Tag: Family strife

  • ಕೌಟುಂಬಿಕ ಕಲಹ: ಕೆರೆಗೆ ಹಾರಿದ ಒಂದೇ ಕುಟುಂಬದ ಮೂವರು ಮಹಿಳೆಯರು

    ಕೌಟುಂಬಿಕ ಕಲಹ: ಕೆರೆಗೆ ಹಾರಿದ ಒಂದೇ ಕುಟುಂಬದ ಮೂವರು ಮಹಿಳೆಯರು

    ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆ ಮೂವರು ಮಹಿಳೆಯರು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾಗಡಿಯಲ್ಲಿ ನಡೆದಿದೆ.

    ಮಾಗಡಿ ಟೌನ್‍ನ ಗೌರಮ್ಮನ ಕೆರೆಗೆ ಮೂರು ಮಹಿಳೆಯರು ಹಾರಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ ಮೃತ ಮಹಿಳೆಯನ್ನು ಅಜ್ಜಿ ಶಾಂತಾ ಭಾಯಿ(50) ಎಂದು ಗುರುತಿಸಲಾಗಿದೆ. ಇವರು ಮಾಗಡಿ ಟೌನ್‍ನ ನೇಯಿಗೆ ಬೀದಿ ನಿವಾಸಿಯಾಗಿದ್ದರು. ಇದನ್ನೂ ಓದಿ: ಅನುಭವ ಮಂಟಪ ದಾಖಲೆಗಳನ್ನು ಪುರಾತತ್ವ ಇಲಾಖೆ ಪರಿಶೀಲಿಸಲಿದೆ: ಬೊಮ್ಮಾಯಿ 

    CRIME 2

    ಭಾನುವಾರ ಈ ಮೂರು ಮಹಿಳೆಯರು ಕೆರೆಗೆ ಹಾರಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಉಷಾ ಭಾಯಿ ಹಾಗೂ ನಿರ್ಮಲಾ ಭಾಯಿಯನ್ನು ರಕ್ಷಣೆ ಮಾಡಿದ್ದು, ಶಾಂತಾಭಾಯಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಮಾಡಿದ್ದು, ಇವರು ಒಂದೇ ಕುಟುಂಬದ ಮಹಿಳೆಯರು ಎಂಬುದು ತಿಳಿದುಬಂದಿದೆ. ಕೌಟುಂಬಿಕ ಕಲಹದಿಂದ ಇವರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.

    POLICE JEEP

    ಮಾಗಡಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೌಟುಂಬಿಕ ಕಲಹ – ಇಬ್ಬರು ಮಕ್ಕಳಿಗೆ ನೇಣು ಬಿಗಿದು, ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

    ಕೌಟುಂಬಿಕ ಕಲಹ – ಇಬ್ಬರು ಮಕ್ಕಳಿಗೆ ನೇಣು ಬಿಗಿದು, ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

    ಶಿವಮೊಗ್ಗ: ಕೌಟುಂಬಿಕ ಕಲಹದಿಂದಾಗಿ ಮನನೊಂದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಚೋರಡಿಯಲ್ಲಿ ನಡೆದಿದೆ.

    ಮೃತರನ್ನು ಜ್ಯೋತಿ (25), ಸಾನ್ವಿ (3) ಹಾಗೂ ಕುಶಾಲ್ (1) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಭೂಮಿಯಿಂದ ಭೀಕರ ಶಬ್ಧ – ಚಿಕ್ಕಬಳ್ಳಾಪುರದಲ್ಲಿ ಬೆಚ್ಚಿಬಿದ್ದ ಜನ

    SUICIDE

    ಮೃತ ಮಹಿಳೆ ಜ್ಯೋತಿ ಹಾಗೂ ಶಿವಮೂರ್ತಿ ಇಬ್ಬರೂ 5 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು, ಒಂದು ಗಂಡು ಮಗು ಇತ್ತು. ಶಿವಮೂರ್ತಿ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಕೆಲವು ಸಣ್ಣಪುಟ್ಟ ವಿಷಯಗಳಿಗೆ ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಇದೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 126 ಕೇಸ್ – 103 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

    CRIME 2

    ಇಂದು ಮಕ್ಕಳೊಂದಿಗೆ ಮನೆಯಲ್ಲೇ ಇದ್ದ ಜ್ಯೋತಿ ಮಕ್ಕಳಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಟುಂಬಸ್ಥರು ಮನೆಗೆ ವಾಪಸ್ ಬಂದು ನೋಡಿದಾಗಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಕುರಿತು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂಸಿ ಪೊಲೀಸರು ಶಿವಮೂರ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  • 2ನೇ ಪತ್ನಿಯ ಕತ್ತು ಕೊಯ್ದ ಪತಿ ಮಹಾಶಯ ಪರಾರಿ

    2ನೇ ಪತ್ನಿಯ ಕತ್ತು ಕೊಯ್ದ ಪತಿ ಮಹಾಶಯ ಪರಾರಿ

    ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎರಡನೇ ಪತ್ನಿಯ ಕತ್ತು ಕೊಯ್ದು ಪತಿಯೊಬ್ಬ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಪಟ್ರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಪತಿ ಸುರೇಶ್ ತನ್ನ ಎರಡನೇ ಪತ್ನಿ ಉಷಾ ಅವರ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್ ಪತ್ನಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಪ್ರಸ್ತುತ ಉಷಾ ಅವರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ

    ಏನಿದು ಘಟನೆ?
    ಅಂದರ್ಹಳ್ಳಿ ಗ್ರಾಮದ ಸುರೇಶ್ ಚಿಕ್ಕಬಳ್ಳಾಪುರ ಗೃಹರಕ್ಷಕದಳ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಮೊದಲ ಪತ್ನಿ ಇದ್ದರೂ ಉಷಾ ಜೊತೆ ಎರಡನೇ ಮದುವೆಯಾಗಿದ್ದ. ಇಬ್ಬರು ಪತ್ನಿಯರಿಗೂ ಇಬ್ಬರು ಮಕ್ಕಳು ಸಹ ಇದ್ದಾರೆ. ಆದ್ರೆ ಕಳೆದ 2-3 ವರ್ಷಗಳಿಂದ ಉಷಾ ಮತ್ತು ಸುರೇಶ್ ನಡುವೆ ದಾಂಪತ್ಯದಲ್ಲಿ ಬಿರುಕು ಮೂಡಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

    ಉಷಾ ತನ್ನ ಹಾಗೂ ತನ್ನಿಬ್ಬರ ಮಕ್ಕಳ ಜೀವನ ನಿರ್ವಹಣೆಗೆ ಜೀವನಾಂಶದ ಹಣ ಕೊಡುವಂತೆ ಲಾಯರ್ ಮೂಲಕ ಸುರೇಶ್ ಗೆ ನೋಟಿಸ್ ಕಳುಹಿಸಿದ್ದರು. ಇದರಿಂದ ರೋಸಿ ಹೋದ ಸುರೇಶ್ ತವರುಮನೆಯಲ್ಲಿದ್ದ ಉಷಾ ಅವರ ಮನೆಗೆ ಮಕ್ಕಳನ್ನ ನೋಡುವ ನೆಪದಲ್ಲಿ ಹೋಗಿದ್ದ. ಈ ವೇಳೆ ಮನೆಯಲ್ಲಿದ್ದ ಉಷಾ ಅವರ ಕತ್ತನ್ನ ಚಾಕುವಿನಿಂದ ಕೊಯ್ದು ಪರಾರಿಯಾಗಿದ್ದಾನೆ. ನಂತರ ಅಕ್ಕಪಕ್ಕದ ಮನೆಯವರು ಉಷಾ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಭ್ರಷ್ಟನಿಗೆ ಅಂಬಿ ಕಾಯಕ ಪ್ರಶಸ್ತಿ

    ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಸುರೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಶಾಲೆಯ ಕೊಠಡಿಯಲ್ಲೇ ಮುಖ್ಯಶಿಕ್ಷಕ ನೇಣಿಗೆ ಶರಣು

    ಶಾಲೆಯ ಕೊಠಡಿಯಲ್ಲೇ ಮುಖ್ಯಶಿಕ್ಷಕ ನೇಣಿಗೆ ಶರಣು

    ಚಿಕ್ಕಬಳ್ಳಾಪುರ: ವಸತಿ ಶಾಲೆಯ ಕೊಠಡಿಯಲ್ಲೇ ಮುಖ್ಯಶಿಕ್ಷಕನೊರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ನಡೆದಿದೆ.

    ನಗರದ ಪರಿಶಿಷ್ಠ ಜಾತಿ ವಸತಿ ನಿಲಯದಲ್ಲಿ ಮುಖ್ಯಶಿಕ್ಷಕರಾಗಿದ್ದ ಗಂಗಣ್ಣ (55) ಮೃತ ಶಿಕ್ಷಕ. ಕೌಟುಂಬಿಕ ಕಲಹ ಹಾಗೂ ಸಾಲಭಾದೆ ಶಂಕೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

    ಬೆಳಿಗ್ಗೆ ಎಂದಿನಂತೆ ವಸತಿ ಶಾಲೆಗೆ ಬಂದಿದ್ದ ಗಂಗಣ್ಣ ವಸತಿ ಶಾಲೆಯ ಮೊದಲ ಮಹಡಿಯ ಕೊಠಡಿಯೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಸಮಾಜಕಲ್ಯಾಣ ಇಲಾಖಾಧಿಕಾರಿಗಳು ಹಾಗೂ ಗೌರಿಬಿದನೂರು ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 3 ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ತಾಯಿ ಆತ್ಮಹತ್ಯೆ- 7ರ ಬಾಲಕಿ ಪಾರು

    3 ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ತಾಯಿ ಆತ್ಮಹತ್ಯೆ- 7ರ ಬಾಲಕಿ ಪಾರು

    ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೂವರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆ ಇಂಡಿ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.

    ಇಂಡಿ ತಾಲೂಕಿನ ಸಾತಪುರ ಗ್ರಾಮದವರಾದ ಲಕ್ಷ್ಮೀ ಪ್ರಕಾಶ ಬೂದಿಹಾಳ(35), 3 ವರ್ಷದ ಮಗು ಬೀರಪ್ಪ ಹಾಗೂ 1 ವರ್ಷದ ಮಗು ಅಂಕುಶ ಮೃತ ದುರ್ದೈವಿಗಳಾಗಿದ್ದಾರೆ. ಸೋಮವಾರ ತಡರಾತ್ರಿ ತಾಯಿ, ಇಬ್ಬರು ಮಕ್ಕಳೊಂದಿಗೆ ರೈಲ್ವೇ ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಘಟನೆಯಲ್ಲಿ ಅದೃಷ್ಟವಶಾತ್ 7 ವರ್ಷದ ಬಾಲಕಿ ದಾನಮ್ಮ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಬಾಲಕಿಯನ್ನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.