Tag: family

  • ನೇಗಿಲು ಹಿಡಿದು ಉಳುಮೆ ಮಾಡಿದ ಯುವತಿಯರು- ಕೊಟ್ಟ ಮಾತಿನಂತೆ ಟ್ರ್ಯಾಕ್ಟರ್ ನೀಡಿದ ಸೋನು ಸೂದ್

    ನೇಗಿಲು ಹಿಡಿದು ಉಳುಮೆ ಮಾಡಿದ ಯುವತಿಯರು- ಕೊಟ್ಟ ಮಾತಿನಂತೆ ಟ್ರ್ಯಾಕ್ಟರ್ ನೀಡಿದ ಸೋನು ಸೂದ್

    – ನಟನ ಕಾರ್ಯಕ್ಕೆ ಸಿಎಂ ಚಂದ್ರಬಾಬು ನಾಯ್ಡು ಮೆಚ್ಚುಗೆ
    – ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಸಹಾಯ

    ಮುಂಬೈ: ನಟ ಸೋನು ಸೂದ್ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದಾಗಿನಿಂದಲೂ ಕಷ್ಟದಲ್ಲಿರೋರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ಸೋನು ಸೂದ್ ಕೊಟ್ಟ ಮಾತಿನಂತೆ ಬಡ ರೈತರೊಬ್ಬರ ಕುಟುಂಬಕ್ಕೆ ಟ್ರ್ಯಾಕ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ‘ಮಹಾ’ ಪೊಲೀಸರಿಗೆ 25 ಸಾವಿರ ಫೇಸ್‍ಶೀಲ್ಡ್ ನೀಡಿದ ನಟ ಸೋನು ಸೂದ್

    ಕೆಲ ದಿನಗಳ ಹಿಂದೆ ರೈತರೊಬ್ಬರ ಇಬ್ಬರು ಹೆಣ್ಣುಮಕ್ಕಳು ತಂದೆಗೆ ಕೃಷಿಯಲ್ಲಿ ಸಹಾಯ ಮಾಡಲು ಮುಂದಾಗಿದ್ದರು. ಎತ್ತುಗಳಿಲ್ಲ ಕಾರಣ ಇಬ್ಬರು ಹೆಣ್ಣು ಮಕ್ಕಳಿಂದಲೇ ನೇಗಿಲನ್ನು ಎಳೆಯಿಸಿ, ಭೂಮಿ ಉಳುಮೆ ಮಾಡುತ್ತಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ರೈತ ನಾಗೇಶ್ವರ್ ರಾವ್ ಕುಟುಂಬ ಎಂದು ಗೊತ್ತಾಗಿದೆ. ಇದನ್ನೂ ಓದಿ: 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು

    ಈ ವಿಡಿಯೋ ನೋಡಿದ ನಟ ಅವರ ಕುಟುಂಬದ ಪರಿಸ್ಥಿತಿ ಬಗ್ಗೆ ತಿಳಿದುಕೊಂಡಿದ್ದು, ಅವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ನಟ, “ಇಬ್ಬರು ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸದ ಕಡೆ ಗಮನ ಹರಿಸಲಿ” ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಕಷ್ಟದಲ್ಲಿದ್ದ ಕುಟುಂಬಕ್ಕೆ ಮೊದಲು ಎತ್ತುಗಳನ್ನು ಕೊಡಿಸುವುದಾಗಿ ಹೇಳಿದ್ದರು.

    ನಂತರ ಮತ್ತೊಂದು ಟ್ವೀಟ್ ಮಾಡಿದ್ದ ಸೋನು, “ಈ ಕುಟುಂಬ ಜೋಡಿ ಎತ್ತುಗಳಿಗೆ ಅರ್ಹವಲ್ಲ, ಆದರೆ ಟ್ರ್ಯಾಕ್ಟರ್‌ಗೆ ಅರ್ಹರಾಗಿದ್ದಾರೆ. ಆದ್ದರಿಂದ ನಿಮಗೆ ಟ್ರ್ಯಾಕ್ಟರ್ ಕಳುಹಿಸುತ್ತೇನೆ. ಸಂಜೆ ಹೊತ್ತಿಗೆ ಟ್ರ್ಯಾಕ್ಟರ್ ಹೊಲವನ್ನು ಉಳುಮೆ ಮಾಡುತ್ತದೆ. ಆಶೀರ್ವದಿಸಿರಿ” ಎಂದು ಹೇಳಿದ್ದರು. ಅದರಂತೆಯೇ ಕೊಟ್ಟ ಮಾತಿನಂತೆ ಸೋನು ಸೂದ್ ಭಾನುವಾರ ಸಂಜೆ ಟ್ರ್ಯಾಕ್ಟರ್ ರೈತನ ಜಮೀನು ಸೇರಿದೆ.

    ಟ್ರ್ಯಾಕ್ಟರ್ ನೋಡಿ ಕುಟುಂಬದವರು ಸಂತಸಗೊಂಡಿದ್ದಾರೆ. ಅಲ್ಲದೇ ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುತ್ತಿರುವ ಸೋನು ಸೂದ್ ಕೆಲಸಕ್ಕೆ ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಟ್ವೀಟ್ ಮಾಡುವ ಮೂಲಕ ಶ್ಲಾಘಿಸಿದ್ದಾರೆ. ಜೊತೆಗೆ ರೈತರ ಇಬ್ಬರು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವುದಾಗಿ ಹೇಳಿದ್ದಾರೆ.

    ನಾವು ಕಳೆದ 15 ವರ್ಷಗಳಿಂದ ಮದನಪಲ್ಲಿನಲ್ಲಿ ವಾಸಿಸುತ್ತಿದ್ದೇವೆ. ಅಲ್ಲಿ ಚಹಾ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದೆವು. ಆದರೆ ಲಾಕ್‍ಡೌನ್ ಜಾರಿಗೆ ಬಂದ ನಂತರ ನಾವು ನಮ್ಮ ಸ್ಟಾಲ್ ಅನ್ನು ಮುಚ್ಚಿ ಒಂದು ತಿಂಗಳು ನಮ್ಮ ನಿವಾಸದಲ್ಲಿದ್ದೆವು. ಸ್ವಲ್ಪ ಹಣ ಮಾತ್ರ ಉಳಿದಿದೆ. ಹೀಗಾಗಿ ನಮ್ಮ ಗ್ರಾಮಕ್ಕೆ ವಾಪಸ್ ಬಂದಿದ್ದೇವೆ. ಆದರೆ ಭೂಮಿಯನ್ನು ಉಳುಮೆ ಮಾಡಲು ಟ್ರಾಕ್ಟರ್ ಬಾಡಿಗೆಗೆ ತೆಗೆದುಕೊಳ್ಳುವಷ್ಟು ಹಣ ನಮ್ಮಲ್ಲಿ ಇರಲಿಲ್ಲ. ಆದ್ದರಿಂದ ನಾವು ನಮ್ಮ ತಂದೆಗೆ ಸಹಾಯ ಮಾಡಲು ಪ್ರಾರಂಭಿಸಿದ್ದೆವು” ಎಂದು ರೈತನ ಹಿರಿಯ ಮಗಳು ಹೇಳಿದ್ದಾರೆ.

  • ಸಂಬಂಧಿಕರಾಗಿದ್ದರಿಂದ ಮನೆಯಲ್ಲಿ ಮದ್ವೆಗೆ ವಿರೋಧ- ಎಸ್ಕೇಪ್ ಆದ ಮರುದಿನ ಶವವಾಗಿ ಪತ್ತೆ

    ಸಂಬಂಧಿಕರಾಗಿದ್ದರಿಂದ ಮನೆಯಲ್ಲಿ ಮದ್ವೆಗೆ ವಿರೋಧ- ಎಸ್ಕೇಪ್ ಆದ ಮರುದಿನ ಶವವಾಗಿ ಪತ್ತೆ

    – 18ರ ಹುಡುಗಿಯ ಜೊತೆ 21ರ ಯುವಕ ಲವ್
    – ಒಂದೇ ಮರದಲ್ಲಿ ಪ್ರೇಮಿಗಳು ಆತ್ಮಹತ್ಯೆ

    ಲಕ್ನೋ: ತಮ್ಮ ಮದುವೆಗೆ ಕುಟುಂಬದವರು ಒಪ್ಪಿಗೆ ನೀಡಿಲ್ಲ ಎಂದು ಸಂಬಂಧಿಕರಾದ ಯುವಕ-ಯುವತಿ ಮನೆಯಿಂದ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ಶನಿವಾರ ಬೆಳಗ್ಗೆ ಇಬ್ಬರೂ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆ ಶಹಜಹಾನಪುರದ ಮದ್ನಾಪುರದ ಪಂಖಾಖೇಡಾ ಗ್ರಾಮದಲ್ಲಿ ನಡೆದಿದೆ. 21 ವರ್ಷದ ಯುವಕ ಮತ್ತು 18 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಷಕರು ತಮ್ಮ ಮದುವೆಯನ್ನು ವಿರೋಧಿಸಿದ ನಂತರ ಶುಕ್ರವಾರ ಮನೆಬಿಟ್ಟು ಓಡಿ ಹೋಗಿದ್ದರು.

    ಯುವಕ ಮತ್ತು ಯುವತಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಹುಡುಗ ಹುಡುಗಿಯ ಮಾವನ ಮಗನಾಗಿದ್ದನು. ಆದರೆ ಇವರ ಪ್ರೀತಿಗೆ ಎರಡು ಮನೆಯಲ್ಲಿ ವಿರೋಧ ಇತ್ತು. ಅಲ್ಲದೇ ಯುವಕನ ತಂದೆ ಬೇರೆ ಹುಡುಗಿಯ ಜೊತೆ ಮದುವೆ ಮಾಡಲು ಯೋಜಿಸುತ್ತಿದ್ದರು. ಇದೇ ಕಾರಣದಿಂದ ಯುವಕ ಶುಕ್ರವಾರ ತನ್ನ ತಂದೆಯೊಂದಿಗೆ ಜಗಳ ಮಾಡಿದ್ದಾನೆ. ನಂತರ ಮನೆಯಿಂದ ಹೊರ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ತುಂಬಾ ಸಮಯವಾದರೂ ಯುವಕ ಮನೆಗೆ ಬಂದಿರಲಿಲ್ಲ. ಕೊನೆಗೆ ಕುಟುಂಬದವರು ಮಗನನ್ನು ಹುಡುಕಲು ಶುರು ಮಾಡಿದ್ದಾರೆ. ಆಗ 18 ವರ್ಷದ ಹುಡುಗಿಯೂ ಕಾಣೆಯಾಗಿದ್ದಾಳೆ ಎಂದು ಅವರಿಗೆ ಗೊತ್ತಾಗಿದೆ. ಆದರೆ ಶನಿವಾರ ಬೆಳಗ್ಗೆ ಇಬ್ಬರೂ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಯುವಕ ಮತ್ತು ಯುವತಿ ಸಂಬಂಧಿಕರಾಗಿದ್ದರಿಂದ ಪೋಷಕರು ಅವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ನೊಂದ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ನಾವು ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಯಾರ ಮೇಲೆ ಅನುಮಾನ ಬಂದಿಲ್ಲ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

  • ಪೊಲೀಸರ ಹತ್ಯೆಗೈದಿದ್ದಕ್ಕೆ ನಾನೇ ಆತನನ್ನು ಗುಂಡಿಕ್ಕಿ ಕೊಲ್ಲಬೇಕು ಅಂದ್ಕೊಂಡಿದ್ದೆ- ವಿಕಾಸ್ ದುಬೆ ಪತ್ನಿ

    ಪೊಲೀಸರ ಹತ್ಯೆಗೈದಿದ್ದಕ್ಕೆ ನಾನೇ ಆತನನ್ನು ಗುಂಡಿಕ್ಕಿ ಕೊಲ್ಲಬೇಕು ಅಂದ್ಕೊಂಡಿದ್ದೆ- ವಿಕಾಸ್ ದುಬೆ ಪತ್ನಿ

    – 1 ವಾರ ಶಿಥಿಲಗೊಂಡ ಕಟ್ಟಡದಲ್ಲಿ ಜೀವನ ನಡೆಸಿದ್ದೇನೆ
    – ದುಬೆಗೆ ಒಂದು ವಿಚಿತ್ರ ಖಾಯಿಲೆ ಇತ್ತು

    ಲಕ್ನೋ: ಪೊಲೀಸರನ್ನು ಅಮಾನುಷವಾಗಿ ಕೊಂದಿದ್ದಕ್ಕೆ ನಾನೇ ನನ್ನ ಪತಿ ವಿಕಾಸ್ ದುಬೆಯನ್ನು ಕೊಲ್ಲಬೇಕು ಎಂದುಕೊಂಡಿದ್ದೆ ಎಂದು ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಪತ್ನಿ ರಿಚಾ ದುಬೆ ಹೇಳಿದ್ದಾರೆ.

    ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ಬಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವೇಳೆ ಪೊಲೀಸರ ಮೇಲೆ ದುಬೆ ಮತ್ತು ಅವನ ಸಹಚರರು ಗುಂಡಿನ ಮಳೆ ಸುರಿಸಿದ್ದರು. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಗಳು ಹಾಗೂ 4 ಪೊಲೀಸರು ಮೃತಪಟ್ಟಿದ್ದರು.

    ಈಗ ಈ ವಿಚಾರದ ಬಗ್ಗೆ ಮೊದಲ ಬಾರಿ ಮಾಧ್ಯಮಗಳ ಜೊತೆ ಮಾತನಾಡಿರುವ ವಿಕಾಸ್ ದುಬೆ ಪತ್ನಿ ರಿಚಾ, ಆತ ಮಾಡಿದಕ್ಕೆ ಕ್ಷಮೆಯೇ ಇಲ್ಲ. ಎಂಟು ಮಂದಿ ಅಮಾಯಕ ಪೊಲೀಸರ ಜೀವನ ಮತ್ತು ಕುಟುಂಬವನ್ನು ನಾಶ ಮಾಡಿದ್ದಾನೆ. ನಮಗೆ ಸಮಾಜದ ಮುಂದೆ ಮುಖ ತೋರಿಸದ ರೀತಿ ಮಾಡಿ ಹೋಗಿದ್ದಾನೆ. ಈ ಎಲ್ಲವನ್ನು ನೋಡುತ್ತಿದ್ದರೆ, ನಾನೇ ಆತನನ್ನು ಶೂಟ್ ಮಾಡಿ ಕೊಂದು ಬೇಡಬೇಕು ಎಂದು ಕೊಂಡಿದ್ದೆ ಎಂದು ಹೇಳಿದ್ದಾರೆ.

    ಅಂದು ಘಟನೆ ನಡೆದ ಜುಲೈ 2ರ ರಾತ್ರಿ ಸುಮಾರು 2 ಗಂಟೆಗೆ ನನಗೆ ಫೋನ್ ಮಾಡಿದ ದುಬೆ ನೀನು ಬಿಕ್ರು ಗ್ರಾಮವನ್ನು ಬಿಟ್ಟು ಓಡಿಹೋಗು ಎಂದು ಹೇಳಿದ್ದರು. ನಮ್ಮ ಮೇಲೆ ಪೊಲೀಸರು ಅಟ್ಯಾಕ್ ಮಾಡಿದ್ದಾರೆ. ನೀನು ಮಕ್ಕಳನ್ನು ಕರೆದುಕೊಂಡು ಇಲ್ಲಿಂದ ಹೋಗು ಎಂದು ತಿಳಿಸಿದರು. ನಾನು ಆಗ ಈ ಎಲ್ಲ ವಿಚಾರಗಳಿಂದ ನನಗೆ ಬೇಸರವಾಗಿದೆ ಎಂದು ಹೇಳಿದೆ. ಆತ ನನ್ನ ಮಾತನನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ನನಗೆ ಬೈದು ಕರೆಯನ್ನು ಕಟ್ ಮಾಡಿದ ಎಂದು ರಿಚಾ ತಿಳಿಸಿದ್ದಾರೆ.

    ನನಗೆ ಆತ ಮಾಡುವ ವ್ಯವಹಾರದ ಬಗ್ಗೆ ಜಾಸ್ತಿ ಗೊತ್ತಿರಲಿಲ್ಲ. ಜೊತೆಗೆ ಆತ ಯಾರ ಸಂಪರ್ಕದಲ್ಲಿ ಇದ್ದ ಎಂಬುದು ನನಗೆ ತಿಳಿದಿಲ್ಲ. ಆತ ಹೇಳಿದಾಗ ಮಾತ್ರ ನಾನು ಮಕ್ಕಳನ್ನು ಕರೆದುಕೊಂಡು ಬಿಕ್ರು ಗ್ರಾಮಕ್ಕೆ ಅವನನ್ನು ನೋಡಲು ಬರುತ್ತಿದ್ದೆ. ಇಲ್ಲಿಂದ ತಪ್ಪಿಸಿಕೊಂಡು ಹೋಗಿ ಮಗನೊಂದಿಗೆ ಒಂದು ವಾರಗಳ ಕಾಲ ಶಿಥಿಲಗೊಂಡ ಕಟ್ಟದ ಒಳಗೆ ಜೀವನ ಮಾಡಿದ್ದೇನೆ. ಆಗ ನನ್ನ ಮಕ್ಕಳ ಬಗ್ಗೆ ಮಾತ್ರ ಯೋಚಿಸಿದ್ದೆ. ನನಗೆ ಗೊತ್ತಿತ್ತು ನನ್ನ ಕುಟುಂಬವಾಗಲಿ ನನ್ನ ಅತ್ತೆಯಾಗಲಿ ನನ್ನ ಬೆಂಬಲಕ್ಕೆ ಬರುವುದಿಲ್ಲವೆಂದು ಎಂದು ರಿಚಾ ಹೇಳಿದ್ದಾಳೆ.

    ಇದೇ ವೇಳೆ ವಿಕಾಸ್ ದುಬೆಗೆ ಇದ್ದ ಒಂದು ವಿಚಿತ್ರ ಖಾಯಿಲೆಯ ಬಗ್ಗೆ ಹೇಳಿರುವ ರಿಚಾ, ಕಳೆದ ಕೆಲ ವರ್ಷಗಳ ಹಿಂದೆ ಆತ ಹೋಗುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಆಗ ಆತನ ತಲೆಗೆ ಪೆಟ್ಟಾಗಿತ್ತು. ಈ ವೇಳೆ ಅವನ ಮೆದುಳಿನಲ್ಲಿ ಗಾಳಿ ಗುಳ್ಳೆಗಳು ಆಗಿದ್ದವು. ಇದರಿಂದ ಆತನಿಗೆ ತನ್ನ ಕೋಪವನ್ನು ನಿಯಂತ್ರಣ ಮಾಡಲು ಆಗುತ್ತಿರಲಿಲ್ಲ. ಕಳೆದ ಮೂರು ನಾಲ್ಕು ತಿಂಗಳಿನಿಂದ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿದ್ದ. ಆದ್ದರಿಂದ ಹೀಗೆ ಆಗಿದೆ ಎಂದು ರಿಚಾ ಹೇಳಿದ್ದಾರೆ.

    ದುಬೆ ಎನ್‍ಕೌಂಟರ್:
    ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯನ್ನು ಜುಲೈ 10ರಂದು ಮುಂಜಾನೆ ಉತ್ತರಪ್ರದೇಶದ ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ವಿಕಾಸ್ ದುಬೆಯನ್ನು ಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಮಧ್ಯ ಪ್ರದೇಶದಿಂದ ಕಾನ್ಪುರಕ್ಕೆ ವಾಪಸ್ ಕರೆತರಲಾಗುತ್ತಿತ್ತು. ಆದರೆ ಕಾನ್ಪುರದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದ್ದಂತೆ ವಿಕಾಸ್ ದುಬೆ ಕುಳಿತಿದ್ದ ವಾಹನವು ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಪಲ್ಟಿಯಾಗಿದೆ.

    ಆಗ ಪೊಲೀಸರು ವಿಕಾಸ್‍ನನ್ನು ವಾಹನದಿಂದ ಹೊರಗೆ ಎಳೆದುಕೊಂಡಿದ್ದಾರೆ. ಈ ವೇಳೆ ಆರೋಪಿ ಗಾಯಗೊಂಡ ಪೊಲೀಸರೊಬ್ಬರಿಂದ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಕೂಡ ಗುಂಡಿನ ದಾಳಿ ಮಾಡಿದ್ದರು. ಈ ಶೂಟೌಟ್‍ನಲ್ಲಿ ಪೊಲೀಸರು ಆರೋಪಿ ವಿಕಾಸ್ ದುಬೆಯನ್ನ ಎನ್‍ಕೌಂಟರ್ ಮಾಡಿದ್ದರು. ಪರಿಣಾಮ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್ ಗೆ ಬಲಿಯಾಗಿದ್ದ.

  • ಜಮೀನಿಗಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ

    ಜಮೀನಿಗಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ

    -ಖಾರದ ಪುಡಿ ಎರಚಿ ದೊಣ್ಣೆಯಿಂದ ಹಲ್ಲೆ ಯತ್ನ

    ಚಿಕ್ಕಮಗಳೂರು: ಜಮೀನು ವಿಚಾರವಾಗಿ ಒಂದೇ ಗ್ರಾಮದ ಎರಡು ಕುಟುಂಬಗಳ ಮಧ್ಯೆಯೇ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಜಡಕನಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಜಡಕನಕಟ್ಟೆ ಗ್ರಾಮದ ಶಿವಪ್ಪ ಹಾಗೂ ತಿಮ್ಮಪ್ಪ ಎರಡು ಕುಟುಂಬಗಳ ಮಧ್ಯೆ ಈ ಮಾರಾಮಾರಿ ನಡೆದಿದೆ. ಎರಡು ಕುಟುಂಬಗಳು ಖಾರದಪುಡಿ ಎರಚಿ ದೊಣ್ಣೆ ಹಾಗೂ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ಜಮೀನು ನಮ್ಮದು ನಮಗೆ ಸೇರಬೇಕೆಂದು ಎರಡು ಕುಟುಂಬದ ಪುರುಷರು ಹಾಗೂ ಮಹಿಳೆಯರು ಗಲಾಟೆ ಮಾಡಿಕೊಂಡಿದ್ದಾರೆ. ಆದರೆ ಎರಡು ಕುಟುಂಬಗಳು ಜಮೀನಿನ ಮಧ್ಯೆಯೇ ಗಲಾಟೆ ಮಾಡಿಕೊಂಡರು ಪರಸ್ಪರ ಒಬ್ಬರ ಮೈ-ಕೈ ಮತ್ತೊಬ್ಬರು ಮುಟ್ಟಿಲ್ಲ. ಕಡಿಯುತ್ತೇನೆ, ಬಡಿಯುತ್ತೇನೆಂದು ಕೂಗಾಡಿದ್ದಾರೆ.

    ಇದು ಪೂರ್ವನಿಯೋಜಿತ ಗಲಾಟೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಜಮೀನಿಗೆ ಬರುವಾಗ ಕೃಷಿ ಸಲಕರಣೆಗಳ ಜೊತೆಗೆ ಮಹಿಳೆಯರು ಪ್ಲಾಸ್ಟಿಕ್ ಕವರ್ ನಲ್ಲಿ ಖಾರದ ಪುಡಿಯನ್ನು ತಂದಿದ್ದಾರೆ. ಗಲಾಟೆ ವೇಳೆ ಜಮೀನಿನಲ್ಲಿ ಒಬ್ಬರಿಗೊಬ್ಬರು ಖಾರದ ಪುಡಿಯನ್ನು ಎರಚಿಕೊಂಡು ದೊಣ್ಣೆ ಹಿಡಿದುಕೊಂಡು ಹಲ್ಲೆಗೆ ಮುಂದಾಗಿದ್ದಾರೆ. ಪ್ಲಾಸ್ಟಿಕ್ ಕವರಿನಲ್ಲಿ ಖಾರದ ಪುಡಿಯನ್ನ ಜಮೀನಿಗೆ ತಂದಿದ್ದನ್ನು ಗಮನಿಸಿದರೆ ಎರಡು ಕುಟುಂಬಗಳು ಗಲಾಟೆ ಮಾಡಲೇಬೇಕೆಂದು ಮೊದಲೇ ನಿರ್ಧರಿಸಿಕೊಂಡಿದ್ದರು ಅನ್ನೋದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.

    ಈ ಜಮೀನು ಯಾರಿಗೆ ಸೇರಬೇಕೆಂಬುದು ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ ಒಂದೇ ಗ್ರಾಮದ ಎರಡು ಕುಟುಂಬಗಳು ಹೀಗೆ ಜಮೀನಿಗಾಗಿ ಜಮೀನಿನಲ್ಲೇ ಜಗಳ ಮಾಡಿಕೊಂಡಿದ್ದಾರೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಪತ್ನಿ, ಮಕ್ಕಳ ಮೃತದೇಹವನ್ನ ಬಾವಿಯಲ್ಲಿ ನೋಡಿ ನೇಣಿಗೆ ಶರಣು

    ಪತ್ನಿ, ಮಕ್ಕಳ ಮೃತದೇಹವನ್ನ ಬಾವಿಯಲ್ಲಿ ನೋಡಿ ನೇಣಿಗೆ ಶರಣು

    – ಒಂದೇ ಕುಟುಂಬದ ನಾಲ್ವರು ಸಾವು
    – ಮಕ್ಕಳನ್ನ ಕರ್ಕೊಂಡು ಹೋಗಿ ಬಾವಿಗೆ ಹಾರಿದ ತಾಯಿ

    ಹೈದರಾಬಾದ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಪತಿ ಸುಧಾಕರ್ (35), ಸಿಂಧು ಪ್ರಿಯಾ (25) ಮತ್ತು ಮಕ್ಕಳಾದ ಲತಾ (7) ಮತ್ತು ಮಧು ಪ್ರಿಯಾ (5) ಮೃತ ಒಂದೇ ಕಟುಂಬದ ನಾಲ್ವರು. ಮೃತ ಪತಿ ಮತ್ತು ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜೊತೆಗೆ ಕೌಟುಂಬಿಕ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ಏನಿದು ಪ್ರಕರಣ?
    ಮೃತ ಸುಧಾಕರ್ ತನ್ನ ಸಂಬಂಧಿಯಾದ ಸಿಂಧು ಪ್ರಿಯಾಳನ್ನು 10 ವರ್ಷಗಳ ಹಿಂದೆ ವಿವಾಹವಾಗಿದ್ದನು. ಈ ದಂಪತಿಗೆ ಲತಾ ಮತ್ತು ಮಧು ಪ್ರಿಯಾ ಇಬ್ಬರು ಮಕ್ಕಳಿದ್ದರು. ಈ ದಂಪತಿಯ ಮಧ್ಯೆ ಆಗಾಗ ಚಿಕ್ಕ-ಪುಟ್ಟ ವಿಚಾರಗಳಿಗೂ ಜಗಳ ನಡೆಯುತ್ತಿತ್ತು. ಸೋಮವಾರ ಬೆಳಗ್ಗೆ ಕೂಡ ದಂಪತಿ ಜೋರಾಗಿ ಜಗಳವಾಡಿದ್ದಾರೆ. ಆಗ ಕೋಪಕೊಂಡ ಸುಧಾಕರ್ ಮನೆಯಿಂದ ಹೊರ ಹೋಗಿದ್ದನು.

    ಇತ್ತ ಸಿಂಧು ತನ್ನ ಇಬ್ಬರು ಪುತ್ರಿಯರನ್ನು ಕರೆದುಕೊಂಡು ಮನೆಯ ಸಮೀಪ ಜಮೀನಿನಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಗಳದ ನಂತರ ಮನೆಯಿಂದ ಹೊರಹೋಗಿದ್ದ ಸುಧಾಕರ್ ಸ್ವಲ್ಪ ಸಮಯದ ನಂತರ ಮನೆಗೆ ಬಂದು ಹೆಂಡತಿ ಮತ್ತು ಮಕ್ಕಳನ್ನು ಹುಡುಕಿದ್ದಾನೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಬಾವಿಯಲ್ಲಿ ಮೃತದೇಹವನ್ನು ಕಂಡು ಆಘಾತಗೊಂಡಿದ್ದಾನೆ.

    ಮೃತ ಪತ್ನಿ, ಮಕ್ಕಳನ್ನು ನೋಡಿ ಸಹಿಸಲಾಗದೆ ಸುಧಾಕರ್ ಕೂಡ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಧಾಕರ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ನೋಡಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಪತ್ನಿ, ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದು ಬಂದಿದೆ. ನಂತರ ಎಲ್ಲರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಡಿಎಸ್‍ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಮತ್ತೊಂದು ಮಗು ಆಗಮನ

    ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಮತ್ತೊಂದು ಮಗು ಆಗಮನ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಯಶ್ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗಿದೆ.

    ಹೌದು..ಯಶ್ ಸಹೋದರಿ ನಂದಿನಿ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಯಶ್ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗಿದೆ. ಅಲ್ಲದೇ ಯಶ್ ಮತ್ತೊಮ್ಮೆ ಮಾವ ಆಗಿದ್ದಾರೆ.

    ಯಶ್ ಸಹೋದರಿ ನಂದಿನಿ ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. “ಎರಡನೇ ಮಗುವಿಗೆ ತಾಯಿಯಾಗಿದ್ದೀನಿ. ಎರಡನೇ ಮಗು ಕೂಡ ಗಂಡು ಮಗು” ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಮುದ್ದಾದ ಮಗುವಿನ ಪಾದಗಳ ವಿಡಿಯೋವನ್ನು ಶೇರ್ ಮಾಡಿದ್ದಾರೆ.

    ಯಶ್ ಸಹೋದರಿ ನಂದಿನಿ ಉದ್ಯಮಿಯೊಬ್ಬರ ಜೊತೆ ಮದುವೆಯಾಗಿದ್ದು, ಇವರ ವಿವಾಹವಾಗಿ 8 ವರ್ಷ ಕಳೆದಿದೆ. ಈ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದೆ. ಇತ್ತೀಚಿಗಷ್ಟೆ ಅಂದರೆ ಏಪ್ರಿಲ್ ತಿಂಗಳಲ್ಲಿ ನಂದಿನಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಯಶ್ ಮನೆಗೆ ಮತ್ತೊಂದು ಮಗು ಆಗಮಿಸಿದ್ದಕ್ಕೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

    https://www.instagram.com/p/CC3BDQdHvns/?utm_source=ig_embed

    ನಟ ಯಶ್‍ಗೆ ಸಹೋದರಿ ಎಂದರೆ ತುಂಬಾ ಪ್ರೀತಿ. ನಂದಿನಿ ಅವರು ಕೂಡ ಪ್ರತಿವರ್ಷ ರಕ್ಷಾಬಂಧನ ದಿನ ಪ್ರೀತಿಯ ಅಣ್ಣನಿಗೆ ರಾಕಿ ಕಟ್ಟುತ್ತಾರೆ. ಆ ಫೋಟೋಗಳನ್ನು ಯಶ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

    ಈಗಾಗಲೇ ಯಶ್ ಮತ್ತು ರಾಧಿಕಾ ದಂಪತಿಗೆ 2018 ಡಿಸೆಂಬರ್‌ನಲ್ಲಿ ಐರಾ ಯಶ್ ಜನಿಸಿದ್ದಳು. ಒಂದು ವರ್ಷದೊಳಗೆ ಅಂದರೆ 2019 ಅಕ್ಟೋಬರ್‌ನಲ್ಲಿ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯಕ್ಕೆ ಎರಡು ಮಕ್ಕಳ ಲಾಲನೆ-ಪಾಲನೆಯಲ್ಲಿ ರಾಕಿಂಗ್ ದಂಪತಿ ಬ್ಯುಸಿಯಾಗಿದ್ದಾರೆ.

  • 22 ವರ್ಷದ ಹಿಂದೆಯೇ ಪೊಲೀಸರನ್ನು ಓಡಾಡಿಸಿಕೊಂಡು ಹೊಡೆದಿತ್ತು ದುಬೆ ಫ್ಯಾಮಿಲಿ

    22 ವರ್ಷದ ಹಿಂದೆಯೇ ಪೊಲೀಸರನ್ನು ಓಡಾಡಿಸಿಕೊಂಡು ಹೊಡೆದಿತ್ತು ದುಬೆ ಫ್ಯಾಮಿಲಿ

    – 1998ರಲ್ಲಿ ನಡೆದ ಭಯಾನಕ ಘಟನೆ ತನಿಖೆ ವೇಳೆ ಬಯಲು

    ಲಕ್ನೋ: ಮೃತ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಕುಟುಂಬ 22 ವರ್ಷದ ಹಿಂದೆಯೇ ಪೊಲೀಸರನ್ನು ಅಟ್ಟಾಡಿಸಿಕೊಂಡು ಹೊಡೆದಿತ್ತು ಎಂಬ ಭಯಾನಕ ಸುದ್ದಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಹೌದು ಎಂಟು ಪೊಲೀಸರನ್ನು ನರಬಲಿ ಪಡೆದಿದ್ದ ವಿಕಾಸ್ ದುಬೆ, ಈ ಹಿಂದೆಯೂ ಕೂಡ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಈ ಹಿಂದೆ ಕೂಡ ದುಬೆಯನ್ನು ಅರೆಸ್ಟ್ ಮಾಡಲು ಬಿಕ್ರು ಗ್ರಾಮಕ್ಕೆ ಹೋಗಿದ್ದ ಪೊಲೀಸರನ್ನು ದುಬೆ ಕುಟುಂಬ ಸೇರಿಕೊಂಡು ಹೊಡೆದು ಅಲ್ಲಿಂದ ಓಡಿಸಿತ್ತು. ಅಂದು ಯಾವ ಪೊಲೀಸ್ ಮೃತಪಟ್ಟಿರಲಿಲ್ಲ.

    1998ರಲ್ಲಿ ಕೊಲೆ ಅಪರಾಧದ ಮೇಲೆ ಬೇಕಾಗಿದ್ದ ವಿಕಾಸ್ ದುಬೆ ಮತ್ತು ಆತನ ಸಹೋದರ ದೀಪು ದುಬೆಯನ್ನು ಅರೆಸ್ಟ್ ಮಾಡಲು ಪೊಲೀಸರು ಅವರ ಗ್ರಾಮಕ್ಕೆ ತೆರೆಳಿದ್ದರು. ಈ ವೇಳೆ ಆಯುಧಗಳ ಸಮೇತ ಬಂದು ರಸ್ತೆಯನ್ನು ಬ್ಲಾಕ್ ಮಾಡಿದ್ದ ದುಬೆ ಕುಟುಂಬ, ಪೊಲೀಸರನ್ನು ಅಟ್ಟಾಡಿಸಿಕೊಂಡು ಹೊಡೆದಿತ್ತು. ಅಂದು ಕಡಿಮೆ ಪೊಲೀಸ್ ಸಿಬ್ಬಂದಿ ಇದ್ದ ಕಾರಣ ಪೊಲೀಸರು ತಪ್ಪಿಸಿಕೊಂಡು ಬಂದಿದ್ದರು. ಅಂದು ಕೂಡ ವಿಕಾಸ್ ದುಬೆ ತಪ್ಪಿಸಿಕೊಂಡಿದ್ದ.

    ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು. ಈ ವೇಳೆ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಗಳು ಹಾಗೂ 4 ಪೊಲೀಸರು ಮೃತಪಟ್ಟಿದ್ದರು.

    ದುಬೆ ಎನ್‍ಕೌಂಟರ್:
    ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯನ್ನು ಜುಲೈ 10ರಂದು ಮುಂಜಾನೆ ಉತ್ತರಪ್ರದೇಶದ ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ವಿಕಾಸ್ ದುಬೆಯನ್ನು ಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಮಧ್ಯ ಪ್ರದೇಶದಿಂದ ಕಾನ್ಪುರಕ್ಕೆ ವಾಪಸ್ ಕರೆತರಲಾಗುತ್ತಿತ್ತು. ಆದರೆ ಕಾನ್ಪುರದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದ್ದಂತೆ ವಿಕಾಸ್ ದುಬೆ ಕುಳಿತಿದ್ದ ವಾಹನವು ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಪಲ್ಟಿಯಾಗಿದೆ.

    ಆಗ ಪೊಲೀಸರು ವಿಕಾಸ್‍ನನ್ನು ವಾಹನದಿಂದ ಹೊರಗೆ ಎಳೆದುಕೊಂಡಿದ್ದಾರೆ. ಈ ವೇಳೆ ಆರೋಪಿ ಗಾಯಗೊಂಡ ಪೊಲೀಸರೊಬ್ಬರಿಂದ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಕೂಡ ಗುಂಡಿನ ದಾಳಿ ಮಾಡಿದ್ದರು. ಈ ಶೂಟೌಟ್‍ನಲ್ಲಿ ಪೊಲೀಸರು ಆರೋಪಿ ವಿಕಾಸ್ ದುಬೆಯನ್ನ ಎನ್‍ಕೌಂಟರ್ ಮಾಡಿದ್ದರು. ಪರಿಣಾಮ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್‍ಗೆ ಬಲಿಯಾಗಿದ್ದ.

  • ಕೊರೊನಾ ಗೆದ್ದ ನರ್ಸ್ ಕುಟುಂಬದ 7 ಜನರಿಂದ ಸೋಂಕಿನ ಬಗ್ಗೆ ಜಾಗೃತಿ

    ಕೊರೊನಾ ಗೆದ್ದ ನರ್ಸ್ ಕುಟುಂಬದ 7 ಜನರಿಂದ ಸೋಂಕಿನ ಬಗ್ಗೆ ಜಾಗೃತಿ

    ಧಾರವಾಡ: ಧಾರವಾಡದ ಕೊರೊನಾ ವಾರಿಯರ್ ಕುಟುಂಬವೊಂದು ಕೊರೊನಾ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದೆ. ಈಗ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

    ಧಾರವಾಡ ಜಿಲ್ಲಾಸ್ಪತ್ರೆ ನರ್ಸ್ ಹಾಗೂ ಕುಟುಂಬ ಸದಸ್ಯರು ಗುಣಮುಖರಾಗಿ ಬಂದಿದ್ದು. ಕುಟುಂಬದ 7 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಗೆ ಮೊದಲು ಸೋಂಕು ತಗುಲಿದ್ದರಿಂದ ಬಳಿಕ ಕುಟುಂಬ ಇತರ ಸದಸ್ಯರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ನರ್ಸ್ ಮತ್ತು ಪತಿ, ಮಗಳು, ಅತ್ತೆ, ಮಾವ, ನಾದಿನಿ ಹಾಗೂ ನಾದಿನಿ ಮಗನಿಗೆ ಸೋಂಕು ತಗುಲಿದ್ದರಿಂದ ಇವರೆಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದರು.

    ಮನೆಗೆ ಆಗಮಿಸಿದ ಬಳಿಕ ಈ ಕುಟುಂಬ ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯದ ಸಂದೇಶವನ್ನು ರವಾನಿಸಿದೆ. ಕೊರೊನಾಗೆ ಹೆದರಬೇಡಿ ಆದರೆ ಎಚ್ಚರಿಕೆವಹಿಸಿ ಅಂತಾ ಸಂದೇಶ ನೀಡಿದ್ದಾರೆ. ಜೊತೆಗೆ ಒಂದೇ ಕುಟುಂಬದ ಎಲ್ಲರನ್ನೂ ಒಂದೇ ಆಸ್ಪತ್ರೆಯಲ್ಲಿ ಅಥವಾ ಅವರ ಮನೆಯಲ್ಲೇ ಕ್ವಾರಂಟೈನ್ ಮಾಡುವುದು ಒಳ್ಳೆಯದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಯಾರೂ ಭಯಪಡದೇ ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದು ಕೊರೊನಾ ಜಾಗೃತಿಯ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

  • ‘ನಾನು ನಗಲು ಕಾರಣ ಚಿರು’- ಮೇಘನಾರ ಭಾವನಾತ್ಮಕ ಮಾತು

    ‘ನಾನು ನಗಲು ಕಾರಣ ಚಿರು’- ಮೇಘನಾರ ಭಾವನಾತ್ಮಕ ಮಾತು

    – ನಗುವಿನ ಮೂಲಕ ಸ್ನೇಹಿತರಿಂದ ಗೌರವ ನಮನ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ದೈಹಿಕವಾಗಿ ದೂರವಾಗಿ ಇಂದಿಗೆ ಒಂದು ತಿಂಗಳು ಆಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬದವರು, ಆಪ್ತ ಸ್ನೇಹಿತರು ವಿಶೇಷವಾಗಿ ಚಿರುವನ್ನು ಸ್ಮರಿಸಿಕೊಳ್ಳುವ ಮೂಲಕ ವಂದನೆ ಸಲ್ಲಿಸಿದ್ದಾರೆ.

    ಚಿರಂಜೀವಿ ಸರ್ಜಾ ಅವರು ಜೂನ್ 7 ರಂದು ಹೃದಯಾಘಾತವಾಗಿ ಮೃತಪಟ್ಟಿದ್ದರು. ಸಹೋದರ ಧ್ರುವ ಸರ್ಜಾ ತಮ್ಮ ಆಸೆಯಂತೆ ಅಣ್ಣ ಚಿರಂಜೀವಿಯ ಅಂತ್ಯಕ್ರಿಯೆಯನ್ನು ಕನಕಪುರದಲ್ಲಿರುವ ನೆಲಗುಳಿಯ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ನೆರವೇರಿಸಿದ್ದರು. ಚಿರಂಜೀವಿ ಸರ್ಜಾ ಅವರು ದೈಹಿಕವಾಗಿ ದೂರವಾಗಿ ಇಂದಿಗೆ ತಿಂಗಳು ಕಳೆಯಲಿದೆ.

    https://www.instagram.com/p/CCU9lSsnXuA/?igshid=yk5kvzczrj6c

    ನಗುಮೊಗದ ಯುವ ಪ್ರತಿಭೆ ಚಿರು, ಇವರು ಸದಾ ನಗುತ್ತಿದ್ದರು. ಹೀಗಾಗಿ ಅವರ ಕುಟುಂಬಸ್ಥರು ಮತ್ತು ಆಪ್ತರು ಚಿರುವಿನ ನಗುವನ್ನು ಚಿರಾಯುವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಅವರಿಗೆ ನಗುವಿನ ಮೂಲಕ ಗೌರವ ಸಲ್ಲಿಸಿದ್ದಾರೆ. ಚಿರಂಜೀವಿ ಸರ್ಜಾ ಮೃತಪಟ್ಟು ಒಂದು ತಿಂಗಳ ಕಳೆದ ಹಿನ್ನೆಲೆಯಲ್ಲಿ ಆಪ್ತರು, ಮನೆಯವರೆಲ್ಲರೂ ಒಂದುಗೂಡಿದ್ದಾರೆ. ಈ ವೇಳೆ ಅವರೆಲ್ಲರೂ ಚಿರಂಜೀವಿ ಫೋಟೋ ಮುಂದೆ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರತಿಯೊಬ್ಬರು ನಗುವ ಮೂಲಕ ಚಿರುವಿಗೆ ಗೌರವ ಸಲ್ಲಿಸಿದ್ದಾರೆ.

    https://www.instagram.com/p/CCU9nh7n_KJ/?igshid=dtxe3dq150j1

    ಚಿರು ಪತ್ನಿ ಮೇಘನಾ ರಾಜ್ ಚಿರುವಿನ ಫೋಟೋ ಮತ್ತು ಸ್ನೇಹಿತರು, ಆಪ್ತರು ನಗು ಮುಖದಿಂದ ತೆಗೆಸಿಕೊಂಡಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ “ನನ್ನ ಪ್ರೀತಿಯ ಚಿರು…ಚಿರು ಒಂದು ಸೆಲೆಬ್ರೇಷನ್ ಆಗಿದೆ. ಈ ಆಚರಣೆ ಯಾವಾಗಲೂ ಇರುತ್ತದೆ. ಈಗಲೂ ಮತ್ತು ಮುಂದೆಯೂ ಇರುತ್ತದೆ. ಬೇರೆ ಯಾವ ರೀತಿಯನ್ನು ನೀನು ಇಷ್ಟಪಡುವುದಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ ನಾನು ನಗಲು ಕಾರಣ ಚಿರು” ಎಂದು ಚಿರುವಿನ ನಗುವಿನ ಬಗ್ಗೆ ನೋವಿನಿಂದ ಬರೆದುಕೊಂಡಿದ್ದಾರೆ.

    https://www.instagram.com/p/CCU9fvdn22q/?igshid=1k7j82646wclx

    ಅಷ್ಟೇ ಅಲ್ಲದೇ “ಅವರು ನನಗೆ ಕೊಟ್ಟಿದ್ದು ಅತ್ಯಂತ ಅಮೂಲ್ಯವಾದುದ್ದು ನನ್ನ ಕುಟುಂಬ…ನಾವು ಮಾತ್ರವೇ. ನಾವು ಯಾವಾಗಲೂ ಒಟ್ಟಿಗೆ ಇರುತ್ತೇವೆ ಬೇಬಿಮಾ. ಪ್ರತಿ ದಿನವೂ ನೀವು ಇಷ್ಟಪಡುವ ರೀತಿಯಲ್ಲಿಯೇ ಇರುತ್ತೇವೆ. ಪ್ರೀತಿ, ನಗು, ಕುಚೇಷ್ಟೇಗಳು, ಪ್ರಾಮಾಣಿಕತೆ ಮತ್ತು ಮುಖ್ಯವಾಗಿ ಒಗ್ಗಟ್ಟಿನಿಂದ ಒಟ್ಟಾಗಿರುತ್ತೇವೆ. ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ ಬೇಬಿಮಾ” ಎಂದು ಮೇಘನಾ ಹೇಳಿದ್ದಾರೆ.

    ಕಳೆದ ದಿನ ಕುಟುಂಬ ಸದಸ್ಯರು ಫಾರ್ಮ್ ಹೌಸ್‍ಗೆ ಭೇಟಿ ಕೊಟ್ಟು ಚಿರಂಜೀವಿ ಸರ್ಜಾ ತಿಂಗಳ ಕಾರ್ಯ ಮಾಡಿದ್ದಾರೆ. ಚಿರು ಸ್ಮಾರಕಕ್ಕೆ ಸೋದರ ಧ್ರುವ ಸರ್ಜಾ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಅರ್ಜುನ್ ಸರ್ಜಾ, ಮೇಘನಾ ರಾಜ್, ಚಿರು ಅಪ್ಪ, ಅಮ್ಮ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಚಿರಂಜೀವಿ ಸರ್ಜಾ ಅವರನ್ನು ನೆನೆದು ಕುಟುಂಬ ಸದಸ್ಯರು ಕಣ್ಣೀರಿಟ್ಟಿದ್ದರು.

  • ಚಿರು ಸಮಾಧಿಗೆ ಸೋದರ ಧ್ರುವ ಸರ್ಜಾ ಪೂಜೆ- ಕಣ್ಣೀರಿಟ್ಟ ಕುಟುಂಬಸ್ಥರು

    ಚಿರು ಸಮಾಧಿಗೆ ಸೋದರ ಧ್ರುವ ಸರ್ಜಾ ಪೂಜೆ- ಕಣ್ಣೀರಿಟ್ಟ ಕುಟುಂಬಸ್ಥರು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ದೈಹಿಕವಾಗಿ ದೂರವಾಗಿ ನಾಳೆಗೆ ಒಂದು ತಿಂಗಳು ಆಗಲಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಕನಕಪುರದ ನೆಲಗುಳಿಯ ಫಾರ್ಮ್ ಹೌಸ್‍ಗೆ ಭೇಟಿ ಕೊಟ್ಟಿದ್ದಾರೆ.

    ಚಿರಂಜೀವಿ ಸರ್ಜಾ ಅವರು ಜೂನ್ 7 ರಂದು ಹೃದಯಾಘಾತವಾಗಿ ಮೃತಪಟ್ಟಿದ್ದರು. ಸಹೋದರ ಧ್ರುವ ಸರ್ಜಾ ತಮ್ಮ ಆಸೆಯಂತೆ ಅಣ್ಣ ಚಿರಂಜೀವಿಯ ಅಂತ್ಯಕ್ರಿಯೆಯನ್ನು ಕನಕಪುರದಲ್ಲಿರುವ ನೆಲಗುಳಿಯ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ನೆರವೇರಿಸಿದ್ದರು. ಚಿರಂಜೀವಿ ಸರ್ಜಾ ಅವರು ದೈಹಿಕವಾಗಿ ದೂರವಾಗಿ ಜುಲೈ 7ಕ್ಕೆ ಒಂದು ತಿಂಗಳು ಕಳೆಯಲಿದೆ.

    ಇಂದೇ ಕುಟುಂಬ ಸದಸ್ಯರು ಫಾರ್ಮ್ ಹೌಸ್‍ಗೆ ಭೇಟಿ ಕೊಟ್ಟು ಚಿರಂಜೀವಿ ಸರ್ಜಾ ತಿಂಗಳ ಕಾರ್ಯ ಮಾಡಿದ್ದಾರೆ. ಚಿರು ಸಮಾಧಿ ಗೆ ಸೋದರ ಧ್ರುವ ಸರ್ಜಾ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಅರ್ಜುನ್ ಸರ್ಜಾ, ಮೇಘನಾ ರಾಜ್, ಚಿರು ಅಪ್ಪ, ಅಮ್ಮ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಚಿರಂಜೀವಿ ಸರ್ಜಾ ಅವರನ್ನು ನೆನೆದು ಕುಟುಂಬ ಸದಸ್ಯರು ಕಣ್ಣೀರಿಟ್ಟಿದ್ದಾರೆ.

    ಇತ್ತೀಚೆಗಷ್ಟೆ ನಟ ಧ್ರುವ ಸರ್ಜಾ ಅವರಿಗೆ ಆರೋಗ್ಯ ಸಮಸ್ಯೆ ಆಗಿದೆ. ಲೋ ಬಿಪಿಯಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ಈ ಎಲ್ಲಾ ಗಾಸಿಪ್ ಗಳಿಗೆ ಧ್ರುವ ಆಪ್ತ ವಲಯ ಉತ್ತರ ಕೊಟ್ಟಿತ್ತು.

    ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಆರಾಮಾಗಿದ್ದಾರೆ. ತಂದೆ, ತಾಯಿ ಕೂಡ ಆರಾಮಾಗಿದ್ದಾರೆ ಅಂತ ಧ್ರುವ ಆಪ್ತವಲಯ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿತ್ತು.