Tag: family

  • ಅಂಗಳಕ್ಕೆ ಬಂತು ಪಕ್ಕದ್ಮನೆ ಕೋಳಿ – ಕುಟುಂಬಗಳ ಮಧ್ಯೆ ದೊಣ್ಣೆಯಿಂದ ಬಡಿದಾಟ

    ಅಂಗಳಕ್ಕೆ ಬಂತು ಪಕ್ಕದ್ಮನೆ ಕೋಳಿ – ಕುಟುಂಬಗಳ ಮಧ್ಯೆ ದೊಣ್ಣೆಯಿಂದ ಬಡಿದಾಟ

    ಉಡುಪಿ: ಕೋಳಿಯೊಂದು ಪದೇ ಪದೇ ಪಕ್ಕದ ಮನೆಗೆ ಹೋಗುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ಬಡಿಗೆ ತೆಗೆದುಕೊಂಡು ಬಡಿದಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆ ಸಮೀಪದ ಉಳ್ಳೂರು ಇಂಥದ್ದೊಂದು ಗಲಾಟೆ ಸಾಕ್ಷಿಯಾಗಿದೆ. ರವಿರಾಜ್ ಶೆಟ್ಟಿ ಎಂಬಾತ ದೊಣ್ಣೆ ತೆಗೆದುಕೊಂಡು ವಾರಿಜಾ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದಾನೆ. ರವಿರಾಜ್ ಮನೆಯ ಕೋಳಿ ವಾರಿಜಾ ಅವರ ಅಂಗಳಕ್ಕೆ ಹೋಗಿದೆ. ಅದನ್ನು ವಾರಿಜ ಓಡಿಸಿದ್ದಾರೆ. ಅಲ್ಲದೆ ಕೋಳಿ ಪದೇಪದೇ ಬರುತ್ತದೆ ಎಂದು ವಾರಿಜಾ ಬೈದಿದ್ದಾರೆ. ಈ ವಿಚಾರ ರಂಪಾಟಕ್ಕೆ ಕಾರಣವಾಗಿದೆ.

    ಮಾತಿಗೆ ಮಾತು ಬೆಳೆದು ಜಗಳ ಮಿತಿ ಮೀರಿ ದೊಣ್ಣೆ ತೆಗೆದುಕೊಂಡು ಮಹಿಳೆಯರ ರವಿರಾಜ್ ಹಲ್ಲೆ ಮಾಡಿದ್ದಾನೆ. ಮಹಿಳೆಯರನ್ನು ಎಳೆದಾಡಿ ಅವಾಚ್ಯವಾಗಿ ಬೈದಿದ್ದಾನೆ. ಆತನಿಗೆ ಮಹಿಳೆಯೊಬ್ಬರು ಬೆಂಬಲ ನೀಡಿದ್ದು, ವಾರಿಜಾ ಅವರ ಬೆಂಬಲಕ್ಕೆ ಬಂದ ಮಹಿಳೆಯ ಮೇಲೂ ಹಲ್ಲೆಯಾಗಿದೆ.

    ಕೋಳಿ ಜಗಳದ ಹಿಂದೆ ಹಳೆಯ ವೈಷಮ್ಯ ಜಮೀನಿನ ತಗಾದೆ ಇರಬಹುದು ಎನ್ನಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಎರಡೂ ಕುಟುಂಬವನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆದು, ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ.

  • ಆಸ್ತಿಯನ್ನು ನನ್ನ ಅಮ್ಮನಿಗೆ ಹಸ್ತಾಂತರಿಸಿ – ಹೆಣ್ಣು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

    ಆಸ್ತಿಯನ್ನು ನನ್ನ ಅಮ್ಮನಿಗೆ ಹಸ್ತಾಂತರಿಸಿ – ಹೆಣ್ಣು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

    – ಆತ್ಮಹತ್ಯೆಗೂ ಮುನ್ನ ಸಾಕುನಾಯಿಗೂ ವಿಷವಿಕ್ಕಿದ್ರು
    – ಡೆತ್‍ನೋಟ್ ನಲ್ಲಿ ಮಹಿಳೆ ಹೇಳಿದ್ದೇನು?

    ಚೆನ್ನೈ: ಮನೆಯ ಯಜಮಾನನ ಸಾವಿನಿಂದ ಖಿನ್ನತೆಗೊಳಗಾಗಿದ್ದ ಕುಟುಂಬವೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮಧುರೈನಲ್ಲಿ ನಡೆದಿದೆ.

    ಮೃತರನ್ನು ವಲಮರ್ತಿ(44) ಮಕ್ಕಳಾದ ಎ ಅಲಿಗಾ(20) ಹಾಗೂ ಎ ಪ್ರೀತಿ(17) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಇವರು ಸಾಕು ನಾಯಿಗೂ ವಿಷವಿಕ್ಕಿ ಕೊಂದಿದ್ದಾರೆ.

    ವಲಮರ್ತಿ ಪತಿ ಅರುಣ್ ಪಂಡಿಯಾನ(44) ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಕಟ್ಟಡದ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ತ್ರಿಚಿಯಿಂದ ಮಧುರೈಗೆ ಶಿಫ್ಟ್ ಆಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಅವರು ಮಧುರೈನಲ್ಲಿರುವ ಪತ್ನಿ ಸಹೋದರಿ ಮನೆಯಲ್ಲಿ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅರುಣ್ ಜುಲೈ ತಿಂಗಳಿನಲ್ಲಿ ಮೃತಪಟ್ಟಿದ್ದರು.

    ಪತಿಯ ಅಚಾನಕ್ ಸಾವಿನ ಬಳಿಕ ವಲಮರ್ತಿ ಬದುಕಿನ ಬಂಡಿ ಸಾಗಿಸಲು ಕಷ್ಟ ಪಡುತ್ತಿದ್ದು, ಖಿನ್ನತೆಗೆ ಜಾರಿದ್ದರು. ಇದೇ ಕಾರಣದಿಂದ ತನ್ನ ಮಕ್ಕಳಿಬ್ಬರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದರು.

    ವಲಮರ್ತಿ ಸಹೋದರಿ ಸರಸ್ವತಿ ಮನೆಯ ಬಾಗಿಲು ತೆರೆಯುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ತಾಯಿ, ಇಬ್ಬರು ಮಕ್ಕಳು ಹಾಗೂ ನಾಯಿ ಶವ ನೆಲದ ಮೇಲೆ ಬಿದ್ದಿತ್ತು. ಮೃತರ ಫೋಟೋದ ಬಳಿ ಡೆತ್ ನೋಟ್ ಕೂಡ ಪತ್ತೆಯಾಗಿದೆ.

    ತಮ್ಮ ಆಸ್ತಿಗಳನ್ನು ತಾಯಿ ಲಕ್ಷ್ಮಿಗೆ ಹಸ್ತಾಂತರಿಸಬೇಕಿದೆ. ಹೆಣ್ಣುಮಕ್ಕಳು ತಮ್ಮ ತಂದೆ ಇಲ್ಲದೆ ಬದುಕುವುದು ಕಷ್ಟ ಎಂದು ಹೇಳಿದರು. ಸಾಕು ನಾಯಿಯನ್ನು ತಮ್ಮ ಶವದೊಂದಿಗೆ ಹೂಳುವಂತೆ ವರಮತಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಧುರೈ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮಧುರೈ ಪೊಲೀಸರು ಬೇರೆ ಆಯಾಮಗಳಿಂದ ಪರಿಶೀಲನೆ ನಡೆಸಿದ್ದಾರೆ.

  • ಕಾಡಾನೆ ದಾಳಿಯಿಂದ ಒಂದೇ ಕುಟುಂಬದ 9 ಮಂದಿಯನ್ನು ರಕ್ಷಿಸಿದ ಜಿಮ್ಮಿ!

    ಕಾಡಾನೆ ದಾಳಿಯಿಂದ ಒಂದೇ ಕುಟುಂಬದ 9 ಮಂದಿಯನ್ನು ರಕ್ಷಿಸಿದ ಜಿಮ್ಮಿ!

    – ಶೆಡ್ ಒಳಗಡೆ ನುಗ್ಗಲು ಯತ್ನಿಸಿದ ಆನೆ
    – ಬೊಗಳುತ್ತಲೇ ಕಾಡಿಗೆ ಕಳಿಸುವಲ್ಲಿ ಶ್ವಾನ ಯಶಸ್ವಿ

    ತಿರುವನಂತಪುರಂ: ಶ್ವಾನವೊಂದು ಒಂದೇ ಕುಟುಂಬದ 9 ಮಂದಿಯನ್ನು ಕಾಡಾನೆ ದಾಳಿಯಿಂದ ರಕ್ಷಿಸಿದ ಘಟನೆ ಕೇರಳದಲ್ಲಿ ನಡೆದಿದೆ.

    ಉದಿರಂಕುಲಂನ ಸುಂದರ್ ಅವರ ಶೆಡ್ ಹತ್ತಿರ ಆನೆಯೊಂದು ಬಂದಿದೆ. ಈ ವೇಳೆ ಆನೆಯನ್ನು ಕಂಡ ಸಾಕು ನಾಯಿ ಜಿಮ್ಮಿ ಜೋರಾಗಿ ಬೊಗಳಿದ್ದು, ಮಾತ್ರವಲ್ಲದೆ ಶೆಡ್ ನ ಶೀಟ್ ಎಳೆಯುವ ಮೂಲಕ ಮನೆ ಮಂದಿಯನ್ನು ಜಾಗೃತರನ್ನಾಗಿಸಿ, ಆನೆ ಬಂದಿರುವ ಬಗ್ಗೆ ಎಚ್ಚರಿಕೆ ನೀಡಿದೆ. ಇದರಿಂದ ಎಚ್ಚೆತ್ತುಕೊಂಡ ಮನೆಯವರು ಆನೆ ದಾಳಿಯಿಂದ ತಪ್ಪಿಸಿಕೊಳ್ಳುವ ಮೂಲಕ ಭಾರೀ ಅವಘಡದಿಂದ ಪಾರಾಗಿದ್ದಾರೆ.

    ಕರಿಮುರಿಯಂ ಅರಣ್ಯ ಪ್ರದೇಶದಲ ಶೆಡ್ ನಲ್ಲಿ ಸುಂದರನ್ ಅವರ 9 ಮಂದಿಯ ಕುಟುಂಬ ವಾಸವಾಗಿತ್ತು. ಸುಂದರನ್ ಹಾಗೂ ಅವರ ಪತ್ನಿ ಸೀತಾ ಶೆಡ್‍ನ ಅಡುಗೆ ಮನೆಯಲ್ಲಿ ಮಲಗಿದ್ದರು. ಹೀಗೆ ಮಲಗಿದ್ದಾಗ ನಾಯಿ ಜೋರಾಗಿ ಬೊಗಳಲು ಆರಂಭಿಸಿದೆ. ಕೂಡಲೇ ಅವರು ಎದ್ದು ನೋಡಿದಾಗ ಆನೆ ತನ್ನ ಸೊಂಡಿಲಿನಲ್ಲಿ ಶೆಡ್ ಅನ್ನು ನೂಕುತ್ತಿತ್ತು. ಕೂಡಲೇ ಗಾಬರಿಗೊಂಡ ಪತಿ, ಪತ್ನಿ ಮಲಗಿದ್ದ ತಮ್ಮ ಮಕ್ಕಳನ್ನು ಎಬ್ಬಿಸಿದ್ದಾರೆ.

    ಅಷ್ಟರಲ್ಲಿ ಕಾಡಾನೆ ಅವರ ಶೆಡ್ ನ ಛಾವಣಿಯನ್ನು ನಾಶಮಾಡಿ ಒಳಗಡೆ ನುಗ್ಗಲು ಪ್ರಯತ್ನಿಸುತ್ತಿತ್ತು. ಇದರಿಂದ ಮತ್ತಷ್ಟು ಗಾಬರಿಗೊಂಡ ಕುಟುಂಬ ಜೋರಾಗಿ ಕಿರುಚಲು ಆರಂಭಿಸಿದೆ. ಹೀಗಾಗಿ ಮನೆಯೊಳಗಡೆ ನುಗ್ಗುವ ಆನೆ ಪ್ರಯತ್ನ ವಿಫಲವಾಯಿತು. ಬಳಿಕ ಸುಮಾರು 10 ನಿಮಿಷ ಆನೆ ಅನೇಕ ಬಾರಿ ಅವರ ಮನೆಯ ಸುತ್ತಲೂ ಒಡಾಟ ನಡೆಸಿದೆ. ನಂತರ ಚೆಂಬಂಕೊಲ್ಲಿ ರಸ್ತೆಯ ಮೂಲಕ ಅರಣ್ಯದ ಕಡೆ ಹೆಜ್ಜೆ ಹಾಕಿತು. ಅಲ್ಲಿವರೆಗೆ ಜಿಮ್ಮಿ ಬೊಗಳುತ್ತಾನೆ ಇತ್ತು. ಈ ಮೂಲಕ ಕಾಡಾನೆಯನ್ನು ಕಾಡಿಗೆ ವಾಪಸ್ ಕಳಿಸುವಲ್ಲಿ ಜಿಮ್ಮಿ ಯಶಸ್ವಿಯಾಯಿತು.

    ಇದೇ ಮೊದಲ ಬಾರಿಗೆ ಸುಂದರನ್ ಅವರ ಮನೆಗೆ ಕಾಡಾನೆ ಬಂದಿದ್ದಾಗಿದೆ. ಕಾಡಾನೆ ಹಿಂದಿರುಗುವ ಮುನ್ನ ಸುಂದರನ್ ಅವರ ಭತ್ತ, ಬಾಳೆ ಮತ್ತು ತೆಂಗಿನ ಮರ ಮೊದಲಾದ ಬೆಳೆಗಳನ್ನು ನಾಶಪಡಿಸಿತ್ತು.

  • ಹೆಸರಿಡುವ ಮುಂಚೆ ಶವವಾಯ್ತು ಪುಟ್ಟಮಗು- ಹೊಳೆಯಲ್ಲಿ ಒಂದೇ ಕುಟುಂಬದ ಮೂವರ ಶವ ಪತ್ತೆ

    ಹೆಸರಿಡುವ ಮುಂಚೆ ಶವವಾಯ್ತು ಪುಟ್ಟಮಗು- ಹೊಳೆಯಲ್ಲಿ ಒಂದೇ ಕುಟುಂಬದ ಮೂವರ ಶವ ಪತ್ತೆ

    ಕಾರವಾರ: ಇನ್ನು ಹೆಸರಿಡದ ಪುಟ್ಟು ಮಗು ಸೇರಿ ತಾಯಿ, ಮಗಳ ಮೃತ ದೇಹಗಳು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗಣೇಶ್ ಪಾಲ್ ಹೊಳೆಯಲ್ಲಿ ಇಂದು ಪತ್ತೆಯಾಗಿವೆ.

    ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಲಗೋಡ್ಲುವಿನಲ್ಲಿ ಶುಕ್ರವಾರ ಮನೆಯಿಂದ ಕಾಣೆಯಾಗಿದ್ದ ತಾಯಿ, ಮಗಳು ಹಾಗೂ ಮೊಮ್ಮಗನ ಮೃತದೇಹಗಳು ಪತ್ತೆಯಾಗಿದ್ದು, ಮೃತರನ್ನು ರಾಜೇಶ್ವರಿ ನಾರಾಯಣ ಹೆಗಡೆ(52), ವಾಣಿ ಪ್ರಕಾಶ್.ವೈ (28) ಹಾಗೂ ವಾಣಿಯವರ ಇನ್ನೂ ಹೆಸರಿಡದ 11 ತಿಂಗಳ ಗಂಡು ಮಗು ಎಂದು ಗುರುತಿಸಲಾಗಿದೆ.

    ಈ ಮೂವರೂ ನ.20ರಂದು ಮನೆಯಿಂದ ಕಾಣೆಯಾಗಿದ್ದರು. ಹಲವೆಡೆ ಹುಡುಕಾಡಿದ ಮನೆಯವರು ಇಂದು ದೂರು ನೀಡಲು ಯಲ್ಲಾಪುರ ಪೊಲೀಸ್ ಠಾಣೆಗೆ ಬಂದಿದ್ದರು. ಅದೇ ಸಮಯಕ್ಕೆ ಗಣೇಶ್ ಪಾಲ್ ಹೊಳೆಯಲ್ಲಿ ಮೃತದೇಹಗಳು ಸಿಕ್ಕಿರುವ ಮಾಹಿತಿ ಲಭಿಸಿದೆ. ಈ ವೇಳೆ ಶವವನ್ನು ಕುಟುಂಬದವರು ನೋಡಿ ಗುರುತಿಸಿದ್ದಾರೆ.

    ಹೆಸರಿಡುವ ಮುಂಚೆ ಮಗು ಸಾವು
    ವಾಣಿಯವರ ಗಂಡನ ಮನೆ ಶಿವಮೊಗ್ಗದಲ್ಲಿದೆ. ಅವರ ಮಗುವಿಗೆ ನಾಮಕರಣ ಕಾರ್ಯಕ್ರಮವನ್ನು ಇಂದು(ಭಾನುವಾರ)ನಿಗದಿ ಮಾಡಲಾಗಿತ್ತು. ಆದರೆ ಹೆಸರಿಡುವ ಮೊದಲೇ ಮಗುವಿನ ಉಸಿರು ನಿಂತುಹೋಗಿದೆ. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆಯೋ, ಕೊಲೆಯೋ ಎಂಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಪ್ರೇಮ ವಿವಾಹಕ್ಕೆ ಒಪ್ಪದ ಯುವತಿಯ ಮನೆಯವರು – ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮ

    ಪ್ರೇಮ ವಿವಾಹಕ್ಕೆ ಒಪ್ಪದ ಯುವತಿಯ ಮನೆಯವರು – ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮ

    ಹುಬ್ಬಳ್ಳಿ: ಪ್ರೀತಿಸಿದವಳನ್ನು ಮದುವೆಯಾಗಲು ರೆಡಿಯಾಗಿದ್ದ ಪ್ರೇಮಿಗೆ ಯುವತಿಯ ಮನೆಯವರು ಹುಡುಗಿ ಕೊಟ್ಟು ಮದುವೆ ಮಾಡಲ್ಲ ಎಂದಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯನ್ನ ಮದುವೆಯಾಗಬೇಕೆಂದುಕೊಂಡಿದ್ದ ಮಲೀಕ್, ಯುವತಿಯ ಮನೆಯವರ ಒಪ್ಪಿಗೆ ಸಿಗುತ್ತದೆ ಎಂದುಕೊಂಡಿದ್ದ. ಆದರೆ ಮಲೀಕನಿಗೆ ಮದುವೆ ಮಾಡಿಕೊಡಲು ಯುವತಿಯ ಮನೆಯವರ ನಿರಾಕರಿಸಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ ಮಲೀಕ್, ಗೆಳೆಯರಿಗೆ ವಾಟ್ಸಪ್‍ಗೆ ನಾನು ಸಾಯುತ್ತೇನೆ ಎಂದು ಸಂದೇಶ ಕಳಿಸಿದ್ದ.

    ತಕ್ಷಣವೇ ಸ್ನೇಹಿತರು ಓಡಿ ಬಂದು ನೋಡಿದಾಗ, ಮಲೀಕ್ ನೇಣು ಹಾಕಿಕೊಂಡು ಉಸಿರಾಟದ ತೊಂದರೆಯಿಂದ ನರಳುತ್ತಿದ್ದ. ತಕ್ಷಣವೇ ಆತನನ್ನು ಎಲ್ಲರೂ ಸೇರಿಕೊಂಡು ಹಗ್ಗ ಬಿಚ್ಚಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದು, ಜೀವನ್ಮರಣದ ನಡುವೆ ಯುವಕ ಹೋರಾಟ ಮಾಡುತ್ತಿದ್ದಾನೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮಲೀಕ್ ಬೇಪಾರಿಗೆ ಕಿಮ್ಸ್ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

  • ಮನೆಯಲ್ಲಿ ಒಂದೇ ಕುಟುಂಬದ ಐವರ ಶವ ಪತ್ತೆ – ಆತ್ಮಹತ್ಯೆಯೋ? ಕೊಲೆಯೋ?

    ಮನೆಯಲ್ಲಿ ಒಂದೇ ಕುಟುಂಬದ ಐವರ ಶವ ಪತ್ತೆ – ಆತ್ಮಹತ್ಯೆಯೋ? ಕೊಲೆಯೋ?

    – ಓರ್ವ ಪುರುಷ, ಇಬ್ಬರು ಮಹಿಳೆಯರು, ಎರಡು ಕಂದಮ್ಮಗಳು

    – ಗ್ರಾಮದಲ್ಲಿ ಆತಂಕ

    ರಾಯ್ಪುರ: ಛತ್ತೀಸಗಢ ರಾಜ್ಯದ ರಾಜಧಾನಿ ರಾಯ್ಪುರ ಅನತಿ ದೂರದಲ್ಲಿರುವ ಕೇಂದ್ರಿ ಗ್ರಾಮದಲ್ಲಿ ಒಂದೇ ಕುಟುಂಬ ಐವರ ಶವಗಳು ಪತ್ತೆಯಾಗಿದ್ದು, ಕೊಲೆಯೊ? ಆತ್ಮಹತ್ಯೆಯೋ ಎಂದು ತಿಳಿದು ಬಂದಿಲ್ಲ.

    ಕಮಲೇಶ್ ಸಾಹು ಕುಟುಂಬಸ್ಥರ ಶವ ಮನೆಯಲ್ಲಿ ಸಿಕ್ಕಿದ್ದು, ಗ್ರಾಮದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ರೀತಿಯಲ್ಲಿ ಪ್ರಕರಣ ಬಿಂಬಿತವಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಮತ್ತು ಸಂಬಂಧಿಕರಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ವೀಡಿಯೋ ಮಾಡಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ– ಚಲಿಸುತ್ತಿರುವ ರೈಲಿನ ಮುಂದೆ ಹಾರಿದ್ರು

    ಕಮಲೇಶ್ ಸಾಹು ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ರೆ, ಇನ್ನುಳಿದ ನಾಲ್ಕು ಶವಗಳು ಹಾಸಿಗೆ ಮೇಲಿದ್ದವು ಎಂದು ವರದಿಯಾಗಿದೆ. ಕಮಲೇಶ್ ಕುಟುಂಬ ಸಾವಿನಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಒಂದು ರೀತಿ ಭಯಭೀತರಾಗಿದ್ದಾರೆ. ಇದನ್ನೂ ಓದಿ: ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಂದೆ

    ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಮಂತ್ರಿ ತಾಮ್ರಧ್ವಜ್ ಸಾಹೂ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಗ್ರಾಮಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಶವಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಹಿನ್ನೆಲೆ ಗ್ರಾಮದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅತ್ತೆ, ಮಾವ, ಪತ್ನಿ, ಪ್ರಿಯಕರನೇ ಕಾರಣ – ಸೆಲ್ಫಿ ವೀಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

    ಐವರ ಸಾವು ಹೇಗಾಯ್ತು ಎಂಬುವುದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ. ಮೇಲ್ನೋಟಕ್ಕೆ ಸಾಮೂಹಿಕ ಆತ್ಮಹತ್ಯೆ ಎಂದು ಶಂಕೆ ವ್ಯಕ್ತವಾಗಿದ್ದು, ಮನೆಯಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಈ ಸಂದರ್ಭದಲ್ಲಿ ಏನನ್ನೂ ಊಹಿಸಲು ಸಾಧ್ಯವಾಗುತ್ತಿಲ್ಲ. ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದ್ದು, ಮೃತ ಕುಟುಂಬದ ಹಿನ್ನೆಲೆ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಮರಣೋತ್ತರ ಶವ ಪರೀಕ್ಷೆಯಲ್ಲಿ ಸಾವು ಹೇಗಾಯ್ತು ಎಂಬುದರ ಬಗ್ಗೆ ತಿಳಿಯಲಿದೆ ಎಂದು ಎಎಸ್‍ಪಿ ತಾಲೇಶ್ವರ ಹೇಳಿದ್ದಾರೆ. ಇದನ್ನೂ ಓದಿ: ನನ್ನದೇನೂ ತಪ್ಪಿರ್ಲಿಲ್ಲ, ಆದ್ರೂ ಬ್ರೇಕಪ್ ಮಾಡ್ಕೊಂಡ್ಳು- ಡೆತ್‍ನೋಟ್ ಬರೆದು ಆತ್ಮಹತ್ಯೆ

  • ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಸೈನಿಕ ಉಗ್ರ ಕಾರ್ಯಾಚರಣೆಯಲ್ಲಿ ಹುತಾತ್ಮ- ದುಃಖದಲ್ಲಿ ಕುಟುಂಬಸ್ಥರು

    ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಸೈನಿಕ ಉಗ್ರ ಕಾರ್ಯಾಚರಣೆಯಲ್ಲಿ ಹುತಾತ್ಮ- ದುಃಖದಲ್ಲಿ ಕುಟುಂಬಸ್ಥರು

    ನವದೆಹಲಿ: ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಭಾರತೀಯ ಸೇನೆಯ ಯೋಧ ಉಗ್ರರನ್ನು ಸೆದೆಬಡಯುವ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದು, ಸುದ್ದಿ ತಿಳಿದ ಕುಟುಂಬದ್ಥರು ಆಘಾತಕ್ಕೊಳಗಾಗಿದ್ದಾರೆ.

    ಜಮ್ಮು ಕಾಶ್ಮೀರದ ಮಚಿಲಿ ಸೆಕ್ಟರ್‍ನಲ್ಲಿ ನಡೆದ ಉಗ್ರ ವಿರೋಧಿ ಕಾರ್ಯಾಚರಣೆ ವೇಳೆ ತೆಲಂಗಾಣ ಮೂಲದ ರಿಯಾಡಾ ಮಹೇಶ್ ಹುತಾತ್ಮರಾಗಿದ್ದಾರೆ. ಮಹೇಶ್ ಕಳೆದ ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ತೆಲಂಗಾಣದ ಮೂಲದವರಾಗಿದ್ದ ಇವರು ಭಾನುವಾರ ನಡೆದ ಕಾರ್ಯಾಚರಣೆ ವೇಳೆ ಹುತ್ಮಾತ್ಮರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮಹೇಶ್ ಪತ್ನಿ ಸುಹಾಸಿನಿ ಹಾಗೂ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಅಲ್ಲದೆ ನಿಜಾಮಾಬಾದ್ ಜಿಲ್ಲೆಯ ಮೇಲ್ಪುರದ ಕೋಮನ್‍ಪಲ್ಲಿ ಗ್ರಾಮದ ಅವರ ಮನೆಯಲ್ಲಿ ಕಗ್ಗತ್ತಲು ಆವರಿಸಿದಂತಾಗಿದೆ.

    ಭಾನುವಾರ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ ಮೂವರು ಯೋಧರು ಹಾಗೂ ಒಬ್ಬ ಬಿಎಸ್‍ಎಫ್ ಕಾನ್‍ಸ್ಟೇಬಲ್ ಪೈಕಿ ಮಹೇಶ್ ಸಹ ಒಬ್ಬರು. ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚಿಲಿ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಗ್ರರ ನುಸುಳುವಿಕೆಯನ್ನು ತಡೆಯುವ ವೇಳೆ ಈ ಯೋಧರು ಹುತಾತ್ಮರಾಗಿದ್ದಾರೆ.

    ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಇರಳದ ರೆಡ್ಡಿವರಿಪಲ್ಲಿ ಮೂಲದ ಹವಾಲ್ದಾರ್ ಪ್ರವೀಣ್ ಕುಮಾರ್ ರೆಡ್ಡಿ(37), ಸೇನೆ ಅಧಿಕಾರಿ ಕ್ಯಾಪ್ಟನ್ ಅಶುತೋಷ್ ಕುಮಾರ್ ಹಾಗೂ ಬಿಎಸ್‍ಎಫ್ ಪೇದೆ ಸುದೀಪ್ ಸರ್ಕಾರ್ ಸಹ ಈ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದಾರೆ. ಉಗ್ರರು ಬಲಿಯಾಗುವುದಕ್ಕೂ ಮುನ್ನ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಇದೀಗ ಸಾವನ್ನಪ್ಪಿದ ಸೈನಿಕರ ಅಂತ್ಯಸಂಸ್ಕಾರ ಮಾಡಲು ಸೇನೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಮಹೇಶ್ ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು. ತುಂಬಾ ಕಷ್ಟ ಪಟ್ಟು ಸೇನೆಗೆ ಸೇರಿಕೊಂಡಿದ್ದರು. ಇವರ ಪೋಷಕರಾದ ರಿಯಾಡಾ ರಾಜು ಹಾಗೂ ಗಂಗಮಲ್ಲು ಇಬ್ಬರೂ ರೈತರು. ಆರ್ಮಿ ಆಫೀಸರ್ ಪುತ್ರಿ ಸುಹಾಸಿನಿ ಅವರನ್ನು ಮಹೇಶ್ ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಒಬ್ಬ ಸಹೋದರನನ್ನು ಹೊಂದಿದ್ದು, ಮಹೇಶ್ ಕಿರಿಯರು. ಇವರ ಅಣ್ಣ ಗಲ್ಫ್‍ನಲ್ಲಿ ಕೆಲಸ ಮಾಡುತ್ತಾರೆ.

    ಮಗನನ್ನು ಕಳೆದುಕೊಂಡಿದ್ದಕ್ಕೆ ಇದೀಗ ಕುಟುಂಬ ತೀವ್ರ ದುಃಖದಲ್ಲಿ ಮುಳುಗಿದೆ. ಈ ವೇಳೆ ಮಗನ ಸಂಭಾಷಣೆ ಕುರಿತು ಅವರು ನೆನಪಿಸಿಕೊಂಡಿದ್ದಾರೆ. ನವೆಂಬರ್ 2ರಂದು ಕೊನೇಯ ಬಾರಿ ಕರೆ ಮಾಡಿದ್ದ. ಹತ್ತಿರದ ಪ್ರದೇಶದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಗಸ್ತಿಗೆ ಹೊರಟಿರುವುದಾಗಿ ತಿಳಿಸಿದ್ದ. ಅದೇ ಕೊನೇಯ ಬಾರಿ ಅವನ ಬಳಿ ಮಾತನಾಡಿದ್ದು ಎಂದು ತಿಳಿಸಿದ್ದಾರೆ.

    ಆರಂಭದಲ್ಲಿ ಮಹೇಶ್ ಅವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿಸಲಾಗಿತ್ತು. ಬಳಿಕ ಸಾವನ್ನಪ್ಪಿರುವ ಕುರಿತು ಸೇನೆ ತಿಳಿಸಿದೆ. ಈ ವೇಳೆ ಮಹೇಶ್ ಕೊನೇಯ ಬಾರಿ ಮನೆಗೆ ಭೇಟಿ ನೀಡಿದ್ದನ್ನು ಕುಟುಂಬಸ್ಥರು ನೆನಪಿಸಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್‍ನಲ್ಲಿ ಕೊನೇಯ ಬಾರಿ ಊರಿಗೆ ಬಂದಿದ್ದ. ಈ ವೇಳೆ ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿ ಕಂಡು ಎಚ್ಚರದಿಂದ ಇರುವಂತೆ ತಿಳಿಸಿದ್ದೆವು ಎಂದು ಕುಟುಂಬಸ್ಥರು ವಿವರಿಸಿದ್ದಾರೆ.

    ನಿಜಾಮಾಬಾದ್‍ನ ಖಾಸಗಿ ಕಾಲೇಜಿನಲ್ಲಿ ಪಿಯು ಮುಗಿಸಿದ್ದ ಮಹೇಶ್, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ 2014-15ರಲ್ಲಿ ಸೇನೆ ಸೇರಿದ್ದರು. ತರಬೇತಿ ಬಳಿಕ ಅವರನ್ನು ಅಸ್ಸಾಂಗೆ ಪೋಸ್ಟಿಂಗ್ ಹಾಕಲಾಗಿತ್ತು. ಬಳಿಕ ಡೆಹ್ರಾಡೂನ್ ನಂತರ ಜಮ್ಮು ಕಾಶ್ಮೀರಕ್ಕೆ ವರ್ಗಾಯಿಸಲಾಗಿತ್ತು.

  • ಸತ್ತಿದ್ದಾರೆಂದು ಫ್ರೀಜರ್ ಬಾಕ್ಸಿನಲ್ಲಿಟ್ಟ ಕುಟುಂಬಸ್ಥರು – ಬೆಳಗ್ಗೆ ಉಸಿರಾಡುತ್ತಿದ್ದ ವೃದ್ಧ

    ಸತ್ತಿದ್ದಾರೆಂದು ಫ್ರೀಜರ್ ಬಾಕ್ಸಿನಲ್ಲಿಟ್ಟ ಕುಟುಂಬಸ್ಥರು – ಬೆಳಗ್ಗೆ ಉಸಿರಾಡುತ್ತಿದ್ದ ವೃದ್ಧ

    ಚೆನ್ನೈ: ಸತ್ತಿದ್ದಾರೆ ಎಂದು ರಾತ್ರಿ ಪೂರ್ತಿ ಫ್ರೀಜರ್ ಬಾಕ್ಸಿನಲ್ಲಿಟ್ಟ 74 ವರ್ಷದ ವೃದ್ಧರೊಬ್ಬರು ಬೆಳಗ್ಗೆ ಆ ಪೆಟ್ಟಿಗೆಯೊಳಗೆ ಉಸಿರಾಡುತ್ತಿರುವ ವಿಚಿತ್ರ ಘಟನೆ ತಮಿಳುನಾಡಿ ಸೇಲಂನಲ್ಲಿ ನಡೆದಿದೆ.

    ತಮಿಳುನಾಡಿನ ಸೇಲಂ ಜಿಲ್ಲೆಯ ಕಂಧಂಪತ್ತಿಯ ನಿವಾಸಿ 74 ವರ್ಷದ ವೃದ್ಧ ಬಾಲಸುಬ್ರಹ್ಮಣ್ಯ ಕುಮಾರ್ ಒಂದು ರಾತ್ರಿ ಪೆಟ್ಟಿಗೆಯಲ್ಲಿದ್ದ ವೃದ್ಧ ಎಂದು ಗುರತಿಸಲಾಗಿದೆ. ಸದ್ಯ ಅವರನ್ನು ಪೊಲೀಸರು ರಕ್ಷಿಸಿದ್ದು, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಕೊಡಿಸಿದ್ದಾರೆ.

    ಬಾಲಸುಬ್ರಹ್ಮಣ್ಯ ಕುಮಾರ್ 70 ವರ್ಷದ ಕಿರಿಯ ಸಹೋದರ ಸರವಣನ್ ಮತ್ತು ಅವರ ಸಹೋದರಿಯ ಮಗಳು ಗೀತಾ ಅವರೊಂದಿಗೆ ವಾಸಿಸುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಬಾಲಸುಬ್ರಹ್ಮಣ್ಯ ಕುಮಾರ್ ಅವರ ಆರೋಗ್ಯ ಸರಿಯಿಲ್ಲದ ಕಾರಣ ಮಲಗಿದ್ದಲ್ಲೇ ಇದ್ದರು. ಆದರೆ ಅಕ್ಟೋಬರ್ 12ರಂದು ಅವರನ್ನು ಮೇಲಕ್ಕೆ ಏಳಿಸಲು ಪ್ರಯತ್ನಿಸಿದ್ದಾರೆ. ಆಗ ಅವರು ಎಚ್ಚರಗೊಂಡಿಲ್ಲ. ಹೀಗಾಗಿ ಸರವಣನ್ ಅವರು ತಮ್ಮ ಸಹೋದರ ಬಾಲಸುಬ್ರಹ್ಮಣ್ಯ ಸಾವನ್ನಪ್ಪಿದ್ದಾರೆಂದು ಭಾವಿಸಿದ್ದಾರೆ.

    ಇದರಿಂದ ಸೋಮವಾರ ಫ್ರೀಜರ್ ಬಾಕ್ಸ್ ಕಂಪನಿಯವರನ್ನು ಕರೆದು ಅದರಲ್ಲಿ ಬಾಲಸುಬ್ರಹ್ಮಣ್ಯ ಅವರನ್ನು ಇಟ್ಟು, ಸಂಬಂಧಿಕರಿಗೂ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಂಗಳವಾರ ಸಂಜೆ ವೇಳಗೆ ಮನೆಗೆ ಸಂಬಂಧಿಕರು ಬಂದಿದ್ದಾರೆ. ಈ ವೇಳೆ ಫ್ರೀಜರ್ ಬಾಕ್ಸ್ ವಾಪಸ್ ಪಡೆಯಲು ಫ್ರೀಜರ್ ಕಂಪನಿಯವರು ಸ್ಥಳಕ್ಕೆ ಬಂದಿದ್ದಾರೆ. ಆಗ ಫ್ರೀಜರ್ ಬಾಕ್ಸಿನೊಳಗೆ ವೃದ್ಧ ಉಸಿರಾಡುತ್ತಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಫ್ರೀಜರ್ ಬಾಕ್ಸಿನಿಂದ ವೃದ್ಧನನ್ನು ಹೊರ ತೆಗೆದು ಹತ್ತಿರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಜೊತೆಗೆ ಐಪಿಸಿ ಸೆಕ್ಷನ್ 287 (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ನಿರ್ಲಕ್ಷ್ಯದ ವರ್ತನೆ) ಮತ್ತು ಐಪಿಸಿ ಸೆಕ್ಷನ್ 336 (ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವಂತೆ)ರ ಅಡಿಯಲ್ಲಿ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪ್ರೇಮಿಗಳಿಗೆ ವಿಷ ನೀಡಿ ಕೊಲೆಗೈದು ಬಳಿಕ ಸುಟ್ಟು ಹಾಕಿದ ಕುಟುಂಬಸ್ಥರು!

    ಪ್ರೇಮಿಗಳಿಗೆ ವಿಷ ನೀಡಿ ಕೊಲೆಗೈದು ಬಳಿಕ ಸುಟ್ಟು ಹಾಕಿದ ಕುಟುಂಬಸ್ಥರು!

    – ಕಳೆದ ತಿಂಗ್ಳು ಪರಾರಿಯಾಗಿದ್ರು
    – ಪೋಷಕರು ಜೊತೆ ಪೊಲೀಸರು ಕಳಿಸಿದ್ದೆ ತಪ್ಪಾಯ್ತು

    ರಾಯ್ಪುರ: ಪ್ರೇಮಿಗಳಿಬ್ಬರನ್ನು ಕುಟುಂಬಸ್ಥರೇ ವಿಷ ಕೊಟ್ಟು ಕೊಲೆ ಮಾಡಿರುವ ಘಟನೆ ಚತ್ತೀಸ್‍ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ. ಇದು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಮೃತ ಪ್ರೇಮಿಗಳನ್ನು ಶ್ರೀಹರಿ (21) ಮತ್ತು ಈತನ ಸಂಬಂಧಿಯಾದ ಐಶ್ವರ್ಯಾ (20) ಎಂದು ಗುರುತಿಸಲಾಗಿದೆ. ಇವರಿಬ್ಬರು ಕೃಷ್ಣನಗರದವರಾಗಿದ್ದು, ಈ ಘಟನೆ ಶನಿವಾರ ನಡೆದಿದೆ. ಈಗಾಗಲೇ ಆರೋಪಿಗಳಾದ ಶ್ರೀಹರಿಯ ಚಿಕ್ಕಪ್ಪ ರಾಮು ಮತ್ತು ಐಶ್ವರ್ಯಾಳ ಸಹೋದರ ಚರಣ್ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಯಾದವ್ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಕಳೆದ ತಿಂಗಳು ಶ್ರೀಹರಿ ಮತ್ತು ಐಶ್ವರ್ಯಾ ಇಬ್ಬರು ತಮ್ಮ ಮನೆಗಳಿಂದ ಓಡಿಹೋಗಿದ್ದರು. ಇತ್ತ ಇವರ ಕುಟುಂಬವು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರನ್ನು ದಾಖಲಿಸಿದೆ. ನಂತರ ದುರ್ಗ್ ಪೊಲೀಸರು ಚೆನ್ನೈನಲ್ಲಿ ಶ್ರೀಹರಿ ಮತ್ತು ಐಶ್ವರ್ಯಾ ಇಬ್ಬರನ್ನು ಪತ್ತೆಹಚ್ಚಿದ್ದರು. ಕೂಡಲೇ ಪೊಲೀಸರ ತಂಡವನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಅಕ್ಟೋಬರ್ 7 ರಂದು ಇಬ್ಬರನ್ನು ವಾಪಾಸ್ ಕೃಷ್ಣನಗರಕ್ಕೆ ಕರೆದುಕೊಂಡು ಬಂದಿದ್ದಾರೆ. ನಂತರ ಇಬ್ಬರನ್ನು ಅವರ ಕುಟುಂಬದವರ ಜೊತೆ ಕಳುಹಿಸಿದ್ದಾರೆ.

    ಶನಿವಾರ ರಾತ್ರಿ ಪೊಲೀಸರು ಅವರ ಮನೆಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ್ದಾರೆ. ನಂತರ ವಿಚಾರಣೆಗಾಗಿ ಮನೆಯ ಒಳಗೆ ಹೋಗಿದ್ದಾರೆ. ಈ ವೇಳೆ ಆರೋಪಿಗಳಿಬ್ಬರು ಶ್ರೀಹರಿ ಮತ್ತು ಐಶ್ವರ್ಯಾ ಇಬ್ಬರು ವಿಷ ಕುಡಿದು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಕೂಡಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ.

    ವಿಚಾರಣೆ ವೇಳೆ ತಾವೇ ಕೊಲೆ ಮಾಡಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳು ಸುಪೇಲಾದಿಂದ 10 ಕಿ.ಮೀ ದೂರದಲ್ಲಿರುವ ಜೆವ್ರಾ ಸಿರ್ಸಾ ಗ್ರಾಮದ ಸಮೀಪ ಶಿವನಾಥ್ ನದಿಯ ದಡದಲ್ಲಿ ಮೃತದೇಹಗಳನ್ನು ಸುಟ್ಟುಹಾಕಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ.

    ಶ್ರೀಹರಿ ಮತ್ತು ಐಶ್ವರ್ಯಾ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಬಯಸಿದ್ದರು. ಆದರೆ ಎರಡು ಕುಟುಂಬದವರು ಇದಕ್ಕೆ ವಿರುದ್ಧ ವ್ಯಕ್ತಪಡಿಸಿದ್ದಾರೆ. ಭಾಗಶಃ ಸುಟ್ಟ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

  • ಪ್ರಕೃತಿ ಮಡಿಲಲ್ಲಿ ಸ್ನೇಹಿತರು, ಕುಟುಂಬಸ್ಥರ ಜೊತೆ ಶಿವಣ್ಣ ಎಂಜಾಯ್

    ಪ್ರಕೃತಿ ಮಡಿಲಲ್ಲಿ ಸ್ನೇಹಿತರು, ಕುಟುಂಬಸ್ಥರ ಜೊತೆ ಶಿವಣ್ಣ ಎಂಜಾಯ್

    ಬೆಂಗಳೂರು: ಇತ್ತೀಚೆಗಷ್ಟೆ ಸ್ಯಾಂಡಲ್‍ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಶಿವಣ್ಣ ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆ ರೆಸಾರ್ಟಿನಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಇದನ್ನೂ ಓದಿ: ಮೈಸೂರು ಮೃಗಾಲಯಕ್ಕೆ ಹ್ಯಾಟ್ರಿಕ್ ಹೀರೋ ಭೇಟಿ

    ಕನಕಪುರ ರಸ್ತೆಯ ಬೇವು ರೆಸಾರ್ಟಿನಲ್ಲಿ ಸೆಂಚುರಿ ಸ್ಟಾರ್ ಸ್ನೇಹಿತರು, ಕುಟುಂಬ ಸದಸ್ಯರ ಜೊತೆ ಭೇಟಿ ನೀಡಿದ್ದಾರೆ. ಅಲ್ಲದೇ ಪ್ರಕೃತಿ ಮಡಿಲಲ್ಲಿ ಶಿವಣ್ಣ ವಾರಂತ್ಯ ಕಳೆಯುತ್ತಿದ್ದಾರೆ. ಜೊತೆಗೆ ಸ್ನೇಹಿತರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೀಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಕೆಲ ದಿನಗಳ ಹಿಂದೆಯಷ್ಟೆ ಪತ್ನಿ, ಇಬ್ಬರು ಮಕ್ಕಳು ಹಾಗೂ ಅಳಿಯನ ಜೊತೆ ಶಿವಣ್ಣ ಮೈಸೂರಿನ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ತಾವು ದತ್ತು ಪಡೆದ ಪಾರ್ವತಿ ಆನೆಗೆ ಆಹಾರ ತಿನ್ನಿಸಿ ಖುಷಿಪಟ್ಟಿದ್ದರು. ಅಲ್ಲದೇ ಶಿವರಾಜ್ ಕುಮಾರ್ ಅವರು ಮೃಗಾಲಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಇಡೀ ಮೃಗಾಲಯ ಸುತ್ತಾಡಿ ಪ್ರಾಣಿಗಳನ್ನು ಕಂಡು ಸಂತಸಪಟ್ಟಿದ್ದರು.

    ಕಳೆದ ಆಗಸ್ಟ್ ತಿಂಗಳಲ್ಲಿ ಶಿವಣ್ಣ ಅವರು ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ‘ಪಾರ್ವತಿ’ ಎಂಬ ಹೆಸರಿನ ಆನೆಯನ್ನು 75 ಸಾವಿರ ನೀಡಿ ದತ್ತು ಪಡೆದುಕೊಂಡಿದ್ದರು. ಒಂದು ವರ್ಷದ ಅವಧಿಗೆ ಅಂದರೆ 2020 ಆಗಸ್ಟ್ 19 ರಿಂದ 2021 ಆಗಸ್ಟ್ 19 ರವರೆಗೆ ಈ ಆನೆಯನ್ನು ನಟ ದತ್ತು ಸ್ವೀಕರಿಸಿದ್ದಾರೆ.