Tag: fake facebook

  • ಶಾಸಕ ಸುರೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ- ಹಣ ಕೇಳಿದ ಕಿಡಿಗೇಡಿಗಳು

    ಶಾಸಕ ಸುರೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ- ಹಣ ಕೇಳಿದ ಕಿಡಿಗೇಡಿಗಳು

    ಬೆಂಗಳೂರು: ಶಾಸಕ ಸುರೇಶ್ ಕುಮಾರ್ (Suresh Kumar) ಅವರ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ (Fake Facebook) ಖಾತೆ ತೆರದು ಹಣ ನೀಡುವಂತೆ ಕೇಳಿದ್ದಾರೆ.

    ಈ ಸಂಬಂಧ ಸ್ವತಃ ಸಚಿವರೇ ತನ್ನ ಫೇಸ್‍ಬುಕ್ ಖಾತೆಯಲ್ಲಿ ಸ್ಕ್ರೀನ್ ಶಾಟ್ ಹಾಕಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಹೆಸರಿನಲ್ಲಿ ಯಾರೋ ನಕಲಿ ಫೇಸ್ ಬುಕ್ ಅಕೌಂಟ್ ತೆಗೆದಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಈ ಕುರಿತು ಸೈಬರ್ ಪೊಲೀಸ್ ವಿಭಾಗಕ್ಕೆ ದೂರು ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ದಯವಿಟ್ಟು ನನ್ನ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ತಾವ್ಯಾರೂ ಸ್ಪಂದಿಸಬಾರದೆಂದು ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಧಿಕಾರಿಗಳ ವಿರುದ್ಧ ಸಚಿವ ಶ್ರೀರಾಮುಲು ಪ್ರತಿಭಟನೆ

    Live Tv
    [brid partner=56869869 player=32851 video=960834 autoplay=true]

  • ಕೋಸ್ಟ್ ಗಾರ್ಡ್ ಎಸ್‍ಪಿ ಹೆಸರಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್

    ಕೋಸ್ಟ್ ಗಾರ್ಡ್ ಎಸ್‍ಪಿ ಹೆಸರಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್

    ಉಡುಪಿ: ದುಷ್ಕರ್ಮಿಗಳು ಎಸ್‍ಪಿ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್ ಸೃಷ್ಟಿ ಮಾಡಿದ್ದಾರೆ. ಕೋಸ್ಟ್ ಗಾರ್ಡ್ ಎಸ್‍ಪಿ ಚೇತನ್ ಕುಮಾರ್ ಹೆಸರಿನಲ್ಲಿ ಅಕೌಂಟ್ ತೆರೆದಿರುವ ಕಿಡಿಗೇಡಿಗಳು ದುಷ್ಕೃತ್ಯ ಎಸಗುವ ಹುನ್ನಾರ ಮಾಡಿದ್ದರು.

    ಕೋಸ್ಟಲ್ ಎಸ್‍ಪಿ ಎಸ್‍ಪಿ ಸಿಂಗ್ ಹೆಸರಿನಲ್ಲಿ ಐಡಿ ಕ್ರಿಯೇಟ್ ಮಾಡಿ, ಚೇತನ್ ಕುಮಾರ್ ಅವರ ಫೋಟೋ ಬಳಸಲಾಗಿತ್ತು. ಇದಾಗಿ ಕೇವಲ ಅರ್ಧಗಂಟೆಯಲ್ಲಿ ದುಷ್ಕೃತ್ಯ ಬೆಳಕಿಗೆ ಬಂದಿದೆ. ಉಡುಪಿಯ ಮತ್ತು ಬೆಂಗಳೂರಿನ ಸೈಬರ್ ಕ್ರೈಂಗೆ ಎಸ್‍ಪಿ ಚೇತನ್ ಕುಮಾರ್ ದೂರು ನೀಡಿದ್ದಾರೆ.

    ನಕಲಿ ಅಕೌಂಟ್ ಕ್ರಿಯೆಟ್ ಮಾಡಿದ್ದು ಯಾರು?, ಇದರ ಹಿಂದಿನ ಉದ್ದೇಶ ಏನು? ಎಂಬ ಬಗ್ಗೆ ಪೊಲೀಸರು ಈಗಾಗಲೇ ತನಿಖೆಯನ್ನು ಶುರುಮಾಡಿದ್ದಾರೆ. ಎಸ್‍ಪಿ ಚೇತನ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್ ಪಿ ಚೇತನ್ ಕುಮಾರ್, ಈ ಬಗ್ಗೆ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ಉಡುಪಿ ಜಿಲ್ಲಾ ವಿಭಾಗಕ್ಕೆ ದೂರು ನೀಡಿದ್ದೇವೆ. ಅಕೌಂಟ್ ಕ್ರಿಯೇಟ್ ಆಗಿ ಕೆಲವೇ ನಿಮಿಷಗಳಲ್ಲಿ ಬಗ್ಗೆ ಮಾಹಿತಿ ಗೊತ್ತಾಗಿದೆ. ಕೃತ್ಯದ ಹಿಂದಿನ ಉದ್ದೇಶವೇನು ಎಂಬುದು ತನಿಖೆಯಿಂದ ಗೊತ್ತಾಗಬೇಕಾಗಿದೆ ಎಂದರು.