Tag: family

  • ಊಟ ಮಾಡ್ತಿದ್ದಾಗ ಏಕಾಏಕಿ ಬಿದ್ದ ಫ್ಯಾನ್- ಮನೆ ಮಂದಿ ಗ್ರೇಟ್ ಎಸ್ಕೇಪ್

    ಊಟ ಮಾಡ್ತಿದ್ದಾಗ ಏಕಾಏಕಿ ಬಿದ್ದ ಫ್ಯಾನ್- ಮನೆ ಮಂದಿ ಗ್ರೇಟ್ ಎಸ್ಕೇಪ್

    ನವದೆಹಲಿ: ಕುಟುಂಬವೊಂದು ಹಾಲ್ ನಲ್ಲಿ ನೆಮ್ಮದಿಯಾಗಿ ಕುಳಿತುಕೊಂಡು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಫ್ಯಾನ್ ಕೆಳಗೆ ಬಿದ್ದಿದ್ದು, ಮನೆ ಮಂದಿ ಭಾರೀ ಅವಘಡದಿಂದ ಪಾರಾದ ಘಟನೆ ನಡೆದಿದೆ.

    ಈ ಘಟನೆ ಎಲ್ಲಿ ನಡೆದಿದೆ ಎಂಬುದು ವರದಿಯಾಗಿಲ್ಲ ಆದರೆ ಫ್ಯಾನ್ ಬೀಳುವ ವೀಡಿಯೋ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    1 ಸೆಕೆಂಡ್ ಇರುವ ವೀಡಿಯೋದಲ್ಲಿ ವಿಯೇಟ್ನಾಂ ಮೂಲದ ಕುಟುಂಬವೊಂದು ಒಟ್ಟಾಗಿ ಕುಳಿತು ಊಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಪತಿ, ಪತ್ನಿ ಹಾಗೂ ತಮ್ಮ ಮಕ್ಕಳು ಮಾತನಾಡುತ್ತಾ ಊಟ ಮಾಡುತ್ತಿದ್ದಾಗ ಫ್ಯಾನ್ ಏಕಾಏಕಿ ಪತಿ ಹಾಗೂ ಮಗುವಿನ ಮೇಲೆ ಬೀಳುತ್ತದೆ. ಇದರಿಂದ ಇಡೀ ಕುಟುಂಬ ಗಾಬರಿಗೊಳಗಾಗುತ್ತದೆ. ಅಲ್ಲದೆ ಮಹಿಳೆ ಕೂಡಲೇ ಎದ್ದು ಮಗನ ಎಳೆದುಕೊಂಡು ಕೈ, ತಲೆ ಉಜ್ಜುತ್ತಾರೆ. ಇತ್ತ ವ್ಯಕ್ತಿ ಬಿದ್ದ ಫ್ಯಾನ್ ಅನ್ನು ಪಕ್ಕದಲ್ಲಿ ಇಡುತ್ತಾರೆ. ಆದರೆ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ. ಇದನ್ನೂ ಓದಿ: ಯೋಗಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ – ಉದ್ದವ್ ವಿರುದ್ಧ ದೂರು

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಹಲವಾರು ಕಾಮೆಂಟ್ ಗಳು ಬರುತ್ತಿದೆ. ಹಲವರು ಗ್ರೇಟ್ ಎಸ್ಕೇಪ್ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅದೃಷ್ಟವಂತ ಫ್ಯಾಮಿಲಿ ಎಂದಿದ್ದಾರೆ. ಒಟ್ಟಿನಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾದ ಕುಟುಂಬ ನೋಡಿ ಜನ ಸಂತಸಪಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ

  • ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ನಾಲ್ವರು ಆತ್ಮಹತ್ಯೆಗೆ ಯತ್ನ

    ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ನಾಲ್ವರು ಆತ್ಮಹತ್ಯೆಗೆ ಯತ್ನ

    ಚಿಕ್ಕಮಗಳೂರು: ಜೀವನದಲ್ಲಿ ಮಾನಸಿಕವಾಗಿ ನೊಂದಿದ್ದೇವೆ ಎಂದು ವಾಯ್ಸ್ ಮೆಸೇಜ್ ಕಳುಹಿಸಿ ಒಂದೇ ಕುಟುಂಬದ ನಾಲ್ವರು ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಮಳಲಿ ಚನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದವರನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹಳೇಜೇಡಿಕಟ್ಟೆ ಗ್ರಾಮದವರು ಎಂದು ಗುರುತಿಸಲಾಗಿದೆ. ಮೂಲತಃ ಭದ್ರಾವತಿ ತಾಲೂಕಿನ ಹಳೇ ಜೇಡಿಕಟ್ಟೆ ಮೂಲದ ನೀತು ಎಂಬವರನ್ನು ಬೆಂಗಳೂರಿಗೆ ಮದುವೆ ಮಾಡಿಕೊಟ್ಟಿದ್ದರು. ದಂಪತಿಗೆ 13 ವರ್ಷ ಪ್ರಾಯದ ಧ್ಯಾನ್ ಎಂಬ ಮಗನಿದ್ದಾರೆ. ಕಳೆದ ರಾತ್ರಿ 1 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದ ಮಂಜು, ನೀತು, ಧ್ಯಾನ್ ಹಾಗೂ ಮಂಜು ತಾಯಿ ಸುನಂದಮ್ಮ ನಾಲ್ವರು ಸ್ವಿಫ್ಟ್ ಕಾರಿನಲ್ಲಿ ಬಂದು ಮಳಲಿ ಚನ್ನೇನಹಳ್ಳಿ ಬಳಿ ಭದ್ರಾ ನಾಲೆಗೆ ಕಾರಿನ ಸಮೇತ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: 4 ಬೈಕ್ ಕದ್ದು ಜಜ್ಜಿ ಹೊಲದಲ್ಲಿ ಬಿಟ್ಟು ಹೋದ ದುಷ್ಕರ್ಮಿಗಳು

    ಕಾರು ಭದ್ರಾ ನಾಲೆಗೆ ಬಿದ್ದ ಬಳಿಕ ನೀತು ಹಾಗೂ ಮಗು ಧ್ಯಾನ್ ಸಾವಿನಿಂದ ಪಾರಾಗಿದ್ದಾರೆ. ಆದರೆ ಮಂಜು ಹಾಗೂ ಮಂಜು ತಾಯಿ ಸುನಂದಮ್ಮ ಪತ್ತೆಯಾಗಿಲ್ಲ. ವೇಗವಾಗಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಸ್ಥಳಕ್ಕೆ ಚಿಕ್ಕಮಗಳೂರು ಎಸ್‍ಪಿ ಅಕ್ಷಯ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತರೀಕೆರೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಾಪತ್ತೆ ಆದವರಿಗಾಗಿ ಹುಟುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಎಸಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಕಿರಾತಕರು!

  • ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡ ಸುದೀಪ್ – ಕಿಚ್ಚನ ಟ್ರೆಡಿಷನಲ್ ಲುಕ್‍ಗೆ ಫ್ಯಾನ್ಸ್ ಫಿದಾ

    ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡ ಸುದೀಪ್ – ಕಿಚ್ಚನ ಟ್ರೆಡಿಷನಲ್ ಲುಕ್‍ಗೆ ಫ್ಯಾನ್ಸ್ ಫಿದಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಬ್ಯುಸಿ ಶೆಡ್ಯುಲ್ ಮಧ್ಯೆ ಕುಟುಂಬ ಸಮೇತ ಮದುವೆ ಸಮಾರಂಭವೊಂದಕ್ಕೆ ಹಾಜರಾಗಿದ್ದಾರೆ.

    ಸಿನಿಮಾದ ಜೊತೆ ಜೊತೆಗೆ ಕುಟುಂಬಕ್ಕೂ ಅಷ್ಟೇ ಸಮಯ ಮೀಸಲಿಡುವ ಸುದೀಪ್ ಒಬ್ಬರು ‘ಬೆಸ್ಟ್ ಫ್ಯಾಮಿಲಿ ಮ್ಯಾನ್’ ಎಂದೇ ಹೇಳಬಹುದು. ಇತ್ತೀಚೆಗಷ್ಟೇ ಸುದೀಪ್ ತಮ್ಮ ಸಂಬಂಧಿಕರ ಮದುವೆಗೆ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಜೊತೆಗೆ ತೆರಳಿದ್ದಾರೆ. ಇದೇ ವೇಳೆ ಸುದೀಪ್ ಸಹೋದರಿ, ಸಹೋದರಿಯ ಮಗ ಇತರರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

    ಇದೀಗ ಸುದೀಪ್ ಕುಟುಂಬ ಸಮೇತ ಕ್ಲಿಕ್ಕಿಸಿಕೊಂಡಿರುವ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಫೋಟೋದಲ್ಲಿ ಸುದೀಪ್ ಪೈಜಾಮದ ರೀತಿಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದರೆ, ಪ್ರಿಯಾ ಸುದೀಪ್ ಸೀರೆಯುಟ್ಟು ಸಾಂಪ್ರದಾಯಿಕ  ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಿಚ್ಚನ ಹೊಸ ಹೇರ್ ಸ್ಟೈಲ್‍ಗೆ ಫ್ಯಾನ್ಸ್ ಫಿದಾ

    ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ಸ್ಟೈಲಿಶ್ ನಟರಾಗಿ ಮಿಂಚುತ್ತಿರುವ ಸುದೀಪ್, ಇತ್ತೀಚೆಗಷ್ಟೇ ಸುದೀಪ್ ಹೊಸ ಹೇರ್ ಸ್ಟೈಲ್‍ವೊಂದನ್ನು ಮಾಡಿಕೊಂಡಿದ್ದು, ಅದರ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಸಾಂಪ್ರದಾಯಿಕ ಉಡುಪಿನಲ್ಲಿಯೂ ಸಖತ್ ಹ್ಯಾಂಡ್‍ಸಮ್ ಆಗಿ ಮಿಂಚುತ್ತಿರುವ ಸುದೀಪ್ ಫೋಟೋ ನೋಡಿ ಅಭಿಮಾನಿಗಫುಲ್ ಫಿದಾ ಆಗಿದ್ದಾರೆ.

    ಸೆಪ್ಟೆಂಬರ್ 2 ರಂದು ಸುದೀಪ್ ಹುಟ್ಟುಹಬ್ಬ ಇರುವುದರಿಂದ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ-3 ಬಿಡುಗಡೆ ದಿನಾಂಕ ಹಾಗೂ ವಿಕ್ರಾಂತ್ ರೋಣ ಸಿನಿಮಾ ಕುರಿತಂತೆ ಅಪ್‍ಡೇಟ್ಸ್ ಸಿಗಲಿದೆ ಎಂದು ಕಿಚ್ಚನ ಅಭಿನಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.  ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಮೊದಲೇ ಕಿಚ್ಚನಿಗೆ ಸರ್ಪ್ರೈಸ್ ನೀಡಿದ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ

  • ಸ್ವಾತಂತ್ರ್ಯ ಹೋರಾಟಗಾರ ಡಿ. ಮಾರಪ್ಪನವರಿಗೆ ಅಂತಿಮ ನಮನ ಸಲ್ಲಿಸಿದ ಸುಧಾಕರ್

    ಸ್ವಾತಂತ್ರ್ಯ ಹೋರಾಟಗಾರ ಡಿ. ಮಾರಪ್ಪನವರಿಗೆ ಅಂತಿಮ ನಮನ ಸಲ್ಲಿಸಿದ ಸುಧಾಕರ್

    ಚಿಕ್ಕಬಳ್ಳಾಪುರ: ಅನಾರೋಗ್ಯದಿಂದ ನಿಧನರಾದ ಸ್ವಾತಂತ್ರ್ಯ ಹೋರಾಟಗಾರರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಕೊಳವನಹಳ್ಳಿ ಗ್ರಾಮದ ಡಿ. ಮಾರಪ್ಪನವರ ಅಂತಿಮ ದರ್ಶನವನ್ನು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಪಡೆದಿದ್ದಾರೆ.

    ತಾಲೂಕಿನ ಕೊಳವನಹಳ್ಳಿ ಗ್ರಾಮದ ನಿವಾಸಕ್ಕೆ ಭೇಟಿ ನೀಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ಡಿ.ಮಾರಪ್ಪನವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಸಾಹಿತಿಗಳು, ಶಿಕ್ಷಣ ಪ್ರೇಮಿಗಳು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದಂತಹ ಧೀಮಂತ ವ್ಯಕ್ತಿಯ ಸಾವು ನಮಗೆಲ್ಲಾ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಭಯ, ಆತಂಕವಿಲ್ಲದೇ ಶಾಲೆಗೆ ಬನ್ನಿ: ಉಮೇಶ್ ಕತ್ತಿ

    ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಸಹಕಾರ ಕೊಟ್ಟಿದ್ದರು. ಅನೇಕ ಪುಸ್ತಕಗಳನ್ನು ಸಹ ರಚನೆ ಮಾಡಿದ್ದರು. ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದವರು. ಅವರನ್ನು ಕಳೆದುಕೊಂಡಿರುವುದು ಇಡೀ ಜಿಲ್ಲೆಯ ಜನತೆಗೆ ತುಂಬಲಾರದ ನಷ್ಟ ಅಂತ ಮಾರಪ್ಪನವರನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:ಶಾಲೆಗೆ ಆಗಮಿಸಿದ ಸಚಿವ ಸುಧಾಕರ್‌ಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು

  • ಕೇಂದ್ರ ಸಚಿವರ ಎಡವಟ್ಟು- ಹುತಾತ್ಮ ಯೋಧನ ಬದಲು, ಕರ್ತವ್ಯ ನಿರತ ಯೋಧನ ಕುಟುಂಬಕ್ಕೆ ಸಾಂತ್ವನ

    ಕೇಂದ್ರ ಸಚಿವರ ಎಡವಟ್ಟು- ಹುತಾತ್ಮ ಯೋಧನ ಬದಲು, ಕರ್ತವ್ಯ ನಿರತ ಯೋಧನ ಕುಟುಂಬಕ್ಕೆ ಸಾಂತ್ವನ

    ಗದಗ: ಹುತಾತ್ಮ ಯೋಧನ ಕುಟುಂಬಕ್ಕೆ ಭೇಟಿ ನೀಡಬೇಕಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಸ್ಥಳೀಯ ಬಿಜೆಪಿ ಮುಖಂಡರ ಮಾಹಿತಿ ಕೊರತೆಯಿಂದಾಗಿ, ಕರ್ತವ್ಯ ನಿರತ ಯೋಧನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿರುವ ಘಟನೆ ಜಿಲ್ಲೆಯ ಮುಳಗುಂದ ಪಟ್ಟಣದಲ್ಲಿ ನಡೆದಿದೆ.

    ಗುರುವಾರ ರಾತ್ರಿ ಗದಗನಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಜನಾಶೀರ್ವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮುಳಗುಂದ ಪಟ್ಟಣದ ಹುತಾತ್ಮ ಯೋಧನ ಕುಟುಂಬಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿಬರುವ ಪ್ಲಾನ್ ಹಾಕಿಕೊಂಡಿದ್ದರು. ಈ ವೇಳೆ ಬಿಜೆಪಿ ಸ್ಥಳೀಯ ಕಾರ್ಯಕರ್ತರ ಮಾಹಿತಿ ಕೊರತೆಯಿಂದಾಗಿ ಎಡವಟ್ಟಾಗಿದೆ. ಇದನ್ನೂ ಓದಿ: ಭಾರೀ ಮೊತ್ತಕ್ಕೆ ಕೆಜಿಎಫ್ ಸ್ಯಾಟಲೈಟ್ ಹಕ್ಕು ಖರೀದಿಸಿದ ಜೀ ಸ್ಟುಡಿಯೋಸ್

    ಒಂದೂವರೆ ವರ್ಷದ ಹಿಂದೆ ಮುಳಗುಂದ ಪಟ್ಟಣದ ಯೋಧ ಬಸವರಾಜ್ ಹಿರೇಮಠ ಮಹಾರಾಷ್ಟ್ರದ ಪುಣೆಯಲ್ಲಿ ಕರ್ತವ್ಯನಿರತರಾಗಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಸವರಾಜ್ ಹಿರೇಮಠ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಬೇಕಿತ್ತು. ಆದರೆ ಸ್ಥಳೀಯ ಕಾರ್ಯಕರ್ತರ ಎಡವಟ್ಟಿನಿಂದ ಸದ್ಯ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಯೋಧ ರವಿಕುಮಾರ್ ಹನುಮಂತಪ್ಪ ಕಟ್ಟಿಮನಿ ಅವರ ಮನೆಗೆ ಭೇಟಿ ನೀಡಿದ್ದರು.

    ಕುಟುಂಬದವರ ಯೋಗಕ್ಷೇಮ ವಿಚಾರಿಸಿ, ಕರ್ತವ್ಯ ನಿರತ ಸೈನಿಕನ ಪತ್ನಿಗೆ ಸರ್ಕಾರಿ ಕೆಲಸ ಹಾಗೂ ಕುಟುಂಬಕ್ಕೆ ಜಮೀನು ಕೊಡುವ ಭರವಸೆಯನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನೀಡಿದ್ದರು. ಕೇಂದ್ರ ಸಚಿವರ ತರಾತುರಿ ಹೇಳಿಕೆಯಿಂದ ಹಾಲಿ ಯೋಧನ ಕುಟುಂಬಸ್ಥರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಸ್ಥಳೀಯ ಕಾರ್ಯಕರ್ತರು ಮಾಡಿದ ಎಡವಟ್ಟಿನಿಂದ ಕೇಂದ್ರ ಸಚಿವರು ಪೇಚಿಗೆ ಸಿಲುಕಿದಂತಾಗಿದೆ.

  • ಸಲಿಂಗಿಗಳಿಗೆ ಜೊತೆಯಾಗಿ ವಾಸಿಸಲು ಅನುಮತಿ ನೀಡಿದ ಯುಪಿ ಕೋರ್ಟ್

    ಸಲಿಂಗಿಗಳಿಗೆ ಜೊತೆಯಾಗಿ ವಾಸಿಸಲು ಅನುಮತಿ ನೀಡಿದ ಯುಪಿ ಕೋರ್ಟ್

    ಲಕ್ನೋ: ರಾಂಪುರ ನ್ಯಾಯಾಲಯವು ಸಂಬಂಧ ಹೊಂದಿದ್ದ ಇಬ್ಬರು ಮಹಿಳೆಯರಿಗೂ ಜೊತೆಯಾಗಿ ವಾಸಿಸಲು ಅನುಮತಿ ನೀಡಿದೆ.

    ಸುಮಾರು 20 ವರ್ಷ ಆಸುಪಾಸಿನ ಯುವತಿ ರಾಂಪುರದ ಶಹಬಾದ್ ಪ್ರದೇಶದಲ್ಲಿರುವ ತನ್ನ ಗೆಳತಿಯೊಂದಿಗೆ ತಂಗಿದ್ದಳು. ಈ ಕುರಿತಂತೆ ಯುವತಿಯ ಪೋಷಕರು ಜುಲೈನಲ್ಲಿ ಆಕೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಯುವತಿ ಇತ್ತೀಚೆಗಷ್ಟೇ ತನ್ನ ಸ್ನೇಹಿತೆಯೊಂದಿಗೆ ಶಹಬಾದ್‍ನ ಮನೆಯಲ್ಲಿ ಕಾಣಿಸಿಕೊಂಡಿದ್ದು, ತಾನು ತನ್ನ ಸ್ನೇಹಿತೆಯೊಂದಿಗೆ ಇರಲು ಬಯಸಿ ಮನೆಯನ್ನು ಸ್ವಇಚ್ಛೆಯಿಂದ ತೊರೆದು ಬಂದಿರುವುದಾಗಿ ತಿಳಿಸಿದ್ದಾಳೆ. ಇದನ್ನೂ ಓದಿ:ಕಾರು, ಬೈಕ್ ಮಧ್ಯೆ ಅಪಘಾತ- ಮೂವರು ಸ್ಥಳದಲ್ಲೇ ಸಾವು

    ಇಬ್ಬರು 18 ವರ್ಷ ಮೇಲ್ಪಟ್ಟವರಾಗಿರುವುದರಿಂದ ಹಾಗೂ ಯುವತಿ ತನ್ನ ಸ್ವಇಚ್ಛೆಯಿಂದ ಮನೆ ಬಿಟ್ಟು ಬಂದಿರುವುದರಿಂದ, ಇಬ್ಬರನ್ನು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಯಿತು. ನಂತರ ಇಬ್ಬರಿಗೂ ಜೊತೆಯಾಗಿ ಬದುಕಲು ಅನುಮತಿ ನೀಡಲಾಯಿತು ಎಂದು ಅಧಿಕಾರಿ ಧರಂ ಸಿಂಗ್ ಮಾರ್ಚಲ್ ಹೇಳಿದ್ದಾರೆ.

    ಈ ಮುನ್ನ ಯುವತಿ ಪೋಷಕರು, ಆಕೆ ಇನ್ನೂ ಅಪ್ರಾಪ್ತ ವಯಸ್ಕಳು ಎಂದು ತಿಳಿಸಿದ್ದರು. ಆದರೆ ಯುವತಿ ತನ್ನ ಪ್ರೌಢ ಶಾಲೆಯ ಪ್ರಮಾಣ ಪತ್ರವನ್ನು ತೋರಿಸಿದ್ದಳು. ಈ ವೇಳೆ ಯುವತಿಗೆ 20 ವರ್ಷವಾಗಿದ್ದು, ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ನಂತರ ಯುವತಿ ಹಾಗೂ ಆಕೆಯ ಕುಟುಂಬದವರು ಒಟ್ಟಿಗೆ ಕುಳಿತು ಸಮಾಲೋಚನೆ ನಡೆಸಿದ್ದಾರೆ. ಆದರೂ ಹಠ ಬಿಡದೇ ಯುವತಿ ಒಟ್ಟಿಗೆ ವಾಸಿಸುವುದಾಗಿ ತಿಳಿಸಿದ್ದು, ತನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅರ್ಹಳು ಎಂದು ಹೇಳಿದ್ದಾಳೆ. ಇದನ್ನೂ ಓದಿ:ಪ್ರಜಾಪ್ರಭುತ್ವ ಸರ್ಕಾರ ಇಲ್ಲ, ಷರಿಯಾ ಕಾನೂನುಗಳೇ ಜಾರಿ – ತಾಲಿಬಾನ್

  • ಈ ಜೀವನ ಬೇಡವೇ ಬೇಡ, ದಯಮಾಡಿ ನಮ್ಮನ್ನ ಸಾಯಲು ಬಿಡಿ – ಡೆತ್ ನೋಟ್ ಬರೆದಿಟ್ಟು ಕುಟುಂಬ ಮಿಸ್ಸಿಂಗ್

    ಈ ಜೀವನ ಬೇಡವೇ ಬೇಡ, ದಯಮಾಡಿ ನಮ್ಮನ್ನ ಸಾಯಲು ಬಿಡಿ – ಡೆತ್ ನೋಟ್ ಬರೆದಿಟ್ಟು ಕುಟುಂಬ ಮಿಸ್ಸಿಂಗ್

    ಬೆಂಗಳೂರು: ನಮಗೆ ಈ ಜೀವನವೇ ಬೇಡ, ದಯಮಾಡಿ ನಮ್ಮನ್ನು ಸಾಯಲು ಬಿಡಿ ಎಂದು ಡೆತ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆಯಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇಡೀ ಕುಟುಂಬಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಗಾಂಧಿ, ಶಾಲಿನಿ, ಭಾನುಶ್ರೀ, ಹೇಮಶ್ರೀ ನಾಪತ್ತೆಯಾದವರು. ಶಾಲಿನಿ ಸಹೋದರ ತುಮಕೂರಿನಲ್ಲಿರುವ ಚಿರಂಜೀವಿ ಪ್ರತಿನಿತ್ಯ ಸಹೋದರಿ ಜೊತೆ ಮಾತನಾಡುತ್ತಿದ್ದರು. ಆದರೆ ಆಗಸ್ಟ್ 12 ರಂದು ಮನೆಗೆ ಕರೆಮಾಡಿದಾಗ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಭಯಗೊಂಡ ಚಿರಂಜೀವಿ, ಕೂಡಲೇ ಅಕ್ಕನ ಮನೆ ಬಳಿ ಇದ್ದ ತನ್ನ ಸ್ನೇಹಿತನಿಗೆ ಮಾಹಿತಿ ತಿಳಿಸಿದ್ದಾರೆ.

    ಮನೆಗೆ ಹೋಗಿ ಚೆಕ್ ಮಾಡಲು ಹೇಳಿದ್ದಾರೆ. ಈ ವೇಳೆ ಮನೆ ಸಂಪೂರ್ಣ ಲಾಕ್ ಆಗಿದೆ. ಮನೆ ಮಾಲೀಕರನ್ನ ಕೇಳಿದಾಗ ಅವರು ಫ್ಯಾಮಿಲಿ ಸಮೇತ ಹೋಗಿದ್ದಾರೆ ಅಂದಿದ್ದಾರೆ. ಕೂಡಲೇ ಸ್ನೇಹಿತ ಈ ಮಾಹಿತಿಯನ್ನು ಚಿರಂಜೀವಿಗೆ ಮಾಹಿತಿ ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಶಾಕ್ ಆಗಿ ಚಿರಂಜೀವಿ ಬೆಂಗಳೂರಿಗೆ ಬಂದಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಸಿಕ್ಕ ಚೀಲದಲ್ಲಿ ಸಿಕ್ತು ನವಜಾತ ಶಿಶು

    ಅಲ್ಲದೆ ತನ್ನ ಬಳಿ ಇದ್ದ ಡೂಪ್ಲಿಕೇಟ್ ಕೀ ತೆರೆದು ನೋಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಈ ವೇಳೆ ಮನೆಯ ಕಿಟಿಕಿ ಬಳಿ ಕುಟುಂಬ ಸೂಸೈಡ್ ನೋಟ್ ಬರೆದಿಟ್ಟಿರುವುದು ಗೊತ್ತಾಗಿದೆ. ಅದರಲ್ಲಿ ‘ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ನಮಗೆ ಈ ಜೀವನ ಬೇಡವೇ ಬೇಡ. ದಯಮಾಡಿ ನಮ್ಮನ್ನ ಸಾಯಲು ಬಿಡಿ ಎಂದು ಬರೆಯಲಾಗಿತ್ತು.

    ಕೂಡಲೇ ಚಿರಂಜೀವಿ ಅವರು ಬಾಗಲಗುಂಟೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸದ್ಯ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದುವೆ ನಿಶ್ಚಯವಾಗಿದ್ದ ಯುವತಿ – ವಿವಾಹಿತ ಪ್ರೇಮಿಯೊಂದಿಗೆ ಆತ್ಮಹತ್ಯೆಗೆ ಶರಣು

    ಮದುವೆ ನಿಶ್ಚಯವಾಗಿದ್ದ ಯುವತಿ – ವಿವಾಹಿತ ಪ್ರೇಮಿಯೊಂದಿಗೆ ಆತ್ಮಹತ್ಯೆಗೆ ಶರಣು

    ಚಿತ್ರದುರ್ಗ: ಮದುವೆ ನಿಶ್ಚಯವಾಗಿದ್ದ ಯುವತಿ ತನ್ನ ಪ್ರಿಯಕರನೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದ ಬಳಿ ನಡೆದಿದೆ.

    ಕಳೆದ ಆರು ತಿಂಗಳ ಹಿಂದೆ ಹಿರಿಯೂರು ತಾಲೂಕಿನ ಉಡುವಳ್ಳಿ ಗ್ರಾಮಕ್ಕೆ ಪೈಂಟ್ ಕೆಲಸಕ್ಕಾಗಿ ಬಂದಿದ್ದ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಮೂಲದ ತಿಪ್ಪೇಸ್ವಾಮಿ ಎಂಬ ಆಸಾಮಿಯು, ಪುಷ್ಪಲತಾರನ್ನು ಪ್ರೇಮಿಸಿದ್ದನು. ಈ ತಿಪ್ಪೇಸ್ವಾಮಿಗೆ ಈಗಾಗಲೇ ವಿವಾಹವಾಗಿದ್ದು, ತನ್ನ ಪತ್ನಿಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಉಡುವಳ್ಳಿ ಗ್ರಾಮದ ಪುಷ್ಪಲತಾರನ್ನು ಪ್ರೇಮಿಸಿ, ಅದೇ ಗ್ರಾಮಕ್ಕೆ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದ.

    ಪುಷ್ಪಲತ ಹಾಗೂ ತಿಪ್ಪೇಸ್ವಾಮಿ ನಡುವಿನ ಪ್ರೀತಿ ಅಗಾಧವಾಗಿ ಬೆಳೆದಿದ್ದು, ಆಕೆಯನ್ನು ವಿವಾಹವಾಗುವುದಾಗಿ ಪುಷ್ಪಲತಳ ಮನೆಯಲ್ಲಿ ತಿಪ್ಪೇಸ್ವಾಮಿ ಕೇಳಿದ್ದನು. ಆದರೆ ಅವರ ಪ್ರೀತಿಗೆ ಪುಷ್ಪ ಅವರ ಕುಟುಂಬಸ್ಥರು ವಿರೋಧಿಸಿ, ಯುವತಿಯ ಸೋದರ ಮಾವನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಇದನ್ನೂ ಓದಿ:ಮನೆಗೆ ಬಂದ್ರೆ ಚೆನ್ನಾಗಿ ನೋಡಿಕೊಳ್ಳುತ್ತೇವೆ, ಬರದೆ ಇದ್ರೆ ನಮ್ಮಪ್ಪನ ಮನೆ ಗಂಟು ಏನೂ ಹೋಗಲ್ಲ: ರೇವಣ್ಣ

    ಇದರಿಂದಾಗಿ ಮನನೊಂದ ಪುಷ್ಪಲತ ಹಾಗೂ ತಿಪ್ಪೇಸ್ವಾಮಿ ಆಗಸ್ಟ್ 13 ರಂದು ಮನೆ ಬಿಟ್ಟು ತೆರಳಿದ್ದರು. ನಾಪತ್ತೆಯಾದ ಮಗಳ ಪತ್ತೆಗಾಗಿ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಆಕೆಯ ತಂದೆ ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿವ ಪತ್ತೆಗಾಗಿ ಕ್ರಮ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಇಂದು ಕೂನಿಕೆರೆ ಗ್ರಾಮ ಬಳಿಯ ಕಾಲುವೆ ಬಳಿ ಇವರಿಬ್ಬರ ಶವ ಪತ್ತೆಯಾಗಿವೆ.

    ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಮುಂದುವರೆಸಿದ್ದಾರೆ. ಯುವತಿಯನ್ನು ಓದಿಸಿ ಸರ್ಕಾರಿ ಕೆಲಸಕ್ಕೆ ಸೇರಿಸಬೇಕೆಂಬ ಕನಸು ಕಂಡಿದ್ದ ಆಕೆಯ ತಂದೆ ಕನಸು ನುಚ್ಚುನೂರಾಗಿದೆ. ಇನ್ನೂ ಶವಗಳು ಪತ್ತೆಯಾದ ಹಿನ್ನೆಲ್ಲೆಯಲ್ಲಿ ಸ್ಥಳಕ್ಕೆ ಗ್ರಾಮದ ಮಹಿಳೆಯರು ಹಾಗು ಗ್ರಾಮಸ್ಥರು ಜಮಾವಣೆಯಾಗಿದ್ದೂ, ಹಿರಿಯೂರು ತಾಲೂಕು ಆಸ್ಪತ್ರೆಗೆ ಎರಡು ಶವಗಳನ್ನು ರವಾನಿಸಿಸಲಾಗಿದೆ. ಅಲ್ಲಿಗೂ ಧಾವಿಸಿರುವ ಯುವತಿಯ ಸಂಬಂಧಿಗಳು ಈ ಯುವತಿಯ ಸಾವಿನ ಹಿಂದೆ ಕೊಲೆಯ ಸಂಚು ನಡೆದಿರಬಹುದು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂಬ ಆಗ್ರಹ ಕೇಳಿಬಂದಿದೆ.ಇದನ್ನೂ ಓದಿ:ನೆರೆ ಪೀಡಿತ ಸಂತ್ರಸ್ತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ: ಉಮೇಶ್ ಕತ್ತಿ

  • ಕ್ಷುಲ್ಲಕ ಕಾರಣಕ್ಕೆ ಕುಟುಂಬದ ಮೇಲೆ ಅಟ್ಯಾಕ್ ಮಾಡಿದ ಗ್ಯಾಂಗ್ ಸೆರೆ

    ಕ್ಷುಲ್ಲಕ ಕಾರಣಕ್ಕೆ ಕುಟುಂಬದ ಮೇಲೆ ಅಟ್ಯಾಕ್ ಮಾಡಿದ ಗ್ಯಾಂಗ್ ಸೆರೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹದ್ದು ಮೀರುತ್ತಿದೆ ಪುಡಾರಿಗಳ ಹಾವಳಿ. ದಿನ ಕಳೆದಂತೆ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಮದುವೆ ಮುಗಿಸಿ ಮನೆಗೆ ಬರುತ್ತಿದ್ದ ಕುಟುಂಬದ ಮೇಲೆ ಅಪರಿಚಿತರ ಗ್ಯಾಂಗ್ ಅಟ್ಯಾಕ್ ಮಾಡಿರುವ ಘಟನೆ ಕೆಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್ ಬಳಿ ನಡೆದಿತ್ತು. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೆಂಗಳೂರಿನಲ್ಲಿ ಇತ್ತೀಚಿಗೆ ಹೊಡಿ ಬಡಿ ಪ್ರವೃತ್ತಿ ಅತಿಯಾಗುತ್ತಿದೆ. ಸಾರ್ವಜನಿಕರು ತಡರಾತ್ರಿ ಓಡಾಡುವುದಕ್ಕೆ ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಯ್ಯದ್ ನೌಶದ್ ಎಂಬವರು ಅಕ್ಕನ ಮಗಳ ಮದುವೆ ಮುಗಿಸಿಕೊಂಡು ಕೆಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್ ನಲ್ಲಿರುವ ಮನೆಗೆ ಕುಟುಂಬದೊಂದಿಗೆ ಬರುತ್ತಿರುವಾಗ ನಾಲ್ಕೈದು ಮಂದಿಯ ಗ್ಯಾಂಗ್ ಮರದ ದೊಣ್ಣೆಯಿಂದ ಹಲ್ಲೆ ಮಾಡಿ ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾಗಿತ್ತು. ಇದನ್ನೂ ಓದಿ: ಸುಪ್ರೀಂಕೋರ್ಟ್ ಮುಂಭಾಗದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಇಬ್ಬರು

    ಕಾರು ಇಳಿಯೋಕು ಬಿಡದೆ ಕಾರು ತಡೆದು ಮನಸ್ಸೋ ಇಚ್ಛೆ ಥಳಿಸಿದ ಅಪರಿಚಿತರ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಆರೋಪಿಗಳ ಪ್ರಾಥಮಿಕ ತನಿಖೆ ವೇಳೆ ಮಳೆ ಬರುತ್ತಿರುವಾಗ ಮಳೆ ನೀರು ನಮ್ಮ ಮೇಲೆ ಚೆಲ್ಲಿದ್ದಕ್ಕೆ ಹಲ್ಲೆ ಮಾಡಿದ್ದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮನೆಯಲ್ಲೇ ತಾಳಿ ಕಟ್ಟಿ ಸಹ ನಟಿ ಜೊತೆ ಮದುವೆ ನಾಟಕ, ಒಡವೆ ಎಗರಿಸಿ ಎಸ್ಕೇಪ್

  • ಬಹಿರ್ದೆಸೆ ಹೋದಾಗ ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ- ಕುಟುಂಬದಲ್ಲಿ ನಿಲ್ಲದ ಬಯಲು ಮಲವಿಸರ್ಜನೆ

    ಬಹಿರ್ದೆಸೆ ಹೋದಾಗ ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ- ಕುಟುಂಬದಲ್ಲಿ ನಿಲ್ಲದ ಬಯಲು ಮಲವಿಸರ್ಜನೆ

    ಚಿತ್ರದುರ್ಗ: ಬಹಿರ್ದೆಸೆಗೆ ತೆರಳಿದ್ದ ವೇಳೆ 13 ವರ್ಷದ ಅಪ್ರಾಪ್ತೆ ಮೇಲೆ ಕಿಡಿಗೇಡಿಗಳು ಜುಲೈ 23 ರಂದು ಅತ್ಯಾಚಾರವೆಸಗಿ, ಕೊಲೆ ಮಾಡಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ಕುಟುಂಬಸ್ಥರು, ಶೌಚಾಲಯ ನಿರ್ಮಿಸಿಕೊಳ್ಳದೆ, ಇನ್ನೂ ಬಹಿರ್ದೆಸೆಗೆ ತೆರಳುತ್ತಿದ್ದಾರೆ.

    ಅಪ್ರಾಪ್ತೆ ಮೇಲೆ ನಡೆದ ದುಶ್ಕ್ರತ್ಯದ ಬೆನ್ನತ್ತಿದ ಚಿತ್ರದುರ್ಗ ಪೊಲೀಸರು, ಪ್ರಕರಣ ನಡೆದು ಕೇವಲ 14 ದಿನಗಳಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆದರೆ ಈ ಕುಟುಂಬಕ್ಕೆ ಸಾಂತ್ವಾನಹೇಳುವ ನೆಪದಲ್ಲಿ ನಿತ್ಯವೂ ರಾಜಕಾರಣಿಗಳು, ಅಧಿಕಾರಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೆ ಸಚಿವ ಶ್ರೀರಾಮುಲು ಸಂತ್ರಸ್ತೆಯ ತಂದೆ, ತಾಯಿಯನ್ನು ಭೇಟಿಯಾಗಿ ಎರಡು ಲಕ್ಷ ರೂಪಾಯಿ ವೈಯಕ್ತಿಕ ಪರಿಹಾರ ನೀಡಿ ಸಾಂತ್ವಾನ ಹೇಳಿದ್ದಾರೆ.

    ಬಾಲಕಿಯ ಕುಟುಂಬಸ್ಥರು ಆಶ್ರಯ ಯೋಜನೆಯಡಿ ನೂತನ ಮನೆ ನಿರ್ಮಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ಶೌಚಾಲಯವನ್ನೂ ಕಟ್ಟಿಸಿಕೊಂಡಿದ್ದಾರೆ. ಆದರೆ ಮಗಳನ್ನು ಕಳೆದುಕೊಂಡ ನೋವಿನಲ್ಲಿರುವ ಕುಟುಂಬ ನೂತನ ಮನೆಯನ್ನು ಉದ್ಘಾಟಿಸಿಲ್ಲ. ಹೀಗಾಗಿ ಇಂತಹ ಅಮಾನವೀಯ ಕೃತ್ಯ ನಡೆದರೂ ಸಂತ್ರಸ್ತೆಯ ಕುಟುಂಬದವರು ಬಯಲು ಶೌಚಕ್ಕೆ ತೆರಳುತ್ತಿದ್ದಾರೆ.

    ಸರ್ಕಾರದಿಂದ ಹಳ್ಳಿಗಳಲ್ಲಿ ಬಯಲು ಶೌಚಾಲಯ ಮುಕ್ತವಾಗಿಸಲು ಗ್ರಾಮ ಪಂಚಾಯಿತಿಯಿಂದಲೇ ಶೌಚಾಲಯ ನಿರ್ಮಿಸುವ ಯೋಜನೆಯಿದ್ದರೂ ಈ ಗ್ರಾಮದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿಲ್ಲ. ಶೌಚಾಲಯ ನಿರ್ಮಿಸುವ ಯೋಜನೆಯ 12,000ರೂ. ಹಣವೂ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಇತರೆ ಅಧಿಕಾರಿಗಳ ಜೇಬು ಸೇರುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ. ಈ ಬಗ್ಗೆ ಗ್ರಾಮಪಂಚಾಯಿತಿ ಪಿಡಿಒ ವೀರೇಶ್ ಅವರನ್ನು ಕೇಳಿದರೆ, ಅವರೇ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೆ ಇನ್ನೂ ಬಳಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಘಟನೆಯಿಂದ ಮನನೊಂದಿರುವ ಸಂತ್ರಸ್ತೆಯ ಕುಟುಂಬಸ್ಥರು ಸಹ ಆರೋಪಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಕುಟುಂಬಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳಾದ ನೀರು, ಶೌಚಾಲಯದ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ.