ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು (Car) ಜಲಪಾತಕ್ಕೆ ಬಿದ್ದಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಾಸನ (Hassan) ಜಿಲ್ಲೆ ಸಕಲೇಶಪುರ (Sakleshpura) ತಾಲೂಕಿನ ಶಿರಾಡಿಘಾಟ್ (Shiradi Ghat) ರಸ್ತೆಯಲ್ಲಿ ನಡೆದಿದೆ.
ಬೆಂಗಳೂರು ಮೂಲದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ವೇಳೆ ಜಲಪಾತ ವೀಕ್ಷಣೆಗೆ ಕಾರು ನಿಲ್ಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಫಾಲ್ಸ್‌ಗೆ ಕಾರು ಉರುಳಿ ಬಿದ್ದಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಲೆನಾಡು ಭಾಗದಲ್ಲಿ ಬಾರಿ ಮಳೆಯಿಂದ ಕಿರು ಜಲಪಾತಗಳು ತುಂಬಿ ಹರಿಯುತ್ತಿದ್ದು, ಬಾರಿ ಅನಾಹುತ ತಪ್ಪಿದಂತಾಗಿದೆ. ಇದನ್ನೂ ಓದಿ: ಹಿರಿಯ ನಟಿ ಬಿ. ಸರೋಜಾದೇವಿ ನಿಧನ – ಡಿಕೆಶಿ ಸಂತಾಪ
ಇತ್ತೀಚೆಗೆ ಎಷ್ಟೋ ಜನ ಮಲೆನಾಡಿನ (Malenadu) ಭಾಗಗಳಿಗೆ ಟ್ರಿಪ್ (Tour) ಬಂದವರು ಅಲ್ಲಿನ ಮಳೆ (Rain), ಕಾಡು ವಿಡಿಯೋ ಮಾಡಿ ಯಾವಾಗಲೂ ಬಚ್ಚಲು ಮನೆ ಥರ ಇರುತ್ತೆ ಅನ್ನೋ ಸಿನಿಮಾ ಡೈಲಾಗ್ ಸೇರಿಸಿ ಹಂಚಿಕೊಳ್ತಿದಾರೆ. ಅವರಿಗೆಲ್ಲ ಮಲೆನಾಡು ಭೂಮಿ ಮೇಲಿನ ಸ್ವರ್ಗ ಅಂತ ಗೊತ್ತಿಲ್ಲ.. ಇಡೀ ವಿಶ್ವದಲ್ಲಿ ನನ್ನ ಪಾಲಿಗೆ ಕರ್ನಾಟಕದ (Karnataka) ಮಲೆನಾಡಿನ ಭಾಗಗಳು ಒಂದು ವಿಶೇಷವಾದ ಪ್ರಪಂಚವೇ ಸೈ.. ಹಾಗಂತ ಎಲ್ಲಾ ಪ್ರದೇಶಗಳಿಗೂ ತನ್ನದೇ ಆದ ಸೌಂದರ್ಯ, ವಿಶೇಷ ಇದ್ದೇ ಇರುತ್ತೆ.. ಅದು ಒಂದೊಂದು ಕಾಲದಲ್ಲಿ ಒಂದೊಂದು ಚೆಲುವು.. ಹಾಗೇ ಮಲೆನಾಡದಲ್ಲಿ ಮಳೆಗೆ ಇಲ್ಲಿನ ಪ್ರಕೃತಿ, ಜನಜೀವನ, ಸಣ್ಣ ಪುಟ್ಟ ಝರಿ ಜಲಪಾತಗಳು ಮತ್ತಷ್ಟು ಸೌಂದರ್ಯ ಹೆಚ್ಚಿಸುತ್ತವೆ.
ಮಲೆನಾಡಿಗೆ ಮತ್ತಷ್ಟು ಜೀವ ತುಂಬುವ ವಿಶೇಷ ಅತಿಥಿಗಳು ಸಹ ಇದ್ದಾರೆ. ಅವರೆಲ್ಲ ಮಳೆಗಾಲಕ್ಕೆ ಬಂದು ಹೋಗುವವರು. ಈಗ ಬಂದ್ರೆ ಮತ್ತೆ ಬರೋದು ಮುಂದಿನ ಮಳೆಗಾಲಕ್ಕೆ..! ಅಂತಹ ಕೆಲವು ಅತಿಥಿಗಳ ಪರಿಚಯನಾ ಇವತ್ತು ಮಾಡ್ಕೊಡ್ತಿನಿ.
ಅಪ್ಸರೆ ಜಡೆಯಂತ ಜಲಪಾತಗಳು!
ಮಲೆನಾಡಿನಲ್ಲಿ ಬರುವ ಈ ದೊಡ್ಡ ದೊಡ್ಡ ಜಲಪಾತಗಳನ್ನು ನಾವು ನೀವೆಲ್ಲ ನೋಡೇ ಇರುತ್ತೇವೆ. ಆದ್ರೆ ಈ ಮಳೆಗಾಲದಲ್ಲಿ ಮಾತ್ರ ಬಂದು ಹೋಗುವ, ಎಷ್ಟೋ ಹೆಸರಿಲ್ಲದ ಜಲಪಾತಗಳು ಲೆಕ್ಕಕ್ಕೆ ಸಿಗುವುದಿಲ್ಲ. ಅವೆಲ್ಲ ಹೀಗೆ ಹೈವೇ ಪಕ್ಕದಲ್ಲಿ ಕಾರು ನಿಲ್ಲಿಸಿದ ತಕ್ಷಣ ಕಣ್ಣಿಗೂ ಬೀಳೋದಿಲ್ಲ. ಅಂತಹ ಅಪ್ಸರೆಯರ ಜಡೆ ಚೆಲುವು ಕಾಣಬೇಕಾದರೆ, ಪಶ್ಚಿಮ ಘಟ್ಟಗಳ ಕಾಡುಗಳನ್ನು ಸೇರಬೇಕು. ಯಾವ ನದಿಯೋ ಗೊತ್ತಿಲ್ಲ… ಎಲ್ಲೋ ಒಂದೊಂದು ಮೂಲೆಯಲ್ಲಿ ಸಣ್ಣದಾಗಿ ಹುಟ್ಟಿ ಅಲ್ಲಲ್ಲಿ ಅದೆಷ್ಟೋ ಕಡೆಗಳಲ್ಲಿ ಧುಮುಕಿ ಹರಿಯುವ ಈ ಜಲಪಾತಗಳಿಗೆ ಹೆಸರಿಟ್ಟವರಿಲ್ಲ. ನೋಡಿದವರ ಸಂಖ್ಯೆಯೂ ಕಡಿಮೆ..! ಪೇಟೆಯ ಜನಕ್ಕೆ ಆ ಜಾಗಗಳು ಗೊತ್ತಿಲ್ಲ.. ಅಲ್ಲಿಯ ಹಳ್ಳಿಯ ಜನಗಳಿಗೆ ಅದು ವಿಶೇಷ ಎಂದು ಅನಿಸದೇ ಅವು ಅಪರಿಚಿತರಾಗೇ ಉಳಿದು ಬಿಡುತ್ತವೆ.
ಪ್ರೆಟ್ಟಿ ಫ್ಲವರ್ಸ್!
ಮಳೆಗಾಲದಲ್ಲಿ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಈ ಸಮಯದಲ್ಲಿ ಮಾತ್ರ ಕಾಣಸಿಗುವ ಹೂಗಳು ಸಿಗುತ್ತವೆ. ಅದರಲ್ಲಿ ನಾನಾ ಬಗೆಯ ಆರ್ಕಿಡ್‌ಗಳು ಹಾಗೂ ನೆಲದ ಮೇಲೆಯೇ ಅರಳಿ ಮಣ್ಣಾಗುವ ಅದೆಷ್ಟೋ ಅಪರಿಚಿತ ಹೂಗಳು ಸೇರಿವೆ. ಈ ಸಮಯದಲ್ಲಿ ಹೆಚ್ಚಿನದ್ದಾಗಿ ಕಾಣಸಿಗುವುದು ಸೀತಾಳೆ ಹೂ, ಮತ್ತು ಕಾಡು ಅರಶಿನದ ಹೂ, ಇವು ಮಳೆಯಗಾಲದಲ್ಲಿ ಮಲೆನಾಡಿನ ಅಂಗಳವನ್ನು ಶೃಂಗರಿಸಲು ಬರುವ ವಿಶೇಷ ಆಭರಣಗಳು ಎಂದರೂ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಅಷ್ಟೊಂದು ಚೆಂದವಾಗಿ ಅಲ್ಲಲ್ಲಿ ಅಲಂಕಾರಕ್ಕೆ ಜೋಡಿಸಿಟ್ಟಂತೆ ಅರಳಿ ನಿಂತಿರುತ್ತವೆ ಈ ವಿಶೇಷ ಹೂಗಳು. ಇವು ಒಮ್ಮೆ ಆಗಿ ಹೋದರೆ ಮತ್ತೆ ಬರುವುದು ಮುಂದಿನ ಮಳೆಗಾಲಕ್ಕೆ. ಅಲ್ಲಿಯ ತನಕವೂ ಈ ಚೆಲುವು ಮಲೆನಾಡಿನ ಚೆಲುವೆಯ ಕೊರಳಿನಲ್ಲಿ ಹಾರವಾಗಿ ಉಳಿದಿರುತ್ತವೆ!
ಕಲರ್ ಫುಲ್ ಅಣಬೆಗಳು!
ಮಳೆ ಆರಂಭವಾಗಿ, ಒಂದು ಸಣ್ಣ ಬಿಸಿಲು ಬಿಟ್ರೆ ಸಾಕು.. ಕೆಲವು ಭಾಗಗಳಲ್ಲಿ ಅಣಬೆಗಳು ಬೆಳೆಯುತ್ತವೆ. ಅದರಲ್ಲಿ ಕೆಲವನ್ನು ಮನುಷ್ಯರು ತಿನ್ನಬಹುದು. ಇನ್ನೂ ಕೆಲವು ವಿಷಕಾರಿ ಅಂಶಗಳಿರುವಂತಹ ಅಣಬೆಗಳು ಇರುತ್ತವೆ. ಒಟ್ಟಾರೆ ಈ ಅಣಬೆಗಳಿಗೆ ಪ್ರಕೃತಿ ದತ್ತವಾಗಿ ಬಂದಂತಹ ವಿಶೇಷ ಬಣ್ಣ, ಸೌಂದರ್ಯ ಇರುತ್ತದೆ. ಇಂತಹ ವಿಶೇಷತೆಯನ್ನ ನೀವು ಎಂಜಾಯ್ ಮಾಡೋದಾದ್ರೆ, ಸಿಟಿ ಬಿಟ್ಟು ಮಳೆಕಾಡಿನ ಕಡೆ ಸ್ವಲ್ಪ ಓಡಾಡಬೇಕು! ಇಲ್ಲಿ ಬೆಳೆಯುವ ತಿನ್ನಬಹುದಾದ ಅಣಬೆಗಳಲ್ಲಿ ಅಪಾರವಾದ ಪ್ರೊಟೀನ್ ಇರುತ್ತದೆ. ಅಲ್ಲದೇ ಅನೇಕ ಸಣ್ಣಪುಟ್ಟ ಕಾಯಿಲೆಗಳಿಗೆ ರೋಗನಿರೋದಕ ಶಕ್ತಿಯನ್ನು ಒದಗಿಸುತ್ತದೆ.
ಕಳಲೆ
ಇದು ಮಲೆನಾಡಿಗರ ಅಚ್ಚುಮೆಚ್ಚಿನ ಆಹಾರ ಪದಾರ್ಥಗಳಲ್ಲಿ ಒಂದು. ಕಳಲೆ ಎಂದರೆ ಬಿದಿರಿನ ಮೊಳಕೆ.. ಇದು ದೊಡ್ಡ ಬಿದರಿನ ಗಿಡಗಳ ಕೆಳಗೆ ಮಳೆಗಾಲದ ಸಮಯದಲ್ಲಿ ಮಾತ್ರ ಮೊಳಕೆಯೊಡೆಯುತ್ತವೆ. ಹೀಗೆ ಮೊಳಕೆಯಾದ ಕಳಲೆಯನ್ನು ತಂದು ಜನ ಸಾರು, ಪಲ್ಯವನ್ನು ಮಾಡುತ್ತಾರೆ. ಇದು ಮಲೆನಾಡಿಗರಿಗೆ ಉಚಿತವಾಗಿ ಸಿಗುವಂತಹದ್ದು. ಆದರೆ ಬೇರೆ ಭಾಗಗಳಲ್ಲಿ ಹಣಕ್ಕೆ ಮಾರಾಟ ಮಾಡಲಾಗುತ್ತದೆ. ಇದರ ಮಾರಾಟ ನಿಷಿದ್ಧ ಆದರೂ ಜನ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾರಾಟ ಮಾಡ್ತಾರೆ.
ಪ್ರೊಟೀನ್ ಕಾರ್ಬೊಹೈಡ್ರೋಜನ್, ಖನಿಜಾಂಶ, ನಾರಿನಾಂಶ ಅಧಿಕವಾಗಿದ್ದು, ಕ್ಯಾಲ್ಸಿಯಂ, ಕಡಿಮೆ ಪ್ರಮಾಣದಲ್ಲಿರುವುದರಿಂದ ಇದು ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ. ಕರುಳುಗೆ ಸಂಬಂಧಿಸಿದ ಸಮಸ್ಯೆಗೆ ಇದು ಉತ್ತಮ ಆಹಾರ. ಆಯುರ್ವೇದ ಮತ್ತು ನಾಟಿ ವೈದ್ಯರು ಸಹ ಇದನ್ನೊಂದು ಉತ್ತಮ ಔಷಧೀಯ ಗುಣಗಳಿರುವ ಆಹಾರ ಎಂದು ಸೇವಿಸಲು ಸಲಹೆ ನೀಡುತ್ತಾರೆ. ಇನ್ನೂ ಕ್ಯಾನ್ಸರ್‌ನಂತಹ ಮಾರಕ ರೋಗಗಳ ವಿರುದ್ಧವೂ ಹೋರಾಡುವ ಅಂಶಗಳನ್ನು ಕಳಲೆ ಹೊಂದಿದೆ ಎಂಬುದು ತಜ್ಞರ ಅಭಿಪ್ರಾಯ.
ಏಡಿ& ಮೀನು!
ಮಲೆನಾಡಿನ ಕೃಷಿಕರಿಗೆ ಇದೊಂದು ಹಬ್ಬ..! ಮಳೆಗಾಲಕ್ಕೆ ಹೊರ ಬಂದು ಅಡ್ಡಾಡುವ ಏಡಿಗಳು, ನೀರು ಹರಿಯುವ ವಿರುದ್ಧವಾಗಿ ಸಂಚರಿಸಿ ಹುಲ್ಲಿನ ಮೇಲೆ ಹರಿದಾಡುವ ಮೀನುಗಳ ಶಿಕಾರಿ, ಅದರ ಮಜವೇ ಬೇರೆ. ತಲೆಗೆ ಟಾರ್ಚ್ ಕಟ್ಟಿ ʻಬಾವ ಕೆರೆ ತುಂಬಿ, ಮೀನು ಹತ್ತಿದಾವಂತೋʼ ಅಂತ ಹೇಳಿ ಹತ್ತಾರು ಜನ ಹೋಗಿ ಮೀನು ಏಡಿ ಹಿಡಿಯುವ ಗುಂಪು, ಅವುಗಳನ್ನು ಅಡುಗೆ ಮಾಡಿ ತಿನ್ನೋದಕ್ಕಿಂತ, ಅಲ್ಲಿ ಹುಡುಕಾಡೋದು ಒಂಥರಾ ಕ್ರೇಜ್. ಮೀನು ಸಿಕ್ಕಾಗ ಒಂಥರಾ ಖುಷಿ, ಸಿಗದಿದ್ದಾಗ ಅದನ್ನೇ ಹೇಳಿಕೊಂಡು ನಕ್ಕು ಕಾಲಕಳೆಯೋದು, ಅದೆಲ್ಲದರ ನಡುವೆ ಜೋ ಎಂದು ಸುರಿಯುವ ಮಳೆ, ಹರಿಯುವ ಹಳ್ಳಕೊಳ್ಳಗಳು!
ಈ ಚಟುವಟಿಕೆ ಎಲ್ಲಾ ನಡೆಯೋದು ಆದಷ್ಟು ಗದ್ದೆ ತೋಟಗಳ ಪಕ್ಕದಲ್ಲಿ. ಮೊದಲೆಲ್ಲ ಗದ್ದೆ ತೋಟಗಳಿಗೆ ರಸಾಯನಿಕ ಗೊಬ್ಬರ ಔಷಧಗಳ ಬಳಕೆ ಕಡಿಮೆ ಇತ್ತು. ಹಾಗಾಗಿ ಕೆರೆ, ಗದ್ದೆಗಳಲ್ಲಿ ಎಷ್ಟೊತ್ತಿಗೂ, ಮೀನುಗಳು, ಏಡಿಗಳು ಕಾಣ್ತಿದ್ವು, ಈಗೆಲ್ಲ ಲಾಭ ಬೇಕು ಅಂತ ಇರೋಬರೋ ಔಷಧಿ, ರಾಸಾಯನಿಕ ಗೊಬ್ಬರ ಹಾಕಿ ಏಡಿ, ಮೀನುಗಳ ಸಂತತಿ ಬಹಳಷ್ಟು ಕಡಿಮೆ ಆಗಿವೆ. ಇನ್ನೂ 10-20 ವರ್ಷಗಳಲ್ಲಿ ಇದೇ ರೀತಿ ಮುಂದುವರೆದ್ರೆ ನಿರ್ನಾಮವೇ ಆಗಬಹುದೇನೋ?
ಹೀಗೆ ಮಲೆನಾಡಲ್ಲಿ ಕಣ್ಣಿಗೆ ಕಾಣುವ, ಕಾಣದ ಅದೆಷ್ಟೋ ಅತಿಥಿಗಳು ಮಳೆಗಾಲಕ್ಕೆ ಬಂದು ಹೋಗ್ತಾರೆ.. ಅದು ಅದೆಷ್ಟು ಶತಶತಮಾನಗಳಿಂದ ನಡೆದುಕೊಂಡು ಬಂದಿದಿಯೋ, ಅದೆಷ್ಟು ಶತಮಾನಗಳು ಮುಂದುವರಿಯತ್ತೋ ಗೊತ್ತಿಲ್ಲ. ಈ ಚೆಲವು ಅದೆಷ್ಟೋ ಮಂದಿಯ ಅನುಭವಕ್ಕೆ ಬಂದಿರತ್ತೆ.. ಈ ಬರಹ ಓದಿ… ಹೌದಲ್ವಾ? ಅಂತ ಒಂದು ಸಾಲು ಹೇಳಿದ್ರೂ ಸಾಕು… ನನಗೆ ತೃಪ್ತಿ!
ಇಂತಹ ಪ್ರಕೃತಿಯ ಸೊಬಗನ್ನು ನೋಡಿ ಸಂಭ್ರಮಿಸಲು ನೀವು ಹೋಗಬೇಕಾದ ಒಂದಷ್ಟು ವಿಶಿಷ್ಟ ತಾಣಗಳ ಬಗ್ಗೆ ಮುಂದಿನ ಬುಧವಾರ (ಜೂ.25) ಮತ್ತೊಂದು ಬರಹದಲ್ಲಿ ತಿಳಿಸ್ತೇನೆ.
ತುಮಕೂರು: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೆರೆಕೋಡಿ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವತಿ ಸಾವನ್ನು ಗೆದ್ದು ಬಂದಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.
ತುಮಕೂರು ಜಿಲ್ಲೆ ಗುಬ್ಬಿ (Gubbi) ತಾಲೂಕಿನ ಶಿವರಾಂಪುರ ಗ್ರಾಮದ ಹಂಸಾ (19) ತುಮಕೂರು ಜಿಲ್ಲೆಯ ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಭಾನುವಾರ ಕೊಚ್ಚಿ ಹೋಗಿದ್ದಳು. ಸತತ 12 ಗಂಟೆಗಳ ಕಾರ್ಯಾಚರಣೆ ಮೂಲಕ ಅಗ್ನಿ ಶಾಮಕ ದಳದವರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: Tourism| ಕೇಂದ್ರದ ಯೋಜನೆಯಡಿ ಆಲಮಟ್ಟಿ, ಹರಕಲ್ ಗ್ರಾಮಗಳ ಅಭಿವೃದ್ಧಿ
ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹಂಸಾ, ಮಂದಾರಗಿರಿ ನೋಡಿಕೊಂಡು ಜಲಪಾತ ನೋಡಲು ನಾನು ಮತ್ತು ನನ್ನ ಸ್ನೇಹಿತೆ ಕೀರ್ತನಾ ಹೋಗಿದ್ದೆವು. ಸೆಲ್ಫಿ ಮುಗಿಸಿಕೊಂಡು ವಾಪಸ್ ಬರುವಾಗ ಬಂಡೆ ಜಾರಿ ಕೆಳಕ್ಕೆ ಬಿದ್ದೆ. ನನಗೆ ಈಜು ಬರೋದಿಲ್ಲ. ಪುಣ್ಯಕ್ಕೆ ಬಂಡೆ ಮಧ್ಯೆ ಸಿಲುಕಿಕೊಂಡೆ. ಬಂಡೆಯೊಳಗೆ ಸ್ವಲ್ಪ ಆಕಾಶ ಕಾಣಿಸುತ್ತಿತ್ತು. ಇಂಥ ಜಾಗಕ್ಕೆ ಹೋಗುವಾಗ ಜಾಗೃತೆಯಿಂದ ಹೋಗಬೇಕು. ಮಂಡಿ ಮೇಲೆ ನಿಂತಿದ್ದರಿಂದ ಮಂಡಿ ನೋವಿದೆ. ಮಂಡಿ ಸಪೋರ್ಟ್ ಬಿಟ್ಟರೆ ನಾನು ನೀರಿನಲ್ಲಿ ಕೊಚ್ಚಿ ಹೋಗುತಿದ್ದೆ. ಅಲ್ಲದೇ ತಹಶಿಲ್ದಾರ್ ಹಾಗೂ ಅಗ್ನಿ ಶಾಮಕ ದಳದವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾಳೆ. ಇದನ್ನೂ ಓದಿ: ದೀಪಾವಳಿಗೂ ಮುನ್ನವೇ ಗ್ಯಾಸ್ ಚೇಂಬರಾಗುವ ಭೀತಿಯಲ್ಲಿ ದೆಹಲಿ
ಸೌಂದರ್ಯದ ಗಣಿಯನ್ನೇ ಒಡಲೊಳಗೆ ಇಟ್ಟುಕೊಂಡಿದ್ದರೂ ಬೆಳಕಿಗೆ ಬಾರದ ಜಲಪಾತವೆಂದರೆ ಅದು ದಿಡುಪೆಯ ಆನಡ್ಕ ಫಾಲ್ಸ್ (Didupe Falls).
ಹೌದು. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಿಡುಪೆಯ ಆನಡ್ಕ ಫಾಲ್ಸ್ ಹಚ್ಚ ಹಸಿರಿನ ನಡುವೆ ಸ್ವಚ್ಛಂದವಾಗಿ ಹರಿಯುತ್ತಿದೆ. ಆದರೆ ಈ ಜಲಪಾತ ಮಾತ್ರ ಇನ್ನೂ ಬೆಳಕಿಗೆ ಬಂದಿಲ್ಲ. ಧರ್ಮಸ್ಥಳದ ಸಮೀಪ ಅಂದರೆ ಉಜಿರೆಯಿಂದ 23 ಕಿ.ಮೀ ದೂರದ ದಿಡುಪೆ ಎಂಬ ಹಳ್ಳಿಯಲ್ಲಿರುವುದರಿಂದಾಗಿ ಇದಕ್ಕೆ `ದಿಡುಪೆ ಫಾಲ್ಸ್’ ಎಂದೂ ಕರೆಯುತ್ತಾರೆ. ಆನಡ್ಕ, ಬಂಡಾಜೆ (Bandaje), ಎಂಬ ಹೆಸರೂ ಇದೆ.
ವಿಶೇಷತೆ ಏನು..?: ಈ ಜಲಪಾತದ ಜಾಡು ಚಾರ್ಮಾಡಿ ಘಾಟ್‍ನ (Charmady Ghat) ತಳದಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿ ಬಹು-ಮಡಿಸಿದ ದಿಡುಪೆ ಜಲಪಾತವು ಶಾಂತ ಕೊಳದ ರಚನೆಯನ್ನು ಸೃಷ್ಟಿಸುತ್ತದೆ. ಕಡಿದಾದ ಏರುವಿಕೆಯಿಂದಾಗಿ ಮೇಲಕ್ಕೆ ಪ್ರಯಾಣವು ಕಷ್ಟಕರವಾಗಿದೆ, ಆದರೆ ಇದು ಯೋಗ್ಯವಾಗಿದೆ. ಆರಂಭಿಕರು ದಿಡುಪೆ ಜಲಪಾತದಲ್ಲಿ ವಿರಾಮ ತೆಗೆದುಕೊಳ್ಳಬಹುದು, ಅಲ್ಲಿ ಅವರು ಈಜಬಹುದು ಮತ್ತು ಪ್ರಕೃತಿಯನ್ನು ವೀಕ್ಷಿಸಬಹುದು. ಹೆಚ್ಚು ಧೈರ್ಯವಿರುವವರು ಎರ್ಮಾಯಿ ಜಲಪಾತದಲ್ಲಿ ಚಾರಣದ ಶಿಖರವನ್ನು ತಲುಪಬಹುದು.
ಈಜುವುದನ್ನು ಹೊರತುಪಡಿಸಿ, ಪ್ರವಾಸಿಗರು (Tourist) ಇಲ್ಲಿ ಕ್ಯಾಂಪ್ ಮಾಡಬಹುದು. ಈ ಕಷ್ಟಕರವಾದ ಚಾರಣವನ್ನು ಪೂರ್ಣಗೊಳಿಸಿದ ನಂತರ, ಸೂರ್ಯನು ಬಂಡೆಗಳ ಮೇಲೆ ಚಿನ್ನದ ಹೊಳಪನ್ನು ಬೀರುವುದನ್ನು ಮತ್ತು ತೊರೆಗಳಿಗೆ ಅಡ್ಡಲಾಗಿ ಚಿಮ್ಮುವ ಕಪ್ಪೆಗಳನ್ನು ನೋಡುವುದು ತುಂಬಾ ತೃಪ್ತಿಕರವಾಗಿದೆ. ಜಲಪಾತಗಳ ತಳದಲ್ಲಿ ಸುಂದರವಾದ ನೈಸರ್ಗಿಕ ಕೊಳ ಇದೆ. ಇಲ್ಲಿ ಸ್ನಾನ ಮಾಡಬಹುದು ಮತ್ತು ನೀರಿನಿಂದ ಆಟವಾಡಬಹುದು. ಇನ್ನು ಮಳೆಗಾಲದಲ್ಲಿ ಈ ಪ್ರದೇಶಗಳಲ್ಲಿ ಭೂಕುಸಿತಗಳು ಸಾಮಾನ್ಯವಾಗಿದೆ. ಆದ್ದರಿಂದ ಜಲಪಾತಕ್ಕೆ ಭೇಟಿ ನೀಡಲು ಸ್ಥಳೀಯ ಮಾರ್ಗದರ್ಶಕರನ್ನು ನೇಮಿಸಿಕೊಳ್ಳುವುದು ಯಾವಾಗಲೂ ಉತ್ತಮವಾಗಿದೆ. ಇದನ್ನೂ ಓದಿ: ಇದು ಅಂತಿಂಥ ಕಲ್ಲಲ್ಲ ಗಡದ್ದಾದ ಗಡಾಯಿ ಕಲ್ಲು!
ಹೋಗುವುದು ಹೇಗೆ..?: ಉಜಿರೆಯಿಂದ ಚಾರ್ಮಾಡಿಗೆ (Charmady) ಹೋಗುವ ಮಾರ್ಗದಲ್ಲಿ ನಿಡಗಲ್‍ನಿಂದ ಸೋಮಂತಡ್ಕಕ್ಕೆ ಬಂದು ಅಲ್ಲಿಂದ ಅಡ್ಡರಸ್ತೆಯಲ್ಲಿ ದಿಡುಪೆಗೆ ಹೋಗಬೇಕು. ಅಲ್ಲಿಂದ 3ಕಿ.ಮೀ ಮಣ್ಣಿನ ರಸ್ತೆಯಲ್ಲಿ ಟ್ರೆಕ್ಕಿಂಗ್ ಮಾಡಬೇಕು. ಒಂದು ವೇಳೆ ಟ್ರಕ್ ಮಾಡಲು ಕಷ್ಟವಾದ್ರೆ 150 ರೂ. ಕೊಟ್ಟರೆ ಜೀಪಿನ ವ್ಯವಸ್ಥೆ ಸಹ ಮಾಡಿಕೊಳ್ಳಬಹುದು. ಆದರೂ ಸಹ ಮಣ್ಣಿನ ರಸ್ತೆ ಮುಗಿದ ಮೇಲೆ 1ಕಿ.ಮೀ ಅಲ್ಲಿನ ಸುತ್ತಮುತ್ತಲಿನವರ ತೋಟಗಳನ್ನು, ಹೊಳೆಗಳನ್ನು ದಾಟಿ ಕಾಡಿನಲ್ಲಿ ನಡೆದುಕೊಂಡು ಹೋಗಲೇ ಬೇಕಾಗುತ್ತದೆ. ಈ ವೇಲೆ ಜಿಗಣೆ ಕಾಟವೂ ಎದುರಾಗುತ್ತದೆ. ದಿಡುಪೆಯ ಬಳಿ ಚಿಕ್ಕ ಹೋಟೇಲ್‍ಗಳಿವೆ. ಸಂಜೆ 5 ಗಂಟೆ ಬಳಿಕ ಪ್ರವೇಶವಿಲ್ಲ.
ನೀವು ಬೆಂಗಳೂರಿನಿಂದ (Bengaluru) ಹೋಗಲು ಯೋಜಿಸುತ್ತಿದ್ದರೆ, ಇದು ಎನ್ ಹೆಚ್ 73 ಮತ್ತು ಎನ್ ಹೆಚ್ 75 ಮೂಲಕ ಸುಮಾರು 306 ಕಿಮೀ ಆಗಿದ್ದು, ಇದು ನಿಮಗೆ ಪೂರ್ಣಗೊಳ್ಳಲು ಸುಮಾರು 6 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನೀವು ಓಡಿಸಲು ಬಯಸದಿದ್ದರೆ ಬಸ್‍ಗಳು ಸಹ ಲಭ್ಯವಿದೆ. ಇನ್ನು ರೈಲಿನಲ್ಲಿ ಬರುವವರಾದರೆ ಮಂಗಳೂರು ಜಂಕ್ಷನ್ ಸುಮಾರು 51 ಕಿ.ಮೀ ದೂರದಲ್ಲಿರುವ ಉಜಿರೆಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ನೀವು ಮಂಗಳೂರು ಜಂಕ್ಷನ್‍ಗೆ ಟಿಕೆಟ್ ಕಾಯ್ದಿರಿಸಬಹುದು ಮತ್ತು ಅಲ್ಲಿಂದ ನೀವು ಬಸ್ ಅಥವಾ ಜೀಪ್ ಅನ್ನು ತೆಗೆದುಕೊಂಡು ನಂತರ ಉಜಿರೆಗೆ (Ujire) ಹೋಗಬಹುದು.
ಭೇಟಿಗೆ ಉತ್ತಮ ಸಮಯ ಯಾವುದು..?: ನವೆಂಬರ್ ಮತ್ತು ಮಾರ್ಚ್ ನಡುವೆ ಜಲಪಾತವನ್ನು ಭೇಟಿ ಮಾಡುವುದು ಉತ್ತಮ. ಮಾನ್ಸೂನ್ ಸಮಯದಲ್ಲಿ, ನೀರಿನ ಹರಿವು ಹೆಚ್ಚಾಗಬಹುದು, ಬಂಡೆಗಳು ಜಾರಬಹುದು ಮತ್ತು ಭೂಕುಸಿತಗಳು ಸಾಧ್ಯ, ಆದರೆ ಬೇಸಿಗೆಯಲ್ಲಿ ನೀರಿನ ಪ್ರಮಾಣವು ಕಡಿಮೆಯಾಗುತ್ತದೆ. ಪ್ರವಾಸಿಗರಿಗೆ ದಿಡುಪೆ ಜಲಪಾತಕ್ಕೆ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಭೇಟಿ ನೀಡಲು ಅವಕಾಶವಿದೆ. ದಿಡುಪೆ ಜಲಪಾತಕ್ಕೆ ಭೇಟಿ ನೀಡಲು ಯಾವುದೇ ಪ್ರವೇಶ ಶುಲ್ಕವಿಲ್ಲ.
ಅನುಮತಿ ಅತ್ಯಗತ್ಯ: ಪಶ್ಚಿಮ ಘಟ್ಟದಲ್ಲಿ ಇಂತಹ ಅದೆಷ್ಟೋ ಅಗೋಚರ ಜಲಪಾತಗಳಿವೆ. ಇಲ್ಲಿಯ ಈ ಜಲಪಾತ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಚಾರ್ಮಾಡಿ ಘಾಟಿಯೆಡೆಗೆ ಟ್ರಕ್ಕಿಂಗ್ ಹೋಗುವವರಿಗೆ ಮಾತ್ರ ಗೊತ್ತು. ಕುದುರೆಮುಖದ ಉಸ್ತುವಾರಿಗೆ ಒಳಪಟ್ಟಿರುವ ಈ ಜಲಪಾತವನ್ನು ನೋಡಬೇಕೆಂದರೆ ದಿಡುಪೆ ಗ್ರಾಮ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಅತ್ಯಗತ್ಯ.
ಒಟ್ಟಿನಲ್ಲಿ ಇದರ ನೈಜ ಸೌಂದರ್ಯ ಹೀಗೇ ಉಳಿಯಬೇಕಾದರೆ ಹೆಚ್ಚು ಪ್ರಚಾರ ಸಿಗದಿದ್ದರೆ ಒಳಿತು ಎಂದು ಸ್ಥಳೀಯರು ಕಳಕಳಿ ವ್ಯಕ್ತಪಡಿಸುತ್ತಾರೆ. ‘ದಿಡುಪೆ ಫಾಲ್ಸ್’ ಇಂದಿಗೂ ಸುತ್ತಮುತ್ತಲಿನ ತೋಟಗಳ ಮಧ್ಯೆ ಅನಾಮಿಕ ಸುಂದರಿಯಾಗಿ ಮೆರೆಯುತ್ತಿದೆ.
ಮಡಿಕೇರಿ: ಅರಣ್ಯ ವೀಕ್ಷಣೆ ಮಾಡಲು ಹೋದ ಸಂದರ್ಭ ಕಾಲು ಜಾರಿ ನೀರಿಗೆ ಬಿದ್ದು ಅರಣ್ಯ ವೀಕ್ಷಕ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತೊಡಿಕಾನ(Thodikana) ಅರಣ್ಯ ಪ್ರದೇಶದಲ್ಲಿ ನಡದಿದೆ.
ಮಂಡ್ಯ: ವೀಕೆಂಡ್ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ಇಬ್ಬರು ಯುವಕರು ಫಾಲ್ಸ್‌ನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಗಾಣಾಳು ಫಾಲ್ಸ್ ಬಳಿ ನಡೆದಿದೆ.
ಬೆಂಗಳೂರಿನಿಂದ ಶಾಮ್‍ವೆಲ್(21), ಸಿಬಿಲ್(21) ಎಂಬ ಇಬ್ಬರು ಸ್ನೇಹಿತರು ಬೈಕ್‍ನಲ್ಲಿ ಪ್ರವಾಸಕ್ಕೆಂದು ಗಾಣಾಳು ಫಾಲ್ಸ್‌ಗೆ ಬಂದಿದ್ದಾರೆ. ಈ ವೇಳೆ ಇವರು ಕಾಲು ಜಾರಿ ಫಾಲ್ಸ್‌ನಿಂದ ಕೆಳಗೆ ಬಿದ್ದು, ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಂದು ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತಿಗೆ ಬಂದಾಗ ಈ ಇಬ್ಬರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಬಳಿಕ ಯುವಕರ ಶವವನ್ನು ನೀರಿನಿಂದ ಮೇಲೆ ಎತ್ತಲು ಯಾರೂ ಇಲ್ಲದ ಕಾರಣ ಸಬ್ ಇನ್ಸ್‌ಪೆಕ್ಟರ್ ಮಾರುತಿ ತಮ್ಮಣ್ಣನವರ್ ಯೂನಿಫಾರ್ಮ್ ಬಿಚ್ಚಿ ನೀರಿಗೆ ಧುಮುಕಿ ನೀರಿನಲ್ಲಿ ಇದ್ದ ಶವವನ್ನು ಮೇಲಕ್ಕೆತ್ತಿದ್ದಾರೆ. ಇದನ್ನೂ ಓದಿ: ಮದುವೆ ಆಗಲು ಒಪ್ಪದ ಪ್ರಿಯಕರನಿಗೆ ಪ್ರೇಯಸಿಯಿಂದ ಬಿತ್ತು ಗೂಸಾ
ಘಟನೆ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಹಲಗೂರು ಪೊಲೀಸರು ಸ್ಥಳಕ್ಕೆ ಬಂದು ಶವಗಳನ್ನು ತೆಗೆದು ಸಾವನ್ನಪ್ಪಿರುವವರ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಇಬ್ಬರು ಯುವಕರು ಬೆಂಗಳೂರಿನ ಎಂಎಸ್ ಪಾಳ್ಯದವರು ಎಂದು ಗುರುತಿಸಲಾಗಿದೆ. ಸದ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಐವರು ಆತ್ಮಹತ್ಯೆ ಪ್ರಕರಣ- ಶಂಕರ್ ಮನೆಯಲ್ಲಿ 15 ಲಕ್ಷ ನಗದು, ಎರಡು ಕೆಜಿಯಷ್ಟು ಚಿನ್ನಾಭರಣ ಪತ್ತೆ
-ಜಲಪಾತ ನಿರ್ಮಾಣ ಶಿವರಾತ್ರಿ ದಿನ ಸ್ಥಳ ಪರಿಶೀಲನೆ ಮಾಡಿದ ಡಿಸಿಎಂ
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಜಲಪಾತವೊಂದು ಸೃಷ್ಟಿಯಾಗಲಿದ್ದು, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಹಾ ಶಿವರಾತ್ರಿ ದಿನ ಆ ಯೋಜನೆ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
ಮಲ್ಲೇಶ್ವರದ ಸ್ಯಾಂಕಿ ಕೆರೆಯ ಈಜುಕೊಳದ ಪಕ್ಕದಲ್ಲಿ ಜಲಪಾತ ನಿರ್ಮಿಸುವ ಸಂಬಂಧ ಡಿಸಿಎಂ ಸ್ಥಳ ಪರಿಶೀಲನೆ ನಡೆಸಿದರು. ಈ ಮೂಲಕ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡು ಕೃತಕ ಜಲಪಾತವನ್ನು ನಿರ್ಮಾಣ ಮಾಡಲಾಗುತ್ತಿದೆ.
ಕೃತಕ ಜಲಪಾತ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮವರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ ಅವರು, ಸದಾಶಿವನಗರದ ಸ್ಯಾಂಕಿ ಕೆರೆ ನವೀಕರಣ ಕಾಮಗಾರಿ ನಡೆಯುತ್ತಿದ್ದು ಹೆಚ್ಚುವರಿಯಾಗಿ ಕೆರೆ ಪಕ್ಕದ ಈಜುಕೊಳಕ್ಕೆ ಹೊಂದಿಕೊಂಡಂತೆ ಜಲಪಾತದ ಗೋಡೆ ನಿರ್ಮಿಸಲಾಗುವುದು. ವಾಟರ್ ಫಾಲ್ಸ್ ಜತೆಗೆ ಏರಿಯೇಟರ್ಸ್ ಕೂಡ ಅಳವಡಿಸಲಾಗುವುದು. ಇದರಿಂದ ಕೆರೆ ನೀರು ಸ್ವಚ್ಛ ಆಗಲಿದೆ. ಈಗಾಗಲೇ ಸರ್ವಋತುಗಳಲ್ಲಿಯೂ ನಳನಳಿಸುವ ಉದ್ಯಾನವನಗಳಿಂದ ಜಗತ್ಪ್ರಸಿದ್ಧವಾಗಿರುವ ಬೆಂಗಳೂರು ನಗರಕ್ಕೆ ಈ ಜಲಪಾತ ಮತ್ತಷ್ಟು ಮೆರಗು ನೀಡಲಿದೆ. ಮಲ್ಲೇಶ್ವರದ ಪಾರಂಪರಿಕ ವೈಭವಕ್ಕೆ ಪೂರಕವಾಗಿರಲಿದೆ. ಇದಕ್ಕೆ ಒಂದೂವರೆ ಕೋಟಿ ಖರ್ಚಾಗುವ ಅಂದಾಜಿದೆ ಎಂದು ಮಾಹಿತಿ ಹಂಚಿಕೊಂಡರು.
12 ರಿಂದ 15 ಅಡಿ ಎತ್ತರ ಹಾಗೂ ಸುಮಾರು 100 ಅಡಿ ಅಗಲ ಇರಲಿರುವ ಈ ಜಲಪಾತ ನಗರದ ಪ್ರವಾಸೋದ್ಯಮಕ್ಕೂ ಪೂರಕವಾಗಿರಲಿದ್ದು, ಸ್ಯಾಂಕಿ ಕೆರೆಯು ಮಲ್ಲೇಶ್ವರಕ್ಕೆ ಮಾತ್ರವಲ್ಲ, ಇಡೀ ಬೆಂಗಳೂರಿಗೆ ಒಂದು ಮಹತ್ವದ ತಾಣ. ಮುಂದಿನ ದಿನಗಳಲ್ಲಿ ಕೆರೆಗೆ ಇನ್ನಷ್ಟು ಕಾಯಕಲ್ಪ ನೀಡಲಾಗುವುದು. ಪ್ರತಿಯೊಬ್ಬ ಬೆಂಗಳೂರಿಗರು ಇಲ್ಲಿಗೆ ಭೇಟಿ ನೀಡಲೇಬೇಕು. ಆ ರೀತಿಯಲ್ಲಿ ಇಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪಾಲಿಕೆಯ ಮುಖ್ಯ ಇಂಜಿನಿಯರ್ (ಕೆರೆ) ಮೋಹನ್ ಕೃಷ್ಣ, ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಪಾಪರೆಡ್ಡಿ, ಸಹಾಯಕ ಇಂಜಿನಿಯರ್ ಗಳಾದ ಸುಷ್ಮಾ, ಸ್ವಪ್ನಾ, ಬಿಬಿಎಂಪಿ ಮಾಜಿ ಸದಸ್ಯರಾದ ಮಂಜುನಾಥ ರಾಜು ಸೇರಿದಂತೆ ಹಲವು ಬಿಜೆಪಿ ಮುಖಂಡರು ಡಿಸಿಎಂ ಜೊತೆಗಿದ್ದರು.
ಮಂಡ್ಯ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಣಾಳು ಫಾಲ್ಸ್ ನಲ್ಲಿ ಜರುಗಿದೆ.
ಬೆಂಗಳೂರಿನ ಸಂಜಯ್ (22) ಮೃತ ದುರ್ದೈವಿ ಯುವಕ. ಬೆಂಗಳೂರಿನಿಂದ ತನ್ನ ನಾಲ್ಕು ಮಂದಿ ಸ್ನೇಹಿತರೊಂದಿಗೆ ಬೈಕಿನಲ್ಲಿ ಇಂದು ಪಿಕ್‍ನಿಕ್‍ಗೆ ಬಂದಿದ್ದಾರೆ. ಸಾಕಷ್ಟು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದ ಈ ಯುವಕರ ತಂಡ ಅಂತಿಮವಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಣಾಳು (ಬೆಂಕಿ) ಫಾಲ್ಸ್ ಗೆ ಬಂದಿದ್ದಾರೆ.
ಕೆಲ ಕಾಲ ಫಾಲ್ಸ್ ಬಳಿ ನಿಂತು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ನಂತರ ಸಂಜಯ್ ಈಜು ಹೊಡೆಯಲು ಫಾಲ್ಸ್ ನೀರಿಗೆ ಧುಮುಕಿದ್ದಾನೆ. ಈ ವೇಳೆ ಆತನ ಸ್ನೇಹಿತರು ಈಜು ಹೊಡೆಯುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವೇಳೆ ನೀರಿನಲ್ಲಿ ಸುಸ್ತಾದ ಕಾರಣ ಸಂಜಯ್‍ಗೆ ಈಜಾಡಾಲು ಸಾಧ್ಯವಾಗಿಲ್ಲ. ಹೀಗಾಗಿ ಸಂಜಯ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ದೃಶ್ಯ ಸ್ನೇಹಿತರ ಮೊಬೈಲ್‍ನಲ್ಲಿ ಸೆರೆಯಾಗಿದೆ.
ಈ ವಿಷಯ ತಿಳಿದ ಪೋಷಕರು ಕೂಡಲೇ ಮಳವಳ್ಳಿ ತಾಲೂಕು ಆಸ್ಪತ್ರೆಗೆ ಬಂದಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಯ ಬಳಿಕ ಸಂಜಯ್ ಮೃತ ದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು: ಲಿಂಗಸೂಗೂರು ತಾಲೂಕಿನ ಗುಂಡಲಬಂಡಾ ಜಲಪಾತ ನೋಡಲು ಹೋಗಿ ನಾಪತ್ತೆಯಾಗಿದ್ದ ತಂದೆ, ಮಗ ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಚಿತ್ರಕಲಾ ಶಿಕ್ಷಕನಾಗಿದ್ದ 35 ವರ್ಷದ ಕೃಷ್ಣಪ್ಪ ಹಾಗೂ ಅವರ ಮಗ 5 ವರ್ಷದ ಧನುಷ್ ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆ ಸಂಜೆವರೆಗೂ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಇಬ್ಬರು ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆಯಿಂದ ಹಟ್ಟಿ ಠಾಣೆ ಪೊಲೀಸ್, ಅಗ್ನಿಶಾಮಕ ದಳ, ಸ್ಥಳೀಯರು ಕಾರ್ಯಾಚರಣೆ ನಡೆಸಿ ಇಬ್ಬರ ಶವವನ್ನು ಹೊರತಂದಿದ್ದಾರೆ.
ದೇವದುರ್ಗ ತಾಲೂಕಿನ ಮೂಡಲಗುಂಡ ಗ್ರಾಮದ ನಾಲ್ವರು ನಿನ್ನೆ ಜಲಪಾತ ನೋಡಲು ಹೋದಾಗ ಏಕಾಏಕಿ ನೀರಿನ ಪ್ರಮಾಣ ಹಾಗೂ ಸೆಳೆತ ಹೆಚ್ಚಾಗಿ ಅಪಾಯಕ್ಕೆ ಸಿಲುಕಿದ್ದರು. ಮಾಹಾಂತೇಶ್ ಹಾಗೂ ಸಿದ್ದಣ್ಣ ಎಂಬವರನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಕಷ್ಣಪ್ಪ ಹಾಗೂ ಧನುಶ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು, ಜಲಪಾತ ಭೋರ್ಗರೆಯುತ್ತಿದೆ. ಜಲಪಾತದ ರುದ್ರ ರಮಣಿಯ ದೃಶ್ಯ ನೋಡಲು ಹೋಗಿ ತಂದೆ ಮಗ ಪ್ರಾಣ ಕಳೆದುಕೊಂಡಿದ್ದಾರೆ.
ಮಡಿಕೇರಿ: ರಜೆ ಎಂದರೆ ಕೊಡಗಿನ ಪ್ರವಾಸಿ ತಾಣಗಳು ರಂಗೇರುತ್ತವೆ. ಹಚ್ಚಹಸಿರ ಸಿರಿಯ ಬೆಟ್ಟಗುಡ್ಡಗಳ ತಪ್ಪಲಿನ ಕಾಫಿನಾಡಲ್ಲಿ ವಿಹರಿಸೋಕೆ ದೇಶದ ನಾನಾ ಭಾಗಗಳಿಂದ ಪ್ರಕೃತಿಯ ಮಡಿಲಿಗೆ ಲಗ್ಗೆಯಿಡುವ ಪ್ರವಾಸಿಗರು ದಕ್ಷಿಣದ ಕಾಶ್ಮೀರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಇಂದು ಮಕರ ಸಂಕ್ರಾಂತಿ ಹಬ್ಬದ ರಜೆ ಇರುವುದರಿಂದ ಮಂಗಳವಾರದಿಂದ ಕೊಡಗಿನತ್ತ ಬರುವ ಪ್ರವಾಸಿಗರ ಸಂಖ್ಯೆ ಜೋರಾಗಿದ್ದು, ಇಡೀ ಮಂಜಿನ ನಗರಿ ಪ್ರವಾಸಿಗರಿಂದ ತುಂಬಿ ಹೋಗಿದೆ. ರಾಜಾಸೀಟ್ ಅಬ್ಬೆ ಫಾಲ್ಸ್ ಗೆ ಲಗ್ಗೆಯಿಟ್ಟಿದ್ದ ಪ್ರವಾಸಿಗರು ತಂಪಾದ ಗಾಳಿಯಲ್ಲಿ ವಿಹರಿಸುತ್ತಾ ರಜೆಯ ಮಜಾ ಅನುಭವಿಸುತ್ತಿದ್ದಾರೆ.
ಸಾಮಾನ್ಯವಾಗಿ ವೀಕೆಂಡ್‍ಗಳಲ್ಲಿ ಅತಿ ಹೆಚ್ಚು ಪ್ರವಾಸಿಗರಿಂದ ಗಿಜಿಗುಡುವ ರಾಜಾಸೀಟ್ ಅಬ್ಬೆ ಫಾಲ್ಸ್, ದುಬಾರೆ ಪ್ರವಾಸಿತಾಣಗಳಲ್ಲಿ ಪ್ರವಾಸಿಗರು ಬಂಧು-ಮಿತ್ರರು ಮನೆಗೆ ಹಬ್ಬದ ವಿಶೇಷವಾಗಿ ಬಂದಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಜನ ಜಾತ್ರೆ ಕಂಡುಬರುತ್ತಿದೆ.
ರಜೆ ಎಂದರೆ ಕಾಫಿನಾಡಿನತ್ತ ಲಗ್ಗೆಯಿಡುವ ಪ್ರವಾಸಿಗರು ದಕ್ಷಿಣ ಕಾಶ್ಮೀರದ ಸೊಬಗನ್ನು ಕಣ್ತುಂಬಿಕೊಂಡು ಎಂಜಾಯ್ ಮಾಡುತ್ತಾರೆ. ಅದ್ರಲ್ಲೂ ಸ್ನೇಹಿತರು, ಫ್ಯಾಮಿಲಿಗಳೊಂದಿಗೆ ತಂಡೋಪತಂಡವಾಗಿ ಕೊಡಗಿಗೆ ಬರುವ ಟೂರಿಸ್ಟ್‍ಗಳು ಪ್ರಕೃತಿಯ ಮಡಿಲಲ್ಲಿ ವಿಹರಿಸುತ್ತಾ ಹಸಿರ ಸಿರಿಯನ್ನು ಸವಿಯುತ್ತಾ ಸುಂದರ ನೆನಪುಗಳೊಂದಿಗೆ ವಾಪಸ್ಸಾಗುತ್ತಾರೆ.