Tag: family

  • ಟಿಪ್ಪರ್‌ಗೆ ಕಾರು ಡಿಕ್ಕಿ- ಒಂದೇ ಕುಟುಂಬದ ನಾಲ್ವರ ದುರ್ಮರಣ

    ಟಿಪ್ಪರ್‌ಗೆ ಕಾರು ಡಿಕ್ಕಿ- ಒಂದೇ ಕುಟುಂಬದ ನಾಲ್ವರ ದುರ್ಮರಣ

    ಬೆಂಗಳೂರು: ಕಾರು ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಮತ್ತು ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.

    ಸರ್ಜಾಪುರ ರಸ್ತೆಯ ಕಾನ್ಪಿಡೆಂಟ್ ಅಪಾಟ್‌ರ್ಮೆಂಟ್‌ ಬಳಿ ಅಪಘತ ನಡೆದಿದೆ. ಅಂಜನಿ ಯಾದವ್(31), ನೇಹಾಯಾದವ್(28), ದ್ರುವ(2), ಶುಭ್ರ ಸಂತೋಷ್(29) ಮೃತ ದುರ್ದೈವಿಗಳು. ಸಂತೋಷ್(29), ಮಗಳು ಸಾನ್ವಿ(2) ಗಂಭೀರ ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಜನಿ ಯಾದವ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಅವರೇ ಕಾರನ್ನು ಚಲಾಯಿಸುತ್ತಿದ್ದರು ಎನ್ನಲಾಗಿದೆ. ತಡರಾತ್ರಿ ಸ್ನೇಹಿತರೊಂದಿಗೆ ಊಟ ಮುಗಿಸಿ ಮನೆಗೆ ಬರುತ್ತಿದ್ದಾಗ ಎದುರುಗಡೆ ಬರುತ್ತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

    ಕಾರಿನ ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • 2ನೇ ಮದ್ವೆಗೆ ಒಪ್ಪದ ಕುಟುಂಬಸ್ಥರು- ಆತ್ಮಹತ್ಯೆ ಮಾಡಿಕೊಂಡ 75ರ ವೃದ್ಧ

    2ನೇ ಮದ್ವೆಗೆ ಒಪ್ಪದ ಕುಟುಂಬಸ್ಥರು- ಆತ್ಮಹತ್ಯೆ ಮಾಡಿಕೊಂಡ 75ರ ವೃದ್ಧ

    ಲಕ್ನೋ: 75 ವರ್ಷದ ವೃದ್ಧರೊಬ್ಬರು ಎರಡನೇ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಆ ಮದುವೆಗೆ ಅವರ ಕುಟುಂಬಸ್ಥರು ನಿರಾಕರಿಸಿದ್ದಕ್ಕೆ ಮನನೊಂದು ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ವೃದ್ಧ ಅರ್ಷದ್(75) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅರ್ಷದ್ ಅವರ ಪತ್ನಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅರ್ಷದ್ ಅವರಿಗೆ ಒಟ್ಟು 8 ಮಂದಿ ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿ ಮಕ್ಕಳಿವೆ. ಆದರೆ ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿನಲ್ಲಿ ಅರ್ಷದ್‍ರಿಗೆ ಎರಡನೇ ಮದುವೆಯಾಗುವ ಆಸೆ ಬಂದಿತ್ತು. ಈ ವಯಸ್ಸಿನಲ್ಲಿ ಮದುವೆ ಏಕೆ ಎಂದು ಕುಟುಂಬಸ್ಥರು ಪ್ರಶ್ನೆ ಮಾಡಿ, ಮದುವೆಗೆ ವಿರೋಧಿಸಿದ್ದರು.

    ಜೊತೆಗೆ ನಿಧಾನವಾಗಿ ತಂದೆಗೆ ಮಕ್ಕಳು ತಿಳಿ ಹೇಳುವ ಪ್ರಯತ್ನವೂ ಮಾಡಿದ್ದರು. ಆದರೆ ಗುರುವಾರ ಈ ಗಲಾಟೆ ಜೋರಾಗಿ ತಂದೆ ಮಕ್ಕಳ ನಡುವೆ ಜಗಳ ಕೂಡ ನಡೆದಿತ್ತು. ಇದರಿಂದ ಕೋಪಗೊಂಡು ವೃದ್ಧ ಅಂದು ರಾತ್ರಿಯೇ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ದಾರೆ.

    ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಈಗಾಗಲೇ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಬೀತಾಗಿದೆ.

  • ಜೀವನದಲ್ಲಿ ಸೋತಿದ್ದೇನೆ- ಅಪ್ಪ, ಅಮ್ಮ, ಮಗ, ಪತ್ನಿಗೆ ಶೂಟ್ ಮಾಡಿ ತಾನೂ ಆತ್ಮಹತ್ಯೆ ಮಾಡ್ಕೊಂಡ

    ಜೀವನದಲ್ಲಿ ಸೋತಿದ್ದೇನೆ- ಅಪ್ಪ, ಅಮ್ಮ, ಮಗ, ಪತ್ನಿಗೆ ಶೂಟ್ ಮಾಡಿ ತಾನೂ ಆತ್ಮಹತ್ಯೆ ಮಾಡ್ಕೊಂಡ

    ಚಾಮರಾಜನಗರ: ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಮೃತರಾದವರನ್ನು ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾಗಿರುವ ಓಂ ಪ್ರಕಾಶ್, ಪತ್ನಿ ನಿಖಿತ, ಮಗ ಆರ್ಯ ಕೃಷ್ಣ, ತಾಯಿ ಹೇಮಲತ, ತಂದೆ ನಾಗರಾಜು ಭಟ್ಟಚಾರ್ಯ ಎಂದು ಗುರುತಿಸಲಾಗಿದೆ. ಸದ್ಯ ಈಗ ಹಣಕಾಸಿನ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

    ಈ ಐವರೂ ಪ್ರೊ. ಮಹೇಶ್ ಚಂದ್ರಗುರು ಅವರಿಗೆ ಸೇರಿದ್ದ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹೇಶ್ ಚಂದ್ರ ಗುರು ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಓಂ ಪ್ರಕಾಶ್ ಹಾಗೂ ಅವರ ಕುಟುಂಬಸ್ಥರು ಮೂರು ದಿನಗಳ ಹಿಂದೆ ಗುಂಡ್ಲುಪೇಟೆಗೆ ಆಗಮಿಸಿ, ಎಲಚೆಟ್ಟಿ ಗ್ರಾಮದ ಸ್ನೇಹಿತನ ಫಾರ್ಮ್ ಹೌಸ್‍ನಲ್ಲಿ ಉಳಿದುಕೊಂಡಿದ್ದರು. ಬಳಿಕ ಗುರುವಾರ ರಾತ್ರಿ ಗುಂಡ್ಲುಪೇಟೆ ನಂದಿ ಲಾಡ್ಜ್‍ನಲ್ಲಿ ರೂಂ ಬುಕ್ ಮಾಡಿದ್ದರು. ಓಂ ಪ್ರಕಾಶ್ ಜೊತೆಯಲ್ಲಿ ಬಂದಿದ್ದ ಚೇತನ್, ಸುರೇಶ್ ಎಂಬವರನ್ನು ವಾಪಸ್ ಮೈಸೂರಿಗೆ ಕಳುಹಿಸಿದ್ದರು.

    ಬಳಿಕ ಓಂ ಪ್ರಕಾಶ್ ಮಧ್ಯರಾತ್ರಿ ಸ್ನೇಹಿತರಿಗೆ ಕರೆ ಮಾಡಿ, ನಾನು ಜೀವನದಲ್ಲಿ ಸೋತಿದ್ದೇನೆ. ನಾನು ಯಾರನ್ನು ನಂಬಿದ್ದೇನೋ ಅವರೇ ನನಗೆ ಕೈ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಗುಂಡ್ಲುಪೇಟೆ ಬಳಿ ಕಾರು ನಿಲ್ಲಿಸಿದ್ದೇವೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ.

    ಮೈಸೂರಿನಲ್ಲಿ ಓಂ ಪ್ರಕಾಶ್ ಡಾಟಾ ಬೇಸ್ ಕಂಪನಿ ಹಾಗೂ ಅನಿಮೇಷನ್ ಕಂಪನಿ ನಡೆಸುತ್ತಿದ್ದರು. ಡಾಟಾ ಬೇಸ್ ಕಂಪನಿಯಿಂದ ಓಂ ಪ್ರಕಾಶ್ ಅವರಿಗೆ ಕೋಟ್ಯಂತರ ರೂ. ಲಾಸ್ ಆಗಿತ್ತು. ಬಳಿಕ ಅವರು ಅನಿಮೇಷನ್ ಕಂಪನಿ ನಡೆಸುತ್ತಿದ್ದರು. ಮೂಲತಃ ತುಮಕೂರಿನವರಾಗಿರುವ ಓಂ ಪ್ರಕಾಶ್ ಅವರು ಮೈಸೂರಿನ ದಟ್ಟಗಳ್ಳಿ ಬಡಾವಣೆಯ ಜೋಡಿಬೇವಿನ ಮರದ ಬಳಿ ಇರುವ ಮನೆಯಲ್ಲಿ ವಾಸಿಸುತ್ತಿದ್ದರು.

    ಸಾಮೂಹಿಕ ಆತ್ಮಹತ್ಯೆ ವಿಷಯ ತಿಳಿದು ಸ್ಥಳಕ್ಕೆ ಚಾಮರಾಜನಗರ ಎಸ್‍ಪಿ ಆನಂದ್ ಕುಮಾರ್ ಭೇಟಿ ನೀಡಿದ್ದಾರೆ. ಅಲ್ಲದೆ ವಿಧಿ ವಿಜ್ಞಾನ ತಜ್ಞರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವಿಷಯ ತಿಳಿಯುತ್ತದಂತೆ ಓಂ ಪ್ರಕಾಶ್ ಸಹೋದರಿ ಸೇರಿದಂತೆ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ

    ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ

    ಚಾಮರಾಜನಗರ: ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

    ಇಬ್ಬರು ಮಹಿಳೆಯರು, ಒಬ್ಬ ಬಾಲಕ, ಇಬ್ಬರು ಪುರುಷರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ರಾತ್ರಿ ಈ ಕುಟುಂಬ ಮೈಸೂರಿನಿಂದ ಬಂದಿದ್ದರು. ಮೈಸೂರಿನಿಂದ ಬಂದು ಗುಂಡ್ಲುಪೇಟೆ ನಂದಿ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು.

    ಓಂ ಪ್ರಕಾಶ್ ಹೆಸರಿನಲ್ಲಿ ರೂಂ ಬುಕ್ ಮಾಡಲಾಗಿತ್ತು. ಇಂದು ಬೆಳಗ್ಗಿನ ಜಾವ ಪಟ್ಟಣದ ಹೊರವಲಯಕ್ಕೆ ಬಂದು ಕುಟುಂಬದ ಐವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐವರು ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ತಿಳಿದು ಬಂದಿಲ್ಲ.

    ಸದ್ಯ ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂತ್ಯಕ್ರಿಯೆಗೆ ಪ್ರವಾಹ ಪರಿಹಾರ ಕೊಡಿ- ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

    ಅಂತ್ಯಕ್ರಿಯೆಗೆ ಪ್ರವಾಹ ಪರಿಹಾರ ಕೊಡಿ- ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

    ಗದಗ: ಮಲಪ್ರಭಾ ಪ್ರವಾಹಕ್ಕೆ ಸಿಲುಕಿ ಅನಾರೋಗ್ಯಕ್ಕಿಡಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರ ಗ್ರಾಮದಲ್ಲಿ ನಡೆದಿದೆ.

    66 ವರ್ಷದ ಹನುಮಂತಪ್ಪ ಚಲವಾದಿ ಮೃತಪಟ್ಟಿದ್ದಾರೆ. ಮಲಪ್ರಭಾ, ಬೆಣ್ಣೆಹಳ್ಳ ಪ್ರವಾಹದ ವೇಳೆ ಮನೆಯಲ್ಲಿ ಸಿಲುಕಿಕೊಂಡಿದ್ದರು, ನಂತರ ಸಂಬಂಧಿಕರು ಹಾಗೂ ಸ್ಥಳೀಯರು ಹನುಮಂತಪ್ಪ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.

    ಪ್ರವಾಹದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ಯಾರೆ ಅಂತಿಲ್ಲ ಎಂಬುದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ರೋಸಿಹೋದ ಕುಟುಂಬದವರು ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಅಂತ್ಯಕ್ರಿಯೇಗಾದರು ಪ್ರವಾಹ ಪರಿಹಾರ ನೀಡಬೇಕು ಎಂಬುದು ಮೃತನ ಕುಟುಂಬದವರ ಆಗ್ರಹಿಸಿದ್ದಾರೆ.

  • ನಿಮ್ಮೊಂದಿಗೆ ನಾವಿದ್ದೇವೆ- ಸಾವನ್ನಪ್ಪಿದ್ದ ಪೊಲೀಸ್ ಕುಟುಂಬಕ್ಕೆ ಧೈರ್ಯ ತುಂಬಿದ ರವಿಚನ್ನಣ್ಣನವರ್

    ನಿಮ್ಮೊಂದಿಗೆ ನಾವಿದ್ದೇವೆ- ಸಾವನ್ನಪ್ಪಿದ್ದ ಪೊಲೀಸ್ ಕುಟುಂಬಕ್ಕೆ ಧೈರ್ಯ ತುಂಬಿದ ರವಿಚನ್ನಣ್ಣನವರ್

    ಬೆಂಗಳೂರು: ಎಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅಕಾಲಿಕ ಮರಣ ಹೊಂದಿದ್ದು, ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ ಡಿ ಚನ್ನಣ್ಣನವರ್ ಹಾಗೂ ಸಿಬ್ಬಂದಿ ವರ್ಗದವರು ಶ್ರದ್ಧಾಂಜಲಿ ಸಲ್ಲಿಸಿದರು.

    ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ಠಾಣೆಯಲ್ಲಿ ಎಎಸ್‍ಐ ಆಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಅವರು ಇನ್ನೂ ಎರಡು ವರ್ಷ ವೃತ್ತಿ ಜೀವನ ಬಾಕಿ ಇರುವಾಗಲೇ ಸಾವನ್ನಪ್ಪಿದ್ದಾರೆ. ಸಹಜ ಕಾಯಿಲೆಗೆ ತುತ್ತಾಗಿ ಅಶೋಕ್ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

    ಇವರ ಸಾವಿನಿಂದ ಕುಟುಂಬ ವರ್ಗ ಹಾಗು ಪೊಲೀಸ್ ಸಿಬ್ಬಂದಿ ಸಂತಾಪ ಸೂಚಿಸಿದ್ದು, ಬೆಂಗಳೂರು ಗ್ರಾಮಾಂತರ ನೂತನ ಎಸ್.ಪಿ ರವಿ ಡಿ ಚನ್ನಣ್ಣನವರ್, ಅಶೋಕ್ ಅವರ ಅಂತಿಮ ದರ್ಶನ ಪಡೆದುಕೊಂಡರು. ಈ ವೇಳೆ ಮಾತನಾಡಿದ ಅವರು, ಅಶೋಕ್ ಅವರು ನಮ್ಮ ಜಿಲ್ಲೆಯಲ್ಲಿ 34 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ಅವರು ಇಂದು ಅಕಾಲಿಕ ಮರಣವೊಂದಿದ್ದಾರೆ, ಇಲಾಖೆಯೂ ಒಬ್ಬ ಒಳ್ಳೆಯ ಅಧಿಕಾರಿಯನ್ನು ಕಳೆದಿಕೊಂಡಿದೆ. ಅವರ ಕುಟುಂಬದೊಂದಿಗೆ ಸದಾ ನಾವು ಜೊತೆಗಿರುತ್ತೇವೆಂದು ತಿಳಿಸಿದರು.

  • ಪ್ರವಾಹದಲ್ಲಿ ಸಿಲುಕಿದ್ದ ಯೋಧನ ಕುಟುಂಬ ರಕ್ಷಣೆ

    ಪ್ರವಾಹದಲ್ಲಿ ಸಿಲುಕಿದ್ದ ಯೋಧನ ಕುಟುಂಬ ರಕ್ಷಣೆ

    ಗದಗ: ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಯೋಧನ ಕುಟುಂಬವನ್ನು ರಕ್ಷಣೆ ಮಾಡಲಾಗಿದೆ.

    ಯೋಧ ಈರಪ್ಪ ಹಡಪದ ಅವರು ಜಮ್ಮು- ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಪತಿ ಈರಪ್ಪ ಅವರು ಕಳೆದ 20 ದಿನಗಳಿಂದ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಕಾರಣದಿಂದಾಗಿ ನಾವು ಜಲಪ್ರಳಯಕ್ಕೆ ತುತ್ತಾಗಿರುವ ವಿಚಾರ ಅವರಿಗೆ ಗೊತ್ತಿಲ್ಲ ಎಂದು ಪತ್ನಿ ಜಯಲಕ್ಷ್ಮಿ ತಿಳಿಸಿದ್ದಾರೆ.

    ಯೋಧ ಈರಪ್ಪ ಅವರ ಪತ್ನಿ ಜಯಲಕ್ಷ್ಮಿ ಅವರು ತಮ್ಮ ಬಾಣಂತಿ ಮಗಳು, ಇಬ್ಬರು ಗಂಡು ಮಕ್ಕಳ ಜೊತೆ ಪ್ರವಾಹಕ್ಕೆ ಸಿಲುಕಿ ಪರದಾಡುತ್ತಿದ್ದಾರೆ. ಸದ್ಯ ಈಗ ಈರಪ್ಪ ಅವರ ಕುಟುಂಬಸ್ಥರು ಆಸರೆ ಯೋಜನೆ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

    ಈ ನಡುವೆ ಮನೆ ಖಾಲಿ ಮಾಡುವಂತೆ ಯೋಧನ ಕುಟುಂಬಕ್ಕೆ ಮೂಲ ಮನೆ ಮಾಲೀಕರು ಕಿರಿಕಿರಿ ಮಾಡುತ್ತಿದ್ದಾರೆ. ಇದರಿಂದಾಗಿ ಯೋಧನ ಕುಟುಂಬ ಕಂಗಾಲಾಗಿದೆ. ದೇಶ ಕಾಯುವವರ ಕುಟುಂಬಕ್ಕೆ ಕೇಳೋರೋ ದಿಕ್ಕಿಲ್ಲ ಎಂದು ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • ಮಹಾ ಮಳೆಗೆ ಕೊಡಗಿನಲ್ಲಿ ಭೂಕುಸಿತ – ಒಂದೇ ಕುಟುಂಬದ 5 ಮಂದಿ ಸಾವು

    ಮಹಾ ಮಳೆಗೆ ಕೊಡಗಿನಲ್ಲಿ ಭೂಕುಸಿತ – ಒಂದೇ ಕುಟುಂಬದ 5 ಮಂದಿ ಸಾವು

    ಮಡಿಕೇರಿ: ಮಹಾಮಳೆಯ ಅಬ್ಬರಕ್ಕೆ ಭಾಗಮಂಡಲದ ಸಮೀಪ ಇರುವ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ್ದಾರೆ.

    ಮಡಿಕೇರಿ ತಾಲೂಕಿನ ಕೋರಂಗಾಲ ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿತದ ಪರಿಣಾಮ ಸಂಪೂರ್ಣ ನೆಲಸಮ ಆಗಿದೆ. ಈ ಪರಿಣಾಮ ಮನೆಯಲ್ಲಿ ಇದ್ದ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಈ ಕೋರಂಗಾಲ ಗ್ರಾಮ ಭಾಗಮಂಡಲದ ತ್ರಿವೇಣಿ ಸಂಗಮ ನಂತರ ಇದ್ದು ಈ ಪ್ರದೇಶ ಸಂಪೂರ್ಣ ಜಲಾವೃತವಾದ ಕಾರಣ ರಕ್ಷಣಾ ಕಾರ್ಯ ಮಾಡುವುದು ಕಷ್ಟವಾಗಿದೆ. ಈಗ ಸದ್ಯಕ್ಕೆ ಪೊಲೀಸರು ಈ ಸ್ಥಳ ತಲುಪಿದ್ದು, ಇಬ್ಬರ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಇನ್ನೂ ಉಳಿದ ಜನರ ಪತ್ತೆಗೆ ಕಾರ್ಯಚರಣೆ ಮುಂದುವರಿದಿದೆ.

    ವಿಚಾರ ತಿಳಿಯುತ್ತಿದಂತೆ ಕೇಂದ್ರ ಸಚಿವ ಸದಾನಂದಗೌಡ ಸರ್ಕಾರದಿಂದ ಮೃತರ ಕುಟುಂಬ ಕ್ಕೆ ಐದು ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿರುವ ಶಾಸಕ ಕೆ.ಜಿ ಬೋಪಯ್ಯ ಜಿಲ್ಲೆಯಲ್ಲಿ ಮಳೆಯಿಂದಾಗಿ ಮೊಬೈಲ್ ನೆಟ್‍ವರ್ಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಕಾರಣದಿಂದ ಅಪಾಯದಲ್ಲಿ ಸಿಲುಕಿರುವ ಜನರನ್ನು ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

  • ರಾತ್ರಿಯಿಡಿ ಟ್ರ್ಯಾಕ್ಟರ್ ಟೈರ್‌ನಲ್ಲಿ ನಿಂತು ರಕ್ಷಣೆಗಾಗಿ ಕೂಗುತ್ತಿದ್ದ ಧಾರವಾಡ ಕುಟುಂಬ

    ರಾತ್ರಿಯಿಡಿ ಟ್ರ್ಯಾಕ್ಟರ್ ಟೈರ್‌ನಲ್ಲಿ ನಿಂತು ರಕ್ಷಣೆಗಾಗಿ ಕೂಗುತ್ತಿದ್ದ ಧಾರವಾಡ ಕುಟುಂಬ

    ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿನ ತುಪ್ಪರಿ ಹಳ್ಳ ತುಂಬಿ ಬಂದಿದ್ದು, ಇದರ ಮಧ್ಯೆ ಏಳು ಜನ ಸಿಲುಕಿಕೊಂಡು ಪಾರಾಗಿ ಬಂದಿದ್ದಾರೆ.

    ಜೋರಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಸೋರುತ್ತಿದೆ ಎಂದು ಹನಮನಹಾಳ ರಸ್ತೆಯಲ್ಲಿ ಇರುವ ತಮ್ಮ ಶೆಡ್ ಗೆ ಗಿರಮಲ್ಲ ಹಳಮನಿ ಹಾಗೂ ಅವರ ಕುಟುಂಬದವರು ಹೋಗಿದ್ದರು. ಆದರೆ, ತುಪ್ಪರಿ ಹಳ್ಳ ತುಂಬಿ ಬಂದಿದ್ದರಿಂದ ಇವರ ಶೆಡ್ ನೀರಿನ ಮಧ್ಯೆ ಸಿಲುಕಿಕೊಂಡಿತು.

    ಇದರಿಂದಾಗಿ ರಾತ್ರಿಯಿಡಿ ಟ್ರ್ಯಾಕ್ಟರ್ ಟೈರ್‌ನಲ್ಲಿ ನಿಂತುಕೊಂಡು ರಕ್ಷಣೆಗಾಗಿ ಕೂಗುತ್ತಿದ್ದರು. ಇವರ ರಕ್ಷಣೆಗಾಗಿ ಎನ್‍ಡಿಆರ್‍ಎಫ್ ತಂಡ ಕೂಡ ಬರಲು ಸಜ್ಜಾಗಿತ್ತು. ಆದರೆ, ಬೆಳಗಿನ ಜಾವ ಕುಟುಂಬದ ಏಳೂ ಜನ ಒಬ್ಬೊಬ್ಬರಾಗಿ ಶೆಡ್ ನ ಹಿಂಬದಿಯಿಂದ ಹೊಲದಲ್ಲಿ ಪಾರಾಗಿ ಬಂದಿದ್ದಾರೆ. ಇವರಿಗೆ ಗ್ರಾಮಸ್ಥರು ಕೂಡ ಸಹಾಯ ಮಾಡಿದರು.

    ಧಾರವಾಡದಲ್ಲಿ ಸುರಿಯುತ್ತಿರುವ ಜೋರು ಮಳೆಗೆ ಹಾರೊಬೆಳವಡಿ ಬಳಿ ಸೇತುವೆ ಕಡಿತಗೊಂಡಿದೆ. ಮಳೆಯ ರಭಸಕ್ಕೆ ಸೇತುವೆ ಎರಡು ಕಡೆ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ ಗೋಕಾಕ್ ಹಾಗೂ ಸವದತ್ತಿ ಕಡೆ ಹೋಗುವ ವಾಹನಗಳನ್ನು ಬಂದ್ ಮಾಡಲಾಗಿದೆ. ನೀರಿನ ರಭಸಕ್ಕೆ ಹಾರೋಬೆಳವಡಿ ಗ್ರಾಮ ಜಲಾವೃತಗೊಂಡಿದೆ.

    ಜಿಲ್ಲೆಯ ಅಳ್ನಾವರ ತಾಲೂಕಿನ 700 ಎಕರೆ ವಿಸ್ತೀರ್ಣದ ಹುಲಿಕೆರೆಯ ಕೆಳಭಾಗದ ಮಣ್ಣು ಕುಸಿದಿದೆ. ಮಣ್ಣು ಮಿಶ್ರಿತ ಕೆಂಮಣ್ಣಿನ ಪ್ರವಾಹ ಉಂಟಾಗಿದ್ದು, ಹುಲಿಕೇರಿ, ಅಳ್ನಾವರ, ಕಡಬಗಟ್ಟಿ, ಲಿಂಗನಮಟ್ಟ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.

  • ಹೆಚ್‍ಡಿಕೆ ರಾಜಕೀಯ ನಿವೃತ್ತಿಯ ಮಾತು

    ಹೆಚ್‍ಡಿಕೆ ರಾಜಕೀಯ ನಿವೃತ್ತಿಯ ಮಾತು

    ಹಾಸನ: ಮಾಜಿ ಸಿಎಂ ಹೆಚ್.ಡಿ.ಕು`ಮಾರಸ್ವಾಮಿ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.

    ಇಂದು ಕೆ.ಆರ್.ಪೇಟೆಗೆ ತೆರಳೋ ಮಾರ್ಗ ಮಧ್ಯೆ ಹಾಸನಕ್ಕೆ ಆಗಮಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವರು ಕೊಟ್ಟ ಅವಕಾಶದಿಂದ ಎರಡು ಬಾರಿ ಸಿಎಂ ಆಗಿದ್ದೇನೆ. ನಾನು ಆಕಸ್ಮಿಕವಾಗಿ ಈ ರಾಜ್ಯದ ಸಿಎಂ ಆಗಿ ಬಂದವನು. ಇವತ್ತು ಒಳ್ಳೆಯವರಿಗೆ ರಾಜಕಾರಣ ಇಲ್ಲ. ಜಾತಿ ಪ್ರಭಾವದಿಂದ ರಾಜಕೀಯ ನಡೆಯುತ್ತಿದೆ. ಅಧಿಕಾರದ ಅಪೇಕ್ಷೆಯಿಂದ ಕುತಂತ್ರದ ರಾಜಕೀಯ ನಡೆಯುತ್ತಿದೆ. ಈ ರಾಜಕೀಯ ವ್ಯವಸ್ಥೆಯಿಂದ ನಾನೇ ಹಿಂದೆ ಸರಿಯಬೇಕು ಎಂದು ಅಂದುಕೊಂಡಿದ್ದೆ. ನನಗೆ ರಾಜಕೀಯದಲ್ಲಿ ಮುಂದುವರಿಯಲೇ ಬೇಕೆಂಬ ಹುಚ್ಚಿಲ್ಲ ಎಂದು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದರು.

    ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂದು ಜನರು ನೋಡಿದ್ದು, ಅವರೇ ತೀರ್ಮಾನ ಮಾಡುತ್ತಾರೆ. ನಮ್ಮದು ಪಾಪದ ಸರ್ಕಾರ ಇತ್ತು ಈಗ ಪವಿತ್ರದ ಸರ್ಕಾರ ನಡೆಸುತ್ತಿದ್ದಾರೆ. ನಡೆಸಲಿ ಕಾದು ನೋಡೋಣ, ಯಾರು ಯಾರನ್ನು ಪವಿತ್ರ ಮಾಡುತ್ತಾರೆ. ನಾನು ಮಾತನಾಡೋಕೆ ಏನಿದೆ, ಏನೂ ಮಾತನಾಡಲ್ಲ ಎನ್ನುತ್ತಲೇ ಕುಮಾರಸ್ವಾಮಿ ಅವರು ಸರ್ಕಾರವನ್ನು ಕುಟುಕಿದರು.