅಭಿಮಾನಿಗಳು ಒಗ್ಗಟ್ಟು ಪ್ರದರ್ಶಿಸಲಿದ್ದರು. ಬೊಮ್ಮನಹಳ್ಳಿ ಮಹಾ ಗಣಪತಿ ದೇವಸ್ಥಾನದಿಂದ ಹೆಚ್‌ಎಸ್‌ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್‌ವರೆಗೆ ರ‍್ಯಾಲಿ ನಡೆಯಬೇಕಿತ್ತು. ಉಮಾಪತಿಗೆ ಠಕ್ಕರ್ ಕೊಡಲು ಅವರದ್ದೇ ಕ್ಷೇತ್ರದಲ್ಲಿ ಇಂದು ಸಂಜೆ 6 ಗಂಟೆಗೆ ಡಿಬಾಸ್ ಫ್ಯಾನ್ಸ್ ರ‍್ಯಾಲಿ ಮಾಡಲು ಹೊರಟಿದ್ದರು.

    ಇತ್ತೀಚೆಗೆ ಉಮಾಪತಿ ಅವರು ದರ್ಶನ್ ನಟನೆಯ ‘ಕಾಟೇರ’ ಸಿನಿಮಾಗೆ ಟೈಟಲ್ ಕೊಟ್ಟಿದ್ದೇ ನಾನು ಎಂದು ಸಂದರ್ಶನಗಳಲ್ಲಿ ಮಾತನಾಡಿದ್ದರು. ಈ ವಿಚಾರಕ್ಕೆ ಕಾಟೇರ ಸಕ್ಸಸ್ ಮೀಟ್‌ನಲ್ಲಿ ದರ್ಶನ್ ಪ್ರತಿಕ್ರಿಯೆ ನೀಡಿದ್ದರು. ಹೇ ತಗಡು ಚಿತ್ರಕ್ಕೆ ‘ಕಾಟೇರ’ ಎಂದು ಟೈಟಲ್ ಇಟ್ಟಿದ್ದೇ ನಾನು ಎಂದು ದರ್ಶನ್ ಉಮಾಪತಿಗೆ ತಿರುಗೇಟು ನೀಡಿದ್ದರು.