Tag: family

  • ಐವರ ಪ್ರಾಣ ಉಳಿಸಿದೆ ಅಂಗಾಂಗ ದಾನ – ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಕುಟುಂಬ

    ಐವರ ಪ್ರಾಣ ಉಳಿಸಿದೆ ಅಂಗಾಂಗ ದಾನ – ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಕುಟುಂಬ

    ಚಾಮರಾಜನಗರ: ತಮ್ಮ ಮಗನ ಸಾವಿನ ನೋವಿನಲ್ಲೂ ಚಾಮರಾಜನಗರ ಜಿಲ್ಲೆಯ ಕುಟುಂಬವೊಂದು ಸಾರ್ಥಕತೆ ಮೆರೆದಿದೆ.

    ಮೃತನ ಹೆಸರು ರಾಘವಾ(34). ಈತ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಚಿಲಕವಾಡಿ ಗ್ರಾಮದವರು. ಇವರು ತಂದೆ, ತಾಯಿ, ಪತ್ನಿ ಮತ್ತು 2 ವರ್ಷದ ಮಗಳ ಜೊತೆ ಸುಖ ಸಂಸಾರ ನಡೆಸುತ್ತಿದ್ದರು. ಆದರೆ ರಾಘವಾ ಕಳೆದ ಜುಲೈ 29 ರಂದು ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ರು. ಇದನ್ನೂ ಓದಿ: ಸುಖವಾಗಿರಬಹುದೆಂದು ಪತಿ ಜೊತೆಗೆ ವಿದೇಶಕ್ಕೆ ಹೋದ್ಲು – ಕಿರುಕುಳ ತಡೆಯದೆ ಮಸಣ ಸೇರಿದ್ಲು 

    ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ರಾಘವ ಬದುಕುವುದು ಅಸಾಧ್ಯ ಎಂದು ವೈದ್ಯರು ತಿಳಿಸಿದ್ರು. ಇದರಿಂದ ಅಘಾತಗೊಂಡ ರಾಘವನ ಕುಟುಂಬದವರು ಅವರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ರು. ಈ ನಿರ್ಧಾರದಿಂದ ಐವರಿಗೆ ಪುನರ್ಜನ್ಮ ದೊರೆತಿದೆ.

    ರಾಘವಾನ ಅಂಗಾಂಗ ದಾನ ಮಾಡಲು ಅವರ ಕುಟುಂಬದವರು ಮೈಸೂರಿನ ಸ್ವಯಂ ಸೇವಾಸಂಸ್ಥೆಯನ್ನು ಸಂಪರ್ಕಿಸಿ ತಮ್ಮ ನಿರ್ಧಾರ ತಿಳಿಸಿದ್ರು. ನಂತರ ಕುಟುಂಬ ಸದಸ್ಯರ ಒಪ್ಪಿಗೆ ಪಡೆದು ರಾಘವಾ ಅವರ ಎರಡು ಮೂತ್ರಪಿಂಡ, ಒಂದು ಯಕೃತ್ತು, ಹೃದಯ ಕವಾಟುಗಳು ಮತ್ತು ಕಾರ್ನಿಯಾವನ್ನು ಬೇರ್ಪಡಿಸಲಾಯಿತು. ಅವರ ಅಂಗಾಂಗಗಳನ್ನು ಮೈಸೂರು ಮತ್ತು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಅಗತ್ಯ ಇರುವ ಐವರಿಗೆ ಅಂಗಾಂಗಳನ್ನು ಕಸಿ ಮಾಡಲಾಗಿದೆ. ಇದನ್ನೂ ಓದಿ:  3 ಆ್ಯಪ್‍ಗಳನ್ನು ರಚಿಸಿ ಗಿನ್ನಿಸ್ ದಾಖಲೆ ಮಾಡಿದ 12 ವರ್ಷದ ಪೋರ

    ರಾಘವಾ ಅವರ ಎರಡು ವರ್ಷದ ಏನೂ ಅರಿಯದ ಮಗು ನೋಡಿದರೆ ಎಂತಹವರಿಗು ಕರುಳು ಚುರುಕ್ ಎನ್ನುತ್ತದೆ. ಒಟ್ಟಾರೆ ಈ ಕುಟುಂಬ ಮಗನ ಸಾವಿನ ದುಃಖದ ನಡುವೆಯು ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಸಗುಲ್ಲ ತಿನ್ನಿಸೋ ನೆಪದಲ್ಲಿ ವರನಿಗೆ ಸಿಹಿ ಮುತ್ತಿಟ್ಟ ನಾದಿನಿ – ವೀಡಿಯೋ ವೈರಲ್

    ರಸಗುಲ್ಲ ತಿನ್ನಿಸೋ ನೆಪದಲ್ಲಿ ವರನಿಗೆ ಸಿಹಿ ಮುತ್ತಿಟ್ಟ ನಾದಿನಿ – ವೀಡಿಯೋ ವೈರಲ್

    ನವದೆಹಲಿ: ಮದುವೆ ಅಂದ್ರೇನೆ ಸಂಭ್ರಮ, ಇಲ್ಲಿ ಮೋಜು ಮಸ್ತಿ ಎಲ್ಲವೂ ಸಹಜ. ಇದರೊಂದಿಗೆ ನೂರಾರು ಶಾಸ್ತ್ರ, ಸಂಪ್ರದಾಯ ಇದ್ದೇ ಇರುತ್ತವೆ. ಆಯಾ ಪ್ರದೇಶಕ್ಕೆ ಅನುಸಾರವಾಗಿ ಶಾಸ್ತ್ರ, ಸಂಪ್ರದಾಯಗಳೂ ಬದಲಾಗಿರುತ್ತವೆ. ಕೆಲವೊಂದು ಶಾಸ್ತ್ರಗಳು ಹೆಚ್ಚು ನಗು ತರಿಸುತ್ತವೆ. ಇಂತಹ ಶಾಸ್ತ್ರಗಳೂ ಇವೆಯಾ ಎಂದು ಅನ್ನಿಸುತ್ತದೆ.

     

    View this post on Instagram

     

    A post shared by Bhutni_ke (@bhutni_ke_memes)

    ಆದರೆ ಇಲ್ಲೊಂದು ಪ್ರದೇಶದಲ್ಲಿ ಮದುವೆ ವೇಳೆ ವರನಿಗೆ ನಾದಿನಿ ರಸಗುಲ್ಲ ತಿನ್ನಿಸುವುದು ಸಂಪ್ರದಾಯ. ಇಲ್ಲೊಂದು ಟ್ವಿಸ್ಟ್ ಕೂಡ ಇದೆ. ವರನಿಗೆ ರಸಗುಲ್ಲ ತಿನ್ನಿಸುವ ವೇಳೆ, ವರ ಅದನ್ನು ತಿನ್ನದಂತೆ ನಾದಿನಿಯರು ತಡೆಯುತ್ತಾರೆ. ತಡೆದರೆ ಅವರು ಗೆದ್ದಂತೆ, ಇಲ್ಲವಾದರೆ ವರ ಆಟದ ವಿನ್ನರ್ ಆಗ್ತಾನೆ. ಹೀಗೆ ತಟ್ಟೆಯಲ್ಲಿ ರಸಗುಲ್ಲ ಹಿಡಿದುಕೊಂಡು ನಾದಿನಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೇನು ನಾದಿನಿ ವರನಿಗೆ ರಸಗುಲ್ಲ ತಿನ್ನಿಸಬೇಕು ಎನ್ನುವಷ್ಟರಲ್ಲಿ ವರ ನಾದಿನಿಯ ಕೈಯನ್ನು ಹಿಡಿದು ಎಳೆಯುತ್ತಾನೆ. ವರನಿಗೋ ಆಟ ಗೆಲ್ಲುವ ತವಕ. ನಾದಿನಿ ಕೂಡಾ ತಾನೇನು ಕಮ್ಮಿ ಎನ್ನುವಂತೆ ತಡೆಯಲು ಪ್ರಯತ್ನಿಸುತ್ತಾಳೆ. ಈ ಕ್ಷಣ ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ – ಬೆಳ್ಳಾರೆ, ಸುಬ್ರಹ್ಮಣ್ಯ ಠಾಣಾ ಎಸ್‍ಐಗಳ ಎತ್ತಂಗಡಿ

    ಇಬ್ಬರ ನಡುವಿನ ಪೈಪೋಟಿಯಲ್ಲಿ ರಸಗುಲ್ಲ ಮಾತ್ರ ನೆಲದ ಮೇಲೆ ಬೀಳುತ್ತದೆ. ಅದರ ಮಧ್ಯೆ ಒಂದು ಅಚಾತುರ್ಯವೂ ನಡೆದು ಹೋಗುತ್ತದೆ. ನಾದಿನಿ ಕೈ ಹಿಡಿದು ರಸಗುಲ್ಲ ತಿನ್ನಲು ಎಳೆಯುತ್ತಾನೆ. ಆದರೆ ತಾನೇ ಗೆಲ್ಲಬೇಕು ಎಂದು ರಸಗುಲ್ಲ ತಿನ್ನಲು ನಾದಿನಿ ಮುಂದಾಗುತ್ತಾಳೆ, ರಸಗುಲ್ಲ ಕೆಳಕ್ಕೆ ಬಿದ್ದು, ವರನಿಗೆ ಮುತ್ತಿಡುತ್ತಾಳೆ. ಅಲ್ಲಿದ್ದವರೆಲ್ಲಾ ಇದನ್ನೂ ತಮಾಷೆಯಾಗಿಯೇ ಸ್ವೀಕರಿಸುತ್ತಾರೆ. ಪಕ್ಕದಲ್ಲಿದ್ದ ವಧುವಿಗೆ ಮಾತ್ರ ಏನು ನಡೆಯುತ್ತಿದೆ ಎನ್ನುವುದು ಒಂದು ಕ್ಷಣಕ್ಕೆ ಅರ್ಥವಾದಂತೆ ಕಾಣುವುದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಮಡಿಲಲ್ಲಿ ಮಗುವಿಗೆ ಹಾಲುಣಿಸುತ್ತಿರುವಾಗಲೇ ಕೊನೆಯುಸಿರೆಳೆದ ತಾಯಿ

    ಮಡಿಲಲ್ಲಿ ಮಗುವಿಗೆ ಹಾಲುಣಿಸುತ್ತಿರುವಾಗಲೇ ಕೊನೆಯುಸಿರೆಳೆದ ತಾಯಿ

    ಹೈದರಾಬಾದ್: ಮಡಿಲಲ್ಲಿ ಮಗುವನ್ನಿಟ್ಟುಕೊಂಡು ಹಾಲುಣಿಸುತ್ತಿರುವಾಗಲೇ ತಾಯಿಯೊಬ್ಬಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ತಿಮ್ಮಾಜಿಪೇಟ್ ಮಂಡಲದ ನೆರೆಲ್ಲಪಲ್ಲಿಯಲ್ಲಿ ನಡೆದಿದೆ.

    25 ವರ್ಷದ ಜಯಶ್ರೀ ತನ್ನ ಮೊದಲ ಹೆರಿಗೆಗೆ ತವರು ಮನೆಗೆ ಬಂದಿದ್ದರು. 2 ತಿಂಗಳ ಕೆಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಯ ಪತಿ ಪ್ರಶಾಂತ್ ತಿರ್ಮಲಾಪುರದಿಂದ ಬಂದು ಆಕೆಯ ಮೈಬಣ್ಣ ಬದಲಾಗಿ ಕಪ್ಪಾಗಿದ್ದರಿಂದ ಮಹಬೂಬನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಹೃದಯ ಕವಾಟದಲ್ಲಿ ಸಣ್ಣಪುಟ್ಟ ಸಮಸ್ಯೆ ಇದ್ದು, ಔಷಧ ಬಳಸಿದರೆ ಗುಣವಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ವೈದ್ಯರು ಬರೆದುಕೊಟ್ಟ ಔಷಧಗಳನ್ನು ಸೇವಿಸಿ ಮತ್ತೆ ನೇರಳಪಲ್ಲಿಗೆ ಮರಳಿದ್ದರು. ಇದನ್ನೂ ಓದಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರಂತರ ಪ್ರಯತ್ನ ಮಾಡುತ್ತೇವೆ: ಕಾಗೇರಿ ಹಾರಿಕೆ ಉತ್ತರ

    ನಿನ್ನೆ ಬೆಳಗ್ಗಿನ ಜಾವ 5.30ಕ್ಕೆ ಮಗುವಿಗೆ ಹಾಲುಣಿಸುವ ವೇಳೆ ಜಯಶ್ರೀ ಕೊನೆಯುಸಿರೆಳೆದಿದ್ದಾರೆ. ಸ್ವಲ್ಪ ಸಮಯದ ನಂತರ ಅಜ್ಜ ಮತ್ತು ಅಜ್ಜಿ ಚಹಾಕ್ಕೆ ಕರೆದರು. ಆದರೆ ಅವರ ಕೋಣೆಯಿಂದ ಉತ್ತರ ಬರಲಿಲ್ಲ. ಏನಾಯಿತು ಎಂದು ನೋಡಲು ಹೋದಾಗ ಮೃತಪಟ್ಟಿರುವುದು ಗೊತ್ತಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ರಾಮ್ ಗೋಪಾಲ್ ವರ್ಮಾ ಕಾರಣಕ್ಕೆ ಕುಟುಂಬ ದೂರ ಮಾಡಿಕೊಂಡ ನಟಿ ಇನಾಯಾ ಸುಲ್ತಾನ್

    ರಾಮ್ ಗೋಪಾಲ್ ವರ್ಮಾ ಕಾರಣಕ್ಕೆ ಕುಟುಂಬ ದೂರ ಮಾಡಿಕೊಂಡ ನಟಿ ಇನಾಯಾ ಸುಲ್ತಾನ್

    ತೆಲುಗು ಸಿನಿಮಾ ರಂಗದ ಉದಯೋನ್ಮುಖ ನಟಿ ಇನಾಯಾ ಸುಲ್ತಾನ್ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಇನ್ನೂ ಸ್ಟ್ರಗಲ್ ಮಾಡುತ್ತಿರುವ ಈ ನಟಿ, ಕುಟುಂಬದಿಂದ ದೂರವಾಗಿದ್ದಾರಂತೆ. ಅದಕ್ಕೆ ಕಾರಣ ರಾಮ್ ಗೋಪಾಲ್ ವರ್ಮಾ ಎಂದು ನೇರವಾಗಿಯೇ ಆಕೆ ಆರೋಪಿಸಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ಕೊಟ್ಟಿದ್ದಾರೆ. ಆ ಒಂದು ಘಳಿಗೆ ತಮ್ಮ ಜೀವನಕ್ಕೆ ಹೇಗೆ ಮಾರಕವಾಯಿತು ಎಂದು ವಿವರಿಸಿದ್ದಾರೆ.

    ಇನಾಯಾ ಸಿನಿಮಾ ರಂಗದಲ್ಲಿ ಅವಕಾಶ ಹುಡುಕುತ್ತಿದ್ದಾಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪರಿಚಯವಾದರಂತೆ. ತೀರಾ ಆತ್ಮೀಯರೂ ಅನಿಸಿದರಂತೆ. ಇನಾಯಾ ಸುಲ್ತಾನ್ ಅವರನ್ನು ತಮ್ಮ ಬರ್ತಡೇ ಪಾರ್ಟಿಗೆ ಕರೆದಿದ್ದರಂತೆ ವರ್ಮಾ. ಆಗ ಮಿತಿಮೀರಿದ ಕುಡಿತವು ಡಾನ್ಸ್ ಮಾಡುವಂತೆ ಮಾಡಿದೆ. ವರ್ಮಾ ಡಾನ್ಸ್ ಮಾಡುತ್ತಲೇ ಇನಾಯಾಗೆ ಮುತ್ತಿನ ಮಳೆಯನ್ನೇ ಸುರಿಸಿದ್ದಾರೆ. ತಬ್ಬಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೇ ಕುಟುಂಬ ದೂರ ಮಾಡುವುದಕ್ಕೆ ಕಾರಣ ಎಂದಿದ್ದಾರೆ. ಇದನ್ನೂ ಓದಿ:ಗುಮ್ಮನ ಜೊತೆ ಬಂದ `ವಿಕ್ರಾಂತ್ ರೋಣ’ ಟೀಮ್: ಹೊಸ ಸಾಂಗ್‌ ರಿಲೀಸ್

    ಗುಂಡಿನ ಮತ್ತಿನಲ್ಲಿ ಇನಾಯಾ ಜೊತೆ ವರ್ಮಾ ಮಾಡಿದ ಡಾನ್ಸ್ ಅನ್ನು ಯಾರೋ ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹಾಗಾಗಿ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅದು ಇನಾಯಾ ಅವರ ಕುಟುಂಬಕ್ಕೂ ತಲುಪಿತ್ತು. ಇಂಥದ್ದನ್ನು ಸಹಿಸದ ಅವರ ಕುಟುಂಬ, ಮಗಳನ್ನೇ ದೂರ ಮಾಡಿಕೊಂಡಿದೆ ಅಂತೆ. ಈ ನೋವಿನ ಸಂಗತಿಯನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕುಟುಂಬ ಪ್ರವಾಸ ದುರಂತ ಅಂತ್ಯ – ದೋಣಿ ಮುಳುಗಿ 8 ಮಂದಿ ಸಾವು

    ಕುಟುಂಬ ಪ್ರವಾಸ ದುರಂತ ಅಂತ್ಯ – ದೋಣಿ ಮುಳುಗಿ 8 ಮಂದಿ ಸಾವು

    ರಾಂಚಿ: ಪ್ರವಾಸಕ್ಕೆಂದು ದೋಣಿಯಲ್ಲಿ ತೆರಳಿದ್ದ ಒಂದೇ ಕುಟುಂಬದ 8 ಸದಸ್ಯರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

    ಜಾರ್ಖಂಡ್‌ನ ಕೊಡೆರ್ಮಾ ಜಿಲ್ಲೆಯ ಪಂಚಖೆರೋ ಅಣೆಕಟ್ಟಿನಲ್ಲಿ ಭಾನುವಾರ ದೋಣಿ ಮುಳುಗಿದ್ದು, ಒಂದೇ ಕುಟುಂಬದ 8 ಜನರು ಸಾವನ್ನಪ್ಪಿದ್ದಾರೆ. ದೋಣಿಯನ್ನು ಬಾಡಿಗೆ ಪಡೆದು ವಿಹಾರಕ್ಕೆ ತೆರಳಿದ್ದ ಕುಟುಂಬ ದುರಂತ ಅಂತ್ಯ ಕಂಡಿದೆ. ಇದನ್ನೂ ಓದಿ: ಕುಡಿದು ವಾಹನ ಚಲಾಯಿಸಿದ್ರೆ ರಕ್ತದಾನ ಮಾಡುವ ಶಿಕ್ಷೆ

    ದೋಣಿಯಲ್ಲಿ ತೆರಳಿದ್ದ 9 ಜನರ ಪೈಕಿ ಕೇವಲ ಒಬ್ಬರು ಮಾತ್ರವೇ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ. ಶಿವಂ ಸಿಂಗ್(17), ಪಾಲಕ್ ಕುಮಾರಿ(14), ಸೀತಾರಾಮ್ ಯಾದವ್(40), ಸೇಜಲ್ ಕುಮಾರಿ(16), ಹರ್ಷಲ್ ಕುಮಾರ್(8), ಭಾವಾ(5), ರಾಹುಲ್ ಕುಮಾರ್(16) ಹಾಗೂ ಅಮಿತ್ ಕುಮಾರ್(14) ಸಾವನ್ನಪ್ಪಿದ್ದು, ಪ್ರದೀಪ್ ಕುಮಾರ್ ಈಜಿ ದಡ ಸೇರಿದ್ದಾರೆ. ಇದನ್ನೂ ಓದಿ: ಸ್ಪೈಸ್‌ಜೆಟ್ ವಿಮಾನ ಹಾರಾಟ ನಿಲ್ಲಿಸಿ – ದೆಹಲಿ ಹೈಕೋರ್ಟ್‌ನಲ್ಲಿ ಮನವಿ

    ಈಜಿ ದಡ ಸೇರಿದ ಪ್ರದೀಪ್ ಘಟನೆ ಬಗ್ಗೆ ಸ್ಥಳೀಯರಲ್ಲಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಹಾಗೂ ಶೋಧ ಕಾರ್ಯ ನಡೆಸಿದೆ. ಘಟನೆ ಬಗ್ಗೆ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಸಂತಾಪ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರವಾಹದ ನಡುವೆಯೂ ಮದುವೆಯಾಗಲು ದೋಣಿ ಏರಿ ಹೊರಟ ವಧು

    ಪ್ರವಾಹದ ನಡುವೆಯೂ ಮದುವೆಯಾಗಲು ದೋಣಿ ಏರಿ ಹೊರಟ ವಧು

    ಅಮರಾವತಿ: ಆಂಧ್ರಪ್ರದೇಶದ ಕರಾವಳಿ ಭಾಗದ ಕೋನಸೀಮಾ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಆವರಿಸಿದೆ. ಸಂಪೂರ್ಣ ನೀರು ತುಂಬಿಕೊಂಡಿದ್ದು ಕೆಲ ಕಡೆ ರಸ್ತೆಗಳೇ ಕಾಣದಂತಾಗಿದೆ. ಹೊಲ-ಗದ್ದೆ, ತೋಟಗಳೂ ಜಲಾವೃತವಾಗಿವೆ. ಈ ನಡುವೆಯೂ ವಧು ಮದುವೆಯಾಗಲು ತನ್ನ ಕುಟುಂಬದೊಂದಿಗೆ ದೋಣಿಯಲ್ಲಿ ವರನ ಮನೆಗೆ ತೆರಳಿದ್ದಾರೆ.

    https://mobile.twitter.com/umasudhir/status/1547814747512647680?ref_src=twsrc%5Etfw%7Ctwcamp%5Etweetembed%7Ctwterm%5E1547814747512647680%7Ctwgr%5E%7Ctwcon%5Es1_&ref_url=http%3A%2F%2Fapi-news.dailyhunt.in%2F

    ಆಂಧ್ರಪ್ರದೇಶದ ಅಶೋಕ್ ಮತ್ತು ಪ್ರಶಾಂತಿ ಎಂಬ ಜೋಡಿ ಕಳೆದ ಆಗಸ್ಟ್‌ನಲ್ಲಿ ಮದುವೆಯಾಗಬೇಕಿತ್ತು. ಆದರೆ ಅವರು ಇದೇ ಜುಲೈನಲ್ಲಿ ಮದುವೆಯಾಗಲು ಬಯಸಿದ್ದರು. ಇದಕ್ಕೆ ಕುಟುಂಬಸ್ಥರೂ ಒಪ್ಪಿಗೆ ನೀಡಿ ಮದುವೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಕನ್ನಡದಲ್ಲೂ ನಟಿಸಿರುವ ಈ ನಟಿ ಮಕ್ಕಳ ಚಿಕಿತ್ಸೆಗೆ 67 ಲಕ್ಷ ದಾನ

    ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಲವು ಪ್ರದೇಶಗಳು ಜಲಾವೃತವಾಗಿವೆ. ಆದರೂ ವಧು ಪ್ರಶಾಂತಿ ಕುಟುಂಬ ಮತ್ತು ಸಂಬಂಧಿಕರು ಸಕಲ ಸಿದ್ಧತೆಯೊಂದಿಗೆ ವರ ಅಶೋಕ್ ಮನೆಗೆ ದೋಣಿಯಲ್ಲಿ ಹೊರಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗೆಳತಿಯೊಂದಿಗೆ ಸೆಕ್ಸ್ ಮಾಡ್ತಿದ್ದಾಗಲೇ ಹೃದಯಾಘಾತ – ಹಸೆಮಣೆ ಏರಬೇಕಿದ್ದ 28ರ ಯುವಕ ಸಾವು!

    ಗೆಳತಿಯೊಂದಿಗೆ ಸೆಕ್ಸ್ ಮಾಡ್ತಿದ್ದಾಗಲೇ ಹೃದಯಾಘಾತ – ಹಸೆಮಣೆ ಏರಬೇಕಿದ್ದ 28ರ ಯುವಕ ಸಾವು!

    ನಾಗ್ಪುರ: ತನ್ನ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವೇಳೆಯೇ ಕುಸಿದು ಬಿದ್ದು 28 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಾಗ್ಪುರದ ಸಾವೊನೆರ್‌ನ ಲಾಡ್ಜ್‌ನಲ್ಲಿ ನಡೆದಿದೆ.

    ಮೃತ ಯುವಕನನ್ನು ಅಜಯ್ ಪರ್ಟೆಕಿ (28) ಎಂದು ಗುರುತಿಸಲಾಗಿದೆ. ಈತ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ, ಧೂಮಪಾನ ಮಾಡುತ್ತಿದ್ದ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸಿಕ್ಕಿಬಿದ್ದ ಮಹಿಳೆಗೆ ಗಂಡನನ್ನು ಹೆಗಲ ಮೇಲೆ ಹೊತ್ತು ನಡೆಯೋ ಶಿಕ್ಷೆ!

    ಚಾಲಕನಾಗಿ, ವೆಲ್ಡಿಂಗ್ ತಂತ್ರಜ್ಞನಾಗಿಯೂ ಕೆಲಸ ಮಾಡಿಕೊಂಡಿದ್ದ ಯುವಕನಿಗೆ ಕಳೆದ ಎರಡು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ಹೋಟೆಲ್‌ಗೆ ಹೋಗಿದ್ದು ಯಾಕೆ?

    ಏನಿದು ಪರ್ಟೆಕಿ ಪ್ರೇಮಕಥೆ?
    ಪರ್ಟೆಕಿ ಮತ್ತು ಮಧ್ಯಪ್ರದೇಶದ ಛಿಂದವಾಡದ ನರ್ಸ್ (ಶುಶ್ರೂಷಕಿ) ಆಗಿರುವ 23 ವರ್ಷದ ಯುವತಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರಿಗೂ ಈ ವಿಷಯ ತಿಳಿದಿತ್ತು. ಪರ್ಟೆಕಿ ಗೆಳತಿಯ ತಾಯಿ ಬಳಿಯೂ ಮಾತನಾಡಿ ತಮ್ಮಿಬ್ಬರ ಮದುವೆಗೆ ಅನುಮತಿ ನೀಡುವಂತೆ ಕೇಳಿಕೊಂಡಿದ್ದನು. ಇದಕ್ಕೆ ಒಪ್ಪಿಗೆಯೂ ಸಿಕ್ಕಿತ್ತು. ಶೀಘ್ರದಲ್ಲೇ ಇಬ್ಬರ ವಿವಾಹವೂ ನಿಶ್ಚಯವಾಗಿತ್ತು.

    ಸಾವಿಗೂ ಮುನ್ನ ನಡೆದಿದ್ದೇನು?
    ಈ ನಡುವೆ ನಿನ್ನೆ ಸಂಜೆ 4 ಗಂಟೆ ವೇಳೆಗೆ ಇಬ್ಬರೂ ಲಾಡ್ಜ್ಗೆ ಭೇಟಿ ನೀಡಿದ್ದರು. ಸುಮಾರು ಅರ್ಧ ಗಂಟೆಯ ನಂತರ ಅವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಪರ್ಟೆಕಿ ಏಕಾಏಕಿ ಹಾಸಿಗೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಲಾಡ್ಜ್ ಸಿಬ್ಬಂದಿಯನ್ನು ಎಚ್ಚರಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತೆರಳುವ ಮುನ್ನವೇ ಯುವಕ ಮೃತಪಟ್ಟಿದ್ದನು ಎಂದು ಆತನ ಗೆಳತಿ ಪೊಲೀರಿಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

    ಪೊಲೀಸರು ಹೇಳಿದ್ದೇನು?
    ಈ ಬಗ್ಗೆ ಮಾಹಿತಿ ನೀಡಿದ ಸಾವೊನೆರ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್‌ ಸತೀಶ್ ಪಾಟೀಲ್, ಮೃತ ಯುವಕ ಯಾವುದೇ ಔಷಧ ಸೇವನೆ ಮಾಡಿರುವ ಬಗ್ಗೆ ಪುರಾವೆಗಳು ಇಲ್ಲ, ಮಾದಕ ದ್ರವ್ಯವೂ ಪತ್ತೆಯಾಗಿಲ್ಲ. ಮಹಿಳೆ ಕೂಡ ತನ್ನ ಸಮ್ಮುಖದಲ್ಲಿ ಏನನ್ನೂ ಸೇವಿಸಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ, ವೈದ್ಯರು ಪ್ರಾಥಮಿಕ ವರದಿಯಲ್ಲಿ ಸಾವಿಗೆ ಹೃದಯಾಘಾತ ಕಾರಣ ಎಂದು ಸೂಚಿಸಿದ್ದಾರೆ. ಸಾವೋನರ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾಕುನಾಯಿ ವಿಚಾರದಲ್ಲಿ ಜಗಳ – ದೊಣ್ಣೆ, ಕಬ್ಬಿಣದ ರಾಡ್‍ನಿಂದ ಕುಟುಂಬದ ಮೂವರ ಮೇಲೆ ಗಂಭೀರ ಹಲ್ಲೆ

    ಸಾಕುನಾಯಿ ವಿಚಾರದಲ್ಲಿ ಜಗಳ – ದೊಣ್ಣೆ, ಕಬ್ಬಿಣದ ರಾಡ್‍ನಿಂದ ಕುಟುಂಬದ ಮೂವರ ಮೇಲೆ ಗಂಭೀರ ಹಲ್ಲೆ

    ನವದೆಹಲಿ: ಸಾಕುನಾಯಿಯನ್ನು ಹೊಂದಿದ್ದ ಕುಟುಂಬದವರ ವಿರುದ್ಧ ರೋಚಿಗೆದ್ದ ನೆರೆಮನೆಯವರು ದೊಣ್ಣೆ, ಕಬ್ಬಿಣದ ರಾಡ್‍ನಿಂದ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ರಸ್ತೆಯಲ್ಲಿ ಸಾಕುನಾಯಿ ತಿರುಗಾಡುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ದಾಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಗಳ ನಡೆದಿತ್ತು. ಈ ವೇಳೆ ಸಾಕುನಾಯಿ ಹೊಂದಿದ್ದ ವಿನೋದ್ ಕುಮಾರ್, ಅವರ ಪತ್ನಿ ಮತ್ತು ಮಗಳ ಮೇಲೆ ನೆರೆಮನೆಯ ಜಿತೇಂದರ್ ಪಾಂಡೆ ಮತ್ತು ಅವರ ಕುಟುಂಬದವರು ಹಲ್ಲೆ ಮಾಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ(ದ್ವಾರಕಾ) ಎಂ.ಹರ್ಷವರ್ಧನ್ ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಉದಯಪುರ ಘಟನೆಯನ್ನು ಖಂಡಿಸುತ್ತೇನೆ, ಆರೋಪಿಗಳ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಿ: ಓವೈಸಿ 

    ನಡೆದಿದ್ದೇನು?
    ಜಿತೇಂದರ್ ಪಾಂಡೆ ಚೆನ್ನಾಗಿ ಕುಡಿದು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ. ಈ ವೇಳೆ ವಿನೋದ್ ಕುಮಾರ್ ತನ್ನ ನಾಯಿಯೊಂದಿಗೆ ವಾಕಿಂಗ್‌ಗೆ ಹೋಗುತ್ತಿದ್ದರು. ಆಗ ಪಾಂಡೆಯನ್ನು ವಿನೋದ್ ಅವರ ನಾಯಿ ಕಚ್ಚಿದೆ ಎಂದು ನಾಯಿಯನ್ನು ಹೊಡೆಯಲು ಪ್ರಯತ್ನಿಸಿದ್ದಾನೆ. ನಂತರ, ಪಾಂಡೆ ತನ್ನ ಮನೆಯಿಂದ ಕೆಲವು ವ್ಯಕ್ತಿಗಳನ್ನು ಕರೆದಿದ್ದು, ಸಂತ್ರಸ್ತರ ಮೇಲೆ ಹಲ್ಲೆ ನಡೆಸಿದ್ದಾನೆ.

    ದೂರು ದಾಖಲು
    ಈ ಹಿನ್ನೆಲೆ ವಿನೋದ್ ಕುಮಾರ್ ಪೊಲೀಸರಿಗೆ ಜಿತೇಂದರ್ ಪಾಂಡೆ ಮತ್ತು ಆತನ ಸಂಬಂಧಿಕರ ವಿರುದ್ಧ ದೂರು ಕೊಟ್ಟಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಈ ದೂರಿನ ಪ್ರಕಾರ, ಹಲ್ಲೆ ವೇಳೆ ಆರೋಪಿಗಳು ಸಂತ್ರಸ್ತರ ಮೇಲೆ ಬಿದಿರಿನ ದೊಣ್ಣೆ ಮತ್ತು ಕಬ್ಬಿಣದ ರಾಡ್‍ಗಳನ್ನು ಬಳಸಿ ಹಲ್ಲೆ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:  ಕೇರಳ ಶೈಲಿಯಲ್ಲಿ ಮಾಡಿ ‘ಫಿಶ್ ಫ್ರೈ’

    crime

    ಇಬ್ಬರು ಅರೆಸ್ಟ್
    ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೆಯ ಸಂಬಂಧಿಕರಾದ ನವೀನ್ ಮತ್ತು ಸನೋಜ್ ಕುಮಾರ್ ಇಬ್ಬರನ್ನು ಬಂಧಿಸಲಾಗಿದೆ. ಇತರ ಆರೋಪಿಗಳು ನಾಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv

  • ವಯಸ್ಕರು ಮದುವೆಯಾಗಲು ಕುಟುಂಬ, ಜಾತಿ ಸಮುದಾಯದ ಒಪ್ಪಿಗೆ ಅವಶ್ಯವಿಲ್ಲ: ಹೈಕೋರ್ಟ್

    ವಯಸ್ಕರು ಮದುವೆಯಾಗಲು ಕುಟುಂಬ, ಜಾತಿ ಸಮುದಾಯದ ಒಪ್ಪಿಗೆ ಅವಶ್ಯವಿಲ್ಲ: ಹೈಕೋರ್ಟ್

    ಶ್ರೀನಗರ: ಇಬ್ಬರು ವಯಸ್ಕರು ಪರಸ್ಪರ ಒಮ್ಮತದಿಂದ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಕುಟುಂಬ ಹಾಗೂ ಜಾತಿ ಸಮುದಾಯದ ಒಪ್ಪಿಗೆ ಅವಶ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.

    ಇಬ್ಬರು ವಯಸ್ಕರು ವಿವಾಹವಾಗಲು ನಿರ್ಧರಿಸಿದ ಮೇಲೆ ಅದರಲ್ಲಿ ಭಾಗಿಯಾದ ವ್ಯಕ್ತಿಗಳ ಒಪ್ಪಿಗೆಯನ್ನು ಮಾತ್ರ ಪ್ರಾಥಮಿಕವಾಗಿ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಎಂ.ಎ.ಚೌಧರಿ ಅವರಿದ್ದ ಏಕ ಸದಸ್ಯ ಪೀಠ ಹೇಳಿದೆ. ಇದನ್ನೂ ಓದಿ: ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಝೆಡ್ ಶ್ರೇಣಿ ಭದ್ರತೆ

    ಇಬ್ಬರು ವಯಸ್ಕರು ಒಮ್ಮತದಿಂದ ಒಬ್ಬರನ್ನೊಬ್ಬರು ಜೀವನ ಸಂಗಾತಿಗಳನ್ನಾಗಿ ಮಾಡಿಕೊಳ್ಳುವ ಆಯ್ಕೆಯು ಸಾಕಾರವಾಗಿದ್ದು, ಇದು ಭಾರತ ಸಂವಿಧಾನದ 19 ಮತ್ತು 21ನೇ ವಿಧಿಯ ಅಡಿಯಲ್ಲಿ ಮಾನ್ಯತೆ ಪಡೆದಿದೆ. ಅದನ್ನು ಒಮ್ಮೆ ಗುರುತಿಸಿದ ಮೇಲೆ ಆ ಹಕ್ಕನ್ನು ರಕ್ಷಿಸುವ ಅಗತ್ಯವಿದೆ. ಅದು ಜಾತಿ ಗೌರವ ಅಥವಾ ಸಮೂಹ ಚಿಂತನೆಯ ಪರಿಕಲ್ಪನೆಗೆ ತುತ್ತಾಗುವಂತಿಲ್ಲ. ಇಬ್ಬರು ವಯಸ್ಕರು ಮದುವೆಯಾಗಲು ಒಪ್ಪಿಕೊಂಡ ನಂತರ ಕುಟುಂಬ, ಸಮುದಾಯ ಇಲ್ಲವೇ ಕುಲದ ಒಪ್ಪಿಗೆ ಅಗತ್ಯವಿಲ್ಲ ಹಾಗೂ ಅವರ ಸಮ್ಮತಿಗೆ ಧರ್ಮನಿಷ್ಠೆಯಿಂದ ಪ್ರಾಧಾನ್ಯತೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಕಿಡ್ನಾಪ್ ಮಾಡಿದ್ದವರೇ ಬಾಲಕನನ್ನು ಮನೆಗೆ ತಂದು ಬಿಟ್ರು – ಅನುಮಾನಕ್ಕೆ ಕಾರಣವಾದ ಅಪಹರಣ

    ಮುಸ್ಲಿಂ ಸಂಪ್ರದಾಯದಂತೆ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಹುಡುಗಿ ಮತ್ತು ಹುಡುಗ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ತಮ್ಮ ಕುಟುಂಬ ಸದಸ್ಯರು ಹಲ್ಲೆ ನಡೆಸಬಹುದು ಎಂದು ಆತಂಕಗೊಂಡು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

    Live Tv

  • ಮನೆಯೊಂದರಲ್ಲಿ ಒಂದೇ ಕುಟುಂಬದ 9 ಜನ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ

    ಮನೆಯೊಂದರಲ್ಲಿ ಒಂದೇ ಕುಟುಂಬದ 9 ಜನ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ

    ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಸೋಮವಾರ ಒಂದೇ ಕುಟುಂಬದ ಒಂಬತ್ತು ಸದಸ್ಯರು ತಮ್ಮ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ. ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಮುಂಬೈನಿಂದ 350 ಕಿಮೀ ದೂರದಲ್ಲಿರುವ ಸಾಂಗ್ಲಿ ಜಿಲ್ಲೆಯ ಮಹೈಸಾಲ್‍ನಲ್ಲಿರುವ ಮನೆಯೊಂದರಲ್ಲಿ 9 ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಮಾತನಾಡಿದ ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆಡಂ ಅವರು, ಮೊದಲು ನಮಗೆ ಸ್ಥಳೀಯರು ಇದರ ಬಗ್ಗೆ ಮಾಹಿತಿ ನೀಡಿದರು. ನಂತರ ನಾವು ಸ್ಥಳಕ್ಕೆ ಬಂದು ನೋಡಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಮೂವರ ಮೃತದೇಹವು ಒಂದು ಕಡೆ ಸಿಕ್ಕರೆ, ಉಳಿದ 6 ದೇಹಗಳು ಮನೆಯ ಬೇರೆ-ಬೇರೆ ಪ್ರದೇಶಗಳಲ್ಲಿ ದೊರೆತಿದೆ. ಒಟ್ಟು 9 ಮೃತದೇಹಗಳನ್ನು ಒಂದೇ ಮನೆಯಲ್ಲಿ ಪತ್ತೆಯಾಗಿದೆ ಎಂದು ವಿವರಿಸಿದ್ದಾರೆ.

    ಈ ಪ್ರಕರಣವನ್ನು ಪೊಲೀಸರು ಆತ್ಮಹತ್ಯೆ ಎಂದು ಶಂಕಿಸಿದ್ರೂ ಸಹ ಈ ಕುರಿತು ಹೆಚ್ಚಿನ ತೆನಿಖೆ ಮಾಡಬೇಕು. ಮರಣೋತ್ತರ ಪರೀಕ್ಷೆಯ ನಂತರ ಈ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಗಳ ನಡುವೆ, ಅಗ್ನಿವೀರರಿಗೆ ಆನಂದ್ ಮಹೀಂದ್ರಾ ಕೊಟ್ರು ಬಿಗ್ ಆಫರ್ 

    CRIME 2

    ಮತ್ತೊಬ್ಬ ಅಧಿಕಾರಿ, ಈ ಕುಟುಂಬದವರು ವಿಷಕಾರಿ ಪದಾರ್ಥವನ್ನು ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ತಿಳಿಸಿದ್ದಾರೆ.

    Live Tv