Tag: family

  • ಮುದ್ದುಗಿಳಿ ಕಾಣೆಯಾಗಿದೆ ಹುಡುಕಿಕೊಡಿ – ನಗದು ಬಹುಮಾನ ಘೋಷಿಸಿದ ಕುಟುಂಬ

    ಮುದ್ದುಗಿಳಿ ಕಾಣೆಯಾಗಿದೆ ಹುಡುಕಿಕೊಡಿ – ನಗದು ಬಹುಮಾನ ಘೋಷಿಸಿದ ಕುಟುಂಬ

    ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಕುಟುಂಬವೊಂದು ಕಳೆದ 12 ವರ್ಷಗಳಿಂದಲೂ ಮುದ್ದಾಗಿ ಸಾಕಿದ್ದ `ಪೊಪೊ’ ಗಿಳಿಯೊಂದು ಕಾಣೆಯಾಗಿದ್ದು, ಹುಡುಕಿಕೊಟ್ಟವರಿಗೆ ಆಕರ್ಷಕ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.

    ಇಲ್ಲಿನ ಪಿಪಾರಪತಿ ರಸ್ತೆಯ ನಿವಾಸಿಗಳಾದ ಶ್ಯಾಮ್ ದೇವ್ ಪ್ರಸಾದ್‌ಗುಪ್ತಾ ಹಾಗೂ ಅವರ ಪತ್ನಿ ಸಂಗೀತಾ ಗುಪ್ತಾ ತಮ್ಮ ಗಿಳಿಯನ್ನು ಹುಡುಕಿಕೊಟ್ಟವರಿಗೆ 5,100 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ನಗರದ ಪ್ರಮುಖ ರಸ್ತೆಯ ಗೋಡೆಗಳ ಮೇಲೆ ಹಾಗೂ ಮಾರುಕಟ್ಟೆಗಳಲ್ಲಿ ಪಕ್ಷಿಯ ಫೋಟೋ ಇರುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇದನ್ನೂ ಓದಿ: ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಮಹಿಳೆಗೆ ಮುಂಬೈ ಕ್ಲಬ್‌ನಲ್ಲಿ ಕಿರುಕುಳ

    Pet parrot

    ಪೊಪೊ ಗಿಳಿ ಒಂದು ತಿಂಗಳ ಹಿಂದೆ ಮನೆಯಿಂದ ಹಾರಿಹೋಗಿದೆ. ಅದನ್ನು ಮರಳಿ ಪಡೆಯಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ವಿಶೇಷ ಧ್ವನಿಯಲ್ಲಿ ಕೂಗುವುದು, ಹತ್ತಿರದ ಮರಗಳಲ್ಲಿ ಹುಡುಕುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

    ಕೊನೆಯ ಪ್ರಯತ್ನವಾಗಿ ಪೋಸ್ಟರ್ ಮೂಲಕ ಕರೆ ಕೊಟ್ಟಿದ್ದಾರೆ. ಜೊತೆಗೆ ಫೇಸ್‌ಬುಕ್ ಹಾಗೂ ವಾಟ್ಸಾಪ್ ಮೂಲಕ ಸಂದೇಶ ರವಾನೆ ಮಾಡುವ ಮೂಲಕ ಹುಡುಕಾಟದ ಅಭಿಯಾನ ಶುರು ಮಾಡಿದ್ದಾರೆ. ಇದನ್ನೂ ಓದಿ: ಭಾವಿಪತಿಯನ್ನೇ ಅರೆಸ್ಟ್ ಮಾಡಿದ ಇನ್ಸ್‌ಪೆಕ್ಟರ್

    PARROT

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಗೀತಾ ಗುಪ್ತ ಅವರು, ಸುಮಾರು 12 ವರ್ಷಗಳಿಂದ ಗಿಳಿಯನ್ನು ಸಾಕುಪ್ರಾಣಿಯನ್ನು ಹೊಂದಿದ್ದೆವು. ಏಪ್ರಿಲ್ 5ರಂದು ಪಕ್ಷಿ ಮನೆಯಿಂದ ನಾಪತ್ತೆಯಾಗಿತ್ತು. ನಮ್ಮ ಪಕ್ಷಿಯನ್ನು ಯಾರೇ ತೆಗೆದುಕೊಂಡಿದ್ದರೂ ದಯವಿಟ್ಟು ಅದನ್ನು ನಮಗೆ ಹಿಂತಿರುಗಿಸಿ ಎಂದು ಮನವಿ ಮಾಡಿದ್ದೇವೆ. ಏಕೆಂದರೆ ಅದು ಪಕ್ಷಿ ಮಾತ್ರವಲ್ಲ ನಮ್ಮ ಕುಟುಂಬದ ಸದಸ್ಯ. ಅದಕ್ಕೆ ಪ್ರೀತಿಯಿಂದ ಪೊಪೊ ಎಂದು ಹೆಸರಿಡಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

  • ಕಾರು, ಲಾರಿ ನಡುವೆ ಡಿಕ್ಕಿ- ಒಂದೇ ಕುಟುಂಬದ ಮೂವರು ಸಾವು

    ಕಾರು, ಲಾರಿ ನಡುವೆ ಡಿಕ್ಕಿ- ಒಂದೇ ಕುಟುಂಬದ ಮೂವರು ಸಾವು

    ತುಮಕೂರು: ಕಾರು ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವ ಘಟನೆ ಕುಣಿಗಲ್ ತಾಲೂಕಿನ ಬೀಸೆಗೌಡನದೊಡ್ಡಿಯಲ್ಲಿ ನಡೆದಿದೆ.

    car

    ಮೃತರು ಚನ್ನಪಟ್ಟಣ ಮೂಲದವರಾಗಿದ್ದು, ಶಾಮಿಯ ಮೊಹಲ್ಲಾದ ಸೈಯದ್ ಮಹಮ್ಮದ್ ನಜ್ಮಿ (45), ಪತ್ನಿ ನಾಜೀಯಾ (35) ಹಾಗೂ ಕುಂದನ್ ಅಸೀ (1) ಮೃತ ದುರ್ದೈವಿಗಳು. ಇನ್ನೊಂದು ಮಗು 3 ವರ್ಷದ ಸೈಯದ್ ಕುಂದನ್ ನಬೀ ತೀವ್ರವಾಗಿ ಗಾಯಗೊಂಡಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಇದನ್ನೂ ಓದಿ: ಸೀಬೆ ಹಣ್ಣು ಕೀಳಲು ಹೋಗಿ ಪ್ರಾಣ ಕಳೆದುಕೊಂಡ ಸಹೋದರಿಯರು

    ಘಟನೆಯು ಹುಲಿಯೂರುದುರ್ಗ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: 5 ದಿನವಾದ್ರೂ ಸಿಗದ ಆ್ಯಸಿಡ್ ನಾಗನ ಸುಳಿವು- ಪಾಗಲ್ ಪ್ರೇಮಿಯ ಪ್ರೀಪ್ಲ್ಯಾನ್ ಕೇಳಿ ಪೊಲೀಸ್ರೇ ಶಾಕ್

  • ನರ್ಸ್ ತೋಳಿನಿಂದ ಜಾರಿ ಬಿದ್ದು ನವಜಾತ ಶಿಶು ಸಾವು

    ನರ್ಸ್ ತೋಳಿನಿಂದ ಜಾರಿ ಬಿದ್ದು ನವಜಾತ ಶಿಶು ಸಾವು

    ಲಕ್ನೋ: ನರ್ಸ್ ತೋಳುನಿಂದ ಜಾರಿ ಬಿದ್ದು ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಲಕ್ನೋದ ಚಿನ್ಹಾಟ್‍ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

    ಹೆರಿಗೆಯಾದ ಬಳಿಕ ನರ್ಸ್ ಮಗುವನ್ನು ಟವೆಲ್‍ನಲ್ಲಿ ಸುತ್ತಿದೇ ಮೇಲಕ್ಕೆತ್ತಿದ್ದು, ಮಗು ಜಾರಿ ನೆಲಕ್ಕೆ ಬಿದ್ದಿದೆ. ಇದನ್ನು ಕಂಡು ಮಗುವಿನ ತಾಯಿ ಕಿರುಚಾಡಲು ಆರಂಭಿಸಿದ್ದು, ಈ ಶಬ್ಧ ಕೇಳಿ ಮನೆಯವರು ಲೇಬರ್ ರೂಮ್‍ಗೆ ಹೋಗಲು ಪ್ರಯತ್ನಿಸಿದರು. ಈ ವೇಳೆ ಆಸ್ಪತ್ರೆ ಅಧಿಕಾರಿಗಳು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೂ ಮಗು ಆರೋಗ್ಯವಾಗಿ ಜನಿಸಿದೆಯೇ ಎಂಬುವುದನ್ನು ತಿಳಿದುಕೊಳ್ಳಲು ಕುಟುಂಬಸ್ಥರು ಕೊಠಡಿಗೆ ನುಗ್ಗಿದ್ದಾರೆ. ಈ ವೇಳೆ ಕೆಳಗೆ ಬಿದ್ದಿದ್ದ ಮಗುವನ್ನು ನರ್ಸ್ ಒಂದು ಕೈಯಲ್ಲಿ ಹಿಡಿದುಕೊಂಡಿರುವುದನ್ನು ನೋಡಿದ್ದಾರೆ.  ಇದನ್ನೂ ಓದಿ: ರಥೋತ್ಸವದಲ್ಲಿ ವಿದ್ಯುತ್ ತಗುಲಿ ಇಬ್ಬರು ಮಕ್ಕಳು ಸೇರಿ 11 ಮಂದಿ ದುರ್ಮರಣ

    ಮಗು ಸತ್ತಿದ್ದರೂ, ಮಗು ಬದುಕಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಸುಳ್ಳನ್ನು ಹೇಳಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಕುಟುಂಬಸ್ಥರು ಚಿನ್ಹತ್ ಪೊ ಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ  ಪೊಲೀಸರು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ವೇಳೆ ಮಗುವಿನ ತಲೆಯ ಮೇಲೆ ಗಾಯದ ಗುರುತಿರುವುದು ಬಹಿರಂಗಗೊಂಡಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ – ಮೌಲ್ವಿ ವಾಸೀಂ ಪಠಾಣ್ ಇಂದು ಕೋರ್ಟ್‍ಗೆ

  • ಸಮಾಧಿ ಮಾಡಿದ 24 ಗಂಟೆ ನಂತ್ರ ಮತ್ತೆ ಮನೆಗೆ ಬಂದ ವ್ಯಕ್ತಿ – ಬೆಚ್ಚಿಬಿದ್ದ ಕುಟುಂಬಸ್ಥರು

    ಸಮಾಧಿ ಮಾಡಿದ 24 ಗಂಟೆ ನಂತ್ರ ಮತ್ತೆ ಮನೆಗೆ ಬಂದ ವ್ಯಕ್ತಿ – ಬೆಚ್ಚಿಬಿದ್ದ ಕುಟುಂಬಸ್ಥರು

    ಚೆನ್ನೈ: ತಮಿಳುನಾಡಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಭಾವಿಸಿ ಕುಟುಂಬಸ್ಥರು ಭಾನುವಾರ ಸಮಾಧಿ ಮಾಡಿ ಬಂದಿದ್ದರು. ಆದರೆ 24 ಗಂಟೆಗಳ ಬಳಿಕ ವ್ಯಕ್ತಿ ಸೋಮವಾರ ಮನೆಗೆ ಜೀವಂತವಾಗಿ ಮರಳಿರುವ ಘಟನೆ ಈರೋಡ್ ಬಳಿಯ ಬನಗಲಾದಪುರದಲ್ಲಿ ನಡೆದಿದೆ.

    ದಿನಗೂಲಿ ಕೆಲಸ ಮಾಡುತ್ತಿದ್ದ 55 ವರ್ಷದ ಮೂರ್ತಿ ಅವರು ಕಬ್ಬು ಕಟಾವು ಮಾಡಲು ಕೆಲವು ದಿನಗಳ ಹಿಂದೆ ತಿರುಪುರಕ್ಕೆ ಹೋಗಿದ್ದರು. ಆದರೆ ಭಾನುವಾರ ಬೆಳಗ್ಗೆ ಮೂರ್ತಿ ಅವರ ಮಗ ಕಾರ್ತಿಗೆ ಅವರ ತಂದೆ ಹತ್ತಿರದ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ಸಂಬಂಧಿಕರು ಕರೆ ಮಾಡಿ ತಿಳಿಸಿದ್ದರು. ಇದನ್ನೂ ಓದಿ: ಕರ್ನಾಟಕದಲ್ಲಿ ಇಸ್ಲಾಂ ಸ್ಲೀಪರ್ ಸೆಲ್ ಕೆಲಸ ಮಾಡ್ತಿದೆ: ಚಕ್ರವರ್ತಿ ಸೂಲಿಬೆಲೆ

    ನಂತರ ಸ್ಥಳಕ್ಕೆ ಧಾವಿಸಿ ಅದು ತನ್ನ ತಂದೆಯ ಶವ ಎಂದು ಕಾರ್ತಿ ಖಚಿತಪಡಿಸಿದ ಬಳಿಕ ಸತ್ಯಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು. ಭಾನುವಾರ ಕುಟುಂಬಸ್ಥರು ಮೂರ್ತಿ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ.ಆದರೆ ಸೋಮವಾರ ಸಂಜೆ ಮೂರ್ತಿ ಮನೆಗೆ ಕಾಲಿಡುತ್ತಿದ್ದಂತೆ ಮನೆಯವರು ಬೆಚ್ಚಿಬಿದ್ದಿದ್ದಾರೆ. ಅವರ ಮಗ ಕಾರ್ತಿ ಕೂಡ ಶಾಕ್ ಆಗಿದ್ದಾರೆ. ಇದನ್ನೂ ಓದಿ: ನಮ್ಮ ತ್ಯಾಗಕ್ಕೆ ಬೆಲೆ ಸಿಗಲಿದೆ, ನಾನು ಕ್ಯಾಬಿನೆಟ್ ಸೇರಲಿದ್ದೇನೆ: ಆರ್.ಶಂಕರ್

    ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿರುವ ಕಾರ್ತಿ, ನಮ್ಮ ತಂದೆ ಮನೆಗೆ ಪ್ರವೇಶಿಸಿದಾಗ ನಮ್ಮ ಕಣ್ಣುಗಳಿಂದಲೇ ನಂಬಲು ಆಗಲಿಲ್ಲ. ನನ್ನ ತಂದೆಯ ಸಾವಿನ ಸುದ್ದಿ ಕೇಳಿ ನಾನು ಆಘಾತಕ್ಕೊಳಗಾಗಿದ್ದೆ ಮತ್ತು ಅವರು ಮನೆಗೆ ಕಾಲಿಟ್ಟಾಗ ಮತ್ತೆ ಅಷ್ಟೇ ಆಘಾತಕ್ಕೊಳಗಾಗಿದ್ದೇನೆ ಎಂದಿದ್ದಾರೆ. ಇದೀಗ ಕಾರ್ತಿ ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತ ವ್ಯಕ್ತಿಯ ನಿಜವಾದ ಗುರುತನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಮಗುವಿನ ಬೆನ್ನ ಮೇಲೆ ಮನೆಯ ವಿಳಾಸ ಬರೆದ ಉಕ್ರೇನಿಯನ್ ತಾಯಿ

    ಮಗುವಿನ ಬೆನ್ನ ಮೇಲೆ ಮನೆಯ ವಿಳಾಸ ಬರೆದ ಉಕ್ರೇನಿಯನ್ ತಾಯಿ

    ಕೀವ್: ರಷ್ಯಾ ದಾಳಿಯಿಂದ ಉಕ್ರೇನ್ ಸಂಕಷ್ಟವನ್ನು ಎದುರಿಸುತ್ತಿದೆ. ಉಕ್ರೇನಿಯನ್‍ರು ತಮ್ಮ ಪ್ರಾಣವನ್ನು ರಕ್ಷಣೆ ಮಾಡುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

    ಕುಟುಂಬಗಳು ತಮ್ಮ ಮಕ್ಕಳ ದೇಹಗಳ ಮೇಲೆ ಕುಟುಂಬದ ವಿವರಗಳನ್ನು ಬರೆಯಲು ಪ್ರಾರಂಭಿಸಿದ್ದಾರೆ. ಈ ಆಘಾತಕಾರಿ ಬೆಳವಣಿಗೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಮಕ್ಕಳ ಫೋಟೋಗಳನ್ನು ಅನೇಕ ಪತ್ರಕರ್ತರು ಟ್ವೀಟ್ ಮಾಡಿದ್ದಾರೆ.

    ಉಕ್ರೇನಿಯನ್ ಹುಡುಗಿಯ ಬೆನ್ನ ಮೇಲೆ ಹೆಸರು ದೂರವಾಣಿ ಸಂಖ್ಯೆಯನ್ನು ಆಕೆಯ ತಾಯಿ ಬರೆದಿದ್ದಾರೆ. ಮೂರು ದಿನಗಳ ಹಿಂದೆ ಈ ಫೋಟೋವನ್ನು ಬಾಲಕಿಯ ತಾಯಿ ಸಶಾ ಮಕೋವಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಥಳೀಯ ಭಾಷೆಯಲ್ಲಿದೆ ತಾಯಿ, ಮಗುವಿನ ಬೆನ್ನಿನ ಮೇಲೆ ಬರೆದಿದ್ಧಾರೆ. ಏನಾದರೂ ಅವಘಡ ಸಂಭವಿಸಿದಲ್ಲಿ, ಮಗಳು ವೆರಾಳನ್ನು ಯಾರಾದರೂ ಬದುಳಿದವಳು ಎಂದು ಆಕೆಯನ್ನು ಸ್ವಾಗತಿಸಿ ಎಂದು ಬರೆದಿದ್ದಾರೆ. ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್


    ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ಧದಿಂದ ಭಯಾನಕ ದೃಶ್ಯಗಳು ಹೊರಹೊಮ್ಮಿವೆ. ರಷ್ಯಾ ದಾಳಿಯಿಂದ ಉಕ್ರೇನ್‌ಯಿಂದ ಜನರು ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಬೇಕು ಎಂದು ಕಸರತ್ತು ಮಾಡುತ್ತಿದ್ದಾರೆ. ಭಯದಿಂದಲೇ ಅಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

  • ತವರಿಗೆ ನವೀನ್ ಮೃತದೇಹ- ಪ್ರಧಾನಿಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ

    ತವರಿಗೆ ನವೀನ್ ಮೃತದೇಹ- ಪ್ರಧಾನಿಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ

    ಬೆಂಗಳೂರು: ನವೀನ್ ಪಾರ್ಥಿವ ಶರೀರವನ್ನು ತವರಿಗೆ ತರಲು ಸಹಾಯ ಮಾಡಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಉಕ್ರೇನ್‌ನಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೆರಿ ಗ್ರಾಮದ ನವೀನ್ ಅವರ ಅಂತಿಮ ದರ್ಶನ ಪಡೆದರು. ನಂತರ ಸುಮಾರು ಮೂರು ನಿಮಿಷಗಳ ಕಾಲ ಪ್ರಧಾನಿಯವರೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿಯವರು, ನವೀನ್ ಪಾರ್ಥಿವ ಶರೀರವನ್ನು ದೇಶಕ್ಕೆ ತರುವಲ್ಲಿ ತಮ್ಮ ಪಾತ್ರ ಮುಖ್ಯವಾಗಿದೆ. ನವೀನ್ ಮುಖ ನೋಡಬೇಕೆಂಬ ಆತನ ತಂದೆ, ತಾಯಿಯ ಆಸೆಯನ್ನು ಈಡೇರಿಸಿದ್ದೀರಿ. ಅದಕ್ಕಾಗಿ ರಾಜ್ಯದ ಪರವಾಗಿ ತಮಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನವೀನ್ ಮೃತದೇಹ ರಾಜ್ಯಕ್ಕೆ ಆಗಮನ – ಕುಟುಂಬಕ್ಕೆ ಹಸ್ತಾಂತರಿಸಿದ ಸಿಎಂ

    ಯುದ್ಧಭೂಮಿಯಿಂದ ಮೃತದೇಹ ತರುವುದು ಸುಲಭದ ಮಾತಲ್ಲ. ತಮ್ಮ ಉತ್ತಮ ರಾಜತಾಂತ್ರಿಕ ಬಾಂಧವ್ಯಗಳ ಕಾರಣ ಇದು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಸ್‍ಎಸ್ ಮೆಡಿಕಲ್ ಕಾಲೇಜ್‍ಗೆ ನವೀನ್ ಮೃತದೇಹ ದಾನ

  • ನವೀನ್ ಮೃತದೇಹ ರಾಜ್ಯಕ್ಕೆ ಆಗಮನ – ಕುಟುಂಬಕ್ಕೆ ಹಸ್ತಾಂತರಿಸಿದ ಸಿಎಂ

    ನವೀನ್ ಮೃತದೇಹ ರಾಜ್ಯಕ್ಕೆ ಆಗಮನ – ಕುಟುಂಬಕ್ಕೆ ಹಸ್ತಾಂತರಿಸಿದ ಸಿಎಂ

    ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷದಲ್ಲಿ ಮಾರ್ಚ್ 1ರಂದು ಮೃತಪಟ್ಟ ಹಾವೇರಿ ಜಿಲ್ಲೆಯ ಚಳ್ಳಗೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹ ಎಮಿರೆಟ್ಸ್ ವಿಮಾನದ ಮೂಲಕ ಕೆಐಎಎಲ್ ಏರ್‌ಪೋರ್ಟ್‌ಗೆ ಆಗಮಿಸಿದೆ.

    ನವೀನ್ ಮೃತದೇಹ ತೆಗೆದುಕೊಂಡು ಹೋಗಲು 22 ಮಂದಿ ನವೀನ್ ಕುಟುಂಬ ಸದಸ್ಯರು ಹಾಗೂ ಗ್ರಾಮದ ಮುಖಂಡರು ಆಗಮಿಸಿದ್ದರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ನವೀನ್ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ – ಮೂವರು ಆರೋಪಿಗಳ ಬಂಧನ

    ಬೆಂಗಳೂರಿನಿಂದ ಆಂಬುಲೆನ್ಸ್ ಮೂಲಕ ಹೊರಟಿರುವ ನವೀನ್ ಮೃತದೇಹ ಬೆಳಗ್ಗೆ 9 ಗಂಟೆ ಸುಮಾರಿಗೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಕ್ಕೆ ತಲುಪಲಿದೆ. ನವೀನ್ ಪಾರ್ಥಿವ ಶರೀರ ಆಗಮಿಸಿದ ಬಳಿಕ ಮೊದಲು ಕುಟುಂಬಸ್ಥರು ವೀರಶೈವ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನಂತರ ನಿವಾಸದ ಮುಂದೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಿದ್ದಾರೆ. ಎರಡ್ಮೂರು ಗಂಟೆಗಳ ನಂತರ ಗ್ರಾಮದಲ್ಲಿ ನವೀನ್ ಪಾರ್ಥೀವ ಶರೀರವನ್ನು ಮೆರವಣಿಗೆ ನಡೆಸಲಾಗುತ್ತದೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ನವೀನ್ ತಂದೆ, ನವೀನ್ ಡಾಕ್ಟರ್ ಆಗಿ ಜನರ ಸೇವೆ ಮಾಡಬೇಕು ಅಂದುಕೊಂಡಿದ್ದ. ಆದರೆ ಅದು ಸಾಧ್ಯವಾಗಲಿಲ್ಲ ಅದಕ್ಕಾಗಿ ಅವನ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನ ಮಾಡಿ ಆತನ ಕೊನೆಯ ಆಸೆ ಈಡೇರಿಸುತ್ತೇವೆ. ಈಗಾಗಲೇ ಮಾತು ಕತೆಯಾಗಿ ದಾವಣಗೆರೆಯಿಂದ ವೈದ್ಯರ ತಂಡ ಬರುತ್ತದೆ. ಅಲ್ಲಿಯವರೆಗೆ ವೀರಶೈವ ಸಂಪ್ರದಾಯದಂತೆ ನಮ್ಮ ಮನೆಯ ಗುರುಗಳ ನೇತೃತ್ವದಲ್ಲಿ ಕೊನೆಯ ಪೂಜೆ ನಡೆಯುತ್ತದೆ. ನಮ್ಮ ಮಗನ ಮೃತದೇಹದ ತರಲು ಸಹಾಯ ಮಾಡಿದ ಪ್ರಧಾನಿ ಮೋದಿ ಮತ್ತು ನಮ್ಮ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ. ಇದನ್ನೂ ಓದಿ: ಸೋಮವಾರ ನಸುಕಿನಜಾವ ತಲುಪಲಿದೆ ನವೀನ್ ಶೇಖರಪ್ಪ ಮೃತದೇಹ

    ಮತ್ತೊಂದೆಡೆ ನವೀನ್ ತಾಯಿ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಇವತ್ತು ಮಗ ಮನೆಗೆ ಬರುತ್ತಿದ್ದಾನೆ. ಒಂದು ಕಡೆ ಸಂತೋಷ ಇನ್ನೊಂದು ಕಡೆ ದುಃಖ. ಮಗನ ಆಸೆಯಂತೆ ಡಾಕ್ಟರ್ ಓದಿಸಿದ್ದೇವು. ಆದರೆ ಮಗ ಬಹಳ ಪ್ರತಿಭಾವಂತ ಆಗಿದ್ದ. ಜಮೀನಿನಲ್ಲಿ ಕೆಲಸ ಸಹ ಮಾಡುತ್ತಿದ್ದ. ನಾನು ನವೀನ್ ದೇವಸ್ಥಾನಕ್ಕೆ ಹೋದಾಗ ಬಡವರಿಗೆ ಭಿಕ್ಷೆ ಹಾಕುತ್ತಿದ್ದ. ಡಾಕ್ಟರ್ ಆಗಿ ಬಡವರ ಸೇವೆ ಮಾಡುವ ಆಸೆ ಹೊಂದಿದ್ದ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ದೇಹದಾನ ಮಾಡಿದ್ದಾನೆ ಎಂದು ಮಗನನ್ನು ನೆನೆಯುತ್ತಾ ಕಣ್ಣೀರು ಹಾಕಿದ್ದಾರೆ.

  • ಪಾವಗಡ ಬಸ್ ದುರಂತ – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಶ್ರೀರಾಮುಲು

    ಪಾವಗಡ ಬಸ್ ದುರಂತ – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಶ್ರೀರಾಮುಲು

    – ಗಾಯಾಳುಗಳಿಗೆ ಶ್ರೀರಾಮುಲು ವೈಯಕ್ತಿಕವಾಗಿ 50 ಸಾವಿರ ಘೋಷಣೆ

    ತುಮಕೂರು: ಇಂದು ಬೆಳಗ್ಗೆ ಖಾಸಗಿ ಬಸ್ ಪಲ್ಟಿಯಾಗಿ 6 ಜನ ಮೃತಪಟ್ಟಿರುವ ಅಪಘಾತ ಸ್ಥಳಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಭೇಟಿ ನೀಡಿ ಪರಿಹಾರ ಘೋಷಿಸಿದ್ದಾರೆ.

    ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಮೇಲೆ ವೈ.ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿಯಾಗಿ 6 ಮಂದಿ ಮೃತಪಟ್ಟು 25ಕ್ಕೂ ಹೆಚ್ಚು ಜನರಿಗೆ ಗಾಯವಾಗಿತ್ತು. ಇದೀಗ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶ್ರೀರಾಮುಲು ಮೃತರಿಗೆ 5 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ ಶ್ರೀರಾಮುಲು ಗಾಯಳುಗಳಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ಅಪಘಾತದ ಕುರಿತಾಗಿ ಆರ್.ಟಿ.ಓ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಬಳಿಕ ಪಾವಗಡದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಇದನ್ನೂ ಓದಿ: ಪಾವಗಡ ಬಳಿಕ ಬೀದರ್‌ನಲ್ಲೂ ಖಾಸಗಿ ಬಸ್ ಪಲ್ಟಿ

    ಅಪಘಾತವಾಗಿದ್ದು ಹೇಗೆ?
    ಇಂದು ಬೆಳಗ್ಗೆ ಶ್ರೀನಿವಾಸ್ ಮೂರ್ತಿ ಒಡೆತನದ ಎಸ್.ವಿ.ಟಿ. ಎಂಬ ಖಾಸಗಿ ಬಸ್ ವೈ.ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಹೋಗುತ್ತಿತ್ತು. ಬಸ್ ಟಾಪ್‍ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಕುಳಿತಿದ್ದರು. ಆದರೆ ಬಸ್ ಓವರ್ ಲೋಡ್ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಪಾವಗಡದ ತಾಲೂಕಿನ ಪಳವಳ್ಳಿ ಕಟ್ಟೆಯ ಕೆರೆ ಏರಿ ಮೇಲೆ ಬಸ್ ಉರುಳಿದೆ. ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, ಪಾವಗಡದ ರಸ್ತೆ ಮೇಲೆ, ಬೇಲಿ ಮೇಲೆಯೂ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ಗಾಯಾಳುಗಳನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

     

     

  • ಬಾವಿಗೆ ಬಿದ್ದು ಸಹೋದರಿಯರಿಬ್ಬರ ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣ : ನಾಲ್ವರ ಬಂಧನ

    ಬಾವಿಗೆ ಬಿದ್ದು ಸಹೋದರಿಯರಿಬ್ಬರ ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣ : ನಾಲ್ವರ ಬಂಧನ

    ಬೀದರ್: ಬಾವಿಗೆ ಬಿದ್ದು ಸಾವನ್ನಪ್ಪಿರುವ ಸಹೋದರಿಯರಿಬ್ಬರ ಆತ್ಮಹತ್ಯೆ  ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನ ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಸಂಬಾಜೀ, ವಿಠಲ್, ರಾಣಿ ಬಂಧಿತ ಆರೋಪಿಗಳಾಗಿದ್ದಾರೆ. ನಾಲ್ಕು ಜನ ಆರೋಪಿಗಳನ್ನು ಮೇಹಕರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ ನೆನೆದು ಗುಣಗಾನ ಮಾಡಿದ ಪ್ರಿಯಾಂಕ್ ಖರ್ಗೆ 

    ನಡೆದಿದ್ದೇನು?: ಎರಡು ದಿನಗಳ ಹಿಂದೆ ಅಂಕಿತ(15) ಹಾಗೂ ಶ್ರದ್ಧಾ(13) ಸಹೋದರಿಯರ ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಅಟ್ಟರ್ಗಾ ಗ್ರಾಮದಲ್ಲಿ ಘಟನೆಯಾಗಿದ್ದು, ಈ ಕುರಿತು ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

    ಮದುವೆ ಸಂಬಂದ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿತ್ತು. ಈ ವೇಳೆ ಸಂಬಾಜೀ, ಸಹೋದರಿಯರ ಪೋಷಕರ ಮೇಲೆ ಹಲ್ಲೆ ಮಾಡಿದ್ದನು. ಈ ವಿಚಾರವಾಗಿ ಮನನೊಂದು ಸಹೋದರಿಯರಿಬ್ಬರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.

  • ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಅಜ್ಜ, ಮಗ, ಮೊಮ್ಮಗ ಸಾವು

    ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಅಜ್ಜ, ಮಗ, ಮೊಮ್ಮಗ ಸಾವು

    ಹೈದರಾಬಾದ್: ನೀರಿನಲ್ಲಿ ಮುಳುಗುತ್ತಿರುವ ಒಬ್ಬರನೊಬ್ಬರು ಪರಸ್ಪರ ಉಳಿಸಲು ಹೋಗಿ, ಒಂದೇ ಕುಟುಂಬದ ಮೂರು ತಲೆಮಾರುಗಳ ಪುರುಷರು ಸರೋವರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.

    ಕೃಷ್ಣಮೂರ್ತಿ (65), ಲಕ್ಕಿ (12), ನಾಗರಾಜು (35) ಮೃತರಾಗಿದ್ದಾರೆ. ನರಸಂಪೇಟೆ ಮಂಡಲದ ಚಿನ್ನ ಗುರಿಜಾಲ ಗ್ರಾಮದ ನಿವಾಸಿಗಳಾಗಿದ್ದಾರೆ. ಕೆರೆಯಲ್ಲಿ ಮುಳುಗುತ್ತಿರುವ ಒಬ್ಬರನ್ನೊಬ್ಬರು ರಕ್ಷಣೆ ಮಾಡಲು ಹೋಗಿ ಮೂವರು ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ರಣಬೀರ್ ಕಪೂರ್ ಸ್ಟೆಷಲ್ ಸಾಂಗ್‍ಗೆ ರಶ್ಮಿಕಾ ಸ್ಟೆಪ್ 

    ಕೃಷ್ಣಮೂರ್ತಿ ಕೆರೆಯಲ್ಲಿ ಕಾಲು ತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದರು. ಕೃಷ್ಣಮೂರ್ತಿ ಜೊತೆಯಲ್ಲಿದ್ದ ಅವರ ಮೊಮ್ಮಗ ಲಕ್ಕಿ ತಾತನನ್ನು ರಕ್ಷಿಸಲು ಕೆರೆಗೆ ಹಾರಿದ್ದಾನೆ. ಈ ವೇಳೆ ಇಬ್ಬರೂ ಮುಳುಗಲು ಪ್ರಾರಂಭಿಸಿದರು. ಸಮೀಪದಲ್ಲಿಯೇ ಇದ್ದ ಕೃಷ್ಣಮೂರ್ತಿ ಮಗ ನಾಗರಾಜು ತನ್ನ ತಂದೆ ಮತ್ತು ಮಗನನ್ನು ರಕ್ಷಿಸಲು ಸರೋವರಕ್ಕೆ ಹಾರಿದನು. ಮೂವರು ನೀರಿನ ಆಳಕ್ಕೆ ಹೋಗಿ ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ಭಾರತ Vs ಶ್ರೀಲಂಕಾ ಟೆಸ್ಟ್ – ಅಪ್ಪು ಫೋಟೋ ಜೊತೆ ಚಿನ್ನಸ್ವಾಮಿಯಲ್ಲಿ ಕಾಣಿಸಿಕೊಂಡ ಸುದೀಪ್

    ಪೊಲೀಸರು ಗ್ರಾಮಕ್ಕೆ ಧಾವಿಸಿ ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗ್ರಾಮಸ್ಥರ ಪ್ರಕಾರ, ಅವರಲ್ಲಿ ಯಾರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.