Tag: Fani

  • ಸಿಎಫ್‌ಟಿಆರ್‌ಐ ನಿಂದ ಒಡಿಶಾದ ಜನರಿಗೆ 2.5 ಟನ್ ಆಹಾರ ರವಾನೆ

    ಸಿಎಫ್‌ಟಿಆರ್‌ಐ ನಿಂದ ಒಡಿಶಾದ ಜನರಿಗೆ 2.5 ಟನ್ ಆಹಾರ ರವಾನೆ

    ಮೈಸೂರು: ಪೂರ್ವ ಕರಾವಳಿ ರಾಜ್ಯಗಳಲ್ಲಿ ಫೋನಿ ಚಂಡಮಾರುತ ಎಫೆಕ್ಟ್ ಹಿನ್ನಲೆಯಲ್ಲಿ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ(ಸಿಎಫ್‌ಟಿಆರ್‌ಐ) ತುರ್ತು ಆಹಾರವನ್ನು ರವಾನಿಸಿದೆ.

    ಒಡಿಶಾದ 1 ಲಕ್ಷ ಮಂದಿಗೆ ಆಗುವಷ್ಟು ಆಹಾರ ಪೂರೈಕೆ ಮಾಡಲಾಗಿದ್ದು, ತಕ್ಷಣ ತಿನ್ನುವ ಹಾಗೂ ಬೇಯಿಸಿ ತಿನ್ನುವ ಆಹಾರ ಪೊಟ್ಟಣಗಳನ್ನು ಕಳುಹಿಸಲಾಗಿದೆ. ಕಳೆದ ಎರಡು ದಿನಗಳಿಂದ ಹಗಲಿರುಳು ದುಡಿದ ಸಿಎಫ್‌ಟಿಆರ್‌ಐ ಸಿಬ್ಬಂದಿ ಭಾನುವಾರ ರಾತ್ರಿ ಒಂದು ಕಂಟೈನರ್, ಇಂದು ಮತ್ತೊಂದು ಕಂಟೈನರ್ ನಲ್ಲಿ ಒಟ್ಟು 2.5 ಟನ್ ತೂಕದ ಆಹಾರವನ್ನು ಸಾಗಿಸಿದ್ದಾರೆ.

    ಏರ್ ಇಂಡಿಯಾದ ಮೂಲಕ ಸಿಎಫ್‌ಟಿಆರ್‌ಐ ಆಹಾರವನ್ನು ಒಡಿಶಾಕ್ಕೆ ತಲುಪಿಸಲಾಗಿದೆ. ತಕ್ಷಣ ತಯಾರಿಸಿ ತಿನ್ನುವ ಅವಲಕ್ಕಿ, ಉಪ್ಪಿಟ್ಟು, ರೇಡಿ ಟು ಈಟ್ ಉಪ್ಮ, ದೀರ್ಘಕಾಲ ಇಡಬಹುದಾದ ಚಪಾತಿ, ಟೋಮ್ಯಾಟೋ ಚಟ್ನಿ ಹಾಗೂ ಹೈಪ್ರೋಟಿನ್ ಒಂದು ಹೊತ್ತಿನ ಆಹಾರ ಸಮಾನದ ಬಿಸ್ಕೆಟ್ ಪ್ಯಾಕ್‍ಗಳನ್ನು ರವಾನಿಸಲಾಗಿದೆ.

  • ಫೋನಿ ಚಂಡಮಾರುತ ಅಬ್ಬರ ಅಂಡಮಾನ್-ನಿಕೋಬಾರ್‌ನಲ್ಲಿ ಕನ್ನಡಿಗರ ಪರದಾಟ

    ಫೋನಿ ಚಂಡಮಾರುತ ಅಬ್ಬರ ಅಂಡಮಾನ್-ನಿಕೋಬಾರ್‌ನಲ್ಲಿ ಕನ್ನಡಿಗರ ಪರದಾಟ

    ಚಿಕ್ಕಬಳ್ಳಾಪುರ: ಫೋನಿ ಚಂಡಮಾರುತದ ಅಬ್ಬರಕ್ಕೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ 70 ಮಂದಿ ಕನ್ನಡಿಗರು ಪರದಾಡುವಂತಾಗಿದೆ.

    ಏಪ್ರಿಲ್ 29ರಂದು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಮೂಲೆಗಳಿಂದ ಅಂಡಮಾನ್- ನಿಕೋಬಾರ್ ದ್ವೀಪಕ್ಕೆ ಪ್ರವಾಸ ಕೈಗೊಂಡಿದ್ದರು. ಆದರೆ ಪ್ರವಾಸ ಮುಗಿಸಿ ಇಂದು ವಾಪಾಸ್ಸಾಗಲು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯಲ್ಲಿ ಟಿಕೆಟ್ ಸಹ ಬುಕ್ ಮಾಡಿದ್ದರು.

    ಫೋನಿ ಸೈಕ್ಲೋನ್ ಭೀತಿಯಿಂದ ಅಂಡಮಾನ್ – ನಿಕೋಬಾರ್ ನ ಪೋರ್ಟ್ ಬ್ಲೇರ್ ನ ವೀರ ಸಾವರ್ಕರ್ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ರದ್ದುಪಡಿಸಲಾಗಿದೆ. ಹೀಗಾಗಿ ಕರ್ನಾಟಕಕ್ಕೆ ವಾಪಾಸ್ಸಾಗಲು ಬೇರೆ ದಾರಿ ಕಾಣದ ಕನ್ನಡಿಗರು ಪರದಾಡುತ್ತಿದ್ದಾರೆ.

    ಸದ್ಯ ಪೋರ್ಟ್ ಬ್ಲೇರ್ ಏರ್ ಪೋರ್ಟ್ ನಲ್ಲಿ ಕಾಲ ಕಳೆಯುತ್ತಿರುವ ಕನ್ನಡಿಗರಿಗೆ ಉಳಿದುಕೊಳ್ಳಲು ಸಹ ಬೇರೆ ದಾರಿ ಇಲ್ಲವಾಗಿದೆ. 70 ಮಂದಿಯಲ್ಲಿ ವೃದ್ಧರು ಮಕ್ಕಳು ಸಹ ಇದ್ದು ಊಟ ತಿಂಡಿಗೂ ಕಷ್ಟಪಡುವಂತಾಗ್ತಿದೆ. ರಾಜ್ಯ ಸರ್ಕಾರ ಸಹಾಯಕ್ಕೆ ಧಾವಿಸುವಂತೆ ಪಬ್ಲಿಕ್ ಟಿವಿಗೆ ಕರೆ ಮಾಡಿ ಕನ್ನಡಿಗರು ಮನವಿ ಮಾಡಿಕೊಂಡಿದ್ದಾರೆ.

  • ಮಗುವಿಗೆ `ಫೋನಿ’ ಎಂದು ಹೆಸರಿಟ್ಟ ದಂಪತಿ

    ಮಗುವಿಗೆ `ಫೋನಿ’ ಎಂದು ಹೆಸರಿಟ್ಟ ದಂಪತಿ

    ಭುವನೇಶ್ವರ್: ಚಂಡಮಾರುತ ಸಮಯದಲ್ಲಿ ಹುಟ್ಟಿದ್ದ ಹೆಣ್ಣು ಮಗುವಿಗೆ ದಂಪತಿ `ಫೋನಿ’ ಎಂದು ಹೆಸರಿಟ್ಟಿದ್ದಾರೆ.

    ಒಡಿಶಾದ ಭುವನೇಶ್ವರ್ ನಲ್ಲಿ ಶುಕ್ರವಾರ 11.03ರ ಸುಮಾರಿಗೆ ರೈಲ್ವೇ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದೆ. ಮಹಿಳೆ ರೈಲ್ವೆ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಚಂಡಮಾರುತಕ್ಕೆ ಫೋನಿ ಹೆಸರು ಬಂದಿದ್ದು ಹೇಗೆ?

    ಮಾಧ್ಯಮ ಸಂಸ್ಥೆಯೊಂದು ವೈದ್ಯರ ಜೊತೆ ಇರುವ ಮಗುವಿನ ಫೋಟೋ ಹಾಕಿ ಟ್ವೀಟ್ ಮಾಡಿದೆ. “32 ವರ್ಷದ ಮಹಿಳೆ ಸುಮಾರು 11.03ಕ್ಕೆ ರೈಲ್ವೆ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ `ಫೋನಿ’ ಎಂದು ಹೆಸರಿಟ್ಟಿದ್ದಾರೆ. ಮಹಿಳೆ ರೈಲ್ವೆ ಸಿಬ್ಬಂದಿಯಾಗಿದ್ದು, ಸದ್ಯ ತಾಯಿ ಹಾಗೂ ಮಗು ಕ್ಷೇಮವಾಗಿದ್ದಾರೆ” ಎಂದು ಬರೆದುಕೊಂಡಿದೆ.

    ಈ ಟ್ವೀಟ್‍ಗೆ ರೀ-ಟ್ವೀಟ್ ಮಾಡುವ ಮೂಲಕ ಹಲವು ಜನ ಮಗುವನ್ನು ಸ್ವಾಗತಿಸಿದ್ದಾರೆ. ಅಲ್ಲದೆ ಕೆಲವರು ಮಗುವಿಗೆ ಫೋನಿ ಎಂದು ಹೆಸರು ಇಡಬಾರದಿತ್ತು. ಏಕೆಂದರೆ ಫೋನಿ ಎಂದರೆ ಹಾವು ಎಂದರ್ಥ ಎಂದು ಹೇಳಿ ರೀ-ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಚಂಡ ಮಾರುತಕ್ಕೆ ಒಡಿಶಾ ತತ್ತರ – 8 ಸಾವು, ಆಸ್ತಿ-ಪಾಸ್ತಿ ನಷ್ಟ ಲೆಕ್ಕಕ್ಕೇ ಸಿಗ್ತಿಲ್ಲ

    ಪಶ್ಚಿಮ ಬಂಗಾಳದಲ್ಲೂ 100ರಿಂದ 110 ಕಿ.ಮೀ ವೇಗದಲ್ಲಿ ಫೋನಿ ಚಂಡಮಾರುತ ಅಪ್ಪಳಿಸಿದೆ. ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ್, ದಕ್ಷಿಣ ಮತ್ತು ಉತ್ತರ 24 ಪರಗಣ, ಹೌರಾ, ಹೂಗ್ಲಿ, ಜಾಗ್ರಾಂ, ಕೋಲ್ಕತ್ತಾದಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ಕೋಲ್ಕತ್ತಾ ಏರ್ ಪೋರ್ಟ್ ನಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಬೆಳಗ್ಗೆ 11.30ರವರೆಗೆ ಅತ್ಯಂತ ಭೀಕರ ಸ್ಥಿತಿಯಲ್ಲಿರುವ ಫೋನಿ ಚಂಡಮಾರುತ, ರಾತ್ರಿ 11.30ರ ವೇಳೆಗೆ ತೀವ್ರ ಸ್ಥಿತಿಗೆ ತನ್ನ ಅಬ್ಬರವನ್ನ ತಗ್ಗಿಸಲಿದೆ ಎಂಬುದಾಗಿ ತಿಳಿದುಬಂದಿದೆ.