Tag: Famine

  • ಭೀಕರ ಬರಕ್ಕೆ ತತ್ತರಿಸಿದ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳ ದರ್ಪ

    ಭೀಕರ ಬರಕ್ಕೆ ತತ್ತರಿಸಿದ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳ ದರ್ಪ

    ಗದಗ: ಬರಗಾಲದ ಸಂದರ್ಭದಲ್ಲಿ ರೈತನ (Farmer) ಮೇಲೆ ಬ್ಯಾಂಕ್ ಅಧಿಕಾರಿಗಳು ಸಾಲದ (Loan) ವಿಷಯಕ್ಕೆ ದರ್ಪ ತೋರಿದ್ದಾರೆ ಎಂಬ ಆರೋಪ ಜಿಲ್ಲೆಯ ಮುಂಡರಗಿ (Mundaragi) ಪಟ್ಟಣದಲ್ಲಿ ಕೇಳಿ ಬಂದಿದೆ.

    ಮುಂಡರಗಿ ತಾಲೂಕಿನ ಕಕ್ಕೂರ ಗ್ರಾಮದ ಬಸವರಾಜ್ ನಿಟ್ಟಾಲಿ ಎಂಬ ರೈತನಿಗೆ ಬ್ಯಾಂಕ್ ಅಧಿಕಾರಿಗಳು ಸಾಲ ತೀರಿಸುವ ಕುರಿತು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ರೈತ ಬಸವರಾಜ್ ನಿಟ್ಟಾಲಿ ಮುಂಡರಗಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ 1.70 ಲಕ್ಷ ರೂ. ಸಾಲ ಪಡೆದಿದ್ದರು. ಈಗ ಒಂದು ವರ್ಷದಲ್ಲಿ ಅಸಲು, ಬಡ್ಡಿ ಸೇರಿ 2 ಲಕ್ಷ 20 ಸಾವಿರ ರೂ.ಗೂ ಅಧಿಕವಾಗಿದೆ.

    ಬ್ಯಾಂಕ್‌ನವರು ಸಾಲ ತೀರಿಸುವಂತೆ ಪದೇ ಪದೇ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ. ತನ್ನನ್ನು ಎತ್ತಾಕಿಕೊಂಡು ಹೋಗಿ ಬ್ಯಾಂಕ್‌ನಲ್ಲಿ ಕಿರುಕುಳ ನೀಡಿದ್ದಾರೆ. ಹೆದರಿಸಿ ಸಾಲದ ಪತ್ರಕ್ಕೆ ಹೆಬ್ಬೆರಳು ಸಹಿ ಮಾಡಿಸಿಕೊಂಡಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಪವರ್ ಶೇರಿಂಗ್ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ಕೃಷ್ಣ ಭೈರೇಗೌಡ

    ಭೀಕರ ಬರಕ್ಕೆ ತತ್ತರಿಸಿದ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳು ದರ್ಪ ತೋರಿದ್ದಾರೆ. ಭೀಕರ ಬರಗಾಲದ ಸಂದರ್ಭದಲ್ಲಿ ಹೀಗೆ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳು ಗೂಂಡಾವರ್ತನೆ ತೋರಿದ್ದಾರೆ. ರಜೆ ಇದ್ದರೂ ಸಾಲ ಮರುಪಾವತಿ ಮಾಡುವಂತೆ ರೈತನನ್ನು ಬ್ಯಾಂಕಿಗೆ ಕರೆತಂದು ದಬ್ಬಾಳಿಕೆ ಮಾಡಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಡಿಸುತ್ತಿದ್ದಾರೆ.

    ಬ್ಯಾಂಕ್ ಅಧಿಕಾರಿಗಳ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲಾಗಿದೆ. ಬ್ಯಾಂಕ್ ಅಧಿಕಾರಿಗಳ ಅಟ್ಟಹಾಸದಿಂದ ಅನೇಕ ಅನ್ನದಾತರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ: ವೀರಪ್ಪ ಮೊಯ್ಲಿ

    Web Stories 
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಂಹಾಚಲಂನಿಂದ ಬಂದಿದ್ದ ವರಹಲಕ್ಷ್ಮಿನರಸಿಂಹಸ್ವಾಮಿಯ ಅದ್ಧೂರಿ ಕಲ್ಯಾಣೋತ್ಸವ

    ಸಿಂಹಾಚಲಂನಿಂದ ಬಂದಿದ್ದ ವರಹಲಕ್ಷ್ಮಿನರಸಿಂಹಸ್ವಾಮಿಯ ಅದ್ಧೂರಿ ಕಲ್ಯಾಣೋತ್ಸವ

    ಕೋಲಾರ: ಸಿಂಹಾಚಲಂನಿಂದ ಬಂದಿದ್ದ ವರಹಲಕ್ಷ್ಮಿನರಸಿಂಹಸ್ವಾಮಿ ಕಲ್ಯಾಣೋತ್ಸವ ಕೋಲಾರದ ಶ್ರೀನಿವಾಸಪುರದಲ್ಲಿ ಅದ್ಧೂರಿಯಾಗಿ ನಡೆಯಿತು.

    ಶ್ರೀನಿವಾಸಪುರದ ಜನ್ಮ ಭೂಮಿ ವೇದಿಕೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಲ್ಯಾಣೊತ್ಸವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಮೂಲೆ-ಮೂಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರ ದಂಡು ಆಗಮಿಸಿತ್ತು.

    ಕಲ್ಯಾಣೋತ್ಸವ ಕೊನೆಯ ದಿನದ ಕಾರ್ಯಕ್ರಮ ಅಂಗವಾಗಿ ಸಿಂಹಾಚಲಂ ವರಹಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವವನ್ನು ಅತ್ಯಂತ ವೈಭವೋಪೇತವಾಗಿ ನೆರವೇರಿಸಲಾಯಿತು. ತೆಲಂಗಾಣ ರಾಜ್ಯದ ವಿಶಾಖಪಟ್ಟಣಂ ಜಿಲ್ಲೆಯ ವೈಷ್ಣವ ಪುಣ್ಯ ಕ್ಷೇತ್ರ ಸಿಂಹಾಚಲ ಬೆಟ್ಟದ ಮೇಲಿರುವ ಶ್ರೀವರಹಲಕ್ಷ್ಮೀನರಸಿಂಹಸ್ವಾಮಿ ದೇವಾಲಯವು ಅತಿ ವಿಶೇಷವಾದದ್ದು, ಅಲ್ಲಿಂದಲೇ ಆಗಮಿಸಿದ ಆಗಮಿಕರು ವೇದ-ಮಂತ್ರ ಘೋಷಗಳೊಂದಿಗೆ ಮಂಗಳ ವಾದ್ಯಗಳ ಜೊತೆಗೆ ವರಹ ಲಕ್ಷ್ಮೀನರಸಿಂಹ ಸ್ವಾಮಿಗೆ ನೂತನ ಯಜ್ನೋಪವಿತ ಧಾರಣೆ ಮಾಡಿದರು.

    ಗೋತ್ರ ಪ್ರವರಗಳ ಮುಖೇನ ಮಂತ್ರ ಘೋಷಗಳ ನಡುವೆ ಸ್ವಾಮಿಗೆ ನೂತನ ವಸ್ತ್ರಾಭರಣಗಳನ್ನು ಹಾಕಿ ಆಲಂಕಾರ ಮಾಡಲಾಯಿತು. ನಂತರ ಕನ್ಯಾದಾನ, ಮಾಂಗಲ್ಯ ಧಾರಣೆ, ಮಹೂರ್ತಗಳನ್ನ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಕೋಲಾರದಲ್ಲಿ ಉತ್ತಮವಾದ ಮಳೆ- ಬೆಳೆ ಆಗಿಲ್ಲ. ಬರಗಾಲದ ಛಾಯೆ ಆವರಿಸಿದ್ದು, ಕೆರೆಗಳು ತುಂಬಿ ಹರಿಯಲಿ ಎಂದು ಧಾರ್ಮಿಕ ಕಾರ್ಯಕ್ರಮ ನೆರವೇರಿಸೋದರ ಮೂಲಕ ಎಲ್ಲರಿಗೂ ಒಳಿತಾಗಲಿ ಎಂದು ಬೇಡಿಕೊಳ್ಳಲಾಯಿತು.

    ಒಟ್ಟಿನಲ್ಲಿ ಕೋಲಾರ ಜಿಲ್ಲೆಯ ಮಾವಿನ ಮಡಿಲು ಶ್ರೀನಿವಾಸಪುರ ಇಂದು ನರಸಿಂಹಸ್ವಾಮಿಯ ಭಕ್ತಿಯಲ್ಲಿ ಮಿಂದೆದ್ದಿತ್ತು. ಉತ್ತಮ ಮಳೆ ಬೆಳೆಯಾಗಲೀ ಜನರು ಸಮೃದ್ಧಿಯಾಗಿರಲೆಂದು ಬಂದಿದ್ದ ಜನರು ಪ್ರಾರ್ಥಿಸಿದರು. ಈ ಮೂಲಕ ಜನರು ಭಕ್ತಿಯಲ್ಲಿ ಮಿಂದೆದ್ದು ದೇವರ ಕೃಪೆಗೆ ಪಾತ್ರರಾದರು.

  • ಧರ್ಮಸ್ಥಳದ ನಂತರ ರಾಯರ ಮಂತ್ರಾಲಯಕ್ಕೂ ತಟ್ಟಿದ ಬರದ ಬಿಸಿ!

    ಧರ್ಮಸ್ಥಳದ ನಂತರ ರಾಯರ ಮಂತ್ರಾಲಯಕ್ಕೂ ತಟ್ಟಿದ ಬರದ ಬಿಸಿ!

    ರಾಯಚೂರು: ಧರ್ಮಸ್ಥಳದ ನಂತರ ಈ ಬಾರಿಯ ಬರಗಾಲದ ಎಫೆಕ್ಟ್ ಗುರುರಾಯರ ಸನ್ನಿಧಿ ಮಂತ್ರಾಲಯಕ್ಕೂ ತಟ್ಟಿದೆ. ಮಂತ್ರಾಲಯಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಎದುರಾಗಿದೆ.

    ಈ ಬಾರಿಯ ಬರಗಾಲ ಎಲ್ಲ ಕಡೆ ನೀರಿನ ಸಮಸ್ಯೆಯನ್ನು ಉಂಟು ಮಾಡಿದೆ. ಈ ಪರಿಣಾಮ ಈಗ ಪುಣ್ಯಕ್ಷೇತ್ರಗಳಿಗೂ ತಟ್ಟಿದೆ. ತುಂಗಭದ್ರಾ ನದಿ ದಡದಲ್ಲಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಎದುರಾಗಿದೆ. ನದಿ ಸಂಪೂರ್ಣ ಬತ್ತಿರುವುದರಿಂದ ಭಕ್ತರು ಪುಣ್ಯ ಸ್ನಾನ ಮಾಡಲು ಆಗದೆ ಪರದಾಡುವಂತಾಗಿದೆ.

    ಕಳೆದ ಮೂರು ತಿಂಗಳುಗಳಿಂದ ನದಿ ಸಂಪೂರ್ಣ ಬತ್ತಿ ಹೋಗಿದ್ದು, ನೀರಿನ ಸಮಸ್ಯೆ ಉಂಟಾಗಿದೆ ಆದ್ದರಿಂದ ಭಕ್ತರ ಸ್ನಾನಕ್ಕೆ ನೀರಿನ ಸಮಸ್ಯೆಯಾಗಿದೆ. ಪ್ರತಿ ವರ್ಷ ತುಂಗಭದ್ರಾ ನದಿ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಖಾಲಿಯಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್ ತಿಂಗಳಲ್ಲಿಯೇ ತುಂಗಭದ್ರಾ ನದಿಯೂ ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ಗುರುವಾರ ಹಾಗೂ ವಿಶೇಷ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಸಂಖ್ಯೆಯ ಭಕ್ತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

    ಮಠದ ವತಿಯಿಂದ ಕೊಳವೆ ಬಾವಿ ಕೊರೆಸಿದ್ದು ಇದರಿಂದ ನೀರು ಪಡೆದು ಭಕ್ತರು ಸ್ನಾನ ಘಟ್ಟದಲ್ಲಿ ನಲ್ಲಿಗಳ ಮೂಲಕ ಸ್ನಾನ ಮಾಡುತ್ತಿದ್ದಾರೆ. ಕುಡಿಯುವ ನೀರಿಗೆ ಮಠ ಹಾಗೂ ಖಾಸಗಿಯವರು ಅಲ್ಲಲ್ಲಿ ವ್ಯವಸ್ಥೆಗಳನ್ನು ಮಾಡಿದ್ದಾರೆ. ಇದೇ ರೀತಿಯಲ್ಲಿ ಧರ್ಮಸ್ಥಳದಲ್ಲೂ ನೀರಿನ ಸಮಸ್ಯೆ ಉಂಟಾದ ಕಾರಣ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತುಂಬ ಇದೆ. ಆದ್ದರಿಂದ ಭಕ್ತರು ಕ್ಷೇತ್ರಕ್ಕೆ ಬರುವುದನ್ನು ಮುಂದೂಡಿ ಎಂದು ವಿನಂತಿ ಮಾಡಿದ್ದರು.

  • ದಸರಾಗೆ ಅಡ್ಡಿಯಾಗದ ಬರ ಹಂಪಿ ಉತ್ಸವಕ್ಕೆ ಹೇಗೆ ಸಮಸ್ಯೆ ಆಗುತ್ತೆ – ಸರ್ಕಾರದ ವಿರುದ್ಧ ಬಳ್ಳಾರಿಯಲ್ಲಿ ಆಕ್ರೋಶ

    ದಸರಾಗೆ ಅಡ್ಡಿಯಾಗದ ಬರ ಹಂಪಿ ಉತ್ಸವಕ್ಕೆ ಹೇಗೆ ಸಮಸ್ಯೆ ಆಗುತ್ತೆ – ಸರ್ಕಾರದ ವಿರುದ್ಧ ಬಳ್ಳಾರಿಯಲ್ಲಿ ಆಕ್ರೋಶ

    ಬಳ್ಳಾರಿ: ದಸರಾ ಆಚರಣೆಗೆ ಅಡ್ಡಿಯಾಗದ ಬರ ಹಂಪಿ ಉತ್ಸವಕ್ಕೆ ಎದುರಾಗಿದೆಯಾ ಎಂದು ಪ್ರಶ್ನೆ ಮಾಡಿರುವ ಬಳ್ಳಾರಿ ಜನರು ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ನಡೆಸಲೇಬೇಕೆಂದು ಪಟ್ಟು ಹಿಡಿದಿದ್ದು, ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.

    ಉತ್ಸವಕ್ಕೆ ಸರ್ಕಾರ ಹಣ ನೀಡಿದಿದ್ದರೂ ಪರವಾಗಿಲ್ಲ ನಾವೇ ಹಣ ಸಂಗ್ರಹಿಸಿ ಉತ್ಸವ ನಡೆಸುವುದಾಗಿ ಸಾರ್ವಜನಿಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಹೂವಿನಹಡಗಲಿಯ ಮಾಗಳ ಗ್ರಾಮಸ್ಥರು ಸ್ವತಃ ಹಣ ಸಂಗ್ರಹಿಸಿ ಗ್ರಾಮ ಪಂಚಾಯತ್ ಪಿಡಿಓಗೆ ನೀಡಿದ್ದಾರೆ. ಇದಲ್ಲದೇ ಉತ್ಸವ ಅನ್ನುವುದು ನಮ್ಮ ಜಿಲ್ಲೆಯ ಹೆಮ್ಮೆ, ಇದಕ್ಕಾಗಿ ಹಣ ನೀಡಲು ಸಿದ್ಧ ಎನ್ನುತ್ತಿದ್ದಾರೆ.

    ಇದರೊಂದಿಗೆ ಬಳ್ಳಾರಿಯಲ್ಲಿ ಕಲಾವಿದರು ಕೂಡ ಪ್ರತಿಭಟನೆ ನಡೆಸಿದ್ದು, ಉತ್ಸವಕ್ಕೆ ಬಾಲಿವುಡ್ ಕಲಾವಿದರನ್ನ ಕರೆಸದೇ ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶ ನೀಡಿ ಅರ್ಥಪೂರ್ಣವಾಗಿ ಆಚರಿಸಬಹುದು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬರಗಾಲದ ನೆಪ ಒಡ್ಡಿ ಆಚರಣೆಗಳನ್ನು ರದ್ದುಗೊಳಿಸುವುದರಲ್ಲಿ ಅರ್ಥವಿಲ್ಲ. ಬರಗಾಲದ ಸಂದರ್ಭದಲ್ಲೂ ಅನಗತ್ಯ ಹಾಗೂ ಅದ್ಧೂರಿ ಎನಿಸುವ ಖರ್ಚುಗಳಿಗೆ ಲಗಾಮು ಹಾಕಿ ಉತ್ಸವ ನಡೆಸಬಹುದು. ಅಲ್ಲದೇ ಬಾಲಿವುಡ್ ಕಲಾವಿದರನ್ನ ಹಂಪಿ ಉತ್ಸವಕ್ಕೆ ಆಹ್ವಾನ ನೀಡದೇ ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶ ನೀಡಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬಹುದು. ಯಾವುದೇ ಸಂಭಾವನೆ ಪಡೆಯದೇ ಉತ್ಸವದಲ್ಲಿ ಕಾರ್ಯಕ್ರಮ ಕೊಡಲು ಸ್ಥಳೀಯ ಕಲಾವಿದರು ತಯಾರಿದ್ದಾರೆ. ಇಷ್ಟೆಲ್ಲ ಸಾಧ್ಯತೆಗಳಿದ್ದರೂ ಸರ್ಕಾರ ಏಕಾಏಕಿ ಹಂಪಿ ಉತ್ಸವವನ್ನು ರದ್ದುಗೊಳಿಸಿದೆ. ಡಿಸೆಂಬರ್ ತಿಂಗಳಲ್ಲಿ ಉತ್ಸವ ಮಾಡದಿದ್ರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಕಲಾವಿದರು ಎಚ್ಚರಿಸಿದರು.

    https://www.youtube.com/watch?v=Ea6m7EwRnxI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಸಿದ ಭತ್ತದ ಬೆಲೆ-ಬರಗಾಲಕ್ಕೆ ತತ್ತರಿಸಿದ ರೈತರು ಈಗ ಸಂಪೂರ್ಣ ಅತಂತ್ರ

    ಕುಸಿದ ಭತ್ತದ ಬೆಲೆ-ಬರಗಾಲಕ್ಕೆ ತತ್ತರಿಸಿದ ರೈತರು ಈಗ ಸಂಪೂರ್ಣ ಅತಂತ್ರ

    ರಾಯಚೂರು: ಒಂದು ಕಡೆ ಕಬ್ಬು ಬೆಳೆಗಾರರು ಬಾಕಿ ಹಣ ಸಿಗ್ತಿಲ್ಲ ಅಂತ ಹೋರಾಟ ನಡೆಸುತ್ತುದ್ದರೆ, ಇತ್ತ ರಾಯಚೂರಿನಲ್ಲಿ ರೈತರು ತಾವು ಬೆಳೆದ ಭತ್ತಕ್ಕೆ ಸೂಕ್ತ ಬೆಲೆ ಸಿಗ್ತಿಲ್ಲ ಅಂತ ಪರದಾಡುತ್ತಿದ್ದಾರೆ. ಈ ಬಾರಿ ಭತ್ತದ ಬೆಲೆ ಹಿಂದೆಂದೂ ಕಾಣದಷ್ಟು ಕುಸಿದಿದ್ದು, ಮೊದಲೇ ಬರಗಾಲಕ್ಕೆ ತತ್ತರಿಸಿದ ರೈತರು ಈಗ ಸಂಪೂರ್ಣ ಅತಂತ್ರರಾಗಿದ್ದಾರೆ. ಸಿಕ್ಕಷ್ಟು ಬೆಲೆಗೆ ಭತ್ತ ಮಾರಾಟ ಮಾಡುವುದೋ ಅಥವಾ ಸೂಕ್ತ ಬೆಲೆಗಾಗಿ ಕಾಯುವುದೋ ಅನ್ನೋ ಗೊಂದಲದಲ್ಲೆ ದಿನಗಳನ್ನು ಮುಂದೂಡುತ್ತಿದ್ದಾರೆ.

    ರಾಯಚೂರು, ಹೇಳಿ ಕೇಳಿ ಬಿಸಿಲನಾಡು. ಇಲ್ಲಿನ ರೈತರು ತುಂಗಾಭದ್ರಾ, ಕೃಷ್ಣ ನದಿಗಳನ್ನು ನಂಬಿಕೊಂಡು ಹೇಗೋ ಕಷ್ಟಪಟ್ಟು ಭತ್ತ ಬೆಳೆಯುತ್ತಾರೆ. ಆದರೆ ಅವರು ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಯೇ ಸಿಗುತ್ತಿಲ್ಲ. ಸರ್ಕಾರ ಭತ್ತಕ್ಕೆ 1,750 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿದರೂ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಗುಣಮಟ್ಟದ ನೆಪವೊಡ್ಡಿ ಕೇವಲ 1100 ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ.

    ಒಂದು ಎಕರೆ ಭತ್ತ ಬೆಳೆಯಲು ರೈತರು 30 ರಿಂದ 40 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಇವರಿಗೆ ಸಿಗೋ ಬೆಲೆಯಲ್ಲಿ ಕನಿಷ್ಠ ಬೀಜ, ಗೊಬ್ಬರಕ್ಕೆ ಖರ್ಚು ಮಾಡಿದ ಹಣವೂ ಮರಳಿ ಬರುತ್ತಿಲ್ಲ. ಹೀಗಾಗಿ ಕೃಷ್ಣಾ ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಲಕ್ಷಾಂತರ ಎಕರೆಯಲ್ಲಿ ಭತ್ತ ಬೆಳೆದ ರೈತರು ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ.

    ಸಿಂಧನೂರು, ಮಾನ್ವಿ, ಸಿರವಾರ, ದೇವದುರ್ಗ ತಾಲೂಕುಗಳಲ್ಲಿ ಅತೀ ಹೆಚ್ಚು ಭತ್ತ ಬೆಳೆಯಲಾಗಿದ್ದು, ಕೆಲ ಭಾಗಗಳಲ್ಲಿ ನೀರಿಲ್ಲದೆ ಭತ್ತ ಹಾಳಾಗಿ ಹೋಗಿದೆ. ಹೀಗಾಗಿ ಕೈಗೆ ಬಂದ ಭತ್ತಕ್ಕಾದ್ರೂ ಸರ್ಕಾರವೇ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಖರೀದಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

    ಬರಗಾಲದ ಮಧ್ಯೆಯೂ ಬೆಳೆ ಬಂತಲ್ಲಾ ಅಂತ ಖುಷಿಯಲ್ಲಿದ್ದ ರೈತರಿಗೆ ಭಾರೀ ನಿರಾಶೆಯಾಗಿದೆ. ಇನ್ನಾದರೂ ಸರ್ಕಾರ ಸೂಕ್ತ ಬೆಲೆ ನಿಗದಿ ಮಾಡಿ ಕಳೆದ ಬಾರಿಗಿಂತ ಅರ್ಧದಷ್ಟು ಬೆಲೆ ಕುಸಿದಿರುವುದು ರೈತರನ್ನು ಮತ್ತೆ ಕಂಗಾಲಾಗಿಸಿದೆ. ಕೂಡಲೇ ಸರ್ಕಾರ ಎಚ್ಚೆತ್ತು ಭತ್ತ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೊಳಚೆ ನೀರನ್ನ ಕೃಷಿ ನೀರಾಗಿ ಪರಿವರ್ತನೆ-ಎರಡು ಎಕರೆಯಲ್ಲಿ ತಲೆ ಎತ್ತಿದೆ ಫಲವತ್ತಾದ ಬೆಳೆ

    ಕೊಳಚೆ ನೀರನ್ನ ಕೃಷಿ ನೀರಾಗಿ ಪರಿವರ್ತನೆ-ಎರಡು ಎಕರೆಯಲ್ಲಿ ತಲೆ ಎತ್ತಿದೆ ಫಲವತ್ತಾದ ಬೆಳೆ

    ಕೋಲಾರ: ಬಯಲುಸೀಮೆ ಕೋಲಾರದಲ್ಲಿ ಸಾವಿರ ಅಡಿಗೂ ನೀರು ಸಿಗಲ್ಲ ಅಂತ ಕೃಷಿ ಬಿಟ್ಟವರೇ ಹೆಚ್ಚು. ಆದರೆ ನಮ್ಮ ಇವತ್ತಿನ ಪಬ್ಲಿಕ್ ಹೀರೋ ಶಿವಮೂರ್ತಿ ಅವರು ತ್ಯಾಜ್ಯ ನೀರನ್ನ ಬಳಸಿ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ.

    ಕೋಲಾರ ತಾಲೂಕು ಜಂಗಮಗುರ್ಜೇನಹಳ್ಳಿಯ ರೈತ ಶಿವಮೂರ್ತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಶಿವಮೂರ್ತಿ ಫಲವತ್ತಾದ ಸೀಬೆ ಮತ್ತು ಕುಂಬಳಕಾಯಿ ತೋಟ ಮಾಡಿ ಇತರ ರೈತರಿಗೂ ಮಾದರಿಯಾಗಿದ್ದಾರೆ. ಗ್ರಾಮದ ಕೊಳಚೆ ನೀರನ್ನ ಕೃಷಿಹೊಂಡದಲ್ಲಿ ಶೇಖರಿಸಿ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಸುಮಾರು 2 ಎಕರೆ ಪ್ರದೇಶದಲ್ಲಿ ಬಂಗಾರದಂತ ಬೆಳೆ ಬೆಳೆದಿದ್ದಾರೆ.

    ಶಿವಮೂರ್ತಿ ಅವರು ಮೊದಲಿಗೆ ಕೊಳಚೆ ನೀರನ್ನ ಬಳಸಲು ಮುಂದಾದಾಗ ಗ್ರಾಮಸ್ಥರು ಹಾಸ್ಯದ ಮಾತುಗಳನ್ನು ಆಡಿದ್ದರು. ಆದ್ರೀಗ ಬೆಕ್ಕಸ ಬೆರಗಾಗಿ ಶಿವಮೂರ್ತಿ ತೋಟದ ಬೆಳೆಯನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದಾರೆ.

    https://www.youtube.com/watch?v=YVXoNDEB6vs

  • ವೀಡಿಯೋ: ಕಬ್ಬಿಣದ ಕಂಬಿಯ ಕೆಳಗೆ ಸಿಲುಕಿದ್ದ ಆನೆಯ ರಕ್ಷಣೆ

    ವೀಡಿಯೋ: ಕಬ್ಬಿಣದ ಕಂಬಿಯ ಕೆಳಗೆ ಸಿಲುಕಿದ್ದ ಆನೆಯ ರಕ್ಷಣೆ

    ಚಾಮರಾಜನಗರ: ಆಹಾರ ಅರಸಿ ಕಾಡಿನಿಂದ ನಾಡಿನತ್ತ ಪ್ರಯಾಣ ಬೆಳಸಿದ್ದ ಆನೆಯೊಂದು ಕಬ್ಬಿಣದ ಕಂಬಿಯಡಿ ಸಿಲುಕಿದ್ದು, ಇದೀಗ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಕಾಡಿನಿಂದ ಪ್ರಾಣಿಗಳು ನಾಡಿನತ್ತ ಬರಬಾರದೆಂದು ಕಾಡಿನಂಚಿನಲ್ಲಿ ಕಬ್ಬಿಣದ ಕಂಬಿಗಳನ್ನು ಅರಣ್ಯ ಇಲಾಖೆ ಅಳವಡಿಸಿತ್ತು. ಆದ್ರೆ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಆನೆಯೊಂದು ಕಾಡಿನಿಂದ ಆಚೆ ಬರಲು ಪ್ರಯತ್ನಿಸಿ ಕಬ್ಬಿಣದ ಕಂಬಿಯಲ್ಲಿ ಸಿಲುಕೊಂಡಿದ್ದ ದೃಶ್ಯ ವೈರಲ್ ಆಗಿತ್ತು.

    ಇದನ್ನೂ ಓದಿ: ಬಂಡೀಪುರದಲ್ಲಿ ಕಬ್ಬಿಣದ ಕಂಬಿಗಳನ್ನು ದಾಟಿ ಆನೆ ನಾಡಿಗೆ ಬರೋದನ್ನು ನೋಡಿ

    ಆನೆ ಕಾಡಿನಿಂದ ಆಚೆ ಬರಲು ಪ್ರಯತ್ನಿಸಿ ಕಂಬಿಯ ಬೇಲಿಯ ಕೆಳಗೆ ಸಿಲುಕಿ ನರಳಾಡುತ್ತಿತ್ತು. ಈ ವೇಳೆ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಗಮನಿಸಿ ಆನೆಯನ್ನು ರಕ್ಷಣೆ ಮಾಡಿದ್ದಾರೆ.

    ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಕಾಡು ಪ್ರಾಣಿಗಳು ಆಹಾರಕ್ಕಾಗಿ ನಾಡಿನತ್ತ ಪ್ರಯಾಣ ಬೆಳಸಿ ಜೀವವನ್ನು ಕಳೆದುಕೊಳ್ಳುತ್ತಿವೆ. ಆನೆಗಳು ನಾಡಿಗೆ ಬಾರದಂತೆ ಸೋಲಾರ್ ಬೇಲಿ, ಕಂದಕ, ಕಬ್ಬಿಣದ ಕಂಬಿಗಳನ್ನು ಅಳವಡಿಸಲಾಗಿದೆ. ಆದ್ರೆ ಆನೆಗಳು ಮಾತ್ರ ಇದ್ಯಾವುದನ್ನು ಲೆಕ್ಕಿಸದೆ ತಮ್ಮದೇ ಮತ್ತೊಂದು ದಾರಿಯನ್ನು ಹುಡುಕುತ್ತಿವೆ.

    ಇದನ್ನೂ ಓದಿ: ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಆನೆಯ ರಕ್ಷಣೆ

    https://youtu.be/KBbFW3WwKdw

    https://www.youtube.com/watch?v=wYq7yw565mk