Tag: family

  • ಜೀವವನ್ನೇ ಕಿತ್ತುಕೊಂಡ ಕೃಷಿ ಸಾಲ – ನಾಲ್ವರು ನೇಣಿಗೆ ಶರಣು

    ಜೀವವನ್ನೇ ಕಿತ್ತುಕೊಂಡ ಕೃಷಿ ಸಾಲ – ನಾಲ್ವರು ನೇಣಿಗೆ ಶರಣು

    – ಸಾಲಕ್ಕಾಗಿ ಇಡೀ ಕುಟುಂಬವೇ ಬಲಿ

    ಹೈದರಾಬಾದ್: ಕೃಷಿಗಾಗಿ ಮಾಡಿದ ಸಾಲದ ಹೊರೆಯಿಂದ ಮನನೊಂದ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನ ಮಂಚಿರ್ಯಾಲ ಜಿಲ್ಲೆಯ ಮಲ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ.

    ರೈತ ರಮೇಶ್(40) ಈತನ ಪತ್ನಿ ಹಾಗೂ ಮತ್ತು ಇಬ್ಬರು ಮಕ್ಕಳಾದ ಸೌಮ್ಯಾ(19) ಮತ್ತು ಅಕ್ಷಯ್(17) ನೇಣಿಗೆ ಶರಣಾಗಿದ್ದಾರೆ. ಸಾಲ ಬಾಧೆಗೆ ಸಿಲುಕಿದ ಒಂದು ಕುಟುಂಬದ ನಾಲ್ವರು ನೇಣು ಬೀಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.

    ನಾಲ್ವರು ನೇಣಿಗೆ ಶರಣಾಗುವ ಮುನ್ನ ಡೇತ್ ನೋಟ್ ಬರೆದಿಟ್ಟಿದ್ದಾರೆ. ನಿನ್ನೆ ನಮಗೆ ಸಾಲ ಕೊಟ್ಟವರಿಗೆ ವಾಪಸ್ ಸಾಲ ಕೊಡುತ್ತೇವೆ ಎಂದು ಮಾತುಕೊಟ್ಟಿದ್ದೆವು. ಆದರೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿಟ್ಟು ಸಾವನ್ನಪ್ಪಿದ್ದಾರೆ.

    ರೈತ ರಮೇಶ್ ಅವರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಕಳೆದ ವರ್ಷ ಸಾಕಷ್ಟು ಬೆಳೆ ಹಾನಿಯಾಗಿತ್ತು. ಮಗಳ ಮದುವೆಗೆಂದು ಸಾಲ ಮಾಡಿದ್ದಾರೆ. ಸಾಲ ತೀರಿಸಲು ಸಾಧ್ಯವಾಗಿಲ್ಲ. ಇದರ ನಡುವೆ ಸಾಲಗಾರರ ಕಾಟ ಜೋರಾಗಿತ್ತು. ನಿನ್ನೆ ಸಾಲ ಮರಳಿ ಕೊಡುವುದಾಗಿ ಮಾತುಕೊಟ್ಟಿದ್ದರು. ಆದರೆ ಹಣವನ್ನು ವಾಪಸ್ ಕೊಡುವ ಪರಿಸ್ಥಿತಿಯಲ್ಲಿ ರಮೇಶ್ ಅವರ ಕುಟುಂಬ ಇರಲಿಲ್ಲ. ಹೀಗಾಗಿ ಕುಟುಂಬದ ನಾಲ್ವರು ಸದಸ್ಯರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಮಂಚಿರ್ಯಾಲ ಜಿಲ್ಲಾ ಕಾಸಿಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಡುತ್ತಿದ್ದಾರೆ. ಸಾಲಕ್ಕಾಗಿ ಇಡೀ ಕುಟುಂಬವೇ ಬಲಿಯಾಗಿದೆ.

  • ಮೃತ ತಂದೆಯ ಕಣ್ಣು ದಾನ ಮಾಡಿದ ಮಕ್ಕಳು – ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

    ಮೃತ ತಂದೆಯ ಕಣ್ಣು ದಾನ ಮಾಡಿದ ಮಕ್ಕಳು – ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

    ಹಾವೇರಿ: ಮೃತ ತಂದೆಯ ಮಾಡುವ ಮೂಲಕವಾಗಿ ಕುಟುಂಬದ ಸದಸ್ಯರು ಸಾವಿನಲ್ಲೂ ಸಾರ್ಥಕತೆ ಮರೆದಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ನಡೆದಿದೆ.

    ರಾಣೇಬೆನ್ನೂರು ನಗರದ ಶಬರಿ ಕಾಲೋನಿಯ ನಿವಾಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಯಮ ನಿವೃತ್ತ ಚಾಲಕ ಶಿವಾನಂದ ಯಮ್ಮಿ(62) ಅವರ ಕಣ್ಣುಗಳನ್ನು ದಾನಮಾಡಲಾಗಿದೆ.

    ಶಿವಾನಂದ ಯಮ್ಮಿ ಅವರು ವಯೋಸಹಜವಾಗಿ ನಿಧನಹೊಂದಿದ್ದರು. ಯಮ್ಮಿ ಮಕ್ಕಳು ತಂದೆಯ ಎರಡು ಕಣ್ಣುಗಳನ್ನ ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಗೆ ದಾನಮಾಡಿದರು. ನೇತ್ರದಾನ ಮಾಡುವ ಮೂಲಕ ಎರಡು ಜೀವನಕ್ಕೆ ಬೆಳಕು ನೀಡಿದ್ದಾರೆ.

    ಅಕ್ಕಿ ಆಲೂರಿನ ಸ್ನೇಹಮೈತ್ರಿ ನೇತ್ರದಾನಿಗಳ ಬಳಗದ ಸಹಕಾರದೊಂದಿಗೆ ರಾಣೆಬೆನ್ನೂರಿನ ಡಾ. ಚಂದ್ರಶೇಖರ ಕೆಲಗಾರ ನೇತ್ರತ್ವದಲ್ಲಿ ನೇತ್ರಗಳನ್ನು ಸಂಗ್ರಹಿಸಲಾಯಿತು. ರಾಣೇಬೆನ್ನೂರು ನಗರದ ಜನತೆ ಹಾಗೂ ಅಪಾರ ಬಂದುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.

  • ಚಿಕ್ಕಪ್ಪನ ಮಗಳ ಮೇಲೆ ಅಪ್ರಾಪ್ತ ಬಾಲಕನಿಂದ ರೇಪ್

    ಚಿಕ್ಕಪ್ಪನ ಮಗಳ ಮೇಲೆ ಅಪ್ರಾಪ್ತ ಬಾಲಕನಿಂದ ರೇಪ್

    ದಾವಣಗೆರೆ: ಅಪ್ರಾಪ್ತ ಬಾಲಕನೋರ್ವ ಅಪ್ರಾಪ್ತ ವಯಸ್ಸಿನ ಚಿಕ್ಕಪ್ಪನ ಮಗಳ ಮೇಲೆ ಅತ್ಯಾಚಾರ ಎಸಗಿದ್ದು ಇದೀಗ ಬಾಲಕಿ ಗರ್ಭಿಣಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಲ್ಲಿ ನಡೆದಿದೆ.

    ಹೊನ್ನಾಳಿ ತಾಲೂಕಿನ ಗ್ರಾಮವೊಂದರಲ್ಲಿ 15 ವರ್ಷದ ಬಾಲಕಿ ಮೇಲೆ, ಅಪ್ರಾಪ್ತ ಬಾಲಕ ಅತ್ಯಾಚಾರ ಎಸಗಿದ್ದಾನೆ. ಅಪ್ರಾಪ್ತ ಬಾಲಕ ದೊಡ್ಡಪ್ಪನ ಮಗನಾಗಿದ್ದಾನೆ, ಅತ್ಯಾಚಾರಕ್ಕೊಳಗಾಗಿರುವ ಬಾಲಕಿ ಗರ್ಭಿಣಿಯಾಗಿದ್ದಾಳೆ.

    ಕೂಡು ಕುಟುಂಬದಲ್ಲಿ ವಾಸಿಸುತ್ತಿದ್ದ ಬಾಲಕ ಚಿಕ್ಕಪ್ಪನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

    ಅಪ್ರಾಪ್ತ ಬಾಲಕನ ಮೇಲೆ ಹೊನ್ನಾಳಿ ಪೆÇಲೀಸ್ ಠಾಣೆಯಲ್ಲಿ  ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧಕ್ಕೆ ಒಪ್ಪಿಸಿದ್ದಾರೆ.

  • ಕೊರೊನಾ ಲಸಿಕೆ ನೆಪದಲ್ಲಿ ನಿದ್ರೆ ಮಾತ್ರೆ ನೀಡಿ ಆಭರಣ ದೋಚಿ ಯುವತಿ ಪರಾರಿ

    ಕೊರೊನಾ ಲಸಿಕೆ ನೆಪದಲ್ಲಿ ನಿದ್ರೆ ಮಾತ್ರೆ ನೀಡಿ ಆಭರಣ ದೋಚಿ ಯುವತಿ ಪರಾರಿ

    ಚೆನ್ನೈ: 26 ವರ್ಷದ ಯುವತಿಯೊಬ್ಬಳು ತನ್ನ ಚಿಕ್ಕಮ್ಮ ಹಾಗೂ ಆಕೆಯ ಕುಟುಂಬಕ್ಕೆ ಕೋವಿಡ್-19 ಲಸಿಕೆ ನೀಡುವ ನೆಪದಲ್ಲಿ ನಿದ್ರೆ ಮಾತ್ರೆ ನೀಡಿ ಚಿನ್ನದ ಆಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಆರೋಪಿ ಯುವತಿಯನ್ನು ಸತ್ಯಪ್ರಿಯ ಎಂದು ಗುರುತಿಸಲಾಗಿದ್ದು, ಈಕೆ ಪೆರಂಬಲೂರು ಜಿಲ್ಲೆಯ ಕುನ್ನಂ ತಾಲೂಕಿನ ಕೀಜ್ಕುಡಿಕಾಡು ಗ್ರಾಮದ ನಿವಾಸಿಯಾಗಿದ್ದಾಳೆ. ಅಲ್ಲದೆ ಆನ್‍ಲೈನ್ ಮಾರ್ಕೆಟಿಂಗ್ ಏಜೆನ್ಸಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ.

    ಗುರುವಾರ ಸತ್ಯಪ್ರಿಯ ತನ್ನ ಚಿಕ್ಕಮ್ಮ ಕೆ. ರಸತಿ ಮನೆಗೆ ತೆರಳಿದ್ದಾನೆ. ಈ ವೇಳೆ ಚಿಕ್ಕಮ್ಮ, ಚಿಕ್ಕಪ್ಪ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡಬಹುದಾ ಎಂದು ಕೇಳಿದ್ದಾಳೆ. ಇದಕ್ಕೆ ರಸತಿ ಅನುಮತಿ ನೀಡಿದ್ದು, ಸತ್ಯಪ್ರಿಯ ಲಸಿಕೆ ಹೆಸರಿನಲ್ಲಿ ನಿದ್ರೆ ಮಾತ್ರೆಯನ್ನು ನೀಡಿದ್ದಾಳೆ.

    ಲಸಿಕೆ ಪಡೆದ ಕೆಲ ಹೊತ್ತಿನಲ್ಲಿಯೇ ರಸತಿ, ಪತಿ ಕೃಷ್ಣಮೂರ್ತಿ ಮತ್ತು ಇಬ್ಬರು ಪುತ್ರಿಯರಾದ ಕೃತಿಂಗ ಮತ್ತು ಮೋನಿಕಾ ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಳಿಕ ಮರು ದಿನ ಬೆಳಗ್ಗೆ ಎಲ್ಲರೂ ಎಚ್ಚರಗೊಂಡ ರಸತಿಗೆ ಮಾಂಗಲ್ಯ ಸರ, ಕೃತಿಗರವರ ಮಾಂಗಲ್ಯ ಸರ, ಮತ್ತೊಂದು ಸರ ಹಾಗೂ ಮೋನಿಕಾರವರ ಸರ ಕಾಣೆಯಾಗಿರುವ ವಿಚಾರವನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಗಾಬರಿಗೊಂಡ ಕುಟುಂಬಸ್ಥರು ಈ ಸಂಬಂಧಪಟ್ಟಂತೆ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ.

    ಇದೀಗ ಪೊಲೀಸರು ಯುವತಿಯನ್ನು ಪತ್ತೆ ಮಾಡಿ ಬಂಧಿಸಿದ್ದು, ವಿಚಾರಣೆ ವೇಳೆ ಯುವತಿ ನಿದ್ರೆ ಮಾತ್ರೆಯನ್ನು ನೀಡಿ ಆಭರಣವನ್ನು ದೋಚಿ ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದೀಗ ಪೊಲೀಸರು ಯುವತಿ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪ್ರೇಮ ವಿವಾಹ, ತಂಗಿಯ ಪತಿಯನ್ನೇ ಕೊಂದ ಪಾಪಿ- ಆಘಾತದಿಂದ ಮಹಿಳೆಯೂ ಆತ್ಮಹತ್ಯೆ

    ಪ್ರೇಮ ವಿವಾಹ, ತಂಗಿಯ ಪತಿಯನ್ನೇ ಕೊಂದ ಪಾಪಿ- ಆಘಾತದಿಂದ ಮಹಿಳೆಯೂ ಆತ್ಮಹತ್ಯೆ

    ಭೋಪಾಲ್: ಪ್ರೇಮ ವಿವಾಹವಾಗಿದ್ದಕ್ಕೆ ಸಹೋದರಿಯ ಪತಿಯ ರುಂಡವನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದು, ಸುದ್ದಿ ತಿಳಿದ ಪತ್ನಿ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

    ಮಧ್ಯಪ್ರದೇಶದ ಜಬಲ್‍ಪುರದಲ್ಲಿ ಘಟನೆ ನಡೆದಿದ್ದು, ವಿವಾಹಕ್ಕೆ ನಾವು ಒಪ್ಪಿದ್ದೇವೆ ಮನೆಗೆ ಬಾ ಎಂದು ತನ್ನ ಸಹೋದರಿಯನ್ನು ಕುಟುಂಬಸ್ಥರು ಕರೆಸಿಕೊಂಡಿದ್ದಾರೆ. ಬಳಿಕ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿ, ಅಳಿಯನ ರುಂಡವನ್ನೇ ಕೊಡಲಿಯಿಂದ ಕತ್ತರಿಸಿ ಕೊಲೆ ಮಾಡಲಾಗಿದ್ದು, ಘಟನೆಯಿಂದ ಬೇಸತ್ತ ಮಹಿಳೆ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವ್ಯಕ್ತಿ ಅಳಿಯನ ರುಂಡವನ್ನು ಪೊಲೀಸ್ ಠಾಣೆಗೇ ಕೊಂಡೊಯ್ದಿದ್ದು, ಬರುವಷ್ಟರಲ್ಲಿ ಸಹೋದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಆರೋಪಿ ಕೊಡಲಿಯಿಂದ ತನ್ನ ಅಳಿಯನ ಕತ್ತು ಸೀಳಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಮನೆಯಲ್ಲೇ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣದ ಕುರಿತು ಪೊಲೀಸರು ಗಂಭೀರವಾಗಿ ತನಿಖೆ ಕೈಗೊಂಡಿದ್ದು, ಮಹಿಳೆಯದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ವ್ಯಕ್ತಿಯ ಕೊಲೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿಯನ್ನು ಬಂಧಿಸಿದ್ದಾರೆ.

    ಪ್ರೇಮಿಗಳಿಬ್ಬರೂ ಎರಡು ತಿಂಗಳ ಹಿಂದೆ ವಿವಾಹವಾಗಿದ್ದಾರೆ. ಬಳಿಕ ಇಬ್ಬರೂ ಮನೆ ಬಿಟ್ಟು ಬೇರೆಡೆ ವಾಸವಾಗಿದ್ದಾರೆ. ಇಬ್ಬರೂ ಮನೆಯಿಂದ ಬೇರೆಯಾಗುತ್ತಿದ್ದಂತೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಫೆಬ್ರವರಿ 26ರಂದು ಮಹಿಳೆ ಹಾಗೂ ಆಕೆಯ ಪತಿ ಪೊಲೀಸ್ ಠಾಣೆಗೆ ಆಗಮಿಸಿ ತಾವಿಬ್ಬರೂ ವಿವಾಹವಾಗಿರುವ ಬಗ್ಗೆ ತಿಳಿಸಿದ್ದಾರೆ.

    ಈ ಘಟನೆ ನಡೆದ ಬಳಿಕ ಸಂತ್ರಸ್ತನ ಕುಟುಂಬಸ್ಥರು ವಿವಾಹವನ್ನು ಒಪ್ಪಿಕೊಂಡಿದ್ದು, ಸಂತ್ರಸ್ತನ ಕುಟುಂಬದ ಜೊತೆ ಹಳೆ ದ್ವೇಷ ಇದ್ದಿದ್ದರಿಂದ ಮಹಿಳೆಯ ಮನೆಯವರು ಒಪ್ಪಿರಲಿಲ್ಲ ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ.

  • ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ – ತಾಯಿ ಸಾವು

    ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ – ತಾಯಿ ಸಾವು

    ಹುಬ್ಬಳ್ಳಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಲಘಟಗಿ ತಾಲೂಕಿನ ಸಂಗದೇವರ ಕೊಪ್ಪದಲ್ಲಿ ನಡೆದಿದೆ.

    ಘಟನೆಯಲ್ಲಿ ತಾಯಿ ಸಾವನ್ನಪ್ಪಿದ್ದು, ಅದೃಷ್ಟವಶಾತ್ ಇಬ್ಬರು ಮಕ್ಕಳು ಬದುಕುಳಿದಿದ್ದಾರೆ. ಸಂಗವ್ವ ಮುದೆಣ್ಣವರ ಮೃತ ಮಹಿಳೆ. ಶಂಕ್ರಪ್ಪ ಮುದೆಣ್ಣವರ, ಸುರೇಶ್ ಮುದೆಣ್ಣವರ ಬದುಕುಳಿದವರು. ಇದರಲ್ಲಿ ಶಂಕ್ರಪ್ಪನ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕುಡಿಯುವ ನೀರಿನ ನಲ್ಲಿಯ ಬಳಿ ಇದ್ದ ಕಲ್ಲು ತೆಗೆದಿದ್ದ ಕಾರಣಕ್ಕೆ ಸಂಬಂಧಿ ಬಸಲಿಂಗಪ್ಪ ಮುದಣ್ಣವರ ಮತ್ತಿತರರು ಇತ್ತಿಚೆಗೆ ಸಂಗವ್ವ ಹಾಗೂ ಆಕೆಯ ಮಕ್ಕಳೊಂದಿಗೆ ಜಗಳವಾಡಿದ್ದರು. ತಾಯಿ-ಮಗನಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ಸಂಗವ್ವ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

    ಇದರಿಂದ ಆಕ್ರೋಶಗೊಂಡು ಬಸಲಿಂಗಪ್ಪ ಇತರರು ಸಂಗವ್ವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮನನೊಂದು ಸಂಗವ್ವ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, ಸಂಗವ್ವನನ್ನು ರಕ್ಷಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

    ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಾಕ್‍ನಲ್ಲಿ ಐವರು ಹಿಂದೂಗಳ ಹತ್ಯೆ

    ಪಾಕ್‍ನಲ್ಲಿ ಐವರು ಹಿಂದೂಗಳ ಹತ್ಯೆ

    ಇಸ್ಲಮಾಬಾದ್: ಹಿಂದೂ ಕುಂಟುಂಬವೊಂದರ ಐವರರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಮೃತರನ್ನು ಬೀರ್‍ಬಲ್ ದಾಸ್, ಮೇಘ್ವಾಲ್ ಹಾಗೂ ರಾಮ್ ಛಾಂದ್ ಎಂದು ಗುರತಿಸಲಾಗಿದೆ. ಟೈಲರಿಂಗ್ ಅಂಗಡಿಯನ್ನು ನಡೆಸಿ ಜೀವನ ನಡೆಸುತ್ತಿದ್ದರು. ಆದರೆ ಐವರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.

    ಪಾಕ್ ನಗರದ ರೀಮ್ ಯಾರ್ ಖಾನ್‍ನಿಂದ 15 ಕೀ.ಮೀ ದೂರವಿರುವ ಅಬುದಾಬಿ ಕಾಲನಿಯಲ್ಲಿ ಐವರ ಮೃತದೇಹ ಪತ್ತೆಯಾಗಿದೆ. ಹರಿತವಾದ ಆಯುಧಗಳಿಂದ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಐವರ ಸಾವಿನಿಂದ ಸ್ಥಳೀಯರು ಶಾಕ್ ಆಗಿದ್ದಾರೆ.

  • ಪಾರ್ಶ್ವವಾಯು ರೋಗಿಯನ್ನು ಜೋಲಿಯಲ್ಲಿ ಹೊತ್ತು ಚಿಕಿತ್ಸೆಗಾಗಿ 5 ಕಿ.ಮೀ ನಡೆದ ಕುಟುಂಬ

    ಪಾರ್ಶ್ವವಾಯು ರೋಗಿಯನ್ನು ಜೋಲಿಯಲ್ಲಿ ಹೊತ್ತು ಚಿಕಿತ್ಸೆಗಾಗಿ 5 ಕಿ.ಮೀ ನಡೆದ ಕುಟುಂಬ

    ಕಾರವಾರ: ಆಂಬುಲೆನ್ಸ್ ಇಲ್ಲದೇ ಐದು ಕಿಲೋಮೀಟರ್ ಜೋಲಿಯಲ್ಲಿ ಪಾರ್ಶ್ವವಾಯು ಪೀಡಿತ ರೋಗಿಯನ್ನು ಕಾಡಿನಲ್ಲೇ ಆಸ್ಪತ್ರೆಗೆ ಹೊತ್ತೊಯ್ದ ಮನ ಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವರೀಲಬೇಣಾದಲ್ಲಿ ನಡೆದಿದೆ.

    ನೂರಾ ಪೊಕ್ಕ ಗೌಡ(70) ಎಂಬವರು ನಿನ್ನೆ ಪಾರ್ಶ್ವವಾಯುಗೆ ಒಳಗಾಗಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಬೇಕಿತ್ತು. ಆದರೆ ವರೀಲಬೇಣಾದಲ್ಲಿ ರಸ್ತೆ ಸಮರ್ಪಕವಾಗಿ ಇಲ್ಲದ ಕಾರಣ ಆಂಬುಲೆನ್ಸ್ ಬಂದಿರಲಿಲ್ಲ. ಹೀಗಾಗಿ ಕೊನೆಗೆ ಕಾಡುಹಾದಿಯಲ್ಲಿ ಐದು ಕಿಲೋಮೀಟರ್ ಜೋಲಿ ಹೊತ್ತು ಅಂಕೋಲಾ ನಗರಕ್ಕೆ ತಂದಿದ್ದಾರೆ. ಅಂಕೋಲದಲ್ಲಿ ಸಹ ಆಂಬುಲೆನ್ಸ್ ಸಿಗದ ಕಾರಣ ಖಾಸಗಿ ವಾಹನ ಮಾಡಿ ಮಂಗಳೂರಿಗೆ ಕರೆದೊಯ್ಯಲಾಗಿದ್ದು, ಈ ಮನ ಕಲಕುವ ದೃಶ್ಯ ಪಬ್ಲಿಕ್ ಟಿವಿಗೆ ದೊರತಿದೆ.

    ಜಿಲ್ಲೆಯ ಹಲವು ಭಾಗದಲ್ಲಿ ನಗರ ಸಮೀಪವಿದ್ದರೂ ರಸ್ತೆಗಳು ಸಮರ್ಪಕವಾಗಿ ಇಲ್ಲದ ಕಾರಣ ಆಂಬುಲೆನ್ಸ್ ಗಳು ಬರಲು ನಿರಾಕರಿಸುತ್ತಾರೆ. ಇದಲ್ಲದೇ ಜಿಲ್ಲೆಯಲ್ಲಿ ಇರುವ 25 ಆಂಬುಲೆನ್ಸ್  ಗಳಲ್ಲಿ ಎಂಟು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಆಂಬುಲೆನ್ಸ್ ಗಳು ಕೆಟ್ಟು ನಿಂತಿದೆ.

    ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸಿಗದೇ ಪರದಾಡುವಂತಾಗಿದ್ದು ಬಹುತೇಕ ಹಲವು ಹಳ್ಳಿಗಳಲ್ಲಿ ಜೋಲಿಯೇ ಆಂಬುಲೆನ್ಸ್ ನಂತಾಗಿದೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಣ್ತೆರೆದು ಕೆಟ್ಟುಹೋದ ಆಂಬುಲೆನ್ಸ್ ಸರಿಪಡಿಸಿ, ರೋಗಗಳಿಗೆ ನೆರವಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಉತ್ಪಾದಕರ ಜೊತೆ ಒತ್ತಡ ಹಾಕಿ, ತೈಲ ಉತ್ಪಾದನೆ ಜಾಸ್ತಿ ಮಾಡಿಸುತ್ತೇವೆ – ಪ್ರಹ್ಲಾದ್ ಜೋಶಿ

    ಉತ್ಪಾದಕರ ಜೊತೆ ಒತ್ತಡ ಹಾಕಿ, ತೈಲ ಉತ್ಪಾದನೆ ಜಾಸ್ತಿ ಮಾಡಿಸುತ್ತೇವೆ – ಪ್ರಹ್ಲಾದ್ ಜೋಶಿ

    ವಿಜಯಪುರ: ತೈಲ ಉತ್ಪಾದಕರ ಮೇಲೆ ಒತ್ತಡ ಹಾಕಿ, ತೈಲ ಉತ್ಪಾದನೆ ಜಾಸ್ತಿ ಮಾಡಿಸುತ್ತೇವೆ ಎಂದು ಕೇಂದ್ರ ಇಂಧನ ಹಾಗೂ ಗಣಿ, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ಜಿಲ್ಲೆಯ ಪ್ರಸಿದ್ಧ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಪ್ರಲ್ಹಾದ ಜೋಶಿ ಭೇಟಿ ನೀಡಿ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಪರಿವಾರ ದೇವಸ್ಥಾನಕ್ಕೆ ಸಮೇತ ಭೇಟಿ ನೀಡಿದ ಸಚಿವರು 2019 ಚುನಾವಣೆ ನಂತರ ದೇವರ ದರ್ಶನಕ್ಕೆ ಬಂದಿರಲಿಲ್ಲ. ಹಾಗಾಗಿ ಈಗ ಕುಟುಂಬ ಸಮೇತ ದೇವರ ದರ್ಶನಕ್ಕೆ ಬಂದಿದ್ದೇನೆ ಎಂದರು.

    ತೈಲ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಿಗೆ ಸೇರಿ ತೈಲದ ಮೇಲಿನ ತೆರಿಗೆ ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆದಿದ್ದು, ತೈಲ ದರವನ್ನು ಜಿಎಸ್‍ಟಿ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ರಾಜ್ಯ ಸರ್ಕಾರಗಳು ಒಪ್ಪುತ್ತಿಲ್ಲ, ಸ್ವಲ್ಪ ದಿನಗಳಲ್ಲಿ ಇದಕ್ಕೆ ಪರಿಹಾರ ಸಿಗುತ್ತದೆ ಎಂದು ಸ್ಪಷ್ಟ ಪಡಿಸಿದರು.

    ದೇಶದ ಒಟ್ಟಾರೆ ಆರ್ಥಿಕ ಸ್ಥಿತಿ ಕೊರೊನಾ ಕಾರಣದಿಂದ ಕುಸಿದಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ಇದ್ದ ನಿರುದ್ಯೋಗ ಸಮಸ್ಯೆ ಜನವರಿಯಲ್ಲಿ ಬಗೆ ಹರಿದಿದ್ದು, ಆರ್ಥಿಕತೆ ಮುಂದೆ ಹೋಗುತ್ತಿದೆ ಎಂದು ವಿವರಿಸಿದರು.

    ರಾಜ್ಯದ ಮುಖ್ಯಮಂತ್ರಿ ಸಿಎಂ ಯಡ್ಡಿಯೂರಪ್ಪ ನವರು ಚೆನ್ನಾಗಿ ಆಡಳಿತವನ್ನು ಮಾಡುತ್ತಿದ್ದಾರೆ. ಅವರು ಒಬ್ಬ ಅನುಭವಿ ಹಾಗೂ ಜನಪ್ರಿಯ ನಾಯಕರು. ಅವರು ಅತ್ಯುತ್ತಮವಾಗಿ ಆಡಳಿತ ನಡೆಸುತ್ತಿರುವಾಗ ಬೇರೆ ಚರ್ಚೆಗಳಿಗೆ ನಾವೇಕೆ ಅವಕಾಶ ಕೊಡಬೇಕು. ಅವರ ನೇತೃತ್ವದಲ್ಲೇ ಸರಕಾರ ನಡೆಯುತ್ತದೆ ಸಿಎಂ ಪರ ಬ್ಯಾಟಿಂಗ್ ಮಾಡಿದರು.

    ಯಡಿಯೂರಪ್ಪ ಹಾಗೂ ವಿಜಯೇಂದ್ರ ಮೇಲೆ ಭ್ರಷ್ಟಾಚಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಉತ್ತಮ ಆಡಳಿತ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲೂ ಅವರ ನೇತೃತ್ವದಲ್ಲೇ ಸರಕಾರ ಮುಂದುವರಿಯುತ್ತದೆ. ಯಡಿಯೂರಪ್ಪ ನವರ ಕುರಿತು ಇದಕ್ಕಿಂತ ಹೆಚ್ಚು ನಾನು ಏನು ಹೇಳಲು ಬಯಸುವುದಿಲ್ಲ ಎಂದು ತಿಳಿಸಿದರು.

    ಸಿಎಂ ಮಗ ವಿಜಯೇಂದ್ರ ಬಗ್ಗೆ ಜೋಶಿ ಮಾತನಾಡದೆ ಕೇವಲ ಸಿಎಂ ಯಡ್ಡಿಯೂರಪ್ಪನವರನ್ನು ಮಾತ್ರ ಸಮರ್ಥಿಸಿಕೊಂಡರು. ಯತ್ನಾಳ್ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ ಜೋಶಿ ನಂತರ ನೈಸರ್ಗಿಕ ಅನಿಲದ ಕುರಿತು ಮಾಹಿತಿ ನೀಡಲು ಮುಂದಾಗಿ, ಬಹಳ ಕಡೆ ನೈಸರ್ಗಿಕ ಅನಿಲ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ನಗರ ಪ್ರದೇಶಗಳಲ್ಲಿ ನೈಸರ್ಗಿಕ ಅನಿಲ ಉಳಿದ ಕಡೆಗಳಿಗಿಂತ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟರು.

  • ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆಗೈದ ಚಿಕ್ಕಪ್ಪ

    ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆಗೈದ ಚಿಕ್ಕಪ್ಪ

    ಧಾರವಾಡ: ಕುಟುಂಬದೊಳಗಿನ ಜಗಳದ ಮಧ್ಯೆ ಯುವಕನೋರ್ವನನ್ನು ಆತನ ಚಿಕ್ಕಪ್ಪನೇ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.

    26 ವರ್ಷದ ಆಕಾಶ್ ಕೋಟೂರ ಎಂಬಾತನೇ ಚಿಕ್ಕಪ್ಪನಿಂದ ಕೊಲೆಯಾದ ದುರ್ದೈವಿ. ಕೊಲೆ ಮಾಡಿರುವ ಆರೋಪಿಯನ್ನು ಪ್ರಕಾಶ್ ಕೋಟೂರ ಎಂದು ಗುರುತಿಸಲಾಗಿದೆ. ಆಕಾಶ್ ಆಗಾಗ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದನಂತೆ. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮನೆಯೊಳಗೆ ಇಂದು ಜಗಳ ನಡೆದಿದೆ. ನಂತರ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿ ಪ್ರಕಾಶ್ ಕಬ್ಬಿಣದ ಸಲಾಕೆಯಿಂದ ಆಕಾಶ್ ನ ತಲೆಗೆ ಹೊಡೆದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಆಕಾಶ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

     

    ಕೊಲೆಯ ಸುದ್ದಿ ತಿಳಿಯುತಿದ್ದಂತೆ ಸ್ಥಳಕ್ಕೆ ಡಿಸಿಪಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಕಾಶ್‍ನನ್ನು ಆತನ ಚಿಕ್ಕಪ್ಪ ಪ್ರಕಾಶ್ ಕೊಲೆ ಮಾಡಿದ್ದು, ಈ ಕೊಲೆಗೆ ಕುಟುಂಬದೊಳಗಿನ ಜಗಳವೇ ಕಾರಣವಾಗಿದೆ, ಆಕಾಶ್ ಅಗಾಗ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಪ್ರಕಾಶ್ ಹಾಗೂ ಆಕಾಶ್ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಹಿಂದೆ ಬೇರೆ ಏನಾದರೂ ಬಲವಾದ ಕಾರಣ ಇದೆಯಾ ಎನ್ನುವ ಬಗ್ಗೆ ತನಿಖೆ ನಡೆಸಿ ಪತ್ತೆ ಮಾಡಲಾಗುವುದು. ಸದ್ಯ ಕೊಲೆ ಮಾಡಿರುವ ಪ್ರಕಾಶ್ ಪರಾರಿಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.