Tag: familu

  • ಮಗನ ಅನಾರೋಗ್ಯ ನಿವಾರಿಸಿದ ಕೊರಗಜ್ಜನಿಗೆ ಉಕ್ರೇನ್ ಕುಟುಂಬದಿಂದ ಅಗೆಲು ಸೇವೆ

    ಮಗನ ಅನಾರೋಗ್ಯ ನಿವಾರಿಸಿದ ಕೊರಗಜ್ಜನಿಗೆ ಉಕ್ರೇನ್ ಕುಟುಂಬದಿಂದ ಅಗೆಲು ಸೇವೆ

    ಮಂಗಳೂರು: ತುಳುನಾಡಿನ ಆರಾದ್ಯ ದೈವ ಕೊರಗಜ್ಜ (Koragajja) ನ ಪವಾಡ ಮತ್ತೊಮ್ಮೆ ಸುದ್ದಿಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇದೀಗ ಆ ಕುಟುಂಬ ಅಜ್ಜನಿಗೆ ಹರಕೆಯನ್ನು ತೀರಿಸಿದೆ.

    ಹೌದು. ಕೆಲ ದಿನಗಳ ಹಿಂದೆ ಉಕ್ರೇನ್ (Ukraine) ನ ಆ್ಯಂಡ್ರೋ, ಪತ್ನಿ ಎಲೆನಾ ಹಾಗೂ ಮಗ ಮ್ಯಾಕ್ಸಿಂ ಭಾರತ ಪ್ರವಾಸ ಕೈಗೊಂಡಿದ್ದು, ಅಂತೆಯೇ ಉಡುಪಿಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಗೋಶಾಲೆಯೊಂದಕ್ಕೆ ಭೇಟಿ ಕೊಟ್ಟಾಗ ಅಲ್ಲಿ ನಾಡಿ ನೋಡಿ ಔಷಧಿ ಕೊಡುವ ಭಕ್ತಿಭೂಷಣ್ ದಾಸ್ ಪ್ರಭುಜಿ ಅವರನ್ನು ಕುಟುಂಬ ಭೇಟಿಯಾಗಿದೆ. ಇದೇ ವೇಳೆ ಆ್ಯಂಡ್ರೂ ತಮ್ಮ ಮನಗ ಅನರೋಗ್ಯ (Health) ದ ಬಗ್ಗೆ ಅವರಿಗೆ ತಿಳಿಸಿದ್ದರು. ಇದನ್ನೂ ಓದಿ: ಕೊರಗಜ್ಜನಿಗೆ ಅವಮಾನ ಮಾಡಿದ್ದ ಉಮರುಲ್ಲಾ ಬಾಷಿತ್ ಅರೆಸ್ಟ್

    ಆ್ಯಂಡ್ರೂ ಕಷ್ಟ ಅರಿತ ಪ್ರಭುಜಿ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು. ಅಂತೆಯೇ ಕುಟುಂಬ ಬಂಟ್ವಾಳದ ಕೊಡ್ಮಾಣ್ ಸಮೀಪದ ಗೋವಿನ ತೋಟದ ಶ್ರೀರಾಧಾ ಸುರಭೀ ಗೋ ಮಂದಿರಲ್ಲಿ ವಾಸ್ತವ್ಯ ಹೂಡಿತ್ತು. ಜೊತೆಗೆ ಮಗನಿಗೆ ದೇಸಿ ದನದ ವಿಹಾರದ ಜೊತೆಗೆ ನಾಟಿ ಚಿಕಿತ್ಸೆ ಆರಂಭಿಸಲಾಯಿತು.

    ಇಷ್ಟು ಮಾತ್ರವಲ್ಲದೆ ಇತ್ತ ಕೊರಗಜ್ಜನ ಮುಂದೆ ಚಿಕಿತ್ಸೆಯಿಂದ ಮಗನನ್ನು ಸಂಪೂರ್ಣ ಗುಣಮುಖನಾಗುವಂತೆ ಮಾಡಲು ಕೋರಲಾಯಿತು. ಇದೀಗ ಮಗನ ಆರೋಗ್ಯದಲ್ಲಿ ಚೇತರಿಕೆ ಕಂಡ ಬೆನ್ನಲ್ಲೇ ಕುಟುಂಬ ಕೊರಗಜ್ಜನಿಗೆ ಅಗೆಲು ಸೇವೆ ನೀಡಿತು. ಇದನ್ನೂ ಓದಿ: ಕೊರಗಜ್ಜನಿಗೆ ನೈವೇದ್ಯ ರೂಪದಲ್ಲಿಟ್ಟ ಮದ್ಯ ಎಗರಿಸಿದ ಭೂಪ

    ಕೊರಗಜ್ಜನಿಗೆ ಅಗೆಲು ಕೊಡುವ ಸಂದರ್ಭದಲ್ಲಿ ಭಕ್ತಿಭೂಷಣ್ ದಾಸ್ ಪ್ರಭುಜಿ, ಪದ್ಮನಾಭ ಗೋವಿನ ತೋಟ, ನವೀನ್ ಮಾರ್ಲ, ಯಾದವ ಕೊಡಂಗೆ ಮೊದಲಾದವರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಿನ ಕಮಲಾನಗರದಲ್ಲಿ ಕಟ್ಟಡ ಕುಸಿಯೋ ಭೀತಿ!

    ಬೆಂಗ್ಳೂರಿನ ಕಮಲಾನಗರದಲ್ಲಿ ಕಟ್ಟಡ ಕುಸಿಯೋ ಭೀತಿ!

    – ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ, ಪರಿಶೀಲನೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದೆ. ಯಾವುದೇ ಕ್ಷಣದಲ್ಲಾದ್ರೂ ಕಟ್ಟಡ ಕುಸಿಯುವ ಸಾಧ್ಯತೆಗಳಿವೆ.

    ಹೌದು. ಕಮಲಾನಗರದ ಶಂಕರ್‍ನಾಗ್ ಬಸ್ ನಿಲ್ದಾಣದ ಬಳಿ ಇರುವ ಮೂರು ಅಂತಸ್ತಿನ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ. ರಾಜೇಶ್ವರಿ ಎಂಬುವರಿಗೆ ಸೇರಿದ ಬಿಲ್ಡಿಂಗ್ ಕುಸಿಯುತ್ತಿರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ವಾಸವಿದ್ದ 4 ಕುಟುಂಬ ಹೊರಗೆ ಓಡಿ ಬಂದಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತ- ತಪ್ಪಿದ ಭಾರೀ ಅನಾಹುತ

    ಮನೆಯೊಳಗಡೆ ಪಾತ್ರೆ-ಪಗಟೆ, ಬಟ್ಟೆ, ವಸ್ತುಗಳು ಹಾಗೆಯೇ ಇವೆ. ಸದ್ಯ ಈ 4 ಕುಟುಂಬ ದಿಕ್ಕು ತೋಚದೆ ಕಂಗಾಲಾಗಿವೆ. ಇದೇ ಕಟ್ಟಡದಲ್ಲಿ 6 ಕುಟುಂಬಗಳು ವಾಸವಾಗಿದ್ದವು. ಆದರೆ ಶಿಥಿಲಾವಸ್ಥೆಗೊಂಡಿದ್ದ ಕಾರಣ 3 ಮನೆಗಳನ್ನು ಖಾಲಿ ಮಾಡಲಾಗಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ವರುಣಾರ್ಭಟ – ದಾವಣಗೆರೆಯಲ್ಲಿ 20ಕ್ಕೂ ಹೆಚ್ಚು ಮನೆಗಳು ಜಲಾವೃತ

    ಸದ್ಯ ಕಟ್ಟಡದಲ್ಲಿ 4 ಕುಟುಂಬಗಳು ವಾಸವಾಗಿವೆ. ಇದೀಗ ಕುಸಿಯುವ ಹಂತದಲ್ಲಿದ್ದು, ಸ್ಥಳಕ್ಕೆ ಬಿಬಿಎಂಪಿ, ಅಧಿಕಾರಿಗಳು ಹಾಗೂ ಎನ್ ಡಿ ಆರ್ ಎಫ್ ನ ನುರಿತ ತಜ್ಞರಿಂದ ಪರಿಶೀಲನೆ ನಂತರ ತೆರವು ಕಾರ್ಯಾಚರಣೆ ನಡೆಯಲಿದೆ. ಕಟ್ಟಡದ ಸುತ್ತಮುತ್ತ ಮನೆಗೆ ಹಾನಿ ಆಗದಂತೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.