Tag: family

  • ಹೆರಿಗೆ ವೇಳೆ ತಾಯಿ ಸಾವು – ತಬ್ಬಲಿಯಾದ ನವಜಾತ ಶಿಶು

    ಹೆರಿಗೆ ವೇಳೆ ತಾಯಿ ಸಾವು – ತಬ್ಬಲಿಯಾದ ನವಜಾತ ಶಿಶು

    ಚಿಕ್ಕಬಳ್ಳಾಪುರ: ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತಳ ಕುಟುಂಬಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆ ಎದುರು ನಡೆದಿದೆ.

    ತಾಲೂಕಿನ ಬೈರಾಪುರ ಗ್ರಾಮದ ಸವಿತಾ(22) ಮೃತ ಮಹಿಳೆ. ಹೆರಿಗೆಗಾಗಿ ತಾಯಿ, ಮಗು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಆಧಿಕ ರಕ್ತಸ್ರಾವದಿಂದ ಹೆರಿಗೆಯಾದ ಕ್ಷಣದಲ್ಲೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಇದೀಗ ತಾಯಿ ಕಳೆದುಕೊಂಡು ನವಜಾತ ಶಿಶು ಅನಾಥವಾಗಿದ್ದು, ಕುಟುಂಬಸ್ಥರು ವೈದ್ಯರ ವಿರುದ್ಧ ಸರ್ಕಾರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಮೃತಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಹೊಟ್ಟೆಯಲ್ಲಿದ್ದ ಮಗು 4 ಕೆ.ಜಿ. ತೂಕ ಇದ್ದು ಹೆರಿಗೆ ಮಾಡಿಸುವುದು ಸವಾಲಿನ ಕೆಲಸವಾಗಿತ್ತು. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರೆ, ನಾವು ಕರೆದುಕೊಂಡು ಹೋಗುತ್ತಿದ್ದೆವು. ಆದರೆ ವೈದ್ಯರು ಇಲ್ಲಿಯೇ ಹೆರಿಗೆ ಮಾಡುವುದಾಗಿ ಧೈರ್ಯ ಹೇಳಿ ಕೊನೆಗೆ ಜೀವವನ್ನು ತೆಗೆದಿದ್ದಾರೆ. ಹುಟ್ಟಿದ ಕ್ಷಣದಲ್ಲಿ ಮಗುವಿಗೆ ತಾಯಿ ಇಲ್ಲದಂತೆ ಮಾಡಿದ್ದಾರೆ ಎಂದು ಮೃತಳ ಗಂಡ ರಮೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧ

  • ಮೊದಲು ಉಕ್ರೇನ್ ಸ್ವರ್ಗದಂತಿತ್ತು, ಈಗ ನರಕವಾಗಿದೆ – ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಯುವಕ

    ಮೊದಲು ಉಕ್ರೇನ್ ಸ್ವರ್ಗದಂತಿತ್ತು, ಈಗ ನರಕವಾಗಿದೆ – ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಯುವಕ

    ಬೀದರ್: ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಅಮಿತ್ ಕೊನೆಗೂ ಜಿಲ್ಲೆಗೆ ಆಗಮಿಸಿದ್ದು, ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಆರತಿ ಮಾಡಿ ಪರಸ್ಪರ ಸಿಹಿ ಹಂಚಿಕೊಂಡು ಕುಟುಂಬಸ್ಥರು ಅಮಿತ್‍ರನ್ನು ಬರಮಾಡಿಕೊಂಡಿದ್ದಾರೆ.

    ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮನೆಗೆ ವಾಪಸ್ ಹೋಗುತ್ತೀವೋ ಇಲ್ಲವೋ ಎಂದು ಪ್ರಾರಂಭದಲ್ಲಿ ಭಯವಾಗುತ್ತಿತ್ತು. ಬಂಕರ್‌ನಲ್ಲಿಯೇ 5 ರಿಂದ 6 ದಿನ ಕಾಲ ಕಳೆದೇವು. ಈ ವೇಳೆ ನಮಗೆ ತಿನ್ನಲು ಅನ್ನ ಸಿಗಲಿಲ್ಲ. ವಾರ್ ನಡೆಯುತ್ತಿತ್ತು. ಆದರೂ ಜೀವ ಕೈಯಲ್ಲಿ ಹಿಡಿದು ಬಂಕರ್ ನಿಂದ 12 ಕೀಲೋ ಮೀಟರ್ ನಡೆದುಕೊಂಡೇ ಖಾರ್ಕಿವ್‍ನ ರೈಲು ನಿಲ್ದಾಣ ತಲುಪಿದೇವು. ನಾವು ಇರುವ ಬಿಲ್ಡಿಂಗ್ ಮೇಲೆ ಬಾಂಬ್‍ಗಳು ಬೀಳುತ್ತಿದ್ದವು. ಇದನ್ನೂ ಓದಿ: 100ರೂ. ಹಣ ವಾಪಸ್ ಕೊಡದಿದ್ದಕ್ಕೆ ಸಹೋದ್ಯೋಗಿಯನ್ನೇ ಹತ್ಯೆಗೈದ

    ಮೊದಲು ಉಕ್ರೇನ್ ಸ್ವರ್ಗದ ತರಹ ಇತ್ತು ಈಗ ನರಕವಾಗಿದೆ. ಸಾವನ್ನಪ್ಪಿದ ನವೀನ್ ಹಾಗೂ ನಾನು ಒಂದೇ ಕಾಲೇಜು. ನಮ್ಮ ಸೀನಿಯರ್ ಆಗಿದ್ದ ನವೀನ್ ನನಗೂ ಪರಿಚಯವಿದ್ದರು ಎಂದು ಅಮಿತ್ ತನ್ನ ಅನುಭವವನ್ನು ಹಂಚಿಕೊಂಡರು.

    ನಂತರ ಮಗ ಮನೆಗೆ ಬಂದಿದ್ದಾನೆ ಎಂದು ಖುಷಿಯಾಗುತ್ತಿದೆ. ಭಾರತ ಸರ್ಕಾರ ಹಾಗೂ ಎಂಬೆಸಿ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು ಮತ್ತು ನವೀನ್ ಪೋಷಕರಿಗೆ ಆ ದೇವರು ಕಷ್ಟ ಭರಿಸುವ ಶಕ್ತಿ ನೀಡಲಿ ಎಂದು ಅಮಿತ್ ಪೋಷಕರು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಯುಪಿ ಭವಿಷ್ಯ ಅಖಿಲೇಶ್ ಯಾದವ್ ಕೈಯಲ್ಲಿ ಸುರಕ್ಷಿತವಾಗಿರುತ್ತೆ: ಮಯಾಂಕ್ ಜೋಶಿ

  • ಉಕ್ರೇನ್‍ನಲ್ಲಿ ಸಂಪರ್ಕಕ್ಕೆ ಸಿಗದ ಮುಂಡಗೋಡದ ವಿದ್ಯಾರ್ಥಿನಿ

    ಉಕ್ರೇನ್‍ನಲ್ಲಿ ಸಂಪರ್ಕಕ್ಕೆ ಸಿಗದ ಮುಂಡಗೋಡದ ವಿದ್ಯಾರ್ಥಿನಿ

    ಕಾರವಾರ: ರಷ್ಯಾ-ಉಕ್ರೇನ್ ಯುದ್ದ ಪ್ರಾರಂಭವಾಗಿ ಇಂದಿಗೆ ಏಳು ದಿನಗಳಾಗಿದ್ದು, ಇದೀಗ ಹಾವೇರಿಯ ನವೀನ್ ಸಾವಿನ ನಂತರ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರ ಜೀವಕ್ಕೆ ಕಂಟಕ ತಂದಿದೆ. ಓರ್ವ ವಿದ್ಯಾರ್ಥಿನಿಯೊಬ್ಬರು ಸಂಪರ್ಕಕ್ಕೆ ಸಿಗದೇ ಅವರ ಕುಟುಂಬ ವರ್ಗದಲ್ಲಿ ಆತಂಕ ಸೃಷ್ಟಿಯಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ನಾಲ್ಕುಜನ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿದ್ದು ಓರ್ವ ವಿದ್ಯಾರ್ಥಿ ಮರಳಿ ಭಾರತಕ್ಕೆ ಆಗಮಿಸಿದ್ದಾರೆ. ಬನವಾಸಿಯ ಇಮ್ರಾನ್, ಸ್ನೇಹಾ, ರೊಮೇನಿಯಾ ಗಡಿಯಲ್ಲಿ ಆರಾಮವಾಗಿದ್ದಾರೆ. ಆದರೇ ಖಾರ್ಕಿವ್ ನಲ್ಲಿ ಸಿಲುಕಿರುವ ಮುಂಡಗೋಡ ಮೂಲದ ನಾಝಿಯಾರಿಗೆ ಓನ್ ರಿಸ್ಕ್‍ನಲ್ಲಿ ರೊಮೇನಿಯಾಕ್ಕೆ ಬರುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿತ್ತು. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

    ಸೂಚನೆಯ ಹಿನ್ನೆಯಲ್ಲಿ ಅನಿವಾರ್ಯವಾಗಿ ಯುದ್ಧ ನಡೆಯುತ್ತಿರುವ ಖಾರ್ಕಿವ್‍ನನ್ನು ತೊರೆದಿದ್ದಾರೆ. ಆದರೇ ಇದೀಗ ಇವರ ಸಂಪರ್ಕ ಕಡಿತವಾಗಿದ್ದು ಇವರ ಬಗ್ಗೆ ಕೇಂದ್ರ ಹಾಗೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ದೊರೆಯುತಿಲ್ಲ. ಸದ್ಯ ಅವರ ಕುಟುಂಬದ ಸಂಪರ್ಕದಲ್ಲಿ ಜಿಲ್ಲಾಡಳಿತ ಅಧಿಕಾರಿಗಳಿದ್ದು ಯಾವುದೇ ತೊಂದರೆಗಳಾಗದೇ ರೊಮೇನಿಯಾ ಗಡಿ ತಲುಪುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತ್‍ಪೇ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ

    ಉತ್ತರ ಕನ್ನಡ ಜಿಲ್ಲೆಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಆದರೇ ಖಾರ್ಕಿವ್‍ನಿಂದ ಹೊರಟ ನಾಝಿಯಾ ಈವರೆಗೂ ಸಂಪರ್ಕಕ್ಕೆ ಸಿಗದಿರುವುದು ಕುಟುಂಬ ವರ್ಗಕ್ಕೆ ಆತಂಕ ಎದುರಾಗುವಂತೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಮ್ಮ ಮಗಳನ್ನು ಸುರಕ್ಷಿತವಾಗಿ ಕರೆತರುವಂತೆ ಕುಟುಂಬವು ಮನವಿ ಮಾಡಿಕೊಂಡಿದೆ. ಕಾರವಾರದಲ್ಲಿ ಸಹ ಜನಶಕ್ತಿ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ತಮ್ಮ ಜಿಲ್ಲೆಯವರನ್ನು ಸುರಕ್ಷಿತವಾಗಿ ಕರೆತರುವಂತೆ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದಾರೆ.

  • ತಂದೆಯ ತಿಥಿ ಕಾರ್ಯದ ದಿನವೇ ಮಗಳ ದಾರುಣ ಸಾವು

    ತಂದೆಯ ತಿಥಿ ಕಾರ್ಯದ ದಿನವೇ ಮಗಳ ದಾರುಣ ಸಾವು

    ಬೆಂಗಳೂರು: ತಂದೆಯ ತಿಥಿ ಕಾರ್ಯಕ್ಕೆಂದು ಮಗಳು ಅಡುಗೆ ಮಾಡುವಾಗ ಸಿಲಿಂಡರ್ ಬ್ಲ್ಯಾಸ್ಟ್ ಆಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕೆ ಎಸ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ.

    ಮಗಳು ಪರಮೇಶ್ವರಿ (42) ಮೃತ ಮಹಿಳೆ. ಕಾಶಿನಾಥ್‍ರ 6ನೇ ವರ್ಷದ ಪುಣ್ಯತಿಥಿ ಹಿನ್ನೆಲೆ ಕುಟುಂಬಸ್ಥರು ತಿಥಿ ಕಾರ್ಯಕ್ಕೆ ಮಾಂಸಾಹಾರ ಅಡುಗೆ ಮಾಡಲು ಸಿಲಿಂಡರ್ ತರಿಸಿದ್ದರು. ಮನೆ ಚಿಕ್ಕದಾಗಿದ್ದು ಕೋಣೆಯಲ್ಲೇ ಸ್ಟೌವ್ ಇಟ್ಟು ಅಡುಗೆ ಮಾಡಲು ತಯಾರಿ ನಡೆಸಿದ್ದರು. ಇದೇ ವೇಳೆ ಗ್ಯಾಸ್ ಸೋರಿಕೆಯಾಗಿ ಸ್ಟೌವ್ ಬೆಂಕಿಯ ತೀವ್ರತೆಗೆ ಗ್ಯಾಸ್ ಫ್ಲೇಮ್ ದೊಡ್ಡದಾಗಿ ಹೊತ್ತಿಕೊಂಡಿದೆ. ಇದನ್ನೂ ಓದಿ: ಆಫ್‍ಲೈನ್ ಕ್ಲಾಸ್‍ಗೆ ಹೋಗು ಅಂದಿದ್ದಕ್ಕೆ ಹುಡುಗಿ ಆತ್ಮಹತ್ಯೆ

    ಬೆಂಕಿಯ ತೀವ್ರತೆಯ ಪರಿಣಾಮ ಕಾಶಿನಾಥ್‍ರ ಪತ್ನಿ ಸೌಭಾಗ್ಯ (75) ದೇಹ ಹೆಚ್ಚು ಸುಟ್ಟಿದೆ. ಮಗ ಶರವಣ (43) ತಲೆ ಮತ್ತು ಕೈ ಕಾಲು, ಹೊಟ್ಟೆ ಭಾಗ ಸುಟ್ಟಿದೆ. ಸಂಬಂಧಿ ಪರಮಶಿವಂ (47) ಎರಡು ಕೈ ಕಾಲು ಸುಟ್ಟು ಹೋಗಿದೆ. ಪರಮಶಿವಂ ಪತ್ನಿ ಭುವನೇಶ್ವರಿ (40)ತಲೆ, ಎರಡು ಕೈ ಮತ್ತು ಒಂದು ಕಾಲು ಸುಟ್ಟಿದೆ. ಮತ್ತೊಬ್ಬ ಸಂಬಂಧಿ ಮಾಲಾ (60) ಕೈ , ಕತ್ತಿನ ಭಾಗ ಸುಟ್ಟಿದ್ದು, ಗಾಯಾಳುಗಳಿಗೆ ವಿಕ್ಟೋರಿಯಾ ಬರ್ನಿಂಗ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ರಾಜಧಾನಿಯಲ್ಲಿ ಮತ್ತೆ ಶುರುವಾಯ್ತು ದುಷ್ಕರ್ಮಿಗಳ ಪುಂಡಾಟ!

    ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

    ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

    ಪಾಟ್ನಾ: ಮತ್ತೋರ್ವ ಮಹಿಳೆಯನ್ನು ಮದುವೆಯಾಗಲು ಹೊರಟಿದ್ದ ವ್ಯಕ್ತಿಯನ್ನು ಲೈಟ್ ಕಂಬಕ್ಕೆ ಕಟ್ಟಿ ಅತ್ತಿಗೆ ಥಳಿಸಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕತಿಹಾರ್ ಜಿಲ್ಲೆಯ ಅಜಮ್‍ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಿಕ್‍ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೊಹಮ್ಮದ್ ಅಬಿದ್ ಮಹಿಳೆಯೊಬ್ಬರನ್ನು ಪ್ರೀತಿಸುತ್ತಿದ್ದನು ಮತ್ತು ಆಕೆಯನ್ನು ಮದುವೆಯಾಗಲು ನ್ಯಾಯಾಲಯಕ್ಕೆ ಹೋಗುತ್ತಿರುವುದನ್ನು ತಿಳಿದ ಪತ್ನಿ ಸನಾ ಖಾತೂನ್ ಆತನನ್ನು ತಡೆಯಲು ವಿಫಲವಾದಾಗ ಕುಟುಂಬಸ್ಥರಿಗೆ ತಿಳಿಸಿದ್ದಾಳೆ.

    ಮುಂಬೈನಲ್ಲಿ ವಾಸಿಸುತ್ತಿದ್ದ ಅಬಿದ್ ಪಕ್ಕದ ಹಳ್ಳಿಯ ನಿವಾಸಿಯಾಗಿದ್ದ ಮಹಿಳೆಯನ್ನು ಪ್ರೀತಿಸುತ್ತಿದ್ದರಿಂದ ತನಗೆ ಹಣ ಕಳುಹಿಸುವುದನ್ನು ನಿಲ್ಲಿಸಿದ್ದ ಎಂದು ಪತ್ನಿ ಸನಾ ಖಾತೂನ್ ಆರೋಪಿಸಿದ್ದಾರೆ. ಇದನ್ನೂ ಓದಿ: ಭವಿಷ್ಯದ ದಿನಗಳಲ್ಲಿ ವಾಹನ ಚಾಲನೆ ಮಾಡುವಾಗ ಫೋನ್‍ನಲ್ಲಿ ಮಾತಾಡಿದ್ರೆ ಅದು ಅಪರಾಧವಲ್ಲ: ನಿತಿನ್ ಗಡ್ಕರಿ

    ಅಬಿದ್ ತನ್ನ ಗೆಳತಿಯನ್ನು ಮದುವೆಯಾಗುವಂತೆ ಮನವೊಲಿಸಿ, ಶನಿವಾರ ಆಕೆಯನ್ನು ಮದುವೆಯಾಗಲು ನ್ಯಾಯಾಲಯಕ್ಕೆ ಹೋಗುತ್ತಿದ್ದನು. ಅಬಿದ್ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಆತನ ಪತ್ನಿ ಸನಾ ಆತನನ್ನು ತಡೆಯಲು ಪ್ರಯತ್ನಿಸಿದ್ದಾಳೆ. ಆದರೆ ಸಾಧ್ಯವಾಗದ ಕಾರಣ ಕೊನೆಗೆ ಅಬಿದ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ನಂತರ ಕೂಡಲೇ ಕುಟುಂಬಸ್ಥರು ಅಬಿದ್ ಹಿಡಿದು ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ.

    ಅಬಿದ್ ಒಪ್ಪಿಗೆ ಮೇರೆಗೆ ಆತನಿಗೆ ಮದುವೆ ಮಾಡಲಾಗಿತ್ತು. ಆದರೀಗ ಪತ್ನಿಯನ್ನು ಬಿಟ್ಟು ಬೇರೆ ಮದುವೆಯಾಗಲು ಮುಂದಾಗಿದ್ದಾನೆ. ಪತ್ನಿಗೆ ದ್ರೋಹ ಬಗೆದಿದ್ದಕ್ಕೆ ತಕ್ಕ ಪಾಠ ಕಲಿಸಬೇಕೆಂದು ಥಳಿಸಿಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಆಧುನಿಕ ಜಿನ್ನಾ : ಹಿಮಂತ ಬಿಸ್ವಾ ಶರ್ಮಾ

  • ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

    ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

    ಬೆಂಗಳೂರು: ಬೆಳಗಾವಿ ಮಾತ್ರವಲ್ಲ ಬೆಂಗಳೂರಿನಲ್ಲೂ ಅನ್ಯಭಾಷಿಕರ ದರ್ಬಾರ್ ಆರಂಭವಾಗಿದೆ. ಪಬ್‍ನಲ್ಲಿ ಕನ್ನಡ ಹಾಡು ಕೇಳೋದೇ ತಪ್ಪಾ ಅನ್ನೋ ಪ್ರಶ್ನೆ ಎದ್ದಿದೆ. ಕನ್ನಡ ಹಾಡು ಕೇಳಿದ್ದಕ್ಕೆ ಡಿಜೆ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಕೋರಮಂಗಲದ ಬದ್ಮಾಶ್ ಹ್ಯಾಂಗೋವರ್ ಪಬ್‍ನಲ್ಲಿ ಈ ಘಟನೆ ನಡೆದಿದೆ. ವಿವೇಕನಗರದ ನಿವಾಸಿ ಸುಮಿತಾ ಫ್ಯಾಮಿಲಿ ನಿನ್ನೆ ರಾತ್ರಿ ಬದ್ಮಾಶ್ ಪಬ್‍ನಲ್ಲಿ ಸಹೋದರ ನಂದಕಿಶೋರ್ ಬರ್ತ್ ಡೇ ಪಾರ್ಟಿಗೆ ಬಂದಿತ್ತು. ಬರೀ ಅನ್ಯಭಾಷೆ ಹಾಡುಗಳನ್ನೇ ಪ್ಲೇ ಮಾಡ್ತಿದ್ದ ಡಿಜೆಗೆ ಕನ್ನಡ ಹಾಡು ಹಾಕಿ ಅಂತ ಸುಮಿತಾ ಕುಟುಂಬ ಕೇಳಿಕೊಂಡಿದೆ. ಈ ವೇಳೆ ಡಿಜೆ, ಕನ್ನಡ ಗಿನ್ನಡ ಇಲ್ಲ, ಕನ್ನಡ ಬೇಕು ಅಂದ್ರೇ ಈ ಪಬ್ ಗೆ ಬರಬೇಡಿ ಎಂದು ಆವಾಜ್ ಹಾಕಿದ್ದಾನೆ. ಇದನ್ನೂ ಓದಿ: 40 ವರ್ಷಗಳ ನಂತರ ತನ್ನ ಮೂಲ ಹುಡುಕುತ್ತಾ ಬಂದ ಸ್ವೀಡನ್ ಪ್ರಜೆ!

    ಆವಾಜ್ ಮಾತ್ರವಲ್ಲ ಡಿಜೆ ಸಿದ್ದಾರ್ಥ ಅಲಿಯಾಸ್ ಡಿಜೆ ಅಪೋಸಿಟ್ ಹಲ್ಲೆ ಮಾಡಲು ಸಹ ಮುಂದಾಗಿದ್ದ. ರಾತ್ರಿ 8:30 ರಿಂದ 12:30ರ ವರೆಗೂ ಕೇಳಿಕೊಂಡ್ರು ಕನ್ನಡ ಸಾಂಗ್ ಪ್ಲೇ ಮಾಡಲೇ ಇಲ್ಲ ಎಂದು ಕುಟುಂಬ ಆರೋಪಿಸಿದೆ. ಇದರಿಂದ ಬೆಂಗಳೂರಿನಲ್ಲಿ ಕನ್ನಡಿಗರಿಗೆ ಹಾಗೂ ಕನ್ನಡಕ್ಕೆ ಕವಡೆ ಕಾಸಿನ ಕಿಮ್ಮತ್ತು ಎಂಬುದು ಸ್ಪಷ್ಟವಾಗಿದೆ. ಕನ್ನಡಿಗರು ಬೆಂಗಳೂರಿನ ಪಬ್ ಗೆ ಹೋಗೊ ಹಾಗೇ ಇಲ್ವಾ, ಪಬ್ ಗೆ ಹೋದ್ರೆ ಕನ್ನಡ ಸಾಂಗ್ ಹಾಕಿ ಅಂತ ಕೇಳಲೇಬಾರದಾ ಎಂಬ ಅನುಮಾನ ಮೂಡಿದೆ.

  • ಬಡ್ಡಿ ಹಾವಳಿಗೆ ಬೆಂದು ಹೋದ ಶಿಕ್ಷಕಿಯ ಕುಟುಂಬ

    ಬಡ್ಡಿ ಹಾವಳಿಗೆ ಬೆಂದು ಹೋದ ಶಿಕ್ಷಕಿಯ ಕುಟುಂಬ

    ಬಾಗಲಕೋಟೆ: ರಾಮದುರ್ಗದಲ್ಲಿ ಶಿಕ್ಷಕಿಯ ಕುಟುಂಬವೊಂದು ಬಡ್ಡಿ ಹಾವಳಿಗೆ ಬೆಂದು ಹೋಗಿದ್ದು, ನೀಡಿದ್ದ ಸಾಲ ಮರುಪಾವತಿಸಿಲ್ಲ ಎಂದು ಮನೆಯಿಂದ ಹೊರಹಾಕಲಾಗಿದೆ.

    ರಮೇಶ ಕರಡಿಗುಡ್ಡ, ಅನ್ನಪೂರ್ಣ ಕರಡಿಗುಡ್ಡ ಬಡ್ಡಿ ಹಾವಳಿಗೆ ಬೆಂದ ಕುಟುಂಬದ ಸದಸ್ಯರು. ದುರಳರು ಮನೆಯಲ್ಲಿ ಇರುವ ವಸ್ತುಗಳನ್ನು ಹೊರಗೆ ಹಾಕಿದ್ದಲ್ಲದೆ ಮನೆಯವರನ್ನೂ ಸಹ ಹೊರಗೆ ಹಾಕಿದ್ದಾರೆ. ಇದನ್ನೂ ಓದಿ: ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು – ಮಹಿಳೆ ಸಾವು

    BRIBE

    ಈ ವೇಳೆ ಕುಟುಂಬ ಮನೆ ಮುಂದೆ ಗೃಹೋಪಯೋಗಿ ವಸ್ತುಗಳನ್ನು ಇಟ್ಟುಕೊಂಡು ಕಣ್ಣೀರಿಡುತ್ತಿದ್ದಾರೆ. ಕರಡಿಗುಡ್ಡ ಕುಟುಂಬದವರು 2017ರಲ್ಲಿ ಸುರಕೋಡ ಎಂಬುವವರ ಬಳಿ 9 ಲಕ್ಷ ರೂ. ಸಾಲ ಪಡೆದಿದ್ದರು. ಆ ಸಾಲದ ಬಡ್ಡಿ ತೀರಿಸಲು 2018ರಲ್ಲಿ ಸಂಭಂದಿ ವಿಠ್ಠಲ ಕರಡಿಗುಡ್ಡ ಬಳಿ 15 ಲಕ್ಷ ರೂ. ಸಾಲ ಪಡೆದಿದ್ದರು. ರಮೇಶ್ ಅಣ್ಣನ ಮಗ ವಿಠ್ಠಲ್‍ಗೆ ಮನೆ ಪತ್ರ ನೀಡಿ ಎರಡೂವರೆ ಪರ್ಸೆಂಟ್‍ರಷ್ಟು ಬಡ್ಡಿಯ ಮೇಲೆ ಸಾಲ ಪಡೆದಿದ್ದರು. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ

    ಸಾಲ ನೀಡಿದ ನಾಲ್ಕೇ ತಿಂಗಳಲ್ಲಿ ವಿಠ್ಠಲ್ ರಮೇಶರವರ ಮನೆಯನ್ನು ಬಾಗಲಕೋಟೆ ಮೂಲದ ಪುಂಡಲಿಕ ಸತ್ಯಪ್ಪ ಮೇಟಿಗೆ ಮಾರಾಟ ಮಾಡಲು ಹೊರಟಿದ್ದರು ಎಂಬ ಆರೋಪ ವ್ಯಕ್ತವಾಗಿದೆ. ಬೆಳ್ಳಂಬೆಳಗ್ಗೆ ಮೂವತ್ತರಿಂದ ನಲವತ್ತು ಜನ ರಮೇಶ ಕರಡಿಗುಡ್ಡರವರ ಮನೆಗೆ ನುಗ್ಗಿ ಗಲಾಟೆ ಮಾಡಲಾರಂಭಿಸಿದ್ದಾರೆ. ಈ ಕುರಿತು ಮೇಟಿ ಕುಟುಂಬದ ಸದಸ್ಯರು ವಿಠ್ಠಲ ಕರಡಿಗುಡ್ಡ ಕುಟುಂಬ ಸದಸ್ಯರ ವಿರುದ್ಧ ಆರೋಪ ಮಾಡಿದ್ದಾರೆ.

    POLICE JEEP

    ಸಾಲ ನೀಡುವಂತೆ ಮನೆಯಲ್ಲಿರುವ ವಸ್ತುಗಳನ್ನು ಹೊರಗೆ ಹಾಕಿ ದಬ್ಬಾಳಿಕೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಅಂತಾ ಶಿಕ್ಷಕಿ ಅನ್ನಪೂರ್ಣ ಕರಡಿಗುಡ್ಡ ಆರೋಪಿಸಿದ್ದಾರೆ.

  • ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ತುಮಕೂರು: ವಾಹನ ಖರೀದಿಗೆ ಮಹೀಂದ್ರಾ ಶೋ ರೂಂಗೆ ಬಂದು ಅವಮಾನಕ್ಕೊಳಗಾದ ರೈತನ ಮನೆಗೆ ಇದೀಗ ಮಹೀಂದ್ರ ಗೂಡ್ಸ್ ವಾಹನ ಬಂದಿದೆ. ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ ಅವರು ಟ್ವೀಟ್ ಮಾಡಿ ರೈತನಿಗೆ ಶುಭ ಕೋರಿದ್ದಾರೆ.

    ರೈತ ಕೆಂಪೇಗೌಡಗೆ ಕಂಪನಿ ವಾಹನ ಡೆಲಿವರಿ ಮಾಡಿದೆ. ಈ ಕುರಿತು ಸ್ವತಃ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ರೈತ ಕೆಂಪೇಗೌಡರು ಮಹಿಂದ್ರಾ ಗೂಡ್ಸ್ ವಾಹನ ಖರೀದಿ ಮಾಡಿದ್ದಾರೆ. ಇಂದು ಮಹೀಂದ್ರಾ ಆಟೋಮೋಟಿವ್, ಕೆಂಪೇಗೌಡರಿಗೆ ವಾಹನ ಡೆಲಿವರಿ ನೀಡಿದೆ. ಈ ಬಗ್ಗೆ ರೈತ ಕೆಂಪೇಗೌಡರ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 165 ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ ಭಾರತ

    ಟ್ವೀಟ್‍ನಲ್ಲಿ ಏನಿದೆ?: ಜನವರಿ 21ರಂದು ನಮ್ಮ ಡೀಲರ್ ಬಳಿ ಕೆಂಪೇಗೌಡ ಮತ್ತು ಆತನ ಸ್ನೇಹಿತರು ಬಂದಾಗ ನಡೆದ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಭರವಸೆ ನೀಡಿದಂತೆ ಘಟನೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಮಹೀಂದ್ರಾ ಆಯ್ಕೆ ಮಾಡಿದ್ದಕ್ಕಾಗಿ ನಾವು ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸುತ್ತೇವೆ. ನಾವು ಅವರನ್ನು ಮಹೀಂದ್ರಾ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.

    ನಡೆದಿದ್ದೇನು?: ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಯುವರೈತ ಕೆಂಪೇಗೌಡ, ತುಮಕೂರಿನ ರಾಮನಪಾಳ್ಯದಲ್ಲಿ ಮಹೀಂದ್ರಾ ಶೋ ರೂಂಗೆ ವಾಹನ ಖರೀದಿಗೆ ಹೋಗಿದ್ದರು. ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಅವಮಾನ ಮಾಡಿದ್ದರು. ಬೊಲೆರೋ ಗೂಡ್ಸ್ ವಾಹನ ಖರೀದಿಸಲು ಶೋರೂಂಗೆ ಬಂದಿದ್ದ ರೈತನಿಗೆ ಅವಮಾನ ಮಾಡಲಾಗಿತ್ತು.

    ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಎಂದು ಸೇಲ್ಸ್ ಏಜೆಂಟ್, ಕೆಂಪೇಗೌಡರನ್ನು ಅವಮಾನಿಸಿದ್ದರು. ಅವಮಾನಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ಆನಂದ್ ಮಹೀಂದ್ರಾ ಅವರು ಗೋಡ್ಸ್ ಗಾಡಿಯನ್ನು ರೈತನ ಮನೆಗೆ ತಲುಪಿಸಿದ್ದಾರೆ.

  • 74 ವರ್ಷಗಳ ನಂತ್ರ ಸೋದರನ ಭೇಟಿಗೆ ಬಂದ ಭಾರತೀಯನಿಗೆ ಪಾಕಿಸ್ತಾನ ವೀಸಾ!

    74 ವರ್ಷಗಳ ನಂತ್ರ ಸೋದರನ ಭೇಟಿಗೆ ಬಂದ ಭಾರತೀಯನಿಗೆ ಪಾಕಿಸ್ತಾನ ವೀಸಾ!

    ಇಸ್ಲಾಮಾಬಾದ್: 74 ವರ್ಷಗಳ ನಂತರ ಕರ್ತಾರ್‌ಪುರದಲ್ಲಿ ಪಾಕಿಸ್ತಾನಿ ಸಹೋದರನನ್ನು ಭೇಟಿಯಾದ ಭಾರತೀಯನಿಗೆ ಪಾಕಿಸ್ತಾನ ವೀಸಾ ಸಿಕ್ಕಿದೆ.

    1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಮೊಹಮ್ಮದ್ ಸಿದ್ದಿಕ್ ಮತ್ತು ಅವರ ಹಿರಿಯ ಸಹೋದರ ಹಬೀಬ್ ಬೇರೆ ಆಗಿದ್ದರು. ಈ ವೇಳೆ ಇನ್ನೂ ಮಗುವಾಗಿದ್ದ ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದಲ್ಲಿಯೇ ಉಳಿದುಕೊಂಡರು. ಆದರೆ ಹಬೀಬ್ ಅವರು ಭಾರತದಲ್ಲಿಯೇ ವಾಸಿಸುತ್ತಾ ಬೆಳೆದಿದ್ದರು. ಎರಡು ದೇಶಗಳ ಮಧ್ಯೆ ಹಂಚಿ ಹೋಗಿದ್ದ ಈ ಇಬ್ಬರು ಸಹೋದರರು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‍ನಿಂದ ಭಾರತಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್ ನಲ್ಲಿ ಮತ್ತೆ ಒಂದಾಗಿದ್ದರು. ಇದನ್ನೂ ಓದಿ: 74 ವರ್ಷಗಳ ಬಳಿಕ ಮತ್ತೆ ಒಂದಾದ ಸಹೋದರರು – ಭಾವನಾತ್ಮಕ ವೀಡಿಯೋ ವೈರಲ್

    74 ವರ್ಷಗಳ ಬಳಿ ಒಬ್ಬರನ್ನೊಬ್ಬರು ನೋಡಿದ ಸಹೋದರರು ಬಿಗಿದಪ್ಪಿಕೊಂಡು ಆನಂದದಿಂದ ಕಣ್ಣೀರು ಸುರಿಸಿರುವುದನ್ನು ವೀಡಿಯೋ ಈ ಹಿಂದೆ ವೈರಲ್ ಆಗಿತ್ತು. ಇದೀಗ ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಖಾನ್‍ಗೆ ಗಡಿಯಾಚೆಗಿನ ಅವರ ಸಹೋದರ ಮತ್ತು ಇತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ವೀಸಾವನ್ನು ನೀಡಿದೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಸೌಂದರ್ಯ – ಬಿಎಸ್‌ವೈ ಸೇರಿ ಕುಟುಂಬಸ್ಥರಿಂದ ಅಂತ್ಯಕ್ರಿಯೆ

    ಟ್ವೀಟ್‍ನಲ್ಲಿ ಏನಿದೆ?: ಪಾಕಿಸ್ತಾನದ ಹೈಕಮಿಷನ್ ಸಿಕಾ ಖಾನ್‍ಗೆ ಪಾಕಿಸ್ತಾನದಲ್ಲಿರುವ ತನ್ನ ಸಹೋದರ, ಮುಹಮ್ಮದ್ ಸಿದ್ದಿಕ್ ಮತ್ತು ಇತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ವೀಸಾವನ್ನು ನೀಡುತ್ತದೆ. 1947ರಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು 74 ವರ್ಷಗಳ ನಂತರ ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನಲ್ಲಿ ಇತ್ತೀಚೆಗೆ ಮತ್ತೆ ಒಂದಾದರು ಎಂದಿ ಟ್ವೀಟ್ ಮಾಡಿ ತಿಳಿಸಿದೆ.

    2019ರ ನವೆಂಬರ್ನಲ್ಲಿ ಪಾಕಿಸ್ತಾನವು ವೀಸಾ ಮುಕ್ತ ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನ ಐತಿಹಾಸಿಕ ಉದ್ಘಾಟನೆಯು, ಜನರನ್ನು ಪರಸ್ಪರ ಹೇಗೆ ಹತ್ತಿರ ತರುತ್ತಿದೆ ಎಂಬುದಕ್ಕೆ ಇಬ್ಬರು ಸಹೋದರರ ಕಥೆಯು ಪ್ರಬಲ ನಿದರ್ಶನವಾಗಿದೆ ಎಂದು ಹೈಕಮಿಷನ್ ಟ್ವೀಟ್‍ನಲ್ಲಿ ತಿಳಿಸಿದೆ.

  • ಬ್ಯಾಂಕ್‍ನಲ್ಲಿ ಚಿನ್ನ ಅಡವಿಟ್ಟು ಕಳ್ಳತನವಾಗಿದೆಯೆಂದು ಸುಳ್ಳು ದೂರು ನೀಡ್ತಿದ್ದ `ಕಳ್ಳ ಕುಟುಂಬ’ ಅಂದರ್!

    ಬ್ಯಾಂಕ್‍ನಲ್ಲಿ ಚಿನ್ನ ಅಡವಿಟ್ಟು ಕಳ್ಳತನವಾಗಿದೆಯೆಂದು ಸುಳ್ಳು ದೂರು ನೀಡ್ತಿದ್ದ `ಕಳ್ಳ ಕುಟುಂಬ’ ಅಂದರ್!

    ಬೆಂಗಳೂರು: ಹಣಕ್ಕಾಗಿ ಕುಟುಂಬವೇ ಕಳ್ಳರಾದ ಇಂಟರೆಸ್ಟಿಂಗ್ ಸ್ಟೋರಿ ಇದಾಗಿದೆ. ಬ್ಯಾಂಕ್‍ನಲ್ಲಿ ಚಿನ್ನವನ್ನು ಅಡವಿಟ್ಟು, ಕಳ್ಳತನವಾಗಿದೆ ಎಂದು ಠಾಣೆಯಲ್ಲಿ ಸುಳ್ಳು ದೂರನ್ನು ನೀಡುತ್ತಿದ್ದ ಕುಟುಂಬವನ್ನು ಪೊಲೀಸರು ಬಂಧಿಸಿದ್ದಾರೆ.

    ಕುಟುಂಬದ ಯಜಮಾನ ರವಿ ಪ್ರಕಾಶ್, ಮಗ ಮಿಥುನ್ ಕುಮಾರ್. ಆತನ ಹೆಂಡತಿ ಸಂಗೀತಾ, ತಂಗಿ ಆಶಾ ಮತ್ತು ಆಕೆಯ ಗಂಡ ಚರಣ್ ಹಾಗೂ ಮಿಥುನ್ ಕುಮಾರ್ ಪ್ರಿಯತಮೆ ಅಸ್ಮಾ ಹಾಗೂ ಸ್ನೇಹಿತ ದೀಪಕ್ ಬಂಧಿತ ಆರೋಪಿಗಳಾಗಿದ್ದಾರೆ. ಕಳ್ಳ ಮಾರ್ಗದ ಮೂಲಕ ಹಣ ಮಾಡಲು ಹೋಗಿ ಈಗ ಇಡೀ ಕುಟುಂಬವೇ ಪರಪ್ಪನ ಅಗ್ರಹಾರ ಜೈಲು ಪಾಲಾಗಿದೆ. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

    ಬೆಂಗಳೂರು ಹೊರವಲಯದ ಸರ್ಜಾಪುರದಲ್ಲಿ ನಿವಾಸಿಯಾಗಿರುವ ಕುಟುಂಬವೊಂದು ಮನೆಯಲ್ಲಿದ್ದ ಚಿನ್ನ ಅಡವಿಟ್ಟು, ಚಿನ್ನ ಕಳುವಾಗಿದೆ ಎಂದು ಪೊಲೀಸರಿಗೆ ಸುಳ್ಳು ಮಾಹಿತಿ ನೀಡುತ್ತಿತ್ತು. ಪರಿಚಿತರ ಹೆಸರಿನಲ್ಲಿ ಚಿನ್ನ ಅಡವಿಡುತ್ತಿದ್ದ, ಕಳ್ಳ ಕುಟುಂಬದ ಸುಳ್ಳನ್ನು ಸರ್ಜಾಪುರ ಪೊಲೀಸರು ಬಯಲಿಗೆಳೆದಿದ್ದಾರೆ. ಇದನ್ನೂ ಓದಿ: UP Election – ಅಮಿತ್ ಶಾ ಮನೆ-ಮನೆ ಪ್ರಚಾರ

    ಕುಟುಂಬದ ಪ್ಲ್ಯಾನ್ ಏನು ಗೊತ್ತಾ?: ನಾವು ಇಡೀ ಕುಟುಂಬಸ್ಥರು ದೇವಸ್ಥಾನಕ್ಕೆ ಹೊರ ಹೋಗಿದ್ದೆವು. ಸುಮಾರು 25 ಲಕ್ಷ ಮೌಲ್ಯದ ಒಂದೂಕಾಲು ಕೆಜಿ ಚಿನ್ನ ಕಳ್ಳತನವಾಗಿದೆ ಎಂದು ಆರೋಪಿಗಳಲ್ಲಿ ಒಬ್ಬನಾದ ರವಿ ಪ್ರಕಾಶ್ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

    ಪ್ರಕರಣ ದಾಖಲಿಸಿಕೊಂಡ ಸರ್ಜಾಪುರ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಆರೋಪಿಗಳು ಮಾತ್ರ ಪತ್ತೆಯಾಗಿರಲಿಲ್ಲ. ಕೊನೆಗೆ ಮನೆಯವರ ಮೇಲೆ ಸಂಶಯ ಮೂಡಿ ತನಿಖೆಗಿಳಿದಾಗ ಸ್ಫೋಟಕ ಸತ್ಯ ಬಯಲಾಗಿದೆ. ಆರೋಪಿಗಳು ಈ ಹಿಂದೆ ಸಹ ಇದೇ ರೀತಿ ಯಶವಂತಪುರ ಸೇರಿದಂತೆ ಎರಡು ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದರು. ಒಡವೆ ಕಳವು ಪ್ರಕರಣ ದಾಖಲು ಮಾಡಿ ಒಡವೆ ಪಡೆದುಕೊಂಡಿದ್ದರು. ಈ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರ ತನಿಖೆಯ ದಿಕ್ಕು ಕಳ್ಳತನದ ದೂರು ನೀಡಿದ್ದ ಕುಟುಂಬಸ್ಥರ ಮೇಲೆ ಅನುಮನ ಮೂಡುವಂತೆ ಮಾಡಿದೆ.

    ನಂತರ ಪೊಲೀಸರು ದೂರುದಾರ ರವಿ ಪ್ರಕಾಶ್, ಮಗ ಮಿಥುನ್ ಕುಮಾರ್ ತನ್ನ ಸ್ನೇಹಿತ ದೀಪಕ್ ಮೂಲಕ ಬ್ಯಾಂಕೊಂದರಲ್ಲಿ ಒಡವೆಗಳನ್ನು ಗಿರವಿಯಿಡಿಸುತ್ತಾನೆ. ಉಳಿದವರು ಒಡವೆ ಕಳ್ಳತನವಾದಂತೆ ಪೊಲೀಸರಿಗೆ ನಂಬಿಸುವಂತೆ ನಾಟಕವಾಡುತ್ತಾರೆ. ಕೊನೆಗೆ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇಡೀ ಮನೆ ಮಂದಿಯನ್ನು ವಿಚಾರಣೆಗೊಳಪಡಿಸಿದಾಗ ತಮ್ಮ ಬಳಿ ಇರುವ ಎಲ್ಲಾ ಚಿನ್ನಾಭರಣವನ್ನು ಪರಿಚಿತನೊಬ್ಬನ ಮೂಲಕ ಗಿರವಿ ಇಟ್ಟು ಹಣ ಪಡೆದುಕೊಳ್ಳುವುದು. ಬಳಿಕ ದೂರು ನೀಡುವುದು ಗಿರವಿ ಇಟ್ಟ ಸ್ನೇಹಿತರ ಮೇಲೆಯೇ ಕೇಸು ದಾಖಲಿಸುವ ಹುನ್ನಾರ ನಡೆಸುವುದು ಇವರ ಪ್ಲ್ಯಾನ್ ಆಗಿತ್ತು ಎನ್ನುವ ಅಸಲಿ ಕಹಾನಿ ಬಯಲಾಗಿದೆ.