Tag: family clash

  • ಸಂಸಾರದ ಸಮಸ್ಯೆಯಿಂದ ಕರೆಂಟ್ ಕಂಬ ಹತ್ತಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ!

    ಸಂಸಾರದ ಸಮಸ್ಯೆಯಿಂದ ಕರೆಂಟ್ ಕಂಬ ಹತ್ತಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ!

    ಕಲಬುರಗಿ: ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬ 765 ವ್ಯಾಟ್ ನ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಲಖಣಾಪುರದಲ್ಲಿ ನಡೆದಿದೆ.

    ಸೊಲ್ಲಾಪುರ – ರಾಯಚೂರು ಎಕ್ಸ್ ಪ್ರೆಸ್ ರೈಲಿನ ವಿದ್ಯುತ್ ಸರಬರಾಜು ಕಂಬ ಹತ್ತಿ ಚೆನ್ನಣ್ಣ ಹೂಗಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತ ಕೌಟುಂಬಿಕ ಕಲಹದಿಂದ ನೊಂದು ಈ ನಿರ್ಧಾರ ತೆಗೆದುಕೊಂಡಿದ್ದ.

    ಚೆನ್ನಣ್ಣ ವಿದ್ಯುತ್ ಕಂಬದ ಮೇಲೇರಿದನ್ನು ಕಂಡು ಸಾರ್ವಜನಿಕರು ಕೂಡಲೇ ಜೆಸ್ಕಾಂ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಜೆಸ್ಕಾಂ ಸಿಬ್ಬಂದಿ ಎರಡು ಗಂಟೆಗಳ ಕಾಲ 765 ವ್ಯಾಟ್ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಜೇವರ್ಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ವಿದ್ಯುತ್ ಕಂಬ ಹತ್ತಿ ಚೆನ್ನಣ್ಣ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews