Tag: family court

  • Kerala |  ಕೌಟುಂಬಿಕ ನ್ಯಾಯಾಲಯದಾಚೆ ವಿವಾದ ಇತ್ಯರ್ಥಕ್ಕೆ ‘ಸಾಮರಸ್ಯ ತಾಣ’

    Kerala | ಕೌಟುಂಬಿಕ ನ್ಯಾಯಾಲಯದಾಚೆ ವಿವಾದ ಇತ್ಯರ್ಥಕ್ಕೆ ‘ಸಾಮರಸ್ಯ ತಾಣ’

    ತಿರುವಂತನಪುರಂ: ಕೌಟುಂಬಿಕ ವ್ಯಾಜ್ಯಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸುವುದನ್ನು ಪ್ರೋತ್ಸಾಹಿಸುವುದಕ್ಕಾಗಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಾಮರಸ್ಯ ತಾಣ ಎಂಬ ವಿಶಿಷ್ಟ ಯೋಜನೆ ಪ್ರಾರಂಭಿಸಿದೆ.

    ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಕೆಎಲ್‌ಎಸ್‌ಎ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಅವರು ಯೋಜನೆ ಉದ್ಘಾಟಿಸಿದರು.ಇದನ್ನೂ ಓದಿ: ಸಿಎಂ ಪತ್ನಿಗೆ ಇಡಿ ನೋಟಿಸ್ ರಾಜಕೀಯ ಅನ್ನೋಕ್ಕಾಗಲ್ಲ, ಉತ್ತರ ಕೊಡಲಿ – ಸತೀಶ್ ಜಾರಕಿಹೊಳಿ

    ದುಬಾರಿ ಮತ್ತು ಸಮಯ ಹಿಡಿಯುವ ವ್ಯಾಜ್ಯಗಳನ್ನು ತಪ್ಪಿಸುವ ಮೂಲಕ ಹಾಗೂ ಕಕ್ಷಿದಾರರ ನಡುವೆ ಸೌಹಾರ್ದಯುತವಾಗಿ ವ್ಯಾಜ್ಯಗಳನ್ನು ಬಗೆಹರಿಸುವ ಮೂಲಕ ನ್ಯಾಯಾಲಯಗಳ ಮೇಲಿನ ಪ್ರಕರಣದ ಬಾಕಿಯ ಹೊರೆಯನ್ನು ‘ಸಾಮರಸ್ಯ ತಾಣ’ ತಗ್ಗಿಸುವ ನಿರೀಕ್ಷೆಯಿದೆ. ಈ ಯೋಜನೆ ಆಪ್ತಸಮಾಲೋಚನೆ, ಮಧ್ಯಸ್ಥಿಕೆ ಸೇವೆ, ಕಾನೂನು ಮಾರ್ಗದರ್ಶನ ಅಥವಾ ಕಾನೂನು ನೆರವು, ಭಾವನಾತ್ಮಕ ಬೆಂಬಲ ಹಾಗೂ ಕ್ಷೇಮ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುತ್ತದೆ. ದಾವೆದಾರರು ಯೋಜನೆಯಡಿ ಸೇವೆ ಪಡೆಯಲು ರಾಜ್ಯದ ಹದಿನಾಲ್ಕು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಲ್ಲಿ ಒಂದನ್ನು ಸಂಪರ್ಕಿಸಬಹುದು.

    ವಿವಾಹ ಸಂಬಂಧಗಳಷ್ಟೇ ಅಲ್ಲದೆ, ಸಹಜೀವನದಂತಹ ಮದುವೆಯ ಸ್ವರೂಪದಲ್ಲಿನ ಸಂಬಂಧಗಳು ಸಹ ಸಾಮರಸ್ಯ ತಾಣದ ವ್ಯಾಪ್ತಿಗೆ ಬರುತ್ತವೆ. ಪ್ರಕ್ರಿಯೆಯಲ್ಲಿ ಹಂಚಿಕೊಳ್ಳಲಾಗುವ ಎಲ್ಲಾ ಚರ್ಚೆ, ದಾಖಲೆಗಳು ಮತ್ತು ಮಾಹಿತಿ ಕಟ್ಟುನಿಟ್ಟಾಗಿ ಗೌಪ್ಯವಾಗಿರುತ್ತದೆ. ಒಂದೊಮ್ಮೆ ಜಾರಿಗೊಳಿಸಬೇಕಾದ ನಿಯಮವನ್ನು ರಾಜಿ ಒಪ್ಪಂದ ಹೊಂದಿದ್ದರೆ, ಅಂತಹ ಪ್ರಕರಣವನ್ನು ಲೋಕ್ ಅದಾಲತ್ ಮುಂದೆ ಮಂಡಿಸಬಹುದು. ನಂತರ ಅದು ಒಪ್ಪಂದದ ನಿಯಮಗಳ ಆಧಾರದ ಮೇಲೆ ತೀರ್ಪು ನೀಡಲಿದೆ.

    ಈ ಪ್ರಕ್ರಿಯೆ ರಾಜಿ ಸಂಧಾನವನ್ನು ಔಪಚಾರಿಕವಾಗಿ ಗುರುತಿಸಲು ಮತ್ತು ಕಾನೂನುಬದ್ಧವಾಗಿ ಹಿಡಿದಿಡಲು ಅನುಮತಿಸುತ್ತದೆ. ಇದು ದೀರ್ಘಾವಧಿಯ ದಾವೆಯ ಅಗತ್ಯವಿಲ್ಲದೆಯೇ ರಾಜಿ ಸಂಧಾನ ಪಾಲನೆ ಖಚಿತಪಡಿಸಿಕೊಳ್ಳಲು ಪಕ್ಷಕಾರರಿಗೆ ತ್ವರಿತ ಮತ್ತು ಹೆಚ್ಚು ದಕ್ಕಬಹುದಾದ ಮಾರ್ಗ ಕಲ್ಪಿಸುತ್ತದೆ.ಇದನ್ನೂ ಓದಿ: ಸಿಎಂ ಪತ್ನಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ – ಡಿಕೆಶಿ

  • ಪ್ರತಿ ತಿಂಗಳು ಮಾಜಿ ಪತಿಗೆ 10 ಸಾವಿರ ರೂ. ಜೀವನಾಂಶ- ಮಹಿಳೆಗೆ ಬಾಂಬೆ ಹೈಕೋರ್ಟ್ ಆದೇಶ

    ಪ್ರತಿ ತಿಂಗಳು ಮಾಜಿ ಪತಿಗೆ 10 ಸಾವಿರ ರೂ. ಜೀವನಾಂಶ- ಮಹಿಳೆಗೆ ಬಾಂಬೆ ಹೈಕೋರ್ಟ್ ಆದೇಶ

    ಮುಂಬೈ: ವ್ಯಕ್ತಿಯೊಬ್ಬನಿಗೆ ಪ್ರತಿ ತಿಂಗಳು 10,000 ರೂ. ಜೀವನಾಂಶ ನೀಡುವಂತೆ ಆತನ ಮಾಜಿ ಪತ್ನಿಗೆ ಬಾಂಬೆ ಹೈಕೋರ್ಟ್ (Bombay High Court) ನಿರ್ದೇಶನ ನೀಡಿದೆ.

    ಮಹಿಳೆಯ ಮಾಜಿ ಪತಿಯು ಅನಾರೋಗ್ಯದ ಕಾರಣದಿಂದ ದುಡಿಯಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಇದರಿಂದಾಗಿ ಆದಾಯದ ಮೂಲ ಹೊಂದಿರುವ ಮಹಿಳೆ ಜೀವನಾಂಶವನ್ನು ಪಾವತಿಸಬೇಕು. ಜೀವನಾಂಶ ಪಾವತಿಸುವ ಹೊಣೆ ಮಹಿಳೆಯದ್ದಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ತಣಿಯದ ಸಿಟ್ಟು- ಪತಂಜಲಿ ವಿರುದ್ಧ ಸುಪ್ರೀಂಕೋರ್ಟ್ ಕೆಂಡಾಮಂಡಲ

    ಹಿಂದೂ ವಿವಾಹ ಕಾಯಿದೆಯ (Hindu Marriage Act) ಸೆಕ್ಷನ್ 24ರ ನಿಬಂಧನೆಗಳು `ಸಂಗಾತಿ’ ಪದವನ್ನು ಸೂಚಿಸುತ್ತದೆ. ಇದು ತನ್ನನ್ನು ಕಾಪಾಡಿಕೊಳ್ಳಲು ಸಾಧ್ಯವಾಗದ ಪತಿ ಅಥವಾ ಪತ್ನಿಯನ್ನು ಉಲ್ಲೇಖಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

    ಅನಾರೋಗ್ಯದಿಂದಾಗಿ ತಾನು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬ್ಯಾಂಕ್ ಮ್ಯಾನೇಜರ್ ಆಗಿ ಉದ್ಯೋಗದಲ್ಲಿದ್ದ ತನ್ನ ಮಾಜಿ ಪತ್ನಿಯಿಂದ ಜೀವನಾಂಶಕ್ಕೆ ಅರ್ಹನಾಗಿದ್ದೇನೆ ಎಂದು ವ್ಯಕ್ತಿ ಕೌಟುಂಬಿಕ ನ್ಯಾಯಾಲಯದ ( Family Court) ಮೊರೆ ಹೋಗಿದ್ದ. ಇದರಂತೆ ಮಾರ್ಚ್ 2020 ರಲ್ಲಿ ಮಾಸಿಕ 10,000 ರೂ. ಹಣವನ್ನು ಜೀವನಾಂಶವಾಗಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಸಿವಿಲ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹಿಳೆ, ಹೈಕೋರ್ಟ್ ಮೆಟ್ಟಿಲೇರಿದ್ದಳು. ಇದೀಗ ಹೈಕೋರ್ಟ್ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.

    ಗೃಹ ಸಾಲದ ಮರುಪಾವತಿ ಮತ್ತು ಅಪ್ರಾಪ್ತ ಮಗುವಿನ ನಿರ್ವಹಣೆಯ ಹೊಣೆಗಾರಿಕೆಯನ್ನು ಈಗಾಗಲೇ ಹೊಂದಿದ್ದೇನೆ. ಹೀಗಾಗಿ ಆರ್ಥಿಕ ನಿರ್ವಹಣೆಯನ್ನು ಪಾವತಿಸುವ ಸ್ಥಿತಿಯಲ್ಲಿಲ್ಲ ಎಂದು ಮಹಿಳೆ ತನ್ನ ಮನವಿಯಲ್ಲಿ ತಿಳಿಸಿದ್ದಳು. ಅಲ್ಲದೇ 2019 ರಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಆ ಸಮಯದಲ್ಲಿ (ಕೆಳ ನ್ಯಾಯಾಲಯವು ತನ್ನ ಆದೇಶವನ್ನು ಹೊರಡಿಸಿದಾಗ) ಯಾವುದೇ ಆದಾಯದ ಮೂಲವನ್ನು ಹೊಂದಿರಲಿಲ್ಲ ಎಂದು ಹೇಳಿಕೊಂಡಿದ್ದಳು. ಆದರೆ ಹಣಕಾಸಿನ ಮೂಲವನ್ನು ಮಹಿಳೆ ಬಹಿರಂಗಪಡಿಸಿರಲಿಲ್ಲ. ಅಲ್ಲದೇ ತನಗೆ ಆದಾಯದ ಮೂಲ ಇಲ್ಲ ಎಂಬುದನ್ನು ಮಹಿಳೆ ಸಾಬೀತುಪಡಿಸಿಲ್ಲ ಎಂಬುದನ್ನು ನ್ಯಾಯಾಲಯ ವಿಚಾರಣೆ ವೇಳೆ ಪರಿಗಣಿಸಿ ಜೀವನಾಂಶ ನೀಡುವಂತೆ ಆದೇಶಿಸಿದೆ. ಇದನ್ನೂ ಓದಿ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಕೇಜ್ರಿವಾಲ್ ಮೇಲ್ಮನವಿ ಸಲ್ಲಿಕೆ

  • ಮುಸ್ಲಿಂ ಪತಿ 2ನೇ ಮದುವೆಯಾಗುವಂತಿಲ್ಲ – ಕುರಾನ್ ಉಲ್ಲೇಖಿಸಿ ಹೈಕೋರ್ಟ್ ತೀರ್ಪು

    ಮುಸ್ಲಿಂ ಪತಿ 2ನೇ ಮದುವೆಯಾಗುವಂತಿಲ್ಲ – ಕುರಾನ್ ಉಲ್ಲೇಖಿಸಿ ಹೈಕೋರ್ಟ್ ತೀರ್ಪು

    – ಮೊದಲ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳದ ವ್ಯಕ್ತಿಗೆ ಮದುವೆಗೆ ಅವಕಾಶವಿಲ್ಲ
    – ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟ

    ಲಕ್ನೋ: ತನ್ನ ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗದ ಮುಸ್ಲಿಂ ಸಮುದಾಯದ (Muslim Community) ಪುರುಷ ಕುರಾನ್ ಪ್ರಕಾರವೇ 2ನೇ ಮದುವೆಯಾಗಲು (Marriage) ಅವಕಾಶವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad HighCourt) ಮಹತ್ವದ ತೀರ್ಪು ನೀಡಿದೆ.

    ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಕೌಟುಂಬಿಕ ನ್ಯಾಯಾಲಯ (Family Court) ನೀಡಿದ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಪ್ರಕಾಶ್ ಕೇಸರವಾಣಿ ಹಾಗೂ ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠವು ಈ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ನೌಕಾಪಡೆಯ MiG-29K ಪತನ – ಪೈಲಟ್‌ ಅಪಾಯದಿಂದ ಪಾರು

    ಇದರೊಂದಿಗೆ ಮೊದಲ ಪತ್ನಿಯ ಇಚ್ಛೆಯನ್ನು ವಿರೋಧಿಸಿ, 2ನೇ ಮದುವೆಯಾದ ವ್ಯಕ್ತಿ ಮೊದಲ ಪತ್ನಿಯೂ ತನ್ನೊಂದಿಗೆ ಇರಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ತಿಳಿಸಿದೆ.

    Allahabad high court 1

    ಮುಸ್ಲಿಂ ಪುರುಷನು ತನ್ನ ಹೆಂಡತಿ ಮತ್ತು ಮಕ್ಕಳನ್ನು ಪೋಷಿಸುವ ಸಾಮರ್ಥ್ಯ ಹೊಂದಿಲ್ಲದಿದ್ದರೆ, ಆತನಿಗೆ ಇತರ ಮಹಿಳೆಯರನ್ನು ಮದುವೆಯಾಗುವ ಅರ್ಹತೆ ಇಲ್ಲವೆಂದು ಕುರಾನ್ (Quran) ಹೇಳುತ್ತದೆ. ಈ ವಿಚಾರದಲ್ಲಿ ನ್ಯಾಯಾಲಯದ ನಿರ್ಣಯವೂ ಅದೇ ಆಗಿರುತ್ತದೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ನ್ಯಾಯಾಲಯವು (Court) ಮದುವೆಯ  ಪಾವಿತ್ರ‍್ಯತೆ ಗೌರವಿಸುತ್ತದೆ. ಆದರೆ ಮೊದಲ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ, ಮತ್ತೊಬ್ಬರನ್ನು ಮದುವೆಯಾದ ಮುಸ್ಲಿಂ ಪುರುಷನು ಮತ್ತೆ ಮೊದಲ ಪತ್ನಿ ತನ್ನೊಂದಿಗೆ ವಾಸಿಸುವಂತೆ ಒತ್ತಾಯಿಸುವಂತಿಲ್ಲ. ಹಾಗೆ ಮಾಡಿದರೆ ಅದು ಅಸಮಾನತೆ ಎಂದು ಹೇಳಿದೆ.

    ಏನಿದು ಪ್ರಕರಣ?
    ಅಝೀಝುರ್ರಹ್ಮಾನ್, ಹಮೀದುನ್ನಿಶಾ ದಂಪತಿ ವಿವಾಹವಾಗಿ ನಾಲ್ಕು ಮಕ್ಕಳನ್ನ ಹೊಂದಿದ್ದಾರೆ. ಹೀಗಿದ್ದೂ ಪತಿ ಅಝೀಝುರ್ರಹ್ಮಾನ್ 2ನೇ ವಿವಾಹವಾಗಿ, ಆಕೆಯೊಂದಿಗೂ ಮಕ್ಕಳನ್ನು ಹೊಂದಿದ್ದನು. ಈ ವಿಷಯ ಮೊದಲ ಪತ್ನಿಯಿಂದ ಮರೆ ಮಾಚಿದ್ದ. ಹೇಗೋ ಹಂಮೀದುನ್ನಿಶಾಗೆ ವಿಷಯ ತಿಳಿದು ಆಕೆ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ನಂತರ ಅಝೀಝುರ್ರಹ್ಮಾನ್ ಕೌಟುಂಬಿಕ ನ್ಯಾಯಾಲಯ ಸಂಪರ್ಕಿಸಿ ಮೊದಲ ಪತ್ನಿ ತನ್ನೊಂದಿಗೆ ವಾಸಿಸುವಂತೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಿದ್ದ. ಕಳೆದ ಆಗಸ್ಟ್ನಲ್ಲಿ ಮನವಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ ಮಹಿಳೆಯರ ಹಕ್ಕುಗಳನ್ನೂ ಗೌರವಿಸುವಂತೆ ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೊರೆ ಹೋಗಿದ್ದ.

    Live Tv
    [brid partner=56869869 player=32851 video=960834 autoplay=true]

  • ಪದವೀಧರ ಮಹಿಳೆಯನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವಂತಿಲ್ಲ – ಹೈಕೋರ್ಟ್

    ಪದವೀಧರ ಮಹಿಳೆಯನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವಂತಿಲ್ಲ – ಹೈಕೋರ್ಟ್

    ಮುಂಬೈ: ವಿದ್ಯಾವಂತೆ ಎನ್ನುವ ಕಾರಣಕ್ಕೆ ಮಹಿಳೆಯನ್ನು ಜೀವನ ನಿರ್ವಹಣೆಗೆ ದುಡಿಯುವಂತೆ ಒತ್ತಾಯಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ಪುಣೆಯ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ

    ಅರ್ಜಿಯಲ್ಲಿ ವಿಚ್ಛೇದಿತ ಪತ್ನಿ ಪ್ರಸ್ತುತ ಸ್ಥಿರ ಆದಾಯದ ಮೂಲ ಹೊಂದಿದ್ದಾರೆ. ಆದರೆ ನ್ಯಾಯಾಲಯದಿಂದ ಸತ್ಯವನ್ನು ಮರೆಮಾಚಿದ್ದಾರೆ ಎಂದೂ ಆರೋಪಿಸಿದ್ದರು. ಇದನ್ನೂ ಓದಿ: ರಾಯಚೂರಿನ ನೀರಿನ ಟ್ಯಾಂಕ್ 25 ವರ್ಷಗಳಿಂದ ಸ್ವಚ್ಛತೆಯನ್ನೇ ಕಂಡಿಲ್ಲ!

    ಈ ಕುರಿತು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಮಹಿಳೆ ಶೈಕ್ಷಣಿಕ ಪದವಿ, ಅರ್ಹತೆ ಹೊಂದಿದ್ದರೂ ಕೆಲಸ ಮಾಡಬಹುದು ಇಲ್ಲವೇ ಮನೆಯಲ್ಲೇ ಉಳಿಯುವ ಆಯ್ಕೆ ಮಾಡಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

    ಮನೆಯ ಮಹಿಳೆ ಆರ್ಥಿಕವಾಗಿ ಕೊಡುಗೆ ನೀಡಬೇಕು ಎಂಬುದನ್ನು ನಮ್ಮ ಸಮಾಜ ಇನ್ನೂ ಒಪ್ಪಿಕೊಂಡಿಲ್ಲ. ಏಕೆಂದರೆ ಅದು ಮಹಿಳೆಯ ಆಯ್ಕೆಯಾಗಿದೆ. ಆದ್ದರಿಂದ ಕೆಲಸಕ್ಕೆ ಹೋಗುವಂತೆ ಒತ್ತಾಯಿಸಲಾಗುವುದಿಲ್ಲ. ಪದವೀಧರಳು ಎಂಬ ಕಾರಣಕ್ಕೆ ಕುಳಿತುಕೊಳ್ಳಬಾರದು ಎಂದು ಹೇಳಲು ಸಾಧ್ಯವಿಲ್ಲ. ಉದಾಹರಣೆಗೆ `ನಾನಿಂದು ನ್ಯಾಯಧೀಶನಾಗಿದ್ದೇನೆ, ನಾಳೆ ಮನೆಯಲ್ಲೇ ಕುಳಿತುಕೊಳ್ಳಬಹುದು. ಆಗ ನಾನು ನ್ಯಾಯಾಧೀಶನಾಗಲು ಅರ್ಹನಾಗಿದ್ದೇನೆ ಮನೆಯಲ್ಲಿ ಕುಳಿತುಕೊಳ್ಳಬಾರದು’ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದೆ.

    ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಕೌಟುಂಬಿಕ ನ್ಯಾಯಾಲಯವು ಆಕೆ ಪತಿಯೊಂದಿಗೆ ವಿಚ್ಛೇದನ ಪಡೆದ ನಂತರ ಜೀವನಾಂಶ ಪಡೆಯುವ ಸಾಮರ್ಥ್ಯ ಹೊಂದಿರುತ್ತಾಳೆ ಎಂದು ಹೇಳಿದೆ. ಜೊತೆಗೆ ಅರ್ಜಿದಾರರು ಪತ್ನಿಗೆ ಪ್ರತಿ ತಿಂಗಳು 5 ಸಾವಿರ ಹಾಗೂ ಪ್ರಸ್ತುತ 13 ವರ್ಷದ ಮಗಳು ತಾಯಿಯೊಂದಿಗೆ ವಾಸಿಸುತ್ತಿರುವುದರಿಂದ ಮಗಳ ನಿರ್ವಹಣೆಗಾಗಿ 7 ಸಾವಿರ ಪಾವತಿಸಲು ನ್ಯಾಯಾಲಯ ಸೂಚಿಸಿದೆ.

    ಹೆಚ್ಚಿನ ವಿಚಾರಣೆ ಮುಂದಿನ ವಾರಕ್ಕೆ ಮುಂದೂಡಿದೆ.

  • ಅವಿವಾಹಿತ ಮಗಳು ಪೋಷಕರಿಂದಲೇ ವಿವಾಹದ ವೆಚ್ಚ ಪಡೆಯಬಹುದು: ಹೈಕೋರ್ಟ್

    ಅವಿವಾಹಿತ ಮಗಳು ಪೋಷಕರಿಂದಲೇ ವಿವಾಹದ ವೆಚ್ಚ ಪಡೆಯಬಹುದು: ಹೈಕೋರ್ಟ್

    ರಾಯಪುರ: ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ- 1956ರ ನಿಬಂಧನೆಗಳ ಅಡಿಯಲ್ಲಿ ಅವಿವಾಹಿತ ಹೆಣ್ಣುಮಗಳು ಪೋಷಕರಿಂದ ವಿವಾಹದ ವೆಚ್ಚ ಪಡೆಯಬಹುದು ಎಂದು ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ.

    35 ವರ್ಷದ ರಾಜೇಶ್ವರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಿಲಾಸ್‌ಪುರದ ಹೈಕೋರ್ಟ್ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ. ಈ ವೇಳೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು 2016ರ ಏಪ್ರಿಲ್ 22ರಂದು ನೀಡಿದ ಆದೇಶವನ್ನು ವಜಾಗೊಳಿಸಿದೆ. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು

    ಭಿಲಾಯಿ ಸ್ಟೀಲ್ ಪ್ಲಾಂಟ್ (ಬಿಎಸ್‌ಪಿ) ಉದ್ಯೋಗಿ ಭುನುರಾಮ್ ಅವರ ಪುತ್ರಿ, ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ-1956ರ ಅಡಿಯಲ್ಲಿ ದುರ್ಗ್ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರತಿವಾದಿ (ತಂದೆ) ಭಾನುರಾಮ್ ಅವರು ನಿವೃತ್ತಿ ಹೊಂದಲಿದ್ದು, ಅವರು 55 ಲಕ್ಷ ಪಿಂಚಣಿ ಪಡೆಯುವ ಸಾಧ್ಯತೆಯಿದೆ. ಹಾಗಾಗಿ, ಜೀವನಾಂಶಕ್ಕಾಗಿ 20 ಲಕ್ಷ ರೂ. ನೀಡುವಂತೆ ಸೂಕ್ತ ರಿಟ್ ಹೊರಡಿಸಬೇಕು ಎಂದೂ ಹೇಳಿದ್ದರು. ಅರ್ಜಿಯನ್ನು ವಿಚಾರಿಸಿದ ಕೌಟುಂಬಿಕ ನ್ಯಾಯಾಲಯವು ಜನವರಿ 7, 2016 ರಂದು ಇದಕ್ಕೆ ಅವಕಾಶವಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನೂ ಓದಿ: ಹಿಜಬ್‌ ತೀರ್ಪು- ಹೈಕೋರ್ಟ್‌ ಜಡ್ಜ್‌ಗಳಿಗೆ ʼವೈʼ ಭದ್ರತೆ

    ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜೇಶ್ವರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವಿವಾಹಿತ ಮಗಳು ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ-1956ರ ಕಾಯ್ದೆಯ ಅಡಿಯಲ್ಲಿ ತನ್ನ ಮದುವೆಯ ವೆಚ್ಚವನ್ನು ಪೋಷಕರಿಂದ ಪಡೆದುಕೊಳ್ಳಬಹುದು ಎಂದು ಅರ್ಜಿದಾರರ ಪರ ವಕೀಲ ಎ.ಕೆ.ತಿವಾರಿ ವಾದಿಸಿದ್ದರು. ಮಾರ್ಚ್ 21ರಂದು ವಿಚಾರಣೆಗೆ ಅಂಗೀಕರಿಸಿದ್ದ ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಹಾಗೂ ಸಂಜಯ್ ಎಸ್.ಅಗರವಾಲ್ ಅವರ ವಿಭಾಗೀಯ ಪೀಠವು, ಕಾನೂನಿನ ಪ್ರಕಾರ ಅವಿವಾಹಿತ ಮಗಳು ತನ್ನ ತಂದೆಯಿಂದ ಮದುವೆಯ ವೆಚ್ಚವನ್ನು ಪಡೆಯಬಹುದು ಎಂದು ತೀರ್ಪು ಪ್ರಕಟಿಸಿತು.

     

  • 327 ದಿನಗಳಲ್ಲಿ 6000 ಕೇಸ್ ಇತ್ಯರ್ಥ: ವಿಶ್ವ ದಾಖಲೆ ನಿರ್ಮಿಸಿದ ಉತ್ತರಪ್ರದೇಶದ ಜಡ್ಜ್

    327 ದಿನಗಳಲ್ಲಿ 6000 ಕೇಸ್ ಇತ್ಯರ್ಥ: ವಿಶ್ವ ದಾಖಲೆ ನಿರ್ಮಿಸಿದ ಉತ್ತರಪ್ರದೇಶದ ಜಡ್ಜ್

    – 903 ದಂಪತಿಗಳು ಒಂದಾದ್ರು

    ಮುಜಾಫರ್‍ನಗರ್: 327 ಕೆಲಸದ ದಿನಗಳಲ್ಲಿ ಒಟ್ಟು 6065 ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ಉತ್ತರಪ್ರದೇಶದ ಮುಜಾಫರ್‍ನಗರದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಜಿಲ್ಲೆಯಲ್ಲಿ ವಕೀಲರ ಪ್ರತಿಭಟನೆಯ ನಡುವೆಯೂ 327 ದಿನಗಳಲ್ಲಿ 6065 ಕೇಸ್‍ಗಳನ್ನು ಬಗೆಹರಿಸಿದ್ದೇನೆ ಎಂದು ನ್ಯಾಯಾಧೀಶರಾದ ತೇಜ್ ಬಹದ್ದೂರ್ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ.

    ತೇಜ್ ಬಹದ್ದೂರ್ ಅವರ ಈ ದಾಖಲೆ ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ನ ಪುಟ ಸೇರಿರುವುದನ್ನು ಗಿನ್ನೀಸ್ ರೆಕಾಡ್ರ್ಸ್‍ನವರು ಸ್ಪಷ್ಟಪಡಿಸಿದ್ದಾರೆಂದು ವರದಿಯಾಗಿದೆ.

    ಕೋರ್ಟ್ ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನ ಕಡಿಮೆ ಮಾಡಿ ಕಕ್ಷಿಗಾರರಿಗೆ ನ್ಯಾಯ ಒದಗಿಸುವುದು ನನ್ನ ಉದ್ದೇಶ ಎಂದು ನ್ಯಾಯಾಧೀಶರಾದ ಸಿಂಗ್ ಹೇಳಿದ್ದಾರೆ. ಇಡೀ ದೇಶದಲ್ಲಿ ವಿಲೇವಾರಿ ಮಾಡಲಾದ ಕೇಸ್‍ಗಳಲ್ಲಿ ಇದು ಅತ್ಯಂತ ಹೆಚ್ಚಿನದ್ದು. ಕೌಟುಂಬಿಕ ನ್ಯಾಯಾಲಯದಲ್ಲಿ ಕೇಸ್ ಬಗೆಹರಿದ ನಂತರ ಒಟ್ಟು 903 ದಂಪತಿಗಳು ಒಂದಾಗಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.