Tag: family

  • ಕುಟುಂಬದ ಐವರನ್ನು ಕೊಲೆಗೈದು ಆತ್ಮಹತ್ಯೆಗೆ ಶರಣು

    ಕುಟುಂಬದ ಐವರನ್ನು ಕೊಲೆಗೈದು ಆತ್ಮಹತ್ಯೆಗೆ ಶರಣು

    – ಸ್ಥಳದಲ್ಲಿ ಸಿಕ್ತು 19 ಪುಟದ ಡೆತ್‍ನೋಟ್

    ಚಂಡೀಗಢ: ಯುವಕನೊಬ್ಬ ತನ್ನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಬಾಜ್‍ನ ಮೋಗದಲ್ಲಿ ನಡೆದಿದೆ.

    ಸಂದೀಪ್ ಸಿಂಗ್ (27) ಕೊಲೆ ಮಾಡಿದ ಯುವಕ. ಸಂದೀಪ್ ತನ್ನ ತಂದೆ, ತಾಯಿ, ತಾತ, ಅಜ್ಜಿ, ಸಹೋದರಿ ಹಾಗೂ ಸಹೋದರಿ ಮಗಳನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಸಂದೀಪ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸಂದೀಪ್ ಮನೆಯಿಂದ ಬರುತ್ತಿದ್ದ ಕಿರುಚಾಟದ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಈ ವೇಳೆ ಸಂದೀಪ್ ತಾತ ಗುರುಚರಣ್ ಸಿಂಗ್ ಸ್ಥಿತಿ ಗಂಭೀರವಾಗಿದ್ದನ್ನು ನೋಡಿದ ಸ್ಥಳೀಯರು ಅವರನ್ನು ಫರಿದ್‍ಕೋಟ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

    ಕೆಲವು ತಿಂಗಳಿನಲ್ಲಿ ಸಂದೀಪ್ ಮದುವೆವಿತ್ತು. ಸಂದೀಪ್ ಗುಪ್ತ ರೋಗದಿಂದ ಬಳಲುತ್ತಿದ್ದು, ಈ ವಿಷಯಕ್ಕಾಗಿ ಯಾವಾಗಲೂ ಒತ್ತಡದಲ್ಲಿ ಇರುತ್ತಿದ್ದನು. ಅಲ್ಲದೆ ಆತ ಮದ್ಯ ಸೇವನೆ ಮಾಡುವುದನ್ನು ಕೂಡ ಶುರು ಮಾಡಿಕೊಂಡಿದ್ದನು ಎಂದು ಹೇಳಲಾಗುತ್ತಿದೆ.

    ಈ ವಿಷಯ ತಿಳಿದ ಎಎಸ್‍ಪಿ ಹರಿಂದರ್ ಸಿಂಗ್ ತಮ್ಮ ಪೊಲೀಸ್ ತಂಡದ ಜೊತೆ ಘಟನಾ ಸ್ಥಳಕ್ಕೆ ತಲುಪಿದ್ದರು. ಸದ್ಯ ಪೊಲೀಸರು ಸಂದೀಪ್ ಸೇರಿದಂತೆ ಐವರ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ 19 ಪುಟದ ಡೆತ್‍ನೋಟ್ ದೊರೆತಿದ್ದು, ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

  • ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ- ಒಂದೇ ಕುಟುಂಬದ 6 ಮಂದಿ ಸಾವು

    ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ- ಒಂದೇ ಕುಟುಂಬದ 6 ಮಂದಿ ಸಾವು

    ಧಾರವಾಡ: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕಾಶೀಳ ಗ್ರಾಮ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.

    ಘಟನೆಯಲ್ಲಿ ಸಾವನ್ನಪ್ಪಿದ ಎಲ್ಲರೂ ಕರ್ನಾಟಕ ಮೂಲದ ಧಾರವಾಡ ನಿವಾಸಿ ನೀಜಾಮುದ್ದಿನ್ ಕುಟುಂಬದವರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಕಾರು ಚಾಲಕ ಮತ್ತು ಹೆಣ್ಣು ಮಗುವಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಮೂರೂವರೆ ವರ್ಷದ ಬಾಲಕ ಮತ್ತು 5 ವರ್ಷದ ಬಾಲಕಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಬೋರೆಗಾಂವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಎರಡು ಕುಟುಂಬಗಳ ಮಧ್ಯೆ ಕಲ್ಲು ತೂರಾಟ – 15 ಮಂದಿಗೆ ಗಾಯ

    ಎರಡು ಕುಟುಂಬಗಳ ಮಧ್ಯೆ ಕಲ್ಲು ತೂರಾಟ – 15 ಮಂದಿಗೆ ಗಾಯ

    ಬಾಗಲಕೋಟೆ: ಎರಡು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಪರಸ್ಪರ ಕಲ್ಲು ತೂರಾಟದ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

    ಈ ಘಟನೆ ಬಾಗಲಕೋಟೆ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಹಳೆಯ ವೈಷಮ್ಯ ಇರುವ ಕಾರಣದಿಂದ ಎರಡು ಕುಟುಂಬಗಳ ಮಧ್ಯೆ ಗಲಾಟೆ ಉಂಟಾಗಿದ್ದು, ಪರಸ್ಪರ ಕಲ್ಲು ತೂರಾಟ ಮಾಡಿಕೊಂಡಿದ್ದಾರೆ. ಘರ್ಷಣೆಯಲ್ಲಿ ಸುಮಾರು 15 ಜನ ಗಾಯಗೊಂಡಿದ್ದಾರೆ.

    ಚೌಡಾಪುರ ಗ್ರಾಮದ ಶಂಕರಪ್ಪ ಭಗವತಿ ಹಾಗೂ ವಾಸಪ್ಪ ಬೀರಗೊಂಡ ಕುಟುಂಬಗಳ ನಡುವೆ ಹೊಲದ ದಾರಿಗೆ ಸಂಬಂಧಿಸಿದಂತೆ ಬಹಳ ದಿನಗಳ ಹಿಂದಿನಿಂದ ವೈರತ್ವ ಇತ್ತು. ಹೀಗಾಗಿ ಎರಡು ಕುಟುಂಬದವರು ಕೈಯಲ್ಲಿ ದೊಣ್ಣೆ, ಕೊಡಲಿ ಹಿಡಿದು ಬಡಿದಾಡಿಕೊಂಡು ಕಲ್ಲು ತೂರಾಟ ಮಾಡಿದ್ದಾರೆ. ಗಲಾಟೆಯಲ್ಲಿ ಕೆಲವರಿಗೆ ಮೈಮೇಲೆ ರಕ್ತ ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ಎದುರು ಗುಂಪಿನ ಮಹಿಳೆಯರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

    ಗಲಾಟೆ ಬಿಡಿಸಲು ಪೊಲೀಸ್ ಪೇದೆ ವೈ.ಎನ್ ಧೋನಿ ಪರದಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪೊಲೀಸರ ಮೇಲೂ ಕಲ್ಲು ಬಿದ್ದ ಪರಿಣಾಮ ಪೇದೆ ಗಾಯಗೊಂಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮತ್ತು ಟ್ರ್ಯಾಕ್ಟರ್‍ ಗಳನ್ನು ಜಖಂ ಗೊಳಿಸಿದ್ದಾರೆ. ಈ ಸಂಬಂಧ 20 ಕ್ಕೂ ಹೆಚ್ಚು ಜನರನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಎರಡೂ ಕಡೆಯಿಂದ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

  • ನೇಣು ಬಿಗಿದುಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ನೇಣು ಬಿಗಿದುಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ದೆಹಲಿ: ಒಂದೇ ಕುಟುಂಬದ ಮೂವರು ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿ ಐಐಟಿ ಕ್ಯಾಂಪಸ್‍ನಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರ ನಡೆದಿದ್ದು, ಐಐಟಿ ಕ್ಯಾಂಪಸ್‍ನಲ್ಲಿರುವ ತಮ್ಮ ಫ್ಲಾಟ್‍ನಲ್ಲಿ ಗುಲ್ಶನ್ ದಾಸ್, ಪತ್ನಿ ಸುನಿತಾ ಮತ್ತು ತಾಯಿ ಕಮ್ತಾ ದೇಹಗಳು ಫ್ಲಾಟ್‍ನ ಸೀಲಿಂಗ್ ಫ್ಯಾನ್‍ಗಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಘಟನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ರಾತ್ರಿ ಸುಮಾರು 9.40ಕ್ಕೆ ಮನೆಯೊಳಗೆ ತುಂಬಾ ಗಲಾಟೆ ನಡೆಯುತ್ತಿತ್ತು ಎಂದು ಸ್ಥಳೀಯರು ನಮಗೆ ಮಾಹಿತಿ ನೀಡಿದರು. ಮಾಹಿತಿ ಪಡೆದು ಫ್ಲಾಟ್ ಬಳಿ ಬಂದು ನೋಡಿದಾಗ, ಫ್ಲಾಟ್ ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ನಂತರ ಬಾಗಿಲನ್ನು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಮೂವರು ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

    ಗುಲ್ಶನ್ ಮತ್ತು ಸುನಿತಾ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ಈ ಮಧ್ಯೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ಬಗ್ಗೆ ತಿಳಿದ ನಂತರ ಸುನಿತಾ ಅವರ ತಾಯಿ ಕೃಷ್ಣ ದೇವಿ ಕೂಡ ಮಗಳ ಮನೆಗೆ ಬಂದು ಹೋಗಿದ್ದರು ಎಂದು ಹೇಳಲಾಗಿದೆ. ಆದರೆ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

  • ಅನರ್ಹಗೊಂಡ್ರೂ ಪರವಾಗಿಲ್ಲ ಸರ್ಕಾರ ಉಳಿಯಬಾರದು – ಜಾರಕಿಹೊಳಿ ಶಪಥ

    ಅನರ್ಹಗೊಂಡ್ರೂ ಪರವಾಗಿಲ್ಲ ಸರ್ಕಾರ ಉಳಿಯಬಾರದು – ಜಾರಕಿಹೊಳಿ ಶಪಥ

    ಮುಂಬೈ: ಶಾಸಕ ಸ್ಥಾನದಿಂದ ಅನರ್ಹಗೊಂಡರೂ ಪರವಾಗಿಲ್ಲ. ಆದರೆ ಸಮ್ಮಿಶ್ರ ಸರ್ಕಾರ ಮಾತ್ರ ಉಳಿಯಬಾರದು. ನಮ್ಮ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯಲ್ಲ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಬಂದಿದ್ದಾರೆ ಎನ್ನಲಾಗಿದೆ.

    ಮುಂಬೈ ಹೋಟೆಲ್‍ನಲ್ಲಿ ತಂಗಿರುವ ರಮೇಶ್ ಜಾರಕಿಹೊಳಿ ಅವರು ತಮ್ಮ ಅಪ್ತರ ಬಳಿ ಈ ಕುರಿತು ಮಾತನಾಡಿದ್ದು, ಶಾಸಕ ಸ್ಥಾನದಿಂದ ಅನರ್ಹವಾದರೂ ಪರವಾಗಿಲ್ಲ. ಸರ್ಕಾರ ಪತನ ಆಗುವುದು ಖಚಿತ. ಒಂದೊಮ್ಮೆ ನಾನು ಅನರ್ಹಗೊಂಡರೆ ನನ್ನ ಕುಟುಂಬದಿಂದ ಒಬ್ಬರನ್ನು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಮಾಡಿ, ಸಚಿವರನ್ನಾಗಿ ಮಾಡುತ್ತೇನೆ ಎಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಸುಪ್ರೀಂ ಕೋರ್ಟ್ ನಿರ್ಧಾರ ಸ್ವಾಗತ ಮಾಡಿರುವ ಅವರು ರಾಜೀನಾಮೆಯಿಂದ ಹಿಂದೆ ಸರಿಯಲ್ಲ ಎಂದು ದೃಢಪಡಿಸಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಆದರೆ ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆಯಿರುವ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಅಲ್ಲದೇ ಮಂಗಳಾರದವರೆಗೂ ಮುಂಬೈನಲ್ಲೇ ಉಳಿಯಲು ತೀರ್ಮಾನ ಮಾಡಿದ್ದಾರೆ.

    ಶಾಸಕ ಸ್ಥಾನದಿಂದ ಅನರ್ಹಗೊಂಡರೆ ರಮೇಶ್ ಜರಕಿಹೊಳಿ ಪರವಾಗಿ ಪತ್ನಿ ಜಯಶ್ರೀ, ಅಳಿಯ ಅಂಬಿರಾವ್ ಪಾಟೀಲ್ ಅಥವಾ ಆಪ್ತ ಕೊತ್ವಾಲ್ ಅವರನ್ನು ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಇವರನ್ನೇ ಮಂತ್ರಿ ಮಾಡುವ ಕುರಿತು ನಿರೀಕ್ಷೆಯಲ್ಲಿ ಜಾರಕಿಹೊಳಿ ಅವರು ಇದ್ದಾರೆ. ಉಳಿದಂತೆ ಮಹೇಶ್ ಕುಮಟಳ್ಳಿ ಪರವಾಗಿ ಅವರ ಮಗ ಅಥವಾ ಪತ್ನಿ ಚುನಾವಣೆಗೆ ಸ್ಪರ್ಧೆ ನಡೆಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎನ್ನಲಾಗಿದೆ.

  • ಚರಂಡಿಗೆ ಬಿದ್ದಿರುವ ಮಗ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ – ತಂದೆ

    ಚರಂಡಿಗೆ ಬಿದ್ದಿರುವ ಮಗ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ – ತಂದೆ

    ಮುಂಬೈ: ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆ ಬುಧವಾರ ರಾತ್ರಿ ಮೂರು ವರ್ಷದ ಬಾಲಕ ತೆರೆದ ಚರಂಡಿಗೆ ಬಿದ್ದಿದ್ದು, ಈ ಬಾಲಕನನ್ನು ಹುಡುಕುವ ಕಾರ್ಯ ಗುರುವಾರ ಬೆಳಗ್ಗೆಯಿಂದ ಆರಂಭಗೊಂಡಿದೆ. ಆದರೆ ಬಾಲಕನ ಸುಳಿವು ಮಾತ್ರ ಸಿಕ್ಕಿಲ್ಲ.

    ಇದರಿಂದ ಮನನೊಂದ ಬಾಲಕ ದಿವ್ಯನಾಶ್ ಅವರ ಕುಟುಂಬ ಸಹನೆಯನ್ನು ಕಳೆದುಕೊಂಡಿದ್ದು, ಆತನ ತಂದೆ ನನ್ನ ಮಗ ಇವತ್ತು ಪತ್ತೆಯಾಗದೇ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

    ಬುಧವಾರ ರಾತ್ರಿ ಅಂಬೇಡ್ಕರ್ ನಗರದಲ್ಲಿ ಸುಮಾರು ರಾತ್ರಿ 10.24ರ ವೇಳೆಗೆ ಮನೆಯಲ್ಲಿ ಊಟ ಮುಗಿಸಿ ಹೊರಗೆ ಬಂದ ಬಾಲಕ ರಸ್ತೆಯ ಬದಿಯಲ್ಲಿರುವ ತೆರೆದ ಚರಂಡಿಗೆ ಬಿದ್ದಿದ್ದಾನೆ. ಬಾಲಕ ಚರಂಡಿಗೆ ಬೀಳುತ್ತಿರುವ ಭಯಾನಕ ದೃಶ್ಯ ಪಕ್ಕದಲ್ಲಿನ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಬಾಲಕನನ್ನು ಹುಡುಕಲು ಅಗ್ನಿ ಶಾಮಕ ದಳ, ಎನ್‍ಡಿಆರ್‍ಎಫ್ ಮತ್ತು ಬಿಎಂಸಿಯ ಹಲವಾರು ತಂಡಗಳು ಸ್ಥಳಕ್ಕೆ ಬಂದು ಶೋಧ ಕಾರ್ಯ ನಡೆಸುತ್ತೇವೆ. ಆದರೆ ಶೋಧ ಕಾರ್ಯ ಆರಂಭವಾಗಿ 20 ಗಂಟೆಗಳು ಕಳೆದರೂ ಬಾಲಕ ದಿವ್ಯನಾಶ್‍ನ ಸುಳಿವು ಇನ್ನೂ ಸಿಕ್ಕಿಲ್ಲ.

    ಈ ವಿಚಾರವಾಗಿ ಮಾತನಾಡಿರುವ ಬಾಲಕನ ತಂದೆ, “ಈ ಘಟನೆಗೆ ಬಿಎಂಸಿಯವರೇ ಕಾರಣ. ಅವರು ನನ್ನ ಮಗನನ್ನು ವಾಪಸ್ ತಂದುಕೊಡುತ್ತರಾ? ನನಗೆ ನನ್ನ ಮಗಬೇಕು. ಅವನು ಇವತ್ತು ಸಿಗದೆ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

    ಈ ಘಟನೆಯಿಂದ ಬಾಲಕನ ಕುಟುಂಬ ವಿಚಲಿತಗೊಂಡಿದ್ದು, ಬಾಲಕನ ತಾಯಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಈ ವಿಚಾರವಾಗಿ ಬಿಎಂಸಿ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಘಟನೆ ನಡೆಯಲು ಅವರೇ ಕಾರಣ. ಈ ಚರಂಡಿಯ ವಿಚಾರವಾಗಿ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೆಲ ಸ್ಥಳೀಯರು ಮತ್ತು ಕುಟುಂಬದವರು ಸೇರಿ 30 ನಿಮಿಷ ರಸ್ತೆ ತಡೆ ನಡೆಸಿದರು. ಬಾಲಕ ಬಿದ್ದ ಸಮಯದಲ್ಲಿ ಚರಂಡಿಯಲ್ಲಿ ನೀರು ರಭಸದಿಂದ ಹರಿಯುತಿತ್ತು ಮತ್ತು 3 ಕಿ.ಮೀ ನಂತರ ಚರಂಡಿ ಕೊನೆಯಾಗುತ್ತದೆ. ನಂತರ ಅ ನೀರು ಅರಬ್ಬಿ ಸಮುದ್ರಕ್ಕೆ ಹರಿಯುತ್ತದೆ. ನೀರಿನ ರಭಸ ಜಾಸ್ತಿ ಇರುವ ಕಾರಣ ಬಾಲಕ ಸಮುದ್ರ ಸೇರಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

  • ತಿಥಿ ನಡೆದು 2 ದಿನದ ನಂತ್ರ ವ್ಯಕ್ತಿ ಪ್ರತ್ಯಕ್ಷ – ಕೊನೆ ದರ್ಶನ ಮಾಡಲಾಗದೆ ಪತ್ನಿ, ಪುತ್ರ ಕಣ್ಣೀರು

    ತಿಥಿ ನಡೆದು 2 ದಿನದ ನಂತ್ರ ವ್ಯಕ್ತಿ ಪ್ರತ್ಯಕ್ಷ – ಕೊನೆ ದರ್ಶನ ಮಾಡಲಾಗದೆ ಪತ್ನಿ, ಪುತ್ರ ಕಣ್ಣೀರು

    ಹಾಸನ: ತಿಥಿ ಮಾಡಿದ ಎರಡು ದಿನದ ಬಳಿಕ ವ್ಯಕ್ತಿಯೊಬ್ಬ ಮನೆಗೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ ಹಾಸನ ತಾಲೂಕು ಶಂಖ ಗ್ರಾಮದಲ್ಲಿ ನಡೆದಿತ್ತು. ತನ್ನದೇ ಪತಿಯ ಮೃತದೇಹ ಎಂದು ತಿಳಿದು ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಆತನ ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ ಈಗ ಮೃತ ವ್ಯಕ್ತಿಯ ಪತ್ನಿ ಹಾಗೂ ಮಗ ಅಂತಿಮ ದರ್ಶನ ಪಡೆಯುವುದಕ್ಕೆ ಆಗಲಿಲ್ಲ ಎಂದು ಸಮಾಧಿ ಮುಂದೆ ಕಣ್ಣೀರು ಹಾಕಿದ್ದಾರೆ.

    ರಾಜಣ್ಣ (60) ಮೃತ ವ್ಯಕ್ತಿ. ರಾಜಣ್ಣ ಚಿಕ್ಕಮಗಳೂರು ಜಿಲ್ಲೆಯ ಭೈರಾಪುರ ಗ್ರಾಮದವರಾಗಿದ್ದು, ಅವರ ಶರ್ಟ್ ನಿಂದ ಪುತ್ರ ಹಾಗೂ ಪತ್ನಿ ಅವರ ಗುರುತು ಪತ್ತೆ ಹಚ್ಚಿದ್ದಾರೆ. ರಾಜಣ್ಣ ಅವರ ಪುತ್ರ ಮತ್ತು ಪತ್ನಿ ತಮ್ಮ ಸಂಬಂದಿಕರೊಂದಿಗೆ ಶಂಖ ಗ್ರಾಮಕ್ಕೆ ಬಂದಿದ್ದರು. ತನ್ನ ಪತಿಯನ್ನು ಕೊನೆ ಸಮಯದಲ್ಲಿ ದರ್ಶನ ಮಾಡಲು ಸಾಧ್ಯವಾಗದೇ ಅಂತಿಮ ವಿಧಿವಿಧಾನವನ್ನು ಮಾಡಲಾಗದೆ ಅಸಹಾಯಕರಾಗಿ ಸಮಾಧಿ ಮುಂದೆ ಕಣ್ಣೀರು ಹಾಕಿದರು. ಶವವನ್ನು ಹೊರಕ್ಕೆ ತೆಗೆದುಕೊಂಡು ಹೋಗಲು ಕೂಡ ಸಾಧ್ಯವಾಗದೇ ಅದೇ ಸಮಾಧಿಯ ಮಣ್ಣನ್ನು ತೆಗೆದುಕೊಂಡು ವಾಪಸಾಗಿದ್ದಾರೆ.

    ನಡೆದಿದ್ದೇನು?
    ಶಿವಣ್ಣ ಎಂಬವರು ಪತ್ನಿಯೊಂದಿಗೆ ಜಗಳ ಮಾಡಿಕೊಂಡು ನಾಪತ್ತೆಯಾಗಿದ್ದರು. ಶಿವಣ್ಣ ಮನೆಗೆ ಬರದೇ ಇರುವುದರಿಂದ ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದರು. ಕುಟುಂಬಸ್ಥರು ಶಿವಣ್ಣನ ಮಿಸ್ಸಿಂಗ್ ಕೇಸ್ ದಾಖಲಿಸಿದ 2 ದಿನಗಳ ಬಳಿಕ ಹಾಸನದ ಹೊಸ ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಸಿಕ್ಕಿತ್ತು. ಈ ಮೃತದೇಹ ನೋಡಲು ಮೇಲ್ನೋಟಕ್ಕೆ ಶಿವಣ್ಣನ ರೀತಿ ಹೋಲುತ್ತಿತ್ತು. ಹಾಗಾಗಿ ಕುಟುಂಬಸ್ಥರು ಇದು ಶಿವಣ್ಣದೇ ಮೃತದೇಹ ಎಂದು ಭಾವಿಸಿದ್ದರು.

    ಕುಟುಂಬದ ಸದಸ್ಯರು ಶಿವಣ್ಣನ ಮೃತದೇಹ ಎಂದು ಮನೆಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದರು. ಅಲ್ಲದೆ ಶವ ಸಂಸ್ಕಾರ ಮಾಡಿ ತಿಥಿ ಕೂಡ ಮಾಡಿದ್ದರು. ಆದರೆ ತಿಥಿ ಮಾಡಿದ ಎರಡು ದಿನದ ಬಳಿಕ ಶಿವಣ್ಣ ತನ್ನ ಮನೆಗೆ ಹಿಂದಿರುಗಿದ್ದರು. ಶಿವಣ್ಣ ದಿಢೀರ್ ಎಂದು ಮನೆಯಲ್ಲಿ ಪ್ರತ್ಯಕ್ಷ ಆಗಿರುವುದು ನೋಡಿ ಜನರಲ್ಲಿ ಅಚ್ಚರಿ ಮೂಡಿತ್ತು. ಶಿವಣ್ಣ ಬದುಕಿದ್ದಾರೆ ಎಂಬ ವಿಷಯ ತಿಳಿದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

  • ದಲಿತನನ್ನು ಪ್ರೀತಿಸಿದ್ದೇ ತಪ್ಪಾಯ್ತು? ಕುಟುಂಬಸ್ಥರಿಂದ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ

    ದಲಿತನನ್ನು ಪ್ರೀತಿಸಿದ್ದೇ ತಪ್ಪಾಯ್ತು? ಕುಟುಂಬಸ್ಥರಿಂದ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ

    -ಕೈ, ಕಾಲು ಮುಗಿದ್ರೂ, ಎಳೆದಾಡಿ, ಒದ್ದು ದೊಣ್ಣೆಯಿಂದ ಹೊಡೆದ್ರು

    ಭೋಪಾಲ: ದಲಿತ ಯುವಕನನ್ನು ಪ್ರೀತಿಸಿ ಓಡಿ ಹೋಗಿದ್ದ 21 ವರ್ಷದ ಯುವತಿಯನ್ನು ಕುಟುಂಬಸ್ಥರು ದೊಣ್ಣೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡಿದಿದೆ.

    ಯುವತಿ ದಲಿತ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಕ್ಕೆ ಆಕೆಯ ಕುಟುಂಬಸ್ಥರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ದೃಶ್ಯದಲ್ಲಿ ಕಾರ್ ನಂಬರ್ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಈ ದೃಶ್ಯವನ್ನು ವಿಡಿಯೋ ಮಾಡಿದ್ದು, ಯುವತಿಯನ್ನು ಒಂದು ಬೆಟ್ಟದಲ್ಲಿ ಯುವಕರ ಗುಂಪೊಂದು ದೊಣ್ಣೆಯಿಂದ ಹೊಡೆಯುತ್ತಿದ್ದಾರೆ. ಯುವತಿಯನ್ನು ಕಾಲಿನಿಂದ ಒದೆಯುತ್ತಿರುವುದು, ಎಳೆದಾಡುತ್ತಿರುವುದು ಕಂಡು ಬಂದಿದೆ. ಯುವತಿಯು ನಿಲ್ಲಿಸುವಂತೆ ಕೇಳಿಕೊಂಡರು ಬಿಡದ ಯುವಕರು ಅವಳನ್ನು ಕಾಲಿನಿಂದ ಒದ್ದಿದ್ದಾರೆ.

    ಈ ಘಟನೆ ಜೂನ್ 25 ರಂದು ನಡೆದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂರು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿರುವ ಯುವಕರು ಯುವತಿಯ ಸಹೋದರರು ಮತ್ತು ನೆರೆಹೊರೆಯವರು ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ಕಾಣಿಸುವ ವಾಹನದ ಸಂಖ್ಯೆಯ ಆಧಾರದ ಮೇಲೆ ಯುವಕರನ್ನು ಪತ್ತೆ ಹಚ್ಚಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಯುವತಿಯು ದಲಿತ ಯುವಕನ ಜೊತೆ ಓಡಿಹೋಗಿದ್ದಳು. ಆಗ ಮನೆಯವರು ದೂರು ನೀಡಿದ ನಂತರ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ಕರೆದುಕೊಂಡು ಬಂದಿದ್ದಾರೆ. ನಂತರ ಯುವತಿಯನ್ನು ಮನೆಗೆ ಕರೆದುಕೊಂಡ ಹೋದ ಕುಟುಂಬದವರು ಯುವತಿಯನ್ನು ತಮ್ಮದೇ ಕುಟುಂಬದ ಭಿಲಾಲ ಬುಡಕಟ್ಟಿನ ಯುವಕನನ್ನು ಮದುವೆಯಾಗಲು ಹೇಳಿದ್ದಾರೆ. ಇದಕ್ಕೆ ಒಪ್ಪದ ಯುವತಿಯ ಮೇಲೆ ಈ ರೀತಿಯ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

    ಘಟನೆ ಸಂಬಂಧ ಪ್ರಮುಖ ಆರೋಪಿಗಳ ವಿರುದ್ಧ ಹಲವು ಪ್ರಕರಣ ದಾಖಲಿಸಿರುವ ಪೊಲೀಸರು, ಸದ್ಯ ಯುವತಿಯ ನಾಲ್ಕು ಜನ ಸಹೋದರರು ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

  • ಚಿನ್ನ ಕದ್ದಿದ್ದಾಳೆ ಎಂದು ಬಡ ಕುಟುಂಬದ ಬಾಲಕಿಗೆ ಪೊಲೀಸರಿಂದ ವಿದ್ಯುತ್ ಶಾಕ್

    ಚಿನ್ನ ಕದ್ದಿದ್ದಾಳೆ ಎಂದು ಬಡ ಕುಟುಂಬದ ಬಾಲಕಿಗೆ ಪೊಲೀಸರಿಂದ ವಿದ್ಯುತ್ ಶಾಕ್

    – ಆರೋಪವನ್ನು ತಿರಸ್ಕರಿಸಿದ ಸಂಪ್ಯ ಪೊಲೀಸರು

    ಮಂಗಳೂರು: ಬಡ ಕುಟುಂಬವೊಂದರ ಬಾಲಕಿಯನ್ನು ಠಾಣೆಗೆ ಕರೆಯಿಸಿ ವಿದ್ಯುತ್ ಶಾಕ್ ನೀಡಿದ್ದಾರೆ ಎನ್ನುವ ಆರೋಪ ದಕ್ಷಿಣ ಕನ್ನಡದ ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸರ ಮೇಲೆ ಕೇಳಿಬಂದಿದೆ

    ಅಪ್ರಾಪ್ತ ಬಾಲಕಿಗೂ ಈ ಸಂಬಂಧ ಪೊಲೀಸರು ಹಲ್ಲೆ ನಡೆಸಿದ್ದು ಬಾಲಕಿಯನ್ನು ಇದೀಗ ಪುತ್ತೂರು ಸರಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ.

    ಏನಿದು ಪ್ರಕರಣ?
    ನನ್ನ ಮನೆಯಿಂದ ಚಿನ್ನದ ಹಾರ ಕಳವಾಗಿದ್ದು, ಬಾಲಕಿ ಈ ಚಿನ್ನವನ್ನು ಕದ್ದಿದ್ದಾಳೆ ಎಂದು ಸಂಪ್ಯ ಪೊಲೀಸ್ ಠಾಣೆಗೆ ಕೌಡಿಚ್ಚಾರ್‍ ನ ಮುಮ್ತಾಜ್ ಎಂಬವರು ದೂರು ನೀಡಿದ್ದರು.

    ದೂರಿನ ಹಿನ್ನೆಲೆಯಲ್ಲಿ ಸಂಪ್ಯ ಪೊಲೀಸರು ಬಾಲಕಿ ಹಾಗೂ ಆಕೆಯ ಪೋಷಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಪೋಷಕರಿಗೆ ಸೇರಿದಂತೆ ಅಪ್ರಾಪ್ತ ಬಾಲಕಿ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನಾನು ಚಿನ್ನ ಕದ್ದಿರುವುದನ್ನು ಒಪ್ಪಿಕೊಳ್ಳುವಂತೆ ಪೊಲೀಸರು ಒತ್ತಡ ಹೇರಿದ್ದು, ಲಾಠಿಯಿಂದ ಹಲ್ಲೆ ನಡೆಸಿದ್ದಾರಲ್ಲದೆ ವಿದ್ಯುತ್ ಶಾಕ್ ಕೂಡಾ ನೀಡಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

    ಬಾಲಕಿ ಮುಮ್ತಾಜ್ ಮನೆಗೆ ಶುಕ್ರವಾರದಂದು ಹೋಗಿದ್ದು, ಆ ಬಳಿಕ ಚಿನ್ನ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಸಂಪ್ಯ ಪೋಲೀಸರು ಈ ರೀತಿಯ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಗೋಲಿ ಆಡುತ್ತಿದ್ದ ಬಾಲಕನಿಗೆ ಬೈದು ಹೆಣವಾದ ಯುವಕ

    ಗೋಲಿ ಆಡುತ್ತಿದ್ದ ಬಾಲಕನಿಗೆ ಬೈದು ಹೆಣವಾದ ಯುವಕ

    ಬಾಗಲಕೋಟೆ: ಸ್ನೇಹಿತರೊಟ್ಟಿಗೆ ಮನೆ ಮುಂದೆ ಗೋಲಿ ಆಡುತ್ತಿದ್ದ ಬಾಲಕನಿಗೆ ಯುವಕನೋರ್ವ ಬೈದಿದ್ದಕ್ಕೆ ಆತನನ್ನು ಹತ್ಯೆಗೈದ ಅಮಾನವೀಯ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಹೀರೇನಸಬಿ ಗ್ರಾಮದಲ್ಲಿ ನಡೆದಿದೆ.

    ಕೊಲೆಗೀಡಾದ ಯುವಕನನ್ನು ಹೀರೇನಸಬಿ ಗ್ರಾಮದ ನಿವಾಸಿ ರೆಹಮಾನ್ ಸಾಬ್ ಜಗಾಪುರ(25) ಎಂದು ಗುರುತಿಸಲಾಗಿದೆ. ಹೀರೇನಸಬಿ ಗ್ರಾಮದ ನಿವಾಸಿಗಳಾದ ಹನುಮಂತ ವಡ್ಡರ್, ಮಂಜುನಾಥ ವಡ್ಡರ್, ರೇಣವ್ವ ವಡ್ಡರ್, ಶಂಕ್ರವ್ವ ವಡ್ಡರ್ ಯುವಕನನ್ನು ಕೊಲೆ ಮಾಡಿದ್ದಾರೆ. ಪ್ರತಿ ದಿನ ರೆಹಮಾನ್ ಕುಡಿದು ಬಂದು ಗೋಲಿ ಆಡುವ ಮಕ್ಕಳಿಗೆ ಬಾಯಿಗೆ ಬಂದಹಾಗೆ ಬೈದು ಆಟವಾಡಲು ತೊಂದರೆ ಕೊಡುತ್ತಿದ್ದ. ಇದನ್ನು ಕಂಡ ಮಕ್ಕಳ ಮನೆಯವರು ಕುಡಿದವನ ಜೊತೆ ಜಗಳ ಬೇಡವೆಂದು ಸುಮ್ಮನಿದ್ದರು.

    ಮಂಗಳವಾರ ರಾತ್ರಿ ರೆಹಮಾನ್ ಮಕ್ಕಳು ಗೋಲಿ ಆಡುತ್ತಿದ್ದಾಗ ಕುಡಿದು ಬಂದು ಅವರಿಗೆ ಬೈದು ಗಲಾಟೆ ಮಾಡಿದಾಗ ಬಾಲಕನೊಬ್ಬನ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೆಹಮಾನ್ ಹಾಗೂ ಬಾಲಕನ ಕುಟುಂಬಸ್ಥರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದ್ದು, ಅವರ ನಡುವೆ ಹೊಡೆದಾಟ ನಡೆದಿದೆ. ಈ ಸಂದರ್ಭದಲ್ಲಿ ತೀವ್ರ ಗಾಯಗೊಂಡ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಸದ್ಯ ಘಟನಾ ಸ್ಥಳಕ್ಕೆ ಡಿಎಸ್‍ಪಿ ಗಿರಿಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾದಾಮಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.