Tag: Fakhar Zaman

  • ಆ ಒಬ್ಬ ಆಟಗಾರ 20-30 ಓವರ್‌ ಆಡಿದ್ರೆ, ಸೆಮಿಸ್‌ ಪ್ರವೇಶ ಮಾಡ್ತೀವಿ – ಬಾಬರ್‌ ಆಜಂ

    ಆ ಒಬ್ಬ ಆಟಗಾರ 20-30 ಓವರ್‌ ಆಡಿದ್ರೆ, ಸೆಮಿಸ್‌ ಪ್ರವೇಶ ಮಾಡ್ತೀವಿ – ಬಾಬರ್‌ ಆಜಂ

    ಕೋಲ್ಕತ್ತಾ: 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ (Pakistan) ತಂಡ ಸೆಮಿ ಫೈನಲ್‌ (World Cup Semi Final) ಪ್ರವೇಶಿಸುವ ಹಾದಿಯನ್ನೇ ಕಿವೀಸ್‌ ಪಡೆ ಮುಚ್ಚಿಹಾಕಿದೆ. ಆದರೂ ಆತ್ಮವಿಶ್ವಾಸದಲ್ಲಿರುವ ಪಾಕಿಸ್ತಾನ ತಂಡ ಸೆಮಿಸ್‌ ಪ್ರವೇಶಿಸಿಯೇ ತೀರುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ. ಇದಕ್ಕೆ ನಾಯಕ ಬಾಬರ್‌ ಆಜಂ ನೀಡಿರುವ ಹೇಳಿಕೆ ಸಾಕ್ಷಿಯಾಗಿದೆ.

    ಕೋಲ್ಕತ್ತಾದಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದ ಕುರಿತು ಮಾತನಾಡಿರುವ ಬಾಬರ್‌ (Babar Azam), ಫಕರ್‌ ಝಮಾನ್‌ 20-30 ಓವರ್‌ ವರೆಗೆ ಕ್ರೀಸ್‌ನಲ್ಲಿ ನಿಂತು ಆಡಿದ್ರೆ, ಖಂಡಿತವಾಗಿಯೂ ಇಂಗ್ಲೆಂಡ್‌ (England) ವಿರುದ್ಧ ದೊಡ್ಡ ಸ್ಕೋರ್‌ ಮಾಡುತ್ತೇವೆ ಎಂದಿದ್ದಾರೆ. ಅಲ್ಲದೇ, ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದ್ರೆ ಒಂದೇ ಒಂದು ಪಂದ್ಯವಷ್ಟೇ ನಮಗೆ ಬಾಕಿ ಉಳಿದಿದೆ ಎಂದು ಭಾವುಕರಾಗಿ ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ ಮುಂದಿರುವ ಘೋರ ಸವಾಲು ಯಾವುದು? – ಎಷ್ಟು ರನ್‌ ಅಂತರದಲ್ಲಿ ಗೆದ್ದರೆ ಸೆಮಿಸ್‌ ತಲುಪಬಹುದು?

    2023ರ ಏಕದಿನ ವಿಶ್ವಕಪ್‌ ಟೂರ್ನಿ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್‌ ಪ್ರವೇಶಿಸಿದ್ದು, ಇನ್ನೊಂದು ತಂಡಕ್ಕೆ ಅವಕಾಶವಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಆಡಿದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪಾಕಿಸ್ತಾನ ತಂಡ ಎದುರಿಸಲು ಸಾಧ್ಯವಾಗದ ಸವಾಲನ್ನೇ ಮುಂದಿಟ್ಟಿದೆ. ಒಂದು ವೇಳೆ ಕಿವೀಸ್‌ ಹಿಂದಿಕ್ಕೆ ಪಾಕ್‌ ಸೆಮಿಸ್‌ ಪ್ರವೇಶಿಸಲೇಬೇಕಾದರೆ ಪಾಕ್‌ ತಂಡ ಊಹಿಸಲು ಸಾಧ್ಯವಾಗಷ್ಟು ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ.

    ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್‌ ಮಾಡಿ ಕನಿಷ್ಠ 300 ರನ್‌ ಗಳಿಸಿದರೆ, ಇಂಗ್ಲೆಂಡ್‌ ತಂಡವನ್ನು 13 ರನ್‌ಗಳಿಗೆ ಕಟ್ಟಿಹಾಕಬೇಕು. 400 ರನ್‌ ಗಳಿಸಿದ್ರೆ 112 ರನ್‌ಗಳಿಗೆ, 450 ರನ್‌ ಗಳಿಸಿದ್ರೆ 162 ರನ್‌ಗಳಿಗೆ, 500 ರನ್‌ ಗಳಿಸಿದ್ರೆ 211 ರನ್‌ಗಳಿಗೆ ಹಾಲಿ ಚಾಂಪಿಯನ್ಸ್‌ಗಳನ್ನ ಕಟ್ಟಿಹಾಕಬೇಕಾಗುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: World Cup 2023: ಲಂಕಾ ವಿರುದ್ಧ ಕಿವೀಸ್‌ಗೆ 5 ವಿಕೆಟ್‌ಗಳ ಜಯ – ಪಾಕ್‌ ಮುಂದಿದೆ ಅಸಾಧ್ಯ ಸವಾಲು

    ಒಂದು ವೇಳೆ ಇಂಗ್ಲೆಂಡ್‌ ತಂಡ ಮೊದಲು ಬ್ಯಾಟಿಂಗ್‌ ಮಾಡಿದ್ರೆ, ಆಂಗ್ಲರ ಗುರಿಯನ್ನು ಪಾಕಿಸ್ತಾನ ತಂಡ 3 ಓವರ್‌ಗಳ ಒಳಗೆ ಪೂರೈಸಬೇಕಾಗುತ್ತದೆ. ಇದು ಪಾಕ್‌ಗೆ ಅತ್ಯಂತ ಕಠಿಣ ಗುರಿಯಾಗಿದೆ. ಕೋಲ್ಕತ್ತಾದ ಈಡನ್‌ ಗಾರ್ಡನ್‌ ಮೊದಲು ಬ್ಯಾಟಿಂಗ್‌ ಮಾಡುವ ತಂಡಕ್ಕೆ ಅನುಕೂಲಕರ ಪಿಚ್‌ ಆಗಿದೆ. ಪಾಕಿಸ್ತಾನ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡರೆ 350 ರನ್‌ ಗಳಿಸುವ ಅವಕಾಶವೂ ಇದೆ. ಆದ್ರೆ ಇಂಗ್ಲೆಂಡ್‌ ತಂಡವನ್ನು ಎಷ್ಟು ರನ್‌ಗಳಿಗೆ ಕಟ್ಟಿಹಾಕುತ್ತದೆ ಎಂಬುದರ ಮೇಲೆ ಸಮಿಸ್‌ ಕನಸು ನಿರ್ಧಾರವಾಗುತ್ತದೆ.

    ಆದ್ರೆ ನ್ಯೂಜಿಲೆಂಡ್‌ 9 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಸಾಧಿಸಿ +0.743 ರನ್‌ರೇಟ್‌ನೊಂದಿಗೆ 4ನೇ ಸ್ಥಾನದಲ್ಲಿದ್ದರೆ, 8ರಲ್ಲಿ 4 ಪಂದ್ಯ ಗೆದ್ದಿರುವ ಪಾಕಿಸ್ತಾನ +0.036 ರನ್‌ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ ಸೆಮಿಸ್‌ಗೆ ಪ್ರವೇಶಿಸಲೇಬೇಕೆಂದರೆ ಅತ್ಯಧಿಕ ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಬೇಕಾಗುತ್ತದೆ. ಇಲ್ಲದಿದ್ದರೆ, ಸೋಲು/ಗೆಲುವಿನೊಂದಿಗೆ 2023ರ ವಿಶ್ವಕಪ್‌ ಟೂರ್ನಿಗೆ ವಿದಾಯ ಹೇಳಲಿದೆ.

  • ಪಾಕ್‌ಗೆ ವರವಾದ ವರುಣ – ಕಿವೀಸ್‌ ವಿರುದ್ಧ 21 ರನ್‌ಗಳ ಜಯ; ಸೆಮೀಸ್‌ ಆಸೆ ಜೀವಂತ

    ಪಾಕ್‌ಗೆ ವರವಾದ ವರುಣ – ಕಿವೀಸ್‌ ವಿರುದ್ಧ 21 ರನ್‌ಗಳ ಜಯ; ಸೆಮೀಸ್‌ ಆಸೆ ಜೀವಂತ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯ 35ನೇ ಪಂದ್ಯದಲ್ಲಿ ಮಳೆ ಕಾರಣದಿಂದಾಗಿ ನ್ಯೂಜಿಲೆಂಡ್‌ ವಿರುದ್ಧ ಪಾಕಿಸ್ತಾನ (PAK vs NZ) 21 ರನ್‌ಗಳ ಜಯಗಳಿಸಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಡಕ್‌ವರ್ತ್‌ ನಿಯಮದ ಪ್ರಕಾರ ಪಾಕಿಸ್ತಾನ ಗೆಲುವು ದಾಖಲಿಸಿದೆ. ಆ ಮೂಲಕ ಪಾಕ್‌ನ ಸೆಲಿ-ಫೈನಲ್‌ ಕನಸು ಇನ್ನೂ ಜೀವಂತವಾಗಿ ಉಳಿದಿದೆ.

    ಆರಂಭದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 401 ರನ್ ಬಾರಿಸಿತ್ತು. ಆ ಮೂಲಕ ಪಾಕಿಸ್ತಾನಕ್ಕೆ ಸವಾಲಿನ 402 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಪಾಕಿಸ್ತಾನ ಆರಂಭಿಕ ಆಘಾತ ಎದುರಿಸಿತು. ಅಬ್ದುಲ್ಲಾ ಶಫೀಕ್ ಕೇವಲ 4 ರನ್‌ಗಳಿಗೆ ಔಟಾದರು. ನಂತರ ಬಂದ ಫಖರ್ ಜಮಾನ್ (Fakhar Zaman) (81 ಬಾಲ್‌, 126 ರನ್‌, 11 ಸಿಕ್ಸರ್‌, 8 ಫೋರ್) ಹಾಗೂ ಬಾಬರ್‌ ಆಜಾಮ್‌ (Babar) (63 ಬಾಲ್‌, 66 ರನ್‌, 2 ಸಿಕ್ಸರ್‌, 6 ಫೋರ್‌) ಉತ್ತಮ ಜೊತೆಯಾಟವಾಗಿ ಮಿಂಚಿದರು. ಇದನ್ನೂ ಓದಿ: ಪಾಕ್‌-ಕಿವೀಸ್‌ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ – ಅಭಿಮಾನಿಗಳಿಗೆ ನಿರಾಸೆ

    141 ಬಾಲ್‌ಗಳಿಗೆ 194 ರನ್‌ ಬಾರಿಸುವ ಮೂಲಕ ಉತ್ತಮ ಜೊತೆಯಾಟ ನೀಡಿ ಪಾಕ್‌ ಗೆಲುವಿಗೆ ಭರವಸೆ ಮೂಡಿಸಿದ್ದರು. ಪಾಕ್‌ ಬ್ಯಾಟರ್‌ಗಳ ಉತ್ತಮ ಪ್ರದರ್ಶನಕ್ಕೆ ಮಳೆ ಎರಡು ಬಾರಿ ಅಡ್ಡಿಪಡಿಸಿತು. ಮೊದಲ ಬಾರಿಗೆ ಮಳೆ ಬಂದಾಗ, ಡಿಎಲ್‌ಎಸ್‌ ನಿಯಮದ ಪ್ರಕಾರ ಪಾಕ್‌ಗೆ 41 ಓವರ್‌ಗಳಿಗೆ 342 ರನ್‌ ಗುರಿ ನೀಡಲಾಯಿತು. ಇದೀಗ ಎರಡನೇ ಸಲ ಮಳೆ ಬಂದು ಪಂದ್ಯ ನಿಂತ ವೇಳೆಗೆ ಪಾಕಿಸ್ತಾನ ತಂಡ, 25.3 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 200 ರನ್‌ ಗಳಿಸಿತು. ಪಾಕ್ ಗೆಲ್ಲಲು ಇನ್ನೂ 93 ಎಸೆತಗಳಲ್ಲಿ 143 ರನ್‌ ಗಳಿಸಬೇಕಾಗಿತ್ತು. ಮಳೆ ನಿಲ್ಲದ ಕಾರಣ, ಪಾಕಿಸ್ತಾನ ತಂಡ ಡಿಎಲ್‌ಎಸ್‌ ನಿಯಮದ ಪ್ರಕಾರ ನ್ಯೂಜಿಲೆಂಡ್‌ ತಂಡಕ್ಕಿಂತ 21 ರನ್‌ಗಳ ಮುಂದಿತ್ತು. ಹೀಗಾಗಿ 21 ರನ್‌ಗಳ ಜಯ ಸಾಧಿಸಿದೆ.

    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 401 ರನ್ ಬಾರಿಸಿತ್ತು. 68 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಬಳಿಕ 2ನೇ ವಿಕೆಟ್‌ಗೆ ಬೃಹತ್ ಮೊತ್ತ ಪೇರಿಸಿತು. ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದ ಕೇನ್ ವಿಲಿಯಮ್ಸನ್ ಹಾಗೂ ರಚಿನ್ ರವೀಂದ್ರ ಜೋಡಿ 2ನೇ ವಿಕೆಟ್‌ಗೆ 142 ಎಸೆತಗಳಲ್ಲಿ ಬರೋಬ್ಬರಿ 180 ರನ್ ಬಾರಿಸಿತ್ತು. ಇದನ್ನೂ ಓದಿ: ಕೊಹ್ಲಿಗೂ ಮುನ್ನವೇ ಸಚಿನ್‌ ಶತಕ ದಾಖಲೆ ಉಡೀಸ್‌ ಮಾಡಿದ ರಚಿನ್‌..!

    ರಚಿನ್ ರವೀಂದ್ರ (Rachin Ravindra) 108 ರನ್ (94 ಎಸೆತ, 15 ಬೌಂಡರಿ, 1 ಸಿಕ್ಸರ್) ಚಚ್ಚುವ ಮೂಲಕ 23ನೇ ವಯಸ್ಸಿಗೆ ವಿಶ್ವಕಪ್‌ನಲ್ಲಿ 3 ಶತಕ ಸಿಡಿಸಿ, 2 ಶತಕ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ದಾಖಲೆ ನುಚ್ಚು ನೂರು ಮಾಡಿದರು. ಇದರೊಂದಿಗೆ ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ನಂತರ ಮೊದಲ ಪಂದ್ಯವಾಡಿದ ಕೇನ್ ವಿಲಿಯಮ್ಸನ್ 95 ರನ್ (79 ಎಸೆತ, 10 ಬೌಂಡರಿ, 2 ಸಿಕ್ಸರ್) ಸಿಡಿಸಿ ಮಿಂಚಿದರು. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಡೇರಿಲ್ ಮಿಚೆಲ್ ಹಾಗೂ ಮಾರ್ಕ್ ಚಾಪ್ಮನ್ ಜೋಡಿ 32 ಎಸೆತಗಳಲ್ಲಿ 57 ರನ್, ಮಿಚೆಲ್ ಸ್ಯಾಂಟ್ನರ್ ಮತ್ತು ಗ್ಲೇನ್ ಫಿಲಿಪ್ಸ್ ಜೋಡಿ 26 ಎಸೆತಗಳಲ್ಲಿ 43 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡದ ಮೊತ್ತ 400 ರನ್ ಗಡಿದಾಟಿಸುವಲ್ಲಿ ಯಶಸ್ವಿಯಾದರು.

    ಡೆವೋನ್ ಕಾನ್ವೆ 35 ರನ್, ಡೇರಿಲ್ ಮಿಚೆಲ್ 29 ರನ್, ಮಾರ್ಕ್ ಚಾಪ್ಮನ್ 39 ರನ್, ಗ್ಲೇನ್ ಫಿಲಿಪ್ಸ್ 41 ರನ್, ಮಿಚೆಲ್ ಸ್ಯಾಂಟ್ನರ್ 26 ರನ್, ಟಾಮ್ ಲಾಥಮ್ 2 ರನ್ ಗಳಿಸಿದರು. ಪಾಕಿಸ್ತಾನ ಪರ ಮೊಹಮ್ಮದ್ ವಸೀಮ್ 3 ವಿಕೆಟ್ ಕಿತ್ತರೆ, ಹಸನ್ ಅಲಿ, ಇಫ್ತಿಕಾರ್ ಅಹ್ಮದ್ ಮತ್ತು ಹ್ಯಾರಿಸ್ ರೌಫ್ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: World Cup 2023: ಶತಕ ಸಿಡಿಸಿ ಮೆರೆದಾಡಿದ ರಚಿನ್‌ – ಪಾಕಿಸ್ತಾನಕ್ಕೆ 402 ರನ್‌ಗಳ ಗುರಿ

  • ಪಾಕ್‌-ಕಿವೀಸ್‌ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ – ಅಭಿಮಾನಿಗಳಿಗೆ ನಿರಾಸೆ

    ಪಾಕ್‌-ಕಿವೀಸ್‌ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ – ಅಭಿಮಾನಿಗಳಿಗೆ ನಿರಾಸೆ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ (Pakistan vs New Zealand) ನಡುವಿನ ಹೈವೋಲ್ಟೇಜ್‌ ಕದನಕ್ಕೆ ಮಳೆ ಅಡ್ಡಿಯುಂಟು ಮಾಡಿದೆ.

    ಕಿವೀಸ್‌ ನೀಡಿರುವ 400 ರನ್‌ಗಳ ಗುರಿ ಬೆನ್ನತ್ತಿರುವ ಪಾಕ್‌ ತಂಡ ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದೆ. 4 ರನ್‌ಗಳಿಗೆ ಮೊದಲ ವಿಕೆಟ್‌ ಕಳೆಕೊಂಡರೂ ಫಖರ್‌ ಝಮಾನ್‌ ಮತ್ತು ನಾಯಕ ಬಾಬರ್‌ ಆಜಂ ಶತಕದ ಜೊತೆಯಾಟದಿಂದ 21.3 ಓವರ್‌ಗಳಲ್ಲಿ 160 ರನ್‌ ಗಳಿಸಿತ್ತು. ಈ ವೇಳೆ ಮಳೆ ಅಡ್ಡಿಯುಂಟುಮಾಡಿದೆ. ಸದ್ಯ ಮೈದಾನ ನೀರಿನಿಂದ ನೆನೆಯದಂತೆ ಟಾರ್ಪಾಲ್‌ಗಳಿಂದ ಕವರ್‌ ಮಾಡಲಾಗಿದೆ. ನ್ಯೂಜಿಲೆಂಡ್‌ ತಂಡ 21 ಓವರ್‌ಗಳಲ್ಲಿ 1 ವಿಕೆಟ್‌ಗೆ 133 ರನ್‌ ಗಳಿಸಿತ್ತು. ಆದ್ರೆ ಪಾಕಿಸ್ತಾನ 1 ವಿಕೆಟ್‌ಗೆ 159 ರನ್‌ ಬಾರಿಸಿದೆ. ಇದನ್ನೂ ಓದಿ: ಕೊಹ್ಲಿಗೂ ಮುನ್ನವೇ ಸಚಿನ್‌ ಶತಕ ದಾಖಲೆ ಉಡೀಸ್‌ ಮಾಡಿದ ರಚಿನ್‌..!

    213 ಓವರ್‌ನಲ್ಲಿ ಡಕ್ವರ್ತ್‌ ಲೂಯಿಸ್‌ ನಿಯಮಕ್ಕೆ (ಡಿಎಸ್‌ಎಲ್‌) 150 ರನ್‌ ಸಮಾನ ಸ್ಕೋರ್‌ ಆಗಿದೆ. ಆದ್ರೆ ಪಾಕಿಸ್ತಾನ 10 ರನ್‌ ಮುಂದಿದೆ. ಸದ್ಯ ಓವರ್‌ ಕಡಿತದ ಬಗ್ಗೆ ಇನ್ನೂ ಮಾತುಕತೆ ನಡೆದಿಲ್ಲ. ಒಂದು ವೇಳೆ ಡಕ್ವರ್ತ್‌ ಲೂಯಿಸ್‌ ನಿಯಮ ಅನ್ವಯಿಸಿದರೂ ಅದು ಪಾಕ್‌ ತಂಡಕ್ಕೆ ವರದಾನವಾಗುವ ಸಾಧ್ಯತೆಗಳಿವೆ.

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಕಿವೀಸ್‌ ಪಡೆ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 401 ರನ್ ಪೇರಿಸಿದೆ. 68 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಬಳಿಕ 2ನೇ ವಿಕೆಟ್‌ಗೆ ಬೃಹತ್ ಮೊತ್ತ ಪೇರಿಸಿತು. ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದ ಕೇನ್ ವಿಲಿಯಮ್ಸನ್ ಹಾಗೂ ರಚಿನ್ ರವೀಂದ್ರ ಜೋಡಿ 2ನೇ ವಿಕೆಟ್‌ಗೆ 142 ಎಸೆತಗಳಲ್ಲಿ ಬರೋಬ್ಬರಿ 180 ರನ್ ಬಾರಿಸಿತ್ತು. ರಚಿನ್ ರವೀಂದ್ರ 108 ರನ್ (94 ಎಸೆತ, 15 ಬೌಂಡರಿ, 1 ಸಿಕ್ಸರ್) ಚಚ್ಚುವ ಮೂಲಕ 23ನೇ ವಯಸ್ಸಿಗೆ ವಿಶ್ವಕಪ್‌ನಲ್ಲಿ 3 ಶತಕ ಸಿಡಿಸಿ, 2 ಶತಕ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ದಾಖಲೆ ನುಚ್ಚು ನೂರು ಮಾಡಿದರು. ಇದನ್ನೂ ಓದಿ: World Cup 2023: ಶತಕ ಸಿಡಿಸಿ ಮೆರೆದಾಡಿದ ರಚಿನ್‌ – ಪಾಕಿಸ್ತಾನಕ್ಕೆ 402 ರನ್‌ಗಳ ಗುರಿ

    ಇದರೊಂದಿಗೆ ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ನಂತರ ಮೊದಲ ಪಂದ್ಯವಾಡಿದ ಕೇನ್ ವಿಲಿಯಮ್ಸನ್ 95 ರನ್ (79 ಎಸೆತ, 10 ಬೌಂಡರಿ, 2 ಸಿಕ್ಸರ್) ಸಿಡಿಸಿ ಮಿಂಚಿದರು. ಇದರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಡೇರಿಲ್ ಮಿಚೆಲ್ ಹಾಗೂ ಮಾರ್ಕ್ ಚಾಪ್ಮನ್ ಜೋಡಿ 32 ಎಸೆತಗಳಲ್ಲಿ 57 ರನ್, ಮಿಚೆಲ್ ಸ್ಯಾಂಟ್ನರ್ ಮತ್ತು ಗ್ಲೇನ್ ಫಿಲಿಪ್ಸ್ ಜೋಡಿ 26 ಎಸೆತಗಳಲ್ಲಿ 43 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡದ ಮೊತ್ತ 400 ರನ್ ಗಡಿದಾಟಿಸುವಲ್ಲಿ ಯಶಸ್ವಿಯಾದರು.

    ಡೆವೋನ್ ಕಾನ್ವೆ 35 ರನ್, ಡೇರಿಲ್ ಮಿಚೆಲ್ 29 ರನ್, ಮಾರ್ಕ್ ಚಾಪ್ಮನ್ 39 ರನ್, ಗ್ಲೇನ್ ಫಿಲಿಪ್ಸ್ 41 ರನ್, ಮಿಚೆಲ್ ಸ್ಯಾಂಟ್ನರ್ 26 ರನ್, ಟಾಮ್ ಲಾಥಮ್ 2 ರನ್ ಗಳಿಸಿದರು. ಪಾಕಿಸ್ತಾನ ಪರ ಮೊಹಮ್ಮದ್ ವಸೀಮ್ 3 ವಿಕೆಟ್ ಕಿತ್ತರೆ, ಹಸನ್ ಅಲಿ, ಇಫ್ತಿಕಾರ್ ಅಹ್ಮದ್ ಮತ್ತು ಹ್ಯಾರಿಸ್ ರೌಫ್ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ವಿಶ್ವಕಪ್‌ನಿಂದ ಹೊರಗುಳಿದ ಪಾಂಡ್ಯ – ಉಪನಾಯಕನಾಗಿ ಕೆಎಲ್ ರಾಹುಲ್ ಆಯ್ಕೆ

    ರನ್ ಏರಿದ್ದು ಹೇಗೆ?
    94 ಎಸೆತ 100 ರನ್
    138 ಎಸೆತ 150 ರನ್
    209 ಎಸೆತ 250 ರನ್
    239 ಎಸೆತ 300 ರನ್
    300 ಎಸೆತ 401 ರನ್

  • ಕೀಪರ್ ಕ್ವಿಂಟನ್ ಡಿ ಕಾಕ್ ಚಮಕ್‍ಗೆ 193 ರನ್‍ಗಳಿಸಿದ್ದ ಫಖರ್ ರನೌಟ್

    ಕೀಪರ್ ಕ್ವಿಂಟನ್ ಡಿ ಕಾಕ್ ಚಮಕ್‍ಗೆ 193 ರನ್‍ಗಳಿಸಿದ್ದ ಫಖರ್ ರನೌಟ್

    ಜೊಹಾನ್ಸ್‌ಬರ್ಗ್‌: ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಫಖರ್ ಝಮಾನ್ ಅವರನ್ನು ದಕ್ಷಿಣ ಆಫ್ರಿಕಾದ ಕೀಪರ್ ಕ್ವಿಂಟನ್ ಡಿ ಕಾಕ್ ಅವರು ಚಮಕ್ ಮಾಡಿ ರನೌಟ್ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 341 ರನ್ ಗಳಿಸಿತ್ತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಒಂದು ಕಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರೂ ಆರಂಭಿಕ ಆಟಗಾರ ಫಖರ್ ಜಮಾನ್ ಅವರು ಬಂಡೆಯಂತೆ ನಿಂತು ಪಾಕಿಸ್ತಾನದ ಮೊತ್ತವನ್ನು 300ರ ಗಡಿ ದಾಟಿಸಿದ್ದರು.

    49.1ನೇ ಓವರ್‍ನಲ್ಲಿ ಎರಡು ರನ್ ಓಡುವ ಸಂದರ್ಭದಲ್ಲಿ 193 ರನ್‍ಗಳಿಸಿದ್ದ ಫಖರ್ ಜಮಾನ್ 9ನೇಯವರಾಗಿ ರನೌಟ್ ಆದರು. ಆದರೆ ರನೌಟ್ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ.

    ರನೌಟ್ ಆಗಿದ್ದು ಹೇಗೆ?
    ಲುಂಗಿ ಎನ್‍ಗಿಡಿ ಅವರ ಎಸೆತವನ್ನು ಜಮಾನ್ ಲಾಂಗ್ ಆಫ್‍ಗೆ ಬೌಂಡರಿ ಹೊಡೆಯುವ ಯತ್ನದಲ್ಲಿ ಬಲವಾಗಿ ಹೊಡೆದರು. ಆದರೆ ಚೆಂಡನ್ನು ಮಾಕ್ರರ್ಮ್ ತಡೆದರು. ಬಾಲ್ ತಡೆದ ಕಾರಣ ಇಬ್ಬರು ಬ್ಯಾಟ್ಸ್‌ಮನ್‌ಗಳು ಎರಡು ರನ್ ಓಡಲು ಮುಂದಾದರು. ಈ ಸಂದರ್ಭದಲ್ಲಿ ಮಾಕ್ರರ್ಮ್ ಬಾಲನ್ನು ನೇರವಾಗಿ ಸ್ಟ್ರೈಕ್‍ನತ್ತ ಎಸೆದರು. ಬಾಲ್ ತನ್ನತ್ತ ಬರುವುದನ್ನು ಗಮನಿಸಿದ ಕೀಪರ್ ಕಾಕ್ ಕೈ ತೋರಿಸಿ ಬೌಲರ್ ಎಂಡ್‍ನತ್ತ ಎಸೆಯುವಂತೆ ಹೇಳಿದರು. ಕೀಪರ್ ಕಡೆಯಿಂದ ಬಂದ ಸಿಗ್ನಲ್ ನೋಡಿ ಫಖರ್ ಓಡುವ ವೇಗವನ್ನು ಕಡಿಮೆ ಮಾಡಿ ನಾನ್‍ಸ್ಟ್ರೈಕ್‍ನತ್ತ ನೋಡಿದರು. ಈ ವೇಳೆ ಬಾಲ್ ಸ್ಟ್ರೈಕ್‍ನತ್ತ ಬರುತ್ತಿದೆ ಎನ್ನುವುದು ತಿಳಿಯುವಷ್ಟರಲ್ಲಿ ಬಾಲ್ ನೇರವಾಗಿ ವಿಕೆಟ್ ಬಡಿದಾಗಿತ್ತು.

    ರನೌಟ್ ಆದ ಬಳಿಕ ಫಖರ್ ನಿರಾಸೆಯಿಂದ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಒಂದು ವೇಳೆ ಫಖರ್ ಜಮಾನ್ ಈ ಪಂದ್ಯದಲ್ಲಿ 200 ರನ್ ಹೊಡೆದಿದ್ದರೆ ಪಾಕ್ ಪರ ಎರಡು ಬಾರಿ 200 ರನ್‍ಗಳ ಗಡಿಯನ್ನು ದಾಟಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದ್ದರು. ಈ ಮೊದಲು ಜಿಂಬಾಬ್ವೆ ವಿರುದ್ಧ ಫಖರ್ 2018 ರಲ್ಲಿ ಔಟಾಗದೇ 210 ರನ್ ಹೊಡೆದಿದ್ದರು.

    ಪಾಕಿಸ್ತಾನ ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 324 ರನ್ ಗಳಿಸಿ ಸೋಲನ್ನು ಅನುಭವಿಸಿತು. ಅತ್ಯುತ್ತಮ ಆಟಕ್ಕೆ ಫಖರ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

    ಕ್ವಿಂಟನ್ ಡಿ ಕಾಕ್ ಅವರ ಈ ಆಟಕ್ಕೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಇದು ಮೋಸದಾಟ, ಕ್ರೀಡಾ ಸ್ಪೂರ್ತಿಯನ್ನು ಮರೆತು ಆಡಿದ್ದಾರೆ ಎಂದು ಟೀಕಿಸಿದರೆ ಇನ್ನು ಕೆಲವರು ಕಾಕ್ ಏನು ತಪ್ಪು ಮಾಡಿಲ್ಲ. ಬ್ಯಾಟ್ಸ್‌ಮನ್‌ ಆದವರಿಗೆ ರನ್ ಓಡುವುದರಲ್ಲೇ ಗಮನ ಇರಬೇಕು. ಮುಂದಿನ ದಿನಗಳಲ್ಲಿ ಎಲ್ಲ ಬ್ಯಾಟ್ಸ್‌ಮನ್‌ಗಳು ಇದನ್ನು ಪಾಠವಾಗಿ ತಿಳಿದುಕೊಳ್ಳಬೇಕು ಎಂದು ಕೆಲವರು ಹೇಳಿದ್ದಾರೆ.

     

  • ಕೊಹ್ಲಿ ದಾಖಲೆ ಮುರಿದ ಪಾಕ್ ಆಟಗಾರ ಫಖಾರ್ ಜಮಾನ್

    ಕೊಹ್ಲಿ ದಾಖಲೆ ಮುರಿದ ಪಾಕ್ ಆಟಗಾರ ಫಖಾರ್ ಜಮಾನ್

    ಬುಲಬಾಯೊ: ಪಾಕಿಸ್ತಾನದ ಆರಂಭಿಕ ಆಟಗಾರ ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದ ಬೆನ್ನಲ್ಲೇ ಮತ್ತೊಂದು ದಾಖಲೆ ನಿರ್ಮಿಸಿದ್ದು, ಏಕದಿನ ಪಂದ್ಯಗಳಲ್ಲಿ 1 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಕಡಿಮೆ ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಗಳಿಸಿದ್ದ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.

    28 ವರ್ಷದ ಫಖಾರ್ ಜಮಾನ್ 18 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಪೂರೈಸಿದ್ದು, ಈ ಹಿಂದೆ ವಿರಾಟ್ ಕೊಹ್ಲಿ 1 ಸಾವಿರ ರನ್ ಗಳಿಸಲು 24 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಉಳಿದಂತೆ ವಿವ್ ರಿಚರ್ಡ್ಸ್, ಕೆವಿನ್ ಪೀಟರ್ ಸನ್, ಜೋನಾಥನ್ ಟ್ರಾಟ್, ಬಾಬರ್ ಅಜಂ, ಕ್ವಿಂಟನ್ ಡಿ ಕಾಕ್ 21 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಗಳಿಸಿದ್ದರು.

    ಫಖಾರ್ ಜಮಾನ್ 18 ಏಕದಿನ ಪಂದ್ಯಗಳಲ್ಲಿ 3 ಅರ್ಧ ಶತಕ, 5 ಶತಕ ಗಳಿಸಿದ್ದು, ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ 106 ಎಸೆತಗಳಲ್ಲಿ 114 ರನ್ ಸಿಡಿಸಿದ್ದರು. ಸದ್ಯ ಜಿಂಬಾಬೆ ವಿರುದ್ಧ ಏಕದಿನ ಟೂರ್ನಿಯ ಕೊನೆ ಪಂದ್ಯದಲ್ಲಿ ಫಖಾರ್ ಜಮಾನ್ 85 ರನ್ ಗಳಿಸಿ ಔಟಾಗಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ 505 ರನ್ ಗಳಿಸಿದ್ದಾರೆ.

    ಜಿಂಬಾಂಬ್ವೆ ಕಳೆದ ಪಂದ್ಯದಲ್ಲಿ ಇಮಾಮ್ ಹುಲ್ ಹಕ್ (112 ಎಸೆತ, 112 ರನ್) ರೊಂದಿಗೆ ಉತ್ತಮ ಜೊತೆಯಾಟ ನೀಡಿದ ಫಖಾರ್ ಜಮಾನ್ 304 ರನ್ ಗಳ ದಾಖಲೆಯ ಆರಂಭಿಕ ಜೊತೆಯಾಟ ನೀಡಿದರು. 2006 ರಲ್ಲಿ ಶ್ರೀಲಂಕಾ ಆಟಗಾರ ಉಪುಲ್ ತರಂಗ, ಜಯಸೂರ್ಯ ಜೋಡಿ ಗಳಿಸಿದ್ದ 286 ರನ್ ಗಳ ಆರಂಭಿಕ ಜೊತೆಯಾಟದ ದಾಖಲೆ ಮುರಿದಿದ್ದರು. ಈಗಾಗಲೇ ಜಿಂಬಾಬ್ವೆ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಜಯಿಸಿರುವ ಪಾಕ್, ಈ ಪಂದ್ಯದ ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.

  • ದ್ವಿಶತಕ ಸಿಡಿಸಿ 21 ವರ್ಷಗಳ ದಾಖಲೆ ಮುರಿದ ಫಖಾರ್ ಜಮಾನ್

    ದ್ವಿಶತಕ ಸಿಡಿಸಿ 21 ವರ್ಷಗಳ ದಾಖಲೆ ಮುರಿದ ಫಖಾರ್ ಜಮಾನ್

    ಬುಲಬಾಯೊ: ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಆಟಗಾರ ಫಖಾರ್ ಜಮಾನ್ ಜಿಂಬ್ವಾಂಬೆ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದು, ಈ ಮೂಲಕ ಪಾಕ್ ಪರ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.

    ಈ ಹಿಂದೆ ಪಾಕ್ ನ ಸಯೀದ್ ಅನ್ವರ್ 21 ವರ್ಷಗಳ ಹಿಂದೆ 194 ರನ್ ಗಳಿಸಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಸದ್ಯ ಈ ದಾಖಲೆಯನ್ನು ಫಖಾರ್ ಜಮಾನ್ 156 ಎಸೆತಗಳಲ್ಲಿ ಅಜೇಯ 210 ರನ್ (24 ಬೌಂಡರಿ, 5 ಸಿಕ್ಸರ್) ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು. ಈ ಮೂಲಕ ದ್ವಿಶತಕರ ಗಳಿಸಿದ ಭಾರತದ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಹಾಗೂ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್, ನ್ಯೂಜಿಲೆಂಡ್ ನ ಮಾರ್ಟಿನ್ ಗುಪ್ಟಿಲ್ ಸಾಲಿಗೆ ಸೇರ್ಪಡೆಯಾದರು.

    ಪಂದ್ಯದಲ್ಲಿ ಇಮಾಮ್ ಹುಲ್ ಹಕ್ (112 ಎಸೆತ, 112 ರನ್) ರೊಂದಿಗೆ ಉತ್ತಮ ಜೊತೆಯಾಟ ನೀಡಿದ ಫಖಾರ್ ಜಮಾನ್ 304 ರನ್ ಗಳ ದಾಖಲೆಯ ಆರಂಭಿಕ ಜೊತೆಯಾಟ ನೀಡಿದರು. 2006 ರಲ್ಲಿ ಶ್ರೀಲಂಕಾ ಆಟಗಾರ ಉಪುಲ್ ತರಂಗ, ಜಯಸೂರ್ಯ ಜೋಡಿ ಗಳಿಸಿದ್ದ 286 ರನ್ ಗಳ ಆರಂಭಿಕ ಜೊತೆಯಾಟದ ದಾಖಲೆ ಮುರಿದರು.

    ಪಾಕಿಸ್ತಾನ 50 ಓವರ್ ಗಳಲ್ಲಿ 399 ರನ್ ಗಳಿಗೆ 1 ವಿಕೆಟ್ ಕಳೆದು ಜಿಂಬ್ವಾಬೆಗೆ ಬೃಹತ್ ಗುರಿಯನ್ನು ನೀಡಿದರು. ಆದರೆ ಪಾಕ್ ಬೌಲರ್ ಗಳ ಮುಂದೇ ಯಾವುದೇ ಪ್ರತಿರೋಧ ತೋರದ ಜಿಂಬ್ವಾಂಬೆ 155 ರನ್ ಗಳಿಗೆ ಅಲೌಟ್ ಆಗುವ ಮೂಲಕ ಸೋಲುಂಡಿತು. ಪಾಕ್ ಪರ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದ್ದು, 2010 ರಲ್ಲಿ ಬಾಂಗ್ಲಾದೇಶ ಪರ ಪಾಕ್ ಗಳಿಸಿದ್ದ 385/7 ಬೃಹತ್ ರನ್ ದಾಖಲೆಯನ್ನು ಅಳಿಸಿ ಹಾಕಿತು. ಈಗಾಗಲೇ 3-0 ಅಂತರದಲ್ಲಿ ನಾಲ್ಕು ಪಂದ್ಯಗಳ ಟೂರ್ನಿಯನ್ನ ಜಯಿಸಿರುವ ಪಾಕ್ , ಮುಂದಿನ ಪಂದ್ಯದ ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.

    https://twitter.com/taimoorze/status/1020266255322943488?