Tag: Fake Voter Id

  • ನಕಲಿ ವೋಟರ್ ಐಡಿ ಪ್ರಕರಣ; ಸಚಿವ ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು: ರವಿಕುಮಾರ್

    ನಕಲಿ ವೋಟರ್ ಐಡಿ ಪ್ರಕರಣ; ಸಚಿವ ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು: ರವಿಕುಮಾರ್

    ಬೆಂಗಳೂರು: ನಕಲಿ ವೋಟರ್ ಐಡಿ (Fake Voter ID) ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಸುರೇಶ್ (Byrathi Suresh) ರಾಜೀನಾಮೆ ನೀಡಬೇಕು ಅಂತ ಬಿಜೆಪಿ (BJP) ಒತ್ತಾಯ ಮಾಡಿದೆ. ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ರವಿಕುಮಾರ್ (N Ravikumar) ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

    ಸಂವಿಧಾನ ವಿರೋಧಿ ಕೆಲಸವನ್ನು ಈ ಸರ್ಕಾರದ ಸಚಿವರು ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಭೈರತಿ ಸುರೇಶ್. ಸುರೇಶ್ ಗೆಲ್ಲೋಕೆ ನಕಲಿ ವೋಟರ್ ಐಡಿ ಮಾಡಿದ್ದಾರೆ. ಮೌನೇಶ್ ಎಂಬ ಸುರೇಶ್ ಆಪ್ತರನ್ನ ಸಿಸಿಬಿ (CCB) ಬಂಧನ ಮಾಡಿದೆ. ಅಕ್ರಮವಾಗಿ ಐಡಿ ಸಂಗ್ರಹ, ಆಧಾರ್ ಕಾರ್ಡ್ ಸೃಷ್ಟಿ ಮಾಡೋ ಕೆಲಸ ಮೌನೇಶ್ ಮಾಡಿದ್ದಾನೆ. ಇದಕ್ಕೆ ಕಾರಣ ಸಚಿವರು. ಹೀಗಾಗಿ ಭೈರತಿ ಸುರೇಶ್ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಶೀಘ್ರದಲ್ಲೇ ಬಿಜೆಪಿ ನೂತನ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ಬಿ.ವೈ ವಿಜಯೇಂದ್ರ

    ಇದೊಂದು ಅಕ್ರಮ. ಇದೊಂದು ಸಂವಿಧಾನ ವಿರೋಧಿ ಚಟುವಟಿಕೆ. ಸಿಸಿಬಿ ತನಿಖೆ ಸರಿಯಾಗಿ ಆಗಬೇಕು. ಎಷ್ಟು ನಕಲಿ ವೋಟರ್ ಐಡಿ ಮಾಡಿದರು? ಎಷ್ಟು ನಕಲಿ ಆಧಾರ್ ಮಾಡಿದ್ದಾರೆ ಅನ್ನೋ ಸಂಪೂರ್ಣ ತನಿಖೆ ಆಗಬೇಕು. ತನಿಖೆ ಆಗಿ ವರದಿ ಬರುವ ಹೊತ್ತಿಗೆ ಸಚಿವ ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು. ಯಾವುದೇ ಪ್ರಭಾವ ಬೀರದೆ ತನಿಖೆ ಆಗಬೇಕಾದರೆ, ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು ಎಂದರು. ಇದನ್ನೂ ಓದಿ: ನನ್ನ, ಡಿಕೆಶಿ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ: ಸತೀಶ್ ಜಾರಕಿಹೊಳಿ

    ಇದೇ ರೀತಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ತನಿಖೆ ಮೇಲೆ ಪ್ರಭಾವ ಬೀರಬಾರದು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಕೂಡಾ ರಾಜೀನಾಮೆ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: 2024ಕ್ಕೆ ಭಾರತದಲ್ಲಿ ಮೋದಿ ಸರ್ಕಾರ ಇರಲ್ಲ: ಸಂತೋಷ್ ಲಾಡ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಕಲಿ ವೋಟರ್ ಐಡಿ ತಯಾರಿಸುತ್ತಿದ್ದ ಭೈರತಿ ಸುರೇಶ್ ಆಪ್ತ ಸಿಸಿಬಿ ವಶಕ್ಕೆ

    ನಕಲಿ ವೋಟರ್ ಐಡಿ ತಯಾರಿಸುತ್ತಿದ್ದ ಭೈರತಿ ಸುರೇಶ್ ಆಪ್ತ ಸಿಸಿಬಿ ವಶಕ್ಕೆ

    ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election) ಹೊತ್ತಲ್ಲಿ ನಕಲಿ ವೋಟರ್ ಐಡಿ (Fake Voter ID) ತಯಾರಿಸುತ್ತಿದ್ದ ಸಚಿವ ಭೈರತಿ ಸುರೇಶ್ (Byrathi Suresh) ಆಪ್ತನನ್ನು ಸಿಸಿಬಿ (CCB) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಸಚಿವರ ಆಪ್ತನಾದ ಮೌನೇಶ್ ಕುಮಾರ್‌ನನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಈತನ ಜೊತೆಗೆ ಶಾಮೀಲಾಗಿದ್ದ ಭಗತ್ ಹಾಗೂ ರಾಘವೇಂದ್ರ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಹಣ ಕೊಟ್ಟರೆ ನಕಲಿ ವೋಟರ್ ಐಡಿ, ಆಧಾರ್ ಕಾರ್ಡ್ ಹಾಗೂ ಡಿಎಲ್‍ನ್ನು ಮಾಡಿಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: Gaganyaan Mission- ಇಸ್ರೋ ಗಗನಯಾನ ಪರೀಕ್ಷಾರ್ಥ ಉಡಾವಣೆ ಯಶಸ್ವಿ

    ಆರೋಪಿಗಳು ಯಾವುದೇ ಕ್ಷೇತ್ರದ ವೋಟರ್ ಐಡಿ ಹಾಗೂ ಯಾವುದೇ ಆಧಾರ್ ಕೇಳಿದರೂ ಮಾಡಿಕೊಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಕನಕನಗರದಲ್ಲಿರುವ ಎಂಎಸ್‍ಎಲ್ ಟೆಕ್ನೊ ಸಲ್ಯೂಷನ್ ಕಂಪನಿ ಮೇಲೆ ದಾಳಿ ನಡೆಸಲಾಗಿದೆ. ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

    ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಎಂ.ಬಿ ಪಾಟೀಲ್ ಸಿಎಂ ಆಗಬೇಕಂದ್ರೆ ಜನ ಬಯಸಬೇಕು- ಸಚಿವರ ಇಂಗಿತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಕಲಿ ವೋಟರ್ ಐಡಿ: 14 ಜನರ ವಿರುದ್ಧ ಎಫ್‍ಐಆರ್

    ನಕಲಿ ವೋಟರ್ ಐಡಿ: 14 ಜನರ ವಿರುದ್ಧ ಎಫ್‍ಐಆರ್

    ಬೆಂಗಳೂರು: ನಕಲಿ ಚುನಾವಣಾ ಚೀಟಿಗಳನ್ನು ಮುದ್ರಣ ಮಾಡುತ್ತಿದ್ದ ಆರೋಪದಲ್ಲಿ ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ 14 ಜನರ ವಿರುದ್ಧ ಎಫ್‍ಐಆರ್ ದಾಖಲು ಮಾಡಿದ್ದಾರೆ.

    ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ದೇರಾಜು ಎಂಬವರಿಂದ ದೂರು ಪಡೆದು ಐಪಿಸಿ ಸೆಕ್ಷನ್ 171 ಬಿ ಮತ್ತು ಪ್ರಜಾ ಪ್ರತನಿಧಿ ಕಾಯ್ದೆ 127 ಎ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಸೋಮವಾರ ಪೊಲೀಸರು ಎನ್‍ಸಿಆರ್ ದಾಖಲಿಸಿದ್ರು. ಬಳಿಕ ಇಂದು 5ನೇ ಎಸಿಎಂಎಂ ಕೋರ್ಟ್ ನ ಅನುಮತಿ ಪಡೆದು ಎಫ್‍ಐಆರ್ ದಾಖಲು ಮಾಡಲಾಗಿದೆ.

    ಏನಿದು ಪ್ರಕರಣ: ಸೋಮವಾರ ರಾತ್ರಿ ನಗರದ ಉಪ್ಪಾರಪೇಟೆಯ ಪ್ರಭಾತ್ ಕಾಂಪ್ಲೆಕ್ಸ್ ಮೇಲೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ್ದರು. ನಕಲಿ ಮತದಾರರ ಚೀಟಿಗಳನ್ನು ಮುದ್ರಣ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿದ ಪರಿಣಾಮ ದಾಳಿ ನಡೆಸಲಾಗಿತ್ತು. ನಕಲಿ ಕೇಂದ್ರದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ನಕಲಿ ಮತದಾರರ ಪಟ್ಟಿ, ಸೀಲ್‍ಗಳು, ಇನ್ನಿತರ ವಸ್ತುಗಳು ಪತ್ತೆಯಾಗಿತ್ತು. ನಗರದ ಕೆಜಿ ರಸ್ತೆಯ ಪ್ರಭಾತ್ ಕಾಂಪ್ಲೆಕ್ಸ್ ನಲ್ಲಿ ತೆರೆಯಲಾಗಿದ್ದ ಈ ಕಚೇರಿ ಖಲೀಲುಲ್ಲಾ ಎಂಬವರಿಗೆ ಸೇರಿದೆ.

  • 60 ಲಕ್ಷ ನಕಲಿ ಮತದಾರರ ತನಿಖೆಗೆ ಆಯೋಗದಿಂದ ತಂಡ ರಚನೆ

    60 ಲಕ್ಷ ನಕಲಿ ಮತದಾರರ ತನಿಖೆಗೆ ಆಯೋಗದಿಂದ ತಂಡ ರಚನೆ

    ನವದೆಹಲಿ:ಮಧ್ಯಪ್ರದೇಶದಲ್ಲಿ 60 ಲಕ್ಷ ನಕಲಿ ಮತದಾರರ ನೋಂದಣಿಯಾಗಿದೆ ಎನ್ನುವ ಆರೋಪದ ಮೇಲೆ ಚುನಾವಣಾ ಆಯೋಗ ತನಿಖೆ ಶುರುಮಾಡಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಚುನಾವಣಾ ಆಯೋಗ ನಾಲ್ಕು ತಂಡವನ್ನು ರಚಿಸಿದೆ. ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರು ಇದ್ದು ಜೂನ್ 7 ರ ಒಳಗೆ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ.

    ನಕಲಿ ಮತದಾರರು ನೋಂದಣಿಯಾದಲ್ಲಿ ಹೇಗೆ ನೋಂದಣಿಯಾದರು? ಯಾರು ಮಾಡಿದ್ದರು ಎಂದು ವರದಿಯಲ್ಲಿ ಖಚಿತಗೊಳ್ಳಲಿದೆ. 60 ಲಕ್ಷ ನಕಲಿ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು ಎಂದು ಆಯೋಗ ತಿಳಿಸಿದೆ.

    ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪಗಳಿಗೆ ಸಾಕ್ಷಿಗಳನ್ನು ಆಯೋಗದ ಗಮನಕ್ಕೆ ತಂದಿದ್ದೇವೆ. ಒಬ್ಬ ವ್ಯಕ್ತಿ ಬೇರೇ ಬೇರೇ ಹೆಸರುಗಳಲ್ಲಿ ಮತ ಪಟ್ಟಿಯಲ್ಲಿ ಇರುವುದು. ಒಬ್ಬ ವ್ಯಕ್ತಿ ಹೆಸರು ಒಂದಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಮತಪಟ್ಟಿಯಲ್ಲಿ ಇರುವುದನ್ನು ಆಯೋಗದ ಗಮನಕ್ಕೆ ತಂದಿದ್ದೇವೆ. ನಕಲಿ ಮತದಾರರ ಸೇರ್ಪಡೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಕೈವಾಡವಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಕಮಲನಾಥ್ ಆರೋಪಿಸಿದ್ದಾರೆ.

    ರಾಜ್ಯದ ಜನಸಂಖ್ಯೆ ಶೇ24 ಹೆಚ್ಚಾಗಿದೆ, ಮತದಾರರ ಸಂಖ್ಯೆ ಶೇ.40 ಹೆಚ್ಚಾಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ನವೆಂಬರ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಎಲ್ಲಾ 230 ಕ್ಷೇತ್ರಗಳ ಮತಪಟ್ಟಿಯಲ್ಲಿ ಇರುವ ನಕಲಿ ಮತದಾರರ ಹೆಸರನ್ನು ತೆಗೆಯಬೇಕು ಎಂದು ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.