Tag: Fake

  • ಇನ್ಸ್‌ಪೆಕ್ಟರ್ ಯಾಮಾರಿಸಲು ಮುಂದಾದ ನಕಲಿ ಐಪಿಎಸ್ ಅಧಿಕಾರಿ ಅರೆಸ್ಟ್

    ಇನ್ಸ್‌ಪೆಕ್ಟರ್ ಯಾಮಾರಿಸಲು ಮುಂದಾದ ನಕಲಿ ಐಪಿಎಸ್ ಅಧಿಕಾರಿ ಅರೆಸ್ಟ್

    ಮೈಸೂರು: ಪೊಲೀಸ್ ಇನ್ಸ್‌ಪೆಕ್ಟರ್ ಗೆ ದೋಖಾ ಮಾಡಲು ಯತ್ನಿಸಿದ್ದ ನಕಲಿ ಐಪಿಎಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

    ದಿಲೀಪ್ ಬಂಧಿತ ನಕಲಿ ಐಪಿಎಸ್ ಆಗಿದ್ದು, ಮೈಸೂರಿನ ವಿಜಯನಗರ ನಿವಾಸಿಯಾಗಿದ್ದಾನೆ. ಈತ ಮೈಸೂರಿನ ಕೆ.ಆರ್.ಠಾಣೆ ಇನ್ಸ್‌ಪೆಕ್ಟರ್ ವಿ.ನಾರಾಯಣಸ್ವಾಮಿ ಅವರನ್ನು ಯಾಮಾರಿಸಲು ಮುಂದಾಗಿದ್ದನು.

    ನಾನು ಐಪಿಎಸ್ ಪ್ರೊಬೇಷನರಿ ಅಧಿಕಾರಿ ಎಂದು ಹೇಳಿಕೊಂಡಿದ್ದ ದಿಲೀಪ್, ತನ್ನ ಕುಟುಂಬಸ್ಥರ ಪ್ರವಾಸಕ್ಕೆ ಇನ್ನೋವಾ ಕಾರು ವ್ಯವಸ್ಥೆ ಮಾಡಿ ಎಂದು ಹೇಳಿದ್ದನು. ಅಲ್ಲದೆ ಕಾರು ಬಾಡಿಗೆ ಮೊತ್ತ ಮತ್ತು ಚಾಲಕನ ಕೂಲಿ ನೀವೇ ನೀಡಿ ಎಂದು ಹೇಳಿದ್ದಾನೆ. ದಿಲೀಪ್ ಮಾತಿನಿಂದ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಆತ ನಕಲಿ ಐಪಿಎಸ್ ಅಧಿಕಾರಿ ಎಂದು ಸಾಬೀತಾಗಿದೆ.

    ಐಪಿಎಸ್ ಆಯ್ಕೆಪಟ್ಟಿಯನ್ನ ಡೌನ್ ಲೋಡ್ ಮಾಡಿ, ಅದರಲ್ಲಿ ತನ್ನ ಹೆಸರು ಸೇರಿಸಿಕೊಂಡಿದ್ದ ಈತ ಖತರ್ನಾಕ್ ಆಸಾಮಿಯಾಗಿದ್ದಾನೆ. ನಕಲಿ ಐಪಿಎಸ್ ಎಂದು ತಿಳಿದ ತಕ್ಷಣವೇ ದಿಲೀಪ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡ್ತಿದ್ದ ವೈದ್ಯನ ಮನೆ ಮೇಲೆ ದಾಳಿ!

    ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡ್ತಿದ್ದ ವೈದ್ಯನ ಮನೆ ಮೇಲೆ ದಾಳಿ!

    ಹಾವೇರಿ: ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ನಕಲಿ ವೈದ್ಯ ಬಾನಪ್ಪ ವಾಲ್ಮೀಕಿ ಮನೆ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಮಾರುತಿ ಚಿಕ್ಕಣ್ಣವರ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ವೇಳೆ ಅಧಿಕಾರಿಗಳನ್ನು ಕಂಡ ನಕಲಿ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ. ಅಧಿಕಾರಿಗಳು ಮನೆಯನ್ನು ಪರಿಶೀಲನೆ ನಡೆಸಿದಾಗ ಮನೆಯಲ್ಲಿ ಸ್ಕೆತಾಸ್ಕೋಪ್, ಸಿರಿಂಜ್, ಔಷಧಿ ಬರೆಯಲು ಉಪಯೋಗಿಸುತ್ತಿದ್ದ ಚೀಟಿ ಮತ್ತು ವಿವಿಧ ಕಂಪೆನಿಯ ಔಷಧಿಗಳು ಪತ್ತೆಯಾಗಿವೆ.

    ಔಷಧಿಗಳು ಮತ್ತು ದಾಳಿ ವೇಳೆ ಸಿಕ್ಕ ವಸ್ತುಗಳನ್ನು ತಾಲೂಕು ವೈದ್ಯಾಧಿಕಾರಿಗಳು ವಶಪಡಿಸಿಕೊಂಡು ಸೀಜ್ ಮಾಡಿದ್ದಾರೆ. ಈ ಎಣ್ಣೆ ಡಾಕ್ಟರ್ ಕಳೆದ ಕೆಲವು ವರ್ಷಗಳಿಂದ ಮನೆಯಲ್ಲೇ ರಾಜಾರೋಷವಾಗಿ ಕ್ಲಿನಿಕ್ ನಡೆಸ್ತಿದ್ದನು. ಯಾವುದೇ ಕೋರ್ಸ್ ಕಲಿಯದೆ ಬಾನಪ್ಪ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.

    ಘಟನೆ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪುನೀತ್ ನಕಲಿ ಖಾತೆ ತೆಗೆದಿದ್ದು ಯಾಕೆ?- ಸ್ಪಷ್ಟನೆ ನೀಡಿದ ಅಪ್ಪು ಅಭಿಮಾನಿ

    ಪುನೀತ್ ನಕಲಿ ಖಾತೆ ತೆಗೆದಿದ್ದು ಯಾಕೆ?- ಸ್ಪಷ್ಟನೆ ನೀಡಿದ ಅಪ್ಪು ಅಭಿಮಾನಿ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ ನಕಲಿ ಖಾತೆ ತೆಗೆದಿದ್ದು ಯಾಕೆ ಎಂಬುದರ ಬಗ್ಗೆ @PuneethOfficial ಖಾತೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.

    “ಹಾಯ್ ನಮಸ್ಕಾರ ಎಲ್ಲರಿಗೂ.. ನಾನು ಮೊದಲಿಗೆ ಅಪ್ಪು ಸರ್ ಗೆ ಕ್ಷಮೆ ಕೇಳುತ್ತೇನೆ. ನಂತರ ಅಪ್ಪು ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ. ಈ ಫೇಕ್ ಖಾತೆ ತೆಗೆದಿರುವ ಉದ್ದೇಶ ಇಷ್ಟೇ, ಅಪ್ಪು ಸರ್ ಈ ತರಹದ ತಮ್ಮ ಹೆಸರಿನಲ್ಲಿ ಫೇಕ್ ಖಾತೆ ನೋಡಿಯಾದ್ರು ಟ್ವಿಟ್ಟರ್ ಗೆ ಬರಬಹುದೇನೋ ಅಂತಾ ಅಷ್ಟೇ. ಕೆಟ್ಟ ಉದ್ದೇಶ ಏನು ಇಲ್ಲ” ಎಂದು @PuneethOfficial ಖಾತೆಯಲ್ಲಿ ಬರೆಯಲಾಗಿದೆ.

    ಪುನೀತ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿರುವ ಮಾಹಿತಿಯನ್ನು ಜಗ್ಗೇಶ್ ರಿವೀಲ್ ಮಾಡಿ, ಈ ಖಾತೆ ವಿರುದ್ಧ ಕಿಡಿಕಾರಿದ್ದರು. ಅಚ್ಚರಿ ಅಂದರೆ ಸಾಕಷ್ಟು ನಟ ನಟಿಯರು ಪುನೀತ್ ಅಫೀಶಿಯಲ್ ಆಕೌಂಟ್ ಅಂತಾ ಫೋಟೋಗಳನ್ನು ಟ್ಯಾಗ್ ಮಾಡುತ್ತಿದ್ದರು. ಸುಮಾರು 10 ಸಾವಿರಕ್ಕೂ ಜನ ಈ ಜನ ಅಪ್ಪು ಅಫೀಶಿಯಲ್ ಅಕೌಂಟ್ ಎಂದು ತಿಳಿದು ಫಾಲೋ ಮಾಡುತ್ತಿದ್ದರು.

    https://twitter.com/PuneethOfficial/status/1014443022749257728

    “ಸೆಲಿಬ್ರಿಟಿಗಳ ಬದುಕು ಎಷ್ಟು ಕಷ್ಟ ಅನ್ನೋದು ಇದಕ್ಕೆ. ಕಷ್ಟಪಟ್ಟು ನೋವು ಅಪಮಾನ ಸಹಿಸಿ ಬೆಳೆದ ಮೇಲೆ ಇಂತಹ ಸಮಯ ಸಾಧಕರ ಆಗಮನ ಶ್ರಮವಿಲ್ಲದೆ ಸಾಧಕನ ಹೆಸರು ಬಳಸಿ ಬೆಳೆಯಲು. ಸ್ವತಃ ಪುನೀತನೆ ಹೇಳಬೇಕಾಯಿತು ಅಭಿಮಾನಿಗಳಿಗೆ. ಜಾಲತಾಣ ದುರ್ಬಳಕೆ ಅಂದರೆ ಇದೆ ಅದಕ್ಕೆ ಜನ ಯಾರನ್ನು ನಂಬೋಲ್ಲ. ಇದಕ್ಕಿಂತ ಮೈಬಗ್ಗಿಸಿ ದುಡಿದು ತಿನ್ನಿ ಸ್ವಾಭಿಮಾನದಿಂದ” ಎಂದು ಬರೆದು ಜಗ್ಗೇಶ್ ಟ್ವೀಟ್ ಮಾಡಿದ್ದರು.

    ಸದ್ಯ ನಕಲಿ ಖಾತೆ ಬಗ್ಗೆ ಪುನೀತ್ ರಾಜ್‍ಕುಮಾರ್ ಆಪ್ತ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಅಪ್ಪು ಟ್ವಿಟ್ಟರ್ ನಲ್ಲಿ ಯಾವುದೇ ಅಧಿಕೃತ ಖಾತೆಯನ್ನು ಹೊಂದಿಲ್ಲ. ಕೇವಲ ಫೇಸ್ ಬುಕ್‍ನಲ್ಲಿ ಮಾತ್ರ ಅಧಿಕೃತ ಖಾತೆಯನ್ನು ಹೊಂದಿದ್ದಾರೆ. ಅತೀ ಶೀಘ್ರದಲ್ಲೇ ಪುನೀತ್ ರಾಜ್‍ಕುಮಾರ್ ಟ್ವಿಟ್ಟರ್ ನಲ್ಲಿ ಖಾತೆ ತೆರೆಯಲಿದ್ದಾರೆ ಎಂದು ತಿಳಿಸಿದ್ದಾರೆ.

  • ಕೈ ಶೇಕ್ ಮಾಡಿದ್ರೆ ಬರುತ್ತೆ ಏಡ್ಸ್!

    ಕೈ ಶೇಕ್ ಮಾಡಿದ್ರೆ ಬರುತ್ತೆ ಏಡ್ಸ್!

    ನವದೆಹಲಿ: ಪಂಜಾಬ್ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ (ಪಿಎಸ್‍ಎಸಿಎಸ್) ಏಡ್ಸ್ ತಡೆಗಟ್ಟಲು ತಪ್ಪು ಮಾಹಿತಿಯುಳ್ಳ ಕರಪತ್ರವನ್ನು ಹಂಚಿ ಎಡವಟ್ಟು ಮಾಡಿಕೊಂಡಿದೆ.

    ಏಡ್ಸ್ ಕಾಯಿಲೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕರಪತ್ರ ಮಾಡಿದ್ದೇವೆ ಎಂದು ಪ್ರಕಟಿಸಿರುವ ಸಂಸ್ಥೆ. ಮೊದಲಿಗೆ ಏಡ್ಸ್ ಬಂದಿರೋ ವ್ಯಕ್ತಿಗಳಿಗೆ ಶೇಕ್ ಹ್ಯಾಂಡ್ ಕೊಡಬೇಡಿ, ಅವರಿಂದಲೂ ಶೇಕ್ ಹ್ಯಾಂಡ್ ತೆಗೆದುಕೊಳ್ಳಬೇಡಿ ಎಂಬ ಸೂಚನೆಗಳನ್ನು ನೀಡಿದೆ. ಇಷ್ಟೇ ಅಲ್ಲದೇ ಇನ್ನು ಹಲವು ರೀತಿಯಲ್ಲಿ ಕಾಯಿಲೆ ಹರಡುವುದಾಗಿ ಹಾಗೂ ಸಂಕ್ರಾಮಿಕ ರೋಗವೆಂದು ತಪ್ಪು ಮಾಹಿತಿ ನೀಡಿದೆ.

    ಕರಪತ್ರದಲ್ಲಿ ಏನಿದೆ?
    1. ಏಡ್ಸ್ ರೋಗಿಗಳ ಜೊತೆ ಶೇಕ್ ಹ್ಯಾಂಡ್ ಮಾಡಿದ್ರೆ ನಿಮಗೂ ರೋಗ ಬರುತ್ತದೆ.
    2. ರೋಗಿಗಳು ಬಳಸಿದ ಊಟದ ಪ್ಲೇಟ್, ಚೇರ್, ಮೊಬೈಲ್ ಫೋನ್, ಕಂಪ್ಯೂಟರ್‍ಯಿಂದ ಕಾಯಿಲೆ ಬರುತ್ತದೆ.
    3. ಏಡ್ಸ್ ರೋಗಿಗಳು ಬಳಸಿದ ಶೌಚಾಲಯವನ್ನು ಬಳಸಿದರೂ ನಿಮಗೆ ರೋಗ ಬರುತ್ತದೆ.