Tag: family

  • ಮೈಸೂರಿನಲ್ಲಿ ಬೀದಿಗೆ ಬಿತ್ತು ಟಾಯ್ಲೆಟ್‍ನಲ್ಲಿ ವಾಸಿಸ್ತಿದ್ದ ಕುಟುಂಬ

    ಮೈಸೂರಿನಲ್ಲಿ ಬೀದಿಗೆ ಬಿತ್ತು ಟಾಯ್ಲೆಟ್‍ನಲ್ಲಿ ವಾಸಿಸ್ತಿದ್ದ ಕುಟುಂಬ

    ಮೈಸೂರು: ಅದು ಬಡ ಕುಟುಂಬ, ಬದುಕಿನ ಬಂಡಿ ಸಾಗಿಸಲು ಮನೆಮಂದಿ ಎಲ್ಲರೂ ದುಡಿಯಲೇಬೇಕು. ಆದರೆ ವಾಸಿಸೋಕೆ ಒಂದು ಸೂರಿಲ್ಲ. ಇದ್ದ ಒಂದು ಗುಡಿಸಲನ್ನು ಅಧಿಕಾರಿಗಳು ಖಾಲಿ ಮಾಡಿಸಿದ್ದಾರೆ. ಇದೀಗ ಈ ಕುಟುಂಬ ಸಾರ್ವಜನಿಕ ಶೌಚಾಲಯದಲ್ಲಿ ವಾಸಿಸುತ್ತಿದೆ.

    ಹೌದು. ಮೈಸೂರಿನ ರಾಜೇಂದ್ರ ನಗರದ ಕೃಷ್ಣಮ್ಮ ಎಂಬವರ ಕುಟುಂಬ ಕಳೆದ ಏಳು ವರ್ಷಗಳ ಹಿಂದೆ ಗುಡಿಸಲಲ್ಲಿ ವಾಸ ಮಾಡುತ್ತಿತ್ತು. ಗುಡಿಸಲು ಮುಕ್ತ ನಗರ ಮಾಡೋಕೆ ಮನೆ ಖಾಲಿ ಮಾಡಿಸಿ ಬೇರೆ ನಿವೇಶನ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದರಂತೆ. 7 ವರ್ಷಗಳಿಂದ ಇರಲು ಮನೆ ಇಲ್ಲದೇ ಸಾರ್ವಜನಿಕ ಶೌಚಾಲಯದಲ್ಲೇ ವಾಸ ಮಾಡುತ್ತಿದ್ದರು. ಈಗ ಅದನ್ನೂ ಕೂಡ ಖಾಲಿ ಮಾಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಕೃಷ್ಣಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಮತ್ತೊಂದು ಶೌಚಾಲಯದಲ್ಲಿ 13 ಮಂದಿ ವಾಸ ಮಾಡುತ್ತಿದ್ದಾರೆ. ಎಲ್ಲರೂ ರೋಡ್ ಟಾರ್ ಕೆಲಸ, ಮನೆ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಒಂದೂವರೆ ತಿಂಗಳ ಮಗುವಿನಿಂದ ವೃದ್ಧರವರೆಗೂ ಇದ್ದಾರೆ. ಅಷ್ಟೆ ಅಲ್ಲದೇ ಸುತ್ತಮುತ್ತಲ ಪ್ರದೇಶ ಕೊಳಚೆ ಪ್ರದೇಶವಾಗಿದ್ದು, ಶೌಚಾಲಯಕ್ಕೆ ಕಿಟಕಿ ಬಾಗಿಲುಗಳಿಲ್ಲ. ಗಬ್ಬು ವಾಸನೆಯಿಂದ ಸೊಳ್ಳೆ, ತಿಗಣೆ, ಕ್ರಿಮಿ ಕೀಟಗಳ ಕಾಟಗಳಿಂದ ನೊಂದಿದ್ದಾರೆ. ಜೊತೆಗೆ ಮೂಲಭೂತ ಸೌಲಭ್ಯ ಇಲ್ಲದೇ ಪರದಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಸಬಾನಾ ಹೇಳಿದ್ದಾರೆ.

    ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿ ಅನ್ನೋ ಬಿರುದು ಮೈಸೂರಿಗಿದೆ ಆದರೆ ಇಲ್ಲಿನ ಕೆಲ ಬಡಾವಣೆಗಳ ನಿವಾಸಿಗಗಳ ಸ್ಥಿತಿ ನೋಡಿದರೆ ಅಯ್ಯೋ ಅನ್ನಿಸುತ್ತದೆ. ಎಸಿ ರೂಮಲ್ಲಿ ಕಾಲಕಳೆಯೋ ಅಧಿಕಾರಿಗಳು ಇತ್ತ ನೋಡಿದ್ರೆ ಸ್ವಚ್ಛನಗರಿಯ ದರ್ಶನವಾಗುತ್ತದೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಇವರಿಗೆಲ್ಲಾ ಒಂದು ಸೂರು ಕಲ್ಪಿಸಲಿ ಅಂತ ಕುಟುಂಬ ಒತ್ತಾಯಿಸಿದೆ.

  • 18 ವರ್ಷವಷ್ಟೇ ಈ ಕುಟುಂಬಸ್ಥರ ಕಣ್ಣಿನ ದೃಷ್ಟಿ ಆಯುಷ್ಯ

    18 ವರ್ಷವಷ್ಟೇ ಈ ಕುಟುಂಬಸ್ಥರ ಕಣ್ಣಿನ ದೃಷ್ಟಿ ಆಯುಷ್ಯ

    – ಕತ್ತಲೆಮನೆಯಲ್ಲಿರುವ ಕುಟುಂಬಕ್ಕೆ ಬೇಕಿದೆ ಬೆಳಕಿನಾಸರೆ

    ರಾಯಚೂರು: ಈ ಕುಟುಂಬಕ್ಕೆ ಅದ್ಯಾವ ಶಾಪ ತಟ್ಟಿದೆಯೋ ಗೊತ್ತಿಲ್ಲ. ಮನೆಯಲ್ಲಿನ ಪ್ರತಿಯೊಬ್ಬರಿಗೂ ಒಂದೊಂದು ಹಂತದಲ್ಲಿ ದೃಷ್ಟಿ ಸಂಪೂರ್ಣವಾಗಿ ಮಾಯವಾಗುತ್ತದೆ. ರಾಯಚೂರಿನ ಸಿಂಧನೂರು ತಾಲೂಕಿನ ಹೆಡಗಿನಾಳದ ಸುರೇಶ್ ಹಾಗೂ ಬಸ್ಸಮ್ಮ ದಂಪತಿಯ ಕುಟುಂಬಕ್ಕೆ ದೃಷ್ಟಿದೋಷ ಕಾಡುತ್ತಿದೆ. ಕಷ್ಟಗಳೆಲ್ಲಾ ಹುಡುಕಿಕೊಂಡು ಬಂದು ಇವರ ಮನೆಯಲ್ಲೇ ಠಿಕಾಣಿ ಹೂಡಿದ ಹಾಗಿದೆ ಇವರ ಪರಿಸ್ಥಿತಿ.

    ಕೂಲಿ ಕೆಲಸ ಮಾಡುತ್ತಿದ್ದ ಸುರೇಶ್ ಪಾಶ್ರ್ವವಾಯುನಿಂದ ಕೈ ಸ್ವಾಧೀನ ಕಳೆದುಕೊಂಡು ಸುಮಾರು ವರ್ಷಗಳಾಗಿವೆ. ಮೂರನೇ ಮಗುವಿಗೆ ಜನ್ಮ ನೀಡಿದ ಬಳಿಕ ಬಸ್ಸಮ್ಮ ತನ್ನ ದೃಷ್ಟಿಯನ್ನ ಕಳೆದುಕೊಂಡಿದ್ದಾಳೆ. 6ನೇ ತರಗತಿವರೆಗೆ ಶಾಲೆಗೆ ಹೋಗುತ್ತಾ ಕೂಲಿ ಕೆಲಸವನ್ನೂ ಮಾಡುತ್ತಿದ್ದ ದೊಡ್ಡ ಮಗಳು ಜ್ಯೋತಿಗೆ ನಿಧಾನವಾಗಿ ದೃಷ್ಟಿ ಹೋಗಿದೆ. ಈಗ ಇರುವ ಇಬ್ಬರು ಗಂಡು ಮಕ್ಕಳಲ್ಲಿ ದೊಡ್ಡ ಹುಡುಗ ನವೀನ್ ಕುಮಾರ್ ಗೆ ದೃಷ್ಟಿ ಮಂದವಾಗುತ್ತಿದೆ. ಕೂಡಲೇ ಚಿಕಿತ್ಸೆ ಸಿಗದಿದ್ದರೆ ನವೀನ್ ಕೂಡ ದೃಷ್ಟಿ ಕಳೆದುಕೊಳ್ಳುತ್ತಾನೆ. ಅನಕ್ಷರತೆ, ಬಡತನದಿಂದ ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಅಂತ ಸುಮ್ಮನೆ ಕುಳಿತಿದ್ದ ಕುಟುಂಬಕ್ಕೆ ನವೀನ್ ಓದುವ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಸ್ವತಃ ಕಣ್ಣಿನ ವೈದ್ಯರ ಬಳಿ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗಲೇ ಕುಟುಂಬದ ಸಮಸ್ಯೆ ಬೆಳಕಿಗೆ ಬಂದಿದೆ.

    ಈ ಕುಟುಂಬ ‘ಪಾಲಿಕೋಲಿಯಾ’ ಹೆಸರಿನ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದು, ಇದು ಕೆಲವರಿಗೆ ಅನುವಂಶಿಕವಾಗಿ ಬಂದರೆ, ಇನ್ನೂ ಕೆಲವರಿಗೆ 18 ವರ್ಷ ತುಂಬುವುದರೊಳಗೆ ದೃಷ್ಟಿ ಮಂದವಾಗುತ್ತಾ ಹೋಗುತ್ತದೆ. ಕಣ್ಣಿನ ಮೇಲೆ ಒತ್ತಡ ಹೆಚ್ಚಾಗುತ್ತಾ ದಿನದಿಂದ ದಿನಕ್ಕೆ ಕತ್ತಲು ಆವರಿಸುತ್ತದೆ. ಈ ಹಿಂದೆ ಕಣ್ಣಿನ ತಪಾಸಣೆ ಶಿಬಿರದಲ್ಲಿ ನವೀನ್ ನನ್ನ ಪರೀಕ್ಷಿಸಿದ್ದ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ವೈದ್ಯರು ಉಚಿತವಾಗಿ ಚಿಕಿತ್ಸೆ ನೀಡಲು ಮುಂದೆ ಬಂದಿದ್ದಾರೆ. ನವೀನ್ ಸಹೋದರಿ ಹಾಗೂ ತಮ್ಮನನ್ನೂ ಪರೀಕ್ಷಿಸಿ ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಕನಿಷ್ಠ ಬಸ್ ಚಾರ್ಜ್‍ಗೂ ಹಣವಿಲ್ಲದೆ ಈ ಕುಟುಂಬ ಬೆಂಗಳೂರಿಗೆ ಚಿಕಿತ್ಸೆಗಾಗಿ ಓಡಾಡಲು ಪರದಾಡುತ್ತಿದೆ. ಹೀಗಾಗಿ ಕುಟುಂಬಕ್ಕೆ ಆರ್ಥಿಕ ಸಹಾಯದ ಅಗತ್ಯವಿದೆ.

    ಸಿಂಧನೂರಿನ ನೇತ್ರತಜ್ಞ ಡಾ.ಚನ್ನನಗೌಡ ಪಾಟೀಲ್ ತಮ್ಮ ಹಂತದ ಚಿಕಿತ್ಸೆಯ ಜವಾಬ್ದಾರಿಯನ್ನ ಹೊತ್ತಿದ್ದಾರೆ. ಆದರೆ ಜೀವನಕ್ಕೆ ಮುಂದೆ ಯಾವುದೇ ಭರವಸೆಗಳಿಲ್ಲದೆ ಕೇವಲ ವಿಕಲಚೇತನರ ಮಾಸಿಕ ವೇತನದಲ್ಲಿ ಸಂಸಾರ ನಿರ್ವಹಣೆ ಮಾಡುತ್ತಿರುವ ಕುಟುಂಬಕ್ಕೆ ಆರ್ಥಿಕ ಸಬಲತೆಗಾಗಿ ಆಸರೆ ಬೇಕಿದೆ. ಮಕ್ಕಳ ದೃಷ್ಟಿ ಸಮಸ್ಯೆ ಬಗೆಹರಿದರೆ ಇವರ ಬದುಕಲ್ಲಿ ಸಣ್ಣದಾಗಿ ನೆಮ್ಮದಿಯ ಬೆಳಕು ಆರಂಭವಾಗಬಹುದು.

  • ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿ ಸಾವು – ಮಹಿಳೆಯ ಕುಟುಂಬಸ್ಥರಿಂದ ಕಿರುಕುಳದ ಆರೋಪ

    ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿ ಸಾವು – ಮಹಿಳೆಯ ಕುಟುಂಬಸ್ಥರಿಂದ ಕಿರುಕುಳದ ಆರೋಪ

    ಬೆಂಗಳೂರು: ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡಿಯಲ್ಲಿ ನಡೆದಿದೆ.

    ಶಿಲ್ಪಾ(27) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ. ಮೃತ ಶಿಲ್ಪಾ ಹೊಸಕೋಟೆಯ ಹಿಂಡಿಗನಾಳ ಗ್ರಾಮದ ರಾಮಪ್ಪ ಹಾಗು ದೇವಮ್ಮ ದಂಪತಿ ಮಗಳು. ಕಳೆದ ಒಂದು ವರ್ಷದ ಹಿಂದೆ ನಾಗೇಶ್ ಎಂಬವರ ಜೊತೆ ಶಿಲ್ಪಾಳ ವಿವಾಹವಾಗಿತ್ತು.

    ಗುರುವಾರ ಹೂಡಿಯಲ್ಲಿನ ಪತಿಯ ಮನೆಯಲ್ಲಿ ಯಾರು ಇಲ್ಲದ ವೇಳೆ ರೂಮ್‍ನಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಮಗಳ ಸಾವಿಗೆ ಪೋಷಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ಈ ಪ್ರಕರಣ ಸಂಬಂಧ ಮಹದೇವಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೆ ಈ ಬಗ್ಗೆ ದೂರನ್ನು ದಾಖಲಿಸಿಕೊಂಡಿದ್ದಾರೆ. ಮದುವೆಯಾದ ಎರಡ್ಮೂರು ಮೂರು ತಿಂಗಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಪತಿಯ ಮನೆಯವರು ನಂತರದ ದಿನಗಳಲ್ಲಿ ಪದೇ ಪದೇ ಜಗಳ ಮಾಡುತ್ತಿದ್ದರು.

    ಆಗ ಎರಡು ಕುಟುಂಬದ ಹಿರಿಯರನ್ನು ಕರೆಸಿ ಬುದ್ಧಿವಾದ ಹೇಳಿಸಿದರೂ ಸರಿ ಹೋಗದ ಪತಿ ಹಾಗೂ ಆತನ ಮನೆಯವರು ಕಿರುಕುಳ ನೀಡಿ ನೇಣು ಹಾಕಿ ಸಾಯಿಸಿದ್ದಾರೆ ಎಂದು ಶಿಲ್ಪಾಳ ಪೋಷಕರು ಆರೋಪಿಸಿದ್ದಾರೆ. ಅಲ್ಲದೆ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.

  • ಎನ್‍ಕೌಂಟರ್ ಮಾಡುವ ಮೊದಲು ನೋಡಲು ಅವಕಾಶ ನೀಡಬೇಕಿತ್ತು: ಆರೋಪಿ ತಂದೆ

    ಎನ್‍ಕೌಂಟರ್ ಮಾಡುವ ಮೊದಲು ನೋಡಲು ಅವಕಾಶ ನೀಡಬೇಕಿತ್ತು: ಆರೋಪಿ ತಂದೆ

    – ಇತರ ರೇಪ್ ಆರೋಪಿಗಳನ್ನು ಎನ್‍ಕೌಂಟರ್ ಮಾಡಿ
    – ನನ್ನ ಪತಿಯನ್ನು ಕೊಂದ ಜಾಗದಲ್ಲಿ ನನ್ನನ್ನು ಕೊಲ್ಲಿ: ಪತ್ನಿ ಕಣ್ಣೀರು

    ಹೈದರಾಬಾದ್: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ. ಎನ್‍ಕೌಂಟರ್ ವಿಷಯ ತಿಳಿದು ಭಾರತದೆಲ್ಲಡೆ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಈ ನಡುವೆ ಆರೋಪಿಗಳ ಕುಟುಂಬಸ್ಥರು ಎನ್‍ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಆರೋಪಿಗಳಾದ ಮೊಹಮ್ಮದ್ ಪಾಷಾ, ನವೀನ್, ಚೆನ್ನಕೇಶವುಲು ಹಾಗೂ ಶಿವಾ ನನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಪೊಲೀಸರ ಈ ಕಾರ್ಯಕ್ಕೆ ಇಡೀ ದೇಶ ಶ್ಲಾಘಿಸುತ್ತಿದೆ. ಅಲ್ಲದೆ ಹೈದರಾಬಾದ್ ವಿದ್ಯಾರ್ಥಿಗಳು ಪೊಲೀಸರಿಗೆ ಜೈಕಾರ ಹಾಕುತ್ತಿದ್ದಾರೆ. ಜೊತೆಗೆ ರಾಖಿ ಕಟ್ಟುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ

    ಮೊಹಮ್ಮದ್ ಪಾಷಾನ ತಾಯಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಪೊಲೀಸರು ನನ್ನ ಮಗನಿಗೆ ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನನ್ನ ಮಗ ಈಗ ಇಲ್ಲ. ಖಂಡಿತಾ ಇದು ತಪ್ಪು. ಆದರೆ ಏನೂ ಮಾಡಲಿ ನನ್ನ ಮಗ ಈಗ ಬದುಕಿಲ್ಲ. ನನಗೆ ಮಾತನಾಡಲು ಸಹ ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಆರೋಪಿ ಶಿವಾ ತಾಯಿ ಮಾತನಾಡಿ, ನನ್ನ ಮಗ ತಪ್ಪು ಮಾಡಿದ್ದಾನೆ ಎಂದರೆ ಆತನನ್ನು ಶೂಟ್ ಮಾಡಿ ಎಂದು ಕಣ್ಣೀರು ಹಾಕುತ್ತಾ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತ ಶಿವಾ ತಂದೆ, ಕೇವಲ ನಾಲ್ವರು ಆರೋಪಿಗಳಿಗೆ ಮಾತ್ರ ಏಕೆ ಈ ಶಿಕ್ಷೆ? ಬೇರೆಯವರಿಗೂ ಇದೇ ಶಿಕ್ಷೆ ನೀಡಬೇಕು. ಅವರಿಗೇಕೆ ಈ ಶಿಕ್ಷೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ- ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ ಪೊಲೀಸರು

    ನನ್ನ ಮಗ ಹಾಗೂ ಉಳಿದ ಆರೋಪಿಗಳಿಗೆ ಜೈಲಿಗೆ ಹಾಕುವ ಬದಲು ಕೊಂದು ಬಿಡಿ ಎಂದು ನಾನು ಮೊದಲೇ ಹೇಳಿದ್ದೆ. ಆದರೆ ಎನ್‍ಕೌಂಟರ್ ಮಾಡುವ ಮೊದಲು ನೋಡಲು ಅವಕಾಶ ನೀಡಬೇಕಿತ್ತು ಎಂದು ಆರೋಪಿ ನವೀನ್ ತಂದೆ ಪ್ರತಿಕ್ರಿಯಿಸಿದ್ದಾರೆ. ಈ ಮೊದಲು ಚೆನ್ನಕೇಶವುಲು ತಾಯಿ, ನನ್ನ ಮಗ ತಪ್ಪು ಮಾಡಿದ್ದಾನೆ ಎಂದರೆ ಆತನಿಗೆ ಶಿಕ್ಷೆ ನೀಡಿ. ನನ್ನ ಮಗ ಅಪರಾಧ ಮಾಡಿದ್ದಾನೆಂದರೆ ಆತನನ್ನು ಸುಟ್ಟು ಕೊಲೆ ಮಾಡಿ. ನನ್ನ ಮಗ ನನಗೆ ಏನೂ ಅಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ. ಸಂತ್ರಸ್ತೆಯ ತಾಯಿ 9 ತಿಂಗಳ ನಂತರ ತನ್ನ ಮಗಳಿಗೆ ಜನ್ಮ ನೀಡಿದ್ದರು. ಆದರೆ ಅವರ ಮಗಳು ಇಂತಹ ಅಪರಾಧಕ್ಕೆ ಬಲಿಯಾಗಿದ್ದಾಳೆ. ಅವರು ಎಷ್ಟು ಕಷ್ಟಪಟ್ಟಿರಬಹುದು ಎಂದು ಹೇಳಿದ್ದರು. ಇದನ್ನು ಓದಿ: ದೇಶಕ್ಕಾಗಿ ಒಳ್ಳೆಯ ನಿರ್ಧಾರ- ವಿಶ್ವನಾಥ್ ಕೆಲಸಕ್ಕೆ ಸಹೋದರ ಶ್ಲಾಘನೆ

    ಚೆನ್ನಕೇಶವುಲು ಪತ್ನಿ ಪ್ರತಿಕ್ರಿಯೆ ನೀಡಿ, ಮದುವೆಯಾದ ಒಂದು ವರ್ಷದೊಳಗೆ ನನ್ನ ಪತಿ ನನ್ನನ್ನು ಬಿಟ್ಟು ಹೋಗಿದ್ದಾರೆ. ದಯವಿಟ್ಟು ನನಗೆ ಎನ್‍ಕೌಂಟರ್ ಆದ ಜಾಗಕ್ಕೆ ಕರೆದುಕೊಂಡು ಹೋಗಿ. ನಾನು ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಥವಾ ನೀವೇ ನನ್ನನ್ನು ಕೊಲೆ ಮಾಡಿ. ನನ್ನ ಪತಿ ಇಲ್ಲದೆ ನನಗೆ ಬದುಕಲು ಆಗುವುದಿಲ್ಲ ಎಂದು ಕಣ್ಣೀರು ಹಾಕುವ ಮೂಲಕ ತನ್ನ ನೋವನ್ನು ಹೊರಹಾಕಿದ್ದಾಳೆ. ಇದನ್ನು ಓದಿ: ಕಳೆದ 7 ವರ್ಷಗಳಿಂದ ಪ್ರತಿದಿನವೂ ಸಾಯುತ್ತಿದ್ದೇವೆ: ನಿರ್ಭಯಾ ತಾಯಿ

    ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆಗೈದಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ.

  • ಕೊಲೆಗೈದು ಮಹಿಳೆ ಶವದ ಮೇಲೆ ರೇಪ್ – ವಿಡಿಯೋ ಸೆರೆಹಿಡಿದ ವಿಕೃತಕಾಮಿ ಅರೆಸ್ಟ್

    ಕೊಲೆಗೈದು ಮಹಿಳೆ ಶವದ ಮೇಲೆ ರೇಪ್ – ವಿಡಿಯೋ ಸೆರೆಹಿಡಿದ ವಿಕೃತಕಾಮಿ ಅರೆಸ್ಟ್

    – ಮನೆಗೆ ನುಗ್ಗಿ ಪತಿಯನ್ನು ಕಲ್ಲಿಂದ ಜಜ್ಜಿ ಕೊಂದ
    – ದಂಪತಿಯ ಮಗಳ ಮೇಲೂ ಅತ್ಯಾಚಾರ
    – ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ

    ಲಕ್ನೋ: ವಿಕೃತಕಾಮಿಯೋರ್ವ ಮನೆಯೊಂದಕ್ಕೆ ನುಗ್ಗಿ ದಂಪತಿಯನ್ನು ಕೊಲೆ ಮಾಡಿ ಮಹಿಳೆ ಶವದ ಮೇಲೆ ಅತ್ಯಾಚಾರವೆಸೆಗಿದ್ದಲ್ಲದೆ, ಅವರ 10 ವರ್ಷದ ಮಗಳನ್ನು ರೇಪ್‍ಗೈದ ಭಯಾನಕ ಪ್ರಕರಣ ಉತ್ತರ ಪ್ರದೇಶದ ಅಜಮ್‍ಗಢ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ನಾಸಿರುದ್ಧೀನ್(38) ಎಂದು ಗುರುತಿಸಲಾಗಿದೆ. ಈತ ನವೆಂಬರ್ 24ರಂದು ಮುಬಾರಕ್‍ಪುರ ಪ್ರದೇಶದಲ್ಲಿನ ಮನೆಯೊಂದಕ್ಕೆ ನುಗ್ಗಿ ದಂಪತಿ ಹಾಗೂ ಅವರ 4 ತಿಂಗಳ ಮಗನನ್ನು ಕಲ್ಲಿಂದ ಜಜ್ಜಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಅಲ್ಲದೆ ದಂಪತಿಯ 10 ವರ್ಷದ ಮಗಳ ಮೇಲೆ ರೇಪ್ ಮಾಡಿ, ಮಹಿಳೆಯ ಮೃತದೇಹದ ಮೇಲೆ 3 ಗಂಟೆ ಸತತವಾಗಿ ಅತ್ಯಾಚಾರಗೈದು, ದಂಪತಿಯ ಇನ್ನಿಬ್ಬರು ಮಕ್ಕಳನ್ನು ಕೊಲ್ಲಲು ಯತ್ನಿಸಿದ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದನು. ಇದನ್ನೂ ಓದಿ: ಮಲಗಿದ್ದ ಮಕ್ಕಳ ಕತ್ತು ಹಿಸುಕಿ ಕೊಂದು 8ನೇ ಮಹಡಿಯಿಂದ ಜಿಗಿದ ದಂಪತಿ

    ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ನಡೆಸಿದಾಗ ಆರೋಪಿಯೋರ್ವ ವಿಕೃತಕಾಮಿ, ಸೈಕೋಪಾತ್ ಎಂಬುದು ಬೆಳಕಿಗೆ ಬಂದಿದೆ. ಈ ಪ್ರಕರಣ ಮಾತ್ರವಲ್ಲದೆ ಆರೋಪಿ ಬೇರೆ ರಾಜ್ಯಗಳಲ್ಲಿ ಇನ್ನೂ ಅನೇಕ ರೇಪ್, ಕೊಲೆಗಳನ್ನು ಮಾಡಿರುವುದರ ಬಗ್ಗೆಯೂ ಬಾಯಿಬಿಟ್ಟಿದ್ದಾನೆ. ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾಗಿ ಪ್ರೀತಿ ನಿರೂಪಿಸೆಂದ – ನಿರಾಕರಿಸಿದ ಪ್ರೇಯಸಿಯ ಕತ್ತು ಸೀಳಿದ

    ನ. 24ರಂದು ದಂಪತಿ, ಮಕ್ಕಳು ಮಲಗಿದ್ದಾಗ ಮನೆಗೆ ನುಗ್ಗಿ, ಮೊದಲು ಪತಿಯನ್ನು ಕಲ್ಲಿಂದ ಜಜ್ಜಿ ಕೊಲೆ ಮಾಡಿದೆ. ಬಳಿಕ ಮಹಿಳೆಯನ್ನು ಕೊಲೆಗೈದು ಮೃತದೇಹದ ಮೇಲೆ ಅತ್ಯಾಚಾರವೆಸಗಿದೆ. ಆ ನಂತರ ದಂಪತಿಯ ಮಗಳ ಮೇಲೂ ಅತ್ಯಾಚಾರಗೈದು, ಅವರ 4 ತಿಂಗಳ ಮಗನನ್ನು ಹತ್ಯೆ ಮಾಡಿದೆ. ಉಳಿದ ಇಬ್ಬರು ಮಕ್ಕಳ ಮೇಲೂ ಹಲ್ಲೆ ಮಾಡಿದೆ. ಕೃತ್ಯವೆಸೆಗಿದ ಬಳಿಕ ಸ್ಥಳದಿಂದ ಓಡಿಹೋದೆ ಎಂದು ಆರೋಪಿ ಸತ್ಯಾಂಶ ಬಿಚ್ಚಿಟ್ಟಿದ್ದಾನೆ.

    https://twitter.com/azamgarhpolice/status/1201470409746464770

    ಜೊತೆಗೆ ಈ ಕೃತ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದು, ನನ್ನ ನಾದಿನಿಯರಿಗೂ ವಿಡಿಯೋ ತೋರಿಸಿದೆನು. ಅದನ್ನು ನೋಡಿ ಅವರು ಬೆಚ್ಚಿಬಿದ್ದಿದ್ದರು. ನಾನು ಇಲ್ಲಿಯವರೆಗೆ ಎಲ್ಲರನ್ನೂ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದೇ ಕೊಲೆ ಮಾಡಿದ್ದು ಎನ್ನುವ ಭಯಾನಕ ವಿಚಾರವನ್ನು ಪೊಲೀಸರಿಗೆ ಆರೋಪಿ ಹೇಳಿದ್ದಾನೆ. ಆರೋಪಿಯ ಈ ವಿಕೃತ ಮನಸ್ಥಿತಿ ನೋಡಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ.

    ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಆರೋಪಿ ತಾನು ಮಾಡಿದ ಒಂದೊಂದೆ ಕೃತ್ಯಗಳನ್ನು ಪೊಲೀಸರ ಬಳಿ ಬಾಯಿಬಿಡುತ್ತಿದ್ದಾನೆ.

  • ಮನೆಯೊಳಗೆ ಮಕ್ಕಳು, ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪೋಷಕರು ಪತ್ತೆ

    ಮನೆಯೊಳಗೆ ಮಕ್ಕಳು, ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪೋಷಕರು ಪತ್ತೆ

    ಅಗರ್ತಲಾ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತ್ರಿಪುರದ ಸಿಮ್ನಾ ನಗರದ ಸೊನಾಯಿ ಬೈರಾಗಿ ಸಾದು ಪರಾ ಪ್ರದೇಶದಲ್ಲಿ ನಡೆದಿದೆ.

    ಪರೇಶ್ ತಂತಿ, ಪತ್ನಿ ಸಂಧಾ ತಂತಿ ಹಾಗೂ ಮಕ್ಕಳಾದ ಬಿಶಾಲ್ ಮತ್ತು ರೂಪಾಲಿ ಮೃತರು. ಮನೆಯೊಳಗೆ ಮಕ್ಕಳಿಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಮಕ್ಕಳು ವಿಷ ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ. ಅವರ ಪೋಷಕರ ಮೃತದೇಹಗಳು ಮನೆಯ ಪಕ್ಕದಲ್ಲಿದ್ದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ದಂಪತಿ ಜಮೀನಿನ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದರು. ಹೀಗಾಗಿ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸಿಧೈ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಅಮಿತಾಭ ಪಾಲ್ ತಿಳಿಸಿದ್ದಾರೆ.

  • ಸರ್ಕಾರಿ ಆಸ್ಪತ್ರೆಗೆ ಹೋಗಿ ವ್ಯಕ್ತಿಯಿಂದ ರೋಗಿಯ ಕುಟುಂಬಸ್ಥರಿಗೆ ಉಚಿತ ಆಹಾರ

    ಸರ್ಕಾರಿ ಆಸ್ಪತ್ರೆಗೆ ಹೋಗಿ ವ್ಯಕ್ತಿಯಿಂದ ರೋಗಿಯ ಕುಟುಂಬಸ್ಥರಿಗೆ ಉಚಿತ ಆಹಾರ

    – ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿಗೆ ಊಟ
    – ಊಟಕ್ಕೆ ಪ್ರತಿನಿತ್ಯ 20,000 ರೂ. ಖರ್ಚು

    ಚೆನ್ನೈ: ತಮಿಳುನಾಡಿನ ತಿರುಚಿರಾಪಳ್ಳಿಯ ವ್ಯಕ್ತಿಯೊಬ್ಬರು ಪ್ರತಿದಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ರೋಗಿಯ ಕುಟುಂಬಸ್ಥರಿಗೆ ಉಚಿತ ಊಟ ನೀಡುತ್ತಿದ್ದಾರೆ.

    ರವೀಂದ್ರ ಕುಮಾರ್ ಪ್ರತಿದಿನ ತಿರುಚ್ಚಿಯ ಸರ್ಕಾರಿ ಆಸ್ಪತ್ರೆಗೆ ಬಡರೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಆಹಾರ ನೀಡುತ್ತಿದ್ದಾರೆ. ಈ ಕೆಲಸವನ್ನು ಅವರು ಸುಮಾರು 29 ವರ್ಷಗಳಿಂದ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ ಅವರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ತಲುಪುತ್ತಾರೆ. ಬಳಿಕ ಬೆಳಗ್ಗೆ 7 ಗಂಟೆಯಿಂದ 8 ಗಂಟೆವರೆಗೆ ಬಿಸಿಬಿಸಿ ತಿಂಡಿ ನೀಡುತ್ತಾರೆ. ಮಧ್ಯಾಹ್ನ 1 ಗಂಟೆ ಊಟ ನೀಡುತ್ತಾರೆ. ಸಂಜೆ 7 ಗಂಟೆಯಿಂದ 8 ಗಂಟೆವರೆಗೂ ರಾತ್ರಿಯ ಊಟ ನೀಡುತ್ತಾರೆ. ಇದನ್ನೂ ಓದಿ: ಹಣ್ಣುಗಳನ್ನು ಮಾರಾಟ ಮಾಡಿ 200 ಬಡ ಜನರಿಗೆ ಊಟ ನೀಡ್ತಿರೋ ವ್ಯಕ್ತಿ

    1990ರಲ್ಲಿ ರವೀಂದ್ರ ಅವರ ತಂದೆ ವಿ. ಗೋವಿಂದರಾಜು ಅವರು ಈ ಕೆಲಸವನ್ನು ಶುರು ಮಾಡಿದ್ದರು. ನನ್ನ ತಂದೆ ಯಾವಾಗಲೂ ಸಮಾಜ ಸೇವೆ ಮಾಡಬೇಕು ಎಂದುಕೊಳ್ಳುತ್ತಿದ್ದರು. ಅವರು ತಿರುಚ್ಚಿಯ ಸರ್ಕಾರಿ ಆಸ್ಪತ್ರೆಗೆ ತಲುಪಿದಾಗ ಬಡ ರೋಗಿಗಳನ್ನು ಹಾಗೂ ಅವರ ಕುಟುಂಬದವರನ್ನು ನೋಡಿ ತುಂಬಾ ದುಃಖ ಪಡುತ್ತಿದ್ದರು. ಆಗ ಅವರು ಜನರಿಗೆ ಕೇವಲ ಬಿಸಿ ನೀರು ನೀಡಲು ಶುರು ಮಾಡಿದ್ದರು. ಬಳಿಕ ಗಂಜಿ ನೀಡಲು ಪ್ರಾರಂಭಿಸಿದ್ದರು. ಇದನ್ನೂ ಓದಿ: ಕಾಲೇಜಿಗೆ ಹೋಗಿ ಕನಸು ನನಸು ಮಾಡಿಕೊಳ್ಳಲು ಕ್ಯಾಬ್ ಚಲಾಯಿಸುತ್ತಿದ್ದಾಳೆ 19ರ ಯುವತಿ

    ರವೀಂದ್ರ ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ನೀಡುತ್ತಾರೆ. ರವೀಂದ್ರ ಹಾಗೂ ಅವರ ಪತ್ನಿ ಮನೆಯಲ್ಲಿಯೇ ಊಟ ತಯಾರಿಸುತ್ತಾರೆ. ಪ್ರತಿದಿನ ಮುಂಜಾನೆ 3.30ಕ್ಕೆ ಎದ್ದು ಅಡುಗೆ ಕೆಲಸವನ್ನು ಶುರು ಮಾಡುತ್ತಾರೆ. ಬೆಳಗ್ಗಿನ ತಿಂಡಿಗಾಗಿ ಗಂಜಿ ಅಥವಾ ಪೊಂಗಲ್ ನೀಡುತ್ತಾರೆ. ಮಧ್ಯಾಹ್ನ ಅನ್ನದ ಜೊತೆ ಸಾಂಬಾರ್, ರಸಂ ಹಾಗೂ ಮೊಸರು ನೀಡುತ್ತಾರೆ. ಬೆಳಗ್ಗಿನ ತಿಂಡಿ ರವೀಂದ್ರಕುಮಾರ್ ಅವರು ತಯಾರಿಸಿದರೆ ಅವರ ಪತ್ನಿ ಮಧ್ಯಾಹ್ನದ ಹಾಗೂ ರಾತ್ರಿಯ ಊಟವನ್ನು ತಯಾರಿಸುತ್ತಾರೆ. ಇದನ್ನೂ ಓದಿ: ಪರೀಕ್ಷೆ ಬರೆಯಲು ಹೋದ ತಾಯಂದಿರು – ಮಕ್ಳನ್ನು ನೋಡ್ಕೊಂಡ ಪೇದೆಗಳಿಗೆ ಮೆಚ್ಚುಗೆ

    ಈ ಕೆಲಸಕ್ಕಾಗಿ ರವೀಂದ್ರ ಆಹಾರ ಸುರಕ್ಷತಾ ಇಲಾಖೆಯಿಂದ ಅನುಮತಿ ಕೂಡ ಪಡೆದಿದ್ದಾರೆ. ಅವರ ಜೊತೆ ಸ್ವಯಂ ಸೇವಕರಿದ್ದು, ಅಡುಗೆ ಮಾಡುವುದಕ್ಕೆ ಸಹಾಯ ಮಾಡುತ್ತಾರೆ. ರವೀಂದ್ರ ಅವರ ಟ್ರಸ್ಟ್ ಇದ್ದು, ಹಲವು ಮಂದಿ ಧನಸಹಾಯ ಮಾಡುತ್ತಾರೆ. ಪ್ರತಿದಿನ ಜನರಿಗೆ ಊಟ ಹಾಕಲು 20 ಸಾವಿರ ರೂ. ಖರ್ಚು ಆಗುತ್ತಿದೆ. ರವೀಂದ್ರ ಸ್ಟೀಲ್ ಪ್ಲೇಟಿನಲ್ಲಿ ಊಟ ನೀಡುತ್ತಿದ್ದು, ಅದನ್ನು ಸೇವಿಸಿದ ಬಳಿಕ ಜನರೇ ತೊಳೆಯಬೇಕು. ಊಟವನ್ನು ಮನೆಗೆ ತೆಗೆದುಕೊಂಡು ಹೋಗಬೇಕು ಎನ್ನುವವರು ಅವರೇ ಪಾತ್ರೆಗಳನ್ನು ತರಬೇಕು. ಇದನ್ನೂ ಓದಿ: ಗಂಗೆ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿರುವ ಮೀನುಗಾರ

    ನನ್ನ ಪತಿ ಒಂದು ವಾರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ರವೀಂದ್ರ ಅವರ ಊಟ ನಮ್ಮ ಪಾಲಿಗೆ ಆಶೀರ್ವಾದ. ನಾನು ಈ ಊಟವನ್ನು ಮಾಡುತ್ತೇನೆ ಹಾಗೂ ನನ್ನ ಪತಿಗೂ ನೀಡುತ್ತೇನೆ ಎಂದು ರೋಗಿಯ ಪತ್ನಿ ಪ್ರೇಮ ತಿಳಿಸಿದ್ದಾರೆ. ಇನ್ನು ರವೀಂದ್ರ ಅವರು ಪ್ರತಿಕ್ರಿಯಿಸಿ, ಹಸಿದಿರುವ ವ್ಯಕ್ತಿಗೆ ಊಟ ನೀಡುವುದರಿಂದ ಸಿಗುವ ನೆಮ್ಮದಿ ಬೇರೆ ಕೆಲಸದಿಂದ ಸಿಗುವುದಿಲ್ಲ. ನಾನು ನನ್ನ ತಂದೆ ತೋರಿದ ದಾರಿಯಲ್ಲಿ ನಡೆಯುತ್ತಿದ್ದೇನೆ. ಜನರು ಊಟ ಮಾಡುವಾಗ ನನಗೆ ಅವರ ಕಣ್ಣಿನಲ್ಲಿ ದೇವರು ಕಾಣಿಸುತ್ತಾನೆ ಎಂದು ಹೇಳಿದ್ದಾರೆ.

  • ತನ್ವೀರ್ ಸೇಠ್ ಕೊಲೆಗೆ ಯತ್ನ – ರಾತ್ರೋರಾತ್ರಿಯೇ ಆರೋಪಿ ಕುಟುಂಬ ಪರಾರಿ

    ತನ್ವೀರ್ ಸೇಠ್ ಕೊಲೆಗೆ ಯತ್ನ – ರಾತ್ರೋರಾತ್ರಿಯೇ ಆರೋಪಿ ಕುಟುಂಬ ಪರಾರಿ

    – 12 ದಿನ ಪೊಲೀಸ್ ಕಸ್ಟಡಿಗೆ ಆರೋಪಿ

    ಮೈಸೂರು: ಮಾಜಿ ಸಚಿವ ತನ್ವೀರ್ ಸೇಠ್ ಅವರ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿರುವ ಫರಾನ್ ಪಾಷಾ ಕುಟುಂಬಸ್ಥರು ರಾತ್ರೋರಾತ್ರಿ ಮನೆ ಖಾಲಿಮಾಡಿಕೊಂಡು ಪರಾರಿಯಾಗಿದ್ದಾರೆ.

    ನಿನ್ನೆ ತಡರಾತ್ರಿಯೇ ಮನೆಯಿಂದ ಪರಾರಿಯಾಗಿರುವ ಫರಾನ್ ಪಾಷಾ ಕುಟುಂಬಸ್ಥರು, ಫರಾನ್ ತಂದೆ, ತಾಯಿ ಮತ್ತು ತಂಗಿ ಎಲ್ಲರು ಮನೆ ಖಾಲಿ ಮಾಡಿದ್ದಾರೆ. ಮೈಸೂರಿನ ಗೌಸಿಯಾ ನಗರದಲ್ಲಿ ವಾಸವಿದ್ದ ಫರಾನ್ ಕುಟುಂಬ ಪೊಲೀಸರ ವಿಚಾರಣೆಗೆ ಹೆದರಿ ಮನೆ ಬಿಟ್ಟ ತಲೆಮರೆಸಿಕೊಂಡಿದೆ.

    ಸದ್ಯ ಆರೋಪಿ ಫರಾನ್ ಪೋಲಿಸರ ವಶದಲ್ಲಿದ್ದು, ಆರೋಪಿಯನ್ನು ಸೋಮವಾರ ರಾತ್ರಿ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರು ಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ಮೈಸೂರು ಜೆಎಂಎಫ್‍ಸಿ ನ್ಯಾಯಾಧೀಶರು ಆರೋಪಿ ಫರಾನ್ ನನ್ನು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಇದನ್ನು ಓದಿ: ‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್

    ಇತ್ತ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಈವರೆಗೆ ವಿಚಾರಣೆಯಲ್ಲಿ ಹಲ್ಲೆಗೆ ನಿಖರ ಕಾರಣವನ್ನು ಆರೋಪಿ ಫರಾನ್ ಪಾಷಾ ಬಾಯಿಬಿಟ್ಟಿಲ್ಲ. ಆದ್ದರಿಂದ ತನಿಖೆ ಚುರುಕುಗೊಳಿಸಿರುವ ಪೋಲಿಸರು ಆತನ ಸ್ನೇಹಿತರು ಸೇರಿ ಹಲವು ಅನುಮಾನಿತರ ವಿಚಾರಣೆ ಮಾಡುತ್ತಿದ್ದಾರೆ. ಮೈಸೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

  • ಮೆಕ್ಕೆಜೋಳ ತೆನೆ ಲೋಡ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಬಡಿದಾಟ – ನಾಲ್ವರು ಗಂಭೀರ

    ಮೆಕ್ಕೆಜೋಳ ತೆನೆ ಲೋಡ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಬಡಿದಾಟ – ನಾಲ್ವರು ಗಂಭೀರ

    ದಾವಣಗೆರೆ: ಎರಡು ಕುಟುಂಬಗಳ ನಡುವೆ ಗಲಾಟೆಯಾಗಿ ರಾಡು ಹಾಗೂ ದೊಣ್ಣೆ ಹಿಡಿದು ಹೊಡೆದಾಡಿದಂತಹ ಘಟನೆ ಜಗಳೂರು ತಾಲೂಕಿನ ಕೊರಟಿಕೆರೆ ಗ್ರಾಮದಲ್ಲಿ ನಡೆದಿದೆ.

    ಗಲಾಟೆಯಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಹೊಡೆದಾಡಿದ ಸನ್ನಿವೇಶವನ್ನು ಗ್ರಾಮಸ್ಥರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರಕಾಶ್, ನಾಗರಾಜ್, ಜಯಮ್ಮ, ಶಂಕರಮ್ಮ ಎಂಬವರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, ತೀವ್ರ ಗಾಯಗೊಂಡಿದ್ದ ನಾಗರಾಜ್ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಮೂವರು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಗ್ರಾಮದಲ್ಲಿ ಐದಾರು ವರ್ಷಗಳಿಂದ ಜಯಮ್ಮ ಮತ್ತು ಉಮೇಶ್ ಎಂಬವರ ಎರಡು ಕುಟುಂಬಗಳ ನಡುವೆ ಜಾಗವೊಂದರ ವಿಚಾರಕ್ಕೆ ಜಗಳ ನಡೆಯುತಿತ್ತು. ಆದರೆ ಭಾನುವಾರ ಜಯಮ್ಮನವರ ಜಾಗದಲ್ಲಿ ಉಮೇಶ್, ರವಿ, ಬಸವರಾಜಪ್ಪ ಮೆಕ್ಕೆಜೋಳ ತೆನೆ ಲೋಡ್ ಹಾಕಿದ್ದರು. ಇದನ್ನು ತೆಗೆಯುವಂತೆ ಮಾತಿನ ಚಕಮಕಿ ನಡೆದು ಹೊಡೆದಾಡುವ ಮಟ್ಟಕ್ಕೆ ತಲುಪಿದೆ.

    ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಸಾಮಾಜಿಕ ಜಾಲತಾಣದಲ್ಲಿ ಲತಾ ನಿಧನ ಸುದ್ದಿ ವೈರಲ್ – ಆರೋಗ್ಯವಾಗಿದ್ದಾರೆ ಎಂದ ಕುಟುಂಬಸ್ಥರು

    ಸಾಮಾಜಿಕ ಜಾಲತಾಣದಲ್ಲಿ ಲತಾ ನಿಧನ ಸುದ್ದಿ ವೈರಲ್ – ಆರೋಗ್ಯವಾಗಿದ್ದಾರೆ ಎಂದ ಕುಟುಂಬಸ್ಥರು

    ಮುಂಬೈ: ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸುದ್ದಿ ತಿಳಿದ ತಕ್ಷಣ ಲತಾ ಅವರು ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಲತಾ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.

    ಲತಾ ಅವರ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿದ ಕುಟುಂಬಸ್ಥರು, “ಲತಾ ಅವರು ಆರೋಗ್ಯವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಲತಾ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಅವರು ಕ್ಷೇಮವಾಗಿದ್ದು, ವೈದ್ಯರು ಅವರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

    ಯಾವುದೇ ಕುಟುಂಬ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಕುಟುಂಬಸ್ಥರನ್ನು ಮನೆಗೆ ಕರೆದುಕೊಂಡು ಹೋಗುವುದಿಲ್ಲ. ಏಕೆಂದರೆ ಆಸ್ಪತ್ರೆಯಲ್ಲಿಯೇ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ. ಲತಾ ಅವರು ಶೀಘ್ರ ಗುಣಮುಖರಾಗಿ ಮನೆಗೆ ಬರಬೇಕು ಎಂಬುದು ನಮ್ಮ ಆಶಯ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಡಿಸಬೇಡಿ ಎಂದು ನಾನು ನೆಟ್ಟಿಗರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.

    ಇತ್ತ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಲತಾ ಅವರ ಕುಟುಂಬಸ್ಥರ ಜೊತೆ ಮಾತನಾಡಿದ್ದೇನೆ. ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿಗಳನ್ನು ಹರಿಡಿಸಬೇಡಿ ಎಂದು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿ ನೋಡಿದ ನೆಟ್ಟಿಗರು ನಿರಂತರವಾಗಿ ಲತಾ ಅವರಿಗೆ ಶ್ರದ್ಧಾಂಜಲಿ ನೀಡಲು ಶುರು ಮಾಡಿದ್ದರು.

    ಸೆ.28ಕ್ಕೆ 90ನೇ ವರ್ಷ ವಸಂತಕ್ಕೆ ಕಾಲಿಟ್ಟಿದ್ದ ಲತಾ ಮಂಗೇಶ್ಕರ್ ಅವರು ನವೆಂಬರ್ 11ರ ನಸುಕಿನ ಜಾವ 2 ಗಂಟೆ ಸಮಯದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಕುಟುಂಸ್ಥರು ಲತಾ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿದ್ದರು.