Tag: fake note

  • ಬಿರಿಯಾನಿ ತಿಂದು 500 ರೂ. ನಕಲಿ ನೋಟು ಚಲಾವಣೆ – ಇಬ್ಬರು ಆರೋಪಿಗಳ ಬಂಧನ

    ಬಿರಿಯಾನಿ ತಿಂದು 500 ರೂ. ನಕಲಿ ನೋಟು ಚಲಾವಣೆ – ಇಬ್ಬರು ಆರೋಪಿಗಳ ಬಂಧನ

    ರಾಯಚೂರು: ಹೋಟೆಲ್‌ನಲ್ಲಿ ಬಿರಿಯಾನಿ ತಿಂದು ನಕಲಿ 500 ರೂ. ನೋಟು ಚಲಾವಣೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    500 ರೂ. ಮುಖಬೆಲೆಯ ನಕಲಿ ನೋಟು ಚಲಾವಣೆಗೆ ಮುಂದಾಗಿದ್ದ ಮಂಜುನಾಥ ಹಾಗೂ ರಮೇಶ್ ಬಂಧಿತ ಆರೋಪಿಗಳು. ಇದನ್ನೂ ಓದಿ: ನಡು ರಸ್ತೆಯಲ್ಲಿ ಅಡ್ಡಗಟ್ಟಿ ರೌಡಿಶೀಟರ್‌ ಬರ್ಬರ ಹತ್ಯೆ

    ಆರೋಪಿಗಳು ರಾಯಚೂರು (Raichur) ನಗರದ ಬಿರಿಯಾನಿ ಹೋಟೆಲ್‌ನಲ್ಲಿ ಚಿಕನ್ ಬಿರಿಯಾನಿ ತಿಂದು 500 ರೂ. ಬಿಲ್ ಪಾವತಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಅನುಮಾನ ಬಂದು ಹೋಟೆಲ್ ಮಾಲೀಕ ನೋಟು ಪರಿಶೀಲಿಸಿದಾಗ ಅಸಲಿಯತ್ತು ಬಯಲಾಗಿದೆ. ಇದನ್ನೂ ಓದಿ: ಛತ್ರಿಗಳು ಎಂದ ಡಿಕೆಶಿ ವಿರುದ್ಧ ಸಿಡಿದೆದ್ದ ಮಂಡ್ಯದ ಜನ!

    ಮನೋರಂಜನೆಗಾಗಿ ಬಳಸುವ ಚಿಲ್ಡ್ರನ್‌ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಿದ್ದ ನಕಲಿ ನೋಟನ್ನ ಆರೋಪಿಗಳು ಬಿಲ್ ಪಾವತಿಗೆ ಬಳಸಿದ್ದರು. ಹೋಟೆಲ್ ಮಾಲೀಕ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಬ್ಬರು ಆರೋಪಿಗಳನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಬೆಳೆ ಹಾಳು ಮಾಡಿದ್ದಕ್ಕೆ ದಾಯಾದಿಗಳ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ

    ಖೋಟಾ ನೋಟು ಜಾಲ ಪತ್ತೆ ಬೆನ್ನಲ್ಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ನಕಲಿ ನೋಟು ದಂಧೆಗೆ ಮುಂದಾಗಿದ್ದ ನಾಲ್ವರನ್ನ ಪೊಲೀಸರು ಇತ್ತೀಚಿಗಷ್ಟೆ ಬಂಧಿಸಿದ್ದರು. ಜಿಲ್ಲೆಯಲ್ಲಿ ಖೋಟಾ ನೋಟು ಹಾವಳಿ ಹೆಚ್ಚಾಗಿರುವುದು ಪೊಲೀಸರಿಗೆ ತಲೆನೋವಾಗಿದೆ.

  • ಲಿಂಗಸುಗೂರಿನಲ್ಲಿ ನಕಲಿ ನೋಟು ಜಾಲ ಪತ್ತೆ – 500 ರೂ. ಮುಖಬೆಲೆಯ 62 ಬಂಡಲ್ ಜಪ್ತಿ

    ಲಿಂಗಸುಗೂರಿನಲ್ಲಿ ನಕಲಿ ನೋಟು ಜಾಲ ಪತ್ತೆ – 500 ರೂ. ಮುಖಬೆಲೆಯ 62 ಬಂಡಲ್ ಜಪ್ತಿ

    ರಾಯಚೂರು: ಜಿಲ್ಲೆಯ ಲಿಂಗಸುಗೂರಿನಲ್ಲಿ (Lingasuguru) ನಕಲಿ ನೋಟಿನ (Fake Note) ಜಾಲ ಪತ್ತೆಯಾಗಿದೆ. ಮನೆಯೊಂದರಲ್ಲಿ ಅಕ್ರಮ ಮದ್ಯ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ಜಪ್ತಿ ಮಾಡಲು ಹೋದ ಅಧಿಕಾರಿಗಳು ನಕಲಿ ನೋಟ್ ಕಂಡು ಶಾಕ್ ಆಗಿದ್ದಾರೆ. ದಾಳಿ ವೇಳೆ ಮದ್ಯ ಸಿಗದಿದ್ದರೂ ಕಂತೆ ಕಂತೆ ನಕಲಿ ನೋಟು ಪತ್ತೆಯಾಗಿವೆ.

    ಒಂದು ಕಡೆ 500 ರೂ. ಮುಖಬೆಲೆಯ ನೋಟುಗಳು, ಮತ್ತೊಂದು ಕಡೆ ಬಿಳಿ ಪೇಪರ್ ಇರುವ ನೋಟುಗಳು ಪತ್ತೆಯಾಗಿವೆ. ದಾಳಿ ವೇಳೆ 500 ರೂ. ಮುಖಬೆಲೆಯ 62 ಬಂಡಲ್ ಮುದ್ರಿತ ನೋಟು ಸಿಕ್ಕಿವೆ. ಲಿಂಗಸುಗೂರಿನ ಗೌಳೀಪುರ ಓಣಿಯಲ್ಲಿ ನಕಲಿ ನೋಟು ತಯಾರಿಕೆ ಜಾಲ ಪತ್ತೆಯಾಗಿದ್ದು, ನಕಲಿ ನೋಟು ತಯಾರಿಸುತ್ತಿದ್ದ ಚೋಟಾಸಾಬ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಚುನಾವಣೆಯ ಹಬ್ಬವನ್ನ ನಾವು ಪ್ರೀತಿಯಿಂದ ಆಚರಿಸೋಣ: ‘ಕೈ’ ಅಭ್ಯರ್ಥಿ ಮನವಿ

    ಜನರಿಗೆ ವಂಚಿಸುವ ದೃಷ್ಟಿಯಿಂದ ನಕಲಿ ನೋಟು ತಯಾರಿಸುತ್ತಿದ್ದ ಎನ್ನಲಾಗಿದೆ. ಲಿಂಗಸುಗೂರು ಸಹಾಯಕ ಆಯುಕ್ತರು ಹಾಗೂ ಪಿಐ ಪುಂಡಲೀಕ ನೇತೃತ್ವದಲ್ಲಿ ದಾಳಿ ನಡೆದಿದೆ. ಯಾಕಾಗಿ ನಕಲಿ ನೋಟು ಶೇಖರಿಸಿದ್ದ? ಜಾಲ ಎಲ್ಲಿವರೆಗೆ ಹರಡಿದೆ ಅನ್ನೋ ಬಗ್ಗೆ ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಮಹಾರಾಜರ ಗೆಟಪ್‌ನಲ್ಲಿ ಬಂದು ಮತದಾನ ಮಾಡಿದ ವ್ಯಕ್ತಿ

    ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ನಿಖಿಲ್ ಬಿ ಹಾಗೂ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಂಡಿದೆ. ಇದನ್ನೂ ಓದಿ: ಮತ ಚಲಾಯಿಸಿ ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಿದಷ್ಟೇ ಧನ್ಯತೆ: ಪೇಜಾವರ ಶ್ರೀ

  • ದೇಶಾದ್ಯಂತ ಸಂಚಲನ ಮೂಡಿಸಿದ್ದ ನಕಲಿ ನೋಟ್ ಹಾವಳಿ ಪ್ರಕರಣ – ಬಳ್ಳಾರಿ ಯುವಕನ ಬಂಧಿಸಿದ ಎನ್‍ಐಎ

    ದೇಶಾದ್ಯಂತ ಸಂಚಲನ ಮೂಡಿಸಿದ್ದ ನಕಲಿ ನೋಟ್ ಹಾವಳಿ ಪ್ರಕರಣ – ಬಳ್ಳಾರಿ ಯುವಕನ ಬಂಧಿಸಿದ ಎನ್‍ಐಎ

    ಬಳ್ಳಾರಿ: ದೇಶಾದ್ಯಾಂತ ಸಂಚಲನ ಮೂಡಿಸಿದ್ದ ನಕಲಿ ನೋಟ್ (Fake Note) ಮುದ್ರಣ ಮತ್ತು ಚಲಾವಣೆ ಪ್ರಕರಣದಲ್ಲಿ ಎನ್‍ಐಎ (NIA) ತಂಡ ಬಳ್ಳಾರಿ ಯುವಕ ಸೇರಿದಂತೆ ವಿವಿಧ ರಾಜ್ಯದ ನಾಲ್ವರನ್ನು ಬಂಧಿಸಿದೆ.

    ಬಳ್ಳಾರಿಯಲ್ಲಿ (Ballari) ಬಂಧಿಸಲಾದ ಆರೋಪಿಯನ್ನು ಗೌತಮ ನಗರದ ಮಹೇಂದ್ರ (19) ಎಂದು ಗುರುತಿಸಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಉತ್ತರ ಪ್ರದೇಶದ ಮೂಲದ ಕಿಂಗ್‍ಪಿನ್‍ಗಳಾದ ರಾಹುಲ್ ತಾನಜಿ ಪಾಟೀಲ್, ಮಹಾರಾಷ್ಟ್ರದ ವಿವೇಕ್ ಠಾಕೂರ್, ಶಿವು ಪಾಟೀಲ್, ಬಿಹಾರದ ಶಶಿಭೂಷಣ್ ಎಂಬ ನಾಲ್ವರನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಗಲಾಟೆ – ಬೈಕ್ ಅಡ್ಡಗಟ್ಟಿ ಚಿಕ್ಕಪ್ಪನನ್ನೇ ಪೆಟ್ರೋಲ್ ಸುರಿದು ಸುಟ್ಟ ಮಗ

    ಆರೋಪಿ ಮಹೇಂದ್ರನ ಮನೆಯಲ್ಲಿ 500 ರೂ. ಮುಖಬೆಲೆಯ ಅಚ್ಚಿನ ಮಾದರಿ ಮತ್ತು ಒಂದು ಮುದ್ರಣ ಯಂತ್ರವನ್ನು ಸೀಜ್ ಮಾಡಲಾಗಿದೆ. 10ನೇ ತರಗತಿಯವರೆಗೂ ಆಂಧ್ರದಲ್ಲಿ ವ್ಯಾಸಂಗ ಮಾಡಿದ್ದ ಮಹೇಂದ್ರ ಕಳೆದ ಎರಡು ವರ್ಷಗಳ ಹಿಂದೆ ಬಳ್ಳಾರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದ. ಯುವಕನ ಮನೆ ಪರಿಸ್ಥಿತಿ ಹಾಗೂ ಅಲ್ಲಿನ ವಾತಾವರಣ ನೋಡಿದರೆ ಯುವಕನಿಗೆ ಇಷ್ಟೊಂದು ದೊಡ್ಡ ಮಟ್ಟದ ಕಾಂಟ್ಯಾಕ್ಟ್ ಹೇಗೆ ಎಂಬುದು ಹಲವು ಶಂಕೆಗಳಿಗೆ ಕಾರಣವಾಗಿದೆ. ಆರೋಪಿ ಮಹೇಂದ್ರ ಕುಟುಂಬಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿದು ಬಂದಿದೆ.

    ಆರೋಪಿ ಮಹೇಂದ್ರನ ತಂದೆ ರಾಮಣ್ಣ ಕಳೆದ ಎಂಟು ವರ್ಷದ ಹಿಂದೆಯೇ ಸಾವನ್ನಪ್ಪಿದ್ದು, ತಾಯಿ ರಾಜೇಶ್ವರಿ ಮೂರು ಮಕ್ಕಳೊಂದಿಗೆ ಜನತಾ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಆರೋಪಿ ಕುಟುಂಬದ ಹಿರಿಯ ಮಗನಾಗಿದ್ದು, ಆತ ಒಮ್ಮೆಯೂ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ರಾಜ್ಯಗಳಿಗೆ ಹೋಗಿಲ್ಲ ಎನ್ನಲಾಗಿದೆ. ಆತನಿಗೆ ಪ್ರಮುಖ ಆರೋಪಿಗಳ ಪರಿಚಯ ಹೇಗೆ ಆಗಿದೆ ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ: 6 ವರ್ಷದ ಬಾಲಕನಿಗೆ 11 ಕಡೆ ಕಚ್ಚಿ ಗಾಯಗೊಳಿಸಿದ ನಾಯಿ

  • ಡಾಕ್ಟರ್‌ಗೆ 500 ರೂ. ಮುಖಬೆಲೆಯ ನಕಲಿ ನೋಟು ಕೊಟ್ಟು ಯಾಮಾರಿಸಿದ ರೋಗಿ

    ಡಾಕ್ಟರ್‌ಗೆ 500 ರೂ. ಮುಖಬೆಲೆಯ ನಕಲಿ ನೋಟು ಕೊಟ್ಟು ಯಾಮಾರಿಸಿದ ರೋಗಿ

    ನವದೆಹಲಿ: ಡಾಕ್ಟರ್‌ಗೆ 500 ರೂ. ಮುಖಬೆಲೆಯ ನಕಲಿ ನೋಟು (500 rs Fake Note) ಕೊಟ್ಟು ಯಾಮಾರಿಸಿದ ರೋಗಿ ಯಾಮಾರಿಸಿರುವ ಘಟನೆ ನಡೆದಿದೆ. ನಕಲಿ ನೋಟಿನ ಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಡಾಕ್ಟರ್‌, ಇದೊಂದು ಫನ್ನಿ ಮೂಮೆಂಟ್‌ ಅಂತ ಬರೆದುಕೊಂಡಿದ್ದಾರೆ.

    ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಡಾ.ಮಾನನ್‌ ವೊರ ಬಳಿ ರೋಗಿಯೊಬ್ಬರು ವೈದ್ಯಕೀಯ ತಪಾಸಣೆಗೆ ಬಂದಿದ್ದರು. ಚಿಕಿತ್ಸೆ ಬಳಿಕ ಶುಲ್ಕವಾಗಿ 500 ರೂ. ಮುಖಬೆಲೆ ನೋಟನ್ನು ಕೊಟ್ಟಿದ್ದರು. ಆದರೆ ಇದು ನಕಲಿ ನೋಟು ಎಂದು ನಂತರ ವೈದ್ಯರಿಗೆ ಗೊತ್ತಾಗಿದೆ. ಇದನ್ನೂ ಓದಿ: ಹಿಮಾಚಲದಲ್ಲಿ ಭಾರೀ ಮಳೆ – ಕೊಚ್ಚಿ ಹೋಯ್ತು ಕಾರು, ಕುಸಿದು ಬಿದ್ದವು ಅಂಗಡಿಗಳು

    ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನೋಟಿನೊಂದಿಗೆ ಡಾ. ಮಾನನ್‌ ವೊರ ಅವರು ಪೋಸ್ಟ್‌ವೊಂದನ್ನು ಹಾಕಿದ್ದಾರೆ. ವೈದ್ಯಕೀಯ ತಪಾಸಣೆಗೆ ಬಂದಿದ್ದ ರೋಗಿಯೊಬ್ಬರು ನಕಲಿ ನೋಟನ್ನು ಕೊಟ್ಟು ಹೋಗಿದ್ದಾರೆ. ನಮ್ಮ ಸಿಬ್ಬಂದಿ ಕೂಡ ಅದನ್ನು ಸರಿಯಾಗಿ ಗಮನಿಸಿಲ್ಲ. ಕೊನೆಗೆ ಅದು ನನ್ನ ಬಳಿಗೆ ಬಂದಿದೆ. ಈ ನೋಟನ್ನು ನೋಡಿ ನನಗೆ ನಗು ಬಂತು. ಆ ರೋಗಿ ನನ್ನ ಬಳಿ ದರೋಡೆ ಮಾಡಿದ್ದಾರೆ. ಆದರೂ ಇದು ಫನ್ನಿಯಾಗಿದೆ. ಈ ನೆನಪಿಗಾಗಿ ಆ ನೋಟನ್ನು ಇಟ್ಟುಕೊಳ್ಳುತ್ತೇನೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ವೈದ್ಯರ ಈ ಪೋಸ್ಟ್‌ನ್ನು ಅನೇಕರು ಲೈಕ್‌ ಮಾಡಿದ್ದಾರೆ. ಇನ್ನೂ ಕೆಲವು ನೆಟ್ಟಿಗರು ಕಾಮೆಂಟ್‌ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡ್ತಿದ್ದಾಳೆ ಪಾಕ್ ಮಹಿಳೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೇಲೆ ಗರಿಗರಿ ನೋಟು ಒಳಗೆ ಖಾಲಿ ಪೇಪರ್ – 23 ಲಕ್ಷ ರೂ. ನಕಲಿ ನೋಟು ಪತ್ತೆ

    ಮೇಲೆ ಗರಿಗರಿ ನೋಟು ಒಳಗೆ ಖಾಲಿ ಪೇಪರ್ – 23 ಲಕ್ಷ ರೂ. ನಕಲಿ ನೋಟು ಪತ್ತೆ

    ಬೆಳಗಾವಿ(ಚಿಕ್ಕೋಡಿ): ನಕಲಿ ನೋಟು ಸರಬರಾಜು ಮಾಡುತ್ತಿದ್ದ 5 ಅಂತರಾಜ್ಯ ಕಳ್ಳರನ್ನು ಬೆಳಗಾವಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಕ್ರಾಸ್ ಬಳಿ ಎರಡು ಪ್ರತ್ಯೇಕ ವಾಹನಗಳಲ್ಲಿ 23.88 ಲಕ್ಷ ರೂ. ನಕಲಿ ಮತ್ತು 12 ಸಾವಿರ ರೂ. ಮೌಲ್ಯದ ಅಸಲಿ ನೋಟು ಸಾಗಿಸುವ ಸಂದರ್ಭದಲ್ಲಿ ದಾಳಿ ನಡೆಸಿದ ಡಿಸಿಐಬಿ ಹಾಗೂ ಸಂಕೇಶ್ವರ ಠಾಣೆಯ ಪೊಲೀಸರು ಐವರು ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಹಾರಾಷ್ಟ್ರದ ಕೊಲ್ಲಾಪುರದ ಅಮರ್ ಶಂಕರ್ ಅಂಬೇಕರ(28), ಕಾಗಲ್ ತಾಲೂಕಿನ ಬೆಲ್ಲೋಳಿಬಾಚಲಿ ಗ್ರಾಮದ ದೈರ್ಯಶೀಲ ಬಾಬುರಾವ್ ಪಾಟೀಲ್(42), ಬಾಬಾಸೋ ವಸಂತ್ ಪಾಟೀಲ್(31), ನಿಪ್ಪಾಣಿ ಪಟ್ಟಣದ ರಾಜೇಶ್ ಮಾರುತಿ ಮೋಹಿತೆ(48) ಮತ್ತು ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಅಶೋಕ್ ಶಂಕರ್ ತೇಲಿ(50) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ನೋಟಿನ ಬಂಡಲ್ ಮೇಲೆ ಕೆಳಗೆ 500ರೂ. ಮುಖ ಬೆಲೆಯ ನೋಟು ಇಟ್ಟು ಮಧ್ಯದಲ್ಲಿ ನೋಟಿನ ಮಾದರಿಯ ಬಿಳಿ ಹಾಳೆಗಳನ್ನು ಇಡಲಾಗಿದೆ.

    ಇಂತಹ 12 ಬಂಡಲ್ ನಕಲಿ ನೋಟು ಪತ್ತೆಯಾಗಿವೆ. ಪ್ರತಿ ಬಂಡಲ್ ನಲ್ಲಿ 2 ಲಕ್ಷ ರೂ. ನಕಲಿ ನೋಟುಗಳಿವೆ ಎಂದು ನಂಬುವ ಹಾಗೆ ಮಾಡಿ 1 ಲಕ್ಷ ರೂ. ಅಸಲಿ ನೋಟು ಕೊಟ್ಟರೆ 3 ಲಕ್ಷ ರೂ. ನಕಲಿ ನೋಟು ಕೊಡುವುದಾಗಿ ನಂಬಿಸಿ, ಮೋಸ ಮಾಡುವ ಪ್ರಯತ್ನ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ನಕಲಿ ನೋಟಿನ ಬಂಡಲ್‍ನ ಎರಡೂ ಬದಿಗೆ ಅಸಲಿ ನೋಟು ಕಾಣುವ ರೀತಿಯಲ್ಲಿ ಬಣ್ಣ ಮಾಡಿ ಪ್ಲಾಸ್ಟಿಕ್‍ನಿಂದ ಸುತ್ತಿಡಲಾಗಿತ್ತು. ಒಟ್ಟು 12 ಸಾವಿರ ರೂ. ಅಸಲಿ ನೋಟು ಮತ್ತು 23.88 ಲಕ್ಷ ರೂ. ನಕಲಿ ನೋಟನ್ನು ಪೊಲೀಸರಿಂದ ವಶ ಪಡಿಸಿಕೊಳ್ಳಲಾಗಿದೆ.

    ದಾಳಿ ಸಂದರ್ಭದಲ್ಲಿ ನೋಟುಗಳ ಜೊತೆಗೆ ಸಾಗಾಣಿಕೆಗೆ ಬಳಸುತ್ತಿದ್ದ ಬುಲೇರೋ ಜೀಪ್, ಸುಜುಕಿ ಸ್ವಿಫ್ಟ್ ಕಾರು ಹಾಗೂ 5 ವಿವಿಧ ಕಂಪನಿಯ ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • 6.4 ಕೋಟಿ ಮೌಲ್ಯದ ಪಿಂಕ್ ನೋಟ್ ಪತ್ತೆ- ಇದೇನಾ ನಿಮ್ಮ ನೋಟ್ ಬ್ಯಾನ್ ಎಂದ ಕಾಂಗ್ರೆಸ್

    6.4 ಕೋಟಿ ಮೌಲ್ಯದ ಪಿಂಕ್ ನೋಟ್ ಪತ್ತೆ- ಇದೇನಾ ನಿಮ್ಮ ನೋಟ್ ಬ್ಯಾನ್ ಎಂದ ಕಾಂಗ್ರೆಸ್

    ನವದೆಹಲಿ: ತೆಲಂಗಾಣದಲ್ಲಿ 6.4 ಕೋಟಿ ರೂ. ಮೌಲ್ಯದ 2 ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸುದ್ದಿಗೆ ಪ್ರತಿಕ್ರಿಯಿಸುವ ಕಾಂಗ್ರೆಸ್, ಇದೇನಾ ನಿಮ್ಮ ನೋಟ್ ಬ್ಯಾನ್ ಎಂದು ವ್ಯಂಗ್ಯವಾಗಿ ಟೀಕಿಸಿದೆ.

    ಕಾಂಗ್ರೆಸ್ ಟ್ವೀಟ್: ಪಿಎಂ ಮೋದಿಯವರೇ ಭ್ರಷ್ಟಾಚಾರದ ವಿರುದ್ಧದ ನಿಮ್ಮ ಹೋರಾಟ ಸುಳ್ಳು ಎಂಬುವುದು ಸಾಬೀತಾಗಿದೆ. ನಕಲಿ ಕರೆನ್ಸಿ ತೆಗೆದು ಹಾಕುತ್ತೇವೆ ಎಂದು ನೋಟ್ ಬ್ಯಾನ್ ಮಾಡಲಾಯ್ತು. ಆದರೆ ಇಷ್ಟು ದೊಡ್ಡ ಮೊತ್ತದ ನಕಲಿ ನೋಟು ಪತ್ತೆಯಾಗಿದ್ದು ಹೇಗೆ? ಇದೇನಾ ನಿಮ್ಮ ನೋಟ್ ಬ್ಯಾನ್? ಇಷ್ಟು ದೊಡ್ಡ ಪ್ರಮಾಣದ ನಕಲಿ ನೋಟುಗಳು ಹೇಗೆ ಚಲಾವಣೆಗೆ ಬಂತು ಎಂಬುದಕ್ಕೆ ಉತ್ತರಿಸಿ.

    ಶನಿವಾರ ತೆಲಂಗಾಣ ಪೊಲೀಸರು ಅಂತರ ರಾಜ್ಯ ಗ್ಯಾಂಗ್ ನ್ನು ಬಂಧಿಸಿ, 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಖಮ್ಮಾಮ್ ಜಿಲ್ಲೆಯ ವೆಮ್ಸೂರ್ ನಲ್ಲಿ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಈ ತಂಡ ಗ್ರಾಹಕರಿಗೆ ನಕಲಿ ನೋಟುಗಳನ್ನು ಅಸಲಿ ಎಂದು ನಂಬಿಸಿ ವ್ಯವಹರಿಸುತ್ತಿದ್ದರು. 20% ಕಮಿಷನ್ ಮೇಲೆ ನೋಟುಗಳ ವರ್ಗಾವಣೆ ನಡೆಸುತ್ತಿದ್ದರು.

    2 ಸಾವಿರ ರೂಪಾಯಿಯ 320 ಬಂಡಲ್ ಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರು ತೆಲಂಗಾಣದ ನಿವಾಸಿಗಳೆಂದು ತಿಳಿದು ಬಂದಿದ್ದು, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ವ್ಯವಹರಿಸುತ್ತಿದ್ದರು ಎಂದು ವರದಿಯಾಗಿದೆ.

  • ಮೆಟ್ರೋ ನಿಲ್ದಾಣದಲ್ಲಿ 4.64 ಲಕ್ಷ ರೂ. ನಕಲಿ ನೋಟು ಪತ್ತೆ

    ಮೆಟ್ರೋ ನಿಲ್ದಾಣದಲ್ಲಿ 4.64 ಲಕ್ಷ ರೂ. ನಕಲಿ ನೋಟು ಪತ್ತೆ

    ನವದೆಹಲಿ: ಸಿಐಎಸ್‍ಎಫ್ (Central Industrial Security Force) ಅಧಿಕಾರಿಗಳು ದೆಹಲಿಯ ಕಾಶ್ಮೇರ್ ಮೆಟ್ರೋ ನಿಲ್ದಾಣದ ಗೇಟ್ ಬಳಿ 500 ರೂ. ಮುಖಬೆಲೆಯ 4,64,000 ರೂ. ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

    ಶನಿವಾರ ಸಂಜೆ 5.30ಕ್ಕೆ ಕಾಶ್ಮೇರ್ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 8ರಲ್ಲಿ ಅನುಮಾನಸ್ಪಾದ ಬ್ಯಾಗ್ ಪತ್ತೆಯಾಗಿತ್ತು. ಕೂಡಲೇ ನಿಲ್ದಾಣದ ಭದ್ರತಾ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಸಬ್ ಇನ್‍ಸ್ಪೆಕ್ಟರ್ ಬೀರೇಂದ್ರ ಕುಮಾರ್ ಸ್ಥಳೀಯ ಪೊಲೀಸರಿಗೆ ಮತ್ತು ಬಾಂಬ್ ನಿಷ್ಕಿಯ ತಂಡಕ್ಕೆ ಮಾಹಿತಿ ರವಾನಿಸಿದ್ದಾರೆ.

    ಬ್ಯಾಗ್ ಪತ್ತೆಯಾದ ಕೂಡಲೇ ಗೇಟ್ ನಂಬರ್ 8 ರಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬ್ಯಾಗ್ ಪರಿಶೀಲನೆ ನಡೆಸಿದಾಗ ನಕಲಿ ನೋಟುಗಳ ಕಂತೆ ಪತ್ತೆಯಾಗಿದೆ. ನಕಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮೆಟ್ರೋ ನಿಲ್ದಾಣದ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

    ಇಂದು ಸಿಐಎಸ್‍ಎಫ್ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದು, ಬ್ಯಾಗಿನಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳು ದೊರೆತಿಲ್ಲ. ಬ್ಯಾಗಿನಲ್ಲಿ 500 ರೂ. ಮುಖಬೆಲೆಯ 4.64 ಲಕ್ಷ ರೂ. ನಕಲಿ ನೋಟು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ.

  • ಕರೆನ್ಸಿ ಹಾಕಿಸಲು ಬಂದವ್ರು ಪೊಲೀಸರ ವಶವಾದ್ರು

    ಕರೆನ್ಸಿ ಹಾಕಿಸಲು ಬಂದವ್ರು ಪೊಲೀಸರ ವಶವಾದ್ರು

    ಮಡಿಕೇರಿ: ಖೋಟಾ ನೋಟಿನ ಜಾಲವೊಂದನ್ನು ಬೇಧಿಸುವಲ್ಲಿ ಮಡಿಕೇರಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಇಬ್ಬರು ಆರೋಪಿಗಳನ್ನು ಬಂಧಿಸಿ 2 ಸಾವಿರ ಮುಖ ಬೆಲೆಯ 5 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಮಡಿಕೇರಿ ತಾಲೂಕಿನ ಕುಲಂಜಿ ನಿವಾಸಿ ಅಮೀರ್ ಸೋಹೈಲ್ (20) ಹಾಗೂ ವಿರಾಜಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ನಿವಾಸಿ ಯು.ವೈ ಯೂನೀಸ್ (20) ಮತ್ತೊಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ಮೂವರು ಖೋಟಾ ನೋಟು ತಯಾರಿಸುವ ಜಾಲದಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.

    ಸೆಪ್ಟೆಂಬರ್ 10 ರ ಸಂಜೆ 4 ಗಂಟೆ ಸುಮಾರಿಗೆ ಮಡಿಕೇರಿ ಕಾಲೇಜು ರಸ್ತೆಯಲ್ಲಿರುವ ಅರುಣ್ ಮಾರ್ಕೆಟಿಂಗ್ ಕರೆನ್ಸಿ ಸೆಂಟರ್ ಗೆ ಆರೋಪಿ ಅಮೀರ್ ಸೋಹೈಲ್ ನಕಲಿ ನೋಟು ಕೊಟ್ಟು ಕರೆನ್ಸಿ ಹಾಕುವಂತೆ ಅಂಗಡಿ ಮಾಲೀಕ ಮುಕುಂದ ಅವರಿಗೆ ಕೊಟ್ಟಿದ್ದಾನೆ. ನೋಟನ್ನು ಗಮನಿಸಿ ಸಂಶಯಗೊಂಡ ಅಂಗಡಿ ಮಾಲೀಕ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ನೇತೃತ್ವದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಬಿ.ಪಿ.ದಿನೇಶ್ ಕುಮಾರ್, ಮಡಿಕೇರಿ ನಗರ ಠಾಣೆಯ ಇನ್‍ಸ್ಪೆಕ್ಟರ್ ಅನೂಪ್ ಮಾದಪ್ಪ ಹಾಗೂ ಸಬ್‍ಇನ್‍ಸ್ಪೆಕ್ಟರ್ ಸದಾಶಿವ ನೇತೃತ್ವದ ಸಿಬ್ಬಂದಿ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ.

  • ನೆಲಮಂಗಲದಲ್ಲಿ 6.84 ಲಕ್ಷ ರೂ. ಮೌಲ್ಯದ ಖೋಟಾನೋಟು ಜಪ್ತಿ: ಮೂವರ ಬಂಧನ

    ನೆಲಮಂಗಲದಲ್ಲಿ 6.84 ಲಕ್ಷ ರೂ. ಮೌಲ್ಯದ ಖೋಟಾನೋಟು ಜಪ್ತಿ: ಮೂವರ ಬಂಧನ

    ಸಾಂದರ್ಭಿಕ ಚಿತ್ರ

    ಬೆಂಗಳೂರು: ನಗರದಲ್ಲಿ ದಿನೇ ದಿನೇ ಖೋಟಾನೋಟು ಹಾವಳಿ ಹೆಚ್ಚಾಗುತ್ತಿದ್ದು, ಇಂದು ಸಹ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಹಾಗೂ ನಾಯಕನಹಳ್ಳಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ನೆಲಮಂಗಲದ ಬಳಿ ಸುಮಾರು 6.84 ಲಕ್ಷ ರೂಪಾಯಿ ಮೌಲ್ಯದ ಖೋಟಾನೋಟನ್ನು ವಶಪಡಿಸಿಕೊಂಡಿದ್ದಾರೆ.

    ನಗರದ ಹೊರವಲಯವಾದ ನೆಲಮಂಗಲದ ಸುತ್ತ-ಮುತ್ತ ಅಸಲಿ ನೋಟಿನಂತೆ ಕಾಣುವ 2 ಸಾವಿರ ಮುಖಬೆಲೆಯ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ಖಚಿತ ಮಾಹಿತಿ ಮೇರೆಗೆ ಎನ್‍ಐಎ ಹಾಗೂ ಮಾದನಾಯಕನಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಖೋಟಾನೋಟು ಚಲಾವಣೆಯಲ್ಲಿ ನಿರತರಾಗಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತರಿಂದ 2 ಸಾವಿರ ಮುಖಬೆಲೆಯ ಸುಮಾರು 6 ಲಕ್ಷದ 84 ಸಾವಿರ ರೂಪಾಯಿ ಮೌಲ್ಯದ ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತಿದ್ದು, ಇವರು ಖೋಟಾನೋಟು ದಂಧೆಯಲ್ಲಿ ಸಕ್ರಿಯವಾಗಿ ನಿರತರಾಗಿದ್ದಾರೆ. ಅಲ್ಲದೇ ಸಾಕಷ್ಟು ಬಾರಿ ಖೋಟಾನೋಟು ಪ್ರಕರಣದಲ್ಲಿ ಜೈಲಿಗೆ ಸಹ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದು, ಘಟನೆ ಸಂಬಂಧ ನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಬೆಂಗ್ಳೂರಲ್ಲಿ 7 ಲಕ್ಷ ರೂ. ಅಧಿಕ ಮೌಲ್ಯದ ಮೌಲ್ಯದ ಖೋಟಾನೋಟುಗಳು ಪತ್ತೆ!

    ಬೆಂಗ್ಳೂರಲ್ಲಿ 7 ಲಕ್ಷ ರೂ. ಅಧಿಕ ಮೌಲ್ಯದ ಮೌಲ್ಯದ ಖೋಟಾನೋಟುಗಳು ಪತ್ತೆ!

    ಸಾಂದರ್ಭಿಕ ಚಿತ್ರ

    ಬೆಂಗಳೂರು: ಖಚಿತ ಮಾಹಿತಿ ಮೇರೆಗೆ ಮುಂಬೈನ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ)ಯ ಅಧಿಕಾರಿಗಳು ನಗರದ ಎರಡು ಕಡೆ ದಾಳಿ ನಡೆಸಿ ಸುಮಾರು 7 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

    ಶ್ರೀರಾಮಪುರ ಹಾಗೂ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಆಲೂರಿನಲ್ಲಿ ಖಚಿತ ಮಾಹಿತಿ ಮೇರೆಗೆ ಮುಂಬೈನ ಎನ್‍ಐಎ ಹಾಗೂ ಸ್ಥಳೀಯ ಪೊಲೀಸರು ಇಬ್ಬರು ಆರೋಪಿಗಳ ಮೇಲೆ ದಾಳಿ ಮಾಡಿ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ 2,000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಸಾಜಿದ್ ಅಲಿ, ಎಂ.ಜಿ. ರಾಜು ಹಾಗೂ ಗಂಗಾಧರ್ ಕೋಲ್ಕರ್ ಬಂಧಿತ ಆರೋಪಿಗಳಾಗಿದ್ದು, ಇವರು ಬಾಂಗ್ಲಾದೇಶದಿಂದ ಕಳ್ಳಸಾಗಣೆ ಮೂಲಕ ನಕಲಿ ನೋಟುಗಳನ್ನು ತಮ್ಮ ನಿವಾಸಗಳಲ್ಲಿ ಶೇಖರಿಸಿಟ್ಟುಕೊಂಡಿದ್ದರು ಎಂದು ಎನ್‍ಐಎ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಸಂಬಂಧ ಶ್ರೀರಾಮಪುರ ಹಾಗೂ ಮಾನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews