Tag: family

  • ಜಮೀನು ತಕರಾರು – ಡಿಸಿ ಕಚೇರಿ ಮುಂದೆ ನೊಂದ ಕುಟುಂಬಸ್ಥರ ಧರಣಿ

    ಜಮೀನು ತಕರಾರು – ಡಿಸಿ ಕಚೇರಿ ಮುಂದೆ ನೊಂದ ಕುಟುಂಬಸ್ಥರ ಧರಣಿ

    ಯಾದಗಿರಿ: ಸರ್ಕಾರ ಕೊಟ್ಟ ಜಮೀನಿನಲ್ಲಿ ಉಳುಮೆ ಮಾಡಲು ಪಕ್ಕದ ಜಮೀನಿನ ಮಾಲೀಕರು ಬಿಡದ ಕಾರಣ, ನೊಂದ ಕುಟುಂಬವೊಂದು ಜಮೀನು ಕೊಡಿಸಿ ಇಲ್ಲವೇ ವಿಷ ಕೊಡಿ ಎಂದು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿಗೆ ಮುಂದಾಗಿದೆ.

    ಜಿಲ್ಲೆಯ ಶಹಾಪುರ್ ತಾಲೂಕಿನ ಹೊಸಕೇರ ಬಾಂಗ್ಲಾ ತಾಂಡಾದಲ್ಲಿ ಕಳೆದ ಇಪ್ಪತ್ತು ವರ್ಷದ ಹಿಂದೆ ಸರ್ಕಾರದ ಜಮೀನನ್ನು ಟೋಪುನಾಯಕ ಎಂಬುವರರಿಗೆ ಕೊಡಲಾಗಿತ್ತು. ಜೊತೆಗೆ ಹಕ್ಕು ಪತ್ರವನ್ನು ಕೂಡ ನೀಡಲಾಗಿತ್ತು. ಆದರೆ ಆ ವೇಳೆಯಲ್ಲಿ ಜಮೀನಿಗೆ ಸರ್ವೆ ಮಾಡದ ಕಾರಣ, ಟೋಪುನಾಯಕ ಕುಟುಂಬಕ್ಕೆ ಜಮೀನಿನಲ್ಲಿ ಉಳುಮೆ ಮಾಡಲು ಪ್ರತಿ ವರ್ಷ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ. ಇದನ್ನೂ ಓದಿ: ಅಕ್ರಮವಾಗಿ ಮದ್ಯ ಮಾರಾಟ -ದಂಧೆಕೋರ ಅಂದರ್

    ಟೋಪುನಾಯಕ ಕುಟುಂಬ ಎರಡು ವರ್ಷಗಳಿಂದ ಸರ್ವೆ ಮಾಡಿ ಕೊಡಿ ಎಂದು ಶಹಾಪುರ್ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮನವಿಯನ್ನು ಮಾಡಿಕೊಂಡಿದ್ದರು. ಆದರೆ ಅಧಿಕಾರಿಗಳು ಟೋಪು ನಾಯಕ ಅವರ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ. ಅಲ್ಲದೆ ಇದೀಗ ತಮ್ಮ ಜಾಗದ ಹಕ್ಕುಪತ್ರವನ್ನು ಪಕ್ಕದ ಜಮೀನಿನ ಮರೆಪ್ಪ ಪಟೇಲರಿಗೆ ನೀಡಲಾಗಿದೆ ಎಂದು ಸಂತ್ರಸ್ತ ಟೋಪುನಾಯಕ ಅವರು ಆರೋಪಿಸಿ ಧರಣಿಗೆ ಮುಂದಾಗಿದ್ದಾರೆ.

  • ನಾಳೆಯಿಂದ ಅನ್‍ಲಾಕ್ – ಗಂಟು, ಮೂಟೆ ಹೊತ್ತು ಕುಟುಂಬ ಸಮೇತ ಬೆಂಗಳೂರಿನತ್ತ ಜನ

    ನಾಳೆಯಿಂದ ಅನ್‍ಲಾಕ್ – ಗಂಟು, ಮೂಟೆ ಹೊತ್ತು ಕುಟುಂಬ ಸಮೇತ ಬೆಂಗಳೂರಿನತ್ತ ಜನ

    ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ ಲಾಕ್‍ಡೌನ್ ತೆರವು ಹಿನ್ನೆಲೆ ರಾಜ್ಯದ ಗಡಿ ಅತ್ತಿಬೆಲೆ ಮೂಲಕ ಸಾಲು-ಸಾಲು ವಾಹನಗಳ ಮೂಲಕ ಜನರು ಬೆಂಗಳೂರಿನತ್ತ ಬರುತ್ತಿದ್ದಾರೆ.

    ನಾಳೆಯಿಂದ ಅನ್‍ಲಾಕ್ ಆಗಿರುವುದರಿಂದ ವಲಸೆ ಹೋಗಿದ್ದ ಕಾರ್ಮಿಕರು ಕರ್ನಾಟಕ- ತಮಿಳುನಾಡು ಗಡಿ ಅತ್ತಿಬೆಲೆಯಲ್ಲಿ ವಾಹನಗಳ ಮೂಲಕ ಮತ್ತೆ ಮರಳಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಜನರು ಕಾರುಗಳಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ತಮ್ಮ ಕುಟುಂಬ ಸಮೇತರಾಗಿ ಲಗೇಜುಗಳೊಂದಿಗೆ ಒಂದುವರೆ ತಿಂಗಳ ಬಳಿಕ ತಮ್ಮ ನಿವಾಸಗಳಿಗೆ ಆಗಮಿಸುತ್ತಿದ್ದಾರೆ.

    ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಪೇದೆಯೊಬ್ಬರು ಹಾಗೂ ನಾಲ್ಕು ಜನ ಹೋಂ ಗಾರ್ಡ್‍ಗಳು, ಶಿಕ್ಷಕರು ಬೆಂಗಳೂರಿಗೆ ಬರುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಇದನ್ನು ಹೊರತುಪಡಿಸಿ ಚೆಕ್ ಪೋಸ್ಟ್ ಗೆ ನೇಮಕ ಮಾಡಿದ್ದ ರೆವಿನ್ಯೂ ಇಲಾಖೆ ಅಧಿಕಾರಿಗಳು ಸೇರಿದಂತೆ ಕೆಲ ಇಲಾಖೆಯ ಅಧಿಕಾರಿಗಳು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ, ಡ್ಯೂಟಿ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.  ಇದನ್ನೂ ಓದಿ: ನಾಳೆಯಿಂದ ದೆಹಲಿಯಲ್ಲಿ ಅನ್‍ಲಾಕ್ – ಹೋಟೆಲ್‍ಗಳಲ್ಲಿ ಶೇ.50, ಮಾಲ್ ಫುಲ್ ಓಪನ್

    ಬೆಳಗ್ಗೆಯಿಂದ ಸಂಜೆಯವರೆಗೂ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ಸರಿಯಾದ ಮಾರ್ಗಸೂಚಿ ನೀಡದ ಹಾಗೂ ಬೆರಳೆಣಿಕೆಯಷ್ಟು ಸಿಬ್ಬಂದಿಗಳ ನಿಯೋಜನೆಯಿಂದ ಯಾವುದೇ ಕಟ್ಟುನಿಟ್ಟಿನ ತಪಾಸಣೆ ಮಾಡದೇ ಇರುವುದು ಕಂಡು ಬಂತು. ಒಟ್ಟಿನಲ್ಲಿ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಬೆಂಗಳೂರು ತೊರೆದಿದ್ದ ವಲಸೆ ಕಾರ್ಮಿಕರು ಮತ್ತೆ ಬೆಂಗಳೂರಿನತ್ತ ಮರಳಿ ಮುಖ ಮಾಡಿದ್ದು, ಮತ್ತಷ್ಟು ಕೊರೊನಾ ಸೋಂಕು ಹರಡುವ ಆತಂಕ ಹೆಚ್ಚಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಪ್ರಯತ್ನ- ಹುಬ್ಬಳ್ಳಿಯಲ್ಲಿ 2 ರೂ.ಗೆ ಸಿಗುತ್ತೆ ಸರ್ಜಿಕಲ್ ಮಾಸ್ಕ್!

  • ಅತ್ತಿಗೆಯನ್ನು ಕೊಂದು ನೇಣಿಗೆ ಶರಣಾದ ನಾದಿನಿ

    ಅತ್ತಿಗೆಯನ್ನು ಕೊಂದು ನೇಣಿಗೆ ಶರಣಾದ ನಾದಿನಿ

    ಮಂಡ್ಯ: ಕೌಟುಂಬಿಕ ಕಲಹದೊಂದಿಗೆ ಪ್ರಾರಂಭವಾದ ಅತ್ತಿಗೆ-ನಾದಿಯ ಜಗಳ ಮಾರಾಮಾರಿ ನಡೆದು ಕೊಲೆ ಮತ್ತು ಆತ್ಮಹತ್ಯೆಗೆ ಕಾರಣವಾಗಿರುವ ಘಟನೆ ಮಂಡ್ಯ ತಾಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕೌಟುಂಬಿಕ ಜಗಳದಿಂದಾಗಿ ಅತ್ತಿಗೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ನಾದಿನಿ ಕೊನೆಗೆ ತಾನು ಸಹ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಂಬದಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಿಯಾಂಕ (32) ನಾದಿನಿಯಿಂದ ಕೊಲೆಯಾದ ಅತ್ತಿಗೆಯಾಗಿದ್ದು, ಗಿರಿಜಾ(31) ಅತ್ತಿಗೆಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ನಾದಿನಿಯಾಗಿದ್ದಾಳೆ. ಇದನ್ನೂ ಓದಿ: ಕೋವಿಡ್ ಕೇರ್ ಸೆಂಟರ್‌ನಲ್ಲಿ ಕುಟುಂಬ- ಶಾರ್ಟ್ ಸಕ್ಯೂಟ್‍ನಿಂದ ಮನೆ ಬೆಂಕಿಗಾಹುತಿ

    ಕೌಟುಂಬಿಕ ವಿಚಾರಕ್ಕೆ ಪ್ರಿಯಾಂಕ ಹಾಗೂ ಗಿರಿಜಾ ಅವರ ನಡುವೆ ಪದೇ ಜಗಳವಾಗುತ್ತಿತ್ತು ಎನ್ನಲಾಗುತ್ತಿತ್ತು. ನಿನ್ನೆ ಇವರಿಬ್ಬರ ಜಗಳ ತಾರಕಕ್ಕೆ ಏರಿದ್ದು ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಗಿರಿಜಾ, ಪ್ರಿಯಾಂಕ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆ. ನಂತರ ಭಯಗೊಂಡ ಗಿರಿಜಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋವಿಡ್ ಕೇರ್ ಸೆಂಟರ್‌ನಲ್ಲಿ ಕುಟುಂಬ- ಶಾರ್ಟ್ ಸಕ್ಯೂಟ್‍ನಿಂದ ಮನೆ ಬೆಂಕಿಗಾಹುತಿ

    ಕೋವಿಡ್ ಕೇರ್ ಸೆಂಟರ್‌ನಲ್ಲಿ ಕುಟುಂಬ- ಶಾರ್ಟ್ ಸಕ್ಯೂಟ್‍ನಿಂದ ಮನೆ ಬೆಂಕಿಗಾಹುತಿ

    ಮಂಡ್ಯ: ಕೊರೊನಾ ಸೋಂಕು ತಗುಲಿ ಇಡೀ ಕುಟುಂಬ ಕೋವಿಡ್ ಕೇರ್ ಸೆಂಟರ್ ನಲ್ಲಿ ಇದ್ದರೆ, ಇತ್ತ ಶಾರ್ಟ್ ಸಕ್ರ್ಯೂಟ್‍ನಿಂದ ಕೊರೊನಾ ಸೋಂಕಿತ ಕುಟುಂಬದವರ ಮನೆಗೆ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಇಡೀ ಮನೆ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಜರುಗಿದೆ.

    ಲಕ್ಷ್ಮೀಸಾಗರ ಗ್ರಾಮದ ಪ್ರಕಾಶ್ ಅವರ ಮನೆ ಇಂದು ಶಾರ್ಟ್ ಸಕ್ರ್ಯೂಟ್‍ಗೆ ಭಸ್ಮವಾಗಿದೆ. ಪ್ರಕಾಶ್ ಮತ್ತು ಕುಟುಂಬದರಿಗೆ ಕೊರೊನಾ ಸೋಂಕು ತಗುಲಿದ ಕಾರಣ ಇಡೀ ಕುಟುಂಬ ಕೋವಿಡ್ ಕೇರ್ ಸೆಂಟರ್‍ನಲ್ಲಿ ಇತ್ತು. ಹೀಗಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಕೊರೊನಾ ಪಾಸಿಟಿವ್ ರೇಟ್ ಕುಗ್ಗಿಸಲು ಜಿಲ್ಲಾಡಳಿತ ಪ್ಲ್ಯಾನ್- ಹಳ್ಳಿ, ಹಳ್ಳಿಗೆ ಲಸಿಕೆ ಅಭಿಯಾನ

    ಇಂದು ಸಂಜೆಯ ವೇಳೆ ಶಾರ್ಟ್ ಸಕ್ರ್ಯೂಟ್ ಆಗಿದ್ದು, ಮನೆಯಲ್ಲಿ ಯಾರು ಇಲ್ಲದ ಕಾರಣ ಗೊತ್ತಾಗಿಲ್ಲ, ನಂತರ ಶಾರ್ಟ್ ಸಕ್ರ್ಯೂಟ್‍ನ ಕಿಡಿ ಬೆಂಕಿಯಾಗಿ ಇಡೀ ಮನೆಯನ್ನು ವ್ಯಾಪಿಸಿದೆ. ಮನೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ಬಿದ್ದ ಕಾರಣ ಪಕ್ಕದ ಮನೆಗೂ ಬೆಂಕಿ ವ್ಯಾಪಿಸಿತು. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಬೆಂಕಿ ನಂದಿಸಿದ್ದಾರೆ. ಈ ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

  • ಸಿಎಂ ಬದಲಾವಣೆ ಆಗೋದಿಲ್ಲ: ಡಿಸಿಎಂ ಕಾರಜೋಳ

    ಸಿಎಂ ಬದಲಾವಣೆ ಆಗೋದಿಲ್ಲ: ಡಿಸಿಎಂ ಕಾರಜೋಳ

    ಹಾವೇರಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವುದಿಲ್ಲ ಎಂಬುದನ್ನು ನಾನು ಮೊದಲಿನಿಂದಲೂ ಹೇಳಿದ್ದೇನೆ. ಲಾಕ್‍ಡೌನ್ ಮುಂದುವರೆಸುವ ಅವಶ್ಯಕತೆ ಇದೆ ಎಂಬ ಸಲಹೆ ಕೊಟ್ಟಿದ್ದೇನೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

    ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಹಿರಿಯ ಶಾಸಕ ಸಿ.ಎಂ.ಉದಾಸಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಕಟ್ಟಡ ಕಾಮಗಾರಿಗೆ, ಕಟ್ಟಡ ಕಟ್ಟಲು ಬೇಕಾದ ಸಾಮಗ್ರಿಗಳ ಮಾರಾಟ, ಅಟೋಮೊಬೈಲ್ ಸೇರಿದಂತೆ ಕೆಲವೊಂದು ಸಡಿಲಿಕೆ ಮಾಡಬೇಕು. ಹೀಗೆ ಅನೇಕ ವಿಚಾರಗಳನ್ನ ಹೇಳಿದ್ದೇನೆ. ಸಂಜೆ ಮುಖ್ಯಮಂತ್ರಿಗಳು ತಜ್ಞರ ಸಮಿತಿ ಸಭೆ ನಡೆಸಿ ಯಾವ ರೀತಿ ಗೈಡ್‍ಲೈನ್ಸ್ ಕೊಡುತ್ತಾರೋ ಆ ರೀತಿ ನಡೆದುಕೊಳುತ್ತೇವೆ ಎಂದರು.

    ಶಾಸಕ ಸಿ.ಎಂ.ಉದಾಸಿ ನಮಗೆಲ್ಲ ಉತ್ತಮ ಮಾರ್ಗದರ್ಶಕರಾಗಿದ್ದರು. ಕೇವಲ ಜಿಲ್ಲೆ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಸಚಿವರಾಗಿ ಸಾಕಷ್ಟು ಕೆಲಸಗಳನ್ನ ಮಾಡಿದ್ದಾರೆ. ಶಾಸಕ ಸಿ.ಎಂ.ಉದಾಸಿ ಅವರಂತೆ ಅವರ ಕೆಲಸಗಳನ್ನು ಅವರ ಕುಟುಂಬದವರು ಮುಂದುವರೆಸಿಕೊಂಡು ಹೋಗಲಿ ಡಿ.ಸಿ.ಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ಇದನ್ನು ಓದಿ:ಕಾಯಿಲೆಗಳಲ್ಲಿಯೇ ಸ್ವಾಭಿಮಾನಿ ಕಾಯಿಲೆ ಅಂದ್ರೆ ಕೊರೊನಾ : ಕಾಗಿನೆಲೆ ಶ್ರೀ

     

  • ಮಂಟಪಕ್ಕೆ ಕುಡಿದು ಬಂದ ವರ – ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

    ಮಂಟಪಕ್ಕೆ ಕುಡಿದು ಬಂದ ವರ – ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

    ಲಕ್ನೋ: ವರ ಮತ್ತು ಆತನ ಸ್ನೇಹಿತ ಮದುವೆ ಮಂಟಪಕ್ಕೆ ಕುಡಿದು ಬಂದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವಧು ಮದುವೆಯನ್ನು ನಿಲ್ಲಿಸಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜನ್‍ನಲ್ಲಿ ನಡೆದಿದೆ.

    ಪ್ರಯಾಗರಾಜ್‍ನ ಪ್ರತಾಪಗಢ ನಗರದ ಟಿಕ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ರೈತರೊಬ್ಬರು ತಮ್ಮ ಮಗಳ ಮದುವೆಯನ್ನು ರವೀಂದ್ರ ಪಟೇಲ್ ಎಂಬವರ ಜೊತೆ ನಿಗದಿ ಪಡಿಸಿದ್ದರು. ಆದರೆ ಮದುವೆ ದಿನ ವರ ಮತ್ತು ಆತನ ಸ್ನೇಹಿತರು ಕುಡಿದು ಮಂಟಪಕ್ಕೆ ಬಂದರು. ಈ ವೇಳೆ ವಧು ಹಾಗೂ ಆಕೆಯ ಕುಟುಂಬಸ್ಥರು ಮೊದಲಿಗೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ವರ ವಧುವನ್ನು ಜೈಮಾಲಾ ಹಾಡಿಗೆ ನೃತ್ಯ ಮಾಡುವಂತೆ ಒತ್ತಾಯಿಸಿದಾಗ ಪರಿಸ್ಥಿತಿ ತಿರುವು ಪಡೆದುಕೊಂಡಿದೆ.

    ನಂತರ ಮಹಿಳೆ ನೃತ್ಯ ಮಾಡಲು ನಿರಾಕರಿಸಿ ವರನ ನಡವಳಿಕೆಯಿಂದ ಆಕ್ರೋಶಗೊಂಡು ಮದುವೆಯನ್ನು ನಿಲ್ಲಿಸಿದ್ದಾಳೆ. ವಧು ಮದುವೆಯನ್ನು ನಿರಾಕರಿಸಿದ ನಂತರ ಆಕೆಯ ಕುಟುಂಬಸ್ಥರು ಮದುವೆ ವೇಳೆ ವರನಿಗೆ ನೀಡಿದ್ದ ಉಡುಗೊರೆಯನ್ನು ಹಿಂದಿರುಗಿಸುವಂತೆ ವರನ ಕುಟುಂಬಸ್ಥರನ್ನು ಕೇಳಿದ್ದಾರೆ.  ಇದನ್ನು ಓದಿ: ಪಾಕಿಸ್ತಾನ ಸ್ಟಾರ್ ಕ್ರಿಕೆಟಿಗನ ಪತ್ನಿಗೆ ಕೊಹ್ಲಿ ಎಂದರೆ ಪಂಚಪ್ರಾಣವಂತೆ

    ಹೀಗಾಗಿ ವರನ ಕುಟುಂಬಸ್ಥರು ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ಸಂಧಾನ ಮಾಡಿಕೊಳ್ಳವುದಾಗಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿದ ನಂತರ ಮಹಿಳೆ ವರನನ್ನು ಮದುವೆಯಾಗಲು ನಿರಾಕರಿಸಿರುವುದಾಗಿ ತಿಳಿಸಿದ್ದಾಳೆ. ಅಲ್ಲದೆ ಮದುವೆ ವೇಳೆ ವರನಿಗೆ ನೀಡಿದ್ದ ನಗದು ಹಾಗೂ ಇತರ ವಸ್ತುಗಳನ್ನು ಹಿಂದಿರುಗಿಸುವಂತೆ ವಧುವಿನ ಕಡೆಯವರು ತಿಳಿಸಿದ್ದಾರೆ.

  • ಹಳ್ಳಕ್ಕೆ ಬಿದ್ದ ಕಾರು – ಒಂದೇ ಕುಟುಂಬದ ಮೂವರ ಸಾವು

    ಹಳ್ಳಕ್ಕೆ ಬಿದ್ದ ಕಾರು – ಒಂದೇ ಕುಟುಂಬದ ಮೂವರ ಸಾವು

    ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದು, ಇಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹನೂರು ಬಳಿ ನಡೆದಿದೆ.

    ಮೃತರನ್ನು ಶೇಕ್ ಫೈಜಲ್ (44), ಮೆಹಕ್ (33), ಶೇಕ್ ಅಲಿ (11) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಬೆಂಗಳೂರು ಮೂಲದ ಐದು ಮಂದಿ ಚಾಮರಾಜನಗರ ಜಿಲ್ಲೆಯ ಹನೂರಿನಿಂದ ಬೆಂಗಳೂರಿಗೆ ತೆರಳುವ ವೇಳೆ ಹಲಗೂರು ಸಮೀಪದ ಮಹದೇಶ್ವರ ಪೆಟ್ರೋಲ್ ಬಂಕ್ ಬಳಿ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಯುವತಿಯರೊಂದಿಗೆ ಯುವಕರು ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೋಜು-ಮಸ್ತಿ

    ಮಹದೇಶ್ವರ ಪೆಟ್ರೋಲ್ ಬಂಕ್ ಬಳಿ ಇರುವ ತಿರುವಿನಲ್ಲಿ ವೇಗವಾಗ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಈ ವೇಳೆ ಇದ್ದಕ್ಕಿದ್ದ ಹಾಗೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರು ಹೊತ್ತಿ ಉರಿದಿದೆ. ಈ ವೇಳೆ ಕಾರಿನಲ್ಲಿ ಇದ್ದವರು ಮೂವರು ಸಜೀವ ದಹನವಾಗಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಳುಗಳನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಲಗೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಒಂದೇ ಕುಟುಂಬದ ನಾಲ್ವರು ಕೊರೊನಾಗೆ ಬಲಿ- ಕಣ್ಣೀರಲ್ಲಿ ಕೈ ತೊಳೆಯುತ್ತಿದೆ ಕುಟುಂಬ

    ಒಂದೇ ಕುಟುಂಬದ ನಾಲ್ವರು ಕೊರೊನಾಗೆ ಬಲಿ- ಕಣ್ಣೀರಲ್ಲಿ ಕೈ ತೊಳೆಯುತ್ತಿದೆ ಕುಟುಂಬ

    ಹುಬ್ಬಳ್ಳಿ: ಕಳೆದ 10-15 ದಿನಗಳಲ್ಲಿ ಒಂದೇ ಕುಟುಂಬದ ನಾಲ್ವರು ಕೊರೊನಾಗೆ ಬಲಿಯಾಗಿದ್ದಾರೆ. ಇದು ಇಡೀ ಕುಟುಂಬವನ್ನು ದುಃಖದಲ್ಲಿ ಮಡುಗಟ್ಟುವಂತೆ ಮಾಡಿದೆ.

    ಕುಂದಗೋಳ ತಾಲೂಕಿನ ಚಿಕ್ಕಗುಂಜಳ ಗ್ರಾಮದ ಹಿರೇತನದ ಎಂಬುವವರ ಮನೆಯಲ್ಲಿನ ತಾಯಿ, ಮೂವರು ಮಕ್ಕಳು ಕೊರೊನಾಗೆ ಬಲಿಯಾಗಿದ್ದಾರೆ. ತಂದೆ ಆಸ್ಪತ್ರೆಯಲ್ಲಿದ್ದಾರೆ.

    ಸೋಂಕು ಹೇಗೆ ಬಂತು?
    ಮನೆಯ ಹಿರಿಯ ಸದಸ್ಯರಾದ 80 ವರ್ಷದ ನಿವೃತ್ತ ಶಿಕ್ಷಕರಿಗೆ ಆರಂಭದಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ಆರೈಕೆ ಮಾಡುತ್ತಿದ್ದರಿಂದ ಪತ್ನಿ ಶಾಂತಮ್ಮ (75)ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲೇ ಕೊನೆಯುಸಿರೆಳೆದಿದ್ದಾರೆ. ಬಳಿಕ ಎರಡು ದಿನಗಳಲ್ಲಿ ದೊಡ್ಡ ಮಗ ಮಂಜುನಾಥ್ ಸಹ ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಅದೇ ರೀತಿ ಎರಡನೇ ಮಗ ಅರವಿಂದ್ ಹಾಗೂ ಮೂರನೆಯ ಮಗ ಸುರೇಶ್ ಅವರಿಗೂ ಕೊರೊನಾ ಕಾಣಿಸಿಕೊಂಡಿದೆ. ಮೊನ್ನೆ ಅರವಿಂದ್, ಇಂದು ಸುರೇಶ್ ಸಾವಿಗೀಡಾಗಿದ್ದಾರೆ. ಹೀಗೆ 10-15 ದಿನಗಳಲ್ಲಿ ತಾಯಿ ಹಾಗೂ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಆರಂಭದಲ್ಲಿ ಕೊರೊನಾ ಪತ್ತೆಯಾದ ತಂದೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮನೆಯ ಮೂವರು ಗಂಡು ಮಕ್ಕಳು ಮೃತಪಟ್ಟಂತಾಗಿದ್ದು, ದಿಕ್ಕೇ ತೋಚದಂತಾಗಿದೆ ಎಂದು ಕುಟುಂಬದ ಸದಸ್ಯರು ಕಣ್ಣೀರು ಸುರಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆ ಸಾಂತ್ವನ ಹೇಳಲು ಕೂಡ ಯಾರೂ ಇವರ ಮನೆಯತ್ತ ಹೋಗುತ್ತಿಲ್ಲ.

  • ಕಾರಿನಲ್ಲಿ ಸಂಚಾರ – ಪಾಸಿಟಿವ್ ವ್ಯಕ್ತಿಯ ಕುಟುಂಬವೇ ಆಸ್ಪತ್ರೆಗೆ ಶಿಫ್ಟ್

    ಕಾರಿನಲ್ಲಿ ಸಂಚಾರ – ಪಾಸಿಟಿವ್ ವ್ಯಕ್ತಿಯ ಕುಟುಂಬವೇ ಆಸ್ಪತ್ರೆಗೆ ಶಿಫ್ಟ್

    – ಒಂದೇ ದಿನ 100 ಕ್ಕೂ ಹೆಚ್ಚು ವಾಹನ ಸೀಜ್ ಮಾಡಿದ ಪೊಲೀಸರು

    ಚಿಕ್ಕೋಡಿ: ಕೊರೊನಾ ಪಾಸಿಟಿವ್ ಇದ್ದರೂ ಅನಗತ್ಯವಾಗಿ ಕಾರಿನಲ್ಲಿ ಕುಟುಂಬ ಸಮೇತ ಓಡಾಡುತ್ತಿದ್ದ ವ್ಯಕ್ತಿಯನ್ನು ಪೆÇಲೀಸರುವ ತಡೆದು ಆಸ್ಪತ್ರೆಗೆ ರವಾನಿಸಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

    ಹುಕ್ಕೇರಿ ಪಟ್ಟಣದ ಕೋರ್ಟ್ ವೃತ್ತದಲ್ಲಿ ಹುಕ್ಕೇರಿ ಸಿಪಿಐ ರಮೇಶ್ ಚಾಯಾಗೋಳ ನೇತೃತ್ವದಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಪಾಸಿಟಿವ್ ಇರುವ ವ್ಯಕ್ತಿ ಕುಟುಂಬ ಸಮೇತ ಪರ ಊರಿಗೆ ತೆರಳುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಪಾಸಿಟಿವ್ ಇರುವುದನ್ನ ಸ್ವತಃ ರೋಗಿಯೇ ಹೇಳುತ್ತಿದ್ದಂತೆ ಗರಂ ಆದ ಸಿಪಿಐ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಕುಟುಂಬ ಸಮೇತ ಆಸ್ಪತ್ರೆಗೆ ರವಾನಿಸುವಂತೆ ಸೂಚಿಸಿದರು. ಇದನ್ನು ಓದಿ: ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆ

    ಕೊರೊನಾ ಲಾಕ್ ಡೌನ್ ಇದ್ದರೂ ಜನರ ಅನಗತ್ಯ ಓಡಾಟ ನಿಲ್ಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅನಗತ್ಯ ಓಡಾಡುವರಿಗೆ ಪೊಲೀಸರು ಬಿಸಿ ಮುಟ್ಟಿಸಿ ಒಂದೇ ದಿನ 100ಕ್ಕೂ ಹೆಚ್ಚು ವಾಹನಗಳನ್ನ ಸೀಜ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಕಲಿ ಕೋವಿಡ್ ಡ್ಯೂಟಿ ಪಾಸ್ ಅಳವಡಿಸಿದ ವ್ಯಕ್ತಿಯ ಕಾರ್ ಸೇರಿದಂತೆ ಮಹಾರಾಷ್ಟ್ರದಿಂದ ಕಳ್ಳ ಮಾರ್ಗದ ಮೂಲಕ ಬಂದವರ ಕಾರನ್ನು ಸೀಜ್ ಮಾಡಿ ಸಿಪಿಐ ರಮೇಶ್ ಚಾಯಾಗೋಳ ತರಾಟೆಗೆ ತೆಗೆದುಕೊಂಡರು. ಹುಕ್ಕೇರಿ ಪಿಎಸ್‍ಐ ಸಿದ್ದರಾಮಪ್ಪ ಉನ್ನದ ಸೇರಿದಂತೆ ಪೊಲೀಸ್ ಸಿಬ್ಬಂದಿ ವಾಹನ ತಪಾಸಣೆಯಲ್ಲಿ ಭಾಗಿಯಾಗಿದ್ದರು.

  • ಕೊರೊನಾ ಗೆದ್ದ ಬೆಳ್ತಂಗಡಿ ಬಂಗಾಡಿಯ 13 ಮಂದಿಯ ತುಂಬು ಕುಟುಂಬ

    ಕೊರೊನಾ ಗೆದ್ದ ಬೆಳ್ತಂಗಡಿ ಬಂಗಾಡಿಯ 13 ಮಂದಿಯ ತುಂಬು ಕುಟುಂಬ

    ಮಂಗಳೂರು: ಕೊರೊನಾ ಮಹಾಮಾರಿ ಎಲ್ಲೆಡೆ ಜನರನ್ನು ತತ್ತರಿಸುವಂತೆ ಮಾಡಿದ್ದು ಹೆಚ್ಚಿನವರು ಹೆದರಿಯೇ ಸಾಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಹೆದರುವ ಜನರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ 13 ಮಂದಿಯ ಕುಟುಂಬವೊಂದು ಕೊರೊನಾ ಗೆದ್ದು ಬಂದಿದೆ.

    ಬೆಳ್ತಂಗಡಿಯ ಬಂಗಾಡಿ ಗ್ರಾಮದ ಶಿವಪ್ಪ ಪೈ ಕುಟುಂಬದ ಹಸುಗೂಸಿನಿಂದ ಹಿಡಿದು ವೃದ್ಧರ ತನಕ ಎಲ್ಲರೂ ಕೊರೊನಾ ವಿನ್ನರ್ ಆಗಿದ್ದಾರೆ. ಮುಂಬೈನಿಂದ ಬಂದ ಸಂಬಂಧಿಕರಿಂದ ಈ ಕುಟುಂಬದ 13 ಮಂದಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಇದರಲ್ಲಿ 4 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ 9 ಮಂದಿ ಮನೆಯಲ್ಲೇ ಐಸೋಲೇಷನ್ ನಲ್ಲಿದ್ದರು.

    9 ಮಂದಿಯೂ ಮನೆಯಲ್ಲೇ ಪ್ರತ್ಯೇಕ ಪ್ರತ್ಯೇಕವಿದ್ದು, ವೈದ್ಯರ ಸಲಹೆಯ ಜೊತೆಗೆ ಮನೆ ಮದ್ದು ತೆಗೆದುಕೊಂಡಿದ್ದರು. ಹೀಗಾಗಿ ಹಸುಗೂಸಿನಿಂದ ಹಿಡಿದು ಮುದಕರವರೆಗಿನ ಎಲ್ಲಾ 13 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.