Tag: families

  • ಆರ್ಥಿಕವಾಗಿ ಸ್ಥಿತಿವಂತರಾಗಿದ್ರೆ ಅನುಕಂಪದ ನೌಕರಿಯಿಲ್ಲ – ಹೊಸ ಮಾರ್ಗಸೂಚಿಯಲ್ಲಿ ಏನಿದೆ?

    ಆರ್ಥಿಕವಾಗಿ ಸ್ಥಿತಿವಂತರಾಗಿದ್ರೆ ಅನುಕಂಪದ ನೌಕರಿಯಿಲ್ಲ – ಹೊಸ ಮಾರ್ಗಸೂಚಿಯಲ್ಲಿ ಏನಿದೆ?

    ನವದೆಹಲಿ: ಸರ್ಕಾರಿ ಉದ್ಯೋಗದಲ್ಲಿದ್ದು ಸೇವೆಯಲ್ಲಿರುವಾಗ ಆಕಸ್ಮಿಕವಾಗಿ ಮೃತಪಟ್ಟರೆ ಅಥವಾ ವೈದ್ಯಕೀಯ ಕಾರಣಗಳಿಂದ ನಿವೃತ್ತಿ ಹೊಂದುವ ತನ್ನ ಉದ್ಯೋಗಿಗಳನ್ನು ಅವಲಂಬಿಸಿದ ಕುಟುಂಬದವರಿಗೆ ಅನುಕಂಪದ ನೌಕರಿ ನೀಡುವ ನೀತಿಯಲ್ಲಿ ಕೇಂದ್ರ ಗೃಹ ಸಚಿವಾಲಯವು ಹೊಸ ಮಾರ್ಪಾಡುಗಳನ್ನು ತಂದಿದ್ದು, ನೀತಿಯನ್ನು ಅನುಷ್ಠಾನಗೊಳಿಸಿದೆ.

    ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಮಾತ್ರ ಈ ನೀತಿಯ ನಿಯಮಗಳು ಅನ್ವಯವಾಗಲಿದೆ. ಈ ಹೊಸ ನೀತಿಯು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿದೆ. ಇದನ್ನೂ ಓದಿ: ಸಾರ್ವಜನಿಕರಿಗೆ ಪಾನಿಪುರಿ ಬಡಿಸಿದ ಮಮತಾ

    ಹೊಸ ಮಾರ್ಗಸೂಚಿಗಳು ನೌಕರಿಯ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ವಸ್ತುನಿಷ್ಠತೆ ಹೊಂದಿದೆ. ಹಾಗಾಗಿ ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಆರ್ಥಿಕವಾಗಿ ಹಿಂದುಳಿದ ನೌಕರನ ಕುಟುಂಬಕ್ಕೆ ತುರ್ತು ನೆರವು ನೀಡಲು ಅನುಕಂಪ ಆಧಾರಿತ ನೌಕರಿ ನೀಡಲಾಗುತ್ತದೆ ಒಂದು ವೇಳೆ ಕುಟುಂಬದಲ್ಲಿ ಆರ್ಥಿಕ ಸ್ಥಿತಿವಂತರಿದ್ದರೆ ಅವರಿಗೆ ಅನುಕಂಪದ ನೌಕರಿ ಸಿಗುವ ಸಾಧ್ಯತೆಗಳಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹೊಸ ಮಾರ್ಗಸೂಚಿಗಳು ಕುಟುಂಬದ ಆರ್ಥಿಕ ಸ್ಥಿತಿಯ ಸಮಗ್ರ ಮೌಲ್ಯಮಾಪನ, ಆ ಕುಟುಂಬದಲ್ಲಿ ಉದ್ಯೋಗ ಮಾಡುತ್ತಿರುವವರ ಸಂಖ್ಯೆ, ಕುಟುಂಬದ ಗಾತ್ರ, ಮಕ್ಕಳ ವಯಸ್ಸು ಮತ್ತು ಕುಟುಂಬದ ಆರ್ಥಿಕ ಸ್ಥಿತಿಯ ಅಗತ್ಯತೆಗಳನ್ನು ಒಟ್ಟಾರೆಯಾಗಿ ಪರಿಗಣಿಸುವ ಅಂಶಗಳನ್ನು ಒಳಗೊಂಡಿದೆ. ಇದನ್ನೂ ಓದಿ: RSS ನಿಮ್ಮ ಜೊತೆ ಇದೆ: ದಲಿತ, ಹಿಂದುಳಿದ ವರ್ಗಗಳ ಮಠಾಧೀಶರೊಂದಿಗೆ ಮೋಹನ್‌ ಭಾಗವತ್‌ ಸಂವಾದ

    ನೌಕರಿಗೆ ಪರಿಗಣಿಸುವುದು ಹೇಗೆ?
    ಈ ಯೋಜನೆಯಲ್ಲಿ ಅನುಕಂಪದ ಆಧರಿತ ಉದ್ಯೋಗದ ಅರ್ಜಿಯನ್ನು ಮೌಲ್ಯಮಾಪನ ಮಾಡಲು ಗ್ರೇಡ್ ಆಧಾರಿತ ಮೆರಿಟ್ ಸ್ಕೀಂ ಅನ್ನು ಅಳವಡಿಸಲಾಗಿರುತ್ತದೆ. ಅರ್ಜಿದಾರರಿಗೆ ಮೊದಲ ಹಂತದಲ್ಲಿ ವೈಯಕ್ತಿಕವಾಗಿ ಪೂರ್ಣಗೊಳಿಸಬೇಕಾದ ಅವಶ್ಯಕತೆಗಳು ಮತ್ತು ಔಪಚಾರಿಕತೆಗಳ ಬಗ್ಗೆ ಸಲಹೆ ನಿಡಲಾಗುತ್ತದೆ. ನಂತರ ಮೂರು ಅಧಿಕಾರಿಗಳನ್ನೊಳಗೊಂಡ ಸಮಿತಿಯು ಅರ್ಜಿಯನ್ನು ಪರಿಗಣಿಸುತ್ತದೆ. ಒಬ್ಬರು ಅಧ್ಯಕ್ಷರು, ಇಬ್ಬರು ಸದಸ್ಯರು ಸಮಿತಿಯಲ್ಲಿ ಇರುತ್ತಾರೆ. ನಂತರ ಉಪ ಕಾರ್ಯದರ್ಶಿಗಳು ಸಮಿತಿಯ ಶಿಫಾರಸ್ಸಿನ ನಿರ್ಧಾರಕ್ಕಾಗಿ ಅರ್ಜಿಯನ್ನು ಸಕ್ಷಮ ಪ್ರಾಧಿಕಾರ ಮುಂದೆ ಇಡುತ್ತಾರೆ. ಇದನ್ನೂ ಓದಿ: ಪೋಷಕರಿಲ್ಲದ ಸಮಯ ನೋಡ್ಕೊಂಡು 12ರ ಬಾಲಕಿಯರ ಮೇಲೆ 59ರ ವೃದ್ಧನಿಂದ ಅತ್ಯಾಚಾರ

    ಕುಟುಂಬದ ವಾರ್ಷಿಕ ಆದಾಯ, ಅವಲಂಬಿತ ಅಪ್ರಾಪ್ತ ಮಕ್ಕಳ ಸಂಖ್ಯೆ, ಅವಲಂಬಿತ ಕುಟುಂಬದ ಸದಸ್ಯರ ಸಂಖ್ಯೆ ಮತ್ತು ವಿಶೇಷ ಚೇತನರು ಎಷ್ಟಿದ್ದಾರೆ? ಅವಿವಾಹಿತ ಹೆಣ್ಣುಮಕ್ಕಳ ಸಂಖ್ಯೆ, ಉಳಿದ ಸೇವೆ ಮುಂತಾದ ಅಂಶಗಳನ್ನು ಪರಿಗಣಿಸಿ ಸಕ್ಷಮ ಪ್ರಾಧಿಕಾರವು ಉದ್ಯೋಗ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳುತ್ತದೆ.

    Live Tv
    [brid partner=56869869 player=32851 video=960834 autoplay=true]

  • ರಾಯಚೂರು ನಗರಸಭೆ ಕಲುಷಿತ ನೀರಿನಿಂದ ಸರಣಿ ಸಾವು – ಘೋಷಣೆಗೆ ಸೀಮಿತವಾದ ಪರಿಹಾರ

    ರಾಯಚೂರು ನಗರಸಭೆ ಕಲುಷಿತ ನೀರಿನಿಂದ ಸರಣಿ ಸಾವು – ಘೋಷಣೆಗೆ ಸೀಮಿತವಾದ ಪರಿಹಾರ

    ರಾಯಚೂರು: ನಗರಸಭೆ ಕಲುಷಿತ ನೀರು ಕುಡಿದು ಐದು ಜನ ಸಾವನ್ನಪ್ಪಿದರು ಇಲ್ಲಿನ ಅಧಿಕಾರಿಗಳು ಶುದ್ದ ಕುಡಿಯುವ ನೀರು ಕೊಡುತ್ತಿಲ್ಲ. ಜವಾಬ್ದಾರಿ ಮರೆತು ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯಿರಿ ಎನ್ನುತ್ತಿದ್ದಾರೆ. ಇನ್ನೊಂದೆಡೆ ತಾವೇ ಘೋಷಣೆ ಮಾಡಿದ ಪರಿಹಾರ ಹಾಗೂ ಚಿಕಿತ್ಸಾ ವೆಚ್ಚವನ್ನೂ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

    ಕಲುಷಿತ ನೀರು ಹರಿಸಿ ಬಡ ಜನರನ್ನು ಆಸ್ಪತ್ರೆ ಸೇರುವಂತೆ ಮಾಡಿರುವ ನಗರಸಭೆ. ಕೂಲಿ ಮಾಡಿ ಬದುಕುವ ಜನ ಸಾವಿರಾರು ರೂಪಾಯಿ ಖರ್ಚು ಮಾಡಿ ಜೀವ ಉಳಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸಿಎಂ ಘೋಷಿಸಿದ ಪರಿಹಾರವೂ ಬಂದಿಲ್ಲ. ಹೀಗಾಗಿ ನಗರದ ಜನತೆ ನಗರಸಭೆ, ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆ ನಿರ್ಲಕ್ಷ್ಯ ಕುರಿತು ಮಾಧ್ಯಮಗಳು ಎಷ್ಟೇ ವರದಿ ಮಾಡಿದರೂ ದಪ್ಪ ಚರ್ಮದ ಅಧಿಕಾರಿಗಳು ತಲೆಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ. ತನಿಖಾ ಸಮಿತಿ ನಗರದ ತುಂಬಾ ಓಡಾಡಿ, ಪರಿಶೀಲನೆ ಸಭೆ ಮಾಡಿ ಹೋದರು ಅಂತಹ ಎಫೆಕ್ಟ್ ಏನೂ ಆಗಿಲ್ಲ. ರಾಂಪೂರ ಜಲ ಶುದ್ಧೀಕರಣ ಘಟಕದಲ್ಲಿ ಹಲ್ಲಿ ಬಿದ್ದಿರುವುದು ನೋಡಿದ್ರೆ ನಗರಸಭೆ ಸಿಬ್ಬಂದಿ ಎಷ್ಟು ಅಲರ್ಟ್ ಆಗಿದ್ದಾರೆ ಅನ್ನೋದು ಗೊತ್ತಾಗುತ್ತೆ. ಇದೆಲ್ಲಾ ಒಂದುಕಡೆಯಾದ್ರೆ ಏನೋ ಕ್ರಮ ತೆಗೆದುಕೊಂಡಿದ್ದೇವೆ ಅನ್ನೋ ಹಾಗೇ ನಗರಸಭೆ ಸದಸ್ಯರು ದಿಢೀರ್ ತುರ್ತು ಸಭೆ ನಡೆಸಿ ಕಲುಷಿತ ನೀರು ಕುಡಿದು ಸಾವನ್ನಪ್ಪಿದವರ ಕುಟುಂಬಕ್ಕೆ 10 ಲಕ್ಷ ರೂಪಾಯಿ, ಆಸ್ಪತ್ರೆಗೆ ದಾಖಲಾದವರಿಗೆ ಚಿಕಿತ್ಸಾ ವೆಚ್ಚ 20 ಸಾವಿರ ರೂಪಾಯಿ ಕೊಡುವುದಾಗಿ ನಿರ್ಧಾರ ಮಾಡಿ ಘೋಷಿಸಿದ್ದು ಘೋಷಣೆಯಾಗೇ ಉಳಿದಿದೆ. ಇದುವರೆಗೂ ಯಾರಿಗೂ ಬಿಡಿಗಾಸು ಕೊಟ್ಟಿಲ್ಲ. ಸಿಎಂ ಘೋಷಿಸಿದ ಐದು ಲಕ್ಷ ರೂಪಾಯಿ ಪರಿಹಾರವೂ ಬಂದಿಲ್ಲ. ಇದನ್ನೂ ಓದಿ: ರಾಯಚೂರಿನ ನೀರಿನ ಟ್ಯಾಂಕ್ 25 ವರ್ಷಗಳಿಂದ ಸ್ವಚ್ಛತೆಯನ್ನೇ ಕಂಡಿಲ್ಲ!

    ಇದುವರೆಗೆ ಕಲುಷಿತ ನೀರು ಕುಡಿದು ಸಾವನ್ನಪ್ಪಿದ ಮಲ್ಲಮ್ಮ, ಅಬ್ದುಲ್ ಗಫರ್, ನೂರ್ ಮೊಹಮ್ಮದ್, ಅಬ್ದುಲ್ ಕರೀಂ, ಜನಕರಾಜ ಇವರಲ್ಲಿ ಯಾರೂ ಆರ್ಥಿಕವಾಗಿ ಸ್ಥಿತಿವಂತರಲ್ಲ. ಆಟೋ ಚಾಲಕ, ಎಲೆಕ್ಟ್ರಿಷಿಯನ್, ಕೂಲಿ ಕೆಲಸ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದವರು. ಆದ್ರೆ ನಗರಸಭೆ ಸರಬರಾಜು ಮಾಡಿದ ಕಲುಷಿತ ನೀರು ಕುಡಿದು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನ ಆಸ್ಪತ್ರೆಗಳಲ್ಲಿ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿರಾನಗರ, ಅಂದ್ರೂನ್ ಕಿಲ್ಲಾ, ಅರಬ್ ಮೊಹಲ್ಲಾದಲ್ಲಿನ ಜನ ಆಸ್ಪತ್ರೆಗೆ ದಾಖಲಾಗಿ ಇತ್ತ ಕೂಲಿಯೂ ಇಲ್ಲ, ಅತ್ತ ನಗರಸಭೆ ಘೋಷಿಸಿದ ಪರಿಹಾರವೂ ಇಲ್ಲದೆ ಆಸ್ಪತ್ರೆಗಳಿಗೆ ಸಾವಿರಾರು ರೂಪಾಯಿ ಖರ್ಚುಮಾಡುತ್ತಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಸಾವು ಪ್ರಕರಣ – ಮೃತರ ಕುಟುಂಬಕ್ಕೆ ನಗರಸಭೆಯಿಂದ ತಲಾ 10 ಲಕ್ಷ ರೂ. ಪರಿಹಾರ

    ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇನೋ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಅಂತಾರೆ. ಆದ್ರೆ ರಾಯಚೂರಿನಲ್ಲಿ ಐದು ಸಾವಾದರೂ ಅಧಿಕಾರಿಗಳು ಮಾತ್ರ ಜವಾಬ್ದಾರಿಯುತವಾಗಿ ವರ್ತಿಸುತ್ತಿಲ್ಲ. ಶುದ್ದ ಕುಡಿಯುವ ನೀರು ಇಲ್ಲ, ಘೋಷಣೆಯಾದ ಪರಿಹಾರವೂ ಇಲ್ಲ ಎಂಬಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

  • ಆಸ್ತಿ ಗಲಾಟೆ ಬೀದಿಗೆ – ಹಾಕಿ ಸ್ಟಿಕ್‍ನಲ್ಲಿ ಬಡಿದಾಡಿದ ಕುಟುಂಬಸ್ಥರು

    ಆಸ್ತಿ ಗಲಾಟೆ ಬೀದಿಗೆ – ಹಾಕಿ ಸ್ಟಿಕ್‍ನಲ್ಲಿ ಬಡಿದಾಡಿದ ಕುಟುಂಬಸ್ಥರು

    ಲಕ್ನೋ: ಆಸ್ತಿ ವಿಚಾರವಾಗಿ ಎರಡು ಕುಟುಂಬಗಳು ನಡು ರಸ್ತೆಯಲ್ಲಿ ಪರಸ್ಪರ ಹಾಕಿ ಸ್ಟಿಕ್‍ನಲ್ಲಿ ಕಾದಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದ ದುಜಾನಾ ಗ್ರಾಮದಲ್ಲಿ ನಡೆದಿದೆ.

    ಕೆಲವು ದಿನಗಳ ಹಿಂದೆ ಯುದ್ವೀರ್ ಮತ್ತು ರಾಮ್ಲಖಾನ್ ನಡುವೆ ಆಸ್ತಿ ಹಂಚಿಕೆ ವಿಚಾರ ಇತ್ಯರ್ಥವಾಗಿತ್ತು. ಆದರೆ ಇತ್ಯರ್ಥದ ಬಳಿಕ ರಾಮ್ಲಖಾನ್ ಅವರು ನೀಡಿದ್ದ ಆಸ್ತಿ ಹಂಚಿಕೆಯ ಬಗ್ಗೆ ಅಸಮಾಧಾನಗೊಂಡಿದ್ದರು. ಇದನ್ನೂ ಓದಿ: SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ – ಮಾ.28 ರಿಂದ ಆರಂಭ

     

    ಗುರುವಾರ ರಾಮ್ಲಖಾನ್, ಅವರ ಪತ್ನಿ ಸುಮನ್ ಮತ್ತು ಮಗ ಅಂಕಿತ್ ಅವರು ಜಮೀನಿಗೆ ಹೋಗುತ್ತಿದ್ದ ವೇಳೆ ಯುದ್ವೀರ್ ಮತ್ತು ಅವರ ಪತ್ನಿ ಹಾಕಿ ಸ್ಟಿಕ್‍ನಿಂದ ಹಲ್ಲೆ ನಡೆಸಿದ್ದಾರೆ. ಇದೀಗ ಘಟನೆಯಲ್ಲಿ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ಯುದ್ವೀರ್ ಮತ್ತು ಅವರ ಪತ್ನಿಗೆ ಹಾಕಿಸ್ಟಿಕ್‍ನಿಂದ ಹಲ್ಲೆ ನಡೆಸುತ್ತಿದ್ದಾಗ, ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಹಾಕಿ ಸ್ಟಿಕ್ ಕಿತ್ತುಕೊಂಡು ಯುದ್ವೀರ್ ಅವರು ಅಂಕಿತ್ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಸೋಮವಾರದಿಂದ SSLC ಪರೀಕ್ಷೆ- ಹಿಜಬ್ ನಿಷೇಧ, ಸಮವಸ್ತ್ರ ಕಡ್ಡಾಯ

    ಸದ್ಯ ಯುದ್ವೀರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ರಾಮ್ಲಖಾನ್ ಮತ್ತು ಸುಮನ್ ಅವರನ್ನು ಬಂಧಿಸಿದ್ದಾರೆ. ಜೊತೆಗೆ ಅವರ ಮಗ ಅಂಕಿತ್ ವಿರುದ್ಧ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನಮಗೆ ಕೋವಿಡ್ ಪರಿಹಾರ ಬೇಡ – ಸರ್ಕಾರದ ಹಣವನ್ನು ತಿರಸ್ಕರಿಸಿದ 893 ಕುಟುಂಬಗಳು

    ನಮಗೆ ಕೋವಿಡ್ ಪರಿಹಾರ ಬೇಡ – ಸರ್ಕಾರದ ಹಣವನ್ನು ತಿರಸ್ಕರಿಸಿದ 893 ಕುಟುಂಬಗಳು

    ಬೆಂಗಳೂರು: ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ನೀಡಿದ್ದ 50 ಸಾವಿರ ರೂ. ಪರಿಹಾರ ಧನವನ್ನು ಕರ್ನಾಟಕದ 893 ಕುಟುಂಬಗಳು ತಿರಸ್ಕರಿಸಿವೆ.

    ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಕೊರೊನಾ ಪರಿಹಾರ ಧನವು ಕೇಂದ್ರ ಸರ್ಕಾರದಿಂದ ಘೋಷಣೆಯಾಗಿತ್ತು. ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಒಂದು ಲಕ್ಷ ರೂ. ಪರಿಹಾರ ಧನವನ್ನು ನೀಡಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 1.5 ಲಕ್ಷ ರೂ. ಪರಿಹಾರ ಧನವನ್ನು ಘೋಷಣೆ ಮಾಡಲಾಗಿತ್ತು. ಇದನ್ನೂ ಓದಿ: ಧೋವಲ್‌ ಸಂಧಾನ – ಗಡಿಯಿಂದ ಪೂರ್ಣ ಸೇನೆ ವಾಪಸ್‌ಗೆ ಚೀನಾ ಒಪ್ಪಿಗೆ

    COVID-19
    Nurse Tina Nguyen administers a nasal swab to a patient in their car at a coronavirus testing site outside International Community Health Services in the Chinatown-International District during the coronavirus disease (COVID-19) outbreak in Seattle, Washington, U.S. March 26, 2020. REUTERS/Lindsey Wasson – RC2VRF96BFCZ

     

    ಸರ್ಕಾರ ಪರಿಹಾರ ಘೋಷಣೆ ಮಾಡಿದರೂ ಕುಟುಂಬಗಳ ಅವರ ಹೆಸರಿನಲ್ಲಿ ಹಣವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿವೆ. ನಮಗೆ ಮೃತಪಟ್ಟವರ ಹೆಸರಿನಲ್ಲಿ ಸರ್ಕಾರದ ಹಣ ಬೇಡ. ಅದನ್ನು ಬಡವರಿಗೆ ನೀಡಿ ಎಂದು ಹೇಳಿವೆ. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು – ಭಾರತದ ಸೇನೆಗೆ ಹೆದರಿ ಪರಾರಿಯಾದ ಚೀನಿ ಸೈನಿಕರು

    ರಾಜಧಾನಿ ಬೆಂಗಳೂರು ಒಂದರಲ್ಲೇ 521 ಕುಟುಂಬಗಳು ಕೋವಿಡ್ ಪರಿಹಾರ ಧನವನ್ನು ನಿರಾಕರಿಸಿವೆ. ಕೊರೊನಾದಿಂದ ರಾಜಧಾನಿಯಲ್ಲಿ ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಸರ್ಕಾರದ ಅನುದಾನಗಳು ಸೂಕ್ತ ಸಮಯಕ್ಕೆ ಕೈ ಸೇರುವುದೇ ಕಷ್ಟವಾಗಿರುವ ಸಮಯದಲ್ಲಿ ಕುಟುಂಬಗಳು ಪರಿಹಾರ ಬೇಡ ಎಂದು ಹೇಳಿವೆ.

    ಯಾವ ಜಿಲ್ಲೆಯಲ್ಲಿ ಎಷ್ಟು ಕುಟುಂಬ ನಿರಾಕರಣೆ?
    ಬಿಬಿಎಮ್‍ಪಿ ವ್ಯಾಪ್ತಿಯಲ್ಲಿ 481, ಬೆಂಗಳೂರು ನಗರ 40, ಕೋಲಾರ 55, ಮೈಸೂರು 29, ಹಾಸನ 26, ದಕ್ಷಿಣ ಕನ್ನಡ 24, ಕಲಬುರಗಿ 23, ಕೊಪ್ಪಳ 17 ಮಂಡ್ಯ 17 ಶಿವಮೊಗ್ಗ 16, ಉತ್ತರಕನ್ನಡ 14, ಬಳ್ಳಾರಿ 13, ಚಿಕ್ಕಮಗಳೂರು 12, ಚಾಮರಾಜನಗರ 11, ಬಾಗಲಕೋಟೆ 9, ಉಡುಪಿ 9, ಬೆಳಗಾವಿ 9, ಚಿಕ್ಕಬಳ್ಳಾಪುರ ಮತ್ತು ವಿಜಯಪುರ ತಲಾ 8, ಬೀದರ ಮತ್ತು ತುಮಕೂರು ತಲಾ 7, ಹಾವೇರಿ 6, ಬೆಂಗಳೂರು ಗ್ರಾಮಾಂತರ ಗದಗ ಹಾಗೂ ರಾಯಚೂರು ತಲಾ 5, ಚಿತ್ರದುರ್ಗ 3, ದಾವಣಗೆರೆ 2, ಯಾದಗಿರಿ 1

  • ಕಾರ್ ಪಾರ್ಕಿಂಗ್ ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ

    ಕಾರ್ ಪಾರ್ಕಿಂಗ್ ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ

    ಧಾರವಾಡ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಹತ್ತಿರ ನಡೆದಿದೆ.

    ಕಳೆದ ಸುಮಾರು ದಿನಗಳಿಂದ ಉಣಕಲ್ ಭಾಗದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಜನರು ದಿನವೂ ಹೊಡೆದಾಡುವ ಪ್ರಸಂಗಗಳು ಗೋಚರಿಸುತ್ತವೆ. ಸಾರ್ವಜನಿಕರೊಬ್ಬರು ರಸ್ತೆ ಮುಂದಿನ ಮನೆಯ ಮುಂದೆ ಕಾರ್ ಪಾರ್ಕ್ ಮಾಡಿ ಹೋಟೆಲ್‌ಗೆ ಹೋಗಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಈ ವೇಳೆ ಇದಕ್ಕೆ ಕೋಪಗೊಂಡ ಮನೆಯವರು ಕಾರಿನ ಗ್ಲಾಸ್ ಒಡೆದು ಕಾರ್ ಚಾಲಕನಿಗೆ ಹೊಡೆದಿದ್ದಾರೆ. ಬಳಿಕ ಕಾರ್ ಚಾಲಕ ಪುನಃ ತನ್ನ ಸ್ನೇಹಿತರ ಜೊತೆಗೆ ಬಂದು ಜಗಳ ತಗೆದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ ದೊಣ್ಣೆಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧ

  • ಮತ್ತೆ ಬೆಟ್ಟ ಕುಸಿಯುವ ಭೀತಿ- ಏಳು ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್

    ಮತ್ತೆ ಬೆಟ್ಟ ಕುಸಿಯುವ ಭೀತಿ- ಏಳು ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್

    ಮಡಿಕೇರಿ: ಪ್ರಕೃತಿಯ ತವರು ಕೊಡಗಿನಲ್ಲಿ ಮಳೆಗಾಲ ಬಂದರೆ ಇಲ್ಲಿನ ಜನರಿಗೆ ಅತಂಕ ಶುರುವಾಗುತ್ತದೆ. ಅದರಲ್ಲೂ ಗುಡ್ಡಗಾಡು, ನದಿ ಪಾತ್ರದ ಜನ ಭಯದಿಂದ ದಿನ ದೂಡುವ ಪರಿಸ್ಥಿತಿ ನಿರ್ಮಾಣ ಅಗುತ್ತೆ. ಕೊಡಗಿನಲ್ಲಿ ಕಳೆದ 10 ದಿನಗಳಿಂದ ಮಳೆಯ ಅರ್ಭಟ ಮುಂದುವರೆದಿದೆ. ಹೀಗಾಗಿ ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ ಜನರಲ್ಲಿ ಮತ್ತೆ ಆತಂಕ ಮೂಡಿದೆ. ಅಲ್ಲದೆ ಸ್ಥಳಾಂತರಗೊಳ್ಳುವಂತೆ 7 ಕುಟುಂಬಗಳಿಗೆ ಗ್ರಾಮ ಪಂಚಾಯಿತಿ ನೋಟಿಸ್ ಸಹ ನೀಡಿದೆ.

    2018ರಲ್ಲಿ ಮಾದಾಪುರ-ಮಡಿಕೇರಿ ನಡುವಿನ ಮಕ್ಕಂದೂರುವಿನ ಬಾಲಾಜಿ ತೋಟದ ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮ ಮನೆಗಳು ಸಂಪೂರ್ಣ ನೆಲಕಚ್ಚಿ, ಪ್ರಾಣಿಗಳು ಸಾವನ್ನಪ್ಪಿದ್ದವು. ಇದೀಗ ಅಂದು ಗುಡ್ಡ ಕುಸಿದ ಸ್ಥಳದಲ್ಲಿಯೇ ಮತ್ತೊಮ್ಮೆ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿಯುತ್ತಿದ್ದು, ಆತಂಕ ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಮಕ್ಕಂದೂರು ಸುತ್ತಲಿನ ಪ್ರದೇಶವಾದ ಉದಯಗಿರಿ, ಮೇಘಾತಾಳು, ತಂತಿಪಾಲ ಹಾಗೂ ಹುಲಿತಾಳ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ಸಾಕಷ್ಟು ನಷ್ಟ ಅನುಭವಿಸಿದ ಜನರಿಗೆ ಮತ್ತೆ ಇಲ್ಲಿನ ಉದಯಗಿರಿ ಬೆಟ್ಟ ಕುಸಿಯುವ ಅತಂಕ ಮನೆ ಮಾಡಿದೆ. ವಾರದಿಂದ ಅಗುತ್ತಿರುವ ಮಳೆಯಿಂದ ಈಗಾಗಲೇ ಬೆಟ್ಟ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಪ್ರಮಾಣದಲ್ಲಿ ಗುಡ್ಡ ಕುಸಿಯಲು ಅರಂಭವಾಗಿದೆ. ಹೀಗಾಗಿ ಈ ಬೆಟ್ಟದ ಕೆಳಭಾಗದಲ್ಲಿ ವಾಸ ಮಾಡುವ 7 ಕುಟುಂಬಗಳ ಮನೆಗೆಗಳಲ್ಲಿ ಆತಂಕ ಮನೆ ಮಾಡಿದೆ.

    ಈ ಪ್ರದೇಶದಲ್ಲಿ ವಾಸ ಮಾಡುವ ಜನರು ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಆಗ್ರಹ ಮಾಡುತ್ತಿದ್ದಾರೆ. ಸುತ್ತಲೂ ಬೆಟ್ಟ ಇರುವ ಹಿನ್ನಲೆಯಲ್ಲಿ 2018 ರಲ್ಲೂ ಪಕ್ಕದ ಬೆಟ್ಟ ಕುಸಿದಿದ್ದು, ಬಾಬು ಎಂಬುವರು ಇದೇ ಬೆಟ್ಟಸ ಕೆಳಗೆ ಸಿಲುಕಿ ಸಾವನ್ನಪ್ಪಿದ್ದರು. 2018ರಲ್ಲಿ ಬೆಟ್ಟ ಕುಸಿದು ಈ ಭಾಗದ ಮನೆಗಳ ಬಳಿ ಕೃತಕವಾಗಿ ಕೆರೆ ನಿರ್ಮಾಣವಾಗಿದೆ. ಹೀಗಾಗಿ ಬೆಟ್ಟದಲ್ಲಿ ತೇವಾಂಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗೆ ಮಳೆ ಮುಂದುವರಿದಲ್ಲಿ ಬೆಟ್ಟ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ತಕ್ಷಣ ಸ್ಥಳಾಂತರಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ಸೂಕ್ಷ್ಮತೆಗಳನ್ನು ಪರಿಶೀಲನೆ ಮಾಡಿದ ಮಕ್ಕಂದೂರು ಗ್ರಾಮ ಪಂಚಾಯತಿ ಈಗಾಗಲೇ ಏಳು ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಾನವಿ ಮಾಡಿದ್ದಾರೆ.

    ಈ ಜನರ ಸಮಸ್ಯೆಗಳನ್ನು ಅಲಿಸಲು ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ರವಿಕುಶಾಲಪ್ಪ ಅವರು ಸ್ಥಳಕ್ಕೆ ಅಗಮಿಸಿ ಬೆಟ್ಟ ಪ್ರದೇಶದ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಬೃಹತ್ ಪ್ರಮಾಣದಲ್ಲಿ ಬೆಟ್ಟ ಕುಸಿಯುವ ಸೂಚನೆ ಇದ್ದು, ಈಗಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜನರನ್ನು ಸ್ಥಳಾಂತರ ಮಾಡದಿದ್ದರೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾದ್ಯತೆ ಇದೆ.

  • ಚಾಕೇನಹಳ್ಳಿ ಸ್ಫೋಟ ಪ್ರಕರಣ- ಮೃತರ ಕುಟುಂಬಗಳಿಗೆ ಪರಿಹಾರದ ಚೆಕ್ ನೀಡಿದ ಸಚಿವ ಗೋಪಾಲಯ್ಯ

    ಚಾಕೇನಹಳ್ಳಿ ಸ್ಫೋಟ ಪ್ರಕರಣ- ಮೃತರ ಕುಟುಂಬಗಳಿಗೆ ಪರಿಹಾರದ ಚೆಕ್ ನೀಡಿದ ಸಚಿವ ಗೋಪಾಲಯ್ಯ

    ಹಾಸನ: ಜಿಲೆಟಿನ್ ರೀತಿಯ ವಸ್ತು ಸಿಡಿದು ಮೃತಪಟ್ಟ ಮೂವರ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಪರಿಹಾರದ ಚೆಕ್ ವಿತರಿಸಿದರು.

    ಜಿಲೆಟಿನ್ ರೀತಿಯ ಸ್ಫೋಟಕ ಸಿಡಿದು ಮೂವರು ಮೃತಪಟ್ಟಿದ್ದ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಯಲ್ಲಿ ನಡೆದಿತ್ತು. ಈ ವೇಳೆ ಮೂವರು ಸಾವನ್ನಪ್ಪಿದ್ದರು. ಇವರ ಕುಟುಂಬಗಳಿಗೆ ಇದೀಗ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ.ಗಳ ಚೆಕ್‍ನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ವಿತರಿಸಿದರು. ಇದನ್ನೂ ಓದಿ: ಚಾಕೇನಹಳ್ಳಿ ಸ್ಫೋಟ ಪ್ರಕರಣ- ಸಚಿವ, ಸಂಸದ, ಶಾಸಕರು ಸ್ಥಳಕ್ಕೆ ಭೇಟಿ, ಪರಿಶೀಲನೆ

    ನಂತರ ಮಾತನಾಡಿದ ಅವರು, ಮೃತರ ಕುಟುಂಬದ ನಿರ್ವಹಣೆಗಾಗಿ 5 ಲಕ್ಷ ರೂ.ಗಳ ಚಕ್‍ನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿತರಿಸಲಾಗಿದೆ. ಇನ್ನೂ 7.5 ಲಕ್ಷ ರೂ.ಗಳನ್ನು ಗಣಿ ಮಾಲೀಕರಿಂದ ನೀಡಲಾಗುತ್ತದೆ ಎಂದು ತಿಳಿದಿದರು. ಈ ವೇಳೆ ಶಾಸಕ ಬಾಲಕೃಷ್ಣ, ಜಿಲ್ಲಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜ್, ಸಿಇಒ ಪರಮೇಶ್, ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜ್ ಉಪಸ್ಥಿತರಿದ್ದರು.

  • ಕೊರೊನಾದಿಂದ ವ್ಯಕ್ತಿ ಸಾವು- 51 ಸಾವಿರ ಕೊಡಿ ದೇಹ ನೋಡಿ ಎಂದ ಖಾಸಗಿ ಆಸ್ಪತ್ರೆ

    ಕೊರೊನಾದಿಂದ ವ್ಯಕ್ತಿ ಸಾವು- 51 ಸಾವಿರ ಕೊಡಿ ದೇಹ ನೋಡಿ ಎಂದ ಖಾಸಗಿ ಆಸ್ಪತ್ರೆ

    – ಕೊನೆಗೂ ಮೃತದೇಹ ತೋರಿಸದೆ ಅಮಾನವೀಯವಾಗಿ ವರ್ತನೆ
    – ಪೊಲೀಸರ ಮಾತಿಗೂ ಜಗ್ಗದ ಆಸ್ಪತ್ರೆ ಸಿಬ್ಬಂದಿ

    ಕೋಲ್ಕತ್ತಾ: ಕೊರೊನಾದಿಂದ ಸಾವನ್ನಪ್ಪಿದವರ ದೇಹವನ್ನು ನೋಡಲು ಖಾಸಗಿ ಆಸ್ಪತ್ರೆ 51 ಸಾವಿರ ರೂ. ನೀಡಲುವಂತೆ ಬೇಡಿಕೆ ಇಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಕೊರೊನಾ ಸೋಂಕಿನಿಂದಾಗಿ ನಮ್ಮ ತಂದೆ ಹರಿ ಗುಪ್ತಾ ಶನಿವಾರ ಮಧ್ಯರಾತ್ರಿ ಸಾವನ್ನಪ್ಪಿದ್ದು, ಈ ಕುರಿತು ಖಾಸಗಿ ಆಸ್ಪತ್ರೆಯವರು ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಸಾಗರ್ ಗುಪ್ತಾ ತಿಳಿಸಿದ್ದಾರೆ.

    ಭಾನುವಾರ ಮಧ್ಯಾಹ್ನ ಆಸ್ಪತ್ರೆಯವರು ಕರೆ ಮಾಡಿ ಶನಿವಾರ ಮಧ್ಯರಾತ್ರಿ ನಮ್ಮ ತಮದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ರಾತ್ರಿಯೇ ಏಕೆ ನಮಗೆ ಹೇಳಲಿಲ್ಲ ಎಂದು ಆಸ್ಪತ್ರೆಯವನ್ನು ಪ್ರಶ್ನಿಸಿದರೆ, ಸಂಪರ್ಕದ ಮಾಹಿತಿ ಇರಲಿಲ್ಲ ಎಂದು ಹೇಳಿದರು ಎಂದು ಸಾಗರ್ ಆರೋಪಿಸಿದ್ದಾರೆ.

    ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಸ್ಪತ್ರೆಗೆ ತೆರಳಿದ್ದು, ಆಗ ದೇಹವನ್ನು ಅಂತ್ಯಸಂಸ್ಕಾರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ನಂತರ ಕುಟುಂಬಸ್ಥರು ಶಿಬ್‍ಪುರ್ ಸ್ಮಶಾಣಕ್ಕೆ ತೆರಳಿದ್ದು, ಈ ವೇಳೆ ಸಿಬ್ಬಂದಿ ದೇಹವನ್ನು ನೋಡಲು 51 ಸಾವಿರ ರೂ. ಪಾವತಿಸುವಂತೆ ತಿಳಿಸಿದರು. ನಂತರ ಕುಟುಂಬಸ್ಥರು ಮಾತನಾಡಿ ಈ ಹಣವನ್ನು 31 ಸಾವಿರಕ್ಕೆ ಇಳಿಸಿದ್ದಾರೆ. ಆದರೆ ಈ ಹಣವನ್ನು ಕುಟುಂಬಸ್ಥರಿಗೆ ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಪೊಲೀಸ್ ಅಧಿಕಾರಿಯೊಬ್ಬರು ಸ್ಥಳಕ್ಕಾಗಮಿಸಿದ್ದು, ಈ ವೇಳೆ ಪೊಲೀಸರು ಸಹ ಮನವಿ ಮಾಡಿಕೊಂಡಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಇದಾವುದನ್ನೂ ಕೇಳದೆ ಮೇಲಾಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಈ ವೇಳೆ ಕುಟುಂಬಸ್ಥರು ಘಟನೆಯನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಇದನ್ನು ಕಂಡ ಆಸ್ಪತ್ರೆ ಸಿಬ್ಬಂದಿ ಕುಟುಂಬಸ್ಥರ ಮೊಬೈಲ್ ಕಸಿದುಕೊಂಡಿದ್ದಾರೆ.

    ಅಂತಿಮವಾಗಿ ಕುಟುಂಬಸ್ಥರಿಗೆ ಮೃತ ದೇಹವನ್ನು ನೋಡಲು ಬಿಡದೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಈಗಲೂ ಆಸ್ಪತ್ರೆ ಸಿಬ್ಬಂದಿ ಸುಳ್ಳು ಹೇಳಿದ್ದು, ಯಾವುದೇ ಕುಟುಂಬ ಸದಸ್ಯರು ಸಂಪರ್ಕಕ್ಕೆ ಬಾರದ ಕಾರಣ ನಾವೇ ಅಂತ್ಯಸಂಸ್ಕಾರ ಮಾಡಿದ್ದೇವೆ ಎಂದು ವಾದಿಸಿದ್ದಾರೆ. ಇದೀಗ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಲು ಯೋಚಿಸಿದ್ದಾರೆ.

  • ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ- ರಕ್ತಸಿಕ್ತವಾದ ರಸ್ತೆ

    ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ- ರಕ್ತಸಿಕ್ತವಾದ ರಸ್ತೆ

    ಗದಗ: ಹಳೆ ವೈಷಮ್ಯದ ಹಿನ್ನೆಲೆ ಎರಡು ಕುಟುಂಬಗಳು ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿರುವ ಘಟನೆ ಗದಗದ ಬೆಟಗೇರಿ ಸೆಟಲ್ಮೆಂಟ್‍ನಲ್ಲಿ ನಡೆದಿದೆ.

    ನಡು ರಸ್ತೆಯಲ್ಲೆ ಲಾಂಗು, ಮಚ್ಚುಗಳು ಝಳಪಿದ ಹಿನ್ನೆಲೆ ರಸ್ತೆ ಅನೇಕ ಕಡೆಗೆ ರಕ್ತಸಿಕ್ತವಾಗಿದೆ. ಬುಲೆಟ್ ಬೈಕ್, ಕಾರ್, ಮನೆಯ ಕಿಟಕಿ, ಬಾಗಿಲು ಸಂಪೂರ್ಣ ಜಖಂ ಆಗಿವೆ. ಘಟನೆಯಿಂದ ಯೇಸುಕುಮಾರ ಹೊಸಮನಿ (34), ಅನಿಲ ಮುತಗಾರ (35), ಗೋವಿಂದ ಮುತಗಾರ (43) ಮತ್ತು ಶಾಕಮ್ಮ (37)ಗೆ ಗಂಭೀರವಾಗಿ ಗಾಯಗಳಾಗಿವೆ.

    ಗಾಯಾಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಜುನಾಥ ಜಾವಾವ್, ವಿಕಾಸ್ ಜಾದಾವ ಎಂಬವರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಕೆ. ಪ್ರಹ್ಲಾದ್, ಸಿಪಿಐ ಕಿರಣ್ ಕುಮಾರ್ ಕಾಂಬಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಗದಗನ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಿರುಗಾಳಿ ಮಳೆಗೆ ಮನೆ ಕಳೆದುಕೊಂಡು ಕಣ್ಣೀರಿಡುತ್ತಿದೆ ಕುಟುಂಬ

    ಬಿರುಗಾಳಿ ಮಳೆಗೆ ಮನೆ ಕಳೆದುಕೊಂಡು ಕಣ್ಣೀರಿಡುತ್ತಿದೆ ಕುಟುಂಬ

    ಗದಗ: ಮಳೆ ರಾಯನ ಆರ್ಭಟಕ್ಕೆ ಮನೆಯ ಶೀಟ್‍ಗಳು ಹಾರಿ ಹೋಗಿ, ಮನೆ ಸಂಪೂರ್ಣ ನಾಶವಾಗಿವೆ. ಪುಟ್ಟ ಮನೆಗಳಲ್ಲೇ ವಾಸಿಸುತ್ತಿದ್ದ ಬಡ ಕುಟುಂಬಗಳು ಸೂರು ಇಲ್ಲದೆ ಕಣ್ಣೀರಿಡುತ್ತಿವೆ.

    ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಘಟನೆ ನಡೆದಿದ್ದು, ಹಮಾಲರ ಕಾಲೋನಿಯ ಕಳಕವ್ವ ತಳವಾರ ಅವರ ಮನೆಯ ಶೀಟ್‍ಗಳು ಹಾರಿಹೋಗಿವೆ. ಬೆಳಗಿನ ಜಾವ ಸುರಿದ ಬಿರುಗಾಳಿ ಸಹಿತ ಮಳೆಯ ಅವಾಂತರಕ್ಕೆ ನಿವಾಸಿಗಳು ಕಣ್ಣೀರಿಡುತ್ತಿದ್ದಾರೆ. ಬಿರುಗಾಳಿ ಮಳೆ ಸುರಿಯುವ ಸಂದರ್ಭದಲ್ಲಿ ಮನೆಯಲ್ಲಿ ಗರ್ಭಿಣಿ ಹಾಗೂ ಚಿಕ್ಕಮಕ್ಕಳು ಸಹ ಇದ್ದು, ಭಯದಿಂದಲೇ ಜೀವ ಕೈಯ್ಯಲ್ಲಿ ಹಿಡಿದು ಕುಳಿತಂತಾಗಿತ್ತು.

    ಹಮಾಲರ ಕಾಲೋನಿಯಲ್ಲಿ ಹತ್ತಾರು ವರ್ಷಗಳಿಂದ ಈ ಕುಟುಂಬಗಳು ಹೀಗೆ ಜೀವನ ನಡೆಸುತ್ತಿವೆ. ಇಲ್ಲಿಯವರೆಗೆ ಯಾವೊಬ್ಬ ಜನಪ್ರತಿನಿಧಿಗಳು, ಅಧಿಕಾರಿಗಳು ನಮಗೆ ಸೌಲಭ್ಯಗಳನ್ನು ನೀಡಿಲ್ಲ ಎಂದು ನೊಂದ ಕುಟುಂಬಗಳು ಕಣ್ಣೀರಿಡುತ್ತಿವೆ. ಪಟ್ಟಣದ ಅನೇಕ ಕಡೆಗಳಲ್ಲಿ ಮನೆಗಳ ಮೇಲ್ಛಾವಣಿಗಳು ನಾಶವಾಗಿವೆ. ವಿದ್ಯುತ್ ಕಂಬಗಳು, ಗಿಡಮರಗಳು ಧರೆಗುರುಳಿವೆ. ಮಳೆಯ ಅವಾಂತರದಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ.