Tag: Family Man Season 3

  • ಫ್ಯಾಮಿಲಿ ಮ್ಯಾನ್-3 : ಫಸ್ಟ್ ಲುಕ್ ರಿವೀಲ್

    ಫ್ಯಾಮಿಲಿ ಮ್ಯಾನ್-3 : ಫಸ್ಟ್ ಲುಕ್ ರಿವೀಲ್

    ಫ್ಯಾಮಿಲಿ ಮ್ಯಾನ್ ಸೀಸನ್-1 ಹಾಗೂ ಸೀಸನ್-2 ಸೂಪರ್ ಹಿಟ್ ಆಗಿವೆ. ಇದೀಗ ಫ್ಯಾಮಿಲಿ ಮ್ಯಾನ್ ಸೀಸನ್-3 ಬರೋಕೆ ರೆಡಿಯಾಗಿದೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದ್ದು, ಸಾಕಷ್ಟು ನಿರೀಕ್ಷೆಗಳ ಜೊತೆಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಫಸ್ಟ್ ಲುಕ್ ನೋಡಿದವ್ರೆಲ್ಲ ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳುವ ತವಕದಲ್ಲಿದ್ದಾರೆ.

    ಮನೋಜ್ ಬಾಜ್ಪೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಫ್ಯಾಮಿಲಿ ಮ್ಯಾನ್ ಸೀರಿಸ್ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸೀಸನ್-3 ಹೇಗಿರುತ್ತೆ ಅನ್ನೋ ಕುತೂಹಲವನ್ನ ಹೆಚ್ಚು ಮಾಡಿದೆ. ರಾಜ್ & ಡಿಕೆ ನಿರ್ದೇಶನದಲ್ಲಿ ತಯಾರಾಗ್ತಿರುವ ಫ್ಯಾಮಿಲಿ ಮ್ಯಾನ್-3 ಯಾವೆಲ್ಲ ಎಲಿಮೆಂಟ್ ಹೊತ್ತುಕೊಂಡು ಬರಲಿದೆ ಅನ್ನೋ ಕೌತುಕ ಮತ್ತೊಂದು ಕಡೆ.

     

    View this post on Instagram

     

    A post shared by prime video IN (@primevideoin)

    ಮನೋಜ್ ಬಾಜ್ಪೆ ಮುಖ್ಯ ಪಾತ್ರಧಾರಿಯಾಗಿರುವ ಈ ಸಿರೀಸ್‌ನ ಪೋಸ್ಟರ್ ಸಾಕಷ್ಟು ಸ್ಟೋರಿಗಳನ್ನ ಹೇಳುತ್ತಿದೆ. ಫ್ಯಾಮಿಲಿ ಮ್ಯಾನ್ ಅತಿ ದೊಡ್ಡ ತಾರಾಬಳಗವನ್ನ ಹೊಂದಿರುವ ವೆಬ್ ಸಿರೀಸ್. ಬಾಲಿವುಡ್ ಅಷ್ಟೇ ಅಲ್ಲದೇ ಜಗತ್ತಿನಾದ್ಯಂತ ಈ ಫ್ಯಾಮಿಲಿ ಮ್ಯಾನ್ ಸೀರಿಸ್ ಪ್ರೇಕ್ಷಕರ ಮನಗೆದ್ದಿದೆ.

    ಅಮೇಜಾನ್ ಪ್ರೈಮ್ ತಮ್ಮ ಅಫೀಶಿಯಲ್ ಪೇಜ್‌ನಲ್ಲಿ ಪೋಸ್ಟರ್ ಪೋಸ್ಟ್ ಮಾಡಿದೆ. ಈ ಪೋಸ್ಟರ್ ನೋಡಿ ಅಭಿಮಾನಿಗಳು ಕಮೆಂಟ್ ಮೇಲೆ ಕಮೆಂಟ್ ಹಾಕುತ್ತಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಈ ಲೆವೆಲ್‌ಗೆ ಕ್ರೇಜ್ ಹುಟ್ಟುಹಾಕಿದೆ.