Tag: family

  • 11 ಮಂದಿ ಆತ್ಮಹತ್ಯೆ ಕೇಸ್: ಮನೆಯಲ್ಲಿ 11 ಪೈಪ್, 11 ರಾಡ್, 11 ಕಿಟಕಿ ಪತ್ತೆ!

    11 ಮಂದಿ ಆತ್ಮಹತ್ಯೆ ಕೇಸ್: ಮನೆಯಲ್ಲಿ 11 ಪೈಪ್, 11 ರಾಡ್, 11 ಕಿಟಕಿ ಪತ್ತೆ!

    ದೆಹಲಿ: ಜುಲೈ 1ರಂದು ನಡೆದಿದ್ದ ದೆಹಲಿಯ ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ.

    ಮನೆಯಲ್ಲಿ 11 ಕಿಟಕಿಗಳು, 11 ಪೈಪುಗಳು ಸಿಕ್ಕಿದ್ದು 11 ಮಂದಿಯ ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ತನಿಖೆ ವೇಳೆ ಮನೆಯಲ್ಲಿ ಸಿಕ್ಕ ಚೀಟಿಯ ಪ್ರಕಾರ ಮೃತ 11 ಮಂದಿಯು 10 ಕ್ರಮಗಳನ್ನು ಅನುಸರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಇವರ ಮನೆಯಲ್ಲಿ ಬಾಗಿಲುಗಳು ಸಹ 11 ಕಬ್ಬಿಣದ ರಾಡ್‍ಗಳನ್ನು ಒಳಗೊಂಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಮನೆಯ ಪೈಪ್‍ಗಳು ಹಾಗೆಯೇ ಯಾರು ಬಿಡುವುದಿಲ್ಲ. ಬಿಟ್ಟರೂ ಒಂದು ಮೂರು ನಾಲ್ಕು ಪೈಪ್ ಗಳನ್ನು ಬಿಡುವುದಿಲ್ಲ. ಆದರೆ ಗೋಡೆಯಲ್ಲಿ 11 ಪೈಪ್‍ಗಳು ಕಂಡುಬಂದಿದ್ದು, ಈ ಪೈಪ್‍ಗಳಿಗೆ ಹೊರಗಡೆಯಿಂದ ಯಾವುದೇ ಸಂಪರ್ಕ ಇಲ್ಲ. ಅಷ್ಟೇ ಅಲ್ಲದೇ ಒಂದೊಂದು ಪೈಪ್ ಗಳ ಗಾತ್ರ ಸಹ ಭಿನ್ನವಾಗಿದೆ. ಯಾಕೆ ಈ ರೀತಿಯಾಗಿ 11 ಪೈಪ್ ಗಳನ್ನು ಹಾಗೆಯೇ ಬಿಟ್ಟಿದ್ದಾರೆ ಎನ್ನುವುದು ನಿಗೂಢವಾಗಿದೆ.

    11 ಮಂದಿಯೂ ಆಧ್ಯಾತ್ಯದ ಮೊರೆ ಹೋಗಿ ಮೋಕ್ಷ ಸಿಗುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಆತ್ಮಹತ್ಯೆಗೆ ಪ್ರೇರೇಪಿಸಿದ ಗುರುಗಳ ಸುಳಿವು ಸಿಕ್ಕಿದ್ದು, ಅಧ್ಯಾತ್ಮಿಕ ಗುರುವಾದ ಜಾನೆಗಡಿ ಎಂದು ತಿಳಿದು ಬಂದಿದೆ. ಆಧ್ಯಾತ್ಮಿಕ ಗುರುಗಳಾದ ಜಾನೆಗಡಿಯನ್ನು ವಿಚಾರಣೆಗೆ ಒಳಪಡಿಸಿದರೆ ಪ್ರಕರಣದ ಸತ್ಯ ಹೊರಬೀಳಬಹುದು. ಹೀಗಾಗಿ ಜಾನೆಗಡಿ ಪತ್ತೆ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ.

    ಜಾನೆಗಡಿಯನ್ನು ಪತ್ತೆಹಚ್ಚಲು ಪೊಲೀಸರು ರಾಜಸ್ಥಾನ, ದೆಹಲಿ ಹಾಗೂ ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.

    ಅಕ್ಕಪಕ್ಕದವರ ಹೇಳಿಕೆಯ ಪ್ರಕಾರ ಕುಟುಂಬವು ಆತ್ಮಹತ್ಯೆಗೂ ಮುಂಚೆ ಪ್ರಿಯಾಂಕ ಎಂಬವರ ಮದುವೆಗೆ ತಯಾರು ಮಾಡಿಕೊಳ್ಳುತ್ತಿದ್ದರು. ಭಾನುವಾರ ತಮ್ಮ ದಿನಸಿ ಅಂಗಡಿಯನ್ನು ಸುಮಾರು 11.45ಕ್ಕೆ ಮುಚ್ಚಿದ್ದಾರೆ. ನಂತರ ಅವರ ಮನೆಗೆ 10.40ಕ್ಕೆ ಫುಡ್ ಡೆಲಿವರಿ ಮಾಡುವ ವ್ಯಕ್ತಿ ಮಾತ್ರ ಬಂದಿದ್ದ ಎಂದು ತಿಳಿಸಿದ್ದಾರೆ.

    ಸೋಮವಾರ ಬೆಳಗ್ಗೆ ಅಕ್ಕಪಕ್ಕದ ಮನೆಯವರು ಕಿಟಕಿ ಮೂಲಕ ನೋಡಿದಾಗ ಮನೆಯ ಎಲ್ಲಾ ಸದಸ್ಯರು ನೇಣುಹಾಕಿಕೊಂಡು ಮೃತಪಟ್ಟಿರುವುದು ತಿಳಿದು ಬಂದಿತ್ತು. ಅವರು ಮನೆಯ ಎಲ್ಲಾ ಕಿಟಕಿ, ಬಾಗಿಲುಗಳನ್ನು ತೆರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ತಾವು ಸಾಕಿದ್ದ ನಾಯಿಗೆ ಯಾವುದೇ ತೊಂದರೆ ಕೊಡದೆ, ಅದನ್ನು ಮನೆಯ ಮೇಲೆ ಕಟ್ಟಿಹಾಕಿದ್ದಾರೆ ಎಂದು ಹೇಳಿದ್ದಾರೆ.

    ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಮೃತರು ಒತ್ತಡಕ್ಕೊಳಗಾಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಕುಟುಂಬದ ನಾರಾಯಣ ದೇವಿ ಎಂಬ ವೃದ್ಧೆ ನೆಲದ ಮೇಲೆಯೇ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಆದರೆ ಬೆರಳಚ್ಚು ತಜ್ಞರ ವರದಿಯ ಪ್ರಕಾರ ಅವರು ಬೆಲ್ಟ್ ಸಹಾಯದಿಂದ ಸ್ವತಃ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಸಿಬಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಒಂದೇ ಕುಟುಂಬದ 11 ಮಂದಿಯ ಸಾಮೂಹಿಕ ಆತ್ಮಹತ್ಯೆಗೆ ಸ್ಫೋಟಕ ತಿರುವು

    ಒಂದೇ ಕುಟುಂಬದ 11 ಮಂದಿಯ ಸಾಮೂಹಿಕ ಆತ್ಮಹತ್ಯೆಗೆ ಸ್ಫೋಟಕ ತಿರುವು

    ನವದೆಹಲಿ: ನಗರದ ಬುರಾರಿ ಮನೆಯೊಂದರಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಗೆ ಸ್ಫೋಟಕ ತಿರುವು ಸಿಕ್ಕಿದೆ.

    ಹತ್ಯೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದ್ದ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಸದ್ಯ ಮೃತರ ಮನೆಯಲ್ಲಿ ಕೆಲವು ಪತ್ರಗಳು ದೊರೆತಿದ್ದು, ಇದು ಹತ್ಯೆಯಲ್ಲ, ಮೂಢನಂಬಿಕೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸಂದೇಹವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ಏನಿದೆ ಪತ್ರದಲ್ಲಿ:
    `ಮನುಷ್ಯನ ದೇಹ ಶಾಶ್ವತವಲ್ಲ. ಆತ್ಮವಷ್ಟೇ ಶಾಶ್ವತ. ಕಣ್ಣು ಮತ್ತು ಬಾಯಿಯನ್ನು ಮುಚ್ಚುವ ಮೂಲಕ ಭಯದಿಂದ ಹೊರ ಬರಬಹುದು’ ಅಂತಾ ಬರೆಯಲಾಗಿದೆ. ಜೊತೆಗೆ ಕೈ-ಕಾಲನ್ನು ಕಟ್ಟಿ ಹಾಕುವುದು ಹೇಗೆ ಎಂದು ಆ ಪತ್ರಗಳಲ್ಲಿ ವಿವರಿಸಲಾಗಿದೆ.

    ಕುಟುಂಬ ಹಿರಿಯರಾದ ನಾರಾಯಣಿ ಭಾಟಿಯಾ (77), ಮಕ್ಕಳಾದ ಭಾವನೇಶ್ (50) ಮತ್ತು ಲಲಿತ್ (45), ಸವಿತಾ ಭಾವನೇಶ್ (48) ಮತ್ತು ತೀನಾ ಲಲಿತ್ (42). ಭಾವನೇಶ್ ಅವರ ಮಕ್ಕಳಾದ ನೀತು (25), ಮೊನು (23) ಮತ್ತು ದೃವ (15) ಹಾಗು ಲಲಿತ್ ಅವರ ಮಗ ಶಿವಂ (15). ನಾರಾಯಣಿ ಅವರ ಹಿರಿಯ ಮಗಳು ಪ್ರತಿಭಾ (57) ಮೊಮ್ಮಗಳು ಪ್ರಿಯಾಂಕಾ (33) ಆತ್ಮಹತ್ಯೆ ಮಾಡಿಕೊಂಡವರು.

  • ಕಣ್ಣಿಗೆ ಬಟ್ಟೆಕಟ್ಟಿಕೊಂಡು ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆಗೆ ಶರಣು!

    ಕಣ್ಣಿಗೆ ಬಟ್ಟೆಕಟ್ಟಿಕೊಂಡು ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆಗೆ ಶರಣು!

    ನವದೆಹಲಿ: ಒಂದೇ ಕುಟುಂಬದ 11 ಮಂದಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬುರಾರಿ ಎಂಬ ಪ್ರದೇಶದಲ್ಲಿ ನಡೆದಿದೆ.

    ಭಾನುವಾರ ಬೆಳಗಿನ ಜಾವ ಸುಮಾರು ಒಂದೇ ಕುಟುಂಬದ 11 ಮಂದಿ ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬುರಾರಿ ಪ್ರದೇಶದಲ್ಲಿ ಕಂಡುಬಂದಿದೆ. ಘಟನೆ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತೀವ್ರ ತನಿಖೆ ಕೈಗೊಂಡಿದ್ದಾರೆ.

    ಘಟನೆಯಲ್ಲಿ 10 ಮಂದಿಯು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನೇಣಿಗೆ ಶರಣಾಗಿದ್ದು, ಸುಮಾರು 75 ವರ್ಷದ ವೃದ್ಧೆಯೊಬ್ಬರು ನೆಲದ ಮೇಲೆಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ದೆಹಲಿ ಪೊಲೀಸ್ ಸಿ.ಪಿ. ಕೇಂದ್ರದ ಜಂಟಿ ಅಧಿಕಾರಿಗಳಾದ ರಾಜೇಶ್ ಕೌರಾನ್, ಘಟನೆಯಲ್ಲಿ 7 ಮಂದಿ ಮಹಿಳೆಯರು, ನಾಲ್ಕು ಪುರುಷರು ಹಾಗೂ ಮೂವರು ಮಕ್ಕಳು ಸೇರಿದಂತೆ ಒಟ್ಟು 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ಯಾವುದೇ ಮಾಹಿತಿಗಳು ಸಿಕ್ಕಿಲ್ಲ, ತನಿಖೆ ನಂತರವೇ ಆತ್ಮಹತ್ಯೆಗೆ ಕಾರಣ ತಿಳಿಯುತ್ತದೆ ಎಂದು ಹೇಳಿದ್ದಾರೆ.

    ಮಾಹಿತಿಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ಕುಟುಂಬವು ಹಲವು ವರ್ಷಗಳಿಂದ ಬುರಾರಿ ಪ್ರದೇಶದಲ್ಲಿ ಸ್ವಂತ ದಿನಸಿ ಅಂಗಡಿಯನ್ನು ನಡೆಸಿಕೊಂಡು ಬರುತಿತ್ತು ಎಂದು ತಿಳಿದು ಬಂದಿದೆ.

  • ಅರ್ಜುನ್ ಕಪೂರ್ ಬರ್ತ್ ಡೇ ದಿನ ಭಾವುಕಳಾದ ಜಾಹ್ನವಿ

    ಅರ್ಜುನ್ ಕಪೂರ್ ಬರ್ತ್ ಡೇ ದಿನ ಭಾವುಕಳಾದ ಜಾಹ್ನವಿ

    ಮುಂಬೈ: ಇಂದು ಬಾಲಿವುಡ್‍ನ ಎಂಗ್ ಆ್ಯಂಡ್ ಹ್ಯಾಂಡ್ ಸಮ್ ಬ್ಯಾಚ್ಯುಲರ್ ನಟ ಅರ್ಜುನ್ ಕಪೂರ್ ಅವರ ಹುಟ್ಟುಹಬ್ಬ. ಆದ್ದರಿಂದ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಅರ್ಜುನ್ ಕಪೂರ್ ಇಂದು 33 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಬರ್ತ್ ಡೇ ಸಂಭ್ರಮದ ಕಾರ್ಯಕ್ರಮದಲ್ಲಿ ತಂದೆ ಬೋನಿ ಕಪೂರ್, ಸಹೋದರಿ ಅನ್ಷುಲಾ ಕಪೂರ್, ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಸಹ ಪಾಲ್ಗೊಂಡಿದ್ದರು.

    ಈ ವೇಳೆ ಜಾಹ್ನವಿ ತನ್ನ ಇನ್ಸ್ ಸ್ಟಾಗ್ರಾಂನಲ್ಲಿ ಫೋಟೋವೊಂದನ್ನ ಪೋಸ್ಟ್ ಮಾಡಿದ್ದು, ಜೊತೆಗೆ “ಅಣ್ಣ ನೀವು ನಮ್ಮ ಶಕ್ತಿ, ಲವ್ ಯು, ಜನ್ಮದಿನದ ಶುಭಾಶಯಗಳು” ಎಂದು ಬರೆದು ಭಾವನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಬೋನಿ ಕಪೂರ್ ಹಾಗೂ ಮೋನಾ ಶೂರಿ ಕಪೂರ್ ರವರ ಪುತ್ರನಾಗಿ ಜೂನ್ 26-1985 ರಂದು ಮುಂಬೈಯಲ್ಲಿ ಅರ್ಜುನ್ ಜನಿಸಿದ್ದರು. ಅರ್ಜುನ್ ಕಪೂರ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ತಮ್ಮ ಹುಟ್ಟುಹಬ್ಬದಂದು ಬಿಡುವು ಮಾಡಿಕೊಂಡು ಕುಟುಂಬದವರೊಂದಿಗೆ ಸಮಯ ಕಳೆದಿದ್ದಾರೆ.

    https://www.instagram.com/p/Bkdb_3lhb5i/?hl=en&taken-by=janhvikapoor

  • ಪ್ರೇಯಸಿಯನ್ನು ಭೇಟಿ ಮಾಡಲು ಹೋದವನಿಗೆ ಕಾದಿತ್ತು ದುರಂತ!

    ಪ್ರೇಯಸಿಯನ್ನು ಭೇಟಿ ಮಾಡಲು ಹೋದವನಿಗೆ ಕಾದಿತ್ತು ದುರಂತ!

    ಮೀರತ್: ಯುವಕನೊಬ್ಬ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿದ್ದಾಗ ಆಕೆಯ ಕುಟುಂಬದವರು ಆತನ ಕೈ- ಕಾಲು ಕಟ್ಟಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಮೀರತ್‍ ನಲ್ಲಿರುವ ಖಾರ್‍ಕೌದ ಕ್ಷೇತ್ರದಲ್ಲಿ ನಡೆದಿದೆ.

    ವಿಶಾಲ್ ಹಲ್ಲೆಗೊಳಗಾದ ಯುವಕ. ಪ್ರೇಯಸಿಯನ್ನು ಭೇಟಿ ಮಾಡಲು ವಿಶಾಲ್ ಹೋಗಿದ್ದನು. ಆಗ ಯುವತಿಯ ಕುಟುಂಬದವರು ಹಾಗೂ ಗ್ರಾಮಸ್ಥರು 1 ಗಂಟೆಕ್ಕೂ ಹೆಚ್ಚು ಕಾಲ ಥಳಿಸಿದ್ದಾರೆ. ವಿಶಾಲ್‍ನನ್ನು ಥಳಿಸುವಾಗ ಅಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ಆ ವಿಡಿಯೋವನ್ನು ಮಾಡಿದ್ದಾರೆ.

    ಪ್ರೇಯಸಿಯ ಕುಟುಂಬದವರು ಹಾಗೂ ಗ್ರಾಮಸ್ಥರು ವಿಶಾಲ್‍ನನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ವೈರಲ್ ವಿಡಿಯೋ ನೋಡಿದ ಪೊಲೀಸರು ಸ್ವತಃ ಕೇಸ್ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

    ಅತರಾಡಾ ಗ್ರಾಮದ ನಾನಿಹಾಲ್‍ನಲ್ಲಿರುವ ಯುವತಿ ತನ್ನ ಮಾವನ ಮನೆಗೆ ಎಂದು ಬಂದಿದ್ದಳು. ಆಗ ವಿಶಾಲ್ ಹಾಗೂ ಯುವತಿ ನಡುವೆ ಮಾತುಕತೆ ನಡೆದು ವಾಟ್ಸಾಪ್‍ನಲ್ಲಿ ಚಾಟಿಂಗ್ ನಡೆಸುತ್ತಿದ್ದರು. ನಂತರ ವಿಶಾಲ್ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ನಿರ್ಧರಿಸಿದನು. ಆ ವಿಷಯ ಯುವತಿಯ ಕುಟುಂಬದವರಿಗೆ ತಿಳಿದು ಆತನನ್ನು ಹಿಡಿದು ಕೈ-ಕಾಲು ಕಟ್ಟಿ ಥಳಿಸಿದ್ದಾರೆ.

    ಸದ್ಯ ವಿಶಾಲ್ ತಂದೆ ಯುವತಿಯ ಸಹೋದರ ಹಾಗೂ ಆಕೆಯ ತಂದೆಯ ಮೇಲೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 147, 323, 342 ಹಾಗೂ 506 ಅಡಿಯಲ್ಲಿ ಕೇಸನ್ನು ದಾಖಲಿಸಿಕೊಂಡು, ಆರೋಪಿಗಳನ್ನು ಹುಡುಕುತ್ತಿದ್ದಾರೆ.

  • ಮನೆ ಬಾಗಿಲಿಗೆ ಬಂದ ಐಸಿಯು ಸೇವೆ

    ಮನೆ ಬಾಗಿಲಿಗೆ ಬಂದ ಐಸಿಯು ಸೇವೆ

    ನವದೆಹಲಿ: ವೆಂಟಿಲೇಟರ್ಸ್, ವೈದ್ಯರ ಸೇವೆಗಳು ಮನೆಯ ಬಾಗಿಲಿಗೆ ಬಂದಾಯ್ತು ಈಗ ತುರ್ತು ನಿಘಾ ಘಟಕ(ಐಸಿಯು) ಸೇವೆಯು ದೊರೆಯಲಿದೆ.

    ಜನವರಿ 2 ರಂದು 77 ವರ್ಷದ ಡಿ ಸಿ ಗಂಭೀರ್ ಎಂಬವರು ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದು ಜ್ಞಾನ ತಪ್ಪಿದ್ದರು. ನಂತರ ಫರಿಧಾಬಾದ್ ಆಸ್ಪತ್ರೆಯಲ್ಲಿ 2 ತಿಂಗಳು ಚಿಕಿತ್ಸೆ ಪಡೆದ ಅವರು ಕೋಮಾ ಸ್ಥಿತಿಯಲ್ಲಿ ಮನೆಯ ಗೆಸ್ಟ್ ರೂಮ್ ನಲ್ಲಿ ಮಲಗಿದ್ದಾರೆ. ಗಂಭೀರ್ ಅವರಿರುವ ರೂಮ್ ಸದ್ಯ ಐಸಿಯು ಆಗಿ ಮಾರ್ಪಾಡಾಗಿದೆ. ಉಸಿರಾಡುವ ಯಂತ್ರ, ಆಮ್ಲಜನಕ ಸಿಲಿಂಡರ್, ಹೃದಯ ಸಂಬಂಧಿ ಯಂತ್ರಗಳು ಹಾಗೂ ಇತರೆ ಜೀವ ಉಳಿಸುವ ಸಾಧನಗಳು ಹಾಸಿಗೆ ಸುತ್ತಾ ಇದೆ.

    ಗಂಭೀರ್ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬರದಿದ್ದರು ಆಸ್ಪತ್ರೆಯಲ್ಲಿ ನೋಡಿಕೊಳ್ಳುವುದಕ್ಕಿಂತ ಮನೆಯಲ್ಲಿ ನೋಡಿಕೊಳ್ಳುವುದು ಸುರಕ್ಷಿತ ಹಾಗೂ ಸುಲಭ ಎಂದು ಅವರ ಮಗ ವಿಕಾಸ್ ಹೇಳುತ್ತಾರೆ.

    ಐಸಿಯುನಲ್ಲಿ ಇದ್ದಾಗ ಹುಣ್ಣುಗಳು ಆಗುತ್ತಿತ್ತು. ಐಸಿಯು ಸಿಬ್ಬಂದಿ ಪ್ರತಿ ರೋಗಿಗೂ ಪ್ರತ್ಯೇಕ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ರೋಗಿಗೆ ಸಮಸ್ಯೆಯನ್ನು ಹೇಳಲು ಆಗದಿದ್ದಾಗ ಪರಿಸ್ಥಿತಿ ಉಲ್ಭಣವಾಗುತ್ತದೆ. ಒಂದು ಹಂತವನ್ನು ಮೀರಿ ಐಸಿಯು ನಲ್ಲಿ ರೋಗಿಯನ್ನು ಇರಿಸಿದಾಗ ಮೂಲ ಸಮಸ್ಯೆ ಗುಣವಾಗುವುದಕ್ಕಿಂತ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಮನೆಯಲ್ಲಿ ಸೋಂಕನ್ನು ಹತೋಟಿಯಲ್ಲಿ ಇಡಬಹುದು ಜೊತೆಗೆ ಎಷ್ಟು ಹೊತ್ತು ಬೇಕು ಅಷ್ಟು ಹೊತ್ತು ಇವರ ಜೊತೆ ಇರಬಹುದು. ಐಸಿಯು ನಲ್ಲಿ 15 ನಿಮಿಷದಂತೆ ಎರಡು ಸಲ ದಿನಕ್ಕೆ ಭೇಟಿ ಮಾಡಬಹುದಿತ್ತು ಎಂದು ಹೇಳಿದರು.

    ಐಸಿಯು ಭೇಟಿ ರೋಗಿಗಳಿಗೆ ಹಾಗೂ ಭೇಟಿ ಮಾಡುವವರಿಗೆ ಆರೋಗ್ಯಕರವಲ್ಲ. ಈಗ ಫಿಲಿಪ್ಸ್, ಡಾಬರ್ ಹಾಗೂ ಕೆಲ ಹೊಸ ಸ್ಟಾರ್ಟ್ ಅಪ್ ಕಂಪೆನಿಗಳು ಐಸಿಯು ಸೇವೆಯನ್ನು ಒದಗಿಸುತ್ತಿವೆ.

    ಕಳೆದ ವರ್ಷ ದೆಹಲಿ ಎನ್‍ಸಿಆರ್ ಪ್ರದೇಶದಲ್ಲಿ ಫಿಲಿಪ್ಸ್ ಐಸಿಯು ಸೇವೆಯನ್ನು ಆರಂಭಿಸಿತು. 10 ರಿಂದ 25 ರೋಗಿಗಳು ಸೇವೆಯನ್ನು ಪಡೆಯುತ್ತಿದ್ದಾರೆ ಎಂದು ಕಂಪೆನಿಯ ರಿಚಾ ಸಿಂಗ್ ತಿಳಿಸಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನ್ಯೂಕ್ಲಿಯಸ್ ಕುಟುಂಬಗಳು ಹೆಚ್ಚಾಗುತ್ತಿವೆ. ಹಾಗಾಗಿ ಮನೆಯಲ್ಲಿ ಐಸಿಯು ಸೇವೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

    ಆಸ್ಪತ್ರೆಗಳು ಮನೆಯಿಂದ ದೂರ ಇದ್ದಾಗ ತುರ್ತು ಚಿಕಿತ್ಸೆಗೆ ಐಸಿಯು ಸೇವೆ ಬಹಳ ಸಹಾಯವಾಗುತ್ತದೆ ಎಂದು ಜನರಲ್ಲಿ ಭಾವನೆ ಮೂಡುತ್ತಿದೆ ಎಂದು ಹೆಲ್ತ್ ಕೇರ್ ವಿಭಾಗದ ನೌಕರರೊಬ್ಬರು ತಿಳಿಸಿದರು.

    ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಸೇವೆ ಪಡೆಯಲು ದಿನಕ್ಕೆ 30 ರಿಂದ 50 ಸಾವಿರ ಪಾವತಿ ಮಾಡಬೇಕಾಗುತ್ತದೆ. ಮನೆಯಲ್ಲೇ ಆದರೆ 7,500 ರೂ ರಿಂದ 12,500 ರೂಗಳಿಗೆ ವೆಚ್ಚ ತಗ್ಗಲಿದೆ ಎಂದು ಸ್ಟಾರ್ಟ್ ಅಪ್ ಕಂಪೆನಿಯ ಕಾರ್ಯನಿರ್ವಾಣಾಧಿಕಾರಿ ರಾಜೀವ್ ಮಾಥೂರ್ ತಿಳಿಸಿದ್ದಾರೆ. ದೆಹಲಿಯ ಎನ್‍ಸಿಆರ್ ಪ್ರದೇಶದಲ್ಲಿ 630 ರೋಗಿಗಳಿಗೆ ಸೇವೆಯನ್ನು ಕಲ್ಪಿಸಿದ್ದು ಸದ್ಯದಲ್ಲೇ ಇನ್ನೊಂದು ಶಾಖೆಯನ್ನು ಮುಂಬೈಯಲ್ಲಿ ತೆರೆಯಲಿದ್ದೇವೆ ಎಂದು ತಿಳಿಸಿದರು.

    ಐಸಿಯು ಸೇವೆ ಒದಗಿಸಲು ಮನೆಯಲ್ಲಿ ವ್ಯವಸ್ಥಿತವಾದ ಶುಚಿಯಾದ ರೂಮ್ ಇದ್ದು ಅನಿಯಂತ್ರಿತ ಪವರ್ ಬ್ಯಾಕ್ ಅಪ್ ಮತ್ತು ಸ್ಟೆಬಿಲೈಜರ್ಸ್ ಇರಬೇಕು. ಆಸ್ಪತ್ರೆಯವರ ಅನುಮತಿ ಪಡೆದ ಮೇಲೆ ರೋಗಿಯನ್ನು ಮನೆಯ ಐಸಿಯುಗೆ ವರ್ಗಾಯಿಸುತ್ತೇವೆ ಎಂದು ತಿಳಿಸಿದರು.

  • 55 ವರ್ಷದ ಬಳಿಕ ಕುಟುಂಬದಲ್ಲಿ ಹೆಣ್ಮಗು ಜನನ- ಗ್ರಾಮದಲ್ಲಿ ಪಟಾಕಿ ಸಿಡಿಸಿ, ಡಿಜೆ ಹಾಕಿ ಸಂಭ್ರಮಿಸಿದ ಕುಟುಂಬಸ್ಥರು

    55 ವರ್ಷದ ಬಳಿಕ ಕುಟುಂಬದಲ್ಲಿ ಹೆಣ್ಮಗು ಜನನ- ಗ್ರಾಮದಲ್ಲಿ ಪಟಾಕಿ ಸಿಡಿಸಿ, ಡಿಜೆ ಹಾಕಿ ಸಂಭ್ರಮಿಸಿದ ಕುಟುಂಬಸ್ಥರು

    ಗಾಂಧಿನಗರ: ಕುಟುಂಬದಲ್ಲಿ 55 ವರ್ಷದ ಬಳಿಕ ಹೆಣ್ಣು ಮಗು ಜನಿಸಿದ ಸಂತೋಷದಲ್ಲಿ ಇಡೀ ಕುಟುಂಬಸ್ಥರು ಪಟಾಕಿ ಸಿಡಿಸಿ, ಡಿಜೆ ಹಾಕಿ ಸಂಭ್ರಮಿಸಿದ್ದಾರೆ. ಶನಿವಾರ ಗ್ರಾಮದಲ್ಲಿ ಮೆರವಣಿಗೆ ಮೂಲಕ ಹೆಣ್ಣು ಮಗುವನ್ನು ಮನೆಗೆ ಕರೆತಂದಿದ್ದಾರೆ.

    ಗುಜರಾತ್ ರಾಜ್ಯದ ದಾಹೋದ ಜಿಲ್ಲೆಯ ಲಿಮಖೇಡಾ ಗ್ರಾಮದ ದಿನೇಶ್‍ಭಾಯಿ ಶಾ ಎಂಬವರ ಕುಟುಂಬದಲ್ಲಿ 55 ವರ್ಷಗಳ ನಂತರ ಹೆಣ್ಣು ಮಗವೊಂದು ಜನಿಸಿದೆ. 55 ವರ್ಷಗಳ ಹಿಂದೆ ದಿನೇಶ್ ಅವರ ಅಕ್ಕ ಈ ಕುಟುಂಬದಲ್ಲಿ ಜನಿಸಿದ್ರು. ದಿನೇಶ್ ನಂತರ ಇಬ್ಬರು ಸಹೋದರರು ಜನಿಸಿದ್ರು.

    ದಿನೇಶ್ ಮತ್ತು ಅವರ ಸಹೋದರರಿಗೂ ಮದುವೆ ಆದ್ರೂ ಮೂವರಿಗೂ ಗಂಡು ಮಕ್ಕಳೇ ಹುಟ್ಟಿದ್ದವು. ಹೀಗಾಗಿ ಬಹು ವರ್ಷಗಳಿಂದ ಕುಟುಂಬಸ್ಥರು ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ರು.

    ಮೇ 24ರಂದು ದಿನೇಶ್ ಅವರ ಹಿರಿಯ ಪುತ್ರ ಚಿರಾಗ್ ಶಾ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗು ಜನಿಸಿದ ಸುದ್ದಿ ಕೇಳುತ್ತಿದ್ದಂತೆಯೇ ದಿನೇಶ್ ಕುಟುಂಬಸ್ಥರು ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಸಂಭ್ರಮ ಆಚರಿಸಿದ್ದಾರೆ.

    ಶನಿವಾರ ತಾಯಿಯೊಂದಿಗೆ ಮಗುವನ್ನು ಮೆರವಣಿಗೆ ಮೂಲಕ ಮನೆಗೆ ಕರೆತಂದಿದ್ದಾರೆ.

  • ಪ್ರೀತಿಸಿ 3 ತಿಂಗ್ಳ ಹಿಂದೆ ಮದ್ವೆಯಾಗಿ 7 ಪುಟ ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾದ!

    ಪ್ರೀತಿಸಿ 3 ತಿಂಗ್ಳ ಹಿಂದೆ ಮದ್ವೆಯಾಗಿ 7 ಪುಟ ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾದ!

    ಮಂಡ್ಯ: ಸಾಂಸಾರಿಕ ಜೀವನದಲ್ಲಿ ಜಿಗುಪ್ಸೆ ಹಿನ್ನೆಲೆಯಲ್ಲಿ ಏಳು ಪುಟಗಳ ಡೆತ್‍ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಆಲದಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮನೋಜ್(30) ಆತ್ಮಹತ್ಯೆಗೆ ಶರಣಾದವರು. ಮನೋಜ್ ಎರಡು ದಿನ ಮುಂಚಿತವಾಗಿಯೇ ಡೆತ್ ನೋಟ್ ಬರೆದಿದ್ದು, ಇಂದು ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ದೇಹದಾನ ಮಾಡುವಂತೆ ಡೆತ್ ನೋಟ್ ನಲ್ಲಿ ನಮೂದಿಸಿದ್ದಾರೆ.

    ಘಟನೆ ವಿವರ?: ಮನೋಜ್ ವೈದ್ಯೆಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆದರೆ ಆಕೆಗೆ ಬೇರೆಯವರ ಜೊತೆ ಮದುವೆಯಾಗುತ್ತದೆ. ಬಳಿಕ ಆಕೆ ಪತಿಯಿಂದ ವಿಚ್ಛೇದನ ಪಡೆದು ಮತ್ತೆ ಮನೋಜ್ ಗೆ ಹತ್ತಿರವಾಗಿ ಬೆಂಗಳೂರಿಗೆ ಕರೆಸಿಕೊಳ್ಳುತ್ತಾಳೆ. ಹೀಗಾಗಿ ಇಬ್ಬರು ಎರಡು ವರ್ಷ ಒಟ್ಟಿಗೆ ಇರುತ್ತಾರೆ. ಇದೇ ಸಮಯದಲ್ಲಿ ತನ್ನನ್ನು ಮದುವೆಯಾಗುವಂತೆ ಮನೋಜ್ ನನ್ನು ಒತ್ತಾಯಿಸುತ್ತಾಳೆ. ಆಗ ಮನೋಜ್ ಮನೆಯಲ್ಲಿ ಒಪ್ಪಿಸಿ ಆಗೋಣ ಎಂದು ನಿಧಾನ ಮಾಡಿದ್ದರು. ಇದರಿಂದ ಬೇಸರಗೊಂಡ ಮಹಿಳೆ ಮನೋಜ್ ಮತ್ತು ಅವರ ಕುಟುಂಬದವರ ವಿರುದ್ಧ ದೂರು ನೀಡಿದ್ದಾಳೆ.

    ದೂರು ನಿಡಿದ ಬಳಿಕ ಮನೋಜ್ ಸಂಬಂಧಿಯೊಬ್ಬರು ಬಂದು ಪೊಲೀಸ್ ಜೊತೆ ಮಾತನಾಡಿ ಇಬ್ಬರಿಗೂ ಫೆಬ್ರವರಿಯಲ್ಲಿ ರಿಜಿಸ್ಟರ್ ಮದುವೆ ಮಾಡಿಸಿದ್ದಾರೆ. ಆದರೆ ಮನೋಜ್ ನನಗೆ ತುಂಬಾ ಜವಾಬ್ದಾರಿ ಇದೆ ಸ್ವಲ್ಪ ದಿನ ತಮ್ಮ ಊರಿಗೆ ಹೋಗಿ ಬಂದು ನಂತರ ಆಕೆಯ ಜೊತೆ ಸಾಂಸಾರಿಕ ಜೀವನ ಶುರು ಮಾಡುತ್ತೇನೆ ಎಂದು ಪೊಲೀಸರ ಅನುಮತಿ ಪಡೆದು ತಮ್ಮ ಗ್ರಾಮಕ್ಕೆ ತೆರಳಿದ್ದಾರೆ. ಆದರೆ ಗ್ರಾಮದಿಂದ ಬರುವುದು ತಡವಾಗಿದ್ದರಿಂದ ಪತ್ನಿ ಕರೆ ಮಾಡಿ, ಮನೋಜ್ ಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾಳೆ. ಅಲ್ಲದೇ ಮತ್ತೆ ಮನೋಜ್ ಕುಟುಂಬದ ವಿರುದ್ಧ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಭಯಗೊಂಡು ತನ್ನ ಕುಟುಂಬದವರಿಗೆ ತೊಂದರೆಯಾಗಬಾರದೆಂದು ಮನೋಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಯ ಬಳಿಕ ತನ್ನ ಬೈಕ್ ಮತ್ತು ಹೃದಯವನ್ನು ಇಂಥವರಿಗೇ ಕೊಡಬೇಕೆಂಬುದರ ಬಗ್ಗೆ 7 ಪುಟಗಳ ಡೆತ್ ನೋಟ್ ನಲ್ಲಿ ವಿವರವಾಗಿ ಬರೆದಿದ್ದಾರೆ.

    ತನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ದೇಹವನ್ನು ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ದಾನ ಮಾಡಿ. ನನ್ನ ಹೆಂಡತಿಯ ತಾಯಿಗೆ ಹೃದಯದ ಸಮಸ್ಯೆಯಿದ್ದು, ಸಾಧ್ಯವಾದರೆ ನನ್ನ ಹೃದಯ ಅಳವಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೊನೆಗೆ ತಂದೆ-ತಾಯಿ, ಅಕ್ಕ, ತಂಗಿ ಮತ್ತು ಸ್ನೇಹಿತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ.

    ಈ ಘಟನೆ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

  • ಅಪ್ಪ-ಅಮ್ಮನ ಸ್ಮಾರಕ ಸೇರಿಸಿ ಎಲ್ಲೂ ಇಲ್ಲದ ಯೋಗ ಕೇಂದ್ರ ನಿರ್ಮಾಣ ಮಾಡ್ತೀವಿ: ರಾಘವೇಂದ್ರ ರಾಜ್‍ಕುಮಾರ್

    ಅಪ್ಪ-ಅಮ್ಮನ ಸ್ಮಾರಕ ಸೇರಿಸಿ ಎಲ್ಲೂ ಇಲ್ಲದ ಯೋಗ ಕೇಂದ್ರ ನಿರ್ಮಾಣ ಮಾಡ್ತೀವಿ: ರಾಘವೇಂದ್ರ ರಾಜ್‍ಕುಮಾರ್

    ಬೆಂಗಳೂರು: ಇಂದು ವರನಟ ಡಾ. ರಾಜ್‍ಕುಮಾರ್ ಅವರ 12ನೇ ವರ್ಷದ ಪುಣ್ಯಸ್ಮರಣೆಯನ್ನು ಸರಳವಾಗಿ ಆಚರಿಸಲು ಕುಟುಂಬವರ್ಗ ನಿರ್ಧರಿಸಿದೆ.

    ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಡಾ.ರಾಜ್ ಅವರ ಹಿರಿಯ ಪುತ್ರಿ ಲಕ್ಷ್ಮಿ ಕುಟುಂಬಸ್ಥರು ಬೆಳಗ್ಗೆ 9 ಗಂಟೆಗೆ ಕಂಠೀರವ ಸ್ಟುಡಿಯೋ ಬಳಿ ಇರುವ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಇತ್ತೀಚಿಗೆ ಮದುವೆ ಆದ ನವದಂಪತಿ ಷಣ್ಮುಖ ಹಾಗೂ ಅವರ ಪತ್ನಿ ಸಿಂಧು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದರು.

    ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಅಪ್ಪಾಜಿಯನ್ನು ತುಂಬಾ ಮಿಸ್ ಮಾಡ್ಕೋತ್ತೀವಿ. ಅಪ್ಪ-ಅಮ್ಮನ ಸ್ಮಾರಕ ಸೇರಿಸಿ ಯೋಗ ಕೇಂದ್ರ ನಿರ್ಮಾಣ ಮಾಡ್ತೀವಿ. ಪ್ರಪಂಚದಲ್ಲಿ ಇದುವರೆಗೂ ಎಲ್ಲೂ ಇಲ್ಲದ ರೀತಿ ಯೋಗ ಕೇಂದ್ರ ನಿರ್ಮಾಣ ಆಗುತ್ತೆ. ಅಭಿಮಾನಿಗಳಲ್ಲಿ ಅಪ್ಪಾಜಿಯನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದರು.

    ಅಪ್ಪಾಜಿ ಮತ್ತು ಅಮ್ಮನ ತಿಥಿ ಒಂದೇ ವರ್ಷ ಮಾಡಬಾರದು. ಹೀಗಾಗಿ ಸಮಾಧಿಯಲ್ಲಿ ಅಪ್ಪಾಜಿ ಪೂಜೆ ಮಾಡುತ್ತೇವೆ. ಮನೆಯಲ್ಲಿ ಈ ವರ್ಷ ಪೂಜೆ ಮಾಡುವುದಿಲ್ಲ ಎಂದು ರಾಘವೇಂದ್ರ ರಾಜ್‍ಕುಮಾರ್ ಹೇಳಿದರು.

    ರಾಜ್ ಪುಣ್ಯಸ್ಮರಣೆಗೆ ನೀತಿ ಸಂಹಿತೆ ಎಫೆಕ್ಟ್ ತಟ್ಟಿದ್ದು, ಹಾಗಾಗಿ ಸರಳವಾಗಿ ಪುಣ್ಯಸ್ಮರಣೆ ಆಚರಿಸಲು ಕಂಠೀರವ ಸ್ಟುಡಿಯೋ ಸಿಬ್ಬಂದಿ ನಿರ್ಧಾರ ಮಾಡಿದ್ದರು. ಪ್ರತಿ ವರ್ಷ ಸುಮಾರು 3 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ಬಂದಿರೋದರಿಂದ ರಾಜ್ ಕುಮಾರ್ ಪುಣ್ಯಸ್ಮರಣೆಯನ್ನು ಶಾಮಿಯಾನ, ಊಟದ ವ್ಯವಸ್ಥೆ ಇಲ್ಲದೆ ಮಾಡಲಾಗುತ್ತಿದೆ.

  • ಎರಡು ಕುಟುಂಬಗಳ ನಡುವೆ ಕಲ್ಲು ಹಾಗೂ ದೊಣ್ಣೆಗಳಿಂದ ಮಾರಾಮಾರಿ – ವಿಡಿಯೋ

    ಎರಡು ಕುಟುಂಬಗಳ ನಡುವೆ ಕಲ್ಲು ಹಾಗೂ ದೊಣ್ಣೆಗಳಿಂದ ಮಾರಾಮಾರಿ – ವಿಡಿಯೋ

    ಬೆಳಗಾವಿ: ಜಮೀನಿಗಾಗಿ ಎರಡು ಕುಟುಂಬಗಳ ಸದಸ್ಯರು ಕಲ್ಲು ಹಾಗೂ ದೊಣ್ಣೆಗಳಿಂದ ಹೊಡೆದಾಡಿಕೊಂಡ ಘಟನೆ ರಾಯಬಾಗ ತಾಲ್ಲೂಕಿನ ಬೆಕ್ಕೇರಿ ಗ್ರಾಮದಲ್ಲಿ ನಡೆದಿದೆ.

    ಮಾಯಪ್ಪ ಪಾಯಪ್ಪಗೋಳ ಹಾಗೂ ರಾಮ ಪಾಯಪ್ಪಗೋಳ ಕುಟುಂಬದ ಸುಮಾರು 15ಕ್ಕೂ ಹೆಚ್ಚು ಮಂದಿ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

    https://www.youtube.com/watch?v=EZPfOAIfFEY