Tag: fan club

  • ನಿರ್ದೇಶಕ ಆರ್.ಚಂದ್ರು ಹುಟ್ಟುಹಬ್ಬ: ಅಭಿಮಾನಿ ಸಂಘದ ಜೊತೆ ಹೊಸ ಯೋಜನೆ ಘೋಷಣೆ

    ನಿರ್ದೇಶಕ ಆರ್.ಚಂದ್ರು ಹುಟ್ಟುಹಬ್ಬ: ಅಭಿಮಾನಿ ಸಂಘದ ಜೊತೆ ಹೊಸ ಯೋಜನೆ ಘೋಷಣೆ

    ನಾಳೆ (ಫೆ.07) ಹೆಸರಾಂತ ನಿರ್ದೇಶಕ ಆರ್.ಚಂದ್ರು (R. Chandru) ಅವರ ಹುಟ್ಟು ಹಬ್ಬ (Birthday). ಈ ದಿನದಂದು ಅವರ ನಿರ್ದೇಶನದ, ನಿರ್ಮಾಣದ ಸಿನಿಮಾಗಳ ಅಪ್ ಡೇಟ್ ಜೊತೆಗೆ ಹೊಸದೊಂದು ಯೋಜನೆಯನ್ನು ಅವರ ಅಭಿಮಾನಿಗಳು ಲಾಂಚ್ ಮಾಡಲಿದ್ದಾರೆ. ನಾಳೆಯೇ  ಅಖಿಲ ಭಾರತ ಆರ್.ಚಂದ್ರು ಅಭಿಮಾನಿಗಳ (Fans club)ಸಂಘ ಉದ್ಘಾಟನೆ ಆಗಲಿದ್ದು, ಆ ಸಂಘದ ಮೂಲಕ ಜನಪರ ಕೆಲಸಗಳನ್ನು ಮಾಡಲಾಗುತ್ತದೆಯಂತೆ.

    ತಮ್ಮ ಚೊಚ್ಚಲ ನಿರ್ದೇಶನದ ತಾಜ್ ಮಹಲ್ ಚಿತ್ರದ ಮೂಲಕ ರಾಜ್ಯಾದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಚಂದ್ರು,  ಕಬ್ಜ ಎಂಬ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಈಗ ದೇಶದೆಲ್ಲೆಡೆ ಗುರುತಿಸಿಕೊಂಡಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಸಿನಿಮಾ ಮಾಡುವ ಮೂಲಕ ಗಮನ ಸೆಳೆದರೆ, ತಮ್ಮೊಂದಿಗೆ ಕೆಲಸ ಮಾಡುವವರಿಗೂ ಉತ್ತೇಜಿಸಿದ್ದಾರೆ. ಅವರಿಗಾಗಿ ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ.

    ಈ ಬಾರಿಯ ಚಂದ್ರು ಹುಟ್ಟು ಹಬ್ಬದಂದು ರಾಜ್ಯಾದ್ಯಂತ ಇರುವ ಅವರ ಅಭಿಮಾನಿಗಳು, ಮೈಲಾರಿ ಆರ್ ಚಂದ್ರು ಅಭಿಮಾನಿಗಳು, ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರು ಸೇರಿ ಅಭಿಮಾನಿಗಳ ಸಂಘ ಸ್ಥಾಪನೆಗೆ ಮುಂದಾಗಿದ್ದು, ‘ಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘ’ ವನ್ನು ನಾಳೆ ಆರಂಭಿಸಲಿದ್ದಾರೆ.

    ನಾಳೆ ಬೆಳಗ್ಗೆ ಆರ್. ಚಂದ್ರು ಅವರ ಅಭಿಮಾನಿಗಳ ಸಂಘದ ವತಿಯಿಂದ ಆರ್. ಚಂದ್ರು ಅವರ ನಿವಾಸದ ಬಳಿ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ. ಹಲವು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘಕ್ಕೂ ಚಾಲನೆ ಸಿಗಲಿದ್ದು,  ಚಂದ್ರು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ದವಾಗಿದ್ದಾರೆ.

    ಆರ್. ಚಂದ್ರು ಅವರು 5 ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಿಸಿದ ಬೆನ್ನಲ್ಲೇ ಅವರ ಅಭಿಮಾನಿಗಳು ಶಕ್ತಿಯಾಗಿ ನಿಂತಿದ್ದು, ಸಾಮಾಜಿಕ ಜಾಲತಾಣದಲ್ಲೂ ಸಹ ಭಾರಿ ಬೆಂಬಲ ಸಿಕ್ಕಿದೆ. ಕಬ್ಜ ಯಶಸ್ಸಿನ ನಂತರ ಮುಂದಿನ ಸಿನಿಮಾ ಘೋಷಣೆಗೆ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಆರ್. ಚಂದ್ರು ಅವರು, ಒಮ್ಮೆಲೆ 5 ಸಿನಿಮಾಗಳ ಘೋಷಣೆ ಮತ್ತು ಆರ್ ಸಿ ಸ್ಟುಡಿಯೋಸ್ ಎಂಬ ಬೃಹತ್ ಪ್ಯಾನ್ ಇಂಡಿಯಾ ಸಂಸ್ಥೆ ನಿರ್ಮಾಣ ಮಾಡಿದ್ದಾರೆ.

  • ಬೆಳ್ಳಿ ರಥದಲ್ಲಿ ಅಪ್ಪು ಭಾವಚಿತ್ರ – ಅಭಿಮಾನಿಗಳಿಂದ ಮೆರವಣಿಗೆ

    ಬೆಳ್ಳಿ ರಥದಲ್ಲಿ ಅಪ್ಪು ಭಾವಚಿತ್ರ – ಅಭಿಮಾನಿಗಳಿಂದ ಮೆರವಣಿಗೆ

    ಚಿಕ್ಕಬಳ್ಳಾಪುರ: ಬೆಳ್ಳಿ ರಥದಲ್ಲಿ ಪುನೀತ್ ಭಾವಚಿತ್ರ ಇರಿಸಿ ಊರೆಲ್ಲಾ ಮೆರವಣಿಗೆ ಮಾಡಿ ಸಡಗರ ಸಂಭ್ರಮದಿಂದ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗಿದೆ.

    ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಗ್ರಾಮದ ಚೆಂಗಲರಾಯರೆಡ್ಡಿ ವೃತ್ತದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡಲಾಗಿದೆ. ಕೇಕ್ ಕತ್ತರಿಸಿ ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ಆಚರಿಸಿದ್ದಾರೆ. ತದನಂತರ ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

    ಪೂಜೆ ಸಲ್ಲಿಸಿ ಪುನೀತ್ ರಾಜಕುಮಾರ್ ಅವರನ್ನು ನೆನೆದು ಇಡೀ ಗ್ರಾಮಸ್ಥರು ಪುನೀತ್ ಆಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಪುನೀತ್ ಅಭಿನಯದ ಜೇಮ್ಸ್ ಚಿತ್ರ ಭರ್ಜರಿ ಪ್ರದರ್ಶನ ಕಾಣಲಿ ಅಂತ ಗ್ರಾಮದ ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹ್ಯಾಪಿ ಬರ್ತ್ ಡೇ ಅಪ್ಪು : ದಕ್ಷಿಣದ ಸಿನಿತಾರೆಯರ ಭಾವುಕ ಸಂದೇಶ