Tag: family

  • ವೈದ್ಯನ ನಿರ್ಲಕ್ಷ್ಯದಿಂದ ಸಾವು – ಆಸ್ಪತ್ರೆಯ ಮುಂದೆ ಶವ ಇಟ್ಟು  ಪ್ರತಿಭಟನೆ

    ವೈದ್ಯನ ನಿರ್ಲಕ್ಷ್ಯದಿಂದ ಸಾವು – ಆಸ್ಪತ್ರೆಯ ಮುಂದೆ ಶವ ಇಟ್ಟು ಪ್ರತಿಭಟನೆ

    ಮಂಡ್ಯ: ಖಾಸಗಿ ಕ್ಲಿನಿಕ್ ವೈದ್ಯ ನೀಡಿದ ಇಂಜೆಕ್ಷನ್‍ನಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಯುವಕನ ಪೋಷಕರು ಶವವನ್ನು ಅಂತ್ಯಕ್ರಿಯೆ ನಡೆಸದೇ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಶವಗಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದ ವಿಜಯ್‍ಕುಮಾರ್‍ರವರ ಮಗ ನಿಶಾಂತ್ (17) ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಿಶಾಂತ್‍ಗೆ ಜ್ವರ ಇದ್ದ ಕಾರಣ ವಿ.ಸಿ ಫಾಂ ಗೇಟ್ ಬಳಿ ಇರುವ ಖಾಸಗಿ ಕ್ಲಿನಿಕ್‍ಗೆ ಹೋದ ವೇಳೆ ವೈದ್ಯ ಸಂತೋಷ್ ಇಂಜೆಕ್ಷನ್ ನೀಡಿದ್ದಾರೆ. ಇದಾದ ಬಳಿಕ ನಿಶಾಂತ್ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ನಂತರ ಮೈಸೂರಿಗೆ ಕರೆದುಕೊಂಡು ಹೋಗಿ ಎಂದು ಮಿಮ್ಸ್ ಸಿಬ್ಬಂದಿ ಶಿಫಾರಸ್ಸು ಮಾಡಿದ್ದಾರೆ. ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಶಾಂತ್ ಸಾವನ್ನಪ್ಪಿದ್ದಾರೆ. ನಿಶಾಂತ್ ಸಾವಿಗೆ ವಿ.ಸಿ ಫಾಂ ಗೇಟ್ ಬಳಿಯ ಖಾಸಗಿ ಕ್ಲಿನಿಕ್‍ನ ವೈದ್ಯ ಸಂತೋಷ್ ನೀಡಿದ ಇಂಜೆಕ್ಷನ್‍ನಿಂದಲೇ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

    ವೈದ್ಯ ಸಂತೋಷ್‍ರನ್ನು ಬಂಧಿಸಿ, ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಸದ್ಯ ಈ ಪ್ರಕರಣ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ:ಬ್ಲೂ ಬೇಬಿ ಸಿಂಡ್ರೋಮ್ – ಸಿದ್ದಾರ್ಥ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

  • ಮನೆ ಗೋಡೆ ಕುಸಿದು ಬಿದ್ದು ಬಾಲಕಿ ಸಾವು

    ಮನೆ ಗೋಡೆ ಕುಸಿದು ಬಿದ್ದು ಬಾಲಕಿ ಸಾವು

    ಚಿತ್ರದುರ್ಗ: ಮನೆಯ ಗೋಡೆ ಕುಸಿದು ಬಾಲಕಿ ಸಾವನ್ನಪ್ಪಿರುವ ದುರಂತ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಬಾಣಗೆರೆ ಗ್ರಾಮದಲ್ಲಿ ನಡೆದಿದೆ.

    ಹರ್ಷಿತಾ (11) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮಳೆಯಿಂದಾಗಿ ನೆನೆದಿದ್ದ ಗೋಡೆ ಕುಸಿದು ಬಿದ್ದು ದುರಂತ ಸಂಭವಿಸಿದೆ. ಮನೆಯಲ್ಲಿ ಮಲಗಿದ್ದ ವೇಳೆ ಹರ್ಷಿತಾ ಸಾವನ್ನಪ್ಪಿದ್ದು, ತಂದೆ ರವಿ(40) ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಅದೃಷ್ಟವಶಾತ್ ತಾಯಿ ಕವಿತಾ(35), ಮತ್ತೋರ್ವ ಪುತ್ರಿ ಅಮೂಲ್ಯ ಘಟನೆಯಲ್ಲಿ ಪಾರಾಗಿದ್ದಾರೆ. ಈ ದುರಂತ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

    ಇದೀಗ ಈ ವಿಷಯ ತಿಳಿದು ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿರವರು ಚಿತ್ರುದುರ್ಗ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಮೃತರ ಕುಟುಂಬಕ್ಕೆ ಪ್ರಕೃತಿ ವಿಕೋಪದಡಿ ಪರಿಹಾರ ನೀಡಿ ಈ ಕೂಡಲೇ ತುರ್ತಾಗಿ ವಸತಿ ಮಂಜೂರು ಮಾಡಲು ಸೂಚಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ಇಪ್ಪತು ಸಾವಿರ ರೂಪಾಯಿಗಳನ್ನು ವೈಯಕ್ತಿಕವಾಗಿ ಮೃತರ ಕುಟುಂಬಕ್ಕೆ ನೀಡಲು ಹೊಳಲ್ಕೆರೆ ತಾಲೂಕಿನ ಬಿಜೆಪಿ ಮಂಡಲ ಅಧ್ಯಕ್ಷರಾದ ಸಿದ್ದೇಶ್ ರವರ ಮುಖಾಂತರ ತಲುಪಿಸಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಮೋಹನ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಬಿಜೆಪಿ ಮುಖಂಡ ಕುಮಾರ್ ಗ್ರಾಮ ಪಂಚಾಯತ್ ಸದಸ್ಯರಾದ ಗಂಗಣ್ಣ, ಶ್ರೀಕಾಂತ್, ನಾಗರಾಜ್, ಗೋವಿಂದಪ್ಪ, ಮುಂತಾದ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ:ಸತತ 100 ದಿನಗಳಿಂದ 2,000 ಜನರಿಗೆ ಅನ್ನ ಸಂತರ್ಪಣೆ ಸೇವೆ 

  • ಪ್ರಶಾಂತ್ ಸಂಬರಗಿ ಮನದಾಸೆ ಈಡೇರಿಸಿದ ಬಿಗ್‍ಬಾಸ್

    ಪ್ರಶಾಂತ್ ಸಂಬರಗಿ ಮನದಾಸೆ ಈಡೇರಿಸಿದ ಬಿಗ್‍ಬಾಸ್

    ಬಿಗ್‍ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಈ ವಾರ ಕೊನೆಯವಾರ ಆಗಿರುವುದರಿಂದ ಅವರು ಬಿಗ್ ಮನೆಯಲ್ಲಿರುವ ಕೃತಕ ಕಿವಿಯಲ್ಲಿ ವ್ಯಕ್ತಪಡಿಸಿರುವ ಅವರ ಮನದಾಸೆಯನ್ನು ಈಡೇರಿಸುತ್ತಿದ್ದಾರೆ.

    ಅರವಿಂದ್ ಅವರು ಬಿಗ್‍ಮನೆಗೆ ಬಂದ ತಮ್ಮ ಬೈಕ್‍ನ್ನು ಮತ್ತೆ ಮನೆಯಲ್ಲಿ ನೋಡಬೇಕು ಎಂದಿದ್ದರು ಅವರ ಆಸೆಯನ್ನು ಬಿಗ್‍ಬಾಸ್ ತಿರಿಸಿದ್ದಾರೆ, ನಂತರ ದಿವ್ಯಾ ಉರುಡುಗ ಅವರು ಇಷ್ಟದ ಊಟ ಕೇಳಿದ್ದರು ಅದೂ ಕೂಡ ಪೂರೈಸಿದ್ದಾರೆ. ಇದೀಗ ಪ್ರಶಾಂತ್ ಸಂಬರಗಿ ಅವರು ತಮ್ಮ ಕುಟುಂಬವನ್ನು ಈ ಮನೆಯಲ್ಲಿ ನೋಡಬೇಕು ಎಂದಿದ್ದರು. ಇದೀಗ ಬಿಗ್‍ಬಾಸ್ ಅವರ ಕುಟುಂಬದ ಫೋಟೋವನ್ನು ಬಿಗ್ ಮನೆಯಲ್ಲಿ ಹಾಕುವ ಮೂಲಕ ಅವರ ಆಸೆಯನ್ನು ಪೂರೈಸಿದ್ದಾರೆ.

    ಸಂಬರಗಿ ಬಿಗ್ ಮನೆಯಲ್ಲಿ ಅವರ ಕುಟುಂಬದ ಫೋಟೋ ನೋಡುತ್ತಿದ್ದಂತೆ ತುಂಬಾ ಖುಷಿ ಪಟ್ಟರು. ನಂತರ ಇಷ್ಟು ದೊಡ್ಡ ಫೋಟೋ ಹಾಕಿದ್ದಾರೆ, ತುಂಬಾ ಖುಷಿ ಆಯ್ತು ಎಂದರು. ಬಳಿಕ ದಿವ್ಯಾ ಉರುಡುಗ ನಿಮ್ಮ ಕುಟುಂಬ ತುಂಬಾ ಮುದ್ದಾಗಿದೆ, ನಿಮ್ಮ ಹೆಂಡತಿ ಮತ್ತು ನಿಮ್ಮ ಸಣ್ಣ ಮಗ ತುಂಬಾ ಮುದ್ದಾಗಿದ್ದಾರೆ ಎಂದರು. ಇದನ್ನೂ ಓದಿ: ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

    ಪ್ರಶಾಂತ್ ಸಂಬರಗಿ ಅವರ ಕುಟುಂಬವನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟರು. ನನ್ನ ಸಣ್ಣ ಮಗನನ್ನು ಫೋಟೋಗೆ ಅಲ್ಲಿ ನಿಲ್ಲಿಸಿರುವುದು ನನ್ನ ಭಾಗ್ಯ ಎಂದು ನಗೆ ಚಟಾಕಿ ಹಾರಿಸಿದರು. ದಿವ್ಯಾ ಸುರೇಶ್ ನಿಮ್ಮ ದೊಡ್ಡ ಮಗ ನಿಮ್ಮಂತೆ ಇದ್ದಾರೆ. ಸಣ್ಣ ಮಗ ನಿಮ್ಮ ಹೆಂಡತಿಯಂತೆ ಇದ್ದಾರೆ ಎಂದು ಹೋಲಿಕೆ ಮಾಡಿದರು.

    ಸಂಬರಗಿ ಎಲ್ಲರನ್ನು ಕರೆದು ನನ್ನ ಕುಟುಂಬದ ಜೊತೆ ಒಂದು ಫೋಟೋ ತೆಗೆಸಿಕೊಳ್ಳನ ಎಂದು ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡರು. ಬಿಗ್‍ಬಾಸ್ ನೀವು ನನ್ನ ಫ್ಯಾಮಿಲಿಯನ್ನು ಕರೆದುಕೊಂಡು ಬಂದಿಲ್ಲ ಎಂದರು ಕೂಡ ನನ್ನ ಫ್ಯಾಮಿಲಿಯನ್ನು ಫೋಟೋ ಸಮೇತ ತಂದಿರುವುದು ಸಂತೋಷವಾಯಿತು. ನಾನು ಬದುಕಿರುವುದೇ ನನ್ನ ಕುಟುಂಬಕೋಸ್ಕರ. ಈ ಮನೆಯಲ್ಲಿ ನನ್ನ ಪರಿವಾರದ ಫೋಟೋ ನೋಡಿ ತುಂಬಾ ಖುಷಿ ಆಯ್ತು ಧನ್ಯವಾದ ಎಂದರು.

  • ಯಾವುದೇ ಕಾರಣಕ್ಕೂ ನಮಗೂ, ದೊಡ್ಮನೆಗೂ ಹೋಲಿಕೆ ಮಾಡ್ಬೇಡಿ: ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ

    ಯಾವುದೇ ಕಾರಣಕ್ಕೂ ನಮಗೂ, ದೊಡ್ಮನೆಗೂ ಹೋಲಿಕೆ ಮಾಡ್ಬೇಡಿ: ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ

    ಮೈಸೂರು: ಇಂದು ಬೆಳಗ್ಗೆ ನಿರ್ಮಾಪಕ ಉಮಾಪತಿ ಅವರು ದೊಡ್ಮನೆ ಆಸ್ತಿ ವಿಚಾರವಾಗಿ ತಮ್ಮ ಮಧ್ಯೆ ಇರುವ ಮುನಿಸು ಹೊರ ಹಾಕಿದ ಬೆನ್ನಲ್ಲೇ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಯಾವುದೇ ಕಾರಣಕ್ಕೂ ದೊಡ್ಮನೆ ಹಾಗೂ ನಮಗೂ ಹೋಲಿಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

    ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮರ್ಡರ್ ಮಾಡಿದ್ದೀನಾ ಎಂದು ಪ್ರಶ್ನಿಸಿದರು. ನಾನು ಯಾರ ಪರ ವಿರೋಧ ಮಾತನಾಡಿಲ್ಲ. ನಾನು ಕಷ್ಟಪಟ್ಟು ಮಾಡಿರುವ ಆಸ್ತಿ ಇದು. ಇದರ ಬಗ್ಗೆ ಯಾರದರೂ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ. ಇಂದ್ರಜಿತ್ ಅವರು ಮೊದಲು ಆರೋಪಗಳನ್ನು ಸಾಬೀತುಪಡಿಸಲಿ ಮತ್ತೆ ಮಾತನಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

    ಇಂಡಸ್ಟ್ರೀ ಯಾರ ಅಪ್ಪನ ಸೊತ್ತು ಅಲ್ಲ. ಕಲೆಗೆ ಬೆಲೆ ಇದ್ದರಷ್ಟೇ ಇಲ್ಲಿ ಇರಬಹುದು ಅಷ್ಟೆ. ತಪ್ಪು ನಾನು ಮಾಡಿದ್ದರೆ ಕ್ಷಮೆ ಕೇಳುತ್ತೇನೆ ಇಲ್ಲದಿದ್ದರೆ ನಾನ್ಯಾಕೆ ಕೇಳಬೇಕು ಎಂದು ಹೇಳಿದರು. ಇದನ್ನೂ ಓದಿ: ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್

    ಯಾವುದೇ ಕರಣಕ್ಕೂ ನಮಗೂ ದೊಡ್ಮನೆಗೂ ಹೋಲಿಕೆ ಮಾಡಬೇಡಿ. ಅವರ ವಿಚಾರವಾಗಿ ನನ್ನ ಹೆಸರನ್ನು ತೆಗೆಯಬೇಡಿ. ಈ ವಿಷಯ ದೊಡ್ಮನೆ ಕಡೆ ಹೋಗಿದ್ದಕ್ಕೆ ನಾನು ಮಾತನಾಡಿದ್ದು. ಇನ್ನೂ ಈ ವಿಷಯ ಬೇರೆ ಕಡೆ ಹೋಗುವ ಮುಂಚೆ ನಾನು ಮಾತನಾಡಲು ಬಂದಿದ್ದೇನೆ. 2006ರಲ್ಲಿ ನನ್ನ ಇಮೇಜ್ ಕೆಟ್ಟು ಹೋಗಿತ್ತು. ನಾವು ಸರಿಯಾಗಿದ್ದರೆ ಯಾರು ಕೂಡ ಯಾರ ಇಮೇಜ್ ಕೂಡ ಕೆಡಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಇಂದ್ರಜಿತ್ ಅಪ್ಪನಿಗೆ ಹುಟ್ಟಿದವರಾಗಿದ್ರೆ ದಾಖಲೆ ರಿಲೀಸ್ ಮಾಡಲಿ: ದರ್ಶನ್ ನೇರ ಸವಾಲ್

    ಮೊದಲು 25 ಕೋಟಿ ಪ್ರಾಪರ್ಟಿ ವಿಷಯ ಮುಗಿಯಲಿ. ಇನ್ನು ಹೋಟೆಲಿನಲ್ಲಿ ನಾನು ಯಾರಿಗೆ ಹೊಡೆದೆ ಎಂಬ ಆರೋಪ ಇದೆ, ಮೊದಲು ಅವನು ಬಂದು ಮೇಡಿಕಲ್ ಸರ್ಟಿಫಿಕೆಟ್ ತೋರಿಸಲಿ. ಆರ್ಡರ್ ಕೊಟ್ಟಿದ್ದು ಲೇಟ್ ಆಗಿತ್ತು, ಅದಕ್ಕೆ ಸಣ್ಣ ವಿಚಾರವಾಗಿ ಗಲಾಟೆ ನಡೆದಿದೆ. ಆದರೆ ಅವರು ಆರೋಪ ಮಾಡಿರುವಂತೆ ಏನೋ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ದರ್ಶನ್ ಕ್ಷಮೆ ಕೇಳಲಿ, ಮುಂದುವರಿಸಿದ್ರೆ ಹೆಚ್ಚಿನ ತೇಜೋವಧೆ – ಇಂದ್ರಜಿತ್

    150 ಸಂಪಾದನೆ ಮಾಡಿ ಇಲ್ಲಿವರೆಗು ಬಂದಿದ್ದೇನೆ ನನ್ನ ಆಸ್ತಿಯನ್ನು ನೋಡಿಕೊಳ್ಳುವುದು ನನಗೆ ಮುಖ್ಯ. ನಾನು ನನ್ನ ಅಭಿಮಾನಿಗಳಿಗೆ ಗೊತ್ತಾಗಬೇಕೆಂದು ಇಷ್ಟು ಮಾತನಾಡಿದ್ದೇನೆ. ಕಲಾವಿದರು ಒಬ್ಬರು ಕೂಡ ನಮ್ಮ ವಿಚಾರವಾಗಿ ಮಾತನಾಡಿಲ್ಲ ಅವರು ಮಾತನಾಡಲ್ಲ ಎಂದು ದರ್ಶನ್ ಕಿಡಿಕಾರಿದರು.

  • ವಿಷಯುಕ್ತ ಆಹಾರ ಸೇವಿಸಿ ನಾಲ್ವರು ಸಾವನ್ನಪ್ಪಿದ್ದ ಕುಟುಂಬಕ್ಕೆ ಶಾಸಕರಿಂದ 2 ಲಕ್ಷ ಪರಿಹಾರ

    ವಿಷಯುಕ್ತ ಆಹಾರ ಸೇವಿಸಿ ನಾಲ್ವರು ಸಾವನ್ನಪ್ಪಿದ್ದ ಕುಟುಂಬಕ್ಕೆ ಶಾಸಕರಿಂದ 2 ಲಕ್ಷ ಪರಿಹಾರ

    ಚಿತ್ರದುರ್ಗ: ವಿಷಯುಕ್ತ ಆಹಾರ ಸೇವನೆಯಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿರುವ ಮೃತರ ಮನೆಗೆ ಹೊಳಲ್ಕೆರೆ ಶಾಸಕ ಚಂದ್ರಪ್ಪ ಭೇಟಿ ನೀಡಿ 2 ಲಕ್ಷ ರೂಪಾಯಿ ಪರಿಹಾರ ನೀಡಿ ಸಾಂತ್ವನ ಹೇಳಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ರಾತ್ರಿ ವೇಳೆ ಮುದ್ದೆಯನ್ನು ಸೇವಿಸಿದ್ದ ನಾಲ್ವರು ತೀವ್ರ ಅಸ್ವಸ್ಥರಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ರು. ಹೀಗಾಗಿ ಇಂದು ಅವರ ಕುಟುಂಬದಲ್ಲಿ ಅದೃಷ್ಟವಶಾತ್ ಕೇವಲ ಅನ್ನವನ್ನು ಸೇವಿಸಿ, ಬದುಕುಳಿದಿರುವ ರಕ್ಷಿತಾ ಎಂಬ ಬಾಲಕಿ ಹಾಗೂ ಸಂಬಂಧಿಗಳನ್ನು ಭೇಟಿ ಮಾಡಿದ ಶಾಸಕ ಚಂದ್ರಪ್ಪ, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರದ ಚೆಕ್ ವಿತರಿಸಿ ಧೈರ್ಯ ಹೇಳಿದರು. ಈ ಪ್ರಕರಣದ ಕುರಿತು ಅಧಿಕಾರಿಗಳು ಸೂಕ್ತ ತನಿಖೆ ನಡೆಸುವರು. ಪ್ರಕರಣದ ವಿಚಾರದಲ್ಲಿ ಅನುಮಾನ ಹಾಗೂ ಯಾವುದೇ ಆತಂಕ ಬೇಡ ಎಂದರು.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೋರ್ವ ಬಾಲಕ ರಾಹುಲನಿಗೂ ಅಗತ್ಯ ಚಿಕಿತ್ಸೆ ಕೊಡಿಸುವುದರ ಜೊತೆಗೆ ಸಿಎಂ ಯಡಿಯೂರಪ್ಪನವರ ಜೊತೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ಅಂತ್ಯಸಂಸ್ಕಾರದ ಬಳಿಕ ನಡೆಸುವ ವಿಧಿ ವಿಧಾನಗಳನ್ನು ನೆರವೇರಿಸಲು 15,000 ಸಹ ಪ್ರತ್ಯೇಕವಾಗಿ ನೀಡಿದ ಶಾಸಕರು, ಇದು ನನ್ನ ವೈಯುಕ್ತಿಕ ಪರಿಹಾರವಾಗಿದೆ. ಸರ್ಕಾರ ನೀಡುವ ಪರಿಹಾರ ಕೂಡ ಶೀಘ್ರದಲ್ಲೇ ಕೊಡಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಗ್ರಾಮಸ್ಥರು ಹಾಗೂ ಮೃತರ ಸಂಬಂಧಿಗಳು ಇದ್ದರು. ಇದನ್ನೂ ಓದಿ: ಬಾಲಕಿಯ ರಕ್ಷಿಸುವುದನ್ನು ನೋಡಲು ಹೋಗಿ 30 ಮಂದಿ ಅದೇ ಬಾವಿಗೆ ಬಿದ್ರು!

  • ಹಾಡಹಗಲೇ ಬಾವನನ್ನು ಕೊಂದು ಬಾಮೈದ ಪರಾರಿ

    ಹಾಡಹಗಲೇ ಬಾವನನ್ನು ಕೊಂದು ಬಾಮೈದ ಪರಾರಿ

    ಚಿಕ್ಕಬಳ್ಳಾಪುರ: ಬಾವನನ್ನು ಕೊಂದು ಬಾಮೈದ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕರೇನಹಳ್ಳಿಯಲ್ಲಿ ನಡೆದಿದೆ.

    ಕೊಲೆಯಾದವರು ಬಾಗೇಪಲ್ಲಿ ಮೂಲದ ನವೀನ್(30) ಎನ್ನಲಾಗಿದೆ. ನವೀನ್ ಪತ್ನಿಯ ತಮ್ಮ ವೆಂಕಟೇಶ್ ಹಾಗೂ ಸಹಚರರು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

    ಭಾವನನ್ನೇ ಕೊಂದಿದ್ಯಾಕೆ?
    ಕೊಲೆಯಾದ ನವೀನ್ ಕರೇನಹಳ್ಳಿ ನಿವಾಸಿ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದು, ಕೌಟುಂಬಿಕ ಕಲಹದ ಕಾರಣ ಆಕೆ ತವರುಮನೆ (ಕರೇನಹಳ್ಳಿ) ಸೇರಿದ್ದಳು. ಈ ನಡುವೆ ಮಕ್ಕಳ ವಿಚಾರ ಹಾಗೂ ಸಂಸಾರ ಸರಿಪಡಿಸುವ ವಿಚಾರವಾಗಿ ರಾಜಿ ಪಂಚಾಯಿತಿ ಪ್ರಯತ್ನ ಮುಂದುವರೆದಿದ್ದು, ಶನಿವಾರ ರಾತ್ರಿ ರಾಜಿಗೆಂದು ಕರೇನಹಳ್ಳಿಗೆ ನವೀನ್ ಬಂದಿದ್ದಾನೆ. ಈ ವೇಳೆ ಮಡದಿಯ ಕುಟುಂಬದವರೊಂದಿಗೆ ಜಗಳ ಮಾಡಿದ್ದಾನೆ ಎನ್ನಲಾಗಿದೆ.

    ಭಾನುವಾರ ಬೆಳಗ್ಗೆ ಸ್ಥಳೀಯ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಲು ನವೀನ್ ಮಡದಿಯ ಪೋಷಕರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅಷ್ಟರಲ್ಲಿ ಕರೇನಹಳ್ಳಿಯ ಹೊರಭಾಗದಲ್ಲಿ ನವೀನ್ ಮಡದಿಯ ತಮ್ಮ ವೆಂಕಟೇಶ್ ಹಾಗೂ ಸಹಚರರು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಹತ್ಯೆ ನಡೆಯುವಾಗ ಈ ಸ್ಥಳದಲ್ಲಿ ಕೆಲ ಹುಡುಗರು ಆಟವಾಡುತ್ತಿದ್ದು, ಹತ್ಯೆ ಕಂಡು ಆತಂಕಗೊಂಡು ಓಡಿದ್ದಾರೆ.

    ಅಲ್ಲದೆ ಹಾಡಹಗಲೇ ನಗರದಲ್ಲಿ ಹತ್ಯೆ ನಡೆದಿರುವ ಹಿನ್ನೆಲೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ತಲೆಮರೆಸಿಕೊಂಡಿರುವ ಆರೋಪಿ ವೆಂಕಟೇಶ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಪೋಷಕರ ಎದುರೇ 16ರ ಬಾಲೆ ಮೇಲೆ 8 ಕಾಮುಕರಿಂದ ಸಾಮೂಹಿಕ ಅತ್ಯಾಚಾರ

    ಪೋಷಕರ ಎದುರೇ 16ರ ಬಾಲೆ ಮೇಲೆ 8 ಕಾಮುಕರಿಂದ ಸಾಮೂಹಿಕ ಅತ್ಯಾಚಾರ

    ಲಕ್ನೋ: ಪ್ರತಿಕಾರ ತೀರಿಸಿಕೊಳ್ಳಲು 8 ಜನ ಕಾಮುಕರು 16 ವರ್ಷದ ಬಾಲಕಿ ಮೇಲೆ ಅವಳ ಪೋಷಕರ ಎದುರೇ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಆಮ್ರೋಹ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

    ತಮ್ಮ ಕುಟುಂಬದ ಮಹಿಳೆಯೊಂದಿಗೆ ಬಾಲಕಿಯ ಅಣ್ಣ ಓಡಿ ಹೋಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಕಾಮುಕರು 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಜೋಡಿಯನ್ನು ಹುಡುಕಲು ಬಾಲಕಿ ಹಾಗೂ ಪೊಷಕರನ್ನು ಆರೋಪಿಗಳು ತಮ್ಮ ಮನೆಗೆ ಕರೆಸಿದ್ದಾರೆ. ಬಳಿಕ ಬಾಲಕಿಯನ್ನು ಥಳಿಸಿದ್ದಾರೆ. ಅಲ್ಲದೆ ಕಾಣೆಯಾದ ಮಹಿಳೆಯ ತಂದೆ, ಚಿಕ್ಕಪ್ಪಂದಿರು, ಸಹೋದರರು ಸೇರಿ 8 ಜನ ಪೋಷಕರ ಎದುರೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡಿ ಕ್ಷಮಿಸಿ ಎಂದು ಪತ್ರ ಬರೆದ ಕಳ್ಳ

    ಆರೋಪಿಗಳಲ್ಲಿ ಒಬ್ಬ ಒಪ್ಪಿಗೆ ಇಲ್ಲದೇ ಆಕೆಯನ್ನು ವಿವಾಹವಾಗಿದ್ದಾನೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಜೂನ್ 29ರಂದು ನಮ್ಮನ್ನು ಮನೆಯಿಂದ ಹೊರ ಹಾಕಿದ್ದಾರೆ. ಅಲ್ಲದೆ ಈ ಕುರಿತು ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿಯ ಪೋಷಕರು ತಿಳಿಸಿದ್ದಾರೆ.

    ಪೊಲೀಸರಿಗೆ ಈ ಕುರಿತು ತಿಳಿಸಿ, ದೂರು ನೀಡಲು ತೆರಳಿದೆವು, ಆದರೆ ಸ್ವೀಕರಿಸಲಿಲ್ಲ. ಬಾಲಕಿ ಭಯಾನಕ ಚಿತ್ರಹಿಂಸೆ ಕುರಿತು ವಿವರಿಸಿದಾಗ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಸಂಬಂಧಿಸಿದ ಐಪಿಸಿ ಸೆಕ್ಷನ್‍ಗಳ ಅಡಿ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವರದಿಯ ಪ್ರಕಾರ ಈ ಮೊದಲು ಎರಡೂ ಕುಟುಂಬದವರು ಚೆನ್ನಾಗಿದ್ದರು. ಆದರೆ ಜೂನ್ 27ರಂದು ಪ್ರೀಮಿಗಳು ಓಡಿ ಹೋದ ಬಳಿಕ ಪ್ರತಿಕಾರ ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

    ಆರೋಪಿಗಳು ಪ್ರಭಾವಿಗಳಾಗಿದ್ದು, ನಮ್ಮ ಕುಟುಂಬದ ಇತರೆ ಮಹಿಳೆಯರಿಗೂ ಇದೇ ರೀತಿ ಮಾಡಬಹುದು. ಹೀಗಾಗಿ ತುಂಬಾ ಹೆದರಿಕೆಯಾಗುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಾಲಕಿಯ ಚಿಕ್ಕಮ್ಮ ಆಗ್ರಹಿಸಿದ್ದಾರೆ.

  • ಕೌಟುಂಬಿಕ ಕಲಹ ಶಂಕೆ – 3 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

    ಕೌಟುಂಬಿಕ ಕಲಹ ಶಂಕೆ – 3 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

    ದಾವಣಗೆರೆ: ಕೌಟುಂಬಿಕ ಕಲಹ ಶಂಕೆ ಹಿನ್ನೆಲೆಯಲ್ಲಿ ಮೂರು ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಜರುಗಿದೆ.

    ಹರ್ಷಿತಾ(3), ಚಂದ್ರಮ್ಮ (25), ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಮೃತರಾದ ಚಂದ್ರಮ್ಮನ ಪತಿ ಮಂಜಪ್ಪ ಡಿ.ಆರ್ ಪೊಲೀಸ್ ಕಾನ್ಸ್‌ಟೇಬಲ್‌ ಆಗಿ ಸೇವೆ ಸಲ್ಲಿಸುತ್ತಿದ್ದು, ಇಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ, ಮಗು ಸಹಿತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪ್ರಕರಣ ಬೆಳಕಿಗೆ ಬಂದಿದೆ.

    ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ತಾನು ಆತ್ಮಹತ್ಯೆ ಮಾಡಿಕೊಂಡ ಚಂದ್ರಮ್ಮ ಮೃತ ನೋಡಿ ಪತ್ನಿ ಮಂಜಪ್ಪನಿಗೆ ಸಿಡಿಲು ಹೊಡೆದಂತಾಗಿದೆ. ಪೊಲೀಸ್ ಪೇದೆ ಮಂಜಪ್ಪ ಹಾಗು ಚಂದ್ರಮ್ಮನ ಕಳೆದ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಅನ್ಯೋನ್ಯವಾಗಿ ಇದ್ದರು ಎನ್ನಲಾಗಿದೆ. ಆದರೆ ಕಳೆದ ದಿನ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದು, ಮನನೊಂದು ಈ ರೀತಿಯಾಗಿ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಈ ಸಂಬಂಧ ಸ್ಥಳಕ್ಕೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ. ಇದನ್ನೂ ಓದಿ : ಬರ್ತ್ ಡೇ ಪಾರ್ಟಿಗೆ ತೆರಳಿದ್ದ ಯುವಕರು ನೀರುಪಾಲು

  • ಮನೆಯವರಿಂದ ಹಸುವಿಗೆ ಸೀಮಂತ ಕಾರ್ಯ

    ಮನೆಯವರಿಂದ ಹಸುವಿಗೆ ಸೀಮಂತ ಕಾರ್ಯ

    ಗದಗ: ಚೊಚ್ಚಲು ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವುದು ಸಾಮಾನ್ಯ. ಆದರೆ ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಗೋವಿಗೆ ಸೀಮಂತ ಮಾಡಲಾಗಿದೆ.

    ಮೆಣಸಗಿ ಗ್ರಾಮದ ಶ್ರೀಕಾಂತ್ ಗೂರಮ್ಮಣ್ಣವರ್ ಎಂಬವರ ಮನೆಯಲ್ಲಿ ಸಾಕಿದ್ದ ಗೌರಿ ಎಂಬ ಹಸುವಿಗೆ ಅದ್ಧೂರಿಯಾಗಿ ಸೀಮಂತ ಮಾಡಿದ್ದಾರೆ. ಮನೆಯ ಮಗಳಿಗೆ ತವರು ಮನೆಯವರು ಉಡುಗೊರೆ(ಬಳುವಳಿ)ಯಾಗಿ ಕರು ನೀಡಿದ್ದರು. ಸದ್ಯ 7 ವರ್ಷದ ನಂತರ ಗೌರಿ ಗರ್ಭ ಧರಿಸಿರುವುದರಿಂದ ಮನೆ ಮಂದಿಗೆಲ್ಲಾ ಸಂತಸ ತಂದಿದೆ.

    8 ತಿಂಗಳು ಗರ್ಭಿಣಿಯಾದ ಗೌರಿಗೆ ದೂರದ ಬಾದಾಮಿಯಿಂದ ಬೀಗರನ್ನು ಕರೆಯಿಸಿ ಸೀಮಂತದ ವಿಧಿ ವಿಧಾನಗಳನ್ನ ನೆರವೇರಿಸಲಾಗಿದೆ. ಬಂದ ಸಂಬಂಧಿಕರೆಲ್ಲರೂ ಹೊಸ ಉಡುಪು ತೊಟ್ಟು, ಗರ್ಭಿಣಿಯರಿಗೆ ನಡೆಸುವ ಸೀಮಂತ ಕಾರ್ಯದಂತೆ ಗೋವಿಗೆ ರೇಷ್ಮೆ ಸೀರೆ ಉಡಿಸಿ, ಕೊಡಿಗೆ ಹಸಿರು ಬಳೆ ತೊಡಸಿ, ಕೊರಳಿಗೆ ಮಾಲೆಹಾಕಿ, ಕಾಲಿಗೆ ಕಾಲ್ಗೆಜ್ಜೆ ಹಾಕಿಸಿ, ಶೃಂಗಾರಗೊಳಿಸಿ ಕಾಮಧೇನುವನ್ನು ತಮ್ಮ ಮನೆಯ ಮಗಳಿಗೆ ಮಾಡುವಂತೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಮಾಡಿದ್ದಾರೆ. ತರತರನಾದ ಅಡುಗೆ ಮಾಡಿ ಎಲ್ಲರೂ ಊಟ ಮಾಡಿ, ಆಕಳಿಗೂ ಊಣಬಡಿಸಿದ್ದಾರೆ.

    ಗೂರಮ್ಮಣ್ಣವರ್ ಕುಟುಂಬ ಮೂಲತ: ಕೃಷಿಕರು. ಇವರು ಮನೆಯ ಮಗಳಿಗೆ ಕೊಟ್ಟಿರುವ ಗೋ ಮಾತೆಗೆ ಗೌರಿ ಅಂತ ಹೆಸರಿಟ್ಟು ಪ್ರೀತಿ, ಅಕ್ಕರೆಯಿಂದ ಸಾಕಿದ್ದರು. ಗೌರಿ 7 ವರ್ಷದ ನಂತರ ಈಗ ಗೌರಿ ಗರ್ಭವತಿಯಾಗಿದ್ದು, ರೈತಾಪಿ ವರ್ಗಕ್ಕೆ ಒಳ್ಳೆಯದಾಗಲಿ, ಗೋ ಸಂತತಿ ಉಳಿಯಲಿ, ಬೆಳೆಯಲಿ ಎಂಬ ಉದ್ದೇಶದಿಂದ ಈ ಕಾರ್ಯ ಕೈಗೊಂಡಿದ್ದಾರೆ. ಅನೇಕ ಮುತ್ತೈದೆಯರು ಆರತಿ ಬೆಳಗುವುದರ ಮೂಲಕ ಉಡಿ ತುಂಬುವ ಸಂಪ್ರದಾಯ ನೇರವೇರಿಸಿ, ಊರು ತುಂಬೆಲ್ಲಾ ಮೆರವಣಿಗೆ ಮಾಡಿದ್ದಾರೆ.

    ಸಾಮಾನ್ಯವಾಗಿ ಅನೇಕ ಕಡೆಗಳಲ್ಲಿ ಗೋ ಪೂಜೆ ಮಾಡುವ ಸಂಪ್ರದಾಯವಿದೆ. ಆದರೆ ಗೋವಿಗೆ ಸೀಮಂತ ಮಾಡೋದು ಅಪರೂಪ. ಇತ್ತೀಚಿನ ದಿನಗಳಲ್ಲಿ ಭಾರತೀಯ ಗೋ ಸಂತತಿ ಅಳಿವಿನಂಚಿನಲ್ಲಿವೆ. ಗೋ ಸಂತತಿ ಉಳಿಸಲು, ಕಾಮಧೇನುವಾದ ಗೋವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಇದರಿಂದ ಜನರಲ್ಲಿ ಗೋವುಗಳ ಬಗ್ಗೆ ಭಕ್ತಿ, ಪೂಜನೀಯ ಭಾವನೆ ಬೆಳೆಯುತ್ತದೆ. ಜೊತೆಗೆ ರೈತರ ಬದುಕು ಹಸನಾಗುತ್ತದೆ ಎಂಬುದು ಗ್ರಾಮಸ್ಥರ ಮನದಾಳದ ಮಾತಾಗಿದೆ. ಇದನ್ನೂ ಓದಿ : ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್

  • ಆರು ಮಂದಿ ಆತ್ಮಹತ್ಯೆ ಪ್ರಕರಣ- ಹೊಂಡಕ್ಕೆ ಹಾರಿ ಶವಗಳನ್ನು ತೆಗೆದು ಸಹಾಯ ಮಾಡಿದ ವ್ಯಕ್ತಿಗೆ ಗೌರವ

    ಆರು ಮಂದಿ ಆತ್ಮಹತ್ಯೆ ಪ್ರಕರಣ- ಹೊಂಡಕ್ಕೆ ಹಾರಿ ಶವಗಳನ್ನು ತೆಗೆದು ಸಹಾಯ ಮಾಡಿದ ವ್ಯಕ್ತಿಗೆ ಗೌರವ

    ಯಾದಗಿರಿ: ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಂಡಕ್ಕೆ ಹಾರಿ ಶವಗಳನ್ನು ತೆಗೆಯುವ ಮೂಲಕ ಸಹಾಯ ಮಾಡಿದ ವ್ಯಕ್ತಿಗೆ ಇಂದು ಗೌರವ ಸಲ್ಲಿಸಲಾಯಿತು.

    ಹೌದು. ಶಹಪೂರ ತಾಲೂಕಿನ ದೋರನಹಳ್ಳಿಯಲ್ಲಿ ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಗ್ರಾಮದ ಹಳ್ಳೆಪ್ಪ ಎಂಬವರು ಕೃಷಿ ಹೊಂಡದಲ್ಲಿ ಈಜಾಡಿ ಮೃತರ ಶವಗಳನ್ನು ನೀರಿನಿಂದ ಹೊರತೆಗೆದು ಶೌರ್ಯ ಮತ್ತು ಮಾನವೀಯತೆ ಮೆರೆದಿದ್ದರು. ಇದೀಗ ಹಳ್ಳೆಪ್ಪ ಅವರಿಗೆ ಯಾದಗಿರಿ ಪೊಲೀಸ್ ಇಲಾಖೆ ಗೌರವ ನೀಡಿದೆ.

    ಜೂನ್ 28ರಂದು ದೋರನಹಳ್ಳಿಯಲ್ಲಿ ಭೀಮರಾಯ ಎಂಬವರು ಸಾಲದ ಹೊರೆಯಿಂದ ತನ್ನ ನಾಲ್ಕು ಜನ ಮಕ್ಕಳನ್ನು ಕೃಷಿ ಹೊಂಡಕ್ಕೆ ತಳ್ಳಿ ಬಳಿಕ ಹೆಂಡತಿಯ ಜೊತೆಗೆ ತಾನು ಸಹ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಕೃಷಿ ಹೊಂಡದಲ್ಲಿ ಶವಗಳನ್ನು ಹೊರ ತೆಗೆಯಲು ಹಳ್ಳೆಪ್ಪ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗೆ ಬಹಳಷ್ಟು ಸಹಾಯ ಮಾಡಿದ್ದರು.

    ಸ್ವತಃ ಈಜುಗಾರರಾಗಿರುವ ಹಳ್ಳೆಪ್ಪ ಹೊಂಡದಲ್ಲಿನ ಎಲ್ಲಾ ಶವಗಳನ್ನು ಹೊರೆತೆಗೆದಿದ್ದರು. ಹೀಗಾಗಿ ಯಾದಗಿರಿ ಎಸ್ಪಿ ವೇದಮೂರ್ತಿ ಇಂದು ತಮ್ಮ ಕಚೇರಿಗೆ ಕರೆದು ಹಳ್ಳೆಪ್ಪನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.