Tag: Fake Police

  • ಪೊಲೀಸ್ ಸೋಗಿನಲ್ಲಿ ಸುಲಿಗೆ – ನಕಲಿ ಪೊಲೀಸ್ ಅರೆಸ್ಟ್

    ಪೊಲೀಸ್ ಸೋಗಿನಲ್ಲಿ ಸುಲಿಗೆ – ನಕಲಿ ಪೊಲೀಸ್ ಅರೆಸ್ಟ್

    – ಇಬ್ಬರಿಂದ ಚಿನ್ನದ ಸರ, ರಿಂಗ್, 10,000 ರೂ. ನಗದು ಡ್ರಾ

    ಬೆಂಗಳೂರು: ಪೊಲೀಸ್ ಎಂದು ಹೇಳಿಕೊಂಡು ರಾಜಧಾನಿಯ ಯುವಕ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ನಕಲಿ ಪೊಲೀಸ್‌ನನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ.

    ಆಸೀಫ್ ಬಂಧಿತ ಆರೋಪಿ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಆಸೀಫ್ ಪೊಲೀಸ್ ಎಂದು ಹೇಳಿಕೊಂಡು ಬಂದು ಹಣ ವಸೂಲಿ ಮಾಡುತ್ತಿದ್ದ. ಪಾರ್ಕ್‌ನಲ್ಲಿರುವವರನ್ನು ಟಾರ್ಗೆಟ್ ಮಾಡಿಕೊಂಡು ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ. ಇದನ್ನೂ ಓದಿ: ಹನಿಟ್ರ್ಯಾಪ್‌ ಗದ್ದಲ| ಯತ್ನಾಳ್‌ಗೆ ಚೀಟಿ ಕೊಟ್ಟವರು ಸಿಎಂ ಆಪ್ತರಾ? – ಸಿಬಿಐ ತನಿಖೆಯಾಗಲಿ ಎಂದ ಸುರೇಶ್‌ ಗೌಡ

    ಆಸಿಫ್ ಇಬ್ಬರಿಂದ 12 ಗ್ರಾಂನ ಚಿನ್ನದ ಸರ ಹಾಗೂ 5 ಗ್ರಾಂನ ರಿಂಗ್ ಹಾಗೂ 10,000 ರೂ. ಹಣ ಡ್ರಾ ಮಾಡಿಸಿಕೊಂಡು ಎಸ್ಕೇಪ್ ಆಗಿದ್ದ. ಪೋಲಿಸ್ ಎಂದು ಹೇಳಿ ಪಾರ್ಕ್‌ನಲ್ಲಿ ಕೂರುವವರಿಂದ ಸುಲಿಗೆ ಮಾಡುತ್ತಿದ್ದ ಆಸೀಫ್, ಇದೇ ರೀತಿ ಸಾಕಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಇದೀಗ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಗು ಹಠ ಮಾಡ್ತಿದೆ ಎಂದು ಕೈಗೆ ಬರೆ, ಡೈಪರ್‌ಗೆ ಖಾರದ ಪುಡಿ ಹಾಕಿ ವಿಕೃತಿ

  • ರಿಯಲ್ ಪೊಲೀಸ್ ಕೈಗೆ ಸಿಕ್ಕಿ ಬಿದ್ದ ರೀಲ್ ಪೊಲೀಸ್

    ರಿಯಲ್ ಪೊಲೀಸ್ ಕೈಗೆ ಸಿಕ್ಕಿ ಬಿದ್ದ ರೀಲ್ ಪೊಲೀಸ್

    ಮಂಡ್ಯ: ಪಿಎಸ್‌ಐ (PSI) ಸಮವಸ್ತ್ರ ಧರಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ (Fake Police) ಅನ್ನು ಅಸಲಿ ಪೊಲೀಸರು ಬಂಧಿಸಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿ (KM Doddi) ನಡೆದಿದೆ.

    ಬೆಂಗಳೂರಿನ ಗೊಟ್ಟಿಗೆರೆ ನಿವಾಸಿ ಸಂಜಯ್ ಬಂಧಿತ ಆರೋಪಿಯಾಗಿದ್ದಾನೆ. ಸಂಜಯ್ ಪಿಎಸ್‌ಐ ಸಮವಸ್ತ್ರ ಧರಿಸಿ ಕೆಎಂ ದೊಡ್ಡಿ ಸುತ್ತಮುತ್ತ ದ್ವಿಚಕ್ರ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದರು. ಬಳಿಕ ಸಂಚಾರಿ ನಿಯಮ ಉಲ್ಲಂಘನೆಯಾಗಿದೆ ಎಂದು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ. ನಕಲಿ ಪೊಲೀಸ್ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದರ ಬಗ್ಗೆ ಸ್ಥಳೀಯರು ಕೆಎಂ ದೊಡ್ಡಿ ಠಾಣೆಯ ಇನ್ಸ್ಪೆಕ್ಟರ್ ಆನಂದ್‌ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಎಲ್‌ಟಿಟಿಇ ಮುಖ್ಯಸ್ಥ ಜೀವಂತವಾಗಿದ್ದಾನಾ? – ಇದು ತಮಾಷೆ ಎಂದ ಶ್ರೀಲಂಕಾ

    ಈ ಮಾಹಿತಿ ಬೆನ್ನಲ್ಲೇ ತಕ್ಷಣ ಎಚ್ಚೆತ್ತ ಕೆಎಂ ದೊಡ್ಡಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಬಳಿಕ ಸಂಜಯ್ ಪಿಎಸ್‌ಐ ಸಮವಸ್ತ್ರದಲ್ಲಿ ಇರುವಾಗಲೇ ಹಿಡಿದು ವಿಚಾರಣೆ ಮಾಡಿದಾಗ ತಾನೊಬ್ಬ ನಕಲಿ ಪೊಲೀಸ್ ಎಂದು ತಪ್ಪೊಪ್ಪಿಕೊಂಡಿದ್ದಾನೆ.

    ಇದೀಗ ಆರೋಪಿ ಸಂಜಯ್‌ಗೆ ವಾರ್ನ್ ಮಾಡಲಾಗಿದ್ದು, ಕೋರ್ಟ್ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಮಂಡ್ಯ ಉಸ್ತುವಾರಿ ಆಗಲು ಒಪ್ಪದ ಸಚಿವರು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಜ್ಜಿ, ಬೋಂಡಾ ತಿನ್ನಲು ಬಂದಿದ್ದ ಮಹಿಳಾ ‘ಪೊಲೀಸ್’ ಮೇಲೆ ದೂರು ದಾಖಲು!

    ಬಜ್ಜಿ, ಬೋಂಡಾ ತಿನ್ನಲು ಬಂದಿದ್ದ ಮಹಿಳಾ ‘ಪೊಲೀಸ್’ ಮೇಲೆ ದೂರು ದಾಖಲು!

    ಬೆಂಗಳೂರು: ಮಹಿಳಾ ‘ಪೊಲೀಸ್’ ಎಂದು ಧಮ್ಕಿ ಹಾಕಿ ಮಹಿಳೆಯೊಬ್ಬಳು 100 ರೂಪಾಯಿಗೆ ಬಜ್ಜಿ ಬೊಂಡಾ ತಿಂದ ಪ್ರಸಂಗವೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬ್ಯಾಟರಾಯನಪುರ (Byatarayanapura) ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಶೇಕ್ ಸಲಾಂ ಎಂಬವರು ಬಜ್ಜಿ ಅಂಗಡಿ ಇಟ್ಟುಕೊಂಡಿದ್ದಾರೆ. ಅಲ್ಲಿಗೆ ಬಂದ ಮಹಿಳೆಯೊಬ್ಬಳು, ತಾನು ಮಹಿಳಾ ಪೊಲೀಸ್ (Woman Police) ಎಂದು ಹೇಳಿ ಬಜ್ಜಿ ತಿಂದು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಳು. ಇದನ್ನೂ ಓದಿ: ಐಷಾರಾಮಿ ಕಾರುಗಳ ಹೆಸರಲ್ಲಿ ಸ್ಯಾಂಟ್ರೋ ರವಿಯಿಂದ ನಡೀತಿತ್ತು ಸುಂದರಿಯರ ಸೆಲೆಕ್ಷನ್..!

    ಇತ್ತ ವ್ಯಾಪಾರಿ ಕೂಡ ಪೊಲೀಸ್ ಎಂಬ ಭಯಕ್ಕೆ ಪ್ರತಿ ನಿತ್ಯ ಬಜ್ಜಿ ನೀಡುತ್ತಿದ್ದರು. ಇತ್ತೀಚೆಗೆ ಕೂಡ ಅಂಗಡಿ ಬಳಿ ಬಂದಿದ್ದ ಮಹಿಳೆ, ಹೊಟ್ಟೆ ತುಂಬಾ ಬಜ್ಜಿ ತಿಂದು ಪಾರ್ಸೆಲ್ ತೆಗೆದುಕೊಂಡಿದ್ದಳು. ಈ ವೇಳೆ ವ್ಯಾಪಾರಿ, 100 ರೂಪಾಯಿ ಆಗುತ್ತೆ ಎಂದಿದಕ್ಕೆ ನಕಲಿ ಪೊಲೀಸ್ ಮತ್ತೆ ಧಮ್ಕಿ ಹಾಕಿದ್ದಾಳೆ. ನಾನು ಕೊಡಿಗೇಹಳ್ಳಿ ಪೊಲೀಸ್ ಬಂದಾಗಲೆಲ್ಲ ಬಜ್ಜಿ ಕೊಡಬೇಕು. ಇಲ್ಲದಿದ್ದಲ್ಲಿ ನಾಳೆಯಿಂದ ಅಂಗಡಿನ ಎತ್ತಂಗಡಿ ಮಾಡಿಸ್ತೀನಿ ಎಂದು ಅವಾಜ್ ಹಾಕಿದ್ದಾಳೆ.

    ಈ ವೇಳೆ 112ಗೆ ಕರೆ ಮಾಡಿದ್ದ ವ್ಯಾಪಾರಿ, ತಕ್ಷಣ ತನ್ನ ಬೈಕ್‍ನಲ್ಲಿ ಮಹಿಳೆ ಪರಾರಿಯಾಗಿದ್ದಾಳೆ. ಪೊಲೀಸ್ ಹೆಸರಿಲ್ಲಿ ಬಜ್ಜಿ ಬಿಟ್ಟಿಯಾಗಿ ತಿನ್ನುತ್ತಿದ್ದ ಮಹಿಳೆಯ ವಿರುದ್ಧ ವ್ಯಾಪಾರಿ ಇದೀಗ ದೂರು ದಾಖಲಿಸಿದ್ದಾರೆ.

    ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆ (Kodigehalli Police Station) ಯಲ್ಲಿ ದೂರು ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಲ್ಲಿ ಪೊಲೀಸರ ಸೋಗಿನಲ್ಲಿ ಬಂದು 80 ಲಕ್ಷ ದರೋಡೆ

    ಬೆಂಗಳೂರಲ್ಲಿ ಪೊಲೀಸರ ಸೋಗಿನಲ್ಲಿ ಬಂದು 80 ಲಕ್ಷ ದರೋಡೆ

    ಬೆಂಗಳೂರು: ಪೊಲೀಸರ (Police) ಸೋಗಿನಲ್ಲಿ ಬಂದ ದುಷ್ಕರ್ಮಿಗಳು, ಕಾರಿನಲ್ಲಿ ತೆರಳುತ್ತಿದ್ದವರಿಂದ 80 ಲಕ್ಷ ರೂ. ದರೋಡೆ (Robbery) ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಕೇವಲ 15 ನಿಮಿಷದಲ್ಲಿ 80 ಲಕ್ಷ ರೂ. ಹಣವನ್ನು ಎಗರಿಸಿದ್ದಾರೆ.

    ಕುಮಾರಸ್ವಾಮಿ ಹಾಗೂ ಕಾರು ಚಾಲಕ ಚಂದನ್‌ ಹಣ ಕಳೆದುಕೊಂಡವರು. ಇವರು ಮಾಲೀಕನ ಆದೇಶದ ಮೇರೆಗೆ ಕಾರಿನಲ್ಲಿ 80 ಲಕ್ಷ ರೂ. ಹಣವನ್ನು ಸೇಲಂಗೆ ತೆಗೆದುಕೊಂಡು ಹೋಗುತ್ತಿದ್ದರು. ಎರಡು ಬ್ಯಾಗ್‌ನಲ್ಲಿ ತುಂಬಿದ್ದ ಹಣವನ್ನು ಹಿಂಬದಿಯ ಸೀಟ್‌ನಲ್ಲಿಟ್ಟು, ತುಮಕೂರಿನಿಂದ ಸೇಲಂಗೆ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: ಜನರಿಗೆ ಉಪಟಳ ನೀಡಿದ್ದ ಕರಡಿ ಕೊನೆಗೂ ಸೆರೆ

    ಇವರು ಕೆ.ಹೆಚ್ ರಸ್ತೆ ಸಿಗ್ನಲ್ ಬಳಿ‌ ನಿಂತಿರುವಾಗ‌ ಮಧ್ಯಾಹ್ನದ ಹೊತ್ತಿನಲ್ಲಿ ದುಷ್ಕರ್ಮಿಗಳು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದಾರೆ. ವಿಲ್ಸನ್ ಗಾರ್ಡನ್‌ನ ರಿವೋಲಿ ಜಂಕ್ಷನ್ ಬಳಿ ಕಾರು ಪಕ್ಕ ಕಾರು ನಿಲ್ಲಿಸಿದ್ದಾರೆ. ಪೊಲೀಸ್ ಎಂದು ಸ್ಟಿಕರ್ ಅಂಟಿಸಿ ನಾಟಕವಾಡಿದ್ದಾರೆ. ತೆಲುಗು ಭಾಷೆಯಲ್ಲಿ ಮಾತನಾಡಿಕೊಂಡು ಬಂದು ದುಷ್ಕರ್ಮಿಗಳು ಪೊಲೀಸ್ ಅಂತಾ ಹೇಳಿ ಕಾರು ಹತ್ತಿಕೊಂಡಿದ್ದಾರೆ. ಒಬ್ಬ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಇಬ್ಬರೂ ಕಾನ್‌ಸ್ಟೇಬಲ್‌ಗಳ ರೂಪದಲ್ಲಿ ಆರೋಪಿಗಳು ಬಂದಿದ್ದರು. ಬಳಿಕ ಲಾಠಿ ತೋರಿಸಿ ಬೆದರಿಸಿ ಹಣ ಕದ್ದೊಯ್ದಿದ್ದಾರೆ.

    ಅಡಿಕೆ ವ್ಯಾಪಾರದ ದುಡ್ಡನ್ನು ತೆಗೆದುಕೊಂಡು ಹೋಗುತ್ತಿದ್ದ ಚಾಲಕ ಚಂದನ್ ಹಾಗೂ ಕುಮಾರಸ್ವಾಮಿಗೆ ಆರಂಭದಲ್ಲಿ, ಇವರು ನಿಜವಾಗಿಯೂ ಪೊಲೀಸರೇ ಎಂಬ ಅನುಮಾನ ವ್ಯಕ್ತವಾಗಿದೆ. ಬಂದಿದ್ದವರು ನಕಲಿ ಪೊಲೀಸರು ಎಂದು ದೃಢಪಡಿಸಿಕೊಳ್ಳುವಷ್ಟರಲ್ಲಿ ಆರೋಪಿಗಳು ಹಣ ದರೋಡೆ ಮಾಡಿ ಪರಾರಿಯಾಗಿದ್ದಾರೆ. ನಂತರ ಇವರಿಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಲ್ಸನ್ ಗಾರ್ಡನ್ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ

    Live Tv
    [brid partner=56869869 player=32851 video=960834 autoplay=true]

  • ಜಪ್ತಿ ಮಾಡುವ ನೆಪದಲ್ಲಿ ಚಿನ್ನಾಭರಣ, ನಗದು ರಾಬರಿ ಮಾಡಿದ್ದ ನಕಲಿ ಪೊಲೀಸ್ ಗ್ಯಾಂಗ್ ಅಂದರ್

    ಜಪ್ತಿ ಮಾಡುವ ನೆಪದಲ್ಲಿ ಚಿನ್ನಾಭರಣ, ನಗದು ರಾಬರಿ ಮಾಡಿದ್ದ ನಕಲಿ ಪೊಲೀಸ್ ಗ್ಯಾಂಗ್ ಅಂದರ್

    ಬೆಂಗಳೂರು: ನಾವು ಪೊಲೀಸರು ಎಂದು ಹೇಳಿ ಮನೆಯಲ್ಲಿದ್ದ ನಗದು, ಚಿನ್ನ ದೋಚಿ ಎಸ್ಕೇಪ್ ಆಗಿದ್ದ ಗ್ಯಾಂಗ್‍ ಅನ್ನು ನಗರದ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಸಮಯನಾಯ್ಕ್ ಅವರ ಮನೆಗೆ ಪೊಲೀಸರ ನೆಪದಲ್ಲಿ ನುಗ್ಗಿದ್ದ ಗ್ಯಾಂಗ್, ನಾವು ತಿಪಟೂರು ಪೊಲೀಸರು ನಿಮ್ಮ ಮನೆ ಸರ್ಚ್ ಮಾಡಬೇಕು ಎಂದು ಹೇಳಿ, ನಂತರ ಮನೆಯವರಿಗೆ ಗನ್ ಹಾಗೂ ಚಾಕು ತೋರಿಸಿ ಸುಮ್ಮನೆ ಕೂರುವಂತೆ ವಾರ್ನ್ ಮಾಡಿದರು. ಅಲ್ಲದೇ ಫೋನ್‍ಗಳನ್ನು ಕಿತ್ತುಕೊಂಡು ಎರಡು ಗಂಟೆಗಳ ಕಾಲ ಮನೆಯನ್ನು ಸರ್ಚ್ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ – ಬೈಕ್ ಸವಾರನಿಗೆ ಮನವಿ ಮಾಡಿದ ಪೇದೆ

    ಮನೆಯಲ್ಲಿದ್ದ 19 ಲಕ್ಷ ನಗದು, 500 ಗ್ರಾಂ ಚಿನ್ನಾಭರಣ ಪೊಲೀಸರಂತೆ ಜಪ್ತಿ ಮಾಡಿ, ನಂತರ ಸಮಯನಾಯ್ಕ್ ಅವರ ಪುತ್ರ ಮಂಜುನಾಥ್ ಅವರನ್ನು ಠಾಣೆಗೆ ಕರೆದೊಯ್ಯುವುದಾಗಿ ಕಾರಿನಲ್ಲಿ ಕೂರಿಸಿಕೊಂಡು, ಮಹಾಲಕ್ಷ್ಮಿ ಲೇಔಟ್, BEL ಸರ್ಕಲ್, ಎಂ.ಎಸ್.ಪಾಳ್ಯ ಸುತ್ತಾಡಿಸಿದ್ದಾರೆ. ಈ ವೇಳೆ 20 ಲಕ್ಷ ಹಣ ಕೊಟ್ಟರೆ ಜಪ್ತಿ ಮಾಡಿದ ಕ್ಯಾಶ್ ಒಡವೆ ಕೊಟ್ಟು ಬಿಟ್ಟು ಬಿಡುತ್ತೇವೆ ಕೇಸ್ ಹಾಕಲ್ಲ ಎಂದು ತಿಳಿಸಿದ್ದರು. ಆದರೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಜಪ್ತಿ ಮಾಡುವ ನೆಪದಲ್ಲಿ 500 ಗ್ರಾಂ ಚಿನ್ನಾಭರಣ, 19 ಲಕ್ಷ ನಗದು ಕೊಂಡೊಯ್ದಿದ್ದಾರೆ.

    POLICE

    ಠಾಣೆಗೆ ಕರೆದಾಗ ಬರಬೇಕು, ಜಪ್ತಿ ಮಾಡಿದ ಹಣ ಒಡವೆ ಸ್ಟೇಷನ್‍ಗೆ ಬಂದು ಬಿಡಿಸಿಕೊಳ್ಳಿ ಎಂದಿದ್ದರು. ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ನಕಲಿ ಪೊಲೀಸರು ರಾಬರಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: 50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣ ಭೇದಿಸಿದ ಪೊಲೀಸರು – 7 ಜನ ಅರೆಸ್ಟ್ 

  • ಇನ್ನೋವಾ ಕಾರಿನಲ್ಲಿ ಬಂದು ಪೊಲೀಸರೆಂದು ಹೇಳಿ ಚಿನ್ನಾಭರಣ ದೋಚಿ ಪರಾರಿ

    ಇನ್ನೋವಾ ಕಾರಿನಲ್ಲಿ ಬಂದು ಪೊಲೀಸರೆಂದು ಹೇಳಿ ಚಿನ್ನಾಭರಣ ದೋಚಿ ಪರಾರಿ

    ಹಾಸನ: ಪೊಲೀಸರೆಂದು ಹೇಳಿಕೊಂಡು ಬಂದ ತಂಡವೊಂದು ಮನೆ ಪರಿಶೀಲಿಸುವ ನೆಪದಲ್ಲಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಲವಣ್ಣಗೌಡ ಎಂಬವರ ಮನೆಯಲ್ಲಿ ನಾಲ್ವರು ಪೊಲೀಸರು ಎಂದು ಹೇಳಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನಾಲ್ವರು ಇನ್ನೋವಾ ಕಾರಿನಲ್ಲಿ ಲವಣ್ಣಗೌಡ ಮನೆಗೆ ಬಂದಿದ್ದಾರೆ. ನಾವು ಪೊಲೀಸ್, ನಿಮ್ಮ ತಮ್ಮ ಬೆಂಗಳೂರಿನಿಂದ ಕಳ್ಳತನ ಮಾಡಿಕೊಂಡು ಹಣ ತಂದಿದ್ದಾನೆ. ಹಣವನ್ನು ಎಲ್ಲಿ ಇಟ್ಟಿದ್ದಾನೆ ಕೊಡಿ ಎಂದು ಹೇಳಿ ಅವರ ಬಳಿಯಿದ್ದ ಫೈಲ್‍ನಿಂದ ಲವಣ್ಣಗೌಡನ ತಮ್ಮ ಕೃಷ್ಣೇಗೌಡನ ಫೋಟೋ ತೋರಿಸಿದ್ದಾರೆ.

    ಈ ವೇಳೆ ಮನೆಯವರು ನನ್ನ ತಮ್ಮ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿಲ್ಲ. ಅವನು ಚಾಮರಾಜನಗರದಲ್ಲಿ ಕೆಲಸ ಮಾಡುತ್ತಿರುವುದು ಎಂದು ಹೇಳಿದ್ದಾರೆ. ಕೊನೆಗೆ ನಾಲ್ವರು ಮನೆಯವರನ್ನೆಲ್ಲ ಹಾಲ್‍ನಲ್ಲಿ ಕೂರಿಸಿದ್ದಾರೆ. ನಂತರ ಹಾಲಿನಲ್ಲಿ ಬೀರು, ಸೋಫಾ ಎಲ್ಲ ಹುಡುಕಿದ್ದು, ಬೀರುವಿನ ಬಾಗಿಲನ್ನು ತೆಗೆದು ಅದರಲ್ಲಿದ್ದ 12 ಗ್ರಾಂ ಚಿನ್ನದ ಸರ, 8 ಗ್ರಾಂ ಚಿನ್ನದ ಒಂದು ಜೊತೆ ಓಲೆ, 5 ಗ್ರಾಂನ ಉಂಗುರ ಇವುಗಳನ್ನು ತೆಗೆದುಕೊಂಡಿದ್ದಾರೆ.

    ಕೊನೆಗೆ ಹೋಗುವಾಗ ನಿಮ್ಮ ಮನೆಯವರೆಲ್ಲರೂ ನಾಳೆ ಬೆಳಗ್ಗೆ ಚನ್ನರಾಯ ಪಟ್ಟಣ ಪೊಲೀಸ್ ಠಾಣೆಗೆ ಬನ್ನಿ ಎಂದು ಹೇಳಿ ಹೋಗಿದ್ದಾರೆ. ಇದನ್ನು ನಂಬಿ ಮನೆಯವರು ಪೊಲೀಸ್ ಠಾಣೆಗೆ ಹೋದಾಗ ಬಂದವರು ನಕಲಿ ಪೊಲೀಸರೆಂದು ಗೊತ್ತಾಗಿದೆ. ಈ ಘಟನೆ ಸಂಬಂಧ ಚನ್ನರಾಯಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೇಮಿಗಳನ್ನು ಹೆದರಿಸಿ ಸುಲಿಗೆ – ನಕಲಿ ಪೊಲೀಸ್ ಅಧಿಕಾರಿ ಬಂಧನ

    ಪ್ರೇಮಿಗಳನ್ನು ಹೆದರಿಸಿ ಸುಲಿಗೆ – ನಕಲಿ ಪೊಲೀಸ್ ಅಧಿಕಾರಿ ಬಂಧನ

    ಬೆಂಗಳೂರು: ವೀಕೆಂಡ್ ಮತ್ತು ಲೇಟ್ ನೈಟ್ ಜಾಲಿರೈಡ್ ಮಾಡುತ್ತಿದ್ದ ಪ್ರೇಮಿಗಳನ್ನು ಟಾರ್ಗೆಟ್ ಮಾಡಿಕೊಂಡು ಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

    ನರೇಶ್ ಅಲಿಯಾಸ್ ಗುರುನರೇಶ್ ಬಂಧಿತ ನಕಲಿ ಪೊಲೀಸ್ ಅಧಿಕಾರಿ. ಬೆಂಗಳೂರಿನ ಹೆಬ್ಬಾಳ ಟು ಏರ್‍ಪೋರ್ಟ್ ರಸ್ತೆಗೆ ತಡರಾತ್ರಿ ಧಾವಿಸುತ್ತಿದ್ದ ಆರೋಪಿ, ಲೇಟ್ ನೈಟ್ ಜಾಲಿರೈಡ್ ಮಾಡುವ ಪ್ರೇಮಿಗಳನ್ನು ಟಾರ್ಗೆಟ್ ಮಾಡಿ ತನ್ನ ಬೈಕ್ ಮೂಲಕ ಅಡ್ಡ ಹಾಕುತ್ತಿದ್ದ. ನಂತರ ಪೊಲೀಸ್ ಅಧಿಕಾರಿ ಎಂದು ಪೋಸ್ ನೀಡಿ, ಬೆದರಿಸಿ, ವಾಹನದ ದಾಖಲಾತಿಗಳನ್ನು ಕೇಳಿ ಪೊಲೀಸ್ ಠಾಣೆಗೆ ನಡೀರಿ ಎಂದು ಆವಾಜ್ ಹಾಕುತ್ತಿದ್ದ.

    ಇದರಿಂದ ಬೆದರುತ್ತಿದ್ದ ಪ್ರೇಮಿಗಳು, ತಮ್ಮ ಬಳಿಯಿರುವ ಮೊಬೈಲ್, ಹಣವನ್ನು ಕೊಟ್ಟು ಹೋಗುತ್ತಿದ್ದರು. ಇದೇ ರೀತಿ ಬೈಕ್ ಸವಾರರು, ಕಾರು ಚಾಲಕರನ್ನು ಕೂಡ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

    ನಂತರ ತಡರಾತ್ರಿ ವಾಹನವೊಂದನ್ನು ತಡೆದು ಪೊಲೀಸ್ ಎಂದು ಬೆದರಿಕೆ ಹಾಕುತ್ತಿದ್ದ ವೇಳೆ ಆರೋಪಿ ನರೇಶ್‍ನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ನರೇಶ್ ಮೆಡಿಕಲ್ ರೆಪ್ರೆಸೆಂಟೇಟಿವ್ ಎಂಬುದು ಬೆಳಕಿಗೆ ಬಂದಿದೆ. ಇತರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಆರೋಪಿ ನರೇಶ್ ಪೊಲೀಸ್ ಎಂದು ಬೆದರಿಸಿ ಹಣ ವಸೂಲಿ ಮಾಡಿರುವುದು ಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಮಗನೊಂದಿಗೆ ಬಸ್ಸಿನಿಂದ ಮಹಿಳೆಯನ್ನ ಕೆಳಗಿಸಿ ಕಟ್ಟಡಕ್ಕೆ ಕರ್ಕೊಂಡು ಹೋಗಿ ರೇಪ್

    ಮಗನೊಂದಿಗೆ ಬಸ್ಸಿನಿಂದ ಮಹಿಳೆಯನ್ನ ಕೆಳಗಿಸಿ ಕಟ್ಟಡಕ್ಕೆ ಕರ್ಕೊಂಡು ಹೋಗಿ ರೇಪ್

    – ಪೊಲೀಸ್ ಎಂದು ಸುಳ್ಳಿ ಹೇಳಿ ಬಸ್ ಹತ್ತಿದ ಮೂವರು
    – ಮಗನನ್ನ ಹಿಡ್ಕೊಂಡ ಇಬ್ಬರು ನಕಲಿ ಪೊಲೀಸ್

    ಹೈದರಾಬಾದ್: ಪೊಲೀಸ್ ಎಂದು ಸುಳ್ಳು ಹೇಳಿ ವಿವಾಹಿತ ಮಹಿಳೆಯನ್ನ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ಜಹೀರಾಬಾದ್‍ನಲ್ಲಿ ನಡೆದಿದೆ.

    37 ವರ್ಷದ ವಿವಾಹಿತ ಮಹಿಳೆ ಇತ್ತೀಚೆಗೆ ತನ್ನ ಮಗನೊಂದಿಗೆ ಕರ್ನಾಟಕದ ಬೀದರಿಗೆ ಹೋಗಿದ್ದರು. ಬೀದರಿನಿಂದ ಜಹೀರಾಬಾದ್‍ನ ಮನೆಗೆ ಬರಲು ಬಸ್ ಹತ್ತಿದ್ದರು. ಆಗ ಜಹೀರಾಬಾದ್‍ಗೆ ಬರುತ್ತಿದಂತೆ ಬಸ್ ಹತ್ತಿದ್ದ ಮೂವರು ವ್ಯಕ್ತಿಗಳು ತಾವು ಪೊಲೀಸ್ ಎಂದು ಸುಳ್ಳು ಹೇಳಿದ್ದಾರೆ.

    ಮಹಿಳೆಯ ಬಳಿ ಇದ್ದ ಬ್ಯಾಗ್ ಪರಿಶೀಲನೆ ನಡೆಸಿದ ಅವರು ಬ್ಯಾಗಿನಲ್ಲಿರುವ ಸಾಮಾನುಗಳಲ್ಲಿ ನಿಷೇಧಿತ ವಸ್ತುಗಳು ಇವೆ. ಹೀಗಾಗಿ ನಾವು ಅವುಗಳನ್ನು ಪರಿಶೀಲನೆ ಮಾಡಬೇಕು ಎಂದು ತಿಳಿಸಿದ್ದಾರೆ. ಬಳಿಕ ಇಬ್ಬರು ವ್ಯಕ್ತಿಗಳು ಸಾಮಾನುಗಳ ಜೊತೆಗೆ ಮಹಿಳೆ ಹಾಗೂ ಮಗನನ್ನು ಬಸ್‍ನಿಂದ ಕೆಳಗಿಳಿಸಿದ್ದರು. ಈ ವೇಳೆ ಇಬ್ಬರು ಮಹಿಳೆಯ ಮಗನನ್ನು ಹಿಡಿದುಕೊಂಡಿದ್ದು, ಮತ್ತೊಬ್ಬ ಆರೋಪಿ ಮಹಿಳೆಯನ್ನು ರಸ್ತೆ ಸಮೀಪದಲ್ಲಿದ್ದ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾನೆ.

    ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಬಳಿಕ ಸಂತ್ರಸ್ತೆಯನ್ನು ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದರು. ಸಂತ್ರಸ್ತೆ ಅಲ್ಲಿಂದ ಜಹೀರಾಬಾದ್ ಪೊಲೀಸ್ ಠಾಣೆಗೆ ಹೋಗಿ ಘಟನೆ ಕುರಿತು ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಕಲಿ ಪೊಲೀಸ್ ಆರೋಪಿಗಳಿಗಾಗಿ ಶೋಧಕಾರ್ಯ ಶುರು ಮಾಡಿದ್ದಾರೆ.