Tag: family

  • ಭೀಮಾತೀರದಲ್ಲಿ ಮರ್ಯಾದಾ ಹತ್ಯೆ – ಪ್ರೇಯಸಿಯ ಕಣ್ಣೆದುರೇ ಪ್ರಿಯಕರನ ಹತ್ಯೆ

    ಭೀಮಾತೀರದಲ್ಲಿ ಮರ್ಯಾದಾ ಹತ್ಯೆ – ಪ್ರೇಯಸಿಯ ಕಣ್ಣೆದುರೇ ಪ್ರಿಯಕರನ ಹತ್ಯೆ

    ವಿಜಯಪುರ: ವಿಜಯಪುರದ ಭೀಮಾತೀರದಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಪ್ರೇಯಸಿಯ ಕಣ್ಣೆದುರೇ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

     Vijayapura

    ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರೇಯಸಿಯ ಕಣ್ಣೆದುರೇ 32 ವರ್ಷದ ಪ್ರಿಯಕರ ರವಿ ನಿಂಬರಗಿಯನ್ನು ಭೀಕರವಾಗಿ ಹತ್ಯೆಗೈದು ಶವವನ್ನೂ ಬಿಡದೇ ದುರುಳರು ಕೊಂಡೊಯ್ದಿದ್ದಾರೆ.

     Vijayapura

    ಕಳೆದ ಮೂರ್ನಾಲ್ಕು ವರ್ಷದಿಂದ ಅನ್ಯಕೋಮಿನ ಯುವತಿ ಅಮೀನಾ ಬೇಗಂನ್ನು ಪ್ರೀತಿಸುತ್ತಿದ್ದ ರವಿಯನ್ನು ಹತ್ಯೆಗೈಯಲು ಹುಡುಗಿ ಮನೆಯವರು ಪ್ಲಾನ್ ಮಾಡಿದರು. ರವಿ ಬಳಗಾನೂರನಿಂದ ಸಂತೆ ಮಾಡಿಕೊಂಡು ಬರುವ ವೇಳೆ ಬರೋಬ್ಬರಿ ೮ ಮಂದಿ ಪ್ರಹಾರ ಮಾಡಿ ಕೊಲೆಗೈದು ಶವವನ್ನು ಬಿಡದೇ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಆರೋಗ್ಯಕರವಾದ ಮಸಾಲಾ ಟೀ ಒಮ್ಮೆ ಮಾಡಿ ನೋಡಿ

    ಇನ್ನೂ ವಿಷಯ ತಿಳಿಯುತ್ತಿದಂತೆ ಯುವಕನ ಮನೆಗೆ ಓಡೋಡಿ ಬಂದು ಯುವತಿ ವಿಷಯ ಮುಟ್ಟಿಸಿದ್ದಾರೆ. ಇದೀಗ ಈ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಮರ್ಯಾದಾ ಹತ್ಯೆ –  ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

    ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ತನ್ನ ಇಚ್ಛೆಯ ವಿರುದ್ಧವಾಗಿ ಮಗಳು ಮದುವೆಯಾಗಿದಕ್ಕೆ ಇಬ್ಬರು ಹೆಣ್ಣುಮಕ್ಕಳು ಮತ್ತು ನಾಲ್ಕು ಮೊಮ್ಮಕ್ಕಳನ್ನು ಸೇರಿಸಿದಂತೆ ಕುಟುಂಬದ 7 ಮಂದಿಯನ್ನು ವ್ಯಕ್ತಿಯೋರ್ವ ಜೀವಂತವಾಗಿ ಸುಟ್ಟು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಜಫರ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮನ್ಜೂರ್ ಹುಸೇನ್ ಎಂದು ಗುರುತಿಸಲಾಗಿದೆ. ಮನ್ಜೂರ್ ಹುಸೇನ್ ಮನೆಗೆ ಬೆಂಕಿ ಹಚ್ಚಿದ್ದು, ಈ ವೇಳೆ ಮನೆಯಲ್ಲಿದ್ದ ಇಬ್ಬರು ಪುತ್ರಿಯರಾದ ಫೌಝಿಯಾ ಬೀಬಿ ಮತ್ತು ಖುರ್ಷಿದ್ ಮಾಯ್, ಆತನ ಪತ್ನಿ, ಮಗ, ತಾಯಿ, ತಂದೆ ಸೇರಿಸಿದಂತೆ ನಾಲ್ವರು ಅಪ್ರಾಪ್ತ ಮಕ್ಕಳು ಬೆಂಕಿಯಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅನ್ಯಧರ್ಮದ ಯುವಕನ ಜೊತೆ ಕಾಣಿಸಿಕೊಂಡಿದ್ದಕ್ಕೆ ಯುವತಿಗೆ ಥಳಿತ

    ಘಟನೆಯಿಂದ ಬಚಾವ್ ಆಗಿರುವ ಫೌಝಿಯಾ ಬೀಬಿ ಪತಿ ಮೊಹಬೂಬ್ ಅಹ್ಮದ್ ಈ ಕುರಿತಂತೆ ಮಾವ ಮನ್ಜೂರ್ ಹುಸೇನ್ ಮತ್ತು ಆತನ ಪುತ್ರ ಸಬೀರ್ ಹುಸೇನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ವ್ಯಾಪಾರಕ್ಕೆಂದು ಮುಲ್ತಾನ್‍ನಲ್ಲಿದ್ದೆ. ಆದರೆ ನಾನು ಹಿಂದಿರುಗಿ ಮನೆಯ ಬಳಿ ಬಂದಾಗ ಬೆಂಕಿಯಿಂದ ಮನೆ ಹೊತ್ತಿ ಉರಿಸುತ್ತಿರುವುದನ್ನು ನೋಡಿದೆ ಮತ್ತು ಮನ್ಜೂರ್ ಹುಸೇನ್, ಸಬೀರ್ ಹುಸೇನ್ ಇಬ್ಬರು ಹೋಗುತ್ತಿರುವುದನ್ನು ಕಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ನೂತನ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆ ಕಲಿಕೆಗೆ ಆದ್ಯತೆ: ಗೆಹ್ಲೋಟ್

    ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ಪ್ರೇಮವಿವಾಹ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಜಗಳ ನಡೆದಿದ್ದು, ನಂತರ ಈ ಘಟನೆ ಜರುಗಿದೆ. ಮೆಹಬೂಬ್ ಅಹ್ಮದ್ ಮತ್ತು ಬೀಬಿ 2020ರಲ್ಲಿ ವಿವಾಹವಾಗಿದ್ದರು. ಇದು ಅಂತರ್ ಜಾತಿ ವಿವಾಹವಾಗಿದ್ದರಿಂದ ಮನ್ಜೂರ್ ಕೋಪಕ್ಕೆ ಕಾರಣವಾಗಿತ್ತು ಎಂದು ಪೊಲೀಸ್ ಅಧಿಕಾರಿ ಅಬ್ದುಲ್ ಮಜೀದ್ ಹೇಳಿದ್ದಾರೆ.

  • ವೈನ್ ಸ್ಟೋರ್ ಫ್ಯಾಮಿಲಿಯನ್ನು ಭೇಟಿಯಾದ ವೈಷ್ಣವಿ

    ವೈನ್ ಸ್ಟೋರ್ ಫ್ಯಾಮಿಲಿಯನ್ನು ಭೇಟಿಯಾದ ವೈಷ್ಣವಿ

    ಬೆಂಗಳೂರು: ಬಿಗ್‍ಬಾಸ್ ಕಾರ್ಯಕ್ರಮದ ನಂತರ ಇದೇ ಮೊದಲ ಬಾರಿಗೆ ವೈಷ್ಣವಿ ಗೌಡ, ರಘು ಫ್ಯಾಮಿಲಿಯನ್ನು ಮೀಟ್ ಮಾಡಿದ್ದಾರೆ.

    ಬಿಗ್‍ಬಾಸ್ ಸೀಸನ್-8ರ ಬೆಸ್ಟ್ ಫ್ರೆಂಡ್ಸ್ ಅಂದರೆ ಅದು ರಘು ಹಾಗೂ ವೈಷ್ಣವಿ. ಬಿಗ್‍ಬಾಸ್ ಕಾರ್ಯಕ್ರಮದ ಆರಂಭದಿಂದಲೂ ಅಂತ್ಯದವರೆಗೂ ದೊಡ್ಮನೆಯಲ್ಲಿ ಎಲ್ಲರ ನಡುವೆ ಇವರ ಸ್ನೇಹ ಪ್ರೇಕ್ಷಕರ ಹೃದಯ ಗೆದ್ದಿತ್ತು. ಇಬ್ಬರ ನಡುವೆ ಕೆಲವೊಂದಷ್ಟು ಜಗಳ, ಮನಸ್ತಾಪ ಬಂದರೂ ಒಬ್ಬರಿಗೊಬ್ಬರು ಬಿಟ್ಟು ಕೊಡದೇ ಅದನ್ನು ಚರ್ಚಿಸಿ ಹೊಂದಾಣಿಕೆಯಿಂದ ಆಟ ಆಡುತ್ತಿದ್ದ ಇವರಿಬ್ಬರ ಕಾಂಬಿನೇಷನ್ ನೋಡಿ ಅಭಿಮಾನಿಗಳು ನಿಜವಾದ ಫ್ರೆಂಡ್ಸ್ ಅಂದರೆ ಇವರಂತೆ ಇರಬೇಕು ಎಂದು ಮಾತನಾಡಿಕೊಂಡಿದ್ದು ಇದೆ. ಇದನ್ನೂ ಓದಿ: ಕೆಪಿಎಸ್‌ಸಿಯನ್ನು ಹಾಳು ಮಾಡಿದ್ದು ಬಿಜೆಪಿ, ಕಾಂಗ್ರೆಸ್‌ : ಜೆಡಿಎಸ್‌ ತಿರುಗೇಟು

    ರಘು ತಮ್ಮ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾಗ ವೈಷ್ಣವಿ ಸಮಾಧಾನ ಹೇಳಿ ಅವರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಅಲ್ಲದೇ ದೊಡ್ಮನೆಯಲ್ಲಿ ಯಾವುದೇ ಟಾಸ್ಕ್ ಬಂದಗಲೂ ರಘು ವೈಷ್ಣವಿಗೆ, ವೈಷ್ಣವಿ ರಘುಗೆ ಪ್ರೋತ್ಸಾಹ ನೀಡುತ್ತಾ ಆಟ ಆಡುತ್ತಿದ್ದರು. ಆದರೆ ಬಿಗ್‍ಬಾಸ್ ಕಾರ್ಯಕ್ರಮದ ನಂತರ ರಘು, ವೈಷ್ಣ ವಿಎಲ್ಲೂ ಅಷ್ಟಾಗಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಹೆಸರುಬೇಳೆ ಪಾಯಸ ಮಾಡುವ ಸರಳ ವಿಧಾನ ನಿಮಗಾಗಿ

     

    View this post on Instagram

     

    A post shared by Vaishnavi (@iamvaishnavioffl)

    ಇದೀಗ ಹಲವು ದಿನಗಳ ಬಳಿಕ ದಸರಾ ಹಬ್ಬದ ಹಿನ್ನೆಲೆ ರಘು ಹಾಗೂ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಈ ಕುರಿತಂತೆ ವೈಷ್ಣವಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ರಘು ಅವರ ಮಗನನ್ನು ಎತ್ತಿಕೊಂಡಿದ್ದು, ರಘು, ಪತ್ನಿ ವಿದ್ಯಾಶ್ರೀ ಹಾಗೂ ವೈಷ್ಣವಿ ನಗುತ್ತಾ ಫೋಟೋಗೆ ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ಜೊತೆಗೆ ವೈನ್ ಸ್ಟೋರ್ ಫ್ಯಾಮಿಲಿ ಜೊತೆಗೆ ದಸರಾ ವಿಶೇಷ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

  • ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ

    ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ

    ಬೆಂಗಳೂರು: ಕೋವಿಡ್-19 ವೈರಾಣು ಸೋಂಕಿನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೃತಪಟ್ಟ ವ್ಯಕ್ತಿಗಳವಾರಸುದಾರರ ಕುಟುಂಬಗಳು ಕಾನೂನುಬದ್ಧ ಪರಿಹಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!

    ರಾಜ್ಯ ಸರ್ಕಾರವು ಸಂಧ್ಯಾ ಸುರಕ್ಷಾ ಯೋಜನೆಯಡಿ ಕೋವಿಡ್ ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿನ(ಬಿಪಿಎಲ್) ಕುಟುಂಬದ ಒಬ್ಬ ಕಾನೂನು ಬದ್ಧ ವಾರಸುದಾರರಿಗೆ ರೂ. 1.00 ಲಕ್ಷಗಳ ಪರಿಹಾರ ಹಾಗೂ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‍ಡಿಆರ್‍ಎಫ್)ಯಡಿ ರೂ. 50,000ಗಳನ್ನು ನೇರ ನಗದು ವರ್ಗಾವಣೆ ವ್ಯವಸ್ಥೆ (ಡಿಬಿಟಿ) ಮೂಲಕ ಪಾವತಿಸಲಾಗುವುದು. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಪ್ರಕರಣ ಏರಿಳಿತ – ಇಂದು 214 ಕೇಸ್, 12 ಸಾವು

    ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಕಚೇರಿಗಳಲ್ಲಿ ಕಾನೂನುಬದ್ಧ ವಾರಸುದಾರರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು. ಅರ್ಜಿದಾರರು ನಿಗದಿಪಡಿಸಿದ ನಮೂನೆ-1(ಫಾರಂ-1)ರಲ್ಲಿ ಮೃತ ವ್ಯಕ್ತಿ ಮತ್ತು ಅರ್ಜಿದಾರರ ವಿವರಗಳು ಹಾಗೂ ದಾಖಲೆಗಳನ್ನು ನೀಡಬೇಕು.

    ದಾಖಲೆಗಳು:
    – ಕೋವಿಡ್-19 ಪಾಸಿಟಿವ್ ವರದಿ ಮತ್ತು ಕೋವಿಡ್ ರೋಗಿ ಸಂಖ್ಯೆ(ಬಿ.ಯು. ಸಂಖ್ಯೆ)
    – ಮರಣ ಪ್ರಮಾಣ ಪತ್ರ ಅಥವಾ ಮರಣ ಕಾರಣ ಪ್ರಮಾಣ ಪತ್ರ (ಫಾರಂ-4/4ಎ),
    – ಮೃತ ವ್ಯಕ್ತಿಯ ಆಧಾರ್ ಪ್ರತಿ ಅಥವಾ ಇತರೆ ಗುರುತಿನ ಪತ್ರಗಳು,
    – ಮೃತ ವ್ಯಕ್ತಿಯ ಬಿಪಿಎಲ್ ಪಡಿತರ ಚೀಟಿ(ರಾಜ್ಯ ಸರ್ಕಾರದ ಪರಿಹಾರ ಮೊತ್ತಕ್ಕಾಗಿ),
    – ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ, ಅರ್ಜಿದಾರರ ಬಿಪಿಎಲ್ ಪಡಿತರ ಚೀಟಿ(ರಾಜ್ಯ ಸರ್ಕಾರದ ಪರಿಹಾರ ಮೊತ್ತಕ್ಕಾಗಿ),
    – ಬ್ಯಾಂಕ್ / ಅಂಚೆ ಖಾತೆ ಪುಸ್ತಕ ಪ್ರತಿ, ಅರ್ಜಿದಾರರ ಸ್ವಯಂ ಘೋಷಣಾ ಪತ್ರ (ಫಾರಂ-2)


    – ಮೃತ ವ್ಯಕ್ತಿಯ ಪತಿ/ ಪತ್ನಿಯನ್ನು ಹೊರತುಪಡಿಸಿ, ಕುಟುಂಬದ ಇತರೆ ಸದಸ್ಯರು ಅರ್ಜಿ ಸಲ್ಲಿಸಿದ್ದಲ್ಲಿ ಮಾತ್ರ ಕುಟುಂಬದ ಉಳಿದ ಸದಸ್ಯರಿಂದ ನಿರಾಕ್ಷೇಪಣಾ ಪತ್ರ(ಫಾರಂ-3) ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಮುದ್ದೆಯಲ್ಲಿ ವಿಷ ಹಾಕಿದ ಬಾಲಕಿ – ತಂದೆ, ತಾಯಿ ಸೇರಿ ನಾಲ್ವರ ಹತ್ಯೆ

    ಮುದ್ದೆಯಲ್ಲಿ ವಿಷ ಹಾಕಿದ ಬಾಲಕಿ – ತಂದೆ, ತಾಯಿ ಸೇರಿ ನಾಲ್ವರ ಹತ್ಯೆ

    ಚಿತ್ರದುರ್ಗ: 17 ವರ್ಷದ ಬಾಲಕಿಯೊಬ್ಬಳು ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದು ಇಡೀ ಕುಟುಂಬಕ್ಕೆ ಮುದ್ದೆಯಲ್ಲಿ ವಿಷ ಬೆರೆಸಿ ಹತ್ಯೆಗೈದಿರುವ ಆಘಾತಕಾರಿ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.

    Chitradurga Girl

    ಜಿಲ್ಲೆಯ ಇಸಾಮುದ್ರ ಗ್ರಾಮದಲ್ಲಿ ಜುಲೈ 12 ರಂದು ಈ ಘಟನೆ ನಡೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿ ಮೂಲಕ ಮುದ್ದೆಯಲ್ಲಿ ವಿಷ ಬೆರಸಿರುವ ಸತ್ಯ ಬಯಲಾಗಿದೆ. ಇದನ್ನೂ ಓದಿ:  ಮಹಾಮಳೆಯ ಭೂಕುಸಿತಕ್ಕೆ ತತ್ತರಿಸಿದ ದೇವರ ನಾಡು – ಅವಶೇಷಗಳಡಿ 26 ಶವ ಪತ್ತೆ

    Chitradurga Girl

    ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದ ಬಾಲಕಿ, ಹೆತ್ತವರು, ಒಡಹುಟ್ಟಿದವರಿಗೆ ಮುದ್ದೆಯಲ್ಲಿ ಕ್ರಿಮಿನಾಶಕ ಬೆರೆಸಿಕೊಂದಿದ್ದಾಳೆ. ರಾತ್ರಿ ಮುದ್ದೆ ಹಾಗೂ ಹೆಸರುಕಾಳು ಸಾಂಬರ್ ಸೇವಿಸಿದ ತಂದೆ ತಿಪ್ಪಾನಾಯ್ಕ್(46), ತಾಯಿ ಸುಧಾಬಾಯಿ(43), ಸಹೋದರಿ ರಮ್ಯ(16),  ವೃದ್ಧೆ ಗುಂಡಿಬಾಯಿ(75) ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಒಂದೇ ಕೈಯಲ್ಲಿ ರಾಧಾ ಯಾದವ್ ಸ್ಟನ್ನಿಂಗ್ ಕ್ಯಾಚ್

    ಮತ್ತೋರ್ವ ಪುತ್ರ ರಾಹುಲ್(18) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಬಾಲಕಿ ಮಾತ್ರ ಸುರಕ್ಷಿತವಾಗಿದ್ದಾಳೆ. ಹೊಟ್ಟೆ ನೋವಿನ ಕಾರಣ ಅನ್ನ, ಸಾರು ಮಾತ್ರ ಸೇವಿಸಿರುವುದಾಗಿ ಬಾಲಕಿ ತಿಳಿಸಿದ್ದರಿಂದ ಅನುಮಾನಗೊಂಡ ಪೊಲೀಸರು ಈ ಕುರಿತಂತೆ ವಿಚಾರಣೆ ನಡೆಸಿದಾಗ, ಬಾಲಕಿಯೇ ವಿಷಬೆರೆಸಿ ನಾಲ್ವರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಹೀಗಾಗಿ ಬಾಲಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಭರಮಸಾಗರ ಪೊಲೀಸರು ತಿಳಿಸಿದ್ದಾರೆ.

  • ಮನೆಯವರ ಒತ್ತಾಯಕ್ಕೆ ಮದುವೆ- 10ನೇ ದಿನಕ್ಕೆ ಗರ್ಭಿಣಿ, ಪತಿಗೆ ಶಾಕ್‌!

    ಮನೆಯವರ ಒತ್ತಾಯಕ್ಕೆ ಮದುವೆ- 10ನೇ ದಿನಕ್ಕೆ ಗರ್ಭಿಣಿ, ಪತಿಗೆ ಶಾಕ್‌!

    ಲಕ್ನೋ: ಮದುವೆಯಾದ 10ನೇ ದಿನ ನವವಿವಾಹಿತೆ 8 ತಿಂಗಳ ಗರ್ಭಿಣಿ ಆಗಿದ್ದಾಳೆ ಎಂದು ವೈದ್ಯರು ಹೇಳಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ನವವಿವಾಹಿತ ಯುವತಿ ಮದುವೆಯಾಗಿ 10 ದಿನಕ್ಕೆ ವಿಪರೀತ ಹೊಟ್ಟೆ ನೋವು ಎಂದಳು, ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆಗ ವೈದ್ಯರು ಪರೀಕ್ಷೆ ನಡೆಸಿದಾಗ ಯುವತಿ 8 ತಿಂಗಳ ಗರ್ಭಿಣಿ ಎಂದು ತಿಳಿದಿದೆ. ವಿಷಯ ತಿಳಿದ ಪತಿ ಮತ್ತು ಮನೆಯವರಿಗೆ ಶಾಕ್ ಆಗಿದೆ. ಇದನ್ನೂ ಓದಿ:  RSS ಒಂದು ಕೋಮುವಾದಿ ಸಂಘಟನೆ- ಸಿದ್ದರಾಮಯ್ಯ

    ಮದುವೆಗೂ ಮುಂಚೆಯೇ ಇವರಿಬ್ಬರೂ ಒಟ್ಟಿಗಿದ್ದರು, ಆದ್ದರಿಂದಲೇ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಮಾತನಾಡಿದ್ದಾರೆ. ಅದಕ್ಕೆ ಉತ್ತರಿಸಿದ ಪತಿ, ತಾನು ಆಕೆಯೊಂದಿಗೆ ಮದುವೆಗೆ ಮುನ್ನ ಯಾವುದೇ ದೈಹಿಕ ಸಂಪರ್ಕ ಹೊಂದಿರಲಿಲ್ಲ. ಈ ಗರ್ಭಕ್ಕೂ ತನಗೂ ಸಂಬಂಧವಿಲ್ಲ ಎಂದಿದ್ದಾನೆ. ಮನೆಯವರ ಒತ್ತಾಯಕ್ಕೆ ಈ ಹುಡುಗಿ ಮದುವೆಗೆ  ಆಗಿದ್ದಾಳೆ ಎನ್ನುವುದು ನಂತರ ತಿಳಿದು ಬಂದಿದೆ. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ

    ಯುವತಿಗೆ ತನ್ನ ಪ್ರಿಯಕರನನ್ನೇ ಮದುವೆಯಾಗಲು ಮನಸ್ಸಿತ್ತಂತೆ. ಆದರೆ ಮನೆಯವರು ಅದಕ್ಕೆ ಒಪ್ಪಿರಲಿಲ್ಲ. ಪ್ರೀತಿಸಿದವನನ್ನು ಮದುವೆಯಾಗಲು ಬಿಡದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿ ಬೆದರಿಸಿದ್ದಳಂತೆ. ಈ ಎಲ್ಲಾ ವಿಚಾರಗಳನ್ನು ನೆರೆಹೊರೆಯವರು ಈಗ ಹೇಳುತ್ತಿದ್ದಾರೆ.

  • ಲಖೀಂಪುರ್ ಖೇರಿ ಹಿಂಸಾಚಾರ – ಮೃತ ರೈತರ ಕುಟುಂಬಸ್ಥರನ್ನು ಬಿಗಿದಪ್ಪಿ ರಾಹುಲ್, ಪ್ರಿಯಾಂಕಾ ಸಾಂತ್ವನ

    ಲಖೀಂಪುರ್ ಖೇರಿ ಹಿಂಸಾಚಾರ – ಮೃತ ರೈತರ ಕುಟುಂಬಸ್ಥರನ್ನು ಬಿಗಿದಪ್ಪಿ ರಾಹುಲ್, ಪ್ರಿಯಾಂಕಾ ಸಾಂತ್ವನ

    ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರ ಕುಟುಂಬದವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಲಖೀಂಪುರ್ ಖೇರಿಗೆ ತಲುಪಿ ಭೇಟಿ ನೀಡಿ ಬುಧವಾರ ಸಾಂತ್ವನ ಹೇಳಿದ್ದಾರೆ.

    Rahul Gandhi

    ಇತ್ತೀಚೆಗಷ್ಟೇ ಪ್ರಿಯಾಂಕಾ ಗಾಂಧಿ ಅವರು ಲಖಿಂಪುರ್ ಖೇರಿಗೆ ಭೇಟಿ ನೀಡುವ ವೇಳೆ ತಡೆದು ಪೊಲೀಸರು ಬಂಧಿಸಿದ್ದರು. ಇದೀಗ ಅವರು ಬಿಡುಗಡೆಗೊಂಡಿದ್ದು, ಸಹೋದರ ರಾಹುಲ್ ಗಾಂಧಿ ಜೊತೆ ಲಖೀಂಪುರ್ ಖೇರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ.  ಇದನ್ನೂ ಓದಿ: ರೈತರ ಮೇಲೆ ಜೀಪ್ ಹತ್ತಿಸಿದ ಮತ್ತೊಂದು ವೀಡಿಯೋ ಲಭ್ಯ – ಇಂದು ಸುಪ್ರೀಂನಲ್ಲಿ ವಿಚಾರಣೆ

    Rahul Gandhi

    ಮೊದಲಿಗೆ ಇಬ್ಬರು ಪಾಲಿಯಾಗೆ ತಲುಪಿ ಲವ್‍ಪ್ರೀತ್ ಸಿಂಗ್ ಕುಟುಂಬವನ್ನು ಭೇಟಿ ಮಾಡಿದರು. ಈ ವೇಳೆ ಪ್ರಿಯಾಂಕಾ ಹಾಗೂ ರಾಹುಲ್, ಲವ್‍ಪ್ರೀತ್ ಸಿಂಗ್ ಅವರ ಕುಟುಂಬದವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ. ಇನ್ನೂ ಈ ಫೋಟೋವನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ: ರಾಷ್ಟ್ರೀಯ ಏಕತಾ ದಿನ- ಮಂಗಳೂರಿಗೆ ಆಗಮಿಸಿದ ಸೈಕಲ್ ರ್‍ಯಾಲಿ

    ನಂತರ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಘಟನೆಯಲ್ಲಿ ಮೃತಪಟ್ಟ ಪತ್ರಕರ್ತರಾದ ರಾಮನ್ ಕಶ್ಯಪ್ ಅವರ ನಿಘಾಸನ್ ಅವರ ತಹಸಿಲ್‍ನಲ್ಲಿರುವ ಮನೆಗೆ ಭೇಟಿ ನೀಡಿದರು. ಕೊನೆಗೆ ಧೌರಾಹಾ ತಹಸಿಲ್‍ನಲ್ಲಿರುವ ನಚತಾರ್ ಸಿಂಗ್ ಅವರ ಮನೆಗೆ ತಲುಪಿದರು. ಅಲ್ಲದೇ ಕಾಂಗ್ರೆಸ್ ನಾಯಕರಾದ ಸಚಿನ್ ಪೈಲಟ್ ಮತ್ತು ಆಚಾರ್ಯ ಪ್ರಮೋದ್ ಅವರು ಕೂಡ ಲಖೀಂಪುರ್ ಖೇರಿಯಲ್ಲಿರುವ ಮೃತಪಟ್ಟ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳುತ್ತಿದ್ದ ವೇಳೆ ಮೊರಾದಾಬಾದ್‍ನಲ್ಲಿ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಭಾನುವಾರ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಕೃತ್ಯ ನಡೆದಿದ್ದು, 8 ಜನ ಮೃತಪಟ್ಟಿದ್ದಾರೆ. ಸತ್ತವರಲ್ಲಿ ನಾಲ್ವರು ರೈತರಾಗಿದ್ದಾರೆ. ಇನ್ನೂ ಈ ಕೃತ್ಯ ಖಂಡಿಸಿ ರೈತರು ಬಿಜೆಪಿ ಕಾರ್ಯಕರ್ತರು ಕಾರು ಚಲಾಯಿಸಿದ್ದ ಕಾರಿನ್ನು ಹೊಡೆದುರುಳಿಸಿ ಬೆಂಕಿ ಹಚ್ಚಿದ್ದರು.  ಇದನ್ನೂ ಓದಿ: ಹೈದರಾಬಾದ್‌ಗೆ ರೋಚಕ 4 ರನ್‌ ಜಯ – ಕೊನೆಯಲ್ಲಿ ಪಂದ್ಯ ಕೈ ಚೆಲ್ಲಿದ ಆರ್‌ಸಿಬಿ

  • ಪ್ರೀತಿಸಿ ಮದುವೆಯಾದ ಯುವಕನ ಮೇಲೆ ಹಲ್ಲೆ

    ಪ್ರೀತಿಸಿ ಮದುವೆಯಾದ ಯುವಕನ ಮೇಲೆ ಹಲ್ಲೆ

    ತುಮಕೂರು: ಪ್ರೀತಿಸಿ ಮದುವೆಯಾಗಿದ್ದ ಎಂಬ ಕಾರಣಕ್ಕೆ ಯುವಕನ ಮೇಲೆ ಯುವತಿ ಮನೆ ಕಡೆಯವರು ಹಲ್ಲೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಡಿಎ ತಾಂಡಾದಲ್ಲಿ ನಡೆದಿದೆ.

    Tumkuru man

    ಹಲ್ಲೆಗೊಳಗಾದ ಯುವಕನನ್ನು ಸರ್ಜುನ್ ನಾಯ್ಕ್ ಎಂದು ಗುರುತಿಸಲಾಗಿದೆ. ಸರ್ಜುನ್ ನಾಯ್ಕ್ ಸುಮಾರು ಐದು ವರ್ಷಗಳಿಂದ ಪವಿತ್ರ ಬಾಯಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ಕಳೆದ 8 ತಿಂಗಳ ಹಿಂದೆ ಓಡಿ ಹೋಗಿ ಪವಿತ್ರ ಬಾಯಿ ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದರು. ಇದನ್ನೂ ಓದಿ: ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ – ಸುಳ್ಯ ನ್ಯಾಯಾಲಯಕ್ಕೆ ಇಂದು ಡಿಕೆಶಿ ಹಾಜರು

    Tumkuru man

    ಇದರಿಂದ ಕೋಪಗೊಂಡಿದ್ದ ಪವಿತ್ರಾ ಬಾಯಿಯ ತಂದೆ ವೆಂಕಟೇಶ್ ನಾಯ್ಕ್, ದೊಡ್ಡಪ್ಪ ರಂಗನಾಯ್ಕ್, ಅಣ್ಣ ತಿಪ್ಪೇಶ್ ನಾಯ್ಕ್, ಅಕ್ಕ ಕಲಾವತಿ, ಅಣ್ಣ ರಾಮಾನಾಯ್ಕ್, ತಮ್ಮ ನವೀನ್ ನಾಯ್ಕ್‌ರಿಂದ ಸರ್ಜುನ್ ನಾಯ್ಕ್‌ಗೆ ದೊಣ್ಣೆಗಳಿಡಿದು ಹಿಗ್ಗಾಮುಗ್ಗಾ ತಳಿಸಿದ್ದಾರೆ. ಸದ್ಯ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಸುಮಾರು 8 ಜನರ ಮೇಲೆ ದೂರು ದಾಖಲಾಗಿದ್ದು, ಹಲ್ಲೆಗೊಳಗಾದ ಸರ್ಜುನ್ ನಾಯ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ವ್ಯಕ್ತಿ ಹೊಟ್ಟೆಯಲ್ಲಿ 1ಕೆ.ಜಿ ಮೊಳೆ, ಬೋಲ್ಟ್, ಸ್ಕ್ರೂ ನೋಡಿ ವೈದ್ಯರು ಶಾಕ್

  • ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಮಗನಿಂದಲೇ ಅಪ್ಪನ ಕೊಲೆಗೆ ನಡೆದಿತ್ತಂತೆ ಸ್ಕೇಚ್!

    ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಮಗನಿಂದಲೇ ಅಪ್ಪನ ಕೊಲೆಗೆ ನಡೆದಿತ್ತಂತೆ ಸ್ಕೇಚ್!

    ಬೆಂಗಳೂರು: ತಿಗಳರಪಾಳ್ಯದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಮಗ ಮಧುಸಾಗರ್ ನಿಂದಲೇ ತಂದೆ ಶಂಕರ್ ಕೊಲೆಗೆ ಸ್ಕೆಚ್ ನಡೆದಿತ್ತು ಎಂಬ ಮಾಹಿತಿಯೊಂದು ಹೊರಬಿದ್ದಿದೆ.

    ಹೌದು. ಮಧುಸಾಗರ್ ಹಾಗೂ ಶಂಕರ್ ಫೈಟ್‍ಗೆ ಮತ್ತೊಂದು ಟ್ವಿಸ್ಟ್ ದೊರೆತಿದೆ. ಆತ್ಮಹತ್ಯೆಗೂ ಮುಂಚೆ ನಾಲ್ವರು ಡೆತ್ ನೋಟ್ ಬರೆದಿದ್ದರು. ಸದ್ಯ ಡೆತ್ ನೋಟ್ ನಲ್ಲಿರುವ ವಿಚಾರಗಳು ಒಂದೊಂದಾಗಿಯೇ ಹೊರಬರುತ್ತಿವೆ. ಇದನ್ನೂ ಓದಿ: ನಾಲ್ವರು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- 9 ತಿಂಗಳ ಕಂದಮ್ಮನನ್ನು ಕತ್ತು ಹಿಸುಕಿ ಕೊಂದಿದ್ದ ತಾಯಿ

    ಇತ್ತ ತಂದೆ ಶಂಕರ್ ಕೊಲೆಗೆ ಮಗ ಮಧುಸಾಗರ್ ಸ್ಕೆಚ್ ಹಾಕಿದ್ದ ಎಂಬುದು ಸದ್ಯದ ಮಾಹಿತಿ. ತನ್ನನ್ನು ಕೊಲೆ ಮಾಡಲು ಮಗ ಸ್ಕೆಚ್ ಹಾಕಿರುವ ವಿಚಾರವನ್ನು ಸ್ವತಃ ಶಂಕರ್ ಅವರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಸದ್ಯ ಶಂಕರ್ ಕೊಟ್ಟ ಈ ಮಾಹಿತಿಗೂ, ಸಿಕ್ಕ ಟೆಕ್ನಿಕಲ್ ಸಾಕ್ಷಿಗೂ ತಾಳೆಯಾಗುತ್ತಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ನನ್ನ ಮಗ ಡೆತ್ ನೋಟ್‍ನಲ್ಲಿ ಹೇಳಿರುವುದೆಲ್ಲಾ ಸುಳ್ಳು: ಶಂಕರ್

    ಸೆಪ್ಟೆಂಬರ್ 12 ರಂದು 10 ಲಕ್ಷ ಕೊಡ್ತೇನೆ ಬಾ ಅಂತ ಮಗ ಶಂಕರ್ ಗೆ ಮೆಸೇಜ್ ಹಾಕಿದ್ದ. ಮೆಸೇಜ್‍ಗೆ ರಿಪ್ಲೈ ಮಾಡದಿದ್ದಾಗ ಮಧುಸಾಗರ್ ತನ್ನ ತಂದೆಗೆ 3 ಬಾರಿ ಕಾಲ್ ಮಾಡಿದ್ದ. ಕೊನೆ ಕರೆ ವೇಳೆ ಕೊಲೆ ಮಾಡುವುದಾಗಿ ಬೆದರಿಸಿದ್ದ. ಅಮ್ಮ-ಅಕ್ಕಂದಿರು ಹೋದ್ಮೇಲೆ ಅಪ್ಪನನ್ನು ಬಿಡೋದ್ ಬೇಡ ಅಂತ ತೀರ್ಮಾನಿಸಿದ್ದ. ಮಗನ ಮಾತು ನಂಬಿ ನಾನು ಮನೆಗೆ ಹೋಗಿದ್ರೆ ಅಂದೇ ಕೊಲೆ ಆಗುತ್ತಿದ್ದೆ ಎಂದು ಹಲ್ಲೇಗೆರೆ ಶಂಕರ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಐವರು ಆತ್ಮಹತ್ಯೆ ಪ್ರಕರಣ- ಶಂಕರ್ ಮನೆಯಲ್ಲಿ 15 ಲಕ್ಷ ನಗದು, ಎರಡು ಕೆಜಿಯಷ್ಟು ಚಿನ್ನಾಭರಣ ಪತ್ತೆ

  • ಸಿಲಿಂಡರ್ ಸ್ಫೋಟದಿಂದ ಮನೆಯ ಮೇಲ್ಛಾವಣಿ ಛಿದ್ರ – 5 ಮಂದಿಗೆ ಗಾಯ

    ಸಿಲಿಂಡರ್ ಸ್ಫೋಟದಿಂದ ಮನೆಯ ಮೇಲ್ಛಾವಣಿ ಛಿದ್ರ – 5 ಮಂದಿಗೆ ಗಾಯ

    ಚಿಕ್ಕಬಳ್ಳಾಪುರ: ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕೈಗಾರಿಕಾ ಪ್ರದೇಶದ ಬಾಶೆಟ್ಟಿಹಳ್ಳಿ ಬಳಿ ನಡೆದಿದೆ. ಇದನ್ನೂ ಓದಿ: 80 ಕಡೆ ದುರ್ಗಾಮೂರ್ತಿ ಪ್ರತಿಷ್ಠಾಪನೆಗೆ ಮನವಿ – ದಸರಾ ಮಾರ್ಗಸೂಚಿಗಾಗಿ ಎದುರುನೋಡ್ತಿರುವ ಬಿಬಿಎಂಪಿ

    Cylinder Leakage

    ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಮನೆಯ ಮೇಲ್ಛಾವಣಿ ಪೀಸ್, ಪೀಸ್ ಆಗಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಐವರು ಗಾಯಗೊಂಡಿದ್ದು ಗಾಯಾಳುಗಳನ್ನು ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ. ಇದನ್ನೂ ಓದಿ: ರೈತರಿಗೆ ದಾಖಲೆ ನೀಡಲು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ತರಾಟೆ- ಸೂ….ಮಕ್ಕಳು ಎಂದ ರಮೇಶ್ ಕುಮಾರ್

    Cylinder Leakage

    ಗಾಯಾಳುಗಳನ್ನು ಬೀನುಮಂಡಲ್(25), ಶೋಭಾನ್ ಮಂಡಲ್ ಮಗ (3), ಮೋನಿಕಾ ಮಂಡಲ್ ಹೆಂಡತಿ(21), ಬೋಲಾನಾಥ್ ವೃದ್ಧ(60), ಶೋಭಿತಾ ಮಂಡಲ್(55) ವೃದ್ಧೆ ಎಂದು ಗುರುತಿಸಲಾಗಿದೆ. ಗಾಯಾಳುಗಳು ಪಶ್ಚಿಮ ಬಂಗಾಳದ ನಿವಾಸಿಗಳಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ಈ ಮನೆಯಲ್ಲಿ ವಾಸವಾಗಿದ್ದರು.