Tag: family

  • ಕಾರು ಬ್ರೇಕ್ ಫೇಲ್, ಭೀಕರ ಅಪಘಾತ – ಮಕ್ಕಳೊಂದಿಗೆ ಪವಾಡ ಸದೃಶವಾಗಿ ಪಾರಾದ ಕುಟುಂಬ

    ಕಾರು ಬ್ರೇಕ್ ಫೇಲ್, ಭೀಕರ ಅಪಘಾತ – ಮಕ್ಕಳೊಂದಿಗೆ ಪವಾಡ ಸದೃಶವಾಗಿ ಪಾರಾದ ಕುಟುಂಬ

    ನೆಲಮಂಗಲ: ಕಾರು ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಮಕ್ಕಳೊಂದಿಗೆ ಹೆತ್ತವರು ಪವಾಡ ಸದೃಶವಾಗಿ ಪಾರಾದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಿನ್ನಮಂಗಲ ಬಳಿ ಸಂಭವಿಸಿದೆ.

    ಸ್ವಿಫ್ಟ್ ಕಾರು ಬ್ರೇಕ್ ಫೇಲ್ ಆಗಿ ಲಾರಿಗೆ ಡಿಕ್ಕಿಯಾಗಿರುವ ಶಂಕೆ ವ್ಯಕ್ತವಾಗಿದೆ, ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವಾಗಿದ್ದು, ಕಾರಿನಲ್ಲಿದ್ದವರು ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆ ಸಂಚರಿಸುತ್ತಿದ್ದರು ಈ ವೇಳೆ ಅಪಘಾತ ನಡೆದಿದ್ದು, ಕಾರಿನಲ್ಲಿದ್ದವರು ಪವಾಡ ರೀತಿಯಲ್ಲಿ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಗುದ್ದಿದ ಕಾರ್- ಐದು ಮಂದಿ ಸ್ಥಳದಲ್ಲೇ ಸಾವು

    ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳದಲ್ಲಿ ಗಾಯಗೊಂಡವರ ರೋಧನೆ ಮುಗಿಲುಮುಟ್ಟಿತ್ತು. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

  • ದಕ್ಷಿಣ ಕೊರಿಯಾದ ನಟಿ ಕಿಮ್ ಮಿ ಸೂ ನಿಧನ – ನಟಿ ಸಾವಿನ ಬಗ್ಗೆ ಅನುಮಾನ

    ದಕ್ಷಿಣ ಕೊರಿಯಾದ ನಟಿ ಕಿಮ್ ಮಿ ಸೂ ನಿಧನ – ನಟಿ ಸಾವಿನ ಬಗ್ಗೆ ಅನುಮಾನ

    ಸಿಯೋಲ್: ದಕ್ಷಿಣ ಕೊರಿಯಾದ ನಟಿ ಕಿಮ್ ಮಿ ಸೂ(29) ಬುಧವಾರ ನಿಧನರಾಗಿದ್ದಾರೆ.

     Kim Mi-soo

    ಜನವರಿ 5 ರಂದು ಕಿಮ್ ಇದ್ದಕ್ಕಿದ್ದಂತೆ ಮೃತಪಟ್ಟಿದ್ದು, ಅವರ ಅಗಲಿಕೆಯಿಂದ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಅಲ್ಲದೇ ಕಿಮ್ ಹಠಾತ್ ಸಾವಿನಿಂದ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದು, ಈ ಮಧ್ಯೆ ಕುಟುಂಬಸ್ಥರು ದಯವಿಟ್ಟು ಯಾರು ಸಹ ಸುಳ್ಳಿನ ವದಂತಿಗಳನ್ನು ಹರಡದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‍ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ

     

    View this post on Instagram

     

    A post shared by Kim Mi Soo (@kimmi8329)

    ಕಿಮ್ ಮಿ ಸೂ ಅವರ ಸಾವಿನ ಕಾರಣ ಕುರಿತಂತೆ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಕಿಮ್ ಹಲವಾರು ಕೊರಿಯನ್ ಚಿತ್ರಗಳಲ್ಲಿ ನಟಿಸಿದ್ದು, 1987 ರ ಪ್ರಜಾಸತ್ತಾತ್ಮಕ ಚಳುವಳಿಯ ವಿರುದ್ಧದ ರೋಮ್ಯಾಂಟಿಕ್ ಮೆಲೋಡ್ರಾಮಾದ ‘ಸ್ನೋಡ್ರಾಪ್’ ಎಂಬ ಪಾತ್ರದಿಂದ ಖ್ಯಾತಿ ಪಡೆದಿದ್ದರು. ಇದನ್ನೂ ಓದಿ: ತರಕಾರಿ, ಹಣ್ಣುಗಳನ್ನು ಲಂಚವಾಗಿ ಪಡೆಯುತ್ತಿದ್ದ ಅಧಿಕಾರಿಗಳು!

  • ಮದುವೆ ಹಿಂದಿನ ದಿನ ಚಿನ್ನಾಭರಣ ದೋಚಿ ಪ್ರಿಯಕರನೊಂದಿಗೆ ಯುವತಿ ಜೂಟ್

    ಮದುವೆ ಹಿಂದಿನ ದಿನ ಚಿನ್ನಾಭರಣ ದೋಚಿ ಪ್ರಿಯಕರನೊಂದಿಗೆ ಯುವತಿ ಜೂಟ್

    – ಚಹಾ ಕೊಟ್ಟು ಪ್ರಜ್ಞೆ ತಪ್ಪಿಸಿದ್ಳು

    ಲಕ್ನೋ: ಮದುವೆ ಮನೆಯ ಸಂಭ್ರಮದಲ್ಲಿ ಇದ್ದ ಮನೆ ಮಂದಿಗೆ ವಧು ಶಾಕ್ ನೀಡಿದ ಘಟನೆಯೊಂದು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಚಹಾದಲ್ಲಿ ಪ್ರಜ್ಞೆತಪ್ಪಿಸುವ ಮದ್ದು ಬೆರೆಸಿದ ವಧು, ಮನೆಯಲ್ಲಿರುವ ಚಿನ್ನಾಭರಣದೊಂದಿಗೆ ತನ್ನ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ.

    ಡಿಸೆಂಬರ್ 18 ರಂದು ಮದುವೆ ನಿಗದಿಯಾಗಿತ್ತು. ಡಿಸೆಂಬರ್ 17 ರಂದು, ಮದುವೆಯ ಸಿದ್ಧತೆಯಲ್ಲಿ ನಿರತರಾಗಿದ್ದ ಕುಟುಂಬ ಸದಸ್ಯರೆಲ್ಲರಿಗೂ ಕುಡಿಯಲು ಚಹಾವನ್ನು ನೀಡಿದ್ದಾಳೆ. ಕುಟುಂಬಸ್ಥರೆಲ್ಲರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ನಂತರ ಯುವತಿ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಮದುವೆಗೆ ಒಂದು ದಿನ ಬಾಕಿ ಇರುವಾಗ ಅವಳು ತನ್ನ ಪ್ರೇಮಿಯೊಂದಿಗೆ ಓಡಿಹೋಗಿದ್ದಾಳೆ. ಕುಟುಂಬಸ್ಥರು ಎಚ್ಚರಗೊಂಡು ನೋಡಿದ್ದಾಗ ವಧು  ಕಾಣದೆ ಇರುವುದರಿಂದ ಆತಂಕಗೊಂಡು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಟೋಲ್ ಆದಾಯ ಮುಂದಿನ 3 ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂ.ಗೆ ಏರಿಕೆ

    ಕುಟುಂಬದ ಕೆಲವರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಾರು 1.5 ಲಕ್ಷ ರೂಪಾಯಿ ಹಾಗೂ ಬೆಲೆಬಾಳುವ ಚಿನ್ನಾಭರಣಗಳೊಂದಿಗೆ ಯುವತಿ ಪರಾರಿಯಾಗಿದ್ದಾಳೆ ಎಂದು ವಧುವಿನ ಕುಟುಂಬಸ್ಥರು ಯುವತಿಯ ವಿರುದ್ಧ ವರ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: LPG ಗ್ಯಾಸ್, ಟಾಯ್ಲೆಟ್‌ ಕಟ್ಟೋದು ಮಹಿಳಾ ಸಬಲೀಕರಣ ಅಲ್ಲ: ಪ್ರಿಯಾಂಕಾ ಗಾಂಧಿ

    BRIBE

    ವಧುವಿನ ಪೋಷಕರು ಸಾಕಷ್ಟು ಪ್ರಯತ್ನದ ನಂತರ ತಮ್ಮ ಹಿರಿಯ ಮಗಳಿಗೆ ಸೂಕ್ತ ವರನನ್ನು ಕಂಡುಕೊಂಡಿದ್ದರು. ಮದುವೆಗೆ ಎಲ್ಲ ಸಿದ್ಧತೆಗಳು ನಡೆದಿದ್ದವು, ಅತಿಥಿಗಳು ಬಂದಿದ್ದರು ಆದರೆ ಕೊನೆ ಕ್ಷಣದಲ್ಲಿ ಮಗಳು ಮಾಡಿದ ಮೋಸದಿಂದ ಮದುವೆ ನಿಂತಿತು. ಮೊದಲ ಮಗಳು ಮೋಸ ಮಾಡಿ ಹೋಗಿರುವ ವಿಚಾರವಾಗಿ ನೊಂದಿರುವ ಕುಟುಂಬದವರು ತಮ್ಮ ಕಿರಿಯ ಮಗಳನ್ನು ವರನಿಗೆ ಮದುವೆ ಮಾಡುವ ಪ್ರಸ್ತಾಪ ಇಟ್ಟಿದ್ದಾರೆ. ಆಗ ಎರಡೂ ಕಡೆಯ ಹಿರಿಯರ ಚರ್ಚೆಯ ನಂತರ ವರನು ವಧುವಿನ ತಂಗಿಯನ್ನು ಮದುವೆಯಾಗಲು ಒಪ್ಪಿದ್ದಾನೆ. ಇದನ್ನೂ ಓದಿ: ಕನಿಷ್ಠ ಬೆಂಬಲ ಬೆಲೆ ಹೆಚ್ಚಳದ ಬಗ್ಗೆ ಮಾತನಾಡಲು ನನ್ನಷ್ಟು ಧೈರ್ಯ ಯಾರಿಗೂ ಇಲ್ಲ: ವರುಣ್ ಗಾಂಧಿ

  • ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆ ಯತ್ನ – 10 ವರ್ಷದ ಬಾಲಕಿ ಪಾರು

    ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆ ಯತ್ನ – 10 ವರ್ಷದ ಬಾಲಕಿ ಪಾರು

    ರಾಮನಗರ: ಒಂದೇ ಕುಟುಂಬದ 4 ಮಂದಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿಯ ಸೋಲೂರು ಬಳಿಯ ದಮ್ಮನಕಟ್ಟೆಯಲ್ಲಿ ನಡೆದಿದೆ.

    ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 10 ವರ್ಷದ ಬಾಲಕಿ ಬದುಕುಳಿದಿದ್ದಾಳೆ. ಸಿದ್ದಮ್ಮ (55), ಸುಮಿತ್ರಾ (30), ಹನುಮಂತರಾಜು (35) ಮೃತರು. ಕೀರ್ತನಾ (10) ಅಪಾಯದಿಂದ ಪಾರಾದ ಬಾಲಕಿ. ಕುಟುಂಬ ಸದಸ್ಯ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

    ಸದ್ಯ ಮೃತದೇಹಗಳನ್ನು ಬೆಂಗಳೂರಿನ ಆರ್.ಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಮಹಿಳೆಗೆ ಮರ್ಮಾಂಗ ತೋರಿಸಿದ ಹೆಡ್ ಕಾನ್ಸ್ಟೇಬಲ್ ಅಮಾನತು

  • ಸಿಎಂಎಸ್‍ಆರ್ ಮೋರೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಬೊಮ್ಮಾಯಿ

    ಸಿಎಂಎಸ್‍ಆರ್ ಮೋರೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಬೊಮ್ಮಾಯಿ

    ಧಾರವಾಡ: ಅನಾರೋಗ್ಯದಿಂದ ನಿಧನ ಹೊಂದಿದ್ದ ಮಾಜಿ ಸಚಿವ ಮರಾಠ ಸಮಾಜದ ಹಿರಿಯ ಮುಖಂಡ ಎಸ್ಆರ್ ಮೋರೆ ಅವರ ಮನೆಗೆ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭೇಟಿ ನೀಡಿದರು.

    Bommai

    ಧಾರವಾಡ ನಗರದಲ್ಲಿರುವ ಮೋರೆ ಫಾರ್ಮ್ ತೋಟದ ಮನೆಗೆ ಭೇಟಿ ನೀಡಿ ಎಸ್‍ಆರ್ ಮೋರೆ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋರೆಯವರು ಈ ಭಾಗದ ಹಿರಿಯ ನಾಯಕರು, ನಾಲ್ಕು ದಶಕಗಳಷ್ಟು ಸಾರ್ವಜನಿಕ ಸೇವೆ ಮಾಡಿದವರು, ಅವರ ನಿಧನ ದುಃಖ ತಂದಿದೆ ಎಂದರು.

    ಮೋರೆ ಜನರ ಪ್ರೀತಿಗೆ ಪಾತ್ರರಾದವರು, ಧಾರವಾಡ ಅಭಿವೃದ್ಧಿ ಬಗ್ಗೆ ಬಹಳಷ್ಟು ಕಳಕಳಿ ಅವರಿಗಿತ್ತು. ಮೋರೆ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿದವರು, ಇದೀಗ ಈ ಭಾಗದ ಓರ್ವ ನಾಯಕನನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:  ಹೆಲಿಕಾಪ್ಟರ್ ದುರಂತ ಬಗ್ಗೆ ಊಹಾಪೋಹ ನಿಲ್ಲಿಸಿ: ಐಎಎಫ್

    ಪಕ್ಷ ಬೇರೆ ಇದ್ದರೂ ಮೋರೆಯವರ ಜೊತೆ ವೈಯಕ್ತಿಕ ಸಂಬಂಧ ಇತ್ತು. ಅಭಿವೃದ್ಧಿಗಾಗಿ ನಾವು ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಅದೆಲ್ಲವೂ ಈಗ ನೆನಪು ಆಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ನಾನು ಮುಖ್ಯಮಂತ್ರಿಯಾಗುತ್ತೇನೆಂದು ಎಲ್ಲಿಯೂ ಹೇಳಿಲ್ಲ: ಮುರುಗೇಶ್ ನಿರಾಣಿ

  • ಮಗುವಿಗೆ ವಿಷವುಣಿಸಿ ಕೊಂದ ತಾಯಿ ಆತ್ಮಹತ್ಯೆಗೆ ಯತ್ನ

    ಮಗುವಿಗೆ ವಿಷವುಣಿಸಿ ಕೊಂದ ತಾಯಿ ಆತ್ಮಹತ್ಯೆಗೆ ಯತ್ನ

    ಚಿತ್ರದುರ್ಗ: ಅಪ್ಪ, ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ತಾಯಿಯೊಬ್ಬಳು ಮಗುವಿಗೆ ವಿಷವುಣಿಸಿ ತಾನು ಸಹ ಆತ್ಮಹತ್ಯೆಗೆ ಯತ್ನಿಸಿರುವ ಅಮಾನವೀಯ ಕೃತ್ಯ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

    ತುಮಕೂರು ನಗರದ ಲೋಕೇಶ್ ಎಂಬ ವ್ಯಕ್ತಿಯು ತನ್ನ ಪತ್ನಿಯಾದ ವನಿತಗೆ ಭಾರೀ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಪತ್ನಿಯ ಸಂಬಂಧಿಗಳಿಂದ ಕೇಳಿಬಂದಿದೆ. ನಿರಂತರವಾಗಿ ಪತಿಯ ಅವಾಚ್ಯ ಮಾತುಗಳು ಹಾಗೂ ಮಾನಸಿಕ ಕಿರುಕುಳದಿಂದ ಮನನೊಂದ ವನಿತ ತನ್ನ ಮಗ ಚಾರ್ವಿತ್(4)ಗೆ ವಿಷವುಣಿಸಿದ ಬಳಿಕ ತಾನು ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ವನಿತಾ ಅವರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಎವರ್ ಗ್ರೀನ್ ಹೀರೋಯಿನ್ ಸುಧಾರಾಣಿ ಇನ್ಮುಂದೆ ಡಾ.ಸುಧಾರಾಣಿ

    ಕೋಪ ಹಾಗೂ ಅವಸರದ ಕೈಗೆ ಬುದ್ದಿ ಕೊಟ್ಟ ವನಿತ ತನ್ನ ಮಗುವಿಗೆ ವಿಷವುಣಿಸಿದ ಬಳಿಕ ತಾನು ವಿಷ ಸೇವಿಸಿ ಭಯದಿಂದ ತನ್ನ ತವರೂರಾದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮಕ್ಕೆ ತೆರಳಿದ್ದಾರೆ. ಆಗ ಅವರ ಕುಟುಂಬಸ್ಥರು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಈ ವೇಳೆ ಚಾರ್ವಿತ್(4) ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?

    ಸದ್ಯ ಗಂಭೀರವಾಗಿ ಅಸ್ವಸ್ಥರಾಗಿರುವ ವನಿತಾ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಏನು ಅರಿಯದ ಮುಗ್ಧ ಮಗು ಅಪ್ಪ ಅಮ್ಮನ ಜಗಳದಲ್ಲಿ ಬಲಿಯಾಗಿರುವುದು ಮಾತ್ರ ವಿಪರ್ಯಾಸ. ಈ ಪ್ರಕರಣ ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಪುನೀತ್ ಅಗಲಿ ಇಂದಿಗೆ ಒಂದು ತಿಂಗಳು – ದೊಡ್ಮನೆಯಲ್ಲಿ ವಿಶೇಷ ಪೂಜೆ

    ಪುನೀತ್ ಅಗಲಿ ಇಂದಿಗೆ ಒಂದು ತಿಂಗಳು – ದೊಡ್ಮನೆಯಲ್ಲಿ ವಿಶೇಷ ಪೂಜೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ ಒಂದು ತಿಂಗಳು ಕಳೆದಿದೆ.

    ದೊಡ್ಮನೆ ಪ್ರೀತಿಯ ಕುಡಿ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡು ಕರುನಾಡಿನ ಜನತೆ ಇನ್ನೂ ದುಃಖದಲ್ಲಿದ್ದಾರೆ. ಅದಾಗಲೇ ಅಪ್ಪು ಅಗಲಿ ಇಂದಿಗೆ ಒಂದು ಮಾಸ ಕಳೆದಿದೆ. ಈ ನಡುವೆ ಮಾಡಬೇಕಿರುವ ಪುನೀತ್ ತಿಂಗಳ ಕಾರ್ಯವನ್ನು ದೊಡ್ಮನೆ ಕುಟುಂಬಸ್ಥರು ನೆರವೇರಿಸಲಿದ್ದಾರೆ. ಇದನ್ನೂ ಓದಿ: ಕೋಟ್ಯಂತರ ದುಡ್ಡು, ಕಾರು ಇದ್ರೂ ಅಪ್ಪುಗೆ 5 ನಿಮಿಷ ಸಿಗಲಿಲ್ಲ: ರಾಘಣ್ಣ

    ಸದಾಶಿವನಗರ ಅಪ್ಪು ನಿವಾಸದಲ್ಲಿ ತಿಂಗಳ ಪೂಜೆ ನಡೆಯಲಿದ್ದು, ಹಾಗೆಯೇ ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಮತ್ತೊಂದೆಡೆ ಅಭಿಮಾನಿಗಳು ಸಹ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕ ರತ್ನ ಅಪ್ಪು ಅಗಲಿ ನಾಳೆಗೆ 1 ತಿಂಗಳು- ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

    ಕಳೆದ ಅಕ್ಟೋಬರ್ 29 ರಂದು ನಟ ಪುನೀತ್ ರಾಜ್‍ಕುಮಾರ್ ಅವರು ಹೃದಯ ಸ್ತಂಭನದಿಂದ ನಿಧನರಾದರು. ಅಪ್ಪುವನ್ನ ಕಳೆದುಕೊಂಡ ಈ ದಿನವನ್ನು ಇಡೀ ಕರುನಾಡು ಕರಾಳ ದಿನವನ್ನಾಗಿ ಮಾಡಿಕೊಂಡು ಶಪಿಸುತ್ತಿದೆ.

  • ದೇವೇಗೌಡರ ಫ್ಯಾಮಿಲಿ ಬಂದಾಗ ಮಾತ್ರ ಕುಟುಂಬ ರಾಜಕಾರಣ ತರ್ತಾರೆ: ಸೂರಜ್ ರೇವಣ್ಣ

    ದೇವೇಗೌಡರ ಫ್ಯಾಮಿಲಿ ಬಂದಾಗ ಮಾತ್ರ ಕುಟುಂಬ ರಾಜಕಾರಣ ತರ್ತಾರೆ: ಸೂರಜ್ ರೇವಣ್ಣ

    ಹಾಸನ: ದೇವೇಗೌಡರ ಕುಟುಂಬ ಬಂದಾಗ ಮಾತ್ರ ಕುಟುಂಬ ರಾಜಕಾರಣ ತರುತ್ತಾರೆ. ಆದರೆ ಎಲ್ಲಾ ರಾಜಕೀಯ ವ್ಯಕ್ತಿಗಳ ಮನೆಯಲ್ಲಿ ನಾಲ್ಕೈದು ಜನ ರಾಜಕೀಯದಲ್ಲಿ ಇದ್ದಾರೆ ಎಂದು ಸೂರಜ್ ರೇವಣ್ಣ ಕಿಡಿಕಾರಿದ್ದಾರೆ.

    ಹಾಸನದಲ್ಲಿ ಇಂದು ಎರಡನೇ ಬಾರಿಗೆ ಎಂಎಲ್‍ಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ತಮ್ಮ ಸ್ಪರ್ಧೆ ಬಗ್ಗೆ ಕುಟುಂಬ ರಾಜಕಾರಣ ಎಂದು ಟೀಕಿಸುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿಯಿಂದ ಕನಕಪುರದವರೆಗೂ ಒಂದೊಂದು ಕುಟುಂಬದಲ್ಲಿ ಎಷ್ಟೆಷ್ಟು ಜನ ರಾಜಕಾರಣದಲ್ಲಿದ್ದಾರೆ ಎಂದು ಲೆಕ್ಕ ಹಾಕಿ. ಶಿವಮೊಗ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಕುಟುಂಬ ರಾಜಕಾರಣ ಇದ್ದಿದ್ದೇ. ದೇವೇಗೌಡರ ಕುಟುಂಬ ಬಂದಾಗ ಮಾತ್ರ ಕುಟುಂಬ ರಾಜಕಾರಣ  ತರುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

    ನಮ್ಮ ತಾತ ಅವರು ಧೃಡವಾದ ನಿರ್ಧಾರ ತಗೊಂಡು ನನ್ನ ಅಭ್ಯರ್ಥಿ ಮಾಡಿದ್ದಾರೆ. ಸುಮಾರು ಐವತ್ತು ವರ್ಷಗಳಿಂದ ನಮ್ಮ ಕುಟುಂಬ ರಾಜ್ಯ, ಜಿಲ್ಲೆಯಲ್ಲಿ ಕಳಕಳಿಯಿಂದ ಕೆಲಸ ಮಾಡಿಕೊಂಡು ಬರುತ್ತಿದೆ. ಅದನ್ನು ಮುಂದುವರಿಸಿಕೊಂಡು ಹೋಗಲು ನನಗೂ ಅವಕಾಶ ಕೊಡಿ. ನಾನು ಅನಿರೀಕ್ಷಿತವಾಗಿ ಅಭ್ಯರ್ಥಿಯಾಗಿದ್ದೇನೆ. ನಾನು ಅಭ್ಯರ್ಥಿಯಾಗುವ ಅಪೇಕ್ಷೆ ಇರಲಿಲ್ಲ. ಐದಾರು ವರ್ಷದಿಂದ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಎಲ್ಲೆಡೆ ಮಳೆಯಾಗಿ ಅಪಾರ ನಷ್ಟವಾಗಿದೆ. ಅದರ ಬಗ್ಗೆ ಮಾತನಾಡಲು ಒಬ್ಬರು ಬೇಕು. ಅದು ಮೇಲ್ಮನೆಯಾಗಲಿ, ಕೆಳಮನೆಯಾಗಲಿ ಎಂದು ಸೂರಜ್ ರೇವಣ್ಣ ಹೇಳಿದ್ದಾರೆ.

  • ಭೀಕರ ಅಪಘಾತ- ಒಂದೇ ಕುಟುಂಬದ ಮೂವರ ದುರ್ಮರಣ, ಮಹಿಳೆ ಸ್ಥಿತಿ ಗಂಭೀರ

    ಭೀಕರ ಅಪಘಾತ- ಒಂದೇ ಕುಟುಂಬದ ಮೂವರ ದುರ್ಮರಣ, ಮಹಿಳೆ ಸ್ಥಿತಿ ಗಂಭೀರ

    ಗದಗ: ಟ್ರ್ಯಾಕ್ಟರ್ ಮತ್ತು ಕಾರ್ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ಮೂರು ಮಂದಿ ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಈ ಭೀಕರವಾದ ಅಪಘಾತ ಮುಂಡರಗಿ ತಾಲೂಕಿನ ಡಂಬಳ- ಮೇವುಂಡಿ ಬಳಿ ನಡೆದಿದೆ.

    ಶಿವಾನಂದಯ್ಯ ಹಿರೇಮಠ(45), ತಾಯಿ ಅನಸೂಯಾ( 70), ಮಗಳು ಮನಸ್ವಿ(6) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಪತ್ನಿ ಗಿರಿಜಾ ಸ್ಥಿತಿ ಚಿಂತಾಜನಕವಾಗಿದೆ. ಮೃತ ಹಾಗೂ ಗಾಯಾಳು ಹುಬ್ಬಳಿ ನವನಗರ ನಿವಾಸಿಗಳು ಎನ್ನಲಾಗುತ್ತಿದೆ. ವೇಗವಾಗಿ ಚಲಿಸುತ್ತಿದ್ದ ಕಾರ್, ಟ್ರ್ಯಾಕ್ಟರ್‌ ಹಿಂಬದಿಯಿಂದ ಡಿಕ್ಕಿ ಸಂಬವಿಸಿದ್ದು, ಕಾರ್‍ನಲ್ಲಿದ್ದ ಒಂದೇ ಕುಟುಂಬದ 3 ಜನ ಸ್ಥಳದಲ್ಲೇ ಸಾವನ್ನಪ್ಪಿದು, ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 247 ಕೊರೊನಾ ಕೇಸ್, 1 ಸಾವು

    ಮೆಕ್ಕೆ ಜೋಳ ತುಂಬಿಕೊಂಡು ಮುಂಡರಗಿಯಿಂದ ಗದಗ ಕಡೆಗೆ ಬರುತ್ತಿತ್ತು. ಮುಂಡರಗಿ ತಾಲೂಕಿನ ಶಿಂಗಟಾಲೂರ ವೀರಭದ್ರೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ಮರಳಿ ಹುಬ್ಬಳ್ಳಿಗೆ ಹೊರಟ್ಟಿದ್ದ ವೇಳೆ ದಾರಿ ಮಧ್ಯೆ ಈ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್‌ಗೆ ವೇಗವಾಗಿ ಚಲಿಸುತ್ತಿದ್ದ ಕಾರ್ ಹಿಂಬದಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರ್ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಗಂಭೀರ ಗಾಯಾಳು ಮಹಿಳೆ ಗಿರಿಜಾಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವಾಯು ಮಾಲಿನ್ಯ ಹೆಚ್ಚಳದಿಂದ ಶಾಲಾ-ಕಾಲೇಜು ಬಂದ್ ಮಾಡಿದ ದೆಹಲಿ

    ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವರ ದರ್ಶನ ಮುಗಿಸಿ ಕುಟುಂಬಸ್ಥರು ಪ್ರಾಣ ಬಿಟ್ಟಿದ್ದಾರೆ.

  • ಜೆಡಿಎಸ್ ಅವ್ರನ್ನ ಮತ್ತೆ ಆಯ್ಕೆ ಮಾಡಿದ್ರೆ, ನಿಮಗೆ ಅಪಕೀರ್ತಿ: ಸದಾನಂದ ಗೌಡ

    ಜೆಡಿಎಸ್ ಅವ್ರನ್ನ ಮತ್ತೆ ಆಯ್ಕೆ ಮಾಡಿದ್ರೆ, ನಿಮಗೆ ಅಪಕೀರ್ತಿ: ಸದಾನಂದ ಗೌಡ

    ಹಾಸನ: ಕುಟುಂಬದ ಸದಸ್ಯರೇ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಮತ್ತೆ ಅವರನ್ನು ಆಯ್ಕೆ ಮಾಡಿದರೆ ನಿಮಗೆ ಅಪಕೀರ್ತಿ ಬರುತ್ತದೆ ಎಂದು ಹಾಸನದಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಹೇಳಿದ್ದಾರೆ.

    ಹಾಸನದ ಖಾಸಗಿ ಕಾಲೇಜಿನಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಎಂಎಲ್‍ಸಿ ಚುನಾವಣೆಯಲ್ಲಿ ಹಾಸನ ಕ್ಷೇತ್ರಕ್ಕೆ ಜೆಡಿಎಸ್‍ನಿಂದ ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ಅವರಿಗೆ ಟಿಕೆಟ್ ನೀಡಿರುವುದರ ಬಗ್ಗೆ ಕುಟುಂಬ ರಾಜಕಾರಣ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ನವಜೋತ್ ಸಿಧುರನ್ನು ತರಾಟೆಗೆ ತೆಗೆದುಕೊಂಡ ಗೌತಮ್ ಗಂಭೀರ್

    ಜೆಡಿಎಸ್ ಅಧಿಪತನ ಶುರುವಾಗಿದೆ. ಜೆಡಿಎಸ್‍ನ ಶಾಸಕರೇ ತಮ್ಮ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶ್ರವಣಬೆಳಗೊಳ ಮತ್ತು ಹೊಳೆನರಸೀಪುರ ಬಿಟ್ಟರೆ ಜಿಲ್ಲೆಯ ಎಲ್ಲಾ ಕಡೆಯೂ ಬಿಜೆಪಿ ಅಲೆ ಇದೆ ಎಂದು ಸದಾನಂದಗೌಡ ಹೇಳಿದ್ದಾರೆ. ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ನನ್ನ ದೊಡ್ಡಣ್ಣ – ಮತ್ತೆ ವಿವಾದ ಸೃಷ್ಟಿಸಿದ ನವಜೋತ್ ಸಿಂಗ್