Tag: family

  • ಭೀಕರ ಅಪಘಾತದಲ್ಲಿ 4 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

    ಭೀಕರ ಅಪಘಾತದಲ್ಲಿ 4 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

    ಶಿವಮೊಗ್ಗ: ಕಾರು (Car) ಹಾಗೂ ಬೈಕ್ (Bike) ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಮಗು ಸೇರಿ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ಮಂಚಿನಕೊಪ್ಪ ಬಳಿ ನಡೆದಿದೆ.

    ಅಪಘಾತದಲ್ಲಿ ಮೃತಪಟ್ಟವರನ್ನು ಹಲುಗಿನಕೊಪ್ಪ ಗ್ರಾಮದ ನಿವಾಸಿಗಳಾ ಜ್ಯೋತಿ (30), ಗಂಗಮ್ಮ (50) ಸೌಜನ್ಯ (4) ಎಂದು ಗುರುತಿಸಲಾಗಿದೆ. ಭಾನುವಾರ ತಡ ರಾತ್ರಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ದಯವಿಟ್ಟು ಭಾವೋದ್ವೇಗದಿಂದ ಮಾತನಾಡಬೇಡಿ – ರೇಣುಕಾಚಾರ್ಯಗೆ ಆರಗ ಜ್ಞಾನೇಂದ್ರ ಮನವಿ

    ಮಲ್ಲಿಕಾರ್ಜುನ, ಮಗಳು ಸೌಜನ್ಯ, ಪತ್ನಿ ಜ್ಯೋತಿ ಹಾಗು ತಾಯಿ ಗಂಗಮ್ಮ ನಾಲ್ಕು ಮಂದಿ ಒಂದೇ ಬೈಕ್ ನಲ್ಲಿ ತೆರಳುತ್ತಿದ್ದರು. ಕಾರು ಹೀರೆಕೆರೂರು ಕಡೆಯಿಂದ ಶಿರಾಳಕೊಪ್ಪ ಕಡೆಗೆ ತೆರಳುತಿತ್ತು. ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಗು ಸೌಜನ್ಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    POLICE JEEP

    ಮಲ್ಲಿಕಾರ್ಜುನ, ಜ್ಯೋತಿ, ಗಂಗಮ್ಮ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಶಿಕಾರಿಪುರ ಆಸ್ಪತ್ರೆಗೆ ಸಾಗಿಸಲಾಗುತಿತ್ತು ಚಿಕಿತ್ಸೆ ಫಲಿಸದೇ ಗಂಗಮ್ಮ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜ್ಯೋತಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗುತಿತ್ತು. ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಜ್ಯೋತಿ ಅಸುನೀಗಿದ್ದಾರೆ. ಮಲ್ಲಿಕಾರ್ಜುನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ಥಳಕ್ಕೆ ಶಿರಾಳಕೊಪ್ಪ ಪೊಲೀಸರು (Shiralakoppa Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿದ್ದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು ತಾನೂ ಸತ್ತ

    ಮನೆಯಲ್ಲಿದ್ದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು ತಾನೂ ಸತ್ತ

    ಜೈಪುರ: ನಾಲ್ವರು ಕುಟುಂಬಸ್ಥರನ್ನು ಕೊಂದು 38 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ (Rajastan) ಜೋಧಪುರದಲ್ಲಿ (Jodhpur) ನಡೆದಿದೆ.

    ಆರೋಪಿಯನ್ನು ಶಂಕರ್ ಲಾಲ್ ಎಂದು ಗುರುತಿಸಲಾಗಿದ್ದು, ಶುಕ್ರವಾರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆ ಸೋನಾರಾಮ್ (65) ಅನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದು, ಬಳಿಕ ತಾಯಿ ಚಂಪಾ (55), ಆರೋಪಿಯ ಮಕ್ಕಳಾದ ಲಕ್ಷ್ಮಣ್ (14), ಮತ್ತು ದಿನೇಶ್ (8) ಅನ್ನು ಹತ್ಯೆಗೈದಿದ್ದಾನೆ. ನಂತರ ಶವಗಳನ್ನು ತನ್ನ ಮನೆಯ ನೀರಿನ ಟ್ಯಾಂಕ್‍ಗೆ ಎಸೆದು, ಸಮೀಪದ ಸಂಬಂಧಿಕರ ಮನೆಗೆ ತೆರಳಿ ಅವರ ಮನೆಯ ಟ್ಯಾಂಕ್‍ಗೆ ಹಾರಿ ಶಂಕರ್ ಲಾಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ.  ಇದನ್ನೂ ಓದಿ: ಗುಜರಾತ್‌ ಚುನಾವಣೆ – ಮಾಜಿ ಪತ್ರಕರ್ತ, ಟಿವಿ ಆ್ಯಂಕರ್‌ ಇಸುದನ್‌ ಗಧ್ವಿ ಎಎಪಿ ಸಿಎಂ ಅಭ್ಯರ್ಥಿ

    ಪೀಲ್ವಾ ಗ್ರಾಮದಲ್ಲಿ ರೈತನಾಗಿದ್ದ ಶಂಕರ್ ಲಾಲ್ ಅಫೀಮು ವ್ಯಸನಿಯಾಗಿದ್ದ. ಆತನ ಪತ್ನಿ ಮತ್ತು ಕುಟುಂಬಸ್ಥರಿಗೆ ಮಾದಕ ದ್ರವ್ಯ ಬೆರೆಸಿ ನೀಡಿದರಿಂದ ಅವರಿಗೆ ನಡೆಯುತ್ತಿದ್ದ ಘಟನೆ ಬಗ್ಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಶನಿವಾರ ಬೆಳಗ್ಗೆ ನೀರಿನ ಟ್ಯಾಂಕ್‍ನಿಂದ ಮೃತದೇಹಗಳನ್ನು ಹೊರತೆಗೆದು ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದ್ರೆ ಬಿಜೆಪಿಯವರಿಗೇನು ನೋವು?: ಡಿ.ಕೆ. ಶಿವಕುಮಾರ್

    Live Tv
    [brid partner=56869869 player=32851 video=960834 autoplay=true]

  • ರಸ್ತೆಯಲ್ಲಿ ಹಾಕಿದ್ದ ಬಿಜೆಪಿ ಮುಖಂಡ ಮಲ್ಲೇಶ್ ಬ್ಯಾನರ್ ಹರಿದು ಹಾಕಿ ಪತ್ನಿ ರಂಪಾಟ

    ರಸ್ತೆಯಲ್ಲಿ ಹಾಕಿದ್ದ ಬಿಜೆಪಿ ಮುಖಂಡ ಮಲ್ಲೇಶ್ ಬ್ಯಾನರ್ ಹರಿದು ಹಾಕಿ ಪತ್ನಿ ರಂಪಾಟ

    ಬೀದರ್: ಕೌಟುಂಬಿಕ ಕಲಹ ಹಿನ್ನೆಲೆ ರಸ್ತೆಯಲ್ಲಿ ಹಾಕಿದ್ದ ಪತಿ ಹಾಗೂ ಬಿಜೆಪಿ (BJP) ಮುಖಂಡ ಮಲ್ಲೇಶ್ ಬ್ಯಾನರ್ (Banner) ಹರಿದು ಹಾಕಿ ಪತ್ನಿ ರಂಪಾಟ ಮಾಡಿದ ಘಟನೆ ಬೀದರ್ (Bidar) ನಗರದ ಮೈಲೂರು ಕ್ರಾಸ್ ಬಳಿ ನಡೆದಿದೆ.

    ಮಲ್ಲೇಶ್ ಜನ್ಮದಿನ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಿಎಂ ಸೇರಿದಂತೆ ಸಚಿವರು ಹಾಗೂ ಬಿಜೆಪಿ ಮುಖಂಡರ ಜೊತೆ ಬ್ಯಾನರ್ ಹಾಕಲಾಗಿತ್ತು. ಆದರೆ ಮಲ್ಲೇಶ್ ಪತ್ನಿ ಸಾಧನಾ ಈ ಬ್ಯಾನರ್ ಹರಿದು ಹಾಕುವ ಮೂಲಕ ರಂಪಾಟ ನಡೆಸಿದ್ದಾರೆ. ಇದನ್ನೂ ಓದಿ: ತಾಯಿಯಿಂದ ಬೇರ್ಪಟ್ಟ ಮಗುವಿಗೆ ಎದೆಹಾಲು ಉಣಿಸಿದ ಮಹಿಳಾ ಪೇದೆ – ಭಾರೀ ಪ್ರಶಂಸೆ

    ಕಳೆದ ನಾಲ್ಕು ತಿಂಗಳ ಹಿಂದೆ ಪತಿಯ ಅನೈತಿಕ ಸಂಬಂಧದ ಬಗ್ಗೆ ಠಾಣೆಗೆ ದೂರು ನೀಡಿದ್ರು. ಪೊಲೀಸರು ಎಫ್‍ಐಆರ್ (FIR) ದಾಖಲಿಸದ ಕಾರಣ ಇಂದು ಸಾವಿರ ಮೀಟರ್ ಉದ್ದದ ಕನ್ನಡ ಬಾವುಟ ಮೆರವಣಿಗೆ ವೇಳೆ ಪತಿಯ ಬ್ಯಾನರ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಮಹಿಳೆಯ ನಡುವೆ ಮಾತಿನ ಚಕಮಕಿಯಾಗಿದ್ದು, ಮಹಿಳೆಯ ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಟ್ಟರು.

    ಬಿಜೆಪಿ ಮುಖಂಡ ಸೂರ್ಯಕಾಂತ್ ನಾಗಮಾರಪ್ಪಳ್ಳಿ ಹಾಗೂ ಶಿವಶರಣಪ್ಪ ವಾಲಿ ಮುಂದೆ ನ್ಯಾಯಕ್ಕಾಗಿ ಮಹಿಳೆ ಕಣ್ಣೀರು ಹಾಕಿದ ಪ್ರಸಂಗವು ಈ ವೇಳೆ ನಡೆಯಿತು.

    Live Tv
    [brid partner=56869869 player=32851 video=960834 autoplay=true]

  • ದೇಹ ಮನೆಯವರಿಗೆ ನೀಡಬೇಡಿ ಎಂದು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

    ದೇಹ ಮನೆಯವರಿಗೆ ನೀಡಬೇಡಿ ಎಂದು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

    ಲಕ್ನೋ: ಕಾಲ್ ಸೆಂಟರ್‌ನಲ್ಲಿ (Call centre) ಕೆಲಸ ಮಾಡುತ್ತಿದ್ದ ಕಾನ್ಪುರದ ವ್ಯಕ್ತಿಯೊಬ್ಬ ಹೋಟೆಲ್‍ನಲ್ಲಿ (Hotel) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉತ್ತರಪ್ರದೇಶದ ನಾಕಾ ಹಿಂದೋಲಾ ಪ್ರದೇಶದಲ್ಲಿ ನಡೆದಿದೆ.

    ಮೃತರನ್ನು ಆಶಿಶ್ ಕುಮಾರ್ (28) ಎಂದು ಗುರುತಿಸಲಾಗಿದೆ. ಆಶಿಶ್ ಹೋಟೆಲ್‍ವೊಂದರಲ್ಲಿ ತಂಗಿದ್ದ. ಆತ ಒಂದು ದಿನ ಕಳೆದರೂ ರೂಮ್‍ನಿಂದಹೊರಗೆ ಬಾರದಿದ್ದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ತಪಾಸಣೆಗೆಂದು ಹೋಗಿದ್ದಾರೆ. ನಂತರ ರೂಮ್‍ನ ಬಾಗಿಲನ್ನು ತಟ್ಟಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅದಾದ ಬಳಿಕ ಕಿಟಕಿಯಿಂದ ನೋಡಿದಾಗ ಆಶಿಶ್ ನೇಣು ಬಿಗಿದುಕೊಂಡಿರುವುದು ಕಂಡಿದೆ. ಘಟನೆಗೆ ಸಂಬಂಧಿಸಿ ಹೋಟೆಲ್‍ನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    crime

    ಸ್ಥಳಕ್ಕಾಗಮಿಸಿದ ಪೊಲೀಸರು, ಆಶೀಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ಆಶಿಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಆತ ತನ್ನ ದೇಹವನ್ನು ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ಹಸ್ತಾಂತರಿಸಬೇಕೇ ಹೊರತು ತನ್ನ ಕುಟುಂಬಕ್ಕಲ್ಲ (Family) ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಪತ್ನಿಯನ್ನು ಉಳಿಸೋ ಬದ್ಲು ವೀಡಿಯೋ ಮಾಡಿಕೊಂಡ ಪತಿ

    POLICE JEEP

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆಶೀಶ್ ತನ್ನ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಬೇಡ ಎನ್ನುವುದಕ್ಕೆ ಕಾರಣ ಏನು ಎನ್ನುವುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸದ್ದಕ್ಕೆ ಯುವಕ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಬೀದಿ ನಾಯಿಗಳಿಗೆ ತೊಂದರೆ ಕೊಡೋರ ವಿರುದ್ಧ ಕ್ರಮಕೈಗೊಳ್ಳಿ – ಪ್ರಧಾನಿಗೆ ಪತ್ರ ಬರೆದ ಕುಟುಂಬ

    ಬೀದಿ ನಾಯಿಗಳಿಗೆ ತೊಂದರೆ ಕೊಡೋರ ವಿರುದ್ಧ ಕ್ರಮಕೈಗೊಳ್ಳಿ – ಪ್ರಧಾನಿಗೆ ಪತ್ರ ಬರೆದ ಕುಟುಂಬ

    ಬೆಳಗಾವಿ: ಬೀದಿ ನಾಯಿಗಳಿಗೆ (Stray Dog) ತೊಂದರೆ ಕೊಡುವುದಲ್ಲದೇ ಅವುಗಳಿಗೆ ಉಚಿತವಾಗಿ ಆಹಾರ ಕೊಡುತ್ತಿರುವ ಕುಟುಂಬದವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ಬೆಳಗಾವಿ ಪೊಲೀಸರಿಗೆ ದೂರು ನೀಡಿದರೂ, ಕ್ರಮಕೈಗೊಳ್ಳದ ಹಿನ್ನೆಲೆ ಸಂತ್ರಸ್ತರು ಪ್ರಧಾನಿಗೆ (Prim Minister) ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

    ಬೆಳಗಾವಿಯ (Belgavi) ಖಾಸಭಾಗನ ಮಾರುತಿ ಗಲ್ಲಿಯ ನಿವಾಸಿ ಅನಿತಾ ದೊಡ್ಡಮನಿ ಕುಟುಂಬಸ್ಥರ ಮೇಲೆ ವಕೀಲ ವಿನಾಯಕ್ ವಲೇಪೂರಕರ ಎಂಬುವವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಪ್ರಕರಣ ಹಿನ್ನೆಲೆ: ಅನಿತಾ ದೊಡ್ಡಮನಿ ಕುಟುಂಬಸ್ಥರು ಕಳೆದ ಹಲವಾರು ವರ್ಷಗಳಿಂದ ಬೆಳಗಾವಿ ಅನಿಮಲ್ ವೇಲ್ಫೇರ್ ಅಸೋಸಿಯೇಷನ್ (ಎನ್‌ಜಿಓ) ತೆಗೆದುಕೊಂಡು ಸರ್ಕಾರದ ಅನುಮತಿ ಪಡೆದು ನಗರದಲ್ಲಿರುವ ಬೀದಿ ನಾಯಿಗಳಿಗೆ ಉಚಿತವಾಗಿ ಊಟ ಹಾಕುತ್ತಿದ್ದಾರೆ. ಆದರೆ, ಬೀದಿ ನಾಯಿಗಳಿಗೆ ಊಟ ನೀಡದಂತೆ ಅನಿತಾ ಕುಟುಂಬಸ್ಥರಿಗೆ ವಕೀಲ ವಿನಾಯಕ್ ದಬ್ಬಾಳಿಕೆ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಳೆದ ಒಂಭತ್ತು ತಿಂಗಳ ಹಿಂದೆಯೇ ಶಾಹಾಪುರ ಪೊಲೀಸ್ ಠಾಣೆಯಲ್ಲಿ ಅನಿತಾ ಅವರು ದೂರು ದಾಖಲಿಸಿದ್ದಾರೆ.

    ಆದರೆ ನಾಯಿಗಳಿಗೆ ತೊಂದರೆ ಹಾಗೂ ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದರೂ ಪೊಲೀಸರು ಸೂಕ್ತಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ನಾವು ಬೀದಿ ನಾಯಿಗಳಿಗೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ಪ್ರಧಾನಮಂತ್ರಿವರೆಗೂ ದೂರು ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ. ನಾಯಿಗಳಿಗೆ ಹಾಗೂ ನಮಗೆ ಕಿರುಕುಳ ನೀಡುತ್ತಿರುವ ವಿನಾಯಕ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ಚುನಾವಣೆ – `ಕೈ’ ನಾಯಕರ ಪಟ್ಟಿ ರಿಲೀಸ್

    Live Tv
    [brid partner=56869869 player=32851 video=960834 autoplay=true]

  • ತಲೆಗೆ ಗುಂಡು ಹಾರಿಸಿಕೊಂಡು ಬಿಜೆಪಿ ಮುಖಂಡ ಆತ್ಮಹತ್ಯೆ

    ತಲೆಗೆ ಗುಂಡು ಹಾರಿಸಿಕೊಂಡು ಬಿಜೆಪಿ ಮುಖಂಡ ಆತ್ಮಹತ್ಯೆ

    ಮುಂಬೈ: ತಲೆಗೆ ಗುಂಡು ಹಾರಿಸಿಕೊಂಡು ಮಹಾರಾಷ್ಟ್ರದ (Maharashtra) ಬಿಜೆಪಿ ಮುಖಂಡ ಭಗೀರಥ ಬಿಯಾನಿ(50) (Bhagirath Biyani) ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಭಗೀರಥ ಬಿಯಾನಿ ಅವರು ಬಿಜೆಪಿಯ ಬೀಡ್ ಜಿಲ್ಲಾ ಘಟಕದ (BJP’s Beed district unit) ಮುಖ್ಯಸ್ಥರಾಗಿದ್ದರು. ಆದರೆ ಇಂದು ಮಧ್ಯಾಹ್ನ ಮೀರಾ ನಗರ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಪರವಾನಗಿ ಪಡೆದ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗುಂಡಿನ ಶಬ್ಧ ಕೇಳಿಸಿಕೊಂಡ ಕುಟುಂಬಸ್ಥರು ಭಗೀರಥ ಬಿಯಾನಿ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟೋತ್ತಿಗಾಗಲೇ ಬಿಜೆಪಿ ಮುಖಂಡ ಮೃತಪಟ್ಟಿದ್ದರು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ನಿಮ್ಮನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲೇ ನಿಲ್ಲಿಸುತ್ತೇವೆ- ಸಿದ್ದರಾಮಯ್ಯಗೆ ಬಿಎಸ್‍ವೈ ಎಚ್ಚರಿಕೆ

    ಭಗೀರಥ ಬಿಯಾನಿ ಅವರು ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗುತ್ತಿದ್ದು, ಇದೀಗ ಈ ಸಂಬಂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಒಂದೇ ಬಾತ್‍ರೂಂನಲ್ಲಿ ಎರಡು ಕಮೋಡ್ – ಸ್ಟಾಲಿನ್ ಉದ್ಘಾಟಿಸಿದ ಕಟ್ಟಡ ಟ್ರೋಲ್

    Live Tv
    [brid partner=56869869 player=32851 video=960834 autoplay=true]

  • ಮಗಳು ಅನ್ಯ ಜಾತಿ ಯುವಕನ ಜೊತೆ ಪರಾರಿ – ತಂದೆ, ತಾಯಿ, ತಮ್ಮ ಆತ್ಮಹತ್ಯೆ

    ಮಗಳು ಅನ್ಯ ಜಾತಿ ಯುವಕನ ಜೊತೆ ಪರಾರಿ – ತಂದೆ, ತಾಯಿ, ತಮ್ಮ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಮಗಳು (Daughter) ಅನ್ಯ ಜಾತಿ ಯುವಕನ ಜೊತೆ ಪರಾರಿಯಾದ ಹಿನ್ನೆಲೆ ಮಾನ ಮರ್ಯಾದೆಗೆ ಅಂಜಿದ ತಂದೆ, ತಾಯಿ ಹಾಗೂ ಆಕೆಯ ತಮ್ಮ ಮೂವರು ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ತಂದೆ ಶ್ರೀರಾಮಪ್ಪ, ತಾಯಿ ಸರೋಜಮ್ಮ, ಹಾಗೂ ಇವರ ಮಗ ಮನೋಜ್ ಆತ್ಮಹತ್ಯೆಗೆ ಶರಣಾದವರು. ಅಂದಹಾಗೆ ಶ್ರೀರಾಮಪ್ಪ-ಸರೋಜಮ್ಮ ದಂಪತಿಯ ಮಗಳು ಅರ್ಚನಾ ಅನ್ಯ ಜಾತಿ ಯುವಕನ ಜಾತಿ ಕಾಣೆಯಾಗಿದ್ದಾಳೆ ಎನ್ನಲಾಗಿದ್ದು, ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ನಿನ್ನೆಯಷ್ಟೇ ಪೋಷಕರು ದೂರು ನೀಡಿದರು. ಇದೇ ವಿಚಾರದಲ್ಲಿ ಮನನೊಂದಿದ್ದ ತಂದೆ, ತಾಯಿ ಹಾಗೂ ಮಗ ತಡರಾತ್ರಿ ವಿಷಕಾರಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಸ್ಮಶಾನ ಇಲ್ಲದೆ ದಲಿತರ ಸಂಸ್ಕಾರಕ್ಕೆ ಪರದಾಟ- ಪಬ್ಲಿಕ್ ವರದಿ ಬಳಿಕ ಎಚ್ಚೆತ್ತ ಸರ್ಕಾರ

    ದಂಪತಿಗೆ ಮೂರು ಜನ ಮಕ್ಕಳಿದ್ದು ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಕಳೆದ ಭಾನುವಾರ ಇದೇ ಗ್ರಾಮದ ನಾರಾಯಣಸ್ವಾಮಿ ಎಂಬಾತನ ಜೊತೆ ಅರ್ಚನಾ ಮನೆ ಬಿಟ್ಟು ಹೋಗಿದ್ದಾಳೆ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೇ ವಿಚಾರದಲ್ಲಿ ತಡರಾತ್ರಿ ಮೊದಲು ದನಗಳ ದೊಡ್ಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ಲಾನ್ ಮಾಡಿದ್ದು ಪ್ಲಾನ್ ಪ್ಲಾಪ್ ಆಗಿ ತದನಂತರ ಮನೆಯ ಮುಂಭಾಗದಲ್ಲಿ ಮೂವರು ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ ಹಿರಿಯ ಮಗ ರಂಜಿತ್ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಚಿಂತಾಮಣಿ ಉಪವಿಭಾಗದ ಎಎಸ್‍ಪಿ ಕುಶಾಲ್ ಚೋಕ್ಸಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಡೆತ್‍ನೋಟ್ ಬರೆದು ಆತ್ಮಹತ್ಯೆ ಶರಣಾಗಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಕತ್ತು ಸೀಳಿ ಐಪಿಎಸ್‌ ಅಧಿಕಾರಿ ಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಬುರ್ಖಾ ಧರಿಸದಿದ್ದಕ್ಕಾಗಿ ಪತ್ನಿಯನ್ನೇ ಚಾಕುವಿನಿಂದ ಇರಿದು ಕೊಂದ ಪತಿ

    ಬುರ್ಖಾ ಧರಿಸದಿದ್ದಕ್ಕಾಗಿ ಪತ್ನಿಯನ್ನೇ ಚಾಕುವಿನಿಂದ ಇರಿದು ಕೊಂದ ಪತಿ

    ಮುಂಬೈ: ಬುರ್ಖಾ (Burqa) ಧರಿಸಿ ಮುಸ್ಲಿಂ ಸಂಪ್ರದಾಯ (Muslim Tradition) ಪಾಲನೆ ಮಾಡದೇ ಇದ್ದುದ್ದಕ್ಕಾಗಿ ಪತ್ನಿಯನ್ನ ಅನೇಕ ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಟ್ಯಾಕ್ಸಿ ಡ್ರೈವರ್‌ (Taxi Driver) ಇಕ್ಬಾಲ್ ಶೇಕ್ (36)ನನ್ನು ಬಂಧಿಸಲಾಗಿದೆ. ತನ್ನ ಪತ್ನಿ ಮುಸ್ಲಿಂ ಸಂಪ್ರದಾಯ ಅನುಸರಿಸಲು ನಿರಾಕರಿಸಿದ್ದರಿಂದ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ‘ಆಸ್ಕರ್’ ಗಾಗಿ ಭಾರತದಿಂದ ಕಳುಹಿಸುವ ಸಿನಿಮಾ ಆಯ್ಕೆ ಸಮಿತಿಯಲ್ಲಿ ನಿರ್ದೇಶಕ ಪವನ್ ಒಡೆಯರ್

    ಹಿಂದೂ ಮಹಿಳೆ (Hindu Women) ರೂಪಾಲಿ 2019ರಲ್ಲಿ ಮುಸ್ಲಿಂ ಸಮುದಾಯದ ಇಕ್ಬಾಲ್ ಶೇಖ್‌ನನ್ನು ವಿವಾಹ (Marriage) ವಾದರು. ತಮ್ಮ ಹೆಸರನ್ನು ಜಾರಾ ಎಂದೂ ಬದಲಾಯಿಸಿಕೊಂಡಿದ್ದರು. ದಂಪತಿಗಳಿಗೆ 2020ರಲ್ಲಿ ಒಂದು ಮಗು ಜನಿಸಿತ್ತು. ಕಳೆದ ಕೆಲವು ತಿಂಗಳಿನಿಂದ ಇಕ್ಬಾಲ್ ಶೇಖ್ ಕುಟುಂಬಸ್ಥರು ಬುರ್ಖಾ ಧರಿಸುವಂತೆ ರೂಪಾಲಿಗೆ ಒತ್ತಡ ಹೇರುತ್ತಿದ್ದರಿಂದ ಆಕೆ ತನ್ನ ಮಗನೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿ ವಿಲಾಸ್ ರಾಥೋಡ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಟೀಲ್ ಒಬ್ಬ ವಿದೂಷಕ, ಪಾಪ ಇನ್ನೂ ಮೆಚ್ಯೂರಿಟಿ ಇಲ್ಲ: ಸಿದ್ದರಾಮಯ್ಯ

    ನಿನ್ನೆ (ಸೆ.26) ವಿಚ್ಛೇದನ ಕೇಳುವುದಕ್ಕಾಗಿ ಇಕ್ಬಾಲ್, ರೂಪಾಲಿಯನ್ನು ಮನೆಗೆ ಕರೆದಿದ್ದನು. ನಂತರ ಮಗು ಪಾಲನೆ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ರಾತ್ರಿ 10 ಗಂಟೆ ಸುಮಾರಿಗೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಪತಿ ಆಕೆಯನ್ನು ಎಳೆದೊಯ್ದು ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ. ಇದರಿಂದ ಪತ್ನಿ ಸ್ಥಳದಲ್ಲೇ ಮೃತಪಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ (IPC Section) 302 (ಕೊಲೆ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಳಗ್ಗಿನ ಜಾವ ಮಲ ವಿಸರ್ಜನೆಗೆ ಹೋಗಿದ್ದ ಮಹಿಳೆ ಶವವಾಗಿ ಪತ್ತೆ

    ಬೆಳಗ್ಗಿನ ಜಾವ ಮಲ ವಿಸರ್ಜನೆಗೆ ಹೋಗಿದ್ದ ಮಹಿಳೆ ಶವವಾಗಿ ಪತ್ತೆ

    ಲಕ್ನೋ: ಭಾನುವಾರ ಬೆಳಗಿನ ಜಾವ ಮಲವಿಸರ್ಜನೆಗೆಂದು ತೆರಳಿದ್ದ ಮಹಿಳೆ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾಸ್‍ಗಂಜ್ (Kasganj) ಜಿಲ್ಲೆಯಲ್ಲಿ ನಡೆದಿದೆ.

    ಎಷ್ಟು ಹೊತ್ತಾದರೂ ಮನೆಗೆ ಪತ್ನಿ ಮನೆಗೆ ಬಾರದೇ ಇದ್ದಿದ್ದನ್ನು ಗಮನಿಸಿದ ಪತಿ ಹಾಗೂ ಕುಟುಂಬಸ್ಥರು ಆಕೆಗಾಗಿ ಹುಡುಕಾಟ ಆರಂಭಿಸಿದರು. ಈ ವೇಳೆ ಮಹಿಳೆಯ ಶವ ನೀರು ತುಂಬಿದ್ದ ಗುಂಡಿಯೊಳಗೆ ಬಿದ್ದಿರುವುದು ಕಂಡು ಬಂದಿದೆ. ಇದನ್ನೂ ಓದಿ: ಎಎಪಿ ಶಾಸಕ ಅಮಾನತುಲ್ಲಾ ಖಾನ್‍ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

    POLICE JEEP

    ನಂತರ ಮೃತ ಮಹಿಳೆಯ ಪತಿ ರಿಷಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಲು ಆರಂಭಿಸಿದರು. ಪ್ರಕರಣ ಸಂಬಂಧ ಸಾಕ್ಷಿಗಳನ್ನು ಪತ್ತೆ ಹಚ್ಚಲು ಶ್ವಾನ ದಳವನ್ನು ಕರೆಸಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಸರ್ವವ್ಯಾಪಿ, ಸರ್ವ ಸ್ಪರ್ಶಿಯಾಗಿದೆ: ಪ್ರಿಯಾಂಕ್ ಖರ್ಗೆ

    ನಂತರ ಮೃತದೇಹವನ್ನು ನೋಡಿದ ಪೊಲೀಸರು, ಮಹಿಳೆಯನ್ನು ದುಪ್ಪಾಟ್ಟಾದಿಂದ ಕತ್ತು ಹಿಸುಕಿ ಸಾಯಿಸಿದ್ದಾರೆ. ನಂತರ ಶವವನ್ನು ನೀರು ತುಂಬಿದ ಗುಂಡಿಗೆ ಎಸೆದಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ಮುಗಿದ ನಂತರವೇ ಸತ್ಯ ಸಂಗತಿ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ. ಇದೀಗ ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉತ್ಸವ ಮೂರ್ತಿಯ ಗುಜ್ಜುಕೋಲನ್ನು ಮುಟ್ಟಿದ್ದಕ್ಕೆ ದಲಿತ ಕುಟುಂಬದ ಮೇಲೆ ದೌರ್ಜನ್ಯ – 8 ಮಂದಿ ಅರೆಸ್ಟ್

    ಉತ್ಸವ ಮೂರ್ತಿಯ ಗುಜ್ಜುಕೋಲನ್ನು ಮುಟ್ಟಿದ್ದಕ್ಕೆ ದಲಿತ ಕುಟುಂಬದ ಮೇಲೆ ದೌರ್ಜನ್ಯ – 8 ಮಂದಿ ಅರೆಸ್ಟ್

    ಕೋಲಾರ: ಊರಿನ ಜಾತ್ರೆಯಲ್ಲಿ ವೇಳೆ ಉತ್ಸವ ಮೂರ್ತಿ ಹೊತ್ತು ತರುತ್ತಿದ್ದಾಗ ಕೈಜಾರಿ ಬಿದ್ದ ಉತ್ಸವ ಮೂರ್ತಿಯ ಗುಜ್ಜುಕೋಲನ್ನು ಉಳ್ಳೇರಹಳ್ಳಿ ಗ್ರಾಮದ ದಲಿತ (Dalit Community) ಬಾಲಕ (Boy) ಮುಟ್ಟಿದ. ಈ ಕಾರಣಕ್ಕೆ ಗ್ರಾಮದ ಕೆಲವು ಹಿರಿಯರು ಸೇರಿ ಬಾಲಕನ ಪೋಷಕರನ್ನು ಕರೆಸಿ ನ್ಯಾಯ ಪಂಚಾಯಿತಿ ಮಾಡಿ ಆ ಕುಟುಂಬಕ್ಕೆ 60 ಸಾವಿರ ರೂ. ದಂಡ ವಿಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ.

    ಕಳೆದ ಸೆ.7 ರಂದು ಉಳ್ಳೇರಹಳ್ಳಿ ಗ್ರಾಮದ ಭೂತಮ್ಮ ದೇವಿಯ ಉತ್ಸವ ಆಯೋಜನೆ ಮಾಡಲಾಗಿತ್ತು. ಉತ್ಸವ ಮೂರ್ತಿ ಹೊತ್ತು ತರುವ ವೇಳೆ ಕೈಜಾರಿ ಬಿದ್ದ ಉತ್ಸವ ಮೂರ್ತಿಯ ಗುಜ್ಜುಕೋಲನ್ನು ಅದೇ ಗ್ರಾಮದ ದಲಿತ ಬಾಲಕ ಚೇತನ್ ಎಂಬಾತ ಮುಟ್ಟಿದ ಅನ್ನೋ ಕಾರಣಕ್ಕೆ ಗ್ರಾಮದ ಕೆಲವು ಹಿರಿಯರು ಸೇರಿ ಚೇತನ್ ತಂದೆ ರಮೇಶ್ ಹಾಗೂ ತಾಯಿ ಶೋಭಾರನ್ನು ಕರೆಸಿ ನ್ಯಾಯ ಪಂಚಾಯಿತಿ ಮಾಡಿ ಆ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಿದ್ದು ಒಂದು ವೇಳೆ ದಂಡ ಕಟ್ಟದಿದ್ದರೆ ಊರು ಬಿಟ್ಟು ಹೋಗುವಂತೆ ತಿಳಿಸಿದ್ದರು ಎಂದು ತಿಳಿದು ಬಂದಿತ್ತು. ಘಟನೆ ನಡೆದು ಕೆಲ ದಿನಗಳ ನಂತರ ವಿಷಯ ತಿಳಿದು ಗ್ರಾಮಕ್ಕೆ ಭೇಟಿ ಕೊಟ್ಟ ಕೆಲವು ದಲಿತ ಸಂಘಟನೆ ಮುಖಂಡರು, ಗ್ರಾಮದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ, ಬಹಿಷ್ಕಾರ, ದಂಡ ಈ ರೀತಿ ಅಸ್ಪೃಶ್ಯತೆ ಖಂಡಿಸಿ ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ಧೈರ್ಯ ಹೇಳಿದ ನಂತರ ಸೆಪ್ಟಂಬರ್ 20 ರಂದು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಹಾಗೂ ದೌರ್ಜನ್ಯ ಪ್ರಕರಣ ದಾಖಲು ಮಾಡಲಾಗಿತ್ತು. ಇದನ್ನೂ ಓದಿ: ದಲಿತ ಬಾಲಕ ದೇವರ ಮೂರ್ತಿ ಮುಟ್ಟಿದ್ದಕ್ಕೆ 60 ಸಾವಿರ ರೂ. ದಂಡ ಹಾಕಿದ ಗ್ರಾಮಸ್ಥರು

    ಪ್ರಕರಣ ದಾಖಲಾಗುತ್ತಿದ್ದಂತೆ ಗ್ರಾಮದಲ್ಲಿ ಪಂಚಾಯಿತಿ ಮಾಡಿ ದಲಿತ ಕುಟುಂಬಕ್ಕೆ ದಂಡ ವಿಧಿಸಿ, ಬಹಿಷ್ಕಾರ ಹಾಕುವ ಬೆದರಿಕೆ ಹಾಗಿದ್ದ ಒಟ್ಟು ಎಂಟು ಜನರನ್ನು ಸದ್ಯ ಮಾಸ್ತಿ ಪೊಲೀಸರು ಬಂಧಿಸಿದ್ದಾರೆ. ಇದಾದ ನಂತರ ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜಾ ಹಾಗೂ ಎಸ್‍ಪಿ ಡಿ.ದೇವರಾಜ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಹೋಗುವಂತೆ ತಿಳಿ ಹೇಳಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ – ಕುಟುಂಬದ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ

    ದೌರ್ಜನ್ಯಕ್ಕೊಳಗಾದ ಕುಟುಂಬದವರನ್ನು ಗ್ರಾಮದ ಭೂತಮ್ಮ ದೇವಾಲಯಕ್ಕೆ ಹಾಕಲಾಗಿದ್ದ ಬೀಗ ಒಡೆದು ದೇವಾಲಯದ ಒಳಗೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ, ಆ ಕುಟುಂಬಕ್ಕೆ ಸಾಂತ್ವನ ಹೇಳಿ ಮನೆ ಇಲ್ಲದೆ ಗುಡಿಸಲಿನಲ್ಲಿ ವಾಸವಿದ್ದ ಮಹಿಳೆಗೆ ನಿವೇಶ ಹಾಗೂ ಜೀವನೋಪಾಯಕ್ಕೆ ಒಂದು ಕೆಲಸ ಕೊಡುವುದಾಗಿ ಭರವಸೆ ನೀಡಿದ್ದಾರೆ. ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭೇಟಿ ನೀಡಿ ಕುಟುಂಬಕ್ಕೆ ದಿನಸಿ ಕಿಟ್ ಹಾಗೂ ಆರ್ಥಿಕ ನೆರವು ನೀಡಿದ್ರು. ಅಲ್ಲದೆ ಗ್ರಾಮಕ್ಕೆ ಕೋಲಾರ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮ ಹಾಗೂ ಸಮಾಜಕಲ್ಯಾಣಾಧಿಕಾರಿ ಚೆನ್ನಬಸಪ್ಪ ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೂಡಾ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]