Tag: Fake Ghee

  • ತುಪ್ಪ ಸವಿಯುವ ಮುನ್ನ ಇರಲಿ ಎಚ್ಚರ – ನಕಲಿ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ

    ತುಪ್ಪ ಸವಿಯುವ ಮುನ್ನ ಇರಲಿ ಎಚ್ಚರ – ನಕಲಿ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ

    ಬೆಂಗಳೂರು: ನಕಲಿ ತುಪ್ಪ ತಯಾರಿಸುವ ಜಾಲ ಒಂದಾದ ಮೇಲೆ ಒಂದು ಬೆಳಕಿಗೆ ಬರುತ್ತಲೇ ಇವೆ. ಮೈಸೂರಿನ ಬಳಿಕ ಇದೀಗ ಬೆಂಗಳೂರಿನಲ್ಲೂ ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

    ನಿಮ್ಮ ಮನೆಯಲ್ಲಿರುವುದು ಅಸಲಿ ತುಪ್ಪನಾ ಅಥವಾ ನಕಲಿ ತುಪ್ಪನಾ ಎಂಬುದನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಏಕೆಂದರೆ ಶುದ್ಧ ನಂದಿನ ಬ್ರಾಂಡ್‌ನ ಲೇಬಲ್ ಹಾಕಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಆಫ್‍ಲೈನ್ ಕ್ಲಾಸ್‍ಗೆ ಹೋಗು ಅಂದಿದ್ದಕ್ಕೆ ಹುಡುಗಿ ಆತ್ಮಹತ್ಯೆ

    ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ವ್ಯಾಪ್ತಿಯ ಬೈಯಂಡಳ್ಳಿಯಲ್ಲಿ ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಬಾಬುಲಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಬುಲಾಲ್ ಈ ಹಿಂದೆ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ ಮಾಡಿ, ನಷ್ಟ ಅನುಭವಿಸಿದ್ದ. ಬಳಿಕ ತುಪ್ಪದ ದಂಧೆ ಪ್ರಾರಂಭಿಸಿದ್ದ. ಪೊಲೀಸರು ದಾಳಿ ನಡೆಸಿದಾಗ 15 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತು ಹಾಗೂ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಕಂಪನಿಯನ್ನಾಗಿ ನಿರ್ಮಿಸಿ – ಉದ್ಯೋಗಿಗಳ ಜೊತೆ ಚಂದ್ರಶೇಖರ್ ಮಾತು

    ನೆಲಮಂಗಲ ಉಪವಿಭಾಗದ ಡಿಐಎಸ್‌ಪಿ ಗೌತಮ್, ಸಿಪಿಐ ಮಂಜುನಾಥ್ ಹಾಗೂ ಇತರ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಬೆಂಗಳೂರಲ್ಲಿ ನಕಲಿ ನಂದಿನಿ ತುಪ್ಪದ ಜಾಲ ಪತ್ತೆ

    ಬೆಂಗಳೂರಲ್ಲಿ ನಕಲಿ ನಂದಿನಿ ತುಪ್ಪದ ಜಾಲ ಪತ್ತೆ

    ಬೆಂಗಳೂರು: ಮೈಸೂರಿನ ಬಳಿಕ ಬೆಂಗಳೂರಿನಲ್ಲಿಯೂ ನಕಲಿ ತುಪ್ಪದ ಜಾಲ ಪತ್ತೆಯಾಗಿದೆ.

    Fake Ghee

    ಮೈಸೂರಿನಲ್ಲಿ ಉತ್ಪಾದಿಸಲ್ಪಟ್ಟ ನಕಲಿ ತುಪ್ಪ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕೆಎಂಎಫ್ ಅಧಿಕಾರಿಗಳ ಪರಿಶೀಲನೆ ವೇಳೆ ನಕಲಿ ತುಪ್ಪದ ಜಾಲ ಬಯಲಾಗಿದೆ. ನಕಲಿ ತುಪ್ಪ ಪತ್ತೆಗಾಗಿ ಹಲವು ತಂಡಗಳನ್ನು ರಚನೆ ಮಾಡಿದ್ದ ಕೆಎಂಎಫ್ ಅಧಿಕಾರಿಗಳು ಬೆಂಗಳೂರಿನ ಹನುಮಂತನಗರ, ಜಯನಗರ, ರಾಜಾಜಿನಗರ ನೆಲಮಂಗಲ ಬಳಿಯ ಮಾಕಳಿ, ಹೊಸಕೋಟೆಯ ದೇವನಗೊಂದಿ ಹಾಗೂ ಇನ್ನಿತರ ಕಡೆಗಳಲ್ಲಿ ಸಗಟು ಮಾರಾಟದ ಅಂಗಡಿಗಳು ಮತ್ತು ಗೋದಾಮುಗಳಲ್ಲಿ ಪರಿಶೀಲನೆ ನಡೆಸಿದಾಗ ಸತ್ಯ ಬಹಿರಂಗಗೊಂಡಿದೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಶಾಸಕ ಎಂ.ಪಿ. ಕುಮಾಸ್ವಾಮಿಯಿಂದ ದರ್ಪ

    Fake Ghee

    ಪರಿಶೀಲನೆ ವೇಳೆ ನಂದಿನಿ ತುಪ್ಪದ 1,000 ಎಂಎಲ್ ಸ್ಯಾಚೆ ಹಾಗೂ 15 ಕೆಜಿ ತೂಕದ ಟಿನ್‍ಗಳು ಪತ್ತೆಯಾಗಿದ್ದು, 1,000 ಮಿಲಿ ಸ್ಯಾಚೆ ಮಾದರಿಯನ್ನ ಎಫ್‍ಎಸ್‍ಎಸ್‍ಎಐಗೆ ರವಾನಿಸಲಾಗುತ್ತಿತ್ತು. ಅದೇ ರೀತಿ ಮತ್ತೊಂದು ಮಾದರಿಯನ್ನ ಕೆಎಂಎಫ್ ಗುಣ ಭರವಸೆ ವಿಭಾಗದಲ್ಲಿ ಪರಿಶೀಲನೆ ನಡೆಸಿದಾಗ, ಈ ವೇಳೆ ನಕಲಿ ತುಪ್ಪ ಎಂಬುದು ಪತ್ತೆಯಾಗಿದ್ದು, ಬೆಂಗಳೂರಿನ ಶೃತಿ ಮಾರ್ಕೆಟಿಂಗ್ ಕಾರ್ಪೋರೇಷನ್ ಅವರು ನಕಲಿ ತುಪ್ಪ ಸರಬರಾಜು ಮಾಡಿರುವುದು ಬೆಳಕಿಗೆ ಬಂದಿದೆ.

    Fake Ghee

    ಇದೀಗ ಈ ಸಂಬಂಧ ಕೆಎಂಎಫ್ ಮಾರ್ಕೆಟಿಂಗ್ ವಿಭಾಗದ ಅಪರ ನಿರ್ದೇಶಕ ಬಿ. ಪಿ. ಸುರೇಶ್ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಶೃತಿ ಮಾರ್ಕೆಟಿಂಗ್ ಕಾರ್ಪೋರೇಷನ್ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

  • ಕರಿದ ಎಣ್ಣೆ, ಡಾಲ್ಡಾದಿಂದ 100 ರೂ.ಯಲ್ಲಿ ತುಪ್ಪ ತಯಾರಿಸಿ 450 ರೂ.ಗೆ ಸೇಲ್

    ಕರಿದ ಎಣ್ಣೆ, ಡಾಲ್ಡಾದಿಂದ 100 ರೂ.ಯಲ್ಲಿ ತುಪ್ಪ ತಯಾರಿಸಿ 450 ರೂ.ಗೆ ಸೇಲ್

    – ದಿನಕ್ಕೆ 50 ಕೆಜಿ ನಕಲಿ ತುಪ್ಪ ಮಾರಾಟ
    – ಸಂಜೀವಿನಿ ನಗರದಲ್ಲಿದೆ ವಿಷಕಾರಿ ಫ್ಯಾಕ್ಟರಿ

    ಭೋಪಾಲ್: ಇಂದು ಬೆಳಗ್ಗೆ ಮಧ್ಯಪ್ರದೇಶದ ಜಬಲ್ಪುರ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ನಕಲಿ ತುಪ್ಪ ತಯಾರಿಸುತ್ತಿದ್ದ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ್ದಾರೆ. ಈ ಫ್ಯಾಕ್ಟರಿಯಲ್ಲಿ ನೂರು ರೂಪಾಯಿಯಲ್ಲಿ ನಕಲಿ ತುಪ್ಪ ತಯಾರಿಸಿ ಅದನ್ನ 400 ರಿಂದ 450ಕ್ಕೆ ಮಾರಾಟ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಪ್ರತಿ ದಿನ 50 ಕೆಜಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವ ಆಘಾತಕಾರಿ ವಿಷಯ ತಿಳಿದು ಬಂದಿದೆ.

    ಜಬಲ್ಪುರ ನಗರದ ಸಂಜೀವಿನಿ ನಗರದಲ್ಲಿರುವ ಈ ಫ್ಯಾಕ್ಟರಿ ಜನರಿಗೆ ವಿಷವುಣಿಸುತ್ತಿತ್ತು. ಆರೋಪಿ ವಿಜಯ್ ಗುಪ್ತಾ (36) ಮೂಲತಃ ರಿವಾದ ನಿವಾಸಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಸಂಜೀವಿನಿ ನಗರದಲ್ಲಿ ವಾಸವಾಗಿದ್ದನು. 2003ರಿಂದ ಮಿಲನ್ ಗುಪ್ತಾ ಎಂಬವರ ಮನೆ ಬಾಡಿಗೆ ಪಡೆದು ವಿಜಯ್ ಗುಪ್ತಾ ವಾಸವಾಗಿದ್ದನು.

    ಕಳೆದ ನಾಲ್ಕು ವರ್ಷಗಳಿಂದ ವಿಜಯ್ ನಕಲಿ ತುಪ್ಪ ತಯಾರಿಕೆಯಲ್ಲಿ ತೊಡಗಿಕೊಂಡಿದ್ದನು. ಕರಿದ ಎಣ್ಣೆ, ಡಾಲ್ಡಾ ಮತ್ತು ಇನ್ನಿತರ ಅಂಶಗಳನ್ನ ಸೇರಿಸಿ ಆರೋಪಿ ನಕಲಿ ತಯಾರಿಸುತ್ತಿದ್ದನು. ಪ್ರತಿ 1 ಕೆಜಿ ನಕಲಿ ತಪ್ಪು ತಯಾರಿಕೆಗೆ ನೂರು ರೂಪಾಯಿ ಖರ್ಚು ಆಗುತ್ತಿತ್ತು. ಆರೋಪಿ ಪ್ರತಿ ಕೆಜಿಗೆ 400 ರಿಂದ 450 ರೂ.ಗೆ ಮಾರಾಟ ಮಾಡುತ್ತಿದ್ದನು.

    ಸಾಂದರ್ಭಿಕ ಚಿತ್ರ

    ಫ್ಯಾಕ್ಟರಿಯಿಂದ ಅರ್ಧ ಕೆಜಿ ತೂಕದ 20 ನಕಲಿ ತುಪ್ಪದ ಪ್ಯಾಕೇಟ್, ಶೇಖರಣೆ ಮಾಡಿದ್ದ 30 ಕೆಜಿ ತುಪ್ಪ, ಡಾಲ್ಡಾ ಡಬ್ಬ, ಮದ್ಯದ ಬಾಟೆಲ್, ತಕ್ಕಡಿ, ಗ್ಯಾಸ್ ಸಿಲಿಂಡರ್ ಸೇರಿದಂತೆ ಇನ್ನಿತರ ವಸ್ತುಗಳನ್ನ ಅಧಿಕಾರಿಗಳು ವಶಕ್ಕೆ ಪಡದು ಆರೋಪಿಯನ್ನ ಬಂಧಿಸಿದ್ದಾರೆ.