ಹಾವೇರಿ: ಒಂದೇ ಕುಟುಂಬದ ಮೂವರನ್ನು ಕೊಚ್ಚಿ ಕೊಲೆಗೈದು ಬಳಿಕ ಆರೋಪಿ ಪರಾರಿಯಾಗಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೀತಾ ಮರಿಗೌಡ್ರು (32), ಅಕುಲ್ (10) ಹಾಗೂ ಅಂಕಿತಾ (7) ವರ್ಷ ಕೊಲೆಯಾದ ದುರ್ದೈವಿಗಳು. ಇವರನ್ನು ಕುಮಾರಗೌಡ ಮರಿಗೌಡ್ರು (35) ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ.
ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಮರಿಗೌಡ್ರು ತನ್ನ ಸ್ವಂತ ಅಣ್ಣ ಹೊನ್ನೆಗೌಡನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಕುಟುಂಬದೊಳಗಿನ ಜಗಳವೇ ಕೊಲೆಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ.
ಕಲಬುರಗಿ: ಬೈಕಿಗೆ (Bike) ಲಾರಿ (Lorry) ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿಯ (Kalaburagi) ಅಫಜಲಪುರ (Afzalpur) ತಾಲೂಕಿನ ಹಳ್ಳೋಳ್ಳಿ ಕ್ರಾಸ್ ಬಳಿ ನಡೆದಿದೆ.
ಘಟನೆಯಲ್ಲಿ ನೇಪಾಳ (Nepal) ಮೂಲದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಂದೇ ಬೈಕ್‌ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ತೆರಳುತ್ತಿದ್ದರು. ಈ ವೇಳೆ ದುದುನಿಯಿಂದ ಅಫಜಲಪುರ ಕಡೆಗೆ ಬರುತ್ತಿದ್ದ ಲಾರಿ ಬೈಕಿಗೆ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಮಾಲ್‌ನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ – ಆರೋಪಿ ಕೋರ್ಟ್‌ಗೆ ಶರಣು
ಮೃತರು ಅಫಜಲಪುರದಲ್ಲಿ ಫಾಸ್ಟ್‌ಫುಡ್ ಹೋಟೆಲ್ ನಡೆಸುತ್ತಿದ್ದರು. ನೇಪಾಳ ಮೂಲದ ಈ ಕುಟುಂಬ ಕಳೆದ ಹಲವು ವರ್ಷಗಳಿಂದ ಅಫಜಲಪುರದಲ್ಲಿ ವಾಸವಿತ್ತು. ಘಟನಾ ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಾಸನ ಕಾಲೇಜಿನ 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
ವಾಷಿಂಗ್ಟನ್: ಭಾರತ ಮೂಲದ (Indian Origin) ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದ (America) ನ್ಯೂಜೆರ್ಸಿಯಲ್ಲಿ (New Jersey) ನಡೆದಿದೆ.
ತೇಜ್ ಪ್ರತಾಪ್ ಸಿಂಗ್ (43), ಸೋನಾಲ್ ಪರಿಹಾರ್ (42) ಮತ್ತು ಈ ದಂಪತಿಯ 10 ಹಾಗೂ 6 ವರ್ಷದ ಇಬ್ಬರು ಮಕ್ಕಳು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅನುಮಾನಾಸ್ಪದವಾಗಿ ನಾಲ್ವರ ಶವ ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
ಕುಟುಂಬ ವಾಸಿಸುತ್ತಿದ್ದ ನೆರೆಹೊರೆಯವರು ಅಕ್ಟೋಬರ್ 4 ರಂದು ಸಂಜೆ ಪೊಲೀಸರಿಗೆ ಕರೆ ಮಾಡಿ, ಅವರ ಯೋಗಕ್ಷೇಮದ ಬಗ್ಗೆ ಅನುಮಾನ ಮೂಡುತ್ತಿರುವುದಾಗಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಅವರ ಮನೆಗೆ ತೆರಳಿ ಪರಿಶೀಲಿಸಿದಾಗ ನಾಲ್ವರು ಕೂಡಾ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯ – ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಖಡಕ್ ಸೂಚನೆ
ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ಸಾವನ್ನಪ್ಪಿರುವ ಬಗ್ಗೆ ಮಾತನಾಡಿರುವ ಪ್ಲೇನ್ಸ್‌ಬೊರೊ ಮೇಯರ್ ಪೀಟರ್ ಕ್ಯಾಂಟು, ನಮ್ಮ ಸಮುದಾಯದಲ್ಲಿ ಏನಾಗಿದೆ ಎಂಬುದು ಗ್ರಹಿಕೆಗೆ ಮೀರಿದೆ. ಈ ದುರಂತ ಘಟನೆಯಿಂದ ನಾವು ದುಃಖಿತರಾಗಿದ್ದೇವೆ ಎಂದು ತಿಳಿಸಿದ್ದಾರೆ.
ದಂಪತಿಯಿಬ್ಬರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಅವರಲ್ಲಿ ಒಬ್ಬರು ಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತೇಜ್ ಪ್ರತಾಪ್ ಸಿಂಗ್ ಮೊದಲು ತನ್ನ ಕುಟುಂಬವನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ದಂಪತಿ ಸಂತೋಷವಾಗೇ ಇದ್ದರು, ಈ ರೀತಿ ಆಗಲು ಸಾಧ್ಯವೇ ಇಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ಗಾಜಾಪಟ್ಟಿಯಿಂದ 5,000 ರಾಕೆಟ್ ದಾಳಿ – ಯುದ್ಧ ಘೋಷಿಸಿದ ಇಸ್ರೇಲ್
ಪ್ರಕರಣ ಕೊಲೆಯೋ ಆತ್ಮಹತ್ಯೆಯೋ ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತುಮಕೂರು: ಸಾಲಬಾಧೆ (Indebtedness) ತಾಳಲಾರದೇ ಒಂದೇ ಕುಟುಂಬದ ಮೂವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು (Tumakuru) ತಾಲೂಕಿನ ಪಂಡಿತನಹಳ್ಳಿಯ ರೈಲ್ವೆಗೇಟ್ ಬಳಿ ನಡೆದಿದೆ.
ಸಿದ್ದಗಂಗಯ್ಯ (62), ಸುನಂದಮ್ಮ ಹಾಗೂ ಗೀತಾ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ತುಮಕೂರಿನ ಮರಳೂರು ನಿವಾಸಿಯಾಗಿದ್ದ ಸಿದ್ದಗಂಗಯ್ಯ, ಕಳೆದ ಎರಡು ವರ್ಷಗಳ ಹಿಂದೆ ಕೆಇಬಿಯಲ್ಲಿ (KEB) ನಿವೃತ್ತಿ ಹೊಂದಿದ್ದು, ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೇ ಬೆಂಗಳೂರಿನ ಮಲ್ಲೇಶ್ವರಂ (Malleshwaram) ಬಳಿಯಿರುವ ಕೆಸಿ ಜನರಲ್ ಆಸ್ಪತ್ರೆ (KC General Hospital) ಬಳಿ ಟೀ ಶಾಪ್ ಇಟ್ಟುಕೊಂಡು ಸಾಲ ತೀರಿಸಲು ದುಡಿಯುತ್ತಿದ್ದರು. ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ – 35 ಜನ ಪೊಲೀಸ್ ವಶಕ್ಕೆ
ಆದರೂ ಸಾಲ ಮಿತಿ ಮೀರಿದ್ದರಿಂದ ಮನನೊಂದು ಸೋಮವಾರ ಬೆಳಗ್ಗಿನ ಜಾವ ಆಟೋದಲ್ಲಿ ಬಂದು ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಪರಿಣಾಮ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿವೆ. ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹಗಳು ರವಾನೆಯಾಗಿದ್ದು, ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಖ್ಯಾತ ಉದ್ಯಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮೈಸೂರು: ನಾಲೆಗೆ ಬಿದ್ದ ಪುತ್ರಿಯನ್ನು (Daughter) ರಕ್ಷಿಸಲು ಹೋಗಿ ಒಂದೇ ಕುಟುಂಬದ (Family) ಮೂವರು ನೀರುಪಾಲಾದ ಘಟನೆ ಮೈಸೂರು (Mysuru) ಜಿಲ್ಲೆಯ ಹೆಚ್.ಡಿ.ಕೋಟೆ (HD Kote) ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡದಿದೆ.
ಅಪ್ಪ ಮಹಮ್ಮದ್ ಕಪೀಲ್ (42), ಅಮ್ಮ ಶಾವರ ಭಾನು (35), ಪುತ್ರಿ ಶಾಹೀರಾ ಭಾನು (20) ಮೃತ ದುರ್ದೈವಿಗಳು. ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಮಗಳನ್ನು ಕಾಪಾಡಲು ಹೋಗಿ ಅಪ್ಪ, ಅಮ್ಮ ಹಾಗೂ ಪುತ್ರಿ ಮೂವರೂ ಸಾವನ್ನಪ್ಪಿದ್ದಾರೆ. ನುಗು ಜಲಾಶಯದ (Nugu Reservoir) ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಘಟನೆ ನಡೆದಿದೆ. ಶಾಹೀರಾ ಭಾನು ಮೊದಲಿಗೆ ಕಾಲು ಜಾರಿ ಬಿದ್ದಿದ್ದು, ರಕ್ಷಣೆಗೆ ಹೋದ ಅಪ್ಪ, ಅಮ್ಮ ಸೇರಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಯುವತಿಯನ್ನು ಹಿಂಬಾಲಿಸಿ ಮುತ್ತಿಟ್ಟು ಎಸ್ಕೇಪ್ – ಬೆಂಗಳೂರಿನ ಬೀದಿ ಕಾಮುಕ ಅರೆಸ್ಟ್
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಮೂವರ ಮೃತ ದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅಪಮಾನ – ಮುಸ್ಲಿಂ ಯುವಕನ ಬಂಧನ
ಜೈಪುರ: ಬಸ್‍ಗೆ ವ್ಯಾನ್ (Van-Bus Accident) ಮುಖಾಮುಖಿ ಡಿಕ್ಕಿ ಹೊಡೆದು ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ (Rajasthan) ದಿಡ್ವಾನಾ-ಕುಚಮನ್ ಜಿಲ್ಲೆಯಲ್ಲಿ ನಡೆದಿದೆ.
ಖುಂಖುನಾ ಪೊಲೀಸ್ ಠಾಣಾ ವ್ಯಾಪ್ತಿಯ ಬಂಥಾಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಡಿಎಸ್ಪಿ ಧರಂಚಂದ್ ಬಿಷ್ಣೋಯ್ ಹೇಳಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಬಂಗಾರ್ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜೈಪುರಕ್ಕೆ ರವಾನಿಸಲಾಗಿದೆ ಎಂದು ಹೇಳಿದರು.
ಮೃತರೆಲ್ಲರೂ ವ್ಯಾನ್‍ನಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಸಿಕಾರ್ ನಿಂದ ನಾಗೌರ್ ಗೆ ಪ್ರಯಾಣಿಸುತ್ತಿದ್ದರು. ಅಪಘಾತಕ್ಕೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ- ಒಂದೇ ಕುಟುಂಬದ ನಾಲ್ವರ ದುರ್ಮರಣ
ಬೆಂಗಳೂರು: ನಾಲ್ಕು ದಿನದ ಹಿಂದೆಯೇ ಹೆಂಡ್ತಿ ಕೊಲೆ ಮಾಡಿದ್ದ ಟೆಕ್ಕಿ, ಪುಟ್ಟ ಮಕ್ಕಳೊಂದಿಗೆ ಹೆಂಡ್ತಿ ಶವದ ಜೊತೆ ಒಂದು ದಿನ ಕಾಲ ಕಳೆದಿದ್ದ. ಮಕ್ಕಳು ಅಳಲಾರಂಭಿಸದ್ರಿಂದ ಮಕ್ಕಳನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬೇರೆ ದಾರಿಯಿಲ್ಲದೆ ಕೊನೆಗೆ ಆತ್ಮಹತ್ಯೆ ದಾರಿ ಹಿಡಿದಿದ್ದ. ಕಾಡುಗೋಡಿ ಟೆಕ್ಕಿ ಫ್ಯಾಮಿಲಿ ಡೆತ್ ಕೇಸ್‍ನಲ್ಲಿ ಡೆವಲಪ್‍ಮೆಂಟ್ ಸ್ಟೋರಿ ಇಲ್ಲಿದೆ.
ಹೌದು. ಕಾಡುಗೋಡಿಯಲ್ಲಿ (Kadugodi Family Death case) ಇಬ್ಬರು ಮಕ್ಕಳು, ಹೆಂಡತಿಯನ್ನ ಕೊಂದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪೊಲೀಸ್ರು ತನಿಖೆ ಚುರುಕುಗೊಳಿಸಿದ್ದಾರೆ. ಎಫ್ ಎಸ್ ಎಲ್ ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆ ವೇಳೆ ಭಯಾನಕ ಸತ್ಯ ಹೊರಬಿದ್ದಿದ್ದು, ಟೆಕ್ಕಿ ವಿಜಯ್ ಹೆಂಡ್ತಿ ಹೇಮಾವತಿಯನ್ನ ಜುಲೈ 31ರಂದೇ ಕೊಲೆ ಮಾಡಿದ್ದಾನೆ. ಹೆಂಡತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೆಂಡ್ತಿ ಕೊಲೆ ಮಾಡಿ 24 ಗಂಟೆಗಳ ಕಾಲ ಮಕ್ಕಳೊಂದಿಗೆ ಹೆಂಡ್ತಿ ಶವದ ಜೊತೆಯೇ ಕಾಲ ಕಳೆದಿದ್ದಾನೆ. ಮಕ್ಕಳು ಅಳೋದನ್ನ ನೋಡಿ ಕೊನೆಗೆ ಇಬ್ಬರು ಮಕ್ಕಳಾದ ಮೋಕ್ಷ ಹಾಗೂ ಸೃಷ್ಠಿಯನ್ನ ಕೊಲೆ ಮಾಡಿರೋ ಶಂಕೆಯಿದೆ. ಆ ಬಳಿಕ ವಿಧಿಯಿಲ್ಲದೆ ಟೆಕ್ಕಿ ವಿಜಯ್ (Techie Vijay) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಕ್ರೈಂ ಸೀನ್‍ಗೆ ಹೋದಾಗ ಮಕ್ಕಳು ಹಾಗೂ ಹೆಂಡತಿ ಶವ ನೆಲದ ಮೇಲೆ ಪತ್ತೆಯಾಗಿದ್ರೆ, ನೇಣು ಬಿಗಿದ ಸ್ಥಿತಿಯಲ್ಲಿ ವೀರಾರ್ಜುನ ವಿಜಯ್ ದೇಹ ಪತ್ತೆಯಾಗಿದೆ. ಹೇಮಾವತಿ ಮೃತದೇಹ ಡಿ ಕಾಂಪೋಸ್ ಸ್ಥಿತಿಯಲ್ಲಿ ಪತ್ತೆಯಾಗಿದ್ರೆ, ಉಳಿದ ಮೂವರ ಮೃತದೇಹಗಳು ಇನ್ನೂ ಡಿಕಾಂಪೋಸ್ ಸ್ಥಿತಿಗೆ ತಲುಪಿರಲಿಲ್ಲ.
ಟೆಕ್ಕಿ ವಿಜಯ್ ಪತ್ನಿ ಹೇಮಾವತಿ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿರುವ ಶಂಕೆಯಿದೆ. ಹೇಮಾವತಿ ಕತ್ತಿನ ಭಾಗದಲ್ಲಿ ಕೈ ಗುರುತುಗಳು ಬಿದ್ದಿದ್ದು, ದೇಹದ ಬಣ್ಣ ಬದಲಾಗಿದೆ. ಆಗಸ್ಟ್ 1ರಂದು ಹೆಂಡತಿಗೆ ಬಲವಂತವಾಗಿ ವಿಷ ಕೊಟ್ಟು, ಕತ್ತು ಹಿಸುಕಿ ಕೊಲೆ ಮಾಡಿರೋ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಮಕ್ಕಳ ಕತ್ತನ್ನು ವೇಲಿನಿಂದ ಬಿಗಿದು ಇಬ್ಬರನ್ನು ಕೊಂದು ಅ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲೆ ಮಾಡುವ ಮುನ್ನವೇ ಮೊಬೈಲ್‍ಗಳನ್ನ ಸ್ವಿಚ್ ಅಫ್ ಮಾಡಲಾಗಿದ್ದು, ಮೊಬೈಲ್ ಎಫ್‍ಎಸ್‍ಎಲ್‍ಗೆ ರವಾನೆ ಮಾಡಲಾಗಿದೆ. ಅಕ್ಕಪಕ್ಕದವರು ಹಾಗೂ ಕುಟುಂಬಸ್ಥರ ವಿಚಾರಣೆ ವೇಳೆಯೂ ಸಹ ಪೊಲೀಸರಿಗೆ ಸಾವುಗಳ ಹಿಂದಿನ ರಹಸ್ಯ ಗೊತ್ತಾಗಿಲ್ಲ.
ಒಟ್ಟಿನಲ್ಲಿ ನಾಲ್ವರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಎಫ್ ಎಸ್ ಎಲ್ ರಿಪೋರ್ಟ್ ಬಂದ ಬಳಿಕ ಇಡೀ ಕುಟುಂಬದ ಅವಸಾನಕ್ಕೆ ಕಾಆರಣ ಏನು ಅನ್ನೋದು ತಿಳಿಯಲಿದೆ.
ಬೆಂಗಳೂರು: ಪಿಕ್ ಪಾಕೆಟ್ (Pick Pocket) ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ತಂಡದ ವಿಚಾರಣೆ ಮಾಡಿದ ಪೊಲೀಸರಿಗೆ ಅವರ ಇಡೀ ಕುಟುಂಬವೇ ಕಳ್ಳತನ (Theft) ಮಾಡುವ ಕುಟುಂಬ (Family) ಎಂದು ತಿಳಿದು ಶಾಕ್ ಆದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಬೆಂಗಳೂರಿನ ಎಸ್.ಆರ್ ನಗರದ ಪೊಲೀಸರು ಪಿಕ್ ಪಾಕೆಟ್ ಪ್ರಕರಣದಲ್ಲಿ ತಂಡವೊಂದನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಈ ವಿಷಯ ಹೊರಬಿದ್ದಿದೆ. ಗಂಡ, ಹೆಂಡತಿ, ಅಣ್ಣ, ಭಾವ, ಮಕ್ಕಳು ಸೇರಿದಂತೆ ಆ ಕುಟುಂಬದ ಪ್ರತಿಯೊಬ್ಬರು ಕೂಡಾ ಕಳ್ಳರೇ ಆಗಿದ್ದರು. ಕಳ್ಳತನವೇ ಇವರ ಫುಲ್ ಟೈಂ ಜಾಬ್ ಆಗಿತ್ತು. ಅದರಿಂದಲೇ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂಬ ವಿಷಯವನ್ನು ಕೇಳಿ ಪೊಲೀಸರು ಇಂತಹವರು ಇರುತ್ತಾರ ಎಂದು ದಂಗಾಗಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಹೋಗಿದ್ದವರ ಮನೆ ಬೀಗ ಮುರಿದು ಕಳ್ಳತನ – ಆರೋಪಿ ಅರೆಸ್ಟ್
ಬನಶಂಕರಿ (Banashankari) ನಿವಾಸಿಗಳಾದ ವೇಲು, ಸುಂದರ್‌ರಾಜ್, ಮಹೇಶ್, ಸೇರಿದಂತೆ ಎಲ್ಲರೂ ಬೆಳಗಾದರೆ ಒಟ್ಟಿಗೆ ಒಂದು ಮೀಟಿಂಗ್ ಮಾಡುತ್ತಾರೆ. ಇಂದು ಯಾರು ಯಾವ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಯಾವ ಬಸ್ ರೂಟ್ ಅಲ್ಲಿ ಪಿಕ್‌ಪಾಕೆಟ್ ಮಾಡಬೇಕು ಎಂಬುದನ್ನು ನಿರ್ಧರಿಸಿ ಕುಟುಂಬದ ಎಂಟೂ ಜನ ಬೇರೆ ಬೇರೆ ಕಡೆ ತೆರಳುತ್ತಿದ್ದರು. ಅದರಂತೆ ಕೆಲವರು ಜನರ ಗಮನವನ್ನು ಬೇರೆಡೆ ಸೆಳೆಯುವಂತೆ ಮಾಡಿ ಚಿನ್ನಾಭರಣ ಕಳ್ಳತನ ಮಾಡಿದರೆ ಇನ್ನೂ ಕೆಲವರು ರಶ್ ಇರುವ ಬಿಎಂಟಿಸಿ ಬಸ್‌ಗಳಲ್ಲಿ ಹತ್ತಿಕೊಂಡು ಪರ್ಸ್, ಮೊಬೈಲ್‌ಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದರು. ಇದನ್ನೂ ಓದಿ: ಬೆಂಗಳೂರಿನ ಶಂಕಿತ ಉಗ್ರರಿಗೆ ಗನ್ ಸಪ್ಲೈ ಮಾಡುತ್ತಿದ್ದ ಜಾಡು ಪತ್ತೆ ಹಚ್ಚಿದ ಸಿಸಿಬಿ
ಸಂಜೆ ಕದ್ದ ಮಾಲನ್ನು ಮಾರಿ ಬಿಂದಾಸ್ ಜೀವನ ನಡೆಸುತ್ತಿದ್ದರು. ಪರ್ಸ್, ಮೊಬೈಲ್, ಸಣ್ಣ ಪ್ರಮಾಣದ ಹಣಗಳನ್ನು ಕದ್ದರೆ ಜನರು ಅದನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಅಲ್ಲದೇ ಇಂತಹ ಸಣ್ಣ ಪುಟ್ಟ ವಿಷಯಗಳಿಗೆ ಪೊಲೀಸರಿಗೆ ದೂರು ನೀಡುವುದಿಲ್ಲ ಎಂಬ ಧೈರ್ಯದ ಮೇಲೆ ಇದನ್ನೇ ಫುಲ್‌ಟೈಂ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಇದೀಗ ಖತರ್‌ನಾಕ್ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ 25ಕ್ಕೂ ಹೆಚ್ಚು ಕೇಸ್‌ಗಳು ಬೆಳಕಿಗೆ ಬಂದಿವೆ. ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಸಿಕ್ಕಿ ಬೀಳುತ್ತಲೇ 5,000 ರೂ. ಲಂಚವನ್ನು ಜಗಿದು ನುಂಗಿದ ಕಂದಾಯ ಅಧಿಕಾರಿ
ಕಾರವಾರ: ಗೋವಾದ (Goa) ವೆರ್ಣಾ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪೂರೈಕೆ ಉದ್ಯಮ ನಿರ್ವಹಿಸುತ್ತಿದ್ದ ಕಾರವಾರ ತಾಲೂಕಿನ ಗೋಪಶಿಟ್ಟಾ ಮೂಲದ ಉದ್ಯಮಿ (Businessman) ಶ್ಯಾಮ್ ಪಾಟೀಲ್ ಅವರ ಕುಟುಂಬ ಆತ್ಮಹತ್ಯೆಗೆ (Suicide) ಶರಣಾಗಿದೆ.
ಶ್ಯಾಮ್ ಪಾಟೀಲ್ (40), ಪತ್ನಿ ಜ್ಯೋತಿ ಪಾಟೀಲ್ (37), ಮಗ ಧಕ್ಷ್ ಪಾಟೀಲ್ (12) ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಮತ್ತು ಪುತ್ರ ಕಾರವಾರ (Karwar) ನಗರದ ಕೋಡಿಬಾಗದಲ್ಲಿರುವ ಕಾಳಿ ಸೇತುವೆಯಿಂದ ಜಿಗಿದು ಆತ್ನಹತ್ಯೆ ಮಾಡಿಕೊಂಡಿದ್ದು, ಶ್ಯಾಮ್ ಪಾಟೀಲ್ ನಗರದಿಂದ 60 ಕಿ.ಮೀ. ದೂರದಲ್ಲಿರುವ ಗೋವಾ ರಾಜ್ಯದ ಪಾಡಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ತಹಶೀಲ್ದಾರ್ ಅನುಮಾನಾಸ್ಪದ ಸಾವು – ಪತ್ನಿ, ಆಕೆ ಸಹೋದರನ ವಿರುದ್ಧ ಕೊಲೆ ಆರೋಪ
ಪುತ್ರ ಹಾಗೂ ಪತ್ನಿಯ ಮೃತದೇಹ ದೇವಬಾಗ ಕಡಲತೀರದಲ್ಲಿ ದೊರೆತಿದೆ. ಶ್ಯಾಮ್ ಮೃತದೇಹ ಪಾಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಗುರುವಾರ ನಸುಕಿನ ಜಾವ ದೇವಬಾಗ ಕಡಲತೀರದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿತ್ತು. ಚಿತ್ತಾಕುಲ ಠಾಣೆ ಪೊಲೀಸರು ತನಿಖೆ ಆರಂಭಿಸಿದ ಬಳಿಕ ಕುಟುಂಬದ ಸದಸ್ಯರು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪ್ರೇಮವೈಫಲ್ಯ – ಮನನೊಂದ ಯುವತಿ ಚಿತ್ರಾವತಿ ನದಿಗೆ ಹಾರಿ ಆತ್ಮಹತ್ಯೆ!
ಉದ್ಯಮಿ ಶ್ಯಾಮ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಗಿ ಗೋವಾದ ಕುಕಳ್ಳಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ಪತ್ನಿ, ಪುತ್ರ ಆತ್ಮಹತ್ಯೆ ಮಾಡಿಕೊಂಡ ಬಳಿಕ ಶ್ಯಾಮ್ ಇಲ್ಲಿಂದ ಗೋವಾ ಭಾಗಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಸಂಬಂಧ ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಸಿಗದೆ ಮನನೊಂದು ಯುವಕ ಆತ್ಮಹತ್ಯೆ
ರಶ್ಮಿಕಾ (Rashmika Mandanna) ಅಂತೂ ಬಾಲಿವುಡ್‌ನಲ್ಲಿ ಸೆಟ್ಲ್ ಆಗಿದ್ದಾರೆ. ಈಗಷ್ಟೇ ಆನಿಮಲ್ ಸಿನಿಮಾ ಮುಗಿಸಿದ್ದಾರೆ, ಇನ್ನು ವಿಜಯ್ ದೇವರಕೊಂಡ (Vijay Devarakonda) ಟರ್ಕಿಯಲ್ಲಿ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಇಬ್ಬರೂ ಒಂದು ರಿಲ್ಯಾಕ್ಸ್ ಡಿನ್ನರ್ ಮಾಡಿದ್ದಾರೆ. ವಿಶೇಷ ಅಂದ್ರೆ ಡಿನ್ನರ್‌ಲ್ಲಿ ವಿಜಯ್ ಕುಟುಂಬಸ್ಥರೂ ಇದ್ದಾರೆ. ಮೊಬೈಲ್‌ನಲ್ಲಿ ಸೆರೆಯಾಗಿದ್ದಾರೆ. ಈ ಮೀಟಿಂಗ್ ರಹಸ್ಯ ಏನು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಕೆಲವೊಮ್ಮೆ ನೇರವಾಗಿ, ಇನ್ನೊಮ್ಮೆ ಸೀಕ್ರೇಟಾಗಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೊತೆ ಜೊತೆಯಾಗಿ ಕಾಣಿಸ್ಕೊಳ್ತಾರೆ. ಇದುವೇ ಅಭಿಮಾನಿಗಳಿಗೆ ಸಾಕಷ್ಟು ತಲೆನೋವು ಆಗಿರುವ ವಿಷಯ. ಕೋಸ್ಟಾರ್‌ಗಳು ಸಿನಿಮಾ ಮಾಡ್ತಿರುವಾಗ ಒಟ್ಟಿಗೆ ಕಾಣಿಸ್ಕೊಳ್ಳೋದೆಲ್ಲಾ ಸಾಮಾನ್ಯ. ಆದರೆ ಮುಗಿದ್ಮೇಲೂ ಜೊತೆಯಾಗಿ ಹಿತವಾಗಿ ಎಂದು ಸುತ್ತಾಡಿದ್ರೆ ಏನನ್ನೋದು? ಅದೇ ಆಗ್ಬಿಟ್ಟಿದೆ ಈಗ. ಹೈದ್ರಾಬಾದ್‌ನಲ್ಲಿ ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಫ್ಯಾಮಿಲಿ (Family) ಸಮೇತ ಡಿನ್ನರ್ ಮಾಡುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ
ರಶ್ಮಿಕಾ ನಿಂತಲ್ಲಿ ನಿಲ್ಲಲ್ಲ ಕೂತಲ್ಲಿ ಕೂರಲ್ಲ. ಹೀಗಾಗೇ ಈಗ ತಗ್ಲಾಕ್ಕೊಂಡಿದ್ದಾರೆ. ಊಟ (Dinner) ಮಾಡ್ತಾ ಕುರ್ಚಿಯಿಂದ ಎದ್ದು ನಿಂತಲ್ಲೇ ಸಣ್ಣದೊಂದು ಸ್ಟೆಪ್ ಹಾಕಿದ್ದಾರೆ. ಆಗಲೇ ದೂರದ ಟೇಬಲ್‌ನಲ್ಲಿದ್ದ ಹುಡುಗರ ಮೊಬೈನಲ್‌ನಲ್ಲಿ ಸೆರೆಯಾಗಿದ್ದು. ಪಕ್ಕದಲ್ಲಿ ನೋಡಿದ್ರೆ ಇದ್ದಿದ್ದು ವಿಜಯ್ ದೇವರಕೊಂಡ. ಅವರ ಪಕ್ಕದಲ್ಲಿ ಇಡೀ ದೇವರಕೊಂಡ ಫ್ಯಾಮಿಲಿ.
ಅದೇನೇ ಇದ್ರೂ ರಶ್ಮಿಕಾ ಹಾಗೂ ವಿಜಯ್ ಬಗ್ಗೆ ಗುಸುಗುಸು ಹೆಚ್ಚಾಗೋದಕ್ಕೂ ಹೀಗೆ ಕಾಣಿಸ್ಕೊಂಡಿದ್ದಕ್ಕೂ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆದರೂ ಫ್ಯಾನ್ಸ್ ಕೇಳ್ತಿದ್ದಾರೆ. ಬೆಸ್ಟ್ ಫ್ರೆಂಡ್ಸ್ ಜೊತೆಯಾಗಿ ಊಟ ಮಾಡಿದ್ರೂ ತಪ್ಪೇನ್ರಪ್ಪಾ ಎಂದು. ಇದಕ್ಕೆ ರಶ್ಮಿಮಾ ಮತ್ತು ವಿಜಯ್ ದೇವರಕೊಂಡ ಅಷ್ಟೇ ಉತ್ತರ ನೀಡಬೇಕಿದೆ.