Tag: family

  • 92ರ ವೃದ್ಧೆ, 9ರ ಬಾಲಕಿ ಸೇರಿ ಒಂದೇ ಕುಟುಂಬದ 11 ಸೋಂಕಿತರು ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

    92ರ ವೃದ್ಧೆ, 9ರ ಬಾಲಕಿ ಸೇರಿ ಒಂದೇ ಕುಟುಂಬದ 11 ಸೋಂಕಿತರು ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

    ಶಿವಮೊಗ್ಗ: ಕೊರೊನಾ ಸೋಂಕಿಗೆ ಈಡಿ ದೇಶವೇ ತಲ್ಲಣಗೊಂಡಿದೆ. ಪ್ರತಿನಿತ್ಯ ಎಲ್ಲೆಡೆ ಸಾವು ನೋವುಗಳದ್ದೆ ಸುದ್ದಿ ಸದ್ದು ಮಾಡುತ್ತಿದೆ. ಇದರಿಂದಾಗಿ ಜನರು ಸಹ ಭಯಭೀತರಾಗಿದ್ದಾರೆ. ಆಕ್ಸಿಜನ್ ಸಿಗದೆ ನರಳಾಡಿ ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿ ನಡುವೆ ಒಂದೇ ಕುಟುಂಬದ 11 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿ ಜಯಿಸಿ ಬಂದಿದ್ದಾರೆ.

    ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಾರಗೊಂಡನಕೊಪ್ಪ ಗ್ರಾಮದ ಒಂದೇ ಕುಟುಂಬದ 92 ವರ್ಷದ ವೃದ್ದೆಯಿಂದ ಹಿಡಿದು 9 ವರ್ಷದ ಬಾಲಕಿ ಸೇರಿದಂತೆ 11 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಸೋಂಕಿಗೆ ಒಳಗಾದ ಎಲ್ಲರೂ ಚಿಕಿತ್ಸೆಗಾಗಿ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಇದೇ ತಿಂಗಳ 4ರಂದು ಬೆಂಗಳೂರಿನಲ್ಲಿ ನಡೆದ ಸಂಬಂಧಿಕರ ಮನೆಯ ಮುಂಜಿ ಕಾರ್ಯಕ್ರಮವೊಂದರಲ್ಲಿ ಕುಟುಂಬದ 11 ಮಂದಿ ಸದಸ್ಯರಲ್ಲಿ ಕೆಲವರು ಭಾಗವಹಿಸಿದ್ದರು. ಅದೇ ದಿನ ದಾವಣಗೆರೆಯಲ್ಲಿ ನಡೆದ ಸಂಬಂಧಿಕರ ಸಮಾರಂಭದಲ್ಲಿ ಕೆಲವು ಮಂದಿ ಭಾಗವಹಿಸಿದ್ದರು. ಎಲ್ಲರೂ ಸಮಾರಂಭ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದರು. ಮನೆಗೆ ವಾಪಸ್ ಆದ ಬಳಿಕ ಕುಟುಂಬದಲ್ಲಿ ಮೊದಲು ಒಬ್ಬರಿಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ಕೋವಿಡ್ ತಪಾಸಣೆಗೆ ಒಳಗಾದ ಬಳಿಕ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ನಂತರ ಮನೆಯವರಿಗೆ ಎಲ್ಲರಿಗೂ ಕೊರೊನಾ ಸೋಂಕು ಪತ್ತೆಯಾಗಿತ್ತು.

    ಸೋಂಕು ಪತ್ತೆಯಾದ ಒಂದೇ ಕುಟುಂಬದ 11 ಮಂದಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿತ್ತು. ಇದೀಗ ಎಲ್ಲ 11 ಮಂದಿ ಕುಟುಂಬದ ಸದಸ್ಯರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಎಲ್ಲರೂ ಹೋಮ್ ಐಸಲೋಷನ್ ಗೆ ಒಳಗಾಗಿದ್ದಾರೆ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಕುಟುಂಬ ಕೋವಿಡ್ ಗೆ ಯಾರು ಭಯಪಡಬೇಡಿ. ಆದರೆ ಕೋವಿಡ್ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿಕೊಂಡಿದೆ.

  • ಕೊರೊನಾ ವೀಕೆಂಡ್ ಲಾಕ್ ಡೌನ್: ವಿವಾಹ ಸಂಭ್ರಮವಾಯ್ತು ಯೂಟ್ಯೂಬ್ ಲೈವ್!

    ಕೊರೊನಾ ವೀಕೆಂಡ್ ಲಾಕ್ ಡೌನ್: ವಿವಾಹ ಸಂಭ್ರಮವಾಯ್ತು ಯೂಟ್ಯೂಬ್ ಲೈವ್!

    ಚಾಮರಾಜನಗರ: ಕೊರೊನಾ ನಿಯಂತ್ರಣಕ್ಕೆ ಹಲವಾರು ಕ್ರಮ ಕೈಗೊಂಡಿರುವ ಸರ್ಕಾರ ಮದುವೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 50 ಜನಕ್ಕೆ ಮಿತಿಗೊಳಿಸಿದೆ. ಹೀಗಾಗಿ ವಿವಾಹ ಸಂಭ್ರಮವನ್ನು ಯೂಟ್ಯೂಬ್ ಲೈವ್ ಮಾಡಲಾಗಿದೆ.

    ಸರ್ಕಾರ ವಿವಾಹ ಸಮಾರಂಭಗಳಿಗೆ 50 ಜನರಿಗೆ ಮಿತಿ ಹೇರಿದ ಕೂಡಲೇ ಸರ್ಕಾರದ ಮಾರ್ಗಸೂಚಿ ಪಾಲಿಸಲು ಮುಂದಾದ ಚಾಮರಾಜನಗರದ ಕುಟುಂಬವೊಂದು ಮದುವೆಯಲ್ಲಿ ಭಾಗವಹಿಸುವರ ಸಂಖ್ಯೆಯನ್ಮು ತೀರಾ ಹತ್ತಿರದ ಸಂಬಂಧಿಕರನ್ನೊಳಗೊಂಡಂತೆ 40 ಜನರಿಗೆ ಸೀಮಿತಗೊಳಿಸಿ ಉಳಿದ ಆಹ್ವಾನಿತರಿಗೆ ಮದುವೆ ಸಮಾರಂಭವನ್ನು ಕಣ್ತುಂಬಿಕೊಳ್ಳುವಂತೆ ಮಾಡಲು ಯುಟ್ಯೂಬ್ ಲೈವ್ ಮೊರೆ ಹೋಗಿದ್ದಾರೆ.

    ಚಾಮರಾಜನಗರದ ಶಂಕರಪುರ ಬಡಾವಣೆಯ ಎಸ್. ಗಾಯತ್ರಿ ಮತ್ತು ಎಸ್ ರಾಮಮೂರ್ತಿ ಅವರ ಪುತ್ರ ಆರ್. ಚೇತನ್ ಹಾಗೂ ನಂಜನಗೂಡಿನ ಕೋಮಲ ಎಸ್.ಗುರುರಾಜ್ ದಂಪತಿಯ ಪುತ್ರಿ ಐಶ್ವರ್ಯ ಅವರ ಮದುವೆಯನ್ನು ಇಂದು ನಂಜನಗೂಡು ತಾಲೂಕು ಸಿಂಧುವಳ್ಳಿಯ ಶ್ರೀ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ನಡೆಸಲು ನಿಶ್ಚಯಿಸಲಾಗಿತ್ತು.

    ಮದುವೆಗೆ ವಧು ವರ ಎರಡೂ ಕಡೆಯಿಂದ 2000ಕ್ಕೂ ಹೆಚ್ಚು ಜನರನ್ನು ಆಹ್ವಾನಿಸಲಾಗಿತ್ತು. ಅದ್ದೂರಿ ಮದುವೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕೊರೊನಾ ನಿಯಂತ್ರಣದ ಹಿನ್ನಲೆಯಲ್ಲಿ ಸರ್ಕಾರ ಹಲವಾರು ನಿಬರ್ಂಧ ಹೇರಿದ ಹಿನ್ನಲೆಯಲ್ಲಿ ವರನ ಕಡೆಯಿಂದ 20 ಜನ ವಧುವಿನ ಕಡೆಯಿಂದ 20 ಜನ ಮಾತ್ರ ಭಾಗವಹಿಸಲು ತೀರ್ಮಾನಿಸಿದ ಎರಡೂ ಕುಟುಂಬಗಳು ಉಳಿದ ಆಹ್ವಾನಿತರಿಗೆ ಮದುವೆ ಸಮಾರಂಭದ ಚಿತ್ರಣವನ್ನು ಯುಟ್ಯೂಬ್ ಲೈವ್ ಮೂಲಕ ತೋರಿಸುವ ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದಾರೆ.

    ಆಹ್ವಾನಿತರಿಗೆ ನಿನ್ನೆಯೇ ವಾಟ್ಸಪ್ ಮೂಲಕ ಯುಟ್ಯೂಬ್ ಲೈವ್ ಲಿಂಕ್ ಕಳುಹಿಸಿದ ಕುಟುಂಬದವರು ಲೈವ್‍ನಲ್ಲಿ ಮದುವೆ ಸಮಾರಂಭ ವೀಕ್ಷಿಸಿ ಆನ್ ಲೈನ್ ನಲ್ಲೇ ಹರಸುವಂತೆ ಕುಟುಂಬದವರಿ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಮದುವೆಗೆ ಆಹ್ವಾನಿತರಾಗಿದ್ದವರು ಕೊರೊನಾ ಹಿನ್ನಲೆಯಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸದೆ ಯೂಟ್ಯೂಬ್ ಲೈವ್ ಮೂಲಕ ಮದುವೆ ಸಮಾರಂಭವನ್ನು ಕಣ್ತುಂಬಿಕೊಂಡರು.

  • ಐಸಿಯುವಿನಲ್ಲಿದ್ದ 30 ವರ್ಷದ ಯುವಕನಿಂದ ಕೊನೆ ಕ್ಷಣದ ನರಕದರ್ಶನ

    ಐಸಿಯುವಿನಲ್ಲಿದ್ದ 30 ವರ್ಷದ ಯುವಕನಿಂದ ಕೊನೆ ಕ್ಷಣದ ನರಕದರ್ಶನ

    – ಐಸಿಯುವಿನಲ್ಲಿದ್ದಾಗ ತನ್ನವರಿಗಾಗಿ ಹಂಬಲಿಸಿ ಪ್ರಾಣಬಿಟ್ಟ

    ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ರೌದ್ರನರ್ತನ ತೋರುತ್ತಿದೆ. ಇತ್ತ ಬೆಂಗಳೂರಲ್ಲಿ ಹೆಣಗಳು ಉರುಳುತ್ತಿದೆ, ಬದುಕಿಗಿಲ್ಲಿ ನೋ ಗ್ಯಾರಂಟಿ ಅನ್ನೋವಂತಾಗಿದೆ. ಇದಕ್ಕೆ ಐಸಿಯುವಿನಲ್ಲಿದ್ದ ಯುವಕನೊಬ್ಬನ ಕೊನೆ ಕ್ಷಣದ ನರಕದರ್ಶನದ ವೀಡಿಯೋ ಸಾಕ್ಷಿ.

    ಬೆಂಗಳೂರು ಯುವಕನ ಸಾವಿನ ಕೊನೆಯ ಕ್ಷಣದ ವೀಡಿಯೋವೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ವೀಡಿಯೋವನ್ನು ನೋಡಿದರೆ ಎಂತಹ ಕಲ್ಲು ಹೃದಯ ಕೂಡ ಕರಗುವಂತಿದೆ. ಕೊರೊನಾ ದೃಢಪಟ್ಟು 30 ವರ್ಷದ ಯುವಕ ಮೈಸೂರು ರಸ್ತೆಯ ಮೆಡಿಕಲ್ ಕಾಲೇಜ್‍ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಒಂದು ದಿನದ ಹಿಂದೆಯಷ್ಟೇ ಕುಟುಂಬಸ್ಥರಿಗೆ ವೀಡಿಯೋ ಮಾಡಿ ಕಳುಹಿಸಿದ್ದನು. ಕುಟುಂಬಸ್ಥರ ಬಳಿ ಏನೋ ಹೇಳಿಕೊಳ್ಳಬೇಕೆಂದು ಆಸೆ ಪಟ್ಟಿದ್ದ ಯುವಕ, ಆದರೆ ಒಂದು ಮಾತು ಆಡಲು ಸಾಧ್ಯವಾಗದೇ ಮೌನದ ವೀಡಿಯೋ ಕಳುಹಿಸಿದ್ದನು.

    ಅದಕ್ಕೂ ಮುಂಚೆ ಆಸ್ಪತ್ರೆಯಲ್ಲಿ ನೀರು ಊಟ ಕೊಡ್ತಿಲ್ಲ ಟ್ರೀಟ್ ಮೆಂಟ್ ಕೊಡ್ತಿಲ್ಲ. ಪ್ಲೀಸ್ ನನ್ನ ಕರ್ಕೊಂಡು ಹೋಗಿ, ಇಲ್ಲಿದ್ರೆ ಬದುಕಲ್ಲ ಅಂತಾ ಯುವಕ ಕರೆ ಮಾಡಿದ್ದನು. ಈ ವೇಳೆ ಕುಟುಂಬಸ್ಥರು ಆಯ್ತು ನಾಳೆ ಕರೆದುಕೊಂಡು ಹೋಗ್ತೀವಿ ಅಂತ ಸಮಾಧಾನ ಪಡಿಸಿದ್ದಾರೆ. ಆ ಬಳಿಕ ಯುವಕನಿಗೆ ಮಾತು ಬರದೇ ಆಗಿದ್ದು, ಮರುದಿನವೇ ಯುವಕನ ಮೂಗು, ಬಾಯಲ್ಲಿ ರಕ್ತ ಸೋರಿ ಸಾವನ್ನಪ್ಪಿದ್ದಾನೆ. ಯುವಕನ ಸಾವಿನ ಸುದ್ದಿ ಕುಟುಂಬಸ್ಥರಿಗೆ ಬರಸಿಡಿಲಿನಂತೆ ಎರಗಿತ್ತು.

    ಯುವಕ, ಸಾವಿಗೂ ಮುನ್ನ ತನ್ನ ಮೂಕರೋಧನೆ ಹಾಗೂ ತನ್ನ ಒದ್ದಾಟದ ಕೊನೆಯ ಕ್ಷಣವನ್ನು ವಿಡಿಯೋ ಮಾಡಿ ಕುಟುಂಬಕ್ಕೆ ಕಳಿಸಿದ್ದರಿಂದ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಬಲಿಯಾದ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ದಿನಕ್ಕೆ ಸಾವಿರಾರು ರೋಗಿಗಳು ದಾಖಲಾಗುತ್ತಿದ್ದು, ಹೀಗಾಗಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಸಿಗ್ತಿಲ್ಲ ಸರಿಯಾದ ಟ್ರೀಟ್ ಮೆಂಟ್ ಸಿಗ್ತಿಲ್ಲ ಅಂತಾ ಆರೋಪ ಕೇಳಿ ಬಂದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಆರೋಪ ಮಾಡಿ ಆಸ್ಪತ್ರೆಯ ಮುಂದೆ ಯುವಕನ ಕುಟುಂಬಸ್ಥರು ಕಣ್ಣೀರಿನ ಆಕ್ರೋಶ ಹೊರಹಾಕಿದ್ದಾರೆ.

    ಇಲ್ಲಿ ರೋಗಿಗಳಿಗೆ ನೀರು ಕೊಡಬೇಕು ಅಂದ್ರೂ ಇಲ್ಲಿರುವ ಸಿಬ್ಬಂದಿಗೆ ಐನೂರು ರೂಪಾಯಿ ಕೊಡಬೇಕು. ದುಡ್ಡಿದ್ರೇ ಎಲ್ಲಾ ಇಲ್ದೆ ಇದ್ರೇ ಊಟ ತಿಂಡಿ ಕುಡಿಯೋಕೆ ರೋಗಿಗಳಿಗೆ ನೀರು ಕೊಡಲ್ಲ ಅಂತಾ ಬೇರೆ ರೋಗಿ ಗಳ ಕುಟುಂಬಸ್ಥರು ಕೂಡ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸಾವಿನ ಸರಣಿ ಹೆಚ್ಚಾಗುತ್ತಿರುವಾಗಲೇ ಬೇರೆ ರೋಗಿಗಳ ಕುಟುಂಬಸ್ಥರು ತಮ್ಮವರ ಡಿಸ್ಚಾರ್ಜ್‍ಗಾಗಿ ಆಸ್ಪತ್ರೆ ಅಲೆದಾಡುತ್ತಿದ್ದಾರೆ.

  • 2 ಶರ್ಟ್ ಕದಿದ್ದಕ್ಕೆ 20 ವರ್ಷ ಜೈಲು – ಇತ್ತ ಮನೆ ಮಂದಿಯನ್ನೇ ಕಳೆದುಕೊಂಡ

    2 ಶರ್ಟ್ ಕದಿದ್ದಕ್ಕೆ 20 ವರ್ಷ ಜೈಲು – ಇತ್ತ ಮನೆ ಮಂದಿಯನ್ನೇ ಕಳೆದುಕೊಂಡ

    ನ್ಯೂಯಾರ್ಕ್: ಬಟ್ಟೆಯಂಗಡಿಯೊಂದರಲ್ಲಿ ಕೇವಲ 2 ಶರ್ಟ್ ಕದ್ದ ಅಪರಾಧಕ್ಕೆ ವ್ಯಕ್ತಿಯೊಬ್ಬರು ಬರೋಬ್ಬರಿ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವ ಕರುಣಾಜನಕ ಘಟನೆ ಅಮೆರಿಕದಲ್ಲಿ ನಡೆದಿದೆ.

    ಫ್ರಾಂಕ್ ಸಣ್ಣ ತಪ್ಪಿಗೆ ಸುದೀರ್ಘ ಕಾಲ ಜೈಲುವಾಸ ಅನುಭಿವಿಸಿ ಈಗ ಬಿಡುಗಡೆಯಾಗಿದ್ದಾರೆ. ಕೆಲ ಪ್ರಜ್ಞಾವಂತರು ಪ್ರಾಂಕ್‍ಗೆ ವಿಧಿಸಿದ್ದ ಅಮಾನವೀಯ ಶಿಕ್ಷೆಯನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಿದ್ದರು. 23 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಕೋರ್ಟ್ ಕೊನೆಯ 3 ವರ್ಷಗಳ ಜೈಲುವಾಸವನ್ನು ರದ್ದುಗೊಳಿಸಿದೆ.
    ಕಡು ಬಡವನಾಗಿದ್ದ ಫ್ರಾಂಕ್‍ಗೆ ಪತ್ನಿ, ಒಬ್ಬ ಮಗನಿದ್ದ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕಳ್ಳತನಗಳನ್ನು ಮಾಡಿ ಜೀವನವನ್ನು ನಡೆಸುತ್ತಿದ್ದರು. ಯಾರನ್ನೂ ಹೆದರಿಸಿ ಲೂಟಿ ಮಾಡುತ್ತಿರಲಿಲ್ಲ. ಸೂಪರ್ ಮಾರ್ಕೆಟ್, ಬಟ್ಟೆ ಶಾಪ್‍ಗಳಲ್ಲಿ ಯಾರಿಗೂ ತಿಳಿಯದಂತೆ ಒಂದೆರೆಡು ವಸ್ತುಗಳನ್ನು ಕಳವು ಮಾಡುತ್ತಿದ್ದರು. ಇದೇ ರೀತಿ ಕಳವು ಮಾಡಿ ಸಿಕ್ಕಿಬಿದ್ದಿದ್ದರು. 2000ನಲ್ಲಿ ಫ್ರಾಂಕ್‍ನನ್ನು ಬಂಧಿಸಲಾಗಿತ್ತು. 47 ವರ್ಷದ ಫ್ರಾಂಕ್‍ಗೆ ಅಲ್ಲಿನ ಕೋರ್ಟ್ 23 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು.

    ಬಡ ಕುಟುಂಬ ಫ್ರಾಂಕ್‍ಗಾಗಿ ಉತ್ತಮ ಕಾನೂನು ಸೌಲಭ್ಯ ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಫ್ರಾಂಕ್ ಜೈಲಿನಲ್ಲೇ ತಮ್ಮ ಜೀವನವನ್ನು ಸವೆಸುವಂತಾಯಿತು. ಫ್ರಾಂಕ್ ಪ್ರಕರಣವನ್ನು ಗಮನಿಸಿದ ಅಮೆರಿಕಾದ ಕೆಲ ಪ್ರಜ್ಞಾವಂತರು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದರು. ಸಣ್ಣ ಅಪರಾಧಕ್ಕಾಗಿ ಇಷ್ಟು ಕಠಿಣ ಶಿಕ್ಷೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಅಮೆರಿಕದಲ್ಲಿ ಬಡ ಕಪ್ಪು ವರ್ಣಿಯರ ಮೇಲಾಗುತ್ತಿರುವ ಶೋಷಣೆಯಿದು ಎಂದು ಕೆಲವರು ಹೇಳಿದರು.

    ಕೋರ್ಟ್ ತನ್ನ ಶಿಕ್ಷೆಯನ್ನು ಕಡಿತಗೊಳಿಸಿ ಫ್ರಾಂಕ್‍ನ ಬಿಡುಗಡೆ ಮಾಡಿದೆ. 23 ವರ್ಷಗಳ ಶಿಕ್ಷೆಯನ್ನು ಕಡಿತಗೊಳಿಸುವಷ್ಟರಲ್ಲಿ ಫ್ರಾಂಕ್ 20 ವರ್ಷಗಳ ಕಾಲ ಜೈಲಿನಲ್ಲಿ ಕಳೆದಾಗಿತ್ತು. ಕೇವಲ 3 ವರ್ಷಗಳ ಶಿಕ್ಷೆಯಿಂದ ಮಾತ್ರ ಪಾರಾಗಿದ್ದ ಫ್ರಾಂಕ್ ಜೈಲಿನಿಂದ ಬಿಡುಗಡೆ ಆಗುವಷ್ಟರಲ್ಲಿ ಪತ್ನಿ, ಮಗ, ಇಬ್ಬರು ಸೋದರರು ಮೃತಪಟ್ಟಿದ್ದರು. ಫ್ರಾಂಕ್‍ನ ಕುಟುಂಬವೇ ಸಾವಿನ ಮನೆ ಸೇರಿಯಾಗಿತ್ತು. 67 ವರ್ಷದ ಫ್ರಾಂಕ್ ಜೈಲಿನಿಂದ ಬಿಡುಗಡೆಯಾದರೂ ಒಬ್ಬಂಟಿ. ಒಟ್ಟಿನ್ಲಲಿ ಕೇವಲ 2 ಶರ್ಟ್ ಕದ್ದ ಅಪರಾಧಕ್ಕೆ ಫ್ರಾಂಕ್ ತನ್ನದೆಲ್ಲವನ್ನೂ ಕಳೆದುಕೊಂಡಿದ್ದಾರೆ.

  • KSRTC ಬಸ್ ಅಡ್ಡಗಟ್ಟಿದ ಮುಷ್ಕರ ನಿರತ ಸಿಬ್ಬಂದಿ, ಕುಟುಂಬಸ್ಥರು

    KSRTC ಬಸ್ ಅಡ್ಡಗಟ್ಟಿದ ಮುಷ್ಕರ ನಿರತ ಸಿಬ್ಬಂದಿ, ಕುಟುಂಬಸ್ಥರು

    ಚಾಮರಾಜನಗರ: ಸಾರಿಗೆ ನೌಕರರ ಮುಷ್ಕರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಚಾಮರಾಜಗರದ ಗುಂಡ್ಲುಪೇಟೆಯಲ್ಲಿ ಮುಷ್ಕರದ ನಡುವೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‍ಗಳನ್ನು ಅಡ್ಡಗಟ್ಟಿದ ಮುಷ್ಕರ ನಿರತ ನೌಕರರ ಪತ್ನಿಯರು, ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಿಂದ ಗುಂಡ್ಲುಪೇಟೆಗೆ ಬರುತ್ತಿದ್ದ ಬಸ್ ಗಳನ್ನು ಅಡ್ಡಗಟ್ಟಿದ ಮಹಿಳೆಯರು, ಬಸ್ ಚಲಾಯಿಸುತ್ತಿದ್ದ ಚಾಲಕ ಹಾಗೂ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಚಾಲಕನಿಗೆ ಹೂವಿನ ಹಾರ ಹಾಕಲು ಯತ್ನಿಸಿ ಮುಷ್ಕರವಿದ್ದರೂ ಕರ್ತವ್ಯಕ್ಕೆ ಹಾಜರಾಗಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಬಳಿಕ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮೂವರು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ಕಳುಹಿಸಲಾಯಿತು.

  • ಚಾಲಕನಿಗೆ ಮಾಂಗಲ್ಯ ಹಾಕಲು ಯತ್ನಿಸಿದ ಮಹಿಳೆ- ಬೆಳಗಾವಿಯಲ್ಲಿ ಹೈಡ್ರಾಮಾ

    ಚಾಲಕನಿಗೆ ಮಾಂಗಲ್ಯ ಹಾಕಲು ಯತ್ನಿಸಿದ ಮಹಿಳೆ- ಬೆಳಗಾವಿಯಲ್ಲಿ ಹೈಡ್ರಾಮಾ

    ಬೆಳಗಾವಿ: ಸಾರಿಗೆ ಸಿಬ್ಬಂದಿ ಮುಷ್ಕರ ಇಂದು ತಾರಕಕ್ಕೇರಿದ್ದು, ಭಿಕ್ಷೆ ಬೇಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಮಹಿಳೆಯೊಬ್ಬರು ಬಸ್ ಓಡಿಸುತ್ತಿದ್ದ ಚಾಲಕನಿಗೆ ತಾಳಿ ಹಾಕಲು ಯತ್ನಿಸಿದ್ದಾರೆ. ಬಳಿಕ ಬಸ್ ಸ್ಟೀಯರಿಂಗ್‍ಗೆ ಮಾಂಗಲ್ಯ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.

    ನಗರದ ಬಸ್ ನಿಲ್ದಾಣದತ್ತ ಬರುತ್ತಿದ್ದ ಸರ್ಕಾರಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದು, ಈ ವೇಳೆ ಬಸ್ ಒಳಗೆ ಹತ್ತಿ ಚಾಲಕನಿಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್ ಯಾಕೆ ಓಡಿಸುತ್ತಿದೀಯಾ, ನಿಮ್ಮ ಕುಟುಂಬ ಚೆನ್ನಾಗಿರಲಿ. ನಮ್ಮ ಕುಟುಂಬ ಬೀದಿಗೆ ಬೀಳಲಿ ಅಂತನಾ? ಬಳೆ ಹಾಕಿ, ತಾಳಿ ಕಟ್ಟಿಕೋ ಎಂದು ಪ್ರತಿಭಟನಾನಿರತ ಮಹಿಳೆ ಹೇಳಿದ್ದಾರೆ. ಅಲ್ಲದೆ ಬಸ್ ಓಡಿಸುತ್ತಿದ್ದ ಚಾಲಕನಿಗೆ ಮಾಂಗಲ್ಯ ತೆಗೆದು ಹಾಕಲು ಮಹಿಳೆ ಯತ್ನಿಸಿದ್ದಾರೆ. ಬಳಿಕ ಬಸ್ ಸ್ಟೀಯರಿಂಗ್‍ಗೆ ಮಾಂಗಲ್ಯ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಲ ಕಾಲ ಹೈಡ್ರಾಮಾ ನಡೆಯಿತು.

    ಮತ್ತೊಂದೆಡೆ ಅಶೋಕ ವೃತ್ತದಲ್ಲಿ ಬಸ್ ತಡೆದು ಚಾಲಕನಿಗೆ ಹೂವಿನ ಹಾರ ಹಾಕಿ ಮಹಿಳೆ ತರಾಟೆ ತೆಗೆದುಕೊಂಡಿದ್ದಾರೆ. ಚಲಿಸುತ್ತಿದ್ದ ಬಸ್ ಎದುರು ನಿಂತು ಬಸ್ ತಡೆದಿದ್ದು, ಬಳಿಕ ಬಸ್ ಏರಿ ಓಡೋಡಿ ಹೋಗಿ ಮಹಿಳೆ ಚಾಲಕನಿಗೆ ಹಾರ ಹಾಕಿದ್ದಾರೆ. ನಾವೆಲ್ಲ ಮಕ್ಕಳ ಜೊತೆ ಭಿಕ್ಷೆ ಬೇಡುತ್ತಿದ್ದೇವೆ, ನೀನು ಡ್ಯೂಟಿ ಮಾಡ್ತೀಯಾ ಎಂದು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಚಾಲಕ ಉತ್ತರಿಸಿ, ನಾನು ಡ್ಯೂಟಿ ಮಾಡಲು ಬಂದಿಲ್ಲ, ಡಿಪೋಗೆ ಬಸ್ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.

    ಮತ್ತೊಂದೆಡೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಾರಿಗೆ ಸಿಬ್ಬಂದಿ ಪುತ್ರನ ಮೇಲೆ ಪೊಲೀಸರು ದರ್ಪ ತೋರಿದ್ದು, ಯುವಕನಿಗೆ ಏಟು ನೀಡಿ ವಶಕ್ಕೆ ಪಡೆದಿದ್ದಾರೆ. ಸಾರಿಗೆ ಸಿಬ್ಬಂದಿ ಪತ್ನಿಯರ ಮೇಲೆ ಸಹ ಪೊಲೀಸರು ದರ್ಪ ತೋರಿದ್ದಾರೆ. ಮಾರ್ಕೆಟ್ ಪೊಲೀಸರು ಬೇದರಿಕೆ ಹಾಕಿ ಮಹಿಳೆಯರನ್ನು ವಾಪಸ್ ಕಳುಹಿಸಿದ್ದಾರೆ.

  • ಹುಟ್ಟುಹಬ್ಬಕ್ಕೆ ಗಿಫ್ಟ್ ಬೇಡ, ರಕ್ತದಾನ ಮಾಡಿ – 6ರ ಬಾಲಕಿಯ ಮನವಿ

    ಹುಟ್ಟುಹಬ್ಬಕ್ಕೆ ಗಿಫ್ಟ್ ಬೇಡ, ರಕ್ತದಾನ ಮಾಡಿ – 6ರ ಬಾಲಕಿಯ ಮನವಿ

    ಮುಂಬೈ: ಮಹಾರಷ್ಟ್ರದ ಪಾಲಗಢದ ಆರು ವರ್ಷದ ಬಾಲಕಿ ತನ್ನ ಜನ್ಮದಿನಾಚರಣೆಯನ್ನು ಆಚರಿಸದಿರಲು ನಿರ್ಧರಿಸಿ, ಕೊರೊನಾ ಬಿಕ್ಕಟ್ಟಿನ ನಡುವೆ ರಕ್ತದಾನ ಮಾಡುವಂತೆ ಮನವಿ ಮಾ ಸುದ್ದಿಯಾಗಿದ್ದಾಳೆ.

    ಮಹಾರಾಷ್ಟ್ರದ ಪಾಲಗಢ ಜಿಲ್ಲೆಯ ವಾಡಾ ತಾಲ್ಲೂಕಿನ ಗಂಡ್ರೆ ಗ್ರಾಮದ ನಿವಾಸಿಯಾಗಿರುವ ಯುಗ ಅಮೋಲ್ ಠಾಕ್ರೆ ಎಂಬ ಬಾಲಕಿಗೆ ಶನಿವಾರ 6 ವರ್ಷ ತುಂಬಿದೆ. ಮಾಧ್ಯಮವೊಂದರಲ್ಲಿ ರಕ್ತದಾನ ಮಾಡುವಂತೆ ಮನವಿ ಮಾಡಿರುವುದನ್ನು ನೋಡಿದ ಬಾಲಕಿ ತನ್ನ ಕುಟುಂಬಸ್ಥರಿಗೆ ಈ ಬಾರಿ ತನ್ನ ಹುಟ್ಟುಹಬ್ಬವನ್ನು ಆಚರಿಸದಂತೆ ಹಾಗೂ ಉಡುಗೊರೆ ನೀಡದಂತೆ ಕೇಳಿಕೊಂಡಿದ್ದಾಳೆ. ಬಳಿಕ ಅಂದು ರಕ್ತದಾನ ಮಾಡಿ ಎಂದು ಕೇಳಿಕೊಂಡಿದ್ದಾಳೆ.

    ಬಾಲಕಿ ಮನವಿಗೆ ಸ್ಪಂದಿಸಿದ ಕುಟುಂಬ ಸದಸ್ಯರು ಮತ್ತು ಸಂಬಂಧಿಗಳು, ಸ್ನೇಹಿತರು ಸೇರಿದಂತೆ 36 ಮಂದಿ ಶನಿವಾರ ಕಲ್ಯಾಣಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದಾರೆ.

    ಈ ಕುರಿತಂತೆ ಡಾ. ವೈಭವ್ ಠಾಕ್ರೆ, ಇದು ನಿಜವಾಗಿಯೂ ಉತ್ತಮವಾದ ಆಲೋಚನೆಯಾಗಿದ್ದು, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮಗುವಿನ ಕಾರ್ಯ ಬಗ್ಗೆ ನಮಗೆ ಹೆಮ್ಮೆ ಇದೆ. ಸದ್ಯ ದಾನ ಮಾಡಿದ ರಕ್ತವನ್ನು ನೆರೆಯ ಥಾಣೆಯಲ್ಲಿರುವ ವಾಮನ್‍ರಾಕ್ ಓಕ್ ಬ್ಲಡ್ ಬ್ಯಾಂಕ್‍ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

  • ಮಗನ ಜೊತೆ ಮಗಳ ಮದುವೆ ಮಾಡಿದ ತಾಯಿ!

    ಮಗನ ಜೊತೆ ಮಗಳ ಮದುವೆ ಮಾಡಿದ ತಾಯಿ!

    ಬೀಜಿಂಗ್: ಕಳೆದು ಹೋಗಿದ್ದ ಮಗಳನ್ನು ಸೊಸೆಯಾಗಿ ತಂದುಕೊಂಡ ಒಂದು ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ.

    ಮಾರ್ಚ್ 31ರಂದು ಮದುವೆ ಸಂಭ್ರಮ ಜೋರಾಗಿತ್ತು. ಮದುವೆ ಮಂಟಪದಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಈ ವೇಳೆ ವಧು, ವರ ಎದುರಾಗಿ ನಿಂತುಕೊಂಡಿದ್ದರು. ಆಗ ವರನ ತಾಯಿಗೆ ವಧುವಿಗೆ ಇರುವ ಒಂದು ಮಾರ್ಕ್ ಕಣ್ಣಿಗೆ ಬಿದ್ದಿದೆ. ತಕ್ಷಣ ವಧುವಿನ ತಂದೆಯಲ್ಲಿ ಈ ವಿಚಾರಿಸಿದ್ದಾಳೆ. ಆಗ ವಧುವಿನ ಪೋಷಕರು 20 ವರ್ಷಗಳ ಹಿಂದೆ ನಮಗೆ ರಸ್ತೆಯಲ್ಲಿ ಸಿಕ್ಕಿದ್ದಾಳೆ ಎಂದು ಹೇಳಿದ್ದಾರೆ. ಆಗ ವರನ ತಾಯಿ ಒಂದು ಕ್ಷಣ ಭಯಗೊಂಡಿದ್ದಾರೆ.

    ತಾನು ಕಳೆದುಕೊಂಡ ಹೆಣ್ಣು ಮಗುವನ್ನೇ ನಾನು ಸೊಸೆಯಾಗಲು ತರಲು ಸಿದ್ಧವಾಗಿದ್ದೇನಾ ಎಂದು ಕೊಂಚ ಬೇಸರಗೊಂಡಿದ್ದಾರೆ. ನಂತರ ಈ ವಿಚಾರವಾಗಿ ಮಹಿಳೆ ಎಲ್ಲರಿಗೂ ಹೇಳಿ ದ್ದಾರೆ. ಹೆಣ್ಣಿಗೆ ಕಳೆದ ಹೋದ ಕುಟುಂಬ ಸಿಕ್ಕ ಸಂತೋಷ ಒಂದುಕಡೆಯಾದರೆ ಇನ್ನೊಂದೆಡೆ ನಾನು ಅಣ್ಣನನ್ನು ಮದುವೆಯಾಗಲು ಹೊರಟಿದ್ದೇನಾ ಎಂದು ಬೇಸರಗೊಂಡಿದ್ದಾಳೆ.

    ಮಗಳು ಕಳೆದುಕೊಂದಾಗ ನಾವು ಎಲ್ಲ ಕಡೆ ಹುಡುಕಿದೇವು. ಮಗಳು ಸಿಗದೇ ಇದ್ದಾಗ ನಾವು ಬೇರೆಯವರ ಮಗನನ್ನು ದತ್ತು ಪಡೆದುಕೊಂಡೆವು. ಇದೀಗ ಅದೇ ಮಗ ಮಂಟಪದಲ್ಲಿರುವ ವರನಾಗಿದ್ದಾನೆ. ಹೀಗಾಗಿ ಒಂದೇ ತಾಯಿಯ ಮಕ್ಕಳು ಇವರು ಆಗುವುದಿಲ್ಲ. ಎಂದು ಇಬ್ಬರಿಗೂ ಮದುವೆ ಮಾಡಿ ತನ್ನ ಮಗಳನ್ನು ತಾಯಿ ಸೊಸೆಯಾಗಿ ಪಡೆದುಕೊಂಡಿದ್ದಾರೆ.

  • ಮೃತ ಮಗನ ಫೋಟೋ ಇಟ್ಕೊಂಡು ಯುವರತ್ನ ಸಿನಿಮಾ ವೀಕ್ಷಣೆ

    ಮೃತ ಮಗನ ಫೋಟೋ ಇಟ್ಕೊಂಡು ಯುವರತ್ನ ಸಿನಿಮಾ ವೀಕ್ಷಣೆ

    – ನಾಲ್ಕು ತಿಂಗಳ ಹಿಂದೆ ಪುತ್ರನ ಸಾವು
    – ಮಗನ ಫೋಟೋಗೂ ಟಿಕೆಟ್ ಪಡೆದ ಕುಟುಂಬ

    ಮೈಸೂರು: ನಾಲ್ಕು ತಿಂಗಳ ಹಿಂದೆ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಕುಟುಂಬ ಇಂದು ಮಗನ ಫೋಟೋ ಇಟ್ಟುಕೊಂಡೇ ಯುವರತ್ನ ಸಿನಿಮಾ ವೀಕ್ಷಿಸುವ ಮೂಲಕ ಗಮನ ಸೆಳೆದಿದೆ.

    ನಗರದ ಮುರಳಿಧರ್ ಅವರ ಮಗ ಹರಿಕೃಷ್ಣನ್ ನಾಲ್ಕು ತಿಂಗಳ ಹಿಂದೆ ಅಕಾಲಿಕ ನಿಧನರಾದ್ದಾರೆ. ಹರಿಕೃಷ್ಣನ್ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ. ಅಲ್ಲದೆ ಯುವರತ್ನ ಸಿನಿಮಾ ನೋಡಬೇಕೆಂದು ಮಹದಾಸೆಯಿಂದ ಕಾಯುತ್ತಿದ್ದ. ಆದರೆ ಯುವರತ್ನ ಸಿನಿಮಾ ರಿಲೀಸ್‍ಗೂ ಮುನ್ನ ಸಾವನಪ್ಪಿದ್ದಾರೆ.

    ಈಜಲು ಹೋಗಿ ನೀರಲ್ಲಿ ಮುಳುಗಿ ಮಗ ಹರಿಕೃಷ್ಣನ್ ಸಾವನ್ನಪ್ಪಿದ್ದು, ಮಗನ ಆಸೆ ಈಡೇರಿಸುವ ಉದ್ದೇಶದಿಂದ ಇಂದು ಮಗನಫೋಟೋ ಇಟ್ಟುಕೊಂಡು ಕುಟುಂಬಸ್ಥರು ಸಿನಿಮಾ ವೀಕ್ಷಣೆ ಮಾಡಿದರು.

    ಮೈಸೂರಿನ ಡಿಆರ್ ಸಿ ಮಲ್ಟಿಪ್ಲೆಕ್ಸ್ ನಲ್ಲಿ ತಂದೆ, ತಾಯಿ, ಯುವಕನ ಅಣ್ಣ ಸಿನಿಮಾ ವೀಕ್ಷಣೆ ಮಾಡಿದರು. ಸಾವನ್ನಪ್ಪಿದ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ಆ ಸೀಟ್ ನಲ್ಲಿ ಮಗನ ಫೋಟೋ ಇಟ್ಟುಕೊಂಡು ಚಲನಚಿತ್ರ ವೀಕ್ಷಿಸಿದರು.

    ಈಜಲು ಹೋಗಿ ನೀರಲ್ಲಿ ಮುಳುಗಿ ನಾಲ್ಕು ತಿಂಗಳ ಹಿಂದಷ್ಟೇ ನನ್ನ ಮಗ ತೀರಿಕೊಂಡ. ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್ ಆಗಿದ್ದ. ಪುನೀತ್ ಎಂದರೆ ಪ್ರಾಣ ಅವನಿಗೆ. ಇಂಧು ಸಿನಿಮಾ ನೋಡಲು ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಬರಲು ಇಷ್ಟವಿರಲಿಲ್ಲ. ಈಗಲೂ ನಮ್ಮ ಜೊತೆ ಇದ್ದಾನೆಂದು ನಮ್ಮ ಜೊತೆ ಕರೆದುಕೊಂಡು ಬಂದಿದ್ದೇವೆ. ಅವನಿಗೂ ಟಿಕೆಟ್ ತೆಗೆದುಕೊಂಡಿದ್ದೇವೆ. ಅವನೂ ನಮ್ಮ ಜೊತೆ ಸಿನಿಮಾ ನೋಡಿ ಸಂತೋಷ ಪಡಲೆಂದು ಜೊತೆಗೆ ಕರೆ ತಂದಿದ್ದೇವೆ ಎಂದು ಹೇಳಿ ಫೋಟೋ ತೋರಿಸಿ ತಂದೆ ಮುರುಳಿಧರ್ ಕಣ್ಣೀರು ಹಾಕಿದ್ದಾರೆ.

    ಈ ಸಂದೇಶ ಪುನೀತ್ ಅವರಿಗೆ ತಲುಪಲಿ ಎಂದು ಅವನನ್ನು ಚಿತ್ರ ಮಂದಿರಕ್ಕೆ ಕರೆ ತಂದಿದ್ದೇವೆ. ಅವನ ಆತ್ಮಕ್ಕೆ ಶಾಂತಿ ಸಿಗಲೆಂದು ಪುನೀತ್ ರಾಜ್‍ಕುಮಾರ್ ಅವರು ಹಾರೈಸಿದರೆ ಸಾಕು ಎಂದು ಮನವಿ ಮಾಡಿದ್ದಾರೆ.

  • ಕುಡಿದ ಮತ್ತಿನಲ್ಲಿ ಆರು ಜನರನ್ನು ಬೆಂಕಿ ಹಚ್ಚಿ ಕೊಂದ ಪಾಪಿ

    ಕುಡಿದ ಮತ್ತಿನಲ್ಲಿ ಆರು ಜನರನ್ನು ಬೆಂಕಿ ಹಚ್ಚಿ ಕೊಂದ ಪಾಪಿ

    – ಮುಗುಟಗೇರಿಯಲ್ಲಿ ಹೃದಯ ವಿದ್ರಾವಕ ಘಟನೆ

    ಮಡಿಕೇರಿ: ವ್ಯಕ್ತಿಯೊಬ್ಬ ತನ್ನ ಕುಟುಂಬದ ಸದಸ್ಯರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆರು ಜನರನ್ನು ಬಲಿ ತೆಗೆದುಕೊಂಡ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿ ನಡೆದಿದೆ.

    ಬೆಂಕಿ ಹಚ್ಚಿದ ದುಷ್ಕರ್ಮಿಯನ್ನು ಎರವರ ಮಂಜ ಎಂದು ಗುರುತಿಸಲಾಗಿದೆ. ಈತ ಕುಡಿದ ಮತ್ತಿನಲ್ಲಿ ಕುಟುಂಬ ಸದಸ್ಯರ ಮೇಲೆ ಬೆಂಕಿ ಹಚ್ಚಿ ತಲೆಮರೆಸಿಕೊಂಡಿದ್ದಾನೆ. ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿರುವ ವಸಂತ(ಚಿಟ್ಟಿಯ್ಯಪ್ಪ) ಎಂಬವರ ಲೈನ್ ಮನೆಯಲ್ಲಿ ಎರವರ ಮಂಜು ವಾಸವಿದ್ದರು. ಇವರ ಮನೆಗೆ ಕುಟುಂಬದ ಐದಾರು ಮಂದಿ ಸದಸ್ಯರು ಬಂದು ತಂಗಿದ್ದರು. ಬೆಳಗ್ಗಿನ ಜಾವ ಸುಮಾರು 2 ಗಂಟೆ ವೇಳೆಯಲ್ಲಿ ಮಂಜು ಅವರ ತಂದೆ ಎರವರ ಬೋಜ ಪಾನಮತ್ತನಾಗಿ ಮನೆಯ ಹೊರ ಬಂದು ಎಲ್ಲಾ ಬಾಗಿಲು, ಕಿಟಕಿಗಳನ್ನು ಮುಚ್ಚಿದ್ದಾನೆ. ಮನೆಯ ಮೇಲೇರಿ ಹಂಚು ತೆಗೆದು ಕುಟುಂಬದ ಸದಸ್ಯರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಏನೂ ಮಾಡಲಾಗದೆ ಬೆಂಕಿ ಕೆನ್ನಾಲಗೆಗೆ ಸಿಲುಕಿದ ಸೀತಾ (45), ಬೇಬಿ(40), ಪ್ರಾರ್ಥನಾ(6) ಮೂವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.

    ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂವರು ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದ ಆರು ಮಂದಿ ಬಲಿಯಾಗಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊನ್ನಂಪೇಟೆ ಪೊಲೀಸರು ಆರೋಪಿ ಬೋಜನ ಪತ್ತೆಗಾಗಿ ಬಲೆ ಬೀಸಿದ್ದಾರೆ.