Tag: family

  • ಸ್ವಂತ ಮಗನನ್ನೇ ಅಪಹರಿಸಿ, ಕತ್ತು ಹಿಸುಕಿ ಕೊಂದ ಪಾಪಿ ತಂದೆ!

    ಸ್ವಂತ ಮಗನನ್ನೇ ಅಪಹರಿಸಿ, ಕತ್ತು ಹಿಸುಕಿ ಕೊಂದ ಪಾಪಿ ತಂದೆ!

    ರಾಯಚೂರು: ಪಾಪಿ ತಂದೆಯೊಬ್ಬ ಸ್ವಂತ ಮಗನನ್ನೇ ಅಪಹರಿಸಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲ್ಮಂಗಿಯಲ್ಲಿ ನಡೆದಿದೆ.

    4 ವರ್ಷದ ಮಹೇಶ ಕೊಲೆಯಾದ ನತದೃಷ್ಟ ಬಾಲಕ. ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿರೋ ಆರೋಪಿ ಯಲ್ಲಪ್ಪನನ್ನ ಪೊಲೀಸರು ಬಂಧಿಸಿದ್ದಾರೆ.

    ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಹೆಂಡತಿ ಪಾರ್ವತಿ ತಂದೆಯ ಮನೆಗೆ ಹೋಗಿದ್ದಳು. ಹೆಂಡತಿಯ ಊರಿಗೆ ಹೋಗಿ ಮಗನನ್ನ ಅಪಹರಿಸಿದ್ದ ಯಲ್ಲಪ್ಪ ನಿನ್ನೆ ರಾತ್ರಿ ಮಗುವನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

    ಫೆಬ್ರವರಿ 1ಕ್ಕೆ ಮಗುವನ್ನ ಕಿಡ್ನಾಪ್ ಮಾಡಿದ್ದ ದುರುಳ ಯಲ್ಲಪ್ಪ ಕೊಲೆ ಮಾಡಿ, ಜಮೀನೊಂದರಲ್ಲಿ ಮಗುವಿನ ಶವ ಬಿಸಾಕಿದ್ದಾನೆ. ಮಗು ಕಿಡ್ನಾಪ್ ಆಗಿದ್ದ ಬಗ್ಗೆ ತುರ್ವಿಹಾಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಪಾಪಿ ತಂದೆಯ ಕೃತ್ಯ ಬಯಲಾಗಿದೆ. ತುರ್ವಿಹಾಳ ಠಾಣೆ ಪೊಲೀಸರಿಂದ ಆರೋಪಿ ಯಲ್ಲಪ್ಪ ಬಂಧನವಾಗಿದ್ದು ವಿಚಾರಣೆ ಮುಂದುವರಿದಿದೆ.

  • 7 ವರ್ಷದ ಪುಟ್ಟ ಕಂದಮ್ಮ ಮೇಲೆ ಅತ್ಯಾಚಾರ!

    7 ವರ್ಷದ ಪುಟ್ಟ ಕಂದಮ್ಮ ಮೇಲೆ ಅತ್ಯಾಚಾರ!

    ಲಕ್ನೋ: ಮನೆ ಸಮೀಪ ಆಟವಾಡುತ್ತಿದ್ದ 7 ವರ್ಷದ ಮಗುವನ್ನು ಅಪಹರಿಸಿ ಅಪರಿಚಿತ ವ್ಯಕ್ತಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಕಾಶಿನಗರ್ ನಲ್ಲಿ ನಡೆದಿದೆ. ಘಟನೆ ನಂತರ ಬಾಲಕಿ ರಕ್ತ ಸ್ರಾವದಿಂದ ಹೊಲದಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

    ಬಾಲಕಿ ಶುಕ್ರವಾರ ಸಂಜೆ ಕುಟುಂಬದವರೊಂದಿಗೆ ಮನೆಯ ಹೊರಗಡೆ ಕುಳಿತಿದ್ದಳು. ನಂತರ ಊಟ ಮಾಡಲು ಬಾಲಕಿ ಕುಟುಂಬಸ್ಥರು ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ಬಾಲಕಿ ಹೊರಗೆ ಆಟವಾಡುತ್ತಿದ್ದಳು. ಊಟ ಮುಗಿದ ನಂತರ ಮಗಳು ಕಾಣದೇ ಇರುವುದನ್ನು ಕಂಡ ಕುಟುಂಬಸ್ಥರು ಬಾಲಕಿಗಾಗಿ ಹುಡುಕಾಟ ನಡೆಸಿದ್ದಾರೆ. ಮನೆ ಸಮೀಪದಲ್ಲಿರುವ ಹೊಲದಲ್ಲಿ ಬಾಲಕಿ ರಕ್ತಸ್ರಾವದಿಂದ ಬಿದ್ದಿರುವುದನ್ನು ಕಂಡು ಕುಟುಂಬಸ್ಥರು ಬಾಲಕಿಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿಂದ ಗೋರಖ್ಪುರ್ ವೈದ್ಯಕೀಯ ಕಾಲೇಜಿನ ಆಸ್ಪತೆಗೆ ದಾಖಲಿಸಿದ್ದಾರೆ.

    ಇದೀಗ ಪೊಲೀಸರು ಘಟನೆ ಕುರಿತಂತೆ ಶನಿವಾರ ದೂರು ದಾಖಲಿಸಿಕೊಂಡಿದ್ದು, ಆದಷ್ಟು ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಬಾಲಕಿ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

  • ಅಪ್ರಾಪ್ತೆ ಸೇರಿದಂತೆ ಒಂದೇ ಮನೆಯ ನಾಲ್ವರ ಮೇಲೆ ರೇಪ್..!

    ಅಪ್ರಾಪ್ತೆ ಸೇರಿದಂತೆ ಒಂದೇ ಮನೆಯ ನಾಲ್ವರ ಮೇಲೆ ರೇಪ್..!

    – ಕಾಮುಕನ ವಿರುದ್ಧ ದೂರು ದಾಖಲು

    ಜೈಪುರ: ಕಾಮುಕನೊಬ್ಬ ಅಪ್ರಾಪ್ತೆ ಸೇರಿದಂತೆ ಒಂದೇ ಮನೆಯ ನಾಲ್ವರನ್ನು ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ ಜಿಲ್ಲೆಯೊಂದರಲ್ಲಿ ನಡೆದಿದೆ.

    ಕಾಮುಕನನ್ನು ವಿಷ್ಣು ಗುರ್ಜರ್ ಎಂದು ಗುರುತಿಸಲಾಗಿದೆ. ಈತ ಅಂತ್ರಸ್ತ ಕುಟುಂಬದ ಮನೆಯ ಹತ್ತಿರವೇ ದಾಭಾ ಇಟ್ಟುಕೊಂಡಿದ್ದ.

    ವಿಷ್ಣು ಗುರ್ಜರ್ ಕುಟುಂಬದ ಮಹಿಳೆಯ ಮೇಲೆ ಒಂದು ವರ್ಷದ ಹಿಂದೆ ಅತ್ಯಾಚಾರ ಎಸಗಿದ್ದನು. ಇದೀಗ ಆರೋಪಿ ಮಹಿಳೆಯ ತಂಗಿಯರು ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ಈ ವಿಚಾರ ಮಹಿಳೆಯ ಗಮನಕ್ಕೆ ಬಂದ ಕೂಡಲೇ ಆಕೆ ಪೊಲೀಸರನ್ನು ಸಂಪರ್ಕಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.

    ಗುರ್ಜರ್ ವಿರುದ್ಧ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸುತ್ತಿದ್ದಂತೆಯೇ ಕುಟುಂಬದ ಇತರ ಮಹಿಳೆಯರು ಕೂಡ ಪೊಲೀಸ್ ಠಾಣೆಗೆ ತೆರಳಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.

    ಜನವರಿ 21ರಂದು ಗುರ್ಜರ್ ವಿರುದ್ಧ ಮೊದಲ ಪ್ರಕರಣ ದಾಖಲಾಗಿದೆ. ಅದೇ ದಿನ ಮಹಿಳೆಯ ಸಹೋದರಿಯರು ಕೂಡ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವಿಚಾರ ಕುಟುಂಬದ ಇತರ ಸದಸ್ಯರ ಗಮನಕ್ಕೆ ಬಂದಿದ್ದು, ಅವರು ಕೂಡ ಗುರ್ಜರ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಆರೋಪಿ ವಿರುದ್ಧ ಜನವರಿ 23 ಮತ್ತು 24ರಂದು ಎರಡು ಅತ್ಯಾಚಾರ ಪ್ರಕರಣ ದಾಖಲಾಗಿದೆ.

  • ಹಸುವಿಗೆ ಸೀಮಂತ ಮಾಡಿ ಗೋಪ್ರೇಮ ಮೆರೆದ ರೈತ ಕುಟುಂಬ

    ಹಸುವಿಗೆ ಸೀಮಂತ ಮಾಡಿ ಗೋಪ್ರೇಮ ಮೆರೆದ ರೈತ ಕುಟುಂಬ

    – ಹಸು ಬಂದ ದಿನದಿಂದ ಮನೆಯಲ್ಲಿ ಸಮಸ್ಯೆ ನಿವಾರಣೆ
    – ಮನೆ ಮಗಳಿಗೆ ಮಾಡುವಂತೆ ನಡೆಯಿತು ಸೀಮಂತ
    – ಗೋವಿಗೆ ಸೀರೆಯುಡಿಸಿ, ಮುತ್ತೈದೆಯರಿಂದ ಆರತಿ

    ಚಿಕ್ಕೋಡಿ(ಬೆಳಗಾವಿ): ಗೋವು ದೇವರ ಸ್ವರೂಪಿ, ರೈತರು ಗೋವಿಗೆ ವಿಶೇಷ ಸ್ಥಾನ ಮಾನಕೊಡುತ್ತಾರೆ. ಆದರೆ ಇಲ್ಲೊಂದು ರೈತ ಕುಟುಂಬ ಗೋವಿಗೆ ಸೀಮಂತ ಕಾರ್ಯವನ್ನು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಗ್ರಾಮದ ಯಕ್ಸಂಬಾ ಪಟ್ಟಣದ ಕುಟುಂಬಸ್ಥರು ಗೋವಿಗೆ ಸೀಮಂತ ಮಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ತುಕಾರಾಮ್ ಮಾಳಿ ಎಂಬವರ ಕುಟುಂಬ ಒಂದು ವರ್ಷದ ಹಿಂದೆ ಆಕಳನ್ನ ಖರೀದಿ ಮಾಡಿ ಮನೆಗೆ ತಂದಿದ್ದಾರೆ. ಹಸು ಮನೆಗೆ ಬಂದ ದಿನದಿಂದಲೂ ಮನೆಯಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ಜಗಳ ನಿಂತಿದ್ದವು ಹಾಗೂ ಆರ್ಥಿಕ ಸ್ಥಿತಿಗತಿ ಕೂಡ ಸುಧಾರಿಸಿತ್ತು. ಇದನ್ನೆಲ್ಲಾ ನೋಡಿದ ತುಕಾರಾಮ್, ಆಕಳನ್ನ ಮನೆಯ ಮಗಳಂತೆ ನೋಡಿಕೊಳ್ಳಲು ಆರಂಭಿಸಿದ್ದರು. ಅಷ್ಟೇ ಅಲ್ಲದೆ ಇದಕ್ಕೆ ಗೌರಿ ಅಂತ ಹೆಸರಿಟ್ಟು ಪ್ರೀತಿಯಿಂದ ಸಾಕಿದ್ದಾರೆ.

    ಕಳೆದ ಐದು ತಿಂಗಳ ಹಿಂದಷ್ಟೇ ಗೌರಿ ಗರ್ಭ ಧರಿಸಿದ್ದಳು. ಅಂದಿನಿಂದಲೂ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಐದು ತಿಂಗಳು ಮುಗಿದ ಬಳಿಕ ಮಗಳಿಗೆ ಹೇಗೆ ತವರು ಮನೆಯವರು ಸೀಮಂತ ಮಾಡ್ತಾರೆಯೋ ಅದೇ ಮಾದರಿಯಲ್ಲಿ ಇಂದು ಅದ್ಧೂರಿಯಾಗಿ ಗೌರಿಗೆ ಸೀಮಂತ ಮಾಡಿದ್ದಾರೆ. ಮನೆಯ ಮುಂದೆ ಶಾಮಿಯಾನ, ಮನೆಗೆಲ್ಲಾ ಸಿಂಗಾರ, ಹೂಗಳಿಂದ ಸಿಂಗರಿಸಿ, ಕೊರಳಲ್ಲಿ ಸೀರೆಯುಡಿಸಿ, ಮುತ್ತೈದೆಯರು ಆರತಿ ಮಾಡಿ ಬಗೆ ಬಗೆಯ ಅಡುಗೆ ಮಾಡಿ ಮೊದಲು ಗೌರಿಗೆ ಕೊಟ್ಟು ಮಂಗಳಾರತಿ ಮಾಡಿ ಸೀಮಂತ ಕಾರ್ಯ ಮಾಡಿದ್ದಾರೆ.

    ಸೀಮಂತ ಮಾಡುವ ಎರಡು ದಿನ ಪೂರ್ವದಿಂದಲೂ ತಯಾರಿ ಮಾಡಿಕೊಂಡಿದ್ದ ಕುಟುಂಬಸ್ಥರು, ಊರಲ್ಲಿದ್ದ ಸಂಬಂಧಿಕರನ್ನೂ ಕರೆಸಿದ್ದಾರೆ. ಅಷ್ಟೇ ಅಲ್ಲದೆ ಇಡೀ ಗ್ರಾಮದ ಜನರನ್ನ ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಬೆಳಗ್ಗೆ ಎಂಟು ಗಂಟೆಗೆ ಗೌರಿಯ ಮೈತೊಳೆದು ನಂತರ ಬಣ್ಣ ಬಳಿದು ಮಲ್ಲಿಗೆ, ಸೇವಂತಿ, ಚೆಂಡು ಹೂಗಳಿಂದ ಅಲಂಕಾರ ಮಾಡಲಾಯಿತು. ಇದಾದ ಬಳಿಕ ಗೌರಿ ಕಣ್ಣಿಗೆ ಕಾಡಿಗೆ ಬಳಿದು ಕೊರಳಲ್ಲಿ ಸೀರೆಯನ್ನ ಹಾಕಿ ಆರತಿ ಬೆಳಗೆ ಮಂಗಳಾರತಿಯನ್ನ ಹೇಳಿ ಪೂಜೆ ಸಲ್ಲಿಸಲಾಯಿತು.

    ಇತ್ತ ಬಗೆ ಬಗೆಯ ಅಡುಗೆಯನ್ನ ಮಾಡಿದ್ದು ಮೊದಲು ಗೌರಿಗೆ ಅದನ್ನ ತಿನ್ನಿಸಿ ನಂತರ ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ಶೀರಾ, ಸಜ್ಜಿಗೆ ರೊಟ್ಟಿ, ಬದನೆಕಾಯಿ ಪಲ್ಯ, ಅನ್ನ ಸಾಂಬಾರ ಬಡಿಸಲಾಯಿತು. ಇನ್ನೂ ಮನೆ ಮಗಳ ಸೀಮಂತ ಕಾರ್ಯ ಕೂಡ ಇಷ್ಟೊಂದು ಅದ್ಧೂರಿಯಾಗಿ ಮಾಡುತ್ತಿರಲಿಲ್ಲ, ಅದಕ್ಕಿಂತ ಹೆಚ್ಚಾಗಿ ಇಂದು ಗೌರಿಗೆ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ಸೀಮಂತ ಕಾರ್ಯ ಮಾಡಲಾಯಿತು.

    ಹಸುವನ್ನು ಮಗಳಂತೆ ನೋಡಿಕೊಂಡು ಅದ್ಧೂರಿಯಾಗಿ ಇಂದು ಸೀಮಂತ ಮಾಡಿರುವುದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರೈತರು ಅಂದ್ರೆ ಹಾಗೇನೆ ಅನ್ಸತ್ತೆ ಮನೆಯಲ್ಲಿ ಸಾಕುವ ಪ್ರತಿಯೊಂದು ಪ್ರಾಣಿಗಳಿಗೂ ಒಂದು ಸ್ಥಾನ ಮಾನ ಕೊಟ್ಟು ಮನಷ್ಯರಿಗಿಂತ ಹೆಚ್ಚಾಗಿ ಅವುಗಳನ್ನ ಸಾಕಿ ಪ್ರೀತಿಸುತ್ತಾರೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.

  • ಅತ್ತೆಯನ್ನೇ ದೇವರನ್ನಾಗಿಸಿದ ಸೊಸೆಯಂದಿರು – ಗುಡಿ ಕಟ್ಟಿ 10 ವರ್ಷಗಳಿಂದ ಪೂಜೆ

    ಅತ್ತೆಯನ್ನೇ ದೇವರನ್ನಾಗಿಸಿದ ಸೊಸೆಯಂದಿರು – ಗುಡಿ ಕಟ್ಟಿ 10 ವರ್ಷಗಳಿಂದ ಪೂಜೆ

    ಭೋಪಾಲ್: ಅತ್ತೆ ಸೂಸೆ ಜಗಳ ಎಲ್ಲರ ಮನೆಯಲ್ಲಿ ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಕುಟುಂಬ ಎಲ್ಲರಂತಿರದೆ ತಮ್ಮದೇ ಆಚರಣೆಯ ಮೂಲಕ ಗಮನ ಸೆಳೆದಿದೆ. ಅತ್ತೆ ಸಾವನ್ನಪ್ಪಿ 10 ವರ್ಷ ಕಳೆದರು ಕೂಡ ಅವರ ಮೂರ್ತಿ ಮಾಡಿ ಗುಡಿಕಟ್ಟಿ ಪ್ರತಿದಿನ ಪೂಜೆ ಮಾಡಿ ಆದರ್ಶ ಸೂಸೆಯಂದಿರಾಗಿ ಎಲ್ಲರ ಮನಗೆದ್ದಿದ್ದಾರೆ.

    ಚತ್ತೀಸಗಢದ ಬಿಲಾಸ್ಪುರ ಜಿಲ್ಲೆಯ ರತ್ನಾಪುರ ಗ್ರಾಮದ ತಂಬೋಲಿ ಕುಟುಂಬದ ಸೊಸೆಯಂದಿರ ಅತ್ತೆ ಗೀತಾ ದೇವಿ ತೀರಿಕೊಂಡಿದ್ದರು. ಆ ಬಳಿಕದಿಂದ ಅವರಿಗಾಗಿ ಗುಡಿ ಕಟ್ಟಿ ಪ್ರತಿದಿನ ಪೂಜೆ ಮತ್ತು ತಿಂಗಳಿಗೊಮ್ಮೆ ಅತ್ತೆ ಹೆಸರಿನಲ್ಲಿ ಭಜನೆ, ಕೀರ್ತನೆಗಳನ್ನು ಮಾಡುತ್ತಾ ಬಂದಿದ್ದಾರೆ.

    ಕೂಡು ಕುಟುಂಬವಾಗಿದ್ದ ತಂಬೋಲಿ ಮನೆತನದಲ್ಲಿ ಗೀತಾ ದೇವಿ ತನ್ನ 11 ಜನ ಸೊಸೆಯಂದಿರ ಪಾಲಿನ ನೆಚ್ಚಿನ ಸೂಸೆಯಾಗಿ ಗುರುತಿಸಿಕೊಂಡಿದ್ದರು. 2010ರಲ್ಲಿ ಗೀತಾ ಮರಣಹೊಂದಿದ್ದರು ಕೂಡ ಅವರ ಸೂಸೆಯಂದಿರು ಇಂದಿಗೂ ಬದುಕಿದ್ದಾಗ ಯಾವ ರೀತಿ ಅತ್ತೆಯೊಂದಿಗೆ ಆದರ್ಶವಾಗಿದ್ದರೋ ಅದೇ ರೀತಿ ಈಗಲೂ ಮುಂದುವರಿಸುವ ನಿಟ್ಟಿನಲ್ಲಿ ಅವರ ಪಾಲಿನ ನೀಜವಾದ ದೇವರರಾಗಿ ಅತ್ತೆಯನ್ನು ಕಾಣುತ್ತಿದ್ದಾರೆ.

    ಸೂಸೆಯಂದಿರನ್ನು ಅತ್ತೆ ಬದುಕಿದ್ದಾಗ ತಮ್ಮ ಸ್ವಂತ ಮಕ್ಕಳಂತೆ, ಪ್ರೀತಿ ವಾತ್ಸಲ್ಯದಿಂದ ಕಾಣುತ್ತಿದ್ದರಂತೆ. ಇದರಿಂದ ಅತ್ತೆ ತೀರಿಕೊಂಡ ನಂತರ ಅವರ ಆದರ್ಶ ವ್ಯಕ್ತಿತ್ವವನ್ನು ಮರೆಯಾಲಾಗದೆ ಸೂಸೆಯಂದಿರು ಅವರ ಮೂರ್ತಿ ಮಾಡಿ ಅದಕ್ಕೆ ತಮ್ಮ ಚಿನ್ನಾಭರಣವನ್ನು ಹಾಕಿ ಪ್ರತಿ ದಿನ ಪೂಜೆ ನೆರವೇರಿಸಿ ಸಂತೋಷ ಪಡುತ್ತಿದ್ದಾರೆ.

    ಈ ಕೂಡು ಕುಟುಂಬಕ್ಕೆ 20 ಎಕರೆ ಜಮೀನು, ಒಂದು ಹೋಟೆಲ್, ಒಂದು ದಿನಸಿ ಅಂಗಡಿ, ಒಂದು ಪಾನ್ ಶಾಪ್ ಮತ್ತು ಸೋಪ್ ಫ್ಯಾಕ್ಟರಿ ಇದ್ದು, ಇದರಲ್ಲಿ ಇವರೆಲ್ಲರೂ ಕೈಜೋಡಿಸಿ ಕೆಲಸ ನಿರ್ವಾಹಿಸುತ್ತಾರೆ. ಈ ಕುಟುಂಬದ ಇನ್ನೂಂದು ವಿಶೇಷತೆ, ಇಲ್ಲಿರುವ ಎಲ್ಲ ಹೆಣ್ಣು ಮಕ್ಕಳು ವಿದ್ಯಾವಂತರಾಗಿದ್ದು ಸ್ನಾತಕೋತ್ತರ ಪದವಿ ಪೂರೈಸಿದವರು ಇದ್ದಾರೆ. ಇವರೆಲ್ಲರು ಕೂಡ ಹೊಂದಾಣಿಕೆಯಿಂದ ಪ್ರತಿದಿನ ಎಲ್ಲರೂ ಸೇರಿ ಅಡುಗೆ ತಯಾರು ಮಾಡಿ ಜೊತೆಗೆ ಕೂತು ಊಟ ಮಾಡುತ್ತಾರೆ. ಹೀಗೆ ತುಂಬಿದ ಸಂಸಾರ ಬಹಳ ಅರ್ಥಪೂರ್ಣವಾಗಿ ಜೀವನ ಸಾಗಿಸಿ ಇತರರಿಗೆ ಆದರ್ಶವಾಗಿದೆ.

  • ಒಂದೇ ಕುಟುಂಬದ ಮೂವರಿಗೆ ಚಾಕು ಇರಿತ – ಇಬ್ಬರ ಸ್ಥಿತಿ ಗಂಭೀರ

    ಒಂದೇ ಕುಟುಂಬದ ಮೂವರಿಗೆ ಚಾಕು ಇರಿತ – ಇಬ್ಬರ ಸ್ಥಿತಿ ಗಂಭೀರ

    -ಗೂಸಾ ಕೊಟ್ಟ ಕುಟುಂಬದವರಿಗೆ ಚಾಕು ಇರಿದ

    ಮಡಿಕೇರಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಮೂವರಿಗೆ ಚಾಕುವಿನಿಂದ ಇರಿದಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.

    ಚಾಕುವಿನಿಂದ ಹಲ್ಲೆ ಮಾಡಿದ ಆರೋಪಿಯನ್ನು ರಾಮದಾಸ್ ಎಂದು ಗುರುತಿಸಲಾಗಿದೆ. ವಿಲ್ಸನ್ ಎನ್ನುವವರ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಚೂರಿ ಇರಿತಕ್ಕೆ ಒಳಗಾದವರನ್ನು ವಿಲ್ಸನ್(45), ಸ್ಟೀಫನ್(28) ಮತ್ತು 17 ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ.

    ಮಹಿಳೆಯರನ್ನು ಕೆಟ್ಟದೃಷ್ಟಿಯಿಂದ ನೋಡುತ್ತಿದ್ದ ಎಂಬ ಆರೋಪದ ಮೇಲೆ, ವಿಲ್ಸನ್ ಕುಟುಂಬದವರು ಕೆಲವು ತಿಂಗಳ ಹಿಂದೆ ರಾಮದಾಸ್‍ಗೆ ಗೂಸಾ ಕೊಟ್ಟಿದ್ದರಂತೆ. ಇದೇ ಜಿದ್ದು ಇಟ್ಟುಕೊಂಡಿದ್ದ ಪಾಪಿ ರಾಮದಾಸ್, ರಾತ್ರಿ ವಿಲ್ಸನ್ ಅವರ ಮನೆ ಬಳಿಗೆ ಹೋಗಿ ಮೂವರಿಗೂ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ಆರೋಪಿ ರಾಮದಾಸ್ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಕು ಇರಿತದಿಂದ ಹಲ್ಲೆಗೊಳಗಾದ ವಿಲ್ಸನ್ ಮತ್ತು ಸ್ಟೀಫನ್ ಇಬ್ಬರ ಸ್ಥಿತಿ ಗಭೀರವಾಗಿದೆ ಎನ್ನಲಾಗಿದೆ.

    ಘಟನೆ ತಿಳಿಯುತ್ತಿದ್ದಂತೆ ಮೂವರನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದರಿಂದ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸ್ಥಳಾಂತರ ಮಾಡಲಾಗಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 4ರ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಮರವೇರಿ ಕುಳಿತ ಯುವಕ

    4ರ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಮರವೇರಿ ಕುಳಿತ ಯುವಕ

    – ಬಾಲಕಿಯ ಕುಟುಂಬಸ್ಥರಿಂದ ಯುವಕನ ಹತ್ಯೆ

    ಪಾಟ್ನಾ: 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಮರವೇರಿ ಕುಳಿತ ಯುವಕನನ್ನು ಬಾಲಕಿಯ ಕುಟುಂಬಸ್ಥರು ಕ್ರೂರವಾಗಿ ಕೊಂದಿರುವ ಘಟನೆ ಬಿಹಾರ್‍ ನ ಕೈಮೂರ್ ನಲ್ಲಿ ನಡೆದಿದೆ.

    ಕೊಲೆಯಾದ ಯುವಕನನ್ನು ಸಿಪು ಕುಮಾರ್ ಎಂದು ಗುರುತಿಸಲಾಗಿದೆ. ಈತ ಕಬರ್ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಟ್ಯಾಪ್ ವಾಟರ್ ಸ್ಕೀಮ್‍ನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು.

    ಚಾಕ್ಲೇಟ್ ನೀಡುವ ನೆಪದಲ್ಲಿ ಸಿಪು ಕುಮಾರ್ ಬಾಲಕಿಯನ್ನು ಹತ್ತಿರದ ಪಂಚಾಯತ್ ಭವನಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಈ ವಿಷಯವನ್ನು ತಿಳಿದ ಬಾಲಕಿಯ ಕುಟುಂಬಸ್ಥರು ಯುವಕನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆದರೆ ಆರೋಪಿ ಮರದ ಮೇಲೆ ಅಡಗಿ ಕುಳಿತುಕೊಂಡಿದ್ದನು. ಅವನನ್ನು ಕೆಳಕ್ಕೆ ಇಳಿಸಿ ಕ್ರೂರವಾಗಿ ಕೊಂದು ಹಾಕಿದ್ದಾರೆ. ಈ ಕೊಲೆ ಆರೋಪದ ಮೇಲೆ ಬಾಲಕಿಯ ಚಿಕ್ಕಪ್ಪ ಜೈಲಿಗೆ ಹೋಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ಎಫ್‍ಐಆರ್ ದಾಖಲಿಸಲಾಗಿದೆ.

    ಮೃತ ಕುಮಾರ್ ಕುಟುಂಬ ಹೇಳುವ ಪ್ರಕಾರ, ಬಾಲಕಿ ಆಟವಾಡುತ್ತಿದ್ದಾಗ ಗಾಯಗೊಂಡಿದ್ದಳು. ಬಾಲಕಿಗೆ ಚಾಕ್ಲೇಟ್ ಕೊಟ್ಟು ಸಮಾಧಾನ ಮಾಡುತ್ತಿರುವಾಗ ತಪ್ಪಾಗಿ ತಿಳಿದ ಜನರು ಅವನನ್ನು ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಘಟನೆಯ ಕುರಿತಾಗಿ ಎರಡೂ ಕಡೆಯಿಂದಲೂ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿಲ್ನಾವಾಜ್ ಅಹ್ಮದ್ ತಿಳಿಸಿದ್ದಾರೆ.

  • ಡಿವೈಎಸ್‍ಪಿ ಲಕ್ಷ್ಮಿ ಅಂತಿಮ ದರ್ಶನಕ್ಕೆ ಜನಸಾಗರ- ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ

    ಡಿವೈಎಸ್‍ಪಿ ಲಕ್ಷ್ಮಿ ಅಂತಿಮ ದರ್ಶನಕ್ಕೆ ಜನಸಾಗರ- ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ

    ಕೋಲಾರ: ಸಿಐಡಿ ಡಿವೈಎಸ್‍ಪಿ ಲಕ್ಷ್ಮಿ ಅಂತಿಮ ಸಂಸ್ಕಾರವನ್ನು ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು.

    ಜಿಲ್ಲೆಯ ಮಾಲೂರು ತಾಲೂಕಿನ ಸ್ವಗ್ರಾಮ ತುರುವಾಲಟ್ಟಿಯ ಹೊರವಲಯದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಲಕ್ಷ್ಮಿ ಸಂಬಂಧಿಕರು, ಗ್ರಾಮಸ್ಥರು, ಪೊಲೀಸ್ ಇಲಾಖೆ ಅಧಿಕಾರಿಗಳು ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದರು. ಅಲ್ಲದೆ ಗ್ರಾಮದ ನೂರಾರು ಜನ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಇದೇ ವೇಳೆ ಪೊಲೀಸರು ಗೌರವ ವಂದನೆ ಸಲ್ಲಿಸಿದರು.

    ಕೋಲಾರ ಎಸ್‍ಪಿ ಕಾರ್ತಿಕ್ ರೆಡ್ಡಿ, ಎಎಸ್‍ಪಿ ಜಾಹ್ನವಿ ಸಹ ಅಂತಿಮ ದರ್ಶನ ಪಡೆದರು. ಬಳಿಕ ಪತಿ ನವೀನ್ ಹಾಗೂ ತಂದೆ ವೆಂಕಟೇಶಪ್ಪ ಅವರಿಗೆ ಸಮಾಧಾನಪಡಿಸಿದರು. ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಲಕ್ಷ್ಮಿ ಅವರ ಪತಿ ನವೀನ್ ಅಂತಿಮ ವಿಧಿ ವಿಧಾನ ನೆರವೇರಿಸಿದರು. ಕೋಲಾರ ಪೊಲೀಸರು ಮೂರು ಸುತ್ತು ಕುಶಾಲು ತೋಪು ಸಿಡಿಸಿ ಗೌರವ ಸಲ್ಲಿಸಿದರು. ನೂರಾರು ಗ್ರಾಮಸ್ಥರು ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.

    ಲಕ್ಷ್ಮಿ ಬೆಂಗಳೂರಿನ ತನ್ನ ಸ್ನೇಹಿತನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಇವರ ಆತ್ಮಹತ್ಯೆಯ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಕೌಟುಂಬಿಕ ಸಮಸ್ಯೆ ಇರಲಿಲ್ಲ ಎಂದು ಅವರ ಮನೆಯವರು ತಿಳಿಸಿದ್ದಾರೆ. ಆದರೆ ಸತ್ಯಾಸತ್ಯತೆ ತನಿಖೆ ಬಳಿಕವೇ ತಿಳಿಯಬೇಕಿದೆ. 8 ವರ್ಷದ ಹಿಂದೆ ಲಕ್ಷ್ಮಿ ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಪೋಷಕರಿಂದ ದೂರ ಇದ್ದ ಲಕ್ಷ್ಮಿ, ಬೆಂಗಳೂರಿನಲ್ಲಿ ವಾಸವಾಗಿದ್ದರು.

  • ಗ್ರಾಮ ಪಂಚಾಯತಿ ಚುನಾವಣೆ – ಪತಿ ವಿರುದ್ಧ ನಿಂತ ಪತ್ನಿ

    ಗ್ರಾಮ ಪಂಚಾಯತಿ ಚುನಾವಣೆ – ಪತಿ ವಿರುದ್ಧ ನಿಂತ ಪತ್ನಿ

    ಮಡಿಕೇರಿ: ಗ್ರಾಮ ಪಂಚಾಯತ್‌ ಚುನಾವಣಾ ಕಣ ರಂಗೇರುತ್ತಿದ್ದು ಕೊಡಗಿನಲ್ಲಿ ಗಂಡನ ವಿರುದ್ಧವಾಗಿ ಹೆಂಡತಿ ಸ್ಪರ್ಧಿಸುತ್ತಿದ್ದಾರೆ.

    ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್ ಆದ ಕಂಬಿಬಾಣೆಯಲ್ಲಿ ಕಿಶೋರ್ ಅವರು ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅದೇ ವಾರ್ಡಿನಿಂದಲೇ ಅವರ ಪತ್ನಿ ಶ್ರೀಜಾ ಕೂಡ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ.

    22 ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಗಂಡ ಹೆಂಡತಿ ಇಬ್ಬರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  ಇಬ್ಬರೂ ಒಂದೇ ವಾರ್ಡಿನಿಂದ ಸ್ಪರ್ಧಿಸಿರುವ ಬಗ್ಗೆ ಪ್ರಶ್ನಿಸಿದರೆ ಮನೆಯಲ್ಲಿ ಅಷ್ಟೇ ನಾವು ಪತಿ ಪತ್ನಿ. ಹೊರಗೆ ಚುನಾವಣಾ ಕಣದಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳು. ಜನರಿಗೆ ಯಾರ ಮೇಲೆ ಒಲವಿದೆಯೋ ಅವರಿಗೆ ಮತಹಾಕಿ ಗೆಲ್ಲಿಸುತ್ತಾರೆ. ಇಬ್ಬರಲ್ಲಿ ಯಾರು ಗೆದ್ದರೂ ಸಂತೋಷವೇ. ಆದರೆ ಜನರಿಗೆ ಯಾರು ಬೇಕಾಗಿದೆಯೋ ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ನಾವಿಬ್ಬರು ಪ್ರಾಮಾಣಿಕವಾಗಿ ಮತಯಾಚನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭ್ಯರ್ಥಿ ಕಿಶೋರ್.

    ಮತ್ತೊಂದು ವಿಶೇಷವೆಂದರೆ ಇಬ್ಬರು ಒಟ್ಟೊಟ್ಟಿಗೆ ಹೋಗಿ ಮತಯಾಚನೆ ಮಾಡುತ್ತಿದ್ದು, ಇಬ್ಬರು ನಮಗೆ ಮತ ನೀಡಿ ಅಂತ ಕೇಳುತ್ತಿದ್ದಾರೆ. ಇನ್ನು ಇದೇ ವಾರ್ಡ್ ನಿಂದ ಇನ್ನೂ 9 ಜನರು ಕಣದಲ್ಲಿದ್ದು, ಜನರು ಮಾತ್ರ ಯಾರನ್ನು ಆಯ್ಕೆ ಮಾಡುತ್ತಾರೋ ಕಾದು ನೋಡಬೇಕಾಗಿದೆ.

  • ನೆಲಮಂಗಲದ ಬಳಿ ಭೀಕರ ಅಪಘಾತ – ಯೂಟರ್ನ್‍ನಲ್ಲಿ ತರಗೆಲೆಯಂತೆ ಉರುಳಿದ ಮಕ್ಕಳು

    ನೆಲಮಂಗಲದ ಬಳಿ ಭೀಕರ ಅಪಘಾತ – ಯೂಟರ್ನ್‍ನಲ್ಲಿ ತರಗೆಲೆಯಂತೆ ಉರುಳಿದ ಮಕ್ಕಳು

    ಬೆಂಗಳೂರು: ನೆಲಮಂಗಲದ ರಸ್ತೆ ತಿರುವಿನಲ್ಲಿ ಭಾರೀ ಅಪಘಾತವೊಂದು ನಡೆದಿದೆ. ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ನೆಲಮಂಗಲ ತಾಲೂಕಿನ ರಾಯರಪಾಳ್ಯದ ಯೂ ಟರ್ನ್‍ನಲ್ಲಿ ಈ ಅಪಘಾತ ಸಂಭವಿಸಿದೆ. ಗಂಡ, ಹೆಂಡತಿ ಹಾಗೂ ಮೂರು ಚಿಕ್ಕ ಮಕ್ಕಳ ಕುಟುಂಬವೊಂದು ಬೆಂಗಳೂರಿನಿಂದ ಬೈಕಿನಲ್ಲಿ ದಾವಣೆಗೆರೆಗೆ ತೆರಳುತ್ತಿತ್ತು. ಅದೃಷ್ಟವಶಾತ್ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.

    ರಾಯರಪಾಳ್ಯದ ಗೇಟ್ ಬಳಿ ಯೂ ಟರ್ನ್‍ನಲ್ಲಿ ಬೈಕ್ ಸ್ಕಿಡ್ ಆಗಿ ಮಕ್ಕಳು ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಒಂದು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲು ಮಾಡಲಾಗಿದೆ.

    ಇಡೀ ಕುಟುಂಬಕ್ಕೆ ಡಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಒಂದು ಮಗುವಿಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ರಸ್ತೆ ತಿರುವು ಹಾಗೂ ಸರ್ವಿಸ್ ರೋಡ್ ಅವ್ಯವಸ್ಥೆ ಹಿನ್ನೆಲೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.